Tag: lucknow

  • ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ ಆ್ಯಸಿಡ್ ಕುಡಿಸಿ ಚಾಕುವಿನಿಂದ ಇರಿದ!

    ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ ಆ್ಯಸಿಡ್ ಕುಡಿಸಿ ಚಾಕುವಿನಿಂದ ಇರಿದ!

    – ಪಕ್ಕದ್ಮನೆಯ ವ್ಯಕ್ತಿ ಅರೆಸ್ಟ್

    ಲಕ್ನೋ: ನೆರೆಮನೆಯಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯಕ್ಕೆ ವಿರೋಧ ಒಡ್ಡಿದ ಪಕ್ಕದ ಮನೆ ಮಹಿಳೆಗೆ ಆ್ಯಸಿಡ್ ಕುಡಿಸಿ, ಚಾಕುವಿನಿಂದ ಇರಿದಿರುವ ಘಟನೆ ಉತ್ತರ ಪ್ರದೇಶದ ಸಕ್ರಿ ಗ್ರಾಮದಲ್ಲಿ ನಡೆದಿದೆ.

    ಹಲ್ಲೆಗೊಳಗಾದವರು 30 ವರ್ಷದ ಮಹಿಳೆಯಾಗಿದ್ದಾರೆ. ಸತೇಂದರ್ ಹಲ್ಲೆಗೈದ ಆರೋಪಿ. ಮಹಿಳೆ ಲೈಂಗಿಕ ಕ್ರಿಯೆಗೆ ಒಪ್ಪಲಿಲ್ಲ ಎಂದು ಸತೇಂದರ್ ಆ್ಯಸಿಡ್ ಕುಡಿಸಿ ಚಾಕುವಿನಿಂದ ಇರಿದಿದ್ದಾನೆ.

    ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಸತೇಂದರ್ ಮನೆಗೆ ನುಗ್ಗಿದ್ದಾನೆ. ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದ್ದಾನೆ. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಆ್ಯಸಿಡ್ ಕುಡಿಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಸಹಾಯಕ್ಕೆ ಕೂಗಿಕೊಂಡಿದ್ದಾರೆ. ನೆರೆಹೊರೆಯವರು ಬಂದು ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಆಗಮಿಸಿದಾಗ ರಕ್ತದ ಮಡುವಿನಲ್ಲಿ ಮಹಿಳೆ ಬಿದ್ದಿದ್ದಳು. ನಾವು ಹಲ್ಲೆಗೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಹಲ್ಲೆಗೊಳಗಾದ ಮಹಿಳೆಗೆ ಮೂರು ಮಕ್ಕಳಿದ್ದು, ಆಕೆಯ ಗಂಡ ದೆಹಲಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಮೋದಿ ಸಹೋದರನ ಹೆಸರಿನಲ್ಲಿ ಹಣ ವಸೂಲಿ – ಆರೋಪಿ ಅರೆಸ್ಟ್

    ಮೋದಿ ಸಹೋದರನ ಹೆಸರಿನಲ್ಲಿ ಹಣ ವಸೂಲಿ – ಆರೋಪಿ ಅರೆಸ್ಟ್

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರನ ಹೆಸರಿನಲ್ಲಿ ಹಣ ಸಂಗ್ರಹಿಸಿದ ಆರೋಪದಡಿ ಯುವಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರನ ಹೆಸರಿನಲ್ಲಿ ಹಣ ಸಂಗ್ರಹಿಸಿದ ಆರೋಪದಡಿ ಜಿತೇಂದ್ರ ತಿವಾರಿ ಅಲಿಯಾಸ್ ಜೀತುನನ್ನು ಬಂಧಿಸಲಾಗಿದೆ. ಪ್ರಧಾನಿಯ ಸಹೋದರನ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದಾನೆ ಎಂಬ ಮಾಹಿತಿಯನ್ನು ಪ್ರಧಾನ ಮಂತ್ರಿ ಕಚೇರಿಯು ಪೊಲೀಸರಿಗೆ ನೀಡಿತ್ತು. ಈ ಕುರಿತಾಗಿ ತನಿಖೆ ನಡೆಸುತ್ತಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ತಿವಾರಿಯನ್ನು ವಿಕಾಸ್ ಭವನದ ಬಳಿ ಸೋಮವಾರ ಆರೋಪಿಯನ್ನು ಬಂಧಿಸಲಾಗಿದೆ. ಗುಜರಾತ್‍ನ ಮಾಧವ್‍ಪುರದಲ್ಲಿ ಜನವರಿ 4 ರಂದು ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಪ್ರಸ್ತಾಪಿಸಿದ ಕಾರ್ಯಕ್ರಮವೊಂದರ ಪೋಸ್ಟರ್ ಅನ್ನು ತಿವಾರಿ ತನ್ನ ಕಾರಿನಲ್ಲಿ ಅಂಟಿಸಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದನು ಎಂದು ನಗರ ಪೊಲೀಸ್ ಠಾಣೆಯ ವರಿಷ್ಠಾಧಿಕಾರಿ ಭುಪೇಂದ್ರ ಸಿಂಗ್ ಅವರು ಹೇಳಿದ್ದಾರೆ.

  • ಬಡ ತಾಯಿಯಿಂದ 15 ಸಾವಿರ ರೂ. ಡೀಸೆಲ್ ಹಾಕಿಸಿಕೊಂಡ ಪೊಲೀಸರು

    ಬಡ ತಾಯಿಯಿಂದ 15 ಸಾವಿರ ರೂ. ಡೀಸೆಲ್ ಹಾಕಿಸಿಕೊಂಡ ಪೊಲೀಸರು

    – ಮಗಳನ್ನ ಹುಡುಕಿಕೊಡಿ ಎಂದು ಠಾಣೆ ಮುಂದೆ ತಾಯಿ ಕಣ್ಣೀರು
    – ಡೀಸೆಲ್ ಹಾಕಿಸಿಕೊಂಡು ತಾಯಿಯನ್ನ ನಿಂದಿಸಿದ್ರು

    ಲಕ್ನೋ: ಮಗಳನ್ನ ಹುಡುಕಿಕೊಡಿ ಎಂದು ಠಾಣೆಗೆ ಬಂದ ಮಹಿಳೆಯಿಂದ ಪೊಲೀಸರು 15 ಸಾವಿರ ರೂ. ಮೌಲ್ಯದಷ್ಟು ಡೀಸೆಲ್ ತುಂಬಿಸಿಕೊಂಡಿದ್ದಾರೆ.

    ತಿಂಗಳ ಹಿಂದೆ ಠಾಣೆಗೆ ಬಂದ ಅಂಗವಿಕಲೆ ಗುಡಿಯಾ, ತನ್ನ ಅಪ್ರಾಪ್ತ ಮಗಳನ್ನ ಠಾಕೂರ್ ಎಂಬಾತ ಅಪಹರಿಸಿದ್ದಾನೆ ಎಂದು ದೂರು ದಾಖಲಿಸಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆಗೆ ತೆರಳಲು ತಮ್ಮ ವಾಹನಗಳಿಗೆ ಮಹಿಳೆ ಹಣದಿಂದ ಡೀಸೆಲ್ ತುಂಬಿಸಿಕೊಂಡಿದ್ದಾರೆ. ತಿಂಗಳಾದ್ರೂ ಮಗಳು ಪತ್ತೆಯಾಗದಿದ್ದಾಗ ಪ್ರಶ್ನೆ ಮಾಡಿದ್ದಕ್ಕೆ ಗುಡಿಯಾರನ್ನ ನಿಂದಿಸಿ, ಅವಮಾನಿಸಿದ್ದಾರೆ.

    ಪೊಲೀಸರ ವರ್ತನೆಗೆ ಬೇಸತ್ತ ಗುಡಿಯಾ ಎಸ್‍ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ. ಮಗಳ ಹುಡುಕಾಟಕ್ಕಾಗಿ ಪೊಲೀಸರ ವಾಹನಗಳಿಗೆ ಇಂಧನ ತುಂಬಿಸಲು 15 ಸಾವಿರ ರೂ. ಖರ್ಚು ಮಾಡಿದ್ದೇನೆ ಎಂದು ಗುಡಿಯಾ ಆರೋಪಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಎಸ್‍ಪಿ ಬ್ರಜೇಶ್ ಕುಮಾರ್ ಶ್ರೀವಾಸ್ತವ್, ಮಹಿಳೆಯ ಮಗಳನ್ನ ಪತ್ತೆ ಮಾಡುವಂತೆ ಆದೇಶಿಸಲಾಗಿದೆ. ಹಾಗೆ ಪ್ರಕರಣ ದಾಖಲಿಸಿಕೊಂಡು ಬೇಜಾವಾಬ್ದಾರಿ ತೋರಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • 14ರ ಬಾಲಕಿ ಮೇಲೆ 16ರ ಬಾಲಕನಿಂದ ರೇಪ್ – ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

    14ರ ಬಾಲಕಿ ಮೇಲೆ 16ರ ಬಾಲಕನಿಂದ ರೇಪ್ – ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

    ಲಕ್ನೋ: 16 ವರ್ಷದ ಬಾಲಕ ಅತ್ಯಾಚಾರ ನಡೆಸಿದ್ದರಿಂದ 14 ವರ್ಷದ ಬಾಲಕಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ಶುಕ್ರವಾರ ಉತ್ತರ ಪ್ರದೇಶದಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಬಾಲಕ ಶಾಲೆಯನ್ನು ಬಿಟ್ಟಿದ್ದು, ಕಳೆದ ಒಂದು ವರ್ಷದಿಂದ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ, ಅಲ್ಲದೆ ಕಳೆದ ವರ್ಷ ಏಪ್ರಿಲ್‍ನಲ್ಲಿ ಬಾಲಕಿ ಗರ್ಭಧರಿಸಿದ್ದಳು. ಆದರೆ ಸಮಾಜಕ್ಕೆ ಹೆದರಿ ಪೊಲೀಸರಿಗೆ ತಿಳಿಸಲು ಕುಟುಂಬಸ್ಥರು ಹಿಂದೇಟು ಹಾಕಿದ್ದರು.

    ತನಿಖೆಯಲ್ಲಿ, ಬಾಲಕಿಯ ತಾಯಿ 2 ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ತಂದೆ ಕುಡಿತದ ದಾಸನಾಗಿದ್ದಾನೆ. ಈ ಕಾರಣಕ್ಕೆ ಬಾಲಕಿ ಮತ್ತು ಆಕೆಯ ಇಬ್ಬರು ಒಡಹುಟ್ಟಿದವರನ್ನು ಅಜ್ಜನ ಮನೆಗೆ ಕಳುಹಿಸಲಾಗಿತ್ತು.

    ಬಾಲಕ ಆಕೆಯ ನೆರೆಯ ನಿವಾಸಿಯಾಗಿದ್ದು, ಬಾಲಕಿ ಅಜ್ಜನ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆಕೆಯ ಜೊತೆ ಬಾಲಕ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಹೀಗಾಗಿ ಬಾಲಕಿ ಏಪ್ರಿಲ್‍ನಲ್ಲಿ ಗರ್ಭಿಣಿಯಾಗಿದ್ದಾಳೆ. ಆದರೆ ಬಾಲಕಿಯ ಕುಟುಂಬ ಸಮಾಜಕ್ಕೆ ಹೆದರಿ ವಿಷಯವನ್ನು ಮುಚ್ಚಿಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈಗ ಬಾಲಕಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಆಕೆಯ ಅಜ್ಜ ಎಲ್ಲಾ ಭಯವನ್ನು ಪಕ್ಕಕ್ಕೆ ಸರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಇದೀಗ ಆರೋಪಿಯನ್ನು ಬಾಲಾಪರಾಧಿ ನ್ಯಾಯ ಮಂಡಳಿ ಮುಂದೆ ಹಾಜರು ಪಡಿಸಿಲಾಗಿದೆ. ಆರೋಪಿಯ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಡಿಎನ್‍ಎ ಪರೀಕ್ಷೆ ನಡೆಸಲಾಗುತ್ತದೆ. ಬಾಲಕಿ ಮತ್ತು ಮಗುವಿಗೆ ಯಾವುದೇ ಅಪಾಯವಿಲ್ಲ. ಪ್ರಕರಣ ಕುರಿತಂತೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಕ್ಕಳ ಕಲ್ಯಾಣ ಅಧಿಕಾರಿ ಸಂಜಯ್ ಮಿಶ್ರಾ ಹೇಳಿದ್ದಾರೆ.

  • 7 ವರ್ಷದ ಪುಟ್ಟ ಕಂದಮ್ಮ ಮೇಲೆ ಅತ್ಯಾಚಾರ!

    7 ವರ್ಷದ ಪುಟ್ಟ ಕಂದಮ್ಮ ಮೇಲೆ ಅತ್ಯಾಚಾರ!

    ಲಕ್ನೋ: ಮನೆ ಸಮೀಪ ಆಟವಾಡುತ್ತಿದ್ದ 7 ವರ್ಷದ ಮಗುವನ್ನು ಅಪಹರಿಸಿ ಅಪರಿಚಿತ ವ್ಯಕ್ತಿ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಕಾಶಿನಗರ್ ನಲ್ಲಿ ನಡೆದಿದೆ. ಘಟನೆ ನಂತರ ಬಾಲಕಿ ರಕ್ತ ಸ್ರಾವದಿಂದ ಹೊಲದಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

    ಬಾಲಕಿ ಶುಕ್ರವಾರ ಸಂಜೆ ಕುಟುಂಬದವರೊಂದಿಗೆ ಮನೆಯ ಹೊರಗಡೆ ಕುಳಿತಿದ್ದಳು. ನಂತರ ಊಟ ಮಾಡಲು ಬಾಲಕಿ ಕುಟುಂಬಸ್ಥರು ಮನೆ ಒಳಗೆ ಹೋಗಿದ್ದಾರೆ. ಈ ವೇಳೆ ಬಾಲಕಿ ಹೊರಗೆ ಆಟವಾಡುತ್ತಿದ್ದಳು. ಊಟ ಮುಗಿದ ನಂತರ ಮಗಳು ಕಾಣದೇ ಇರುವುದನ್ನು ಕಂಡ ಕುಟುಂಬಸ್ಥರು ಬಾಲಕಿಗಾಗಿ ಹುಡುಕಾಟ ನಡೆಸಿದ್ದಾರೆ. ಮನೆ ಸಮೀಪದಲ್ಲಿರುವ ಹೊಲದಲ್ಲಿ ಬಾಲಕಿ ರಕ್ತಸ್ರಾವದಿಂದ ಬಿದ್ದಿರುವುದನ್ನು ಕಂಡು ಕುಟುಂಬಸ್ಥರು ಬಾಲಕಿಯನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿಂದ ಗೋರಖ್ಪುರ್ ವೈದ್ಯಕೀಯ ಕಾಲೇಜಿನ ಆಸ್ಪತೆಗೆ ದಾಖಲಿಸಿದ್ದಾರೆ.

    ಇದೀಗ ಪೊಲೀಸರು ಘಟನೆ ಕುರಿತಂತೆ ಶನಿವಾರ ದೂರು ದಾಖಲಿಸಿಕೊಂಡಿದ್ದು, ಆದಷ್ಟು ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಬಾಲಕಿ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.

  • ರಾಮಮಂದಿರ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ

    ರಾಮಮಂದಿರ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ

    ಲಕ್ನೊ: ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಲ್ಲಿ ರಾಮಮಂದಿರಕ್ಕೆ ಮೊದಲ ಬಹುಮಾನ ದೊರೆತಿದೆ. ಈ ವಿಚಾರವನ್ನು ಉತ್ತರ ಪ್ರೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.

    ಗಣರಾಜ್ಯೋತ್ಸವದಂದು ರಾಜ್‍ಪಥ್‍ನಲ್ಲಿ ಉತ್ತರ ಪ್ರದೇಶದಿಂದ ಪ್ರದರ್ಶಿಸಲಾದ ರಾಮಮಂದಿರ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ ಬಂದಿದೆ. ಉತ್ತರ ಪ್ರದೇಶದ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಗಣರಾಜ್ಯೋತ್ಸವದಲ್ಲಿ ಮೊದಲ ಸ್ಥಾನಗಳಿಸಿದ ಸ್ತಬ್ಧಚಿತ್ರಕ್ಕೆ ಯೋಗಿ ಆದಿತ್ಯನಾಥ್ ಅವರಿಗೆ ಪ್ರಶಸ್ತಿಯನ್ನು ಕೊಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ.

    ಗಣರಾಜ್ಯೋತ್ಸವದ ದಿನ ಸ್ತಬ್ಧಚಿತ್ರ ಮೆರವಣೆಗೆಯಲ್ಲಿ ಉತ್ತರಪ್ರದೇಶದಿಂದ ಭಾಗವಹಿಸಿದ್ದ ಸ್ತಬ್ಧಚಿತ್ರದಲ್ಲಿ ಮುಂಭಾಗದಲ್ಲಿ ರಾಮಾಯಾಣ ಕೃತಿ ರಚಿಸಿದ ಮಹರ್ಷಿ ವಾಲ್ಮೀಕಿಯವರನ್ನು ಹಾಗೂ ನಿರ್ಮಾಣ ಕಾರ್ಯದಲ್ಲಿರುವ ರಾಮಮಂದಿರ ಮಾದರಿಯನ್ನು ಇರಿಸಲಾಗಿತ್ತು. ಈ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ ಸಿಕ್ಕಿದೆ.

    ಕಳೆದ ವರ್ಷ ಉತ್ತರಪ್ರದೇಶ ಸ್ತಬ್ಧಚಿತ್ರಕ್ಕೆ 2ನೇ ಅತ್ಯುತ್ತಮ ಪ್ರಶಸ್ತಿ ಲಭಿಸಿತ್ತು. ಈ ಭಾರೀ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ತ್ರಿಪುರಕ್ಕೆ 2ನೇ ಅತ್ಯುತ್ತಮ ಪ್ರಶಸ್ತಿ ಹಾಗೂ ಉತ್ತರಾಖಂಡ್ ಮೂರನೇ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿದೆ.

  • ಮೇಕೆಗಾಗಿ ತಂದೆ, ಮಗನಿಗೆ ಗುಂಡಿಟ್ಟ ಪಕ್ಕದ್ಮನೆ ಹುಡುಗಿ

    ಮೇಕೆಗಾಗಿ ತಂದೆ, ಮಗನಿಗೆ ಗುಂಡಿಟ್ಟ ಪಕ್ಕದ್ಮನೆ ಹುಡುಗಿ

    ಲಕ್ನೋ: ಮೇಕೆಯ ಕಾಲಿಗೆ ಹೊಡೆದರೆಂಬ ಕಾರಣಕ್ಕಾಗಿ ಪಕ್ಕದ ಮನೆಯ ತಂದೆ ಮಗನನ್ನು ಗುಂಡಿಕ್ಕಿ ಕೊಂದ ಭಯಾನಕ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ವರದಿಯಾಗಿದೆ.

    ಕೊಲೆಯದವರನ್ನು ಆಗ್ರಾದ ಭೀಕಮ್ ಸಿಂಗ್ ಮತ್ತು ಜೀತೆಂದ್ರ ಎಂದು ಗುರುತಿಸಲಾಗಿದೆ. ಗುಂಡು ಹಾರಿಸಿರುವವಳನ್ನು ಆರೋಪಿ ಗಾಯನಿ ಎಂದು ಗುರುತಿಸಲಾಗಿದ್ದು, ಆಕೆ ಮನೆಯಲ್ಲಿದ್ದ ಪಿಸ್ತೂಲ್‍ನಿಂದ ಈ ಇಬ್ಬರನ್ನು ಸಣ್ಣ ಕಾರಣಕ್ಕಾಗಿ ಗುಂಡಿಕ್ಕಿಕೊಂದು ಪರಾರಿಯಾಗಿದ್ದಾಳೆ.

    ಪುರಶಿವ ಲಾಲ್ ಪ್ರದೇಶದ ಸ್ಥಳೀಯರು ತಿಳಿಸಿದ ಪ್ರಕಾರ ಮೇಕೆಯೊಂದಕ್ಕೆ ಯಾರೋ ಹೊಡೆದು ಗಾಯಗೊಳಿಸಿದ್ದರು. ಮೇಕೆ ಭೀಕಮ್ ಸಿಂಗ್‍ನ ಮನೆಯ ಒಳಗೆ ಹೋಗಿತ್ತು. ಇದನ್ನು ಓಡಿಸಿದ್ದರು. ಇದರಿಂದ ಕೋಪಗೊಂಡ ಮೇಕೆಯ ಒಡತಿ ಗಾಯನಿ ಮನೆಯಲ್ಲಿದ್ದ ಪಿಸ್ತೂಲ್‍ನಿಂದ 20 ವರ್ಷ ಪ್ರಾಯದ ಜೀತೆಂದ್ರ ಮತ್ತು ಆತನ ತಂದೆ ಭೀಕಮ್ ಮೇಲೆ ಗುಂಡು ಹಾರಿಸಿದ್ದಾಳೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಇಬ್ಬರು ಸಾವನ್ನಪ್ಪಿದ್ದಾರೆ.

    ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಪರಾರಿಯಾಗಿರುವ ಕುರಿತು ತನಿಖೆ ನಡೆಸುತ್ತಿದ್ದಾರೆ.

  • ಮೃತಪಟ್ಟ ಕಾಗೆಗಳನ್ನು ತಿಂದು 6 ಶ್ವಾನಗಳು ಸಾವು

    ಮೃತಪಟ್ಟ ಕಾಗೆಗಳನ್ನು ತಿಂದು 6 ಶ್ವಾನಗಳು ಸಾವು

    – ಆತಂಕಕ್ಕೀಡಾದ ಗ್ರಾಮದ ಜನ

    ಲಕ್ನೋ: ಹಕ್ಕಿಜ್ವರದಿಂದ ಮೃತಪಟ್ಟಿದ್ದ ಕಾಗೆಗಳನ್ನು ತಿಂದು ಸುಮಾರು 6 ಬೀದಿ ಶ್ವಾನಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಪುರಾನ್ಪುರ್ ಪ್ರದೇಶದಲ್ಲಿ ನಡೆದಿದೆ. ಗುರುವಾರ 12ಕ್ಕೂ ಹೆಚ್ಚು ಕಾಗೆಗಳು ಹಕ್ಕಿಜ್ವರದಿಂದ ಶೇಷಪುರ್ ರಸ್ತೆಯಲ್ಲಿ ಮೃತಪಟ್ಟಿದ್ದವು. ಈ ಘಟನೆ ಇದೀಗ ಪುರಾನ್ಪುರ್ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದೆ.

    ಜಿಲ್ಲೆಯಲ್ಲಿ ಹಕ್ಕಿಜ್ವರ ಭೀತಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಅಮಿದ್ ಅವರು ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಶೇರ್ ಪುರ್‍ನಲ್ಲಿ ಹಕ್ಕಿಜ್ವರದಿಂದ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಒಂದು ವಾರದ ಹಿಂದೆ ಪುರಾನ್ಪುರ್ ಪೊಲೀಸ್ ಠಾಣೆಗೆ ವರದಿ ಸಲ್ಲಿಸಲಾಗಿತ್ತು.

    ಬೀದಿ ಶ್ವಾನಗಳು ರಸ್ತೆಯಲ್ಲಿ ಸತ್ತು ಬಿದ್ದಿರುವುದನ್ನು ನೋಡಿದ ಸ್ಥಳೀಯರು, ಶ್ವಾನಗಳು ಹಕ್ಕಿ ಜ್ವರದಿಂದ ಮೃತಪಟ್ಟಿದ್ದ ಕಾಗೆಗಳನ್ನು ಸೇವಿಸಿ ಸಾವನ್ನಪ್ಪಿವೆ ಎಂದು ಹೇಳುತ್ತಿದ್ದಾರೆ. ಈ ವಿಚಾರವಾಗಿ ಹಿರಿಯ ಪಶು ವೈದ್ಯಕೀಯ ಅಧಿಕಾರಿಗಳು ಗುರುವಾರ ಬಾರ್ಖೇರಾ ನಗರದ ಪಂಚಾಯತ್ ಪ್ರದೇಶದಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಕೋಳಿ ಮಾಂಸದ ಮಾದರಿಯನ್ನು ಪರೀಕ್ಷಿಸಲು ತೆಗೆದುಕೊಂಡಿದ್ದಾರೆ.

    ಇದೇ ರೀತಿ ಬುಧವಾರ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 50 ಕಾಗೆಗಳು ಹಕ್ಕಿಜ್ವರದಿಂದ ಮೃತಪಟ್ಟಿದ್ದವು. ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮತ್ತು ಉತ್ತರಾಖಂಡದಲ್ಲಿ ಹಕ್ಕಿಜ್ವರ ಇರುವುದನ್ನು ದೃಢಪಡಿಸಲಾಗಿದೆ.

  • ಆಸ್ಪತ್ರೆಯ ಬೆಡ್ ಮೇಲೆ ನಾಯಿ ವಿಶ್ರಾಂತಿ – ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳು ಗರಂ

    ಆಸ್ಪತ್ರೆಯ ಬೆಡ್ ಮೇಲೆ ನಾಯಿ ವಿಶ್ರಾಂತಿ – ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳು ಗರಂ

    ಲಕ್ನೋ: ಕೊರೊನಾ ಸಮಯದಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್ ಇಲ್ಲ ಅಂತಹದರಲ್ಲಿ ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ನಾಯಿಯೊಂದು ಬೆಡ್ ಮೇಲೆ ಬೆಚ್ಚಗೆ ಕುಳಿತು ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಬೆಳಕಿಗೆ ಬಂದಿದೆ.

     

    ಈ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಉತ್ತರ ಪ್ರದೇಶದ ಆಸ್ಪತ್ರೆಯ ಅವ್ಯವಸ್ಥೆ ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ. ಆಸ್ಪತ್ರೆಯ ಈ ಅವ್ಯವಸ್ಥೆಯು ರೋಗಿಗಳ ನಿದ್ದೆಯನ್ನು ಕೆಡಿಸುತ್ತಿದೆ.

    ಈ ವಿಚಾರವಾಗಿ ತನಿಖೆ ನಡೆಸಲಾಗುತ್ತಿದ್ದು, ಸಿವಿಲ್ ಲೈನ್ಸ್ ಪ್ರದೇಶದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಶಸ್ತ್ರಚಿಕಿತ್ಸಾ ವಾರ್ಡ್ ನಲ್ಲಿ ಬೀದಿ ನಾಯಿ ಪತ್ತೆಯಾಗಿದ್ದು, ಆಸ್ಪತ್ರೆಯ ಆವರಣದಲ್ಲಿ ನಾಯಿ ಸುತ್ತಾಡುವುದು ಸಾಮಾನ್ಯವಾಗಿ ಹೋಗಿದೆ ಇದರಲ್ಲಿ ಯಾವುದೇ ರೀತಿಯ ಆಶ್ಚರ್ಯವೇನಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೊರತೆ ಮತ್ತು ಸಿಬ್ಬಂದಿಯಲ್ಲಿನ ಅಸಡ್ಡೆ ಎಲ್ಲರಿಗೂ ಕಾಣಿಸುತ್ತಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.

    ಜೊತೆಗೆ ಆಸ್ಪತ್ರೆಯ ಅಧಿಕಾರಿಗಳು ಆ ವಾರ್ಡ್ ನಲ್ಲಿ ಯಾರನ್ನು ದಾಖಲಿಸಿಕೊಳ್ಳದೆ ಇದ್ದರಿಂದ ಆ ಬೆಡ್ ಖಾಲಿ ಇತ್ತು. ಅದೇ ಸಮಯದಲ್ಲಿ ನಾಯಿ ಬಂದು ಕುಳಿತಿದೆ ತಿಳಿಸಿದರು. ಇನ್ನೂ ಈ ದೃಶ್ಯದ ಮೂಲಕ ಆಸ್ಪತ್ರೆ ಅವ್ಯವಸ್ಥೆ, ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತಿದೆ.

    ಈ ಹಿಂದೆ ಕರ್ನಾಟಕದ ಮಂಡ್ಯ ಜಿಲ್ಲೆಯ ಆಸ್ಪತ್ರಯೊಂದರಲ್ಲಿ ಕೂಡ ಇದೇ ರೀತಿ ಬೀದಿ ನಾಯಿಗಳು ವಾರ್ಡ್‍ವೊಂದರ ಬೆಡ್ ನಲ್ಲಿ ರಾಜಾರೋಷವಾಗಿ ವಿಶ್ರಾಂತಿಸುತ್ತಿದ್ದ ಘಟನೆ ನಡೆದಿತ್ತು. ಘಟನೆ ಕುರಿತಂತೆ ಅಲ್ಲಿನ ರೋಗಗಳು ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು.

  • ಹೆತ್ತವರಿಂದ ಕೊಲೆಯಾದ ಮಗಳು – ಹೊಲದಲ್ಲಿ ಶವ ಪತ್ತೆ

    ಹೆತ್ತವರಿಂದ ಕೊಲೆಯಾದ ಮಗಳು – ಹೊಲದಲ್ಲಿ ಶವ ಪತ್ತೆ

    – ದುಪ್ಪಟ್ಟಾದಿಂದ ಕತ್ತು ಬಿಗಿದು ಕೊಲೆ
    – ಮಗಳ ಪ್ರೀತಿಗೆ ಮನನೊಂದು ಈ ಕೃತ್ಯ ಎಸಗಿದ ಪೋಷಕರು

    ಲಕ್ನೋ: ತಂದೆ-ತಾಯಿ ಇಬ್ಬರು ಸೇರಿ ಮಗಳನ್ನು ಕೊಂದು ಶವವನ್ನ ಹೊಲದಲ್ಲಿ ಎಸೆದಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಮೃತ ಯುವತಿ ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರವನ್ನು ತಿಳಿದ ತಂದೆ ತಾಯಿ ಮಗಳನ್ನು ಕೊಂದು ಹೊಲದ ಬಳಿ ಎಸದಿದ್ದಾರೆ.

    ಅಪ್ರಾಪ್ತ ವಯಸ್ಸಿನ ಮಗಳ ಪ್ರೀತಿಯ ವಿಚಾರವಾಗಿ ಹೆತ್ತರವರ ವಿರೋಧವಿತ್ತು. ಅವಳ ಪ್ರೀತಿಯನ್ನು ಮರೆತು ಬಿಡುವಂತೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಆಕೆ ಹೆತ್ತವರ ಮಾತನ್ನು ಧಿಕ್ಕರಿಸಿ ಆತನೊಂದಿಗೆ ಸುತ್ತಾಟ ಮಾಡುತ್ತಿದ್ದಳು. ಕೆಲವೊಮ್ಮೆ ಪ್ರಿಯತಮನೊಂದಿಗೆ ಇದ್ದ ವೇಳೆ ತಂದೆ ತಾಯಿಗೆ ಸಿಕ್ಕಿಬಿದ್ದಿದ್ದಾಳೆ. ಒಂದು ದಿನ ಪ್ರಿಯತಮನೊಂದಿಗೆ ರಾತ್ರಿ ವೇಳೆ ಮನೆಗೆ ಬಂದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪೋಷಕರು ಅವಳ ದುಪ್ಪಟ್ಟದಿಂದಾ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿದ್ದಾರೆ. ಈ ವೇಳೆ ಮಗಳ ಪ್ರಾಣ ಹೋಗಿದೆ. ದೇಹವನ್ನು ಮಿರ್ಜಾಪುರ ಜಮಾಲ್‍ಪುರ ಪ್ರದೇಶದ ಜಮೀನಿನಲ್ಲಿ ಎಸೆದು ಹೆತ್ತವರು ಪರಾರಿಯಾಗಿದ್ದಾರೆ.

    ಕೊಲೆ ವಿಚಾರವನ್ನು ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣದ ಕುರಿತಾಗಿ ತನಿಖೆ ಮಾಡುವ ವೇಳೆ ಆಕೆಯ ಹೆತ್ತವರೆ ಕೊಲೆಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಪೋಷಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.