Tag: lucknow

  • ತಾಯಿ, ಮಗಳ ಮೇಲೆ ಅತ್ಯಾಚಾರ, ಕೊಲೆ- ಅಪರಾಧಿಗೆ ಮರಣದಂಡನೆ ಶಿಕ್ಷೆ

    ತಾಯಿ, ಮಗಳ ಮೇಲೆ ಅತ್ಯಾಚಾರ, ಕೊಲೆ- ಅಪರಾಧಿಗೆ ಮರಣದಂಡನೆ ಶಿಕ್ಷೆ

    ಲಕ್ನೋ: ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

    ಉತ್ತರ ಪ್ರದೇಶದ ಅಜಾಮ್‍ಗಡ ಜಿಲ್ಲೆಯ ಮುಬಾರಕ್‍ಪುರದಲ್ಲಿ ಘಟನೆ ನಡೆದಿದ್ದು, ಪ್ರಕರಣ ಬೇಧಿಸಿದ್ದಕ್ಕೆ ಉತ್ತರ ಪ್ರದೇಶ ಸರ್ಕಾರ ಪೊಲೀಸರಿಗೆ ಹಾಗೂ ವಾದ ಮಂಡಿಸಿದ ವಕೀಲರ ತಂಡಕ್ಕೆ 1 ಲಕ್ಷ ರೂ. ಬಹುಮಾನ ಘೋಷಿಸಿದೆ. ಈ ಕುರಿತು ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಕುಮಾರ್ ಸ್ವಸ್ಥಿ ಮಾಹಿತಿ ನೀಡಿದ್ದು, ಪ್ರಕರಣವನ್ನು ತುಂಬಾ ಚೆನ್ನಾಗಿ ನಿರ್ವಹಿಸಿದ ಅಧಿಕಾರಿಗಳಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಅಪರಾಧಿಯನ್ನು ನಜಿರುದ್ದಿನ್ ಅಲಿಯಾಸ್ ಪವ್ವಾ ಎಂದು ಗುರುತಿಸಲಾಗಿದ್ದು, 2019ರಲ್ಲಿ ಪ್ರಕರಣ ನಡೆದಿತ್ತು. ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ರಾಕ್ಷಸ ರೀತಿಯಲ್ಲಿ ಅಪರಾಧಿ ಅತ್ಯಾಚಾರ ಎಸಗಿದ್ದ. ಅಲ್ಲದೆ ಮಹಿಳೆಯ ಪತಿ ಹಾಗೂ ಅವರ 4 ತಿಂಗಳ ಕೂಸನ್ನು ಸಹ ಕೊಲೆ ಮಾಡಿದ್ದ.

    ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯ ಬುಧವಾರ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಅಲ್ಲದೆ ನ್ಯಾಯಾಲಯವು 9 ಲಕ್ಷ ರೂ.ಗಳ ದಂಡವನ್ನು ಸಹ ವಿಧಿಸಿದೆ. ನ್ಯಾಯಾಲಯವು 66 ಪುಟಗಳ ತೀರ್ಪಿನಲ್ಲಿ ಘಟನೆಯನ್ನು ಭಯಾನಕ, ಅಮಾನವೀಯ ಹಾಗೂ ಅಪರೂಪದಲ್ಲಿ ಅಪರೂಪವಾದ ಕೃತ್ಯ ಎಂದು ಹೇಳಿದೆ.

  • ಮಾಂತ್ರಿಕನ ಮಾತು ಕೇಳಿ ಪಕ್ಕದ ಮನೆಯ ಮಗುವನ್ನು ಕೊಂದ ಮಹಿಳೆ

    ಮಾಂತ್ರಿಕನ ಮಾತು ಕೇಳಿ ಪಕ್ಕದ ಮನೆಯ ಮಗುವನ್ನು ಕೊಂದ ಮಹಿಳೆ

    ಲಕ್ನೋ: ಮಾಂತ್ರಿಕನ ಮಾತು ಕೇಳಿ ತಾನೂ ಗರ್ಭಿಣಿಯಾಗುವುದಕ್ಕೆ ಮೂರು ವರ್ಷದ ಮಗುವನ್ನು ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಹಾರ್ದೋಯಿ ನಗರದಲ್ಲಿ ನಡೆದಿದೆ.

    25 ವರ್ಷದ ಮಹಿಳೆಯನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಮೃತ ಮಗು ಆಕಾಶ್(3) ಎಂದು ಗುರುತಿಸಲಾಗಿದೆ. ಮಗುವನ್ನು ಮಾಟ ಮಾಡಿ ಕೊಂದರೆ ತಾನು ಗರ್ಭಿಣಿಯಾಗುತ್ತೇನೆ ಎಂದು ಮಾಂತ್ರಿಕನೊಬ್ಬ ಹೇಳಿದ್ದರಿಂದ ಮಗುವನ್ನು ಕೊಂದೆ ಎಂದು ಪೊಲೀಸರಿಗೆ ಮಹಿಳೆ ಹೇಳಿದ್ದಾಳೆ.

    ಮಾಂತ್ರಿಕನ ಮಾತು ಕೇಳಿ ಮಗುವನ್ನು ಟೆರೇಸ್ ಮೇಲೆ ಕರೆದುಕೊಂಡು ಹೋಗಿ ವಾಮಾಚಾರ ಮಾಡಿ ಮಗುವನ್ನು ಕೊಂದು ಬ್ಯಾಗ್‍ನಲ್ಲಿ ತುಂಬಿಟ್ಟಿದ್ದಳು. ಪೊಲೀಸರು ಮಗುವನ್ನು ಹುಡುಕುವ ವೇಳೆ ಮೃತದೇಹ ಸಿಕ್ಕಿದೆ. ಈ ವೇಳೆ ಮಹಿಳೆಯನ್ನು ವಿಚಾರಣೆ ನಡೆಸಿದಾಗ ಮಹಿಳೆ ಸಿಕ್ಕಿ ಬಿದ್ದಿದ್ದಾಳೆ. ಈ ಸಂಬಂಧ ಹಾರ್ದೋಯಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಲಿಸುತ್ತಿದ್ದ ವಾಹನದ ಮೇಲೆ ಸ್ಟಂಟ್ ಮಾಡಿ ಪೊಲೀಸರ ಬಲೆಗೆ ಬಿದ್ದ

    ಚಲಿಸುತ್ತಿದ್ದ ವಾಹನದ ಮೇಲೆ ಸ್ಟಂಟ್ ಮಾಡಿ ಪೊಲೀಸರ ಬಲೆಗೆ ಬಿದ್ದ

    ಲಕ್ನೋ: ಚಲಿಸುತ್ತಿದ್ದ ವಾಹನದ ಮೇಲೆ ಸ್ಟಂಟ್ ಮಾಡಿದ ಯುವಕನಿಗೆ ತಕ್ಕ ಪಾಠವನ್ನು ಕಲಿಸಿದ ಪೊಲೀಸರು ಒಂದು ವೀಡಿಯೋವನ್ನು ಹಂಚಿಕೊಂಡಿದ್ದು ಸಖತ್ ಸುದ್ದಿಯಾಗಿದೆ.

    ಉತ್ತರಪ್ರದೇಶದ ಯುವಕನೊಬ್ಬ ಚಲಿಸುತ್ತಿರುವ ವಾಹನದ ಮೇಲೆ ಪುಶ್-ಅಪ್ ಮಾಡಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಪಡೆಯಲು ಯುವಕ ಈ ವಿಚಿತ್ರ ಮಾರ್ಗವನ್ನು ಅನುಸರಿಸಿದ್ದಾನೆ.

    ಈ ವೀಡಿಯೋ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಪೊಲೀಸರು, ಯುವಕನ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಂಡಿದ್ದಾರೆ.

    ಕೆಲವು ಪುಶ್ ಅಪ್‍ಗಳು ನಿಮ್ಮನ್ನು ಕಾನೂನಿನ ಕಣ್ಣಿಗೆ ಕಾಣುವಂತೆ ಮಾಡುತ್ತದೆ ಎಂದು ಬರೆದುಕೊಂಡು ಯುವಕ ಪುಶ್ ಅಪ್ ಮಾಡುತ್ತಿರುವ ವೀಡಿಯೋ ಜೊತೆಗೆ ದಂಡವನ್ನು ಕಟ್ಟಿರುವ ರಸೀದಿ ಹಾಗೂ ಯುವಕ ಪೊಲೀಸರಲ್ಲಿ ಕ್ಷಮೆ ಕೇಳಿದ ವೀಡಿಯೋವನ್ನು ಒಟ್ಟಿಗೆ ಉತ್ತರಪ್ರದೇಶ ಪೊಲೀಸರು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಪೊಲೀಸರು ಹಂಚಿಕೊಂಡ ವೀಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸರ ಕೆಲಸವನ್ನು ಶ್ಲಾಘಿಸಿದ್ದಾರೆ.

  • ಎರಡು ಕೈ ಕಳೆದುಕೊಂಡರೂ ಛಲ ಬಿಡದೇ ಶಿಕ್ಷಕಿಯಾದ ಸಾಧಕಿ

    ಎರಡು ಕೈ ಕಳೆದುಕೊಂಡರೂ ಛಲ ಬಿಡದೇ ಶಿಕ್ಷಕಿಯಾದ ಸಾಧಕಿ

    ಲಕ್ನೋ: ಈಕೆ ಆ ದೇವರ ಇಚ್ಛೆಯೆಂಬಂತೆ ವಿದ್ಯುತ್ ಶಾಕ್ ಹೊಡೆದು ಎರಡು ಕೈಗಳನ್ನು ಕಳೆದುಕೊಂಡಾಕೆ. ಆದರೆ ಈಕೆಯ ಮನೋಸ್ಥೈರ್ಯದ ಮುಂದೆ ಈ ಸಮಸ್ಯೆ ಕಾಡಲೇ ಇಲ್ಲ. ಸಾಧಿಸಬೇಕೆಂಬ ಛಲದಂಕ ಮಲ್ಲೆಯಾಗಿ ಇದೀಗ ಕೈ ಇದ್ದವರಿಗೂ ಸಾಧಿಸಲಾಗದಂತಹ ಮಹೋತ್ತರವಾದ ಗುರಿಯೊಂದಿಗೆ ಮುನ್ನುಗ್ಗಿ ನಿಜವಾದ ಮಹಿಳಾ ಸಾಧಕಿಯ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.

    ಈಕೆಯ ಹೆಸರು ಪ್ರಗತಿ ಉತ್ತರ ಪ್ರದೇಶದ ಮೊರಾದಾಬಾದ್ ನ ಹಳ್ಳಿ ಹುಡುಕಿ 2010ರಲ್ಲಿ ತನಗೆ ಅರಿವಿಲ್ಲದೆ ವಿದ್ಯುತ್ ತಂತಿಯನ್ನು ಮುಟ್ಟಿ ತನ್ನ ಎರಡು ಕೈಯನ್ನು ಕಳೆದುಕೊಳ್ಳುತ್ತಾಳೆ. ಆದರೆ ಕೈ ಇಲ್ಲ ಎಂದು ಸುಮ್ಮನೆ ಕುಳಿತಿದ್ದರೆ ಇಂದು ಪ್ರಗತಿ ಯಾರಿಗೂ ತಿಳಿಯುತ್ತಿರಲಿಲ್ಲ. ಇದೀಗ ಈಕೆ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದರು ಕೂಡ ತನ್ನ ಸಾಧನೆಯ ಛಲ ಬಿಡದೆ ಅರ್ಧ ತುಂಡಾಗಿರುವ ಎರಡು ಕೈಗಳನ್ನು ಬಳಸಿಕೊಂಡು ಎಲ್ಲರಂತೆ ಮೊಬೈಲ್ ಮತ್ತು ಲ್ಯಾಪ್‍ಟಾಪ್‍ಗಳನ್ನು ಬಳಸುವ ಮೂಲಕ ಜ್ಞಾನರ್ಜನೆ ಮಾಡಿ ಮುನ್ನುಗ್ಗುತ್ತಿದ್ದಾಳೆ.

    ಪ್ರಗತಿ ಕೈಗಳು ಇಲ್ಲವೆಂದು ಸುಮ್ಮನಿರದೆ, ತನ್ನ ಅರ್ಧ ತುಂಡಾಗಿರುವ ಕೈಯನ್ನು ಬಳಸಿಕೊಂಡು ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ಬಂದ ಹಣದಿಂದ ಬ್ಯಾಕಿಂಗ್ ಪ್ರವೇಶ ಪರೀಕ್ಷೆ ಬರೆಯಬೇಕೆಂಬ ಹಂಬಲದೊಂದಿಗೆ ಸಾಧನೆಯ ಹಾದಿಯಲ್ಲಿ ತೊಡಗಿಕೊಂಡಿದ್ದಾಳೆ.

    ಪ್ರಗತಿ ತನ್ನ ಕೈ ಕಳೆದುಕೊಂಡು ಪಟ್ಟ ಕಷ್ಟ ಆ ನೋವು, ಕಿಳರಿಮೆಗಳನ್ನು ಸಹಿಸಿಕೊಂಡು ನಾನು ಏನಾದರೂ ಸಾಧಿಸಿ ತೊರಿಸಬೇಕೆಂಬ ಛಲದಿಂದಾಗಿ ಮುನ್ನಡೆಯುವ ಮೂಲಕ ನಿಜವಾದ ಮಹಿಳಾ ದಿನದ ಧೀರ ಮಹಿಳೆಯಾಗಿ ಇತರರಿಗೆ ಸ್ಫೂರ್ತಿಯಾಗುತ್ತಿದ್ದಾಳೆ.

  • ಅಪ್ರಾಪ್ತರಿಂದ್ಲೇ ಅಪ್ರಾಪ್ತನ ಅತ್ಯಾಚಾರ – 20ರೂ. ಕೊಟ್ಟು ಯಾರಿಗೂ ಹೇಳ ಬೇಡವೆಂದ್ರು!

    ಅಪ್ರಾಪ್ತರಿಂದ್ಲೇ ಅಪ್ರಾಪ್ತನ ಅತ್ಯಾಚಾರ – 20ರೂ. ಕೊಟ್ಟು ಯಾರಿಗೂ ಹೇಳ ಬೇಡವೆಂದ್ರು!

    ಲಕ್ನೋ: 13 ವರ್ಷದ ಬಾಲಕನ ಮೇಲೆ ಅಪ್ರಾಪ್ತರು ಲೈಂಗಿಕ ದೌರ್ಜನ್ಯವೆಸೆಗಿ ಯಾರಿಗೂ ಹೇಳಬೇಡವೆಂದು 20 ರೂಪಾಯಿ ಕೊಟ್ಟು ಹೋಗಿರುವ ಘಟನೆ ಉತ್ತರಪ್ರದೆಶದ ಆಲಿಗಢದಲ್ಲಿ ನಡೆದಿದೆ.

    ಬಾಲಕ ತನ್ನ ತಂದೆಯೊಂದಿಗೆ ಗದ್ದೆಗೆ ಹೋಗಿದ್ದನು. ಈ ವೇಳೆ ಕೃಷಿ ಉಪಕರಣವನ್ನು ತೆಗೆದುಕೊಂಡು ಬಾ ಅಂತ ತಂದೆ ಮಗನನ್ನು ಕಳುಹಿಸಿದ್ದಾರೆ. ಈ ವೇಳೆ ಮಾರ್ಗ ಮಧ್ಯದಲ್ಲಿ ಸಿಕ್ಕ ಇಬ್ಬರು ಬಾಲಕರು ಈತನನ್ನು ನಿರ್ಜನ ಅರಣ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.

    ಈ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರಾಗಿದ್ದು, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಸಂಸ್ತ್ರಸ್ತನಿಗೆ ಈ ವಿಚಾರವನ್ನು ಯಾರಿಗೂ ತಿಳಿಸಬೇಡ ಎಂದು 20 ರೂಪಾಯಿ ಕೊಟ್ಟು ಬೆದರಿಕೆ ಹಾಕಿ ಕಳುಹಿಸಿದ್ದಾರೆ.

    ಬಾಲಕ ಮನೆಗೆ ಬಂದು ನಡೆದಿರುವ ಘಟನೆಯನ್ನು ಪೋಷಕರಿಗೆ ಹೇಳಿದ್ದಾನೆ. ಕೂಡಲೇ ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಮಗಳನ್ನು ಹತ್ಯೆಗೈದು ರುಂಡವನ್ನು ಠಾಣೆಗೆ ತಂದು ಶರಣಾದ ತಂದೆ

    ಮಗಳನ್ನು ಹತ್ಯೆಗೈದು ರುಂಡವನ್ನು ಠಾಣೆಗೆ ತಂದು ಶರಣಾದ ತಂದೆ

    ಲಕ್ನೋ: ತನ್ನ ವಿರೋಧದ ನಡುವೆಯೂ ಪ್ರೀತಿಯಲ್ಲಿ ಬಿದ್ದಿದ್ದ ಮಗಳನ್ನು ಹತ್ಯೆಗೈದು ಆಕೆಯ ತಲೆಯನ್ನು ತಂದೆಯೇ ಪೊಲೀಸ್ ಠಾಣೆಗೆ ತಂದು ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಮೂಲಕ ಮತ್ತೊಂದು ಮರ್ಯಾದಾ ಹತ್ಯೆ ಘಟನೆ ಬೆಳಕಿಗೆ ಬಂದಿದೆ.

    ಸರ್ವೇಶ್ ಮಗಳನ್ನು ಕೊಲೆ ಮಾಡಿದ ತಂದೆಯಾಗಿದ್ದಾನೆ. 17 ವರ್ಷದ ಹುಡುಗಿ ಸೋದರ ಸಂಬಂಧಿ ಆದೇಶ್ ಎಂಬ ಯುವಕನೊಂದಿಗೆ ಪ್ರೇಮದಲ್ಲಿ ಬಿದ್ದಿದ್ದಳು. ಇದಕ್ಕೆ ಆಕೆಯ ಪೋಷಕರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೂ ಆಕೆ ತನ್ನ ಪ್ರೇಮ ಸಲ್ಲಾಪ ಮುಂದುವರೆಸಿದ್ದಳು. ಇದರಿಂದ ಕೋಪಗೊಂಡ ತಂದೆ ಮಗಳು ಮತ್ತು ಆತನ ಪ್ರಿಯಕರ ಇಬ್ಬರನ್ನೂ ಕೊಲೆ ಮಾಡಲು ಯೋಚಿಸಿದ್ದಾನೆ.

    ಮಗಳು ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ತಿಳಿದ ತಂದೆ ಬಾಗಿಲು ಮುಚ್ಚಿ ಆಕೆಯ ತಲೆ ಕತ್ತರಿಸಿದ್ದಾನೆ. ಬಳಿಕ ಕೈಯಲ್ಲಿ ಆಕೆಯ ರುಂಡ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬರುತ್ತಿದ್ದನು. ಘಟನೆಯಿಂದ ಭಯಭೀತರಾದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗಳ ಕತ್ತರಿಸಿದ ತಲೆ ಹಿಡಿದು ಬರುತ್ತಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ.

    ವ್ಯಕ್ತಿಯೊಬ್ಬನ ಜತೆ ಪುತ್ರಿ ಸಂಬಂಧ ಬೆಳೆಸಿದ್ದರಿಂದ ಕೋಪಗೊಂಡು ಹರಿತವಾದ ಆಯುಧದಿಂದ ತಲೆ ಕತ್ತರಿಸಿದ್ದೇನೆ. ಈ ಕೊಲೆಯನ್ನು ನಾನೇ ಮಾಡಿದ್ದು, ಬೇರೆ ಯಾರೂ ಇರಲಿಲ್ಲ. ಬಾಗಿಲು ಚಿಲಕ ಹಾಕಿ ತಲೆ ಕತ್ತರಿಸಿದೆ. ಮೃತದೇಹ ಕೊಠಡಿಯಲ್ಲಿದೆ ಎಂದು ಮೃತಳ ತಂದೆ ಸರ್ವೇಶ್ ಹೇಳಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅನುರಾಗ್ ವತ್ಸ್ ಹೇಳಿದ್ದಾರೆ.

  • ಏಕಾಏಕಿ ಮನೆಗೆ ನುಗ್ಗಿ ಮೂವರಿಗೆ ಬೆಂಕಿ ಹಚ್ಚಿ ಪರಾರಿಯಾಗ್ತಿದ್ದಾಗ ಟ್ರಕ್ ಡಿಕ್ಕಿ!

    ಏಕಾಏಕಿ ಮನೆಗೆ ನುಗ್ಗಿ ಮೂವರಿಗೆ ಬೆಂಕಿ ಹಚ್ಚಿ ಪರಾರಿಯಾಗ್ತಿದ್ದಾಗ ಟ್ರಕ್ ಡಿಕ್ಕಿ!

    – ಘಟನೆಯಿಂದ ಮೂವರು ಸಾವು
    – ಗಂಭೀರ ಗಾಯಗೊಂಡು ಆರೋಪಿ ಆಸ್ಪತ್ರೆ ಪಾಲು

    ಲಕ್ನೋ: ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಮನೆಗೆ ನುಗ್ಗಿ ಇಬ್ಬರು ಮಕ್ಕಳೊಂದಿಗೆ ಮಹಿಳೆಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಅರ್ಚನಾ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಾಣ ಬಿಟ್ಟಿದ್ದಾಳೆ. ಖಿನ್ನತೆಗೆ ಒಳಗಾದ ಅವನೀಶ್ ನಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳಿಗೆ ಬೆಂಕಿ ಕಚ್ಚಿ ಕೊಲೆಗೈದು ಸ್ಥಳದಿಂದ ಪರಾರಿಯಾಗುವ ವೇಳೆ ಈತ ಟ್ರಕ್‍ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾನೆ.

    ಅರ್ಚನಾ ಅಡುಗೆ ಮನೆಯಲ್ಲಿದ್ದಳು. ಪತಿ ಜಿತೇಂದ್ರ ಮನೆಯ ಇನ್ನೊಂದು ಕೋಣೆಯಲ್ಲಿ ಕುಳಿತಿದ್ದನು. ಈ ವೇಳೆ ಏಕಾಏಕಿ ಮನೆಗೆ ನುಗ್ಗಿದ ಅವನೀಶ್ ಇಬ್ಬರು ಮಕ್ಕಳು ಮತ್ತು ಅರ್ಚಾನಾ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾನೆ. ಮಕ್ಕಳು ಮತ್ತು ಪತ್ನಿಯ ಕಿರುಚಾಟವನ್ನು ಕೇಳಿ ಪತಿ ಓಡಿ ಬಂದಿದ್ದಾನೆ. ನೆರೆಹೊರೆಯವರು ಮೂವರನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು. ಚಿಕಿತ್ಸೆಯ ಸಮಯದಲ್ಲಿ ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಅವರ ತಾಯಿ ಸೋಮವಾರ ತಡರಾತ್ರಿ ಕಾನ್ಪುರದ ಉರ್ಸಲಾ ಹಾಸ್ರ್ಮನ್ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಗೆ ಬಲಿಯಾಗಿದ್ದಾರೆ.

    ಬೆಂಕಿ ಹಚ್ಚಿ ಓಡಿ ಹೋಗುತ್ತಿದ್ದ ಅವನೀಶ್‍ನನ್ನು ಸ್ಥಳೀಯರು ಹಿಂಬಾಲಿಸಿದ್ದಾರೆ. ತಪ್ಪಿಸಿಕೊಳ್ಳುವ ವೇಳೆ ಟ್ರಕ್‍ಗೆ ಡಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತೆಗೆ ದಾಖಲಾಗಿದ್ದಾನೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವನೀಶ್ ಖಿನ್ನತೆಗೆ ಒಳಗಾಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.

    ಅಪರಾಧವನ್ನು ಮಾಡಲು ಅವನನ್ನು ಪ್ರೇರೇಪಿಸಿದ್ದು ಯಾರು ಎಂದು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಾನ್ಪುರ್ ದೇಹತ್, ಕೇಶವ್ ಕುಮಾರ್ ಚೌಧರಿ ಹೇಳಿದ್ದಾರೆ.

  • ಮಕ್ಕಳನ್ನು ಹೇರುವವರು ನೀವು, ಖರ್ಚು ಸರ್ಕಾರ ನೋಡಿಕೊಳ್ಳಬೇಕೇ – ಬಿಜೆಪಿ ಶಾಸಕನ ಪ್ರಶ್ನೆ

    ಮಕ್ಕಳನ್ನು ಹೇರುವವರು ನೀವು, ಖರ್ಚು ಸರ್ಕಾರ ನೋಡಿಕೊಳ್ಳಬೇಕೇ – ಬಿಜೆಪಿ ಶಾಸಕನ ಪ್ರಶ್ನೆ

    ಲಕ್ನೋ: ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಶುಲ್ಕವನ್ನು ಮನ್ನಾ ಮಾಡುವಂತೆ ಕೇಳಿಕೊಂಡ ಮಹಿಳೆಯರ ವಿರುದ್ಧ ಬಿಜೆಪಿ ಶಾಸಕ ರಮೇಶ್ ದಿವಾಕರ್, ನೀವು ಮಕ್ಕಳನ್ನು ಹೇರುತ್ತಿರಿ ನಂತರ ಮಕ್ಕಳ ಶಿಕ್ಷಣದ ವೆಚ್ಚ ಸರ್ಕಾರ ಕೊಡಬೇಕೆಂದು ಬಯಸುತ್ತೀರಿ ಎಂದು ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಉತ್ತರ ಪ್ರದೇಶದ ಔರೈಯಲ್ಲಿ ನಡೆದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ದಿವಾಕರ್ ಮಾತನಾಡಿ, ಬಚ್ಚೆ ಪೈದಾ ಕರನ್ ಆಪ್ ಔರ್ ಖರ್ಚ್ ಉತಾಯ್ ಸರ್ಕಾರ್(ನೀವು ಮಕ್ಕಳನ್ನು ಹೇರುತ್ತಿರಿ, ಸರ್ಕಾರ ಅವರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಬೇಕಾ) ಎಂದು ಪ್ರಶ್ನಿಸಿ, ಸರ್ಕಾರಿ ಶಾಲೆಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಶಾಲೆಗೆ ಸೇರಿಸಿ ಕಲಿಸಬಹುದು ಎಂದು ಮಹಿಳೆಯರಿಗೆ ಸಲಹೆ ಕೊಟ್ಟಿದ್ದಾರೆ.

    ದಿವಾಕರ್ ಅವರ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದ್ದು, ಇದು ಬಿಜೆಪಿ ಪಕ್ಷದಲ್ಲಿರುವ ಮಹಿಳಾ ವಿರೋಧಿ ನಡೆಯನ್ನು ಬಿಂಬಿಸುತ್ತದೆ ಟೀಕಿಸಿದ್ದಾರೆ. ಸಮಾಜವಾದಿ ಪಕ್ಷದ ಹಿರಿಯ ನಾಯಕರೊಬ್ಬರು, ಬಿಜೆಪಿಯಲ್ಲಿರುವ ನಾಯಕರಿಗೆ ಮಹಿಳೆಯರ ಬಗ್ಗೆ ಗೌರವಿಲ್ಲ ಎಂದು ಕಿಡಿಕಾರಿದ್ದಾರೆ.

  • ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕರನ್ನು ರಕ್ಷಿಸಿದ ಮಹಿಳಾ ಕಾನ್ಸ್‌ಟೇಬಲ್ – ವೀಡಿಯೋ ವೈರಲ್

    ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕರನ್ನು ರಕ್ಷಿಸಿದ ಮಹಿಳಾ ಕಾನ್ಸ್‌ಟೇಬಲ್ – ವೀಡಿಯೋ ವೈರಲ್

    ಲಕ್ನೋ: ಚಲಿಸುತ್ತಿದ್ದ ರೈಲಿನ ಕೆಳಗೆ ಸಿಲುಕಿಕೊಳ್ಳುತ್ತಿದ್ದ ಮಹಿಳೆಯನ್ನು, ಮಹಿಳಾ ಕಾನ್ಸ್‌ಟೇಬಲ್ ರಕ್ಷಿಸಿರುವ ಘಟನೆ ಲಕ್ನೋ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮಹಿಳಾ ಕಾನ್ಸ್‌ಟೇಬಲ್ ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

    ಫೆಬ್ರವರಿ 23ರಂದು ರೈಲ್ವೆ ಸಚಿವಾಲಯವು ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿನೀತ ಕುಮಾರಿ ಎಂಬ ಮಹಿಳಾ ಕಾನ್ಸ್‌ಟೇಬಲ್ ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕರೊಬ್ಬರ ಪ್ರಾಣ ಉಳಿಸಿ ಮತ್ತೊಮ್ಮೆ ಇಂತಹ ಸಾಹಸಗಳಿಗೆ ಕೈ ಹಾಕದಂತೆ ಮಹಿಳೆಗೆ ಮನವಿ ಮಾಡಿದ್ದಾರೆ.

    ವೀಡಿಯೋದಲ್ಲಿ ಮಹಿಳೆಯ ಸ್ನೇಹಿತನೊಂದಿಗೆ ಬರುತ್ತಾಳೆ. ಈ ವೇಳೆ ಆಕೆಯ ಸ್ನೇಹಿತ ಚಲಿಸುತ್ತಿದ್ದ ರೈಲನ್ನು ಸುಲಭವಾಗಿ ಏರುತ್ತಾನೆ. ಆತನ ಹಿಂದೆ ಮಹಿಳೆ ಕೂಡ ರೈಲನ್ನು ಏರಲು ಪ್ರಯತ್ನಿಸಿ ಕಾಲು ಜಾರಿ ಕೆಳಗೆ ಬೀಳುತ್ತಾರೆ. ರೈಲು ಮತ್ತು ಫ್ಲಾಟ್‍ಫಾರ್ಮ್ ಮಧ್ಯೆ ಮಹಿಳೆ ಸಿಲುಕಿಕೊಳ್ಳುತ್ತಿದಂತೆಯೇ ಕರ್ತವ್ಯದಲ್ಲಿದ್ದ ವಿನೀತ ಕುಮಾರಿ ಕೂಡಲೇ ಓಡಿ ಬಂದ ಮಹಿಳೆಯನ್ನು ತಮ್ಮ ಕಡೆಗೆ ಎಳೆದುಕೊಳ್ಳುತ್ತಾರೆ.

    ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸುಮಾರು 49.7 ಸಾವಿರ ವ್ಯೂವ್ಸ್ ಪಡೆದಿದ್ದು, 2.8 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಜೊತೆಗೆ ಕಮೆಂಟ್‍ಗಳ ಸುರಿಮಳೆ ಹರಿದು ಬರುತ್ತಿದೆ.

  • ಕಾರಿಗೆ ಆಯಿಲ್ ಟ್ಯಾಂಕರ್ ಡಿಕ್ಕಿ – ಭೀಕರ ಅಪಘಾತಕ್ಕೆ 7 ಮಂದಿ ಬಲಿ

    ಕಾರಿಗೆ ಆಯಿಲ್ ಟ್ಯಾಂಕರ್ ಡಿಕ್ಕಿ – ಭೀಕರ ಅಪಘಾತಕ್ಕೆ 7 ಮಂದಿ ಬಲಿ

    ಲಕ್ನೋ: ಕಾರಿಗೆ ಆಯಿಲ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಮೃತಪಟ್ಟಿರುವ ಘಟನೆ ಮಂಗಳವಾರ ತಡರಾತ್ರಿ ಉತ್ತರ ಪ್ರದೇಶದ ಮಥುರಾದ ನೌಜೀಲ್ ಪೊಲೀಸ್ ಠಾಣೆಯ ಸಮೀಪ ನಡೆದಿದೆ.

    ಈ ಕುರಿತಂತೆ ಮಾತನಾಡಿದ ಮಥುರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಗ್ರೋವರ್, ಯಮುನಾ ಎಕ್ಸ್‍ಪ್ರೆಸ್ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕಾರಿಗೆ ಆಯಿಲ್ ಟ್ಯಾಂಕರ್ ಡಿಕ್ಕಿ ಹೊಡೆದದ್ದರಿಂದ ಇಬ್ಬರು ಮಹಿಳೆಯರು ಸೇರಿದಂತೆ 7 ಜನ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಆಯಿಲ್ ಟ್ಯಾಂಕರ್ ಆಗ್ರಾ ಕಡೆಗೆ ಚಲಿಸುತ್ತಿದ್ದಾಗ ಟ್ಯಾಂಕರ್ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮಧ್ಯದಲ್ಲಿ ಕಾರು ಬಂದಿದ್ದರಿಂದ ಆಯಿಲ್ ಟ್ಯಾಂಕರ್ ಕಾರಿಗೆ ಸಹ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದೀಗ ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಗೌರವ್ ಗ್ರೋವರ್ ತಿಳಿಸಿದ್ದಾರೆ ಹಾಗೂ ಮೃತಪಟ್ಟವರು ಶವವನ್ನು ಮರಣೋತ್ತರ ಪರೀಕ್ಷೆಗೆಂದು ಕಳುಹಿಸಲಾಗಿದೆ ಎಂದರು.