Tag: lucknow

  • ನೆರೆಮನೆ ದಂಪತಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡ

    ನೆರೆಮನೆ ದಂಪತಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡ

    ಲಕ್ನೋ: ನೆರೆಮನೆಯ ಗಂಡ, ಹೆಂಡತಿ ಜಗಳ ಬಿಡಿಸಲು ಹೋದ ಯುವಕನೊಬ್ಬ ಅನ್ಯಾಯವಾಗಿ ಪ್ರಾಣಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಪ್ರೇಮನಗರದಲ್ಲಿ ನಡೆದಿದೆ.

    ಅರ್ಜುನ್(24) ಮೃತನಾಗಿದ್ದಾನೆ. ನವೀನ್ ಕುಮಾರ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ದಂಪತಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

    ಕೆಲಸ ಕಳೆದುಕೊಂಡಿದ್ದ ನವೀನ್ ಕುಮಾರ್ ತನ್ನ ಹೆಂಡತಿ ದೀಪಮಾಲಾ ಜೊತೆಗೆ ಜಗಳವಾಡುತ್ತಿದ್ದನು. ಅವರ ಜಗಳ ಬಿಡಿಸಲು ಅರ್ಜುನ್ ಹೋಗಿದ್ದಾನೆ. ಆದರೆ ಈ ವೇಳೆ ನವೀನ್ ಕುಮಾರ್ ಅರ್ಜುನ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಅರ್ಜುನ್‍ಗೆ ತೀವ್ರ ರಕ್ತಸ್ರಾವವಾಗಿದೆ.

    ಗಾಯಗೊಂಡಿರುವ ಅರ್ಜುನ್‍ನನ್ನು ಅವರ ಕುಟುಂಬ ಆಸ್ಪತ್ರೆಗೆ ಕರೆದೊಯ್ಯುವ ಬದಲು ಪೊಲೀಸ್ ಠಾಣೆಗೆ ಕರೆದೊಯ್ಯಿತು. ದೂರು ನೀಡಿದ ನಂತರ, ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅರ್ಜುನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

    ಆರೋಪಿ ನವೀನ್‍ನನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ತಲೆಗೆ ಪೆಟ್ಟಾಗಿ ಮೃತಪಟ್ಟಿರುವುದು ಕಂಡುಬರುತ್ತದೆ. ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಎಂದು ಬರೇಲಿ ಎಸ್‍ಎಸ್‍ಪಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ.

  • ಕೊರೊನಾದಿಂದ ಗುಣಮುಖವಾಗಿ ಪ್ರಾಣಬಿಟ್ಟ ಅವಳಿ ಸಹೋದರರು

    ಕೊರೊನಾದಿಂದ ಗುಣಮುಖವಾಗಿ ಪ್ರಾಣಬಿಟ್ಟ ಅವಳಿ ಸಹೋದರರು

    ಲಕ್ನೋ: ಕೊರೊನಾ ಸೋಂಕಿನಿಂದ ವಾಸಿಯಾದ ಅವಳಿ ಸಹೋದದರು ಒಂದೇ ದಿನ ಪ್ರಾಣ ಬಿಟ್ಟಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಜೋಫ್ರೆಡ್ ವರ್ಘಿಸ್ ಗ್ರೆಗೊರಿ ಮತ್ತು ರಾಲ್ಫೆಡ್ ಜಾರ್ಜ್ ಗ್ರೆಗೊರಿ ಮೃತರಾಗಿದ್ದಾರೆ. ಇಬ್ಬರು ಮನೆಯಿಂದಲೇ ಕೆಲಸವನ್ನು ಮಾಡುತ್ತಿದ್ದರು. ಆದರೂ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಇಬ್ಬರು ಸಹೋದರರನ್ನು ಮೇ 1ರಂದು ಆನಂದ್ ಆಸ್ಪತ್ರೆಗೆ ದಾಖಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮೆ 10 ರಂದು ನೆಗಿಟಿವ್ ವರದಿ ಬಂದಿತ್ತು. ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದರು.

    ಮೇ 13 ರಂದು ಇಬ್ಬರಲ್ಲಿಯೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅದೇ ದಿನ ರಾತ್ರಿ 11 ಗಂಟೆ ಸುಮಾರಿಗೆ ಒಬ್ಬನು ಪ್ರಾಣ ಬಿಟ್ಟನು. ಮರುದಿನ ಇನ್ನೋಬ್ಬ ಮಗ ಕೊನೆಯುಸಿರೆಳೆದಿದ್ದಾನೆ. ಕೊರೊನಾ ದಿಂದ ಗುಣಮುಖರಾಗಿದ್ದರು ಸೋಂಕು ಶ್ವಾಸಕೋಶಕ್ಕೆ ಹರಡಿತ್ತು. ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದೇವೆ. ನಮ್ಮ ಕುಟುಂಬವೇ ನಾಶವಾಯಿತ್ತು. ಸದ್ಯ ನಮ್ಮ ಕುಟುಂಬದಲ್ಲಿ ಉಳಿದಿರುವುದು ಮೂವರೇ. ನನ್ನ ಮಕ್ಕಳು ಕೊರೊನಾಗೆ ಬಲಿಯಾದರು ಎಂದು ಹೇಳುತ್ತಾ ಹೆತ್ತವರು ಕಣ್ಣೀರು ಹಾಕಿದ್ದಾರೆ.

  • ಕಾರ್ ಖರೀದಿಸಲು ಕಂದಮ್ಮನನ್ನು ಮಾರಿದ ದಂಪತಿ

    ಕಾರ್ ಖರೀದಿಸಲು ಕಂದಮ್ಮನನ್ನು ಮಾರಿದ ದಂಪತಿ

    ಲಕ್ನೋ: ನವಜಾತ ಶಿಶುವನ್ನು ದಂಪತಿ ಉದ್ಯಮಿಗಳಿಗೆ 1.5 ಲಕ್ಷ ರೂಪಾಯಿಗೆ ಮಾರಿದ ಅಮಾನುಷ ಘಟನೆ ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ನಡೆದಿದೆ.

    ದಂಪತಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ತಮ್ಮ ಮಗುವನ್ನೇ ಮಾರಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಮಗುವಿನ ಅಜ್ಜ, ಅಜ್ಜಿಯಂದಿರು ಗುರುವಾರ ಪೊಲೀಸರನ್ನು ಸಂಪರ್ಕಿಸಿ ಪೋಷಕರ ವಿರುದ್ಧ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ತಿರ್ವಾ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ದಂಪತಿಗೆ ಮೂರು ತಿಂಗಳ ಹಿಂದೆ ಮಗು ಜನಿಸಿದ ಮಗುವಾಗಿದೆ. ಮಗಳು ಮತ್ತು ಅಳಿಯ ಮಗುವನ್ನು, ಗುರ್ಸಹೈಗಂಜ್ ಮೂಲದ ಉದ್ಯಮಿಯೊಬ್ಬರಿಗೆ 1.5 ಲಕ್ಷ ರೂ.ಗೆ ಮಾರಿದ್ದಾರೆ. ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳಲು ಈ ಕೆಲಸ ಮಾಡಿದ್ದಾರೆ ಮಗುವಿನ, ಅಜ್ಜ, ಅಜ್ಜಿ ಪೊಲೀಸರ ಬಳಿ ಆರೋಪಿಸಿದ್ದಾರೆ.

     

    ಮಗು ಉದ್ಯಮಿ ಬಳಿ ಇದೆ. ನಾವು ಶುಕ್ರವಾರ ಮಹಿಳೆ ಮತ್ತು ಅವಳ ಪತಿಯನ್ನು ವಿಚಾರಣೆಗಾಗಿ ಕರೆದಿದ್ದೇವೆ. ದಂಪತಿ ಇತ್ತೀಚೆಗೆ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ.

  • ಆಕ್ಸಿಜನ್ ರೀಫಿಲ್ಲಿಂಗ್ ಘಟಕದಲ್ಲಿ ಸ್ಫೋಟ- ಮೂವರು ಸಾವು, ಐವರಿಗೆ ಗಾಯ

    ಆಕ್ಸಿಜನ್ ರೀಫಿಲ್ಲಿಂಗ್ ಘಟಕದಲ್ಲಿ ಸ್ಫೋಟ- ಮೂವರು ಸಾವು, ಐವರಿಗೆ ಗಾಯ

    ಲಕ್ನೋ: ಆಕ್ಸಿಜನ್ ರೀಫಿಲ್ಲಿಂಗ್ ಘಟಕದಲ್ಲಿ ಉಂಟಾದ ಸ್ಫೋಟದಿಂದಾಗಿ ಮೂವರು ಕಾರ್ಮಿಕರು ಸಾವನ್ನಪ್ಪಿ, ಐವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ವರದಿಯಾಗಿದೆ.

    ಲಕ್ನೋದ ಚಿನ್ಹಾಟ್ ಎಂಬ ಪ್ರದೇಶದಲ್ಲಿ ಆಕ್ಸಿಜನ್ ರೀಫಿಲ್ಲಿಂಗ್ ಘಟಕವಿದ್ದು ಇಂದು ಸಂಜೆ ಹೊತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಸ್ಫೋಟ ಸಂಭವಿಸಿದೆ ಪರಿಣಾಮ ಮೂವರು ಸಾವನ್ನಪ್ಪಿದ್ದು, ಐವರಿಗೆ ಗಂಭೀರ ಗಾಯವಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

    ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಕಾರ್ಯಾಚರಣೆಯಲ್ಲಿ ತೊಡಗಿದೆ. ಗಾಯಾಳುಗಳನ್ನು ಈಗಾಗಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈಗಾಗಲೇ ಮರಣ ಹೊಂದಿದವರು ಮತ್ತು ಗಾಯಗೊಂಡವರು ಆಕ್ಸಿಜನ್ ಘಟಕದ ಕಾರ್ಮಿಕರಾಗಿದ್ದು, ಘಟನೆ ಕಾರಣ ಏನೆಂದು ಈಗಾಗಲೇ ತನಿಖೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಕಳೆದವಾರ ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಕ್ಸಿಜನ್ ರೀಫಿಲ್ಲಿಂಗ್ ಘಟಕದಲ್ಲಿ ಸಂಭವಿಸಿದ ಸ್ಪೋಟದಲ್ಲಿ ಒರ್ವ ಕಾರ್ಮಿಕ ಮೃತಪಟ್ಟು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದರು.

  • ವರನಿಗೆ 2ರ ಮಗ್ಗಿ ಬರದಿದ್ದಕ್ಕೆ ಮದುವೆ ಕ್ಯಾನ್ಸಲ್

    ವರನಿಗೆ 2ರ ಮಗ್ಗಿ ಬರದಿದ್ದಕ್ಕೆ ಮದುವೆ ಕ್ಯಾನ್ಸಲ್

    ಲಕ್ನೋ: ಮದುವೆ ಮನೆಯಲ್ಲಿ ವರದಕ್ಷಿಣೆ, ಊಟ ಸರಿ ಇಲ್ಲ ಹೀಗೆ ಹಲವು ಕಾರಣಗಳಿಗೆ ಕಿರಿಕ್ ಮಾಡಿಕೊಂಡು ಮದುವೆ ಮುರಿದು ಬೀಳುವುದನ್ನು ನೋಡಿದ್ದೇವೆ. ಆದರೆ ಉತ್ತರಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವರನಿಗೆ 2ರ ಮಗ್ಗಿ ಹೇಳಲು ಬಂದಿಲ್ಲ ಎಂದು ಮದುವೆ ರದ್ದಾಗಿದೆ.

    ವಧು ದಿಬ್ಬಣದೊಂದಿಗೆ ವಿವಾಹ ಮಂಟಪವನ್ನು ತಲುಪಿದ್ದಳು. ಆ ಸಂದರ್ಭದಲ್ಲೇ ವರನ ಶೈಕ್ಷಣಿಕೆ ಅರ್ಹತೆಗಳ ಬಗ್ಗೆ ಅನುಮಾನ ಹೊಂದಿದ್ದ ವಧು, ಹೂ ಮಾಲೆ ಹಾಕುವುದಕ್ಕೂ ಮೊದಲು 2ರ ಮಗ್ಗಿ ಹೇಳು ಎಂದಿದ್ದಾಳೆ. ಆದರೆ ವರನಿಗೆ ಮಗ್ಗಿ ಹೇಳಲು ಸಾಧ್ಯವಾಗಿಲ್ಲ. ಇದರಿಂದ ಸಿಟ್ಟು ಮಾಡಿಕೊಂಡ ವಧು ವಿವಾಹ ರದ್ದು ಮಾಡಿ ಹೊರಟು ಹೋಗಿದ್ದಾಳೆ. ವರ ಅವಿದ್ಯಾವಂತ ಎಂದು ಗೊತ್ತಾಗಿ ವಧುವಿನ ಕುಟುಂಬಸ್ಥರು ಕೂಡ ಶಾಕ್ ಆಗಿದ್ದಾರೆ.

    ಇದು ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಮದುಮಗ ಮಹೋಬಾ ಜಿಲ್ಲೆಯ ಧವಾರ್ ಗ್ರಾಮದವನಾಗಿದ್ದ. 2 ಕುಟುಂಬದ ಸದಸ್ಯರು ಮತ್ತು ಹಲವಾರು ಗ್ರಾಮಸ್ಥರು ಮದುವೆಗಾಗಿ ಸೇರಿದ್ದರು. ಇನ್ನೇನು ಮದುವೆ ನಡೆಯಬೇಕು ಎನ್ನುವಾಗ ವಧು ಮಂಟಪದಿಂದ ಹೊರನಡೆದಿದ್ದಾಳೆ. ಗಣಿತದ ಬೇಸಿಕ್ ಅಂಶಗಳನ್ನು ಕೂಡ ತಿಳಿದಿಲ್ಲದ ವ್ಯಕ್ತಿಯನ್ನು ನಾನು ಮದುವೆಯಾಗಲು ಸಾಧ್ಯವಿಲ್ಲ ಎಂದು ಆಕೆ ಹೇಳಿದ್ದಾಳೆ. ವಧುವನ್ನು ಮನವೊಲಿಸುವಲ್ಲಿ ಸ್ನೇಹಿತರು ಮತ್ತು ಸಂಬಂಧಿಕರು ವಿಫಲರಾಗಿದ್ದಾರೆ ಎಂದು ಪನ್ವಾರಿ ಸ್ಟೇಷನ್ ಹೌಸ್ ಆಫೀಸರ್ ವನೋದ್ ಕುಮಾರ್ ಹೇಳಿದ್ದಾರೆ.

    ವರನಿಗೆ ಓದು ಬರಹ ಬರುವುದಿಲ್ಲ ಎನ್ನುವ ವಿಷಯವನ್ನು ಕುಟುಂಬಸ್ಥರು ನಮ್ಮಿಂದ ಮುಚ್ಚಿಟ್ಟಿದ್ದರು ಎಂದು ವಧುವಿನ ಸೋದರಸಂಬಂಧಿ ಹೇಳಿದ್ದಾರೆ. ಗ್ರಾಮದ ಮುಖ್ಯಸ್ಥರು ಮಧ್ಯಪ್ರವೇಶಿಸಿ ಎರಡೂ ಕುಟುಂಬಗಳ ನಡುವೆ ರಾಜಿ ಮಾಡಿಸಿದ ಹಿನ್ನೆಲೆ ಪೊಲೀಸರು ಕೇಸ್ ದಾಖಲಿಸಿಲ್ಲ. ಎರಡೂ ಕಡೆಯವರು ಉಡುಗೊರೆ ಮತ್ತು ಆಭರಣಗಳನ್ನು ಪರಸ್ಪರ ವಾಪಸ್ ನೀಡುವಂತೆ ಒಪ್ಪಂದಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.

  • ಆಕ್ಸಿಜನ್ ಇಲ್ಲದೆ ಪ್ರಾಣ ಬಿಟ್ಟ ನವಜಾತ ಶಿಶುಗಳು

    ಆಕ್ಸಿಜನ್ ಇಲ್ಲದೆ ಪ್ರಾಣ ಬಿಟ್ಟ ನವಜಾತ ಶಿಶುಗಳು

    ಲಕ್ನೋ: ಆಮ್ಲಜನಕದ ಕೊರತೆಯಿಂದಾಗಿ ನವಜಾತ ಶಿಶುಗಳು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಬಾರ್ಬಂಕಿಯಲ್ಲಿನ ಆಸ್ಪತ್ರೆಯೊಂದರಲ್ಲಿ ನಡೆದಿದೆ.

    ಆಸ್ಪತ್ರೆಗಳಲ್ಲಿ ಆಮ್ಲಜನಕ ಖಾಲಿಯಾಗಿರವ ಬಗ್ಗೆ ಆಸ್ಪತ್ರೆ ಮೊದಲೆ ತಿಳಿಸಿತ್ತು. ಆದರೆ ಸರ್ಕಾರ ಮಾತ್ರ ಆಕ್ಸಿಜನ್ ಪೂರೈಕೆ ಮಾಡಿರಲಿಲ್ಲ. ಅವಳಿ ಮಕ್ಕಳು ನಿನ್ನೆ ರಾತ್ರಿ ಜನಿಸಿದ್ದವು. ಶಿಶುಗಳಿಗೆ ಆಮ್ಲಜನಕದ ಅವಶ್ಯಕತೆ ಇತ್ತು. ಆದರೆ ಆಮ್ಲಜನಕವನ್ನು ಪೂರೈಕೆ ಮಾಡಲು ಆಗದೆ ಇರುವ ಕಾರಣ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

    ಆಮ್ಲಜನಕ ಪೂರೈಕೆ ವಿಚಾರದಲ್ಲಿ ಸರ್ಕಾರ ಒತ್ತಡದಲ್ಲಿದೆ. ನಮ್ಮ ಕೈಲಾದಷ್ಟು ಮಟ್ಟಿಗೆ ಆಕ್ಸಿಜನ್ ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಉತ್ತರಪ್ರದೇಶ ಆರೋಗ್ಯ ಇಲಾಖೆ ತಿಳಿಸಿದೆ. ನಮ್ಮಲ್ಲಿ ಆಮ್ಲಜನಕದ ಕೊರತೆಯಿಲ್ಲ. ಆದರತೆ ಆಕ್ಸಿಜನ್‍ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧವಾಗಿ ಕಠಿಣ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು.

  • ದುರ್ಗೆಗೆ ಮಾಸ್ಕ್ ತೊಡಿಸಿದ ಅರ್ಚಕ – ಪ್ರಸಾದವಾಗಿ ಮಾಸ್ಕ್ ವಿತರಣೆ

    ದುರ್ಗೆಗೆ ಮಾಸ್ಕ್ ತೊಡಿಸಿದ ಅರ್ಚಕ – ಪ್ರಸಾದವಾಗಿ ಮಾಸ್ಕ್ ವಿತರಣೆ

    ಲಕ್ನೋ: ಭಾರತಾದ್ಯಂತ ಕೊರೊನಾ ಎರಡನೇ ಅಲೆ ಅಪ್ಪಳಿಸಿದೆ. ವೈರಸ್‍ನನ್ನು ತಡೆಗಟ್ಟಲು ಜನರಿಗೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಹಲವಾರು ಸಲಹೆಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಈ ಮಧ್ಯೆ ಕೊರೊನಾ ಸಮಯದಲ್ಲಿ ಮಾಸ್ಕ್ ಧರಿಸುವುದು ಎಷ್ಟು ಮುಖ್ಯ ಎಂಬುವುದರ ಬಗ್ಗೆ ಜನರಿಗೆ ತಿಳಿ ಹೇಳಲು ಉತ್ತರ ಪ್ರದೇಶದ ಅರ್ಚಕರೊಬ್ಬರು ದೇವಾಲಯದಲ್ಲಿರುವ ದುರ್ಗ ದೇವಿ ದೇವರ ವಿಗ್ರಹಕ್ಕೆ ಮಾಸ್ಕ್ ಹಾಕಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಹೌದು, ಚೈತ್ರ ನವರಾತ್ರಿಯ ಎರಡನೇ ದಿನವಾದ ಬುಧವಾರದಂದು, ಭಕ್ತಾದಿಗಳು ದೇವಾಲಯಕ್ಕೆ ಬಂದಾಗ ದುರ್ಗ ದೇವಿ ಮಾಸ್ಕ್ ಧರಿಸಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಅಷ್ಟೇ ಅಲ್ಲದೇ ಅರ್ಚಕರು ಭಕ್ತರಿಗೆ ಪ್ರಸಾದವಾಗಿ ಮಾಸ್ಕ್‌ನನ್ನು ವಿತರಿಸಿದ್ದು ವಿಶೇಷವಾಗಿತ್ತು.

    ಈ ಕುರಿತಂತೆ ಪ್ರತಿಕ್ರಿಯಿಸಿದ ದೇವಾಲಯದ ಅರ್ಚಕ ಮನೋಜ್ ಶರ್ಮ, ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ, ಅವರಿಗೆ ಒಂದು ಬಲವಾದ ಸಂದೇಶವನ್ನು ಸಾರುವ ಸಲುವಾಗಿ ದೇವಿಯ ವಿಗ್ರಹಕ್ಕೆ ಮಾಸ್ಕ್ ತೊಡಿಸಬೇಕೆಂದು ನಿರ್ಧರಿಸಿದೆ. ಭಕ್ತರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ನಾವು ಮಾಸ್ಕ್‌ಗಳನ್ನು ಪ್ರಸಾದಂತೆ ವಿತರಿಸುತ್ತಿದ್ದೇವೆ ಎಂದರು.

    ದೇವಾಲಯಕ್ಕೆ ಬರುವ ಭಕ್ತರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಿದ್ದೇವೆ. ದೇವಾಲಯದ ಆವರಣದಲ್ಲಿ ಕೋವಿಡ್ ಕುರಿತಂತೆ ಹಲವರು ಸಲಹಾ ಪಟ್ಟಿಯನ್ನು ಅಳವಡಿಸಿದ್ದೇವೆ. ಬೆಳಗ್ಗೆ ಹಾಗೂ ಸಂಜೆ ಮಾತ್ರ ದೇವಿಗೆ ಆರತಿ ಮಾಡಲಾಗುತ್ತದೆ. ಒಂದು ಬಾರಿಗೆ ದೇವಾಲಯದ ಒಳಗೆ 5 ಮಂದಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

  • ಬಿಜೆಪಿ ಲಸಿಕೆ ತೆಗೆದುಕೊಳ್ಳಲ್ಲ ಅಂದಿದ್ದ ಅಖಿಲೇಶ್ ಯಾದವ್‍ಗೆ ಕೊರೊನಾ ಪಾಸಿಟಿವ್

    ಬಿಜೆಪಿ ಲಸಿಕೆ ತೆಗೆದುಕೊಳ್ಳಲ್ಲ ಅಂದಿದ್ದ ಅಖಿಲೇಶ್ ಯಾದವ್‍ಗೆ ಕೊರೊನಾ ಪಾಸಿಟಿವ್

    ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವ ವಿಚಾರವನ್ನು ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.

    ನನಗೆ ಕೊರೊನಾ ಟೆಸ್ಟ್‍ನಲ್ಲಿ ಪಾಸಿಟಿವ್ ಬಂದಿದೆ. ನಾನು ಐಸೋಲೇಷನ್‍ಗೆ ಒಳಗಾಗಿದ್ದೇನೆ. ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿದ್ದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತೇನೆ. ಕೆಲವು ದಿನಗಳಕಾಲ ಐಸೋಲೇಷನ್‍ಗೆ ಒಳಗಾಗಿ ಎಂದು ಹೇಳಿ ಟ್ವೀಟ್ ಮಾಡಿದ್ದಾರೆ.

    ನಾನು ಸದ್ಯಕ್ಕೆ ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳುವುದಿಲ್ಲ. ಬಿಜೆಪಿ ಲಸಿಕೆಯನ್ನು ನಾನು ನಂಬೋದಾದ್ರೂ ಹೇಗೆ? ನಾನು ಬಿಜೆಪಿ ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ವ್ಯಾಕ್ಸಿನ್ ಡ್ರೈರನ್ ನಡೆಯುವ ಸಂದರ್ಭದಲ್ಲಿ ಅಖಿಲೇಷ್ ಯಾದವ್ ಹೇಳಿದ್ದರು.

    ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೆಲವರು ನನ್ನೊಂದಿಗೆ ಸಂಪರ್ಕದಲ್ಲಿದ್ದರು. ಆದ್ದರಿಂದ, ಮುನ್ನೆಚ್ಚರಿಕೆಯಾಗಿ, ನಾನು ಮೊದಲೇ ಪ್ರತ್ಯೇಕವಾಗಿದ್ದು, ನನ್ನ ಕೆಲಸವನ್ನು ವಾಸ್ತವಿಕವಾಗಿ ಪ್ರಾರಂಭಿಸಿದೆ. ನನಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

  • ಸಮಾಜವಾದಿ ಪಕ್ಷದ ಸಂಸ್ಥಾಪಕ, ಮಾಜಿ ಸಚಿವ ಭಗವತಿ ಸಿಂಗ್ ಇನ್ನಿಲ್ಲ

    ಸಮಾಜವಾದಿ ಪಕ್ಷದ ಸಂಸ್ಥಾಪಕ, ಮಾಜಿ ಸಚಿವ ಭಗವತಿ ಸಿಂಗ್ ಇನ್ನಿಲ್ಲ

    ಲಕ್ನೋ: ಸಮಾಜವಾದಿ ಪಕ್ಷದ ಸಂಸ್ಥಾಪಕ ಹಾಗೂ ಉತ್ತರ ಪ್ರದೇಶದ ಮಾಜಿ ಸಚಿವ ಭಗವತಿ ಸಿಂಗ್ ಭಾನುವಾರ ನಿಧನರಾಗಿದ್ದಾರೆ.

    ಭಗವತಿ ಸಿಂಗ್(83) ಲಕ್ನೋದ ಬಕ್ಷಿಕಾ ತಲಾಭ್ ಪ್ರದೇಶದ ಪದವಿ ಕಾಲೇಜಿನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಸಾಯುವುದಕ್ಕೂ ಮುನ್ನ ಭಗವತಿ ಸಿಂಗ್ ತಮ್ಮ ಶರೀರವನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ದಾನ ಮಾಡುವುದಾಗಿ ಮಾತು ನೀಡಿದ್ದರು. ಹೀಗಾಗಿ ಅವರ ಅಂತಿಮ ವಿಧಿ ವಿಧಾನವನ್ನು ಮಾಡುತ್ತಿಲ್ಲ ಎಂದು ವರದಿಯಾಗಿದೆ.

    ಭಗವತಿ ಸಿಂಗ್ ಸಾವಿಗೆ ಮಾಜಿ ಸಿಎಂ ಅಖಿಲೇಶ್ ಯಾದವ್, ‘ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ, ನಿಮ್ಮ ಕುಟುಂಬಕ್ಕೆ ನಷ್ಟವನ್ನು ಭರಿಸುವ ಶಕ್ತಿ ನೀಡಲಿ’ ಎಂದು ಸಂತಾಪ ಸೂಚಿಸಿದ್ದಾರೆ.

    ಸಮಾಜವಾದಿ ಪಕ್ಷದ ಸಂಸ್ಥಾಪಕರಾಗಿದ್ದ ಭಗವತಿ ಸಿಂಗ್, ಮುಲಾಯಂ ಸಿಂಗ್ ಯಾದವ್ ಅವರ ಆಪ್ತರಾಗಿದ್ದರು.

  • ಚುನಾವಣಾ ಮೀಸಲಾತಿಗೆ 45ನೇ ವರ್ಷಕ್ಕೆ ಮದುವೆಯಾದ

    ಚುನಾವಣಾ ಮೀಸಲಾತಿಗೆ 45ನೇ ವರ್ಷಕ್ಕೆ ಮದುವೆಯಾದ

    ಲಕ್ನೋ: ಚುನಾವಣೆಗೆ ಮಹಿಳಾ ಮೀಸಲಾತಿ ಸಿಗುತ್ತದೆ ಎಂದು ವ್ಯಕ್ತಿಯೊಬ್ಬ 45ನೇ ವಯಸ್ಸಿನಲ್ಲಿ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಕರಣ್ ಚಾಪ್ರಾ ಗ್ರಾಮದ ಹಾಥಿ ಸಿಂಗ್(45) ಮದುವೆಯಾದ ವ್ಯಕ್ತಿಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಗ್ರಾಮಪಂಚಾಯತ್ ಚುನಾವಣೆ ನಡೆಯುತ್ತಿದೆ. ಚುನವಣೆಯಲ್ಲಿ ಮಹಿಳಾ ಅಭ್ಯರ್ಥಿಗೆ ಮೀಸಲಾತಿ ನೀಡಲಾಗಿದೆ. ಹೇಗಾದರೂ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದಾಗಿ ಮದುವೆಯಾಗಿದ್ದಾರೆ.
    ಹಾಥ್ ಸಿಂಗ್ ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜಕೀಯ ಪ್ರವೇಶ ಮಾಡಿದರೆ ಇನ್ನಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳ ಬಹುದು ಎಂಬ ಉದ್ದೇಶದಿಂದಾಗಿ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಯತ್ನ ಮಾಡುತ್ತಿದ್ದಾರೆ.

    ಈ ಹಿಂದೆ 2015ರಲ್ಲಿ ಹಾಥ್ ಸಿಂಗ್ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಆದರೆ ಈ ಬಾರಿ ಮತ್ತೆ ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ಚುನಾವಣಾ ಆಯೋಗ ನೀಡಿದ ಮೀಸಲಾತಿ ಪಟ್ಟಿಯ ಅನ್ವಯ ಹಾಥ್ ಸಿಂಗ್ ಸ್ಪರ್ಧೆ ಮಾಡಬೇಕಿದ್ದ ವಾರ್ಡ್‍ನಲ್ಲಿ ಮಹಿಳೆಗೆ ಮೀಸಲಾತಿ ನೀಡಲಾಗಿತ್ತು. ಹೀಗಾಗಿ ತನಗೆ ಚುನಾವಣೆಗೆ ನಿಲ್ಲಲು ಅವಕಾಶವಿಲ್ಲ ಎಂದು ಅದೇ ಗ್ರಾಮದ ಯುವತಿಯನ್ನು ಮದುವೆಯಾಗಿದ್ದಾರೆ. ಈ ಮೂಲಕವಾಗಿ ತನ್ನ ಪತ್ನಿಯನ್ನು ಚುನಾವಣಾ ಕಣಕ್ಕೆ ಇಳಿಸಿದ್ದಾರೆ.

     ಎಪ್ರಿಲ್ 26 ರಂದು ಚುನಾವಣೆ ನಡೆಯುತ್ತದೆ. 13ಕ್ಕೆ ನಾಮಪತ್ರಿಕೆ ಸಲ್ಲಿಕೆಗೆ ಕೊನೆ ದಿನವಾಗಿದೆ. ನನಗೆ ಮದುವೆಯಾಗುವ ಆಸೆ ಇರಲಿಲ್ಲ. ಆದರೆ ಚುನಾವಣೆ ಮೀಸಲಾತಿಗಾಗಿ ಮದುವೆಯಾಗಿದ್ದೇನೆ. ನಮ್ಮ ಹಳ್ಳಿಯ ಅಭಿವೃದ್ಧಿಕಾರ್ಯಕ್ಕಾಗಿ ನಾನು ಒಳ್ಳೆಯ ಮುಹೂರ್ತವಿಲ್ಲದಿದ್ದರು ಮದುವೆಯಾಗಿದ್ದೇನೆ ಎಂದು ಹಾಥ್ ಸಿಂಗ್ ಹೇಳಿದ್ದಾರೆ.