Tag: lucknow

  • 50 ರೂ. ಸಂಬಳದಿಂದ ಬೇಸತ್ತು ಮಾಲೀಕನ ಮಗನನ್ನೇ ಅಪಹರಿಸಿ ಕೊಂದ ಅಪ್ರಾಪ್ತರು!

    50 ರೂ. ಸಂಬಳದಿಂದ ಬೇಸತ್ತು ಮಾಲೀಕನ ಮಗನನ್ನೇ ಅಪಹರಿಸಿ ಕೊಂದ ಅಪ್ರಾಪ್ತರು!

    ಲಕ್ನೋ: ಪ್ರತಿ ನಿತ್ಯ ಮಾಡುತ್ತಿದ್ದ ಕೆಲಸಕ್ಕೆ 30-50 ರೂ. ಸಂಬಳ ನೀಡುತ್ತಿದ್ದರಿಂದ ಬೇಸತ್ತ ಅಪ್ರಾಪ್ತರಿಬ್ಬರು ಮಾಲೀಕನ ಮಗನನ್ನೇ ಅಪಹರಿಸಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಆದಿತ್ಯ(5) ಮೃತ ಬಾಲಕ. ಅಲಿಗರ್ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು, 16 ವರ್ಷದ ಆರೋಪಿಗಳು ಹಿಂದಿ ಧಾರವಾಹಿಗಳಿಂದ ಪ್ರೇರಿತಗೊಂಡು ಕೃತ್ಯವೆಸಗಿದ್ದಾನೆ ಎಂಬ ಸತ್ಯ ಬಹಿರಂಗಗೊಂಡಿದೆ.

    ಫೆಬ್ರವರಿ 13ರಂದು ಬಾಲಕ ಮನೆಯಿಂದ ಹೊರಗೆ ಆಟವಾಡುತ್ತಿದ್ದ ವೇಳೆ ಅಪಹರಣವಾಗಿದ್ದಾನೆ. ಆದಿತ್ಯನನ್ನು ಹುಡುಕುವಲ್ಲಿ ಅವರ ತಂದೆ ವಿಫಲವಾದಾಗ ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ. ಆದರೆ ಎರಡು ದಿನಗಳ ನಂತರ ಬಾಲಕ ಶವ ಗುಂಡಿಯೊಂದಲ್ಲಿ ಪತ್ತೆಯಾಗಿದೆ.

    ಆರೋಪಿಗಳು ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಬಾಲಕನ ಮೃತದೇಹವನ್ನು ಪ್ಲಾಸ್ಟಿಕ್ ಚೀಲದೊಳಗೆ ತುಂಬಿ ಅರಣ್ಯ ಪ್ರದೇಶವೊಂದರಲ್ಲಿ ಗುಂಡಿಯೊಂದರಲ್ಲಿ ಹೂತು ಹಾಕಿದ್ದಾರೆ.

    ಫೆಬ್ರವರಿ 14ರಂದು ಬಾಲಕನೊಬ್ಬನ ಶವ ಗುಂಡಿಯೊಂದರಲ್ಲಿ ಪತ್ತೆಯಾಗಿದೆ ಎಂಬ ಸುದ್ದಿ ಕೇಳಿಬಂದಿತ್ತು. ಈ ವಿಷಯ ತಿಳಿದ ಬಾಲಕನ ಕುಟುಂಬಸ್ಥರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಬಾಲಕನ ಮೃತದೇಹ ಗುಂಡಿಯೊಳಗೆ ಪತ್ತೆಯಾಗಿದೆ. ಈ ವೇಳೆ ಆರೋಪಿಗಳು ಬಾಲಕನ ಬಟ್ಟೆ ಮತ್ತು ಚಪ್ಪಲಿಯನ್ನು ಸುಡುವ ಪ್ರಯತ್ನ ಕೂಡ ಮಾಡಿದ್ದಾರೆ. ಅಲ್ಲದೆ ಆರೋಪಿಗಳು ಕೊಲೆ ಕುರಿತ ಸಾಕ್ಷಿಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದಾರೆ ಎಂದು ಎಸ್ಪಿ(ಗ್ರಾಮೀಣ) ಶುಭಮ್ ಪಟೇಲ್ ಹೇಳಿದ್ದಾರೆ.

  • ಬಟ್ಟೆ ಹರಿದಿತ್ತು, ಕೈ-ಕುತ್ತಿಗೆಯನ್ನು ಶಾಲಿನಿಂದ ಬಿಗಿಯಲಾಗಿತ್ತು – ಬಾಲಕಿಯೊಬ್ಬಳ ಕುಟುಂಬ ಆರೋಪ

    ಬಟ್ಟೆ ಹರಿದಿತ್ತು, ಕೈ-ಕುತ್ತಿಗೆಯನ್ನು ಶಾಲಿನಿಂದ ಬಿಗಿಯಲಾಗಿತ್ತು – ಬಾಲಕಿಯೊಬ್ಬಳ ಕುಟುಂಬ ಆರೋಪ

    ಲಕ್ನೋ: ಎರಡು ದಿನಗಳ ಹಿಂದೆ ಇಬ್ಬರು ದಲಿತ ಅಪ್ರಾಪ್ತ ಬಾಲಕಿಯರ ಮೃತದೇಹವು ಬಟ್ಟೆ ಹರಿದುಕೊಂಡು ಹಾಗೂ ಶಾಲಿನಿಂದ ಕುತ್ತಿಗೆ ಬಿಗಿದು ಸಂಶಾಯಸ್ಪದವಾಗಿ ಉತ್ತರ ಪ್ರದೇಶದ ಉನ್ನಾವೋದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಇದೀಗ ಬಾಲಕಿಯರ ಕುಟುಂಬ ಗಂಭೀರ ಆರೋಪ ಮಾಡಿದೆ.

    ಹೊಲದಿಂದ ಬಾಲಕಿಯರ ಮೃತದೇಹಗಳನ್ನು ತೆಗೆಯುವಾಗ ಅವರ ದೇಹವನ್ನು ಶಾಲಿನಿಂದ ಸುತ್ತಲಾಗಿತ್ತು. ಅಲ್ಲದೆ ಬಾಲಕಿಯರು ಧರಿಸಿದ್ದ ಬಟ್ಟೆಗಳು ಹರಿದ ಸ್ಥಿತಿಯಲ್ಲಿದ್ದವು ಎಂದು ಆರೋಪಿಸಿದ್ದಾರೆ. ಇಬ್ಬರು ಸಾವನ್ನಪ್ಪಿದ್ದರೆ ಒಬ್ಬಾಕೆಯ ಸ್ಥಿತಿ ಗಂಭೀರವಾಗಿದ್ದು, ಕಾನ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ನಮ್ಮ ಮಕ್ಕಳ ಶವದಲ್ಲಿ ಬಟ್ಟೆ ಹರಿದು ಶಾಲಿನಿಂದ ಕುತ್ತಿಗೆಯ ಭಾಗಕ್ಕೆ ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಇದು ಸಂಶಯಾಸ್ಪದವಾಗಿದೆ ಎಂದು ಬಾಲಕಿಯ ತಾಯಿಯೊಬ್ಬರು ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಇತ್ತ ಉತ್ತರ ಪ್ರದೇಶದ ಡಿ.ಜಿ.ಪಿ ಹೆಚ್.ಸಿ ಅವಸ್ಥಿ, ಬಾಲಕಿಯರ ದೇಹದಲ್ಲಿ ಯಾವುದೇ ರೀತಿಯ ಬಾಹ್ಯ ಗಾಯಗಳು ಕಂಡು ಬಂದಿಲ್ಲ. ಹಾಗಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪೊಲೀಸರು ಘಟನಾ ಸ್ಥಳ ಪರಿಶೀಲನೆ ನಡೆಸಿ ಐಪಿಸಿ ಸೆಕ್ಷನ್ ಪ್ರಕಾರ ಕೊಲೆ ಮತ್ತು ಸಾಕ್ಷಿ ನಾಶದ ಕುರಿತು ಬಾಲಕಿಯ ತಂದೆ ಮಾಡಿರುವ ಆರೋಪದ ಮೆರೆಗೆ ಕೇಸ್ ದಾಖಲಿಸಿಕೊಂಡಿದ್ದಾರೆ. ಮೂವರು ಬಾಲಕಿಯರ ಪೈಕಿ ಗಂಭೀರ ಸ್ಥಿತಿಯಲ್ಲಿರುವ ಬಾಲಕಿಯು 10 ನೇ ತರಗತಿವರೆಗೆ ವಾಸಂಗ ಮಾಡಿದ್ದು, ಇದೀಗ ಚಿಂತಾಜನಕ ಸ್ಥಿತಿಯಲ್ಲಿದ್ದರು ಆಕೆಯನ್ನು 6 ಜನ ವೈದ್ಯರ ತಂಡವೊಂದು ಆರೋಗ್ಯ ಗಮನಿಸುತ್ತಿದೆ.

    ಮೃತಪಟ್ಟ ಬಾಲಕಿಯರಲ್ಲಿ ಒಬ್ಬಾಕೆ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಲಿಕೆಯಲ್ಲಿ ಬಹಳ ಮುಂದಿದ್ದಳಂತೆ. ಆದರೆ ಇದೀಗ ಈ ಅಸಹಜ ಸಾವಿನಿಂದಾಗಿ ಬಡ ಕುಟುಂಬ ವರ್ಗ ಚಿಂತೆಗೊಳಗಾಗಿದೆ.

  • 3ನೇ ವಸಂತಕ್ಕೆ ಕಾಲಿಟ್ಟ ಡಿಕಿ – ಕೇಕ್ ಕತ್ತರಿಸಿದ ಪೊಲೀಸರು

    3ನೇ ವಸಂತಕ್ಕೆ ಕಾಲಿಟ್ಟ ಡಿಕಿ – ಕೇಕ್ ಕತ್ತರಿಸಿದ ಪೊಲೀಸರು

    ಲಕ್ನೋ: 2020ರಲ್ಲಿ ಭಾರತಕ್ಕೆ ಆಗಮಿಸಿದ ಡೋನಾಲ್ಡ್ ಟ್ರಂಪ್‍ಗೆ ಭದ್ರತಾ ತಂಡದಲ್ಲಿ ಭಾಗವಹಿಸಿದ್ದ ಸ್ನಿಫರ್ ಶ್ವಾನ ಡಿಕಿಯ ಜನ್ಮದಿನವನ್ನು ಶನಿವಾರ ಮುಜಾಫರ್‍ನಗರದ ಪೊಲೀಸರು ಆಚರಿಸಿದ್ದಾರೆ.

    3ನೇ ವಸಂತಕ್ಕೆ ಕಾಲಿಟ್ಟಿರುವ ಡಿಕಿಗೆ ಕೇಕ್ ಕಟ್ ಮಾಡಲು ಸುನೀಲ್ ಕುಮಾರ್ ಸಹಾಯ ಮಾಡಿದ್ದಾರೆ. ಬರ್ತ್‍ಡೇ ಕ್ಯಾಪ್ ಧರಿಸಿದ ಡಿಕಿ ಕೋರೆ ಹಲ್ಲುಗಳನ್ನು ಹೊಂದಿದ್ದು, ಗಂಭೀರವಾಗಿ ಕುಳಿತು ಎಲ್ಲರನ್ನು ನೋಡುತ್ತಿತ್ತು. ನಂತರ ಪೊಲೀಸರು ಕೇಕ್ ಕತ್ತರಿಸಿದರು.

    ಲ್ಯಾಬ್ರಡಾರ್ ರಿಟ್ರೈವರ್‍ಗೆ ಉಡುಗೊರೆಯಾಗಿ ಕೋಟ್ ಸಿಕ್ಕಿದೆ. ವಿಶೇಷವೆಂದರೆ ತನ್ನ ದಿನನಿತ್ಯದ ಊಟದ ಜೊತೆಗೆ ಹುಟ್ಟುಹಬ್ಬದಂದು ಡಿಕಿ ಮೊಟ್ಟೆ, ಮಾಂಸ, ಹಾಲು, ತರಕಾರಿ, ಬ್ರೆಡ್‍ನಂತೆ ಭರ್ಜರಿ ಊಟ ಸವಿಯಿತು.

    ಡಿಕಿಗೆ ಇಂಡೋ-ಟಿಬೆಟಿಯನ್ ಗಡಿ ಭಾಗದ ಪೊಲೀಸರು ಹರಿಯಾಣದ ಪಂಚಕುಲದಲ್ಲಿ ತರಬೇತಿ ನೀಡಿದ ಬಳಿಕ 2019ರ ಆಗಸ್ಟ್‍ನಲ್ಲಿ ಮುಜಫರ್‍ನಗರಕ್ಕೆ ಬಂದಿದೆ. ಡಿಕಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿನ ಸ್ಪೋಟಕಗಳ ಕಾರ್ಯಾಚರಣೆಯ ವೇಳೆ ಪಾಲ್ಗೊಳ್ಳುತ್ತದೆ.

  • ನಶೆಯಲ್ಲಿ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ

    ನಶೆಯಲ್ಲಿ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ

    ಲಕ್ನೋ: ಕಂಠ ಪೂರ್ತಿ ಕುಡಿದು ಬಂದ ತಂದೆ ನಶೆಯಲ್ಲಿ ಮಗಳ ಮೇಲೆ ಅತ್ಯಾಚಾರ ಮಾಡಿ ಸ್ಥಳದಿಂದ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ದಂಪತಿ 15 ವರ್ಷದ ಮಗಳು ಮತ್ತು 10 ವರ್ಷದ ಗಂಡು ಮಗನೊಂದಿಗೆ ಪುಟ್ಟದಾದ ಇಟ್ಟಿಗೆ ಮನೆಯಲ್ಲಿ ವಾಸವಾಗಿದ್ದರು. ತಾಯಿ ತನ್ನ ಇಬ್ಬರು ಮಕ್ಕಳನ್ನು ಪತಿಯೊಂದಿಗೆ ಬಿಟ್ಟು ಊರಿಗೆ ಹೋಗಿದ್ದಳು. ಈ ವೇಳೆ ತಂದೆ ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಪತ್ನಿ ಊರಿಗೆ ಹೋದ ದಿನ ಈತ ಚೆನ್ನಾಗಿ ಕುಡಿದು ಬಂದಿದ್ದಾನೆ. ಈ ವೇಳೆ ಮಗಳ ಮೇಲೆ ಕಾಮುಕ ದೃಷ್ಟಿ ಬೀರಿದ್ದಾನೆ. ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಗ ಮಗಳು ಜೋರಾಗಿ ಅಳಲು ಪ್ರಾರಂಭಿಸಿದ್ದಾಳೆ. ಆಗ ಕಾಮುಕ ತಂದೆ ಭಯದಿಂದ ಕಾಲ್ಕಿತ್ತಿದ್ದಾನೆ.

    ಬಾಲಕಿಯ ಧ್ವನಿಯನ್ನು ಕೇಳಿದ ನೆರೆಹೊರೆಯವರು ಬಂದು ವಿಚಾರಿಸಿದ್ದಾರೆ. ವಿಷಯ ತಿಳಿದ ತಾಯಿ ಪೊಲೀಸ್ ಠಾಣೆಯಲ್ಲಿ ಮಗಳ ಮೇಲೆ ಅತ್ಯಾಚಾರ ಎಸಗಿದ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಇದೀಗ ಪೊಲೀಸರು ಆರೋಪಿ ಕಾಮುಕ ತಂದೆಗಾಗಿ ಬಲೆ ಬಿಸಿದ್ದಾರೆ.

  • ಶಿವನನ್ನು ಮೆಚ್ಚಿಸಲು ಸಮಾಧಿಯಾದ ಮಹಿಳೆ

    ಶಿವನನ್ನು ಮೆಚ್ಚಿಸಲು ಸಮಾಧಿಯಾದ ಮಹಿಳೆ

    ಲಕ್ನೋ: ಶಿವನನ್ನು ಮೆಚ್ಚಿಸಲು ಮಹಿಳೆ ಜೀವಂತ ಸಮಾಧಿಯಾಗಲು ಹೊರಟಿರುವ ಘಟನೆ ಉತ್ತರಪ್ರದೇಶದ ಸಜೆತಿಯಲ್ಲಿ ನಡೆದಿದೆ.

    ಗೋಮತಿ ದೇವಿ (50) ಶಿವನನ್ನು ಮೆಚ್ಚಿಸಲು ಜೀವಂತ ಸಮಾಧಿಯಾಗಲು ಹೋದ ಮಹಿಳೆಯಾಗಿದ್ದಾಳೆ. ಗ್ರಾಮಸ್ಥರು ನೀಡಿದ ಮಾಹಿಯನ್ನು ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈಕೆಯನ್ನು ರಕ್ಷಿಸಿದ್ದಾರೆ.

    ಪತಿಯಂತೆ ಗೋಮತಿ ದೇವಿ ಶಿವನ ಕುರಿತಾಗಿ ಅಪಾರವಾದ ಭಕ್ತಿಯನ್ನು ಹೊಂದಿದ್ದಳು. ಒಂದು ದಿನ ಗೋಮುತಿಯ ಕನಸಿನಲ್ಲಿ ಶಿವಬಂದಿದ್ದನಂತೆ, ಜೀವಂತ ಸಮಾಧಿಯಾಗಲೂ ಹೇಳಿದ್ದಾನೆ. ನನ್ನನ್ನು ಮನೆ ಎದುರು ಗುಂಡಿ ತೋಡಿ ಹೂತು ಹಾಕಿ, ನಾನು ಶಿವನನ್ನು ಒಲಿಸಿಕೊಳ್ಳಲು ಹೀಗೆ ಮಾಡಬೇಕು ಎಂದು ಹೇಳಿದ್ದಾಳೆ.

    ಗೋಮತಿಯ ಮಾತನನ್ನು ನಂಬಿದ ಕುಟುಂಬಸ್ಥರು ಮನೆಯ ಮುಂದೆ ನಾಲ್ಕು ಅಡಿ ಆಳದ ಗುಂಡಿಯನ್ನು ತೆಗೆದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸೇರಿ ಆ ಗುಂಡಿಯಲ್ಲಿ ಗೋಮತಿಯನ್ನು ಕೂರಿಸಿ ಪೂಜೆ ಮಾಡಿದ್ದಾರೆ. ನಂತರ ಗುಂಡಿಯ ಮೇಲೆ ಒಂದು ಮಂಚವನ್ನು ಇಟ್ಟು ಗುಂಡಿಗೆ ಮಣ್ಣು ತುಂಬಲಾರಂಭಿಸಿದ್ದಾರೆ. ಈ ಕೃತ್ಯವನ್ನು ಕಂಡಿರುವ ಕೆಲವು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೋಮತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗೋಮತಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

  • ಕಾಂಗ್ರೆಸ್ ನಾಯಕಿಯಿಂದ ರಾಮಮಂದಿರ ನಿರ್ಮಾಣಕ್ಕೆ 51 ಲಕ್ಷ ದೇಣಿಗೆ!

    ಕಾಂಗ್ರೆಸ್ ನಾಯಕಿಯಿಂದ ರಾಮಮಂದಿರ ನಿರ್ಮಾಣಕ್ಕೆ 51 ಲಕ್ಷ ದೇಣಿಗೆ!

    ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜನ ದೇಣಿಗೆ ನೀಡುತ್ತಿದ್ದಾರೆ. ಅಂತೆಯೇ ಇದೀಗ ಕಾಂಗ್ರೆಸ್ ನಾಯಕಿಯೊಬ್ಬರು ಭಾರೀ ಮೊತ್ತದ ದೇಣಿಗೆ ನೀಡಿ ಸುದ್ದಿಯಾಗಿದ್ದಾರೆ.

    ಹೌದು. ಉತ್ತರ ಪ್ರದೇಶದ ರಾಯ್ ಬರೇಲಿ ಕಾಂಗ್ರೆಸ್ ಶಾಸಕಿ ಆದಿತಿ ಸಿಂಗ್ ಅವರು ರಾಮ ಮಂದಿರ ನಿರ್ಮಾಣಕ್ಕೆ 51 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಹಣವನ್ನು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಜ್ ಅವರಿಗೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಣಿಗೆಯಾಗಿ ನೀಡುವುದಾಗಿ ಅವರು ತಿಳಿಸಿದ್ದಾರೆ.

    ಶಾಸಕಿ ಆದಿತಿ ಸಿಂಗ್ ಅವರು ಹಲವು ಸನ್ನಿವೇಶಗಳಲ್ಲಿ ಕಾಂಗ್ರೆಸ್ ವಿರುದ್ಧವೇ ಗುಡುಗಿದ್ದರು. ಈ ಹಿಂದೆ ಸೋನಿಯಾ ಗಾಂಧಿಯವರನ್ನೇ ಅದಿತಿ ಅವರು ತರಾಟೆಗೆ ತೆಗೆದುಕೊಂಡಿದ್ದರು. ರಾಯ್ ಬರೇಲಿಗೆಯಿಂದ ಈ ಹಿಂದೆ ಗೆದ್ದಿದ್ದ ಸೋನಿಯಾ ಗಾಂಧಿ ಐದು ವರ್ಷಗಳ ಅವಧಿಯಲ್ಲಿ ಕೇವಲ ಎರಡು ಬಾರಿ ಮಾತ್ರ ರಾಯಬರೇಲಿಗೆ ಆಗಮಿಸಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

    ಗೋರಕ್ಷ್ ಪೀಠದ ಪೀಠಾಧೀಶ್ವರಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮ ದೇವಾಲಯ ನಿರ್ಮಾಣಕ್ಕಾಗಿ 1.01 ಕೋಟಿ ರೂ. ಚೆಕ್ ಅನ್ನು ಚಂಪತ್ ರಾಯ್ ಅವರಿಗೆ ಹಸ್ತಾಂತರಿಸಿದ್ದರು. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಣಿಗೆ ಅಭಿಯಾನ ಆರಂಭಿಸಿದ ಬೆನ್ನಲ್ಲೇ ಕೋವಿಂದ್ ಅವರು 5 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದರು. ಅವರು ದೇಶದ ಮೊದಲ ಪ್ರಜೆ. ಹೀಗಾಗಿ ನಾವು ಈ ಅಭಿಯಾನವನ್ನು ಆರಂಭಿಸುವ ಮೊದಲು ಅವರ ಬಳಿಯೇ ತೆರಳಿದ್ದೆವು. ಈ ವೇಳೆ ಅವರು 5,01,000 ರೂ.ಗಳನ್ನು ನೀಡಿದ್ದಾರೆ ಎಂದು ವಿಎಚ್‍ಪಿಯ ಅಲೋಕ್ ಕುಮಾರ್ ತಿಳಿಸಿದ್ದರು. ಈ ಬೃಹತ್ ಅಭಿಯಾನ ಫೆಬ್ರವರಿ 27ರ ವರೆಗೆ ನಡೆಯಲಿದೆ.

  • ಅಬಕಾರಿ ಇಲಾಖೆ ಭರ್ಜರಿ ಬೇಟೆ- 450 ಲೀ. ಕಳ್ಳಭಟ್ಟಿ ವಶ

    ಅಬಕಾರಿ ಇಲಾಖೆ ಭರ್ಜರಿ ಬೇಟೆ- 450 ಲೀ. ಕಳ್ಳಭಟ್ಟಿ ವಶ

    ಲಕ್ನೋ: ಅಬಕಾರಿ ಇಲಾಖೆ ಅಧಿಕಾರಿಗಳು ಉತ್ತರ ಪ್ರದೇಶದ ಗೋರಖ್‍ಪುರದ ಹಲವು ಕಡೆಗಳಲ್ಲಿ ದಾಳಿ ಮಾಡಿ 450 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡಿದ್ದಾರೆ.

    ಗೋರಖ್‍ಪುರ್ ನ ಹಲವು ಭಾಗಗಳಲ್ಲಿ ಎಗ್ಗಿಲ್ಲದೆ ಕಳ್ಳಭಟ್ಟಿ ತಯಾರಿಕೆಯ ದಂಧೆ ನಡೆಯುತ್ತಿತ್ತು. ಈ ಕುರಿತು ಮಾಹಿತಿ ಪಡೆದು ಅಬಕಾರಿ ಅಧಿಕಾರಿ ರಾಕೇಶ್ ತಿರುಪತಿ ಅವರ ತಂಡ ದಾಳಿ ಮಾಡಿ ಕಳ್ಳಬಟ್ಟಿ ಸಾರಾಯಿಯೊಂದಿಗೆ ತಯಾರಿಕೆಗಾಗಿ ಬಳಸುತ್ತಿದ್ದ 14 ರಿಂದ 15 ಕಿ.ಗ್ರಾಂ. ನಷ್ಟು ಲಹಾನ್‍ನ್ನು ಮುಟ್ಟುಗೋಲು ಹಾಕಿದ್ದಾರೆ.

    ಈ ಕುರಿತು ಸ್ಥಳೀಯ ಮಾಧ್ಯಮಕ್ಕೆ ವಿವರಿಸಿದ ಅಬಕಾರಿ ಅಧಿಕಾರಿ ರಾಕೇಶ್ ತಿರುಪತಿ ದಾಳಿಯ ವೇಳೆ 450 ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು 14ರಿಂದ 15 ಕಿ.ಗ್ರಾಂ ಲಹಾನ್‍ನ್ನು ಕೈ ವಶ ಮಾಡಿಕೊಂಡು ನಾಶ ಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಸ್ಥಳೀಯಾ ಮಾಧ್ಯಮಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ವಶಪಡಿಸಿಕೊಂಡಿರುವ ಸಾರಾಯಿ ಮತ್ತು ಲಹಾನ್‍ನ್ನು ಜೆಸಿಬಿ ಬಳಸಿ ಮಣ್ಣಿನಡಿಯಲ್ಲಿ ಹೂತು ಹಾಕಲಾಗಿದೆ ಎಂದು ವರದಿಯಾಗಿದೆ.

  • ರುಂಡವಿಲ್ಲದ ಯುವತಿಯ ಮೃತದೇಹ ಬಾವಿಯಲ್ಲಿ ಪತ್ತೆ

    ರುಂಡವಿಲ್ಲದ ಯುವತಿಯ ಮೃತದೇಹ ಬಾವಿಯಲ್ಲಿ ಪತ್ತೆ

    ಲಕ್ನೋ: ಪ್ರಿಯಕರನೊಂದಿಗೆ ಓಡಿಹೋಗಿದ್ದ ಯುವತಿ ಕೊಲೆಯಾಗಿದ್ದು, ರುಂಡವಿಲ್ಲದ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿ ನಡೆದಿದೆ.

    ಎರಡು ತಿಂಗಳ ಹಿಂದೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದ 22 ವರ್ಷ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ರುಂಡವಿಲ್ಲದ ಯುವತಿ ದೇಹ ಹೊಲದಲ್ಲಿ ಪತ್ತೆಯಾಗಿದೆ. ಈಕೆ ಬರೇಲಿ ಜಿಲ್ಲೆಗೆ ಸೇರಿದವಳಾಗಿದ್ದಾಳೆ ಎಂದು ತಿಳಿದು ಬಂದಿದೆ.

    ಯುವತಿಯ ರುಂಡವನ್ನು ಕತ್ತರಿಸಿ ಕೊಲೆ ಮಾಡಿ ಬಾವಿಗೆ ಎಸೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದ್ದೇವೆ. ವಿಚಾರಣೆ ವೇಳೆ ಯುವತಿಯ ರುಂಡವನ್ನು ಎಸೆದಿರುವ ಜಾಗವನ್ನು ಹೇಳಿದ್ದಾರೆ. ಈ ಪ್ರಕರಣದ ಮುಖ್ಯ ಆರೋಪಿ ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಫತೇಪುರದ ಪೊಲೀಸ್ ವರಿಷ್ಠಾಧಿಕಾರಿ ಸತ್ಪಾಲ್ ಹೇಳಿದ್ದಾರೆ.

  • ಟ್ರಕ್, ಜೀಪ್ ಡಿಕ್ಕಿ ಭೀಕರ ಅಪಘಾತದಲ್ಲಿ 6 ಸಾವು, 11 ಮಂದಿಗೆ ಗಾಯ

    ಟ್ರಕ್, ಜೀಪ್ ಡಿಕ್ಕಿ ಭೀಕರ ಅಪಘಾತದಲ್ಲಿ 6 ಸಾವು, 11 ಮಂದಿಗೆ ಗಾಯ

    ಲಕ್ನೋ: ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದ ವೇಳೆ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಜೌನ್‍ಪುರ ಜಿಲ್ಲೆಯ ವಾರಾಣಸಿ-ಜಾನ್‍ಪುರ ಹೆದ್ದಾರಿಯಲ್ಲಿ ನಡೆದಿದೆ.

    ಮೃತರನ್ನು ಅಮರ್ ಬಹದ್ದೂರ್ ಯಾದವ್(58), ರಾಮ್ ಸಿಂಗಾರ್ ಯಾದವ್ (38), ಮುನ್ನಿಲಾಲ್(38), ಇಂದ್ರಜಿತ್ ಯಾದವ್(48), ಕಮಲಾ ಪ್ರಸಾದ್ ಯಾದವ್(60) ಹಾಗೂ ರಾಮ್ ಕುಮಾರ್(65) ಎಂದು ಗುರುತಿಸಲಾಗಿದೆ. 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ವಾರಣಾಸಿಯಲ್ಲಿ ನಡೆದ ಅಂತ್ಯಕ್ರಿಯೆಯನ್ನು ಮುಗಿಸಿ 17 ಮಂದಿ ಜೀಪಿನಲ್ಲಿ ವಾಪಾಸಾಗುತ್ತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಟ್ರಕ್ ಮತ್ತು ಜೀಪ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದ ಪರಿಣಾಮವಾಗಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿದ್ದಾರೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಹೇಳಿದ್ದಾರೆ.

  • ಕಾಳಿ ವೇಷಧಾರಿ ಅರ್ಚಕನ ಬರ್ಬರ ಕೊಲೆ

    ಕಾಳಿ ವೇಷಧಾರಿ ಅರ್ಚಕನ ಬರ್ಬರ ಕೊಲೆ

    ಲಕ್ನೋ: ಕಾಳಿ ವೇಷಧಾರಿಯಲ್ಲಿ 75 ವರ್ಷಗಳಿಂದ ಅರ್ಚಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಾದಾನ್ ಜಿಲ್ಲೆಯ ಧಕ್ನಾಗ್ಲಾ ಗ್ರಾಮದಲ್ಲಿ ನಡೆದಿದೆ.

    ಕಾಳಿ ವೇಷಧಾರಿ ಅರ್ಚಕನನ್ನು ಜೈ ಸಿಂಗ್ ಯಾದವ್ ಎಂದು ಗುರುತಿಸಲಾಗಿದೆ. ಇವರನ್ನು ಸಖಿ ಬಾಬಾ ಎಂದು ಕರೆಯಲಾಗುತ್ತಿತ್ತು. 20 ವರ್ಷಗಳಿಂದ ಸಾರಿ ಉಟ್ಟು, ಕೈಗೆ ಬಳೆ ತೊಟ್ಟು, ಕಾಳಿ ಅವತಾರದಲ್ಲಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದರು.

    ಕೊಲೆ ಮಾಡಿರುವ ವ್ಯಕ್ತಿಯನ್ನು ರಾಮ್‍ವೀರ್ ಯಾದವ್ ಎಂದು ಗುರುತಿಸಲಾಗಿದ್ದು, ರಾಮ್‍ವೀರ್ ಯಾದವ್ ದೇವಲಾಯಕ್ಕೆ ಬಂದು ಸಖಿ ಬಾಬಾರೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಚರ್ಚೆಸುತ್ತಿದ್ದರು. ಚರ್ಚೆ ತಾರಕಕ್ಕೇರಿ ಪಕ್ಕದಲ್ಲಿದ್ದ ಜಾಕುವಿನಿಂದ ಸಖಿ ಬಾಬಾರಿಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

    ಹಿರಿಯ ಪೊಲೀಸ್ ಅಧಿಕಾರಿ ಸಂಕಲ್ಪ ಶರ್ಮಾ ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಕೊಲೆಗೆ ಕಾರಣ ಇನ್ನು ತಿಳಿದುಬಂದಿಲ್ಲ ಎಂದಿದ್ದಾರೆ. ಐಪಿಸಿ ಸೆಕ್ಷನ್ 302 ಪ್ರಕಾರ ಕೇಸ್ ದಾಖಲಿಸಿಕೊಂಡಿರುವ ಇಸ್ಲಾಂನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.