Tag: lucknow

  • ಸ್ವಾತಂತ್ರ್ಯೋತ್ಸವಕ್ಕೆ ನಾಟಕ ಅಭ್ಯಾಸ ಮಾಡುತ್ತಾ ಪ್ರಾಣ ಕಳೆದುಕೊಂಡ ಬಾಲಕ

    ಸ್ವಾತಂತ್ರ್ಯೋತ್ಸವಕ್ಕೆ ನಾಟಕ ಅಭ್ಯಾಸ ಮಾಡುತ್ತಾ ಪ್ರಾಣ ಕಳೆದುಕೊಂಡ ಬಾಲಕ

    ಲಕ್ನೋ: ಸ್ವಾತಂತ್ರ್ಯೋತ್ಸವಕ್ಕೆ ಭಗತ್ ಸಿಂಗ್ ಪಾತ್ರದ ಅಭ್ಯಾಸದ ವೇಳೆ ಆಕಸ್ಮಕವಾಗಿ ಬಾಲಕ ನೇಣಿಗೆ ಬಲಿಯಾದ ಘಟನೆ ಉತ್ತರಪ್ರದೇಶದ ಬಡೌನ್ ಹಳ್ಳಿಯಲ್ಲಿ ನಡೆದಿದೆ.

    ಶಿವಂ(10) ಮೃತ ಬಾಲಕನಾಗಿದ್ದಾನೆ. ಬಾಲಕ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಾತ್ರ ಮಾಡುವಾಗ ನೇಣಿಗೆ ಹಾಕುವ ದೃಶ್ಯವನ್ನು ಅಭ್ಯಾಸ ಮಾಡುವಾಗ ಆಕಸ್ಮಿಕವಾಗಿ ಸಾವಿಗೀಡಾಗಿದ್ದಾನೆ.

    ಈಗಾಗಲೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ದೇಶಾದ್ಯಂತ ಭಾರೀ ಸಿದ್ಧತೆಗಳು ನಡೆಯುತ್ತಿವೆ. ಇದೇ ವೇಳೆ ಅದೆಷ್ಟೋ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್‍ರ ಪಾತ್ರ ಮಾಡೋದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಉತ್ತರಪ್ರದೇಶದ ಬಾಲಕ ನಾಟಕ ಅಭ್ಯಾಸ ಮಾಡುತ್ತಿದ್ದ. ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸವ ದೃಶ್ಯವನ್ನು ಅಭ್ಯಾಸ ಮಾಡುತ್ತಿದ್ದಾಗ, ಕುತ್ತಿಗೆಗೆ ಕುಣಿಕೆಯನ್ನು ಕಟ್ಟಿಕೊಂಡು ಸ್ಟೂಲ್ ಮೇಲೆ ನಿಂತಿದ್ದನು. ಈ ವೇಳೆ ಕಾಲು ಜಾರಿ ಪ್ರಾಣ ಕಳೆದುಕೊಂಡಿದ್ದಾನೆ. ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದೆ ಬಾಲಕನ ಅಂತ್ಯಸಂಸ್ಕಾರ ಮಾಡಿದ್ದಾರೆ ಎನ್ನಲಾಗಿದೆ.

  • ಪ್ರೀತಿಗೆ ಬಲಿಯಾದ ಹುಡುಗ- ಹುಡುಗಿ ಮನೆ ಮುಂದೆಯೇ ಅಂತ್ಯಕ್ರಿಯೆ..!

    ಪ್ರೀತಿಗೆ ಬಲಿಯಾದ ಹುಡುಗ- ಹುಡುಗಿ ಮನೆ ಮುಂದೆಯೇ ಅಂತ್ಯಕ್ರಿಯೆ..!

    ಲಕ್ನೋ: ಪ್ರೀತಿ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಹುಡುಗಿ ಮನೆಯವರು ಹುಡುಗನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಿಹಾರದ ಮುಜಾಫರ್‍ನಲ್ಲಿ ನಡೆದಿದೆ.

    ಸೌರಭ್ ಕುಮಾರ್(17) ಮೃತ ಹುಡುಗನಾಗಿದ್ದಾನೆ. ಈತ ಗ್ರಾಮದ ಪಕ್ಕದಲ್ಲೇ ಇರುವ ಸೊರ್ಬಾರಾ ಹಳ್ಳಿಯ ಹುಡುಗಿಯನ್ನು ಪ್ರೀತಿಸುತ್ತಿದ್ದ. ಶುಕ್ರವಾರ ರಾತ್ರಿ ಸೌರಭ್ ತನ್ನ ಗರ್ಲ್‍ಫ್ರೆಂಡ್ ಮನೆಗೆ ಹೋಗಿದ್ದಾಗ ಇಬ್ಬರೂ ಒಟ್ಟಿಗೇ ಸಿಕ್ಕಿಬಿದ್ದು, ಪ್ರಾಣ ಬಿಟ್ಟ ದುರ್ಘಟನೆ ರೇಪುರಾ ರಾಮಪುರಶಾಹ್ ಹಳ್ಳಿಯಲ್ಲಿ ನಡೆದಿದೆ. ಇದನ್ನೂ ಓದಿ:  ವಿಶ್ವ ಚಾಂಪಿಯನ್‍ಶಿಪ್ – ಕುಸ್ತಿಯಲ್ಲಿ ಸ್ವರ್ಣ ಗೆದ್ದ ಪ್ರಿಯಾ ಮಲಿಕ್

    ಹುಡುಗ, ಹುಡುಗಿಯನ್ನು ಒಟ್ಟಿಗೆ ನೋಡಿ ಕೋಪಗೊಂಡ ಹುಡುಗಿಯ ಕುಟುಂಬದವರು, ಸಂಬಂಧಿಕರು ಆತನಿಗೆ ಮನಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲ, ಮರ್ಮಾಂಗವನ್ನೂ ಕತ್ತರಿಸಿದ್ದಾರೆ. ಅಷ್ಟರಲ್ಲಿ ಹುಡುಗನ ಕುಟುಂಬದವರಿಗೆ ವಿಷಯ ಗೊತ್ತಾಗಿ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗೆ ಹುಡುಗನನ್ನು ದಾಖಲು ಮಾಡಿದರೂ ಸಹ ಯಾವುದೇ ಪ್ರಯೋಜನ ಆಗಲಿಲ್ಲ. ಅಂದೇ ರಾತ್ರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಸೌರಭ್ ಕುಮಾರ್ ಕುಟುಂಬದವರು ಇದರಿಂದ ತೀವ್ರವಾಗಿ ಕೋಪಗೊಂಡಿದ್ದಲ್ಲದೆ, ಹುಡುಗಿಯ ಮನೆಯ ಎದುರೇ ಸೌರಭ್ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಪ್ರೀತಿ ವಿಚಾರಕ್ಕೇ ಬಾಲಕನನ್ನು ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದರೂ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

  • ಲಕ್ನೋ, ಕೋಲ್ಕತಾದಲ್ಲಿ ಐವರು ಉಗ್ರರ ಅರೆಸ್ಟ್

    ಲಕ್ನೋ, ಕೋಲ್ಕತಾದಲ್ಲಿ ಐವರು ಉಗ್ರರ ಅರೆಸ್ಟ್

    ಲಕ್ನೋ: ದೇಶದಲ್ಲಿ ಆತ್ಮಾಹುತಿ ದಾಳಿ ಮೂಲಕ ವಿಧ್ವಂಸಕ ಕೃತ್ಯ ಎಸಗಲು ಹೂಡಿದ್ದ ಉಗ್ರರನ್ನ ಸಂಚನ್ನ ಎಟಿಎಸ್ ಭೇದಿಸಿದೆ. ಉತ್ತರ ಪ್ರದೇಶದ ಲಖನೌದಲ್ಲಿ ಇಬ್ಬರು, ಕೋಲ್ಕತಾದಲ್ಲಿ ಶಂಕಿತ ಮೂವರನ್ನು ಎಸ್‍ಟಿಎಫ್ ಬಂಧಿಸಿದೆ.

    ಅಲ್‍ಖೈದಾ ಉಗ್ರರ ಜೊತೆಗಿನ ನಂಟಿನ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ 11 ಸರ್ಕಾರಿ ಅಧಿಕಾರಿಗಳನ್ನು ಜಮ್ಮು ಕಾಶ್ಮೀರ ಸರ್ಕಾರ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಮತ್ತಷ್ಟು ರೇಡ್ ಮಾಡಿರುವ ಎಟಿಎಸ್ ಅಲ್‍ಖೈದಾ ಸಂಪರ್ಕ ಹೊಂದಿದ್ದ ಇಬ್ಬರನ್ನು ಬೇಟೆಯಾಡಿದೆ. ಇಬ್ಬರಿಗೆ ಪಾಕಿಸ್ತಾನ, ಅಫ್ಘಾನಿಸ್ತಾನದ ಉಗ್ರರ ನಂಟಿರುವ ಸಾಧ್ಯತೆ ಇದೆ. ಕೋಲ್ಕತಾದಲ್ಲಿ ಬಾಂಗ್ಲಾದೇಶದ ಉಗ್ರ ಸಂಘಟನೆ ಜೆಎಂಬಿ ಜೊತೆ ನಂಟಿರುವ ಶಂಕೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ನಭೋ ಮಂಡಲಕ್ಕೆ ವರ್ಜಿನ್ ರಾಕೆಟ್ ಟೆಕಾಫ್ – ಗಗನಕ್ಕೆ ಹಾರಿದ ರಿಚರ್ಡ್ ಬ್ರಾನ್ಸನ್, ಶಿರಿಷಾ ಸಹಿತ 6 ತಜ್ಞರು

    ಕಾಶ್ಮೀರದಲ್ಲಿ ನಿಷೇಧಿತ ಐಎಸ್‍ಐಎಸ್ ಉಗ್ರ ಸಂಘಟನೆಯ ಸಿದ್ಧಾಂತದ ಪ್ರಚಾರದ ಸಂಬಂಧ ಎನ್‍ಐಎ, ಶ್ರೀನಗರ, ಅನಂತ್ ನಾಗ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಮತ್ತೊಂದೆಡೆ, ಅಫ್ಗಾನಿಸ್ತಾನದ ಪಶ್ಚಿಮ ಭಾಗದ ಬಹುತೇಕ ಭಾಗಗಳನ್ನು ತಾಲಿಬಾನ್ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು, ದಕ್ಷಿಣ ಭಾಗದ ಪ್ರದೇಶದತ್ತ ಮುನ್ನುಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂದಹಾರ್ ಜಿಲ್ಲೆಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಸುಮಾರು 50 ರಾಜತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಯನ್ನು ಭಾರತ ಮರಳಿ ಸ್ವದೇಶಕ್ಕೆ ಕರೆಸಿಕೊಂಡಿದೆ. ಇದನ್ನೂ ಓದಿ: ಪುದುಚೇರಿ ಸಿಎಂ ಸಂಪುಟ ರಚನೆ- 13 ಖಾತೆಗಳನ್ನು ಇಟ್ಟುಕೊಂಡ ಎನ್.ರಂಗಸ್ವಾಮಿ

  • ಹೆಂಡತಿಯಾಗಿದ್ದವಳು ಮಲತಾಯಿಯಾಗಿ ಬಂದಳು..!

    ಹೆಂಡತಿಯಾಗಿದ್ದವಳು ಮಲತಾಯಿಯಾಗಿ ಬಂದಳು..!

    ಲಕ್ನೋ: ಸೊಸೆಯಾಗಿದ್ದವಳೇ ತಂದೆಯ ಎರಡನೇ ಪತ್ನಿಯಾಗಿ, ಮಲತಾಯಿಯಾಗಿ ಬಂದು ಪುತ್ರನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಕೊಂಡಿರುವ ಒಂದು ಪ್ರಕರಣ ಉತ್ತರ ಪ್ರದೇಶದ ಬದೌನ್‍ನಿಂದ ವರದಿಯಾಗಿದೆ.

    ಯುವಕನಿಗೆ 2016ರಲ್ಲಿ ಮದುವೆಯಾಗಿತ್ತು. ಆತ ಮದ್ಯಪಾನ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಕೆ, ಆತನನ್ನು ಬಿಟ್ಟುಹೋಗಿದ್ದಳು. ಆರು ತಿಂಗಳಿಂದ ತಂದೆಯವರು ಖರ್ಚಿಗೆ ಹಣ ನೀಡುವುದನ್ನು ನಿಲ್ಲಿಸಿದ್ದು ಹಾಗೂ ಸಂಭಾಲ್‍ನಲ್ಲಿ ಪ್ರತ್ಯೇಕವಾಗಿ ವಾಸವಾಗಿ ಇರುತ್ತಿದ್ದದ್ದು ಪುತ್ರನ ಗಮನಕ್ಕೆ ಬಂದಿತ್ತು. ಹೀಗಾಗಿ ತಂದೆಯವರ ಜೀವನ ವಿಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿ ಕೊಡುವಂತೆ ಜಿಲ್ಲಾ ಪಂಚಾಯತ್ ಗೆ ಆರ್‍ಟಿಐ ಮೂಲಕ ಅರ್ಜಿ ಸಲ್ಲಿಸಿದ್ದನು. ಇದನ್ನೂ ಓದಿ: ಸೋಮವಾರಕ್ಕೆ ಮಾಡಿ ಸಿಹಿಯಾದ ಪನ್ನೀರ್ ಪಾಯಸ

    ಮಗನಿಗೆ ಆಘಾತವಾಗುವಂತಹ ವಿಚಾರ ಗೊತ್ತಾಗಿದೆ. 2016ರಲ್ಲಿ ತಾನು ಮದುವೆಯಾಗಿದ್ದ ಯುವತಿಯನ್ನೇ ತಂದೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದ ಅಂಶ ಬಹಿರಂಗವಾಯಿತು. ಇದರಿಂದ ಕೋಪಗೊಂಡ ಯುವಕ ತಂದೆ ವಿರುದ್ಧ ಬಿಸೌಲಿ ಠಾಣೆಯಲ್ಲಿ ದೂರು ನೀಡಿದ್ದಾನೆ. ಗುಟ್ಟು ಗೊತ್ತಾದ ಬಳಿಕ ಯುವತಿ ಕೂಡ ತಂದೆಯ ಜೊತೆಗೆ ಬರುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಪೊಲೀಸರೂ ಕೂಡ ವಿವಾದವನ್ನು ರಾಜಿ ಮೂಲಕ ಇತ್ಯರ್ಥಕ್ಕೆ ಮುಂದಾಗಿದ್ದಾರೆ.

  • 5 ಲಕ್ಷ ಬೆಲೆಬಾಳುವ ಚಿನ್ನದ ಮಾಸ್ಕ್ ತೊಟ್ಟ ಬಾಬಾ

    5 ಲಕ್ಷ ಬೆಲೆಬಾಳುವ ಚಿನ್ನದ ಮಾಸ್ಕ್ ತೊಟ್ಟ ಬಾಬಾ

    – ರಕ್ಷಣೆಗೆ ಇಬ್ಬರು ಅಂಗರಕ್ಷಕರ ನೇಮಕ

    ಲಕ್ನೋ: ದುಬಾರಿ ಬೆಲೆಯ ಚಿನ್ನದ ಮಾಸ್ಕ್ ಹಾಕಿಕೊಂಡ ಕಾನ್ಪುರದ ಬಾಬಾ ಸಖತ್ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:  3.5 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ಧರಿಸಿ ಗಮನಸೆಳೆದ ಉದ್ಯಮಿ!

    ಗೋಲ್ಡನ್ ಬಾಬಾ ಎಂದೇ ಹೆಸರು ವಾಸಿಯಾಗಿರುವ ಮನೋಜ್ ಸೆಂಗರ್ ಚಿನ್ನದ ಮಾಸ್ಕ್ ಹಾಕಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೊರೊನಾ ಸೋಂಕಿನಿಂದ ರಕ್ಷಣೆಯನ್ನು ಪಡೆಯಲು ಎನ್ 95, ಕ್ಲಾಥ್ ಮಾಸ್ಕ್, ಸರ್ಜಿಕಲ್ ಮಾಸ್ಕ್ ಹೀಗೆ ಹಲವು ರೀತಿಯ ಮಸ್ಕ್‍ಗಳನ್ನು ಹಾಕಿಕೊಳ್ಳುತ್ತಿರುವವರಲ್ಲಿ ಈ ಬಾಬಾ ಕೊಂಚ ವಿಭಿನ್ನವಾಗಿ ಚಿನ್ನದ ಮಾಸ್ಕ್ ಮಾಡಿಕೊಂಡಿದ್ದಾರೆ. ಬರೋಬ್ಬರಿ 5 ಲಕ್ಷ ಬೆಲೆ ಬಾಳುವ ಈ ಮಾಸ್ಕ್ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಇದನ್ನೂ ಓದಿ:  2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿ ಧರಿಸಿದ ವ್ಯಕ್ತಿ!

    ಈ ಗೋಲ್ಡನ್ ಮಾಸ್ಕ್ ಅನ್ನು ಸ್ಯಾನಿಟೈಸ್ ಮಾಡಿ 3 ವರ್ಷಗಳ ಕಾಲ ಬಳಸಬಹುದಾಗಿದೆ. ಶಿವ ಶರಣ್ ಮುಖವಾಡ ಎಂದು ಹೆಸರಿಲಾಗಿದೆ. ಮನೋಜ್ ಚಿನ್ನದ ಬಗ್ಗೆ ಒಲವು ಹೊಂದಿದ್ದಾರೆ. ಶಂಖ ಚಿಪ್ಪು, ಮೀನು ಮತ್ತು ಭಗವಾನ್ ಹನುಮನ ಲಾಕೆಟ್ ಹೀಗೆ ಹಲವು ಆಭರಣಗಳನ್ನು ಬಾಬಾ ಧರಿಸುತ್ತಾರೆ. ಸುಮಾರು ಎರಡು ಕಿಲೋಗ್ರಾಂ ತೂಕದ ಚಿನ್ನಾಭರಣಗಳನ್ನು ಬಾಬಾ ಧರಿಸುತ್ತಾರೆ. ಇದನ್ನೂ ಓದಿ: ಬೆಳ್ಳಿ, ಚಿನ್ನ ಆಯ್ತು- ಈಗ ಡೈಮಂಡ್ ಮಾಸ್ಕ್ ಮಾರಾಟ

    ಎಲ್ಲರೂ ಮಾಸ್ಕ್ ಧರಿಸಿ ಕೊರೊನಾ ನಿಯಮವನ್ನು ಪಾಲಿಸಿ. ಚಿನ್ನದ ಮೇಲಿನ ಪ್ರೀತಿ ತನಗೆ ಸಮಾಜ ವಿರೋಧಿ ಅಂಶಗಳಿಂದ ಬೆದರಿಕೆಗಳನ್ನು ತಂದುಕೊಟ್ಟಿದೆ. ನಾನು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನನ್ನನ್ನು ಸಾರ್ವಕಾಲಿಕವಾಗಿ ರಕ್ಷಿಸಲು ಇಬ್ಬರು ಸಶಸ್ತ್ರ ಅಂಗರಕ್ಷಕರನ್ನು ಹೊಂದಿದ್ದೇನೆ ಎಂದು ಮನೋಜ್ ಸೆಂಗರ್ ಹೇಳಿದ್ದಾರೆ.  

  • ರಾತ್ರೋರಾತ್ರಿ ಕೊರೊನಾ ದೇವಿ ದೇವಸ್ಥಾನ ನಿರ್ಮಾಣ, ಬೆಳಗ್ಗೆ ನೆಲಸಮ

    ರಾತ್ರೋರಾತ್ರಿ ಕೊರೊನಾ ದೇವಿ ದೇವಸ್ಥಾನ ನಿರ್ಮಾಣ, ಬೆಳಗ್ಗೆ ನೆಲಸಮ

    ಲಕ್ನೋ: ವೈರಸ್ ಹರಡದಂತೆ ಜನರ ರಕ್ಷಣೆಗೆ ಸರ್ಕಾರ ಲಾಕ್‍ಡೌನ್ ನಂತಹ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.  ಈ ಸೋಂಕಿನಿಂದ ಕಾಪಾಡುವಂತೆ ಜನರು ದೇವರ ಮೊರೆ ಹೋಗುತ್ತಿರುವವರ ನಡುವೆಯೇ ಉತ್ತರ ಪ್ರದೇಶದ ಜನರು ಸೋಂಕಿಗೆ ದೇವರ ಸ್ಥಾನ ನೀಡಿ ದೇವಸ್ಥಾನ ನಿರ್ಮಾಣ ಮಾಡಿರುವ ಅಪರೂಪದ ಘಟನೆ ನಡೆದಿದೆ. ಇದನ್ನೂ ಓದಿ: ಕುದುರೆ ಜೊತೆ ಧೋನಿ ರೇಸ್

    ಪ್ರಯಾಗ್ ರಾಜ್‍ನ ಶುಕ್ಲುಪುರ್ ಗ್ರಾಮದಲ್ಲಿ ಕೊರೊನಾ ದೇವಿಯ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಕೊರೊನಾಗೆ ದೇವರ ಸ್ವರೂಪ ನೀಡಿದ ಇಲ್ಲಿನ ಜನರು ಕೊರೊನಾ ಮಾತೆಯನ್ನು ಪ್ರತಿಷ್ಟಾಪಿಸಿ, ಗ್ರಾಮಸ್ಥರು ಪೂಜೆ ಮಾಡುತ್ತಿದ್ದರು. ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಇಲ್ಲಿನ ಜಿಲ್ಲಾಡಳಿತ ದೇವಾಲಯವನ್ನು ನೆಲಸಮ ಮಾಡಿದೆ. ಇದನ್ನೂ ಓದಿ: ನೀವು ಮನೆಯಲ್ಲೇ ಮಾಡಿ ಚಿಕನ್ ಕುರ್ಮ

    ಕೊರೊನಾ ಭಯದಿಂದಾಗಿ ಜನರು ಮೂಢನಂಬಿಕೆಗೆ ಒಳಗಾಗಿ ಈ ದೇವಾಲಯ ನಿರ್ಮಾಣ ಮಾಡಿದರು. ಇದರ ಹಿಂದೆ ವ್ಯಕ್ತಿಯೊಬ್ಬನ ಸ್ವಹಿತಾಸಕ್ತಿ ಕೂಡ ಇದೆ. ಗ್ರಾಮದ ಜನರಿಗೆ ಕೊರೊನಾ ಭಯ ಮೂಡಿಸಿ. ತನ್ನ ವಿರೋಧಿಯ ಭೂಮಿ ಒತ್ತುವರಿ ನಡೆಸಿದ್ದಾನೆ. ಈ ವಿವಾದ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಭೂಮಿ ಒತ್ತುವರಿ ಮಾಡಿಕೊಂಡಿದ್ದ ಜಾಗದಲ್ಲಿನ ದೇವಾಲಯವನ್ನು ಕೆಡವಿದ್ದಾರೆ.

    ಗ್ರಾಮದಲ್ಲಿನ ಸೋಂಕು ನಿವಾರಣೆಯಾಗುವಂತೆ ರಾತ್ರೋರಾತ್ರಿ ಇಲ್ಲಿನ ಗ್ರಾಮಸ್ಥರು ದೇವರ ಗುಡಿ ಕಟ್ಟಿದ್ದರು. ಈ ದೇವಾಲಯವನ್ನು ಬೆಳಗಾಗುವುದರೊಳಗೆ ಧ್ವಂಸ ಮಾಡಲಾಗಿದೆ, ಪೊಲೀಸರು ಉದ್ದೇಶ ಪೂರ್ವಕವಾಗಿ ಈ ಕೃತ್ಯ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಪೊಲೀಸರು ಹೇಳುವ ಪ್ರಕಾರ ಎರಡು ಕುಟುಂಬದ ನಡುವೆ ಭೂಮಿ ವಿವಾದವಿದ್ದು, ಇದೇ ಕಾರಣಕ್ಕೆ ಇಲ್ಲಿ ದೇವಾಲಯ ನಿರ್ಮಿಸಲಾಗಿದೆ. ಈ ಬಗ್ಗೆ ಮತ್ತೊಂದು ಗುಂಪು ದೂರು ಕೂಡ ನೀಡಿದೆ ಎಂದಿದ್ದಾರೆ. ಕಳೆದ ಐದು ದಿನಗಳ ಹಿಂದೆ ಸ್ಥಳೀಯರ ಸಹಾಯದಿಂದ ಲೊಕೇಶ್ ಕುಮಾರ್ ಶ್ರೀವಾತ್ಸವ ಇಲ್ಲಿ ಮಂದಿರ ಕಟ್ಟಿಸಿದ್ದನು. ಕೊರೊನಾ ಮಾತೆಯ ಮೂರ್ತಿಯನ್ನು ಕೂರಿಸಿ , ರಾಧೆ ಶ್ಯಾಮ್ ವರ್ಮ್ ಎಂಬ ಪುರೋಹಿತನನ್ನು ನೇಮಕ ಮಾಡಲಾಗಿತ್ತು. ಇದಾದ ಬಳಿಕ ಜನರು ದೇವರ ಆರಾಧನೆಗೆ ಮುಂದಾದರು.

    ನೋಯ್ಡ ಮೂಲಕ ನಾಗೇಶ್ ಕುಮಾರ್ ಶ್ರೀವಾತ್ಸವ್ ಮತ್ತು ಜೈ ಪ್ರಕಾಶ್ ಶ್ರೀವಾತ್ಸವ ಪಾಲುದಾರಿಕೆ ಭೂಮಿಯನ್ನು ಈ ಗ್ರಾಮದಲ್ಲಿ ಹೊಂದಿದ್ದರು. ಅವರು ನೋಯ್ಡಗೆ ಮರಳುತತ್ತಿದ್ದಂತೆ ಈ ದೇವಾಲಯ ನಿರ್ಮಾಣವಾಗಿದೆ. ಭೂಮಿಯನ್ನು ಒತ್ತುವರಿ ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ನಾಗೇಶ್ ಪೊಲೀಸರಿಗೆ ದೂರು ನೀಡಿದ್ದರು. ವಿವಾದಿತ ಜಮೀನಿನಲ್ಲಿ ಏಕಾಏಕಿ ದೇವಾಲಯ ನಿರ್ಮಿಸಿದ ಕಾರಣ ಪೊಲೀಸರು ದೇವಸ್ಥಾನವನ್ನು ಧ್ವಂಸ ಮಾಡಿದ್ದಾರೆ. ಈ ಹಿನ್ನಲೆ ಈಗ ವಿರೋಧಿ ಪಕ್ಷದ ಗುಂಪು ಪೊಲೀಸರ ವಿರುದ್ಧ ಹರಿಹಾಯ್ದಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಹಣದಾಸೆಗೆ ಮಗನ ಪತ್ನಿಯನ್ನೇ ಮಾರಾಟ ಮಾಡಿದ ಅಪ್ಪ

    ಹಣದಾಸೆಗೆ ಮಗನ ಪತ್ನಿಯನ್ನೇ ಮಾರಾಟ ಮಾಡಿದ ಅಪ್ಪ

    ಲಕ್ನೋ: ಮಗನಿಗೆ ಗೊತ್ತಾಗದಂತೆ ಸೊಸೆಯನ್ನು 80 ಸಾವಿರ ರೂಪಾಯಿಗೆ ಮಾವ ಮಾರಾಟ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಸೋಶಿಯಲ್ ಮೀಡಿಯಾ ಮೂಲಕವಾಗಿ ಸ್ನೇಹಿತರಾಗಿದ್ದ ಅಸ್ಸಾಂ ಮೂಲದ ಯುವತಿ ಮತ್ತು ಉತ್ತರ ಪ್ರದೇಶ ಮೂಲದ ಪ್ರಿನ್ಸ್ ಪ್ರೀತಿಸಿ ಮದುವೆಯಾಗಿದ್ದರು. ಪ್ರಿನ್ಸ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಹೀಗಾಗಿ ಗಾಜಿಯಾಬಾದ್‍ನಲ್ಲಿ ವಾಸವಾಗಿದ್ದರು. ಪ್ರಿನ್ಸ್ ತಂದೆ ಸೊಸೆಯನ್ನು ಬರಾಬಂಕಿಯಲ್ಲಿರುವ ನಮ್ಮ ನನೆಗೆ ಬಾ ಎಂದು ಕರೆದಿದ್ದರು. ಇದನ್ನೂ ಓದಿ: ಚೀನಿ ಲಸಿಕೆ ಪಡೆದವರಿಗೆ ಸೌದಿ ನಿರ್ಬಂಧ – ಪಾಕ್ ಜನತೆಗೆ ಶಾಕ್

    ಜೂನ್ 4ರಂದು ಸೊಸೆ ಪತಿಯ ಅಪ್ಪನ ಮನೆಗೆ ಹೋಗಿದ್ದಾಳೆ. ಅಲ್ಲಿ ಮತ್ತೊಬ್ಬ ಯುವಕನಿದ್ದು, ಸಂಜೆ ವೇಳೆ ಆತನೇ ನಿನ್ನನ್ನು ಗಂಡ ಮನೆ ಬಳಿ ಬಿಡುತ್ತಾನೆ ಎಂದು ಮಾವ ಸೊಸೆಯನ್ನು ಆತನ ಜೊತೆಗೆ ಕಳುಹಿಸಿಕೊಟ್ಟಿದ್ದಾನೆ. ಆದರೆ ಆತ ಆಕೆಯನ್ನು ಗಾಜಿಯಾಬಾದ್ ಬದಲಾಗಿ ಬೇರೆ ಕಡೆಗೆ ಕರೆದುಕೊಂಡು ಹೋಗಿದ್ದಾನೆ.

    ಯುವತಿಯ ಸಹೋದರ ಪ್ರಿನ್ಸ್‌ಗೆ ಕರೆ ಮಾಡಿ ಸಹೋದರಿಯ ಕುರಿತಾಗಿ ವಿಚಾರಿಸಿದ್ದಾನೆ. ಆಗ ಪ್ರಿನ್ಸ್ ಪತ್ನಿ ಎಲ್ಲಿಯೂ ಕಾಣದೇ ಇರುವ ಕುರಿತು ಗಾಬರಿಗೊಂಡು ತನ್ನ ತಂದೆಯ ಮನೆಗೆ ಹೋಗಿದ್ದಾನೆ. ಆದರೆ ಅಲ್ಲಿ ಹೆಂಡತಿಯಾಗಲೀ ತಂದೆಯಾಗಲೀ ಇಲ್ಲದಿರುವುದನ್ನು ಕಂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ತನಿಖೆ ಆರಂಭಿಸಿದ ಪೊಲೀಸರಿಗೆ ಮಾವ ಸೊಸೆಯನ್ನು 80 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ವಿಚಾರ ತಿಳಿದಿದೆ. ಆ ಯುವಕ ಆಕೆಯೊಂದಿಗೆ ಮದುವೆ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಮಾವನ ಜೊತೆಗೆ ಕೈ ಜೋಡಿಸಿದ್ದ 9 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

  • ಕುದುರೆ ಸವಾರಿ ಮಾಡುತ್ತೇನೆಂದಿದ್ದಕ್ಕೆ ಜೀವ ಬೆದರಿಕೆ- ಪೊಲೀಸರ ಮೊರೆ ಹೋದ ವರ

    ಕುದುರೆ ಸವಾರಿ ಮಾಡುತ್ತೇನೆಂದಿದ್ದಕ್ಕೆ ಜೀವ ಬೆದರಿಕೆ- ಪೊಲೀಸರ ಮೊರೆ ಹೋದ ವರ

    ಲಕ್ನೋ: ವಿವಾಹ ಸಮಯದಲ್ಲಿ ಕುದುರೆ ಸವಾರಿ ಮಾಡದಂತೆ ಸ್ಥಳೀಯರ ಬೆದರಿಕೆ ಹಾಕಿರುವುದಕ್ಕೆ ವರನ ಕುಟುಂಬ ಪೊಲೀಸರ ರಕ್ಷಣೆ ಕೋರಿದ ಘಟನೆ ಉತ್ತರಪ್ರದೇಶದ ಮಹೋಬಾದಲ್ಲಿ ನಡೆದಿದೆ.

    ಕಳೆದ ಹಲವಾರು ವರ್ಷಗಳಿಂದ, ನಮ್ಮ ಹಳ್ಳಿಯಲ್ಲಿ ಹಳೆಯ ಸಂಪ್ರದಾಯಗಳ ಪ್ರಕಾರ ಮದುವೆಗಳು ನಡೆಯುತ್ತಿವೆ. ಮದುವೆ ಸಮಯದಲ್ಲಿ ಕುದುರೆ ಸವಾರಿ ಮಾಡುವುದು ಸಂಪ್ರದಾಯವಾಗಿದೆ. ನನ್ನ ಮದುವೆ ಮೆರವಣಿಗೆಗಾಗಿ ನಾನು ಕುದುರೆ ಸವಾರಿ ಮಾಡಲು ಬಯಸುತ್ತೇನೆ ಆದರೆ ಇತರ ಸಮುದಾಯಗಳಿಂದ ಬಂದ ಕೆಲವರು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವರ ಅಲಕ್ ರಾಮ್ ಹೇಳಿದ್ದಾರೆ. ಇದನ್ನೂ ಓದಿ: ಗಂಡನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಐಪಿಎಸ್ ಅಧಿಕಾರಿ

    ಮದುವೆ ಸಂದರ್ಭದಲ್ಲಿ ಕುದುರೆ ಸವಾರಿ ಮಾಡದಂತೆ ಸ್ಥಳೀಯರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ವರ ಪೊಲೀಸರಲ್ಲಿ ರಕ್ಷಣೆ ಕೋರಿದ್ದಾರೆ. ಈ ಸಂಬಂದ ತೀವ್ರ ನಿಗಾ ವಹಿಸಿದ್ದೇವೆ. ಆದರೆ ಕುದುರೆ ಸವಾರಿ ಮಾಡುವುದರಿಂದ ಗ್ರಾಮದಲ್ಲಿ ಯಾರಿಗೆ ತೊಂದರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದರೇ ಕೊಲ್ಲುವುದಾಗಿ ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ ಎಂದು ವರ ಅಲಕ್ ರಾಮ್ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನನ್ನ ಮಗನ ಮದುವೆ ಜೂನ್ 18 ರಂದು ನಡೆಯಲಿದ್ದು, ಈ ವೇಳೆ ಕುದುರೆ ಸವಾರಿ ಮಾಡಿದರೆ ಗ್ರಾಮಸ್ಥರು ಕೊಲ್ಲುವ ಬೆದರಿಕೆ ಹಾಕಿರುವುದರಿಂದ ಪೊಲೀಸರ ರಕ್ಷಣೆ ಕೋರುತ್ತಿರುವುದಾಗಿ ರಾಮ್ ತಂದೆ ಗಯಾದಿನ್ ತಿಳಿಸಿದ್ದಾರೆ.

  • ಮುಹೂರ್ತದ ಹೊತ್ತಿಗೆ ಶವವಾದ ವಧು- ತಂಗಿಗೆ ತಾಳಿ ಕಟ್ಟಿದ ವರ

    ಮುಹೂರ್ತದ ಹೊತ್ತಿಗೆ ಶವವಾದ ವಧು- ತಂಗಿಗೆ ತಾಳಿ ಕಟ್ಟಿದ ವರ

    ಲಕ್ನೋ: ವರ ತಾಳಿ ಕಟ್ಟುವಾಗಲೇ ವಧು ಸಾವನ್ನಪ್ಪಿದ್ದಾಳೆ. ಅದೇ ಮುಹೂರ್ತದಲ್ಲಿ ವರ ವಧುವಿನ ತಂಗಿಗೆ ತಾಳಿ ಕಟ್ಟಿರುವ ಘಟನೆ ಉತ್ತರ ಪ್ರದೇಶದ ಇಟವಾ ಜಿಲ್ಲೆಯ ಸನಾದ್ಪುರದಲ್ಲಿ ನಡೆದಿದೆ. ಇದನ್ನೂ ಓದಿ: ಲಸಿಕೆ ತೆಗೆದುಕೊಳ್ಳದವರಿಗೆ ಮದ್ಯ ಸಿಗಲ್ಲ – ಎಣ್ಣೆ ಪ್ರಿಯರಿಗೆ ಶಾಕ್

    ಸನಾದ್ಪುರದ ನಿವಾಸಿ ಮನೋಜ್ ಕುಮಾರ್ ಎನ್ನುವ ವರನಿಗೆ ಸುರಭಿ ಎನ್ನುವ ಹುಡುಗಿಯ ಜೊತೆ ವಿವಾಹ ನಿಶ್ಚಯವಾಗಿತ್ತು, ಹೂ ಮಾಲೆ ಹಾಕಿದ ನಂತರ ಇದ್ದಕ್ಕಿದ್ದಂತೆ ಸುರಭಿ ಕುಸಿದು ಬಿದ್ದಳು. ತಕ್ಷಣ ವೈದ್ಯಕೀಯ ಚಿಕಿತ್ಸೆ ಮಾಡಲಾಯಿತು. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಸುರಭಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಯಿಯ ಶವದ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಗ

    ವಿವಾಹದ ಒತ್ತಡದ ಕಾರಣ ಸುರಭಿಗೆ ಹೃದಯಾಘಾತವಾಗಿದೆ ಎಂದು ವೈದ್ಯರು ಹೇಳಿದರು. ವಧು ಮೃತಪಟ್ಟ ಕಾರಣ ವಿವಾಹವನ್ನು ನಿಲ್ಲಿಸಬೇಕೇ, ಬೇಡವೇ ಎನ್ನುವ ಚರ್ಚೆ ಆರಂಭವಾಯಿತು. ಕೊನೆಗೆ ವಧುವಿನ ತಂಗಿಯನ್ನು ವರನಿಗೆ ಮದುವೆ ಮಾಡಿಕೊಡುವ ಮೂಲಕ ಈ ವಿವಾಹವನ್ನು ನಿಲ್ಲಿಸದೆ ಮುಂದುವರಿಸುವ ನಿರ್ಣಯಕ್ಕೆ ಎರಡೂ ಕಡೆಯ ಹಿರಿಯರು ನಿರ್ಧಾರ ಮಾಡಿದರು. ಇದನ್ನೂ ಓದಿ: ಬಿರಿಯಾನಿಯಲ್ಲಿ ಲೆಗ್ ಪೀಸ್ ಕಡಿಮೆ ಇದೆ-ಸಚಿವರನ್ನು ಟ್ಯಾಗ್ ಮಾಡಿ ದೂರು ನೀಡಿದ ವ್ಯಕ್ತಿ

     

    ನಿಶಾಳನ್ನು ವಿವಾಹವಾಗಲು ವರ ಮನೋಜ್ ಕುಮಾರ್ ಒಪ್ಪಿಗೆ ಸೂಚಿಸಿದರು. ನಿಶಾ ಕೂಡ ಈ ವಿವಾಹಕ್ಕೆ ಸಮ್ಮತಿ ಸೂಚಿಸಿದರು. ಮೃತದೇಹವನ್ನು ಕೋಣೆಯಲ್ಲಿ ಇರಿಸಲಾಗಿತ್ತು. ನಂತರ ಮನೋಜ್ ಕುಮಾರ್ ಅವರ ವಿವಾಹವನ್ನು ಸುರಭಿ ಅವರ ಸಹೋದರಿ ನಿಶಾ ಅವರೊಂದಿಗೆ ನಡೆಸಲಾಯಿತು. ಮದುವೆಯ ನಂತರ, ದಿಬ್ಬಣ ಹೊರಟು ಹೋದ ಮೇಲೆ ಸುರಭಿ ಅವರ ಅಂತ್ಯ ಸಂಸ್ಕಾರವನ್ನು ಕೈಗೊಳ್ಳಲಾಯಿತು ಎಂದು ಸುರಭಿ ಅವರ ಸಹೋದರ ಸೌರಭ್ ಹೇಳಿದ್ದಾರೆ. ಒಂದು ಮಗಳು ಕೋಣೆಯಲ್ಲಿ ಸತ್ತು ಮಲಗಿದ್ದರೆ ಇನ್ನೊಂದು ಮಗಳ ವಿವಾಹವನ್ನು ಇನ್ನೊಂದು ಕೋಣೆಯಲ್ಲಿ ನಡೆಸಲಾಗುತ್ತಿತ್ತು ಎಂದು ಹೇಳುತ್ತಾ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ದೂರವಿರಲು ಹಾವು ತಿಂದ

  • ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಮದುವೆ ಕ್ಯಾನಲ್..!

    ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಮದುವೆ ಕ್ಯಾನಲ್..!

    ಲಕ್ನೋ: ಕೊರೊನಾ ಇರುವುದರಿಂದ ಜನರು ಸರ್ಕಾರದ ನಿಮಯಗಳನ್ನು ಪಾಲಿಸುತ್ತಾ ಮದುವೆ, ಶುಭ-ಸಮಾರಂಭಗಳನ್ನು ಮಾಡುತ್ತಿದ್ದಾರೆ. ಆದರೆ ಇಲ್ಲಿ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಒಂದು ಘಟನೆ ನಡೆದು ಮದುವೆ ಅರ್ಧಕ್ಕೆ ನಿಂತು ಹೋಗಿದೆ.

    ಉತ್ತರಪ್ರದೇಶದ ಹಮಿರ್‍ಪುರದಲ್ಲಿ, ಮದುವೆಗೆ ಸರಿ ಸುಮಾರು 11 ಗಂಟೆ ಬಾಕಿ ಇತ್ತು ಅಷ್ಟೇ ಮದುವೆ ಆಗೋದಕ್ಕೆ. ಆದರೆ ವರನಿಗೆ ಕೊರೊನಾ ಪಾಸಿಟಿವ್ ಅನ್ನೋ ರಿಪೋರ್ಟ್ ಬಂದಿದೆ. ಕೋಡಲೇ ವರನ ಮನೆಯವರು ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ.


    ಸದ್ಯ ವರ ಕ್ವಾರಂಟೈನ್‍ನಲ್ಲಿದ್ದು, ವರನ ಜೊತೆಗೆ ಸಂಪರ್ಕದಲ್ಲಿದ್ದವರಿಗೆಲ್ಲಾ ಟೆಸ್ಟ್ ಮಾಡಿಸಲಾಗಿದೆ. ಇದೀಗ ವಧು ಹಾಗೂ ವರನ ಮನೆಯವರೆಲ್ಲಾ ಮದುವೆಯನ್ನು ಮುಂದೂಡಿದ್ದಾರೆ. ಕೆಲವೇ ಗಂಟೆಯಲ್ಲಿ ನಡೆಯಬೇಕಿದ್ದ ಮದುವೆ ಕೊರೊನಾದಿಂದ ಮುಂದೆ ಹೋಗಿದೆ.