ಲಕ್ನೋ: 1.16ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ರಸ್ತೆ ಉದ್ಘಾಟನೆ ಸಂದರ್ಭದಲ್ಲಿ ಒಡೆದ ತೆಂಗಿನ ಕಾಯಿಯಿಂದ ರಸ್ತೆ ಬಿರುಕು ಬಿಟ್ಟ ಅಚ್ಚರಿಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
1.16ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ 7ಕಿ.ಮೀ ಉದ್ದ ಹೊಸ ರಸ್ತೆಯ ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಾಗ, ಕಾಯಿ ಬದಲು ರಸ್ತೆಯೇ ಬಿರುಕು ಬಿಟ್ಟಿದೆ. ಈ ಘಟನೆಯಿಂದ ಮುಜುಗರಕ್ಕೀಡಾಗಿ ಕೆಂಡವಾಗಿರುವ ಆಡಳಿತಾರೂಢ ಬಿಜೆಪಿ ಶಾಸಕಿ ಸುಚಿ ಮೌಸಂ ಚೌದರಿ, ರಸ್ತೆಯ ಕಳಪೆ ಕಾಮಗಾರಿಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ
ಕಳಪೆ ಮಟ್ಟದ ಕಾಮಗಾರಿ ತನಿಖೆಗಾಗಿ ರಸ್ತೆ ಮಾದರಿ ಸಂಗ್ರಹಿಸಲು ಅಧಿಕಾರಿಗಳು ಬರುವವರೆಗೆ 3 ಗಂಟೆಗಳ ಕಾಲ ಸ್ಥಳದಲ್ಲೇ ಕಾದರು. ತಮ್ಮ ಕ್ಷೇತ್ರದಲ್ಲಿ 1.16 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾಗಿರುವ 7.5 ಕಿಮೀ ರಸ್ತೆ ಕಾಮಗಾರಿ ಕೈಗೊಂಡಿದೆ. ಇದರ ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಾಗ ಕಾಯಿ ತುಂಡಾಗದೇ ರಸ್ತೆಯೇ ಹೋಳಾಗಿದೆ. ಈ ವೇಳೆ ಪರಿಶೀಲನೆ ನಡೆಸಿದಾಗ ಕಾಮಗಾರಿಯಲ್ಲಿ ದಕ್ಷತೆ ಇಲ್ಲದಿರುವುದು ಕಂಡುಬಂದಿದೆ ಎಂದು ಬಿಜನೋರ್ ಶಾಸಕಿ ತಿಳಿಸಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ
ಲಕ್ನೋ: ವ್ಯಕ್ತಿಯೊಬ್ಬ ತನ್ನ ಹೆಸರು ವಿಳಾಸದ ಜೊತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಭಾರತೀಯ ಕಿಸಾನ್ ಮಂಚ್‍ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ಪತ್ರದ ಮೂಲಕ ಜೀವ ಬೆದರಿಕೆ ಹಾಕಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಬೆದರಿಕೆ ಪತ್ರ ಕಳುಹಿಸಿದ ವ್ಯಕ್ತಿ ಲಕೋಟೆಯ ಮೇಲೆ ತನ್ನ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ಸಹ ಬರೆದಿದ್ದಾನೆ.
ಪತ್ರದಲ್ಲಿ ಏನಿದೆ?: ನನ್ನ ಹೆಸರು ಮೊಹಮ್ಮದ್ ಅಜ್ಮಲ್, ನೀವು ನನಗೆ ಹಾನಿ ಮಾಡಲು ಸಾಧ್ಯವಿಲ್ಲ. ನಿಮ್ಮ ಕೌಂಟ್‍ಡೌನ್ ಇಂದಿನಿಂದ ಪ್ರಾರಂಭವಾಗಿದೆ. ಮುಖ್ಯಮಂತ್ರಿಗೆ ಭದ್ರತೆ ಇದೆ, ಇಲ್ಲದಿದ್ದರೆ ಅವರನ್ನೂ ಸ್ಫೋಟಿಸಲಾಗುತ್ತಿತ್ತು. ಅಲ್ಲದೇ ಪತ್ರ ಕಳುಹಿಸಿದವ ಗೋಶಾಲೆ ಸಮೀಕ್ಷೆ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಇನ್ನು ರಂಜಿತ್ ಬಚ್ಚನ್ ಮತ್ತು ಕಮಲೇಶ್ ತಿವಾರಿ ಹತ್ಯೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಈ ಪ್ರಕರಣದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಉನ್ನಾವೋದ ಅಂಚೆ ಕಚೇರಿಯಿಂದ ಪತ್ರ ರವಾನೆಯಾಗಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಿಳಾಸವನ್ನು ದೇವಬಂದ್ ಎಂದು ಬರೆಯಲಾಗಿದೆ. ಇದನ್ನೂ ಓದಿ: ಮಗು ಮಾರಾಟ ಮಾಡಿದ ಕೆಲವೇ ನಿಮಿಷದಲ್ಲಿ ಹಣ ಕಳೆದುಕೊಂಡ ತಾಯಿ!
ಇತ್ತೀಚೆಗಷ್ಟೇ ಲಕ್ನೋ ಸೇರಿದಂತೆ ಹಲವು ಜಿಲ್ಲೆಗಳ ಧಾರ್ಮಿಕ ಸ್ಥಳಗಳನ್ನು ಸ್ಫೋಟಿಸುವ ಬೆದರಿಕೆ ಪತ್ರಗಳು ಬಂದಿದ್ದವು. ಸದ್ಯ ಬೆದರಿಕೆ ಪತ್ರ ಬಂದ ಹಿನ್ನೆಲೆ ಕಿಸಾನ್ ಮಂಚ್ ಅಧ್ಯಕ್ಷ ದೇವೇಂದ್ರ ತಿವಾರಿ ಆಲಂಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಗೋಶಾಲೆ ಮತ್ತು ಗೋಸಂರಕ್ಷಣೆ ಹೆಸರಿನಲ್ಲಿ ನಮಗೆ ಸಾಕಷ್ಟು ತೊಂದರೆ ನೀಡಿದ್ದೀರಿ. ಇದೇ ನಿನಗೆ ದುರಾದೃಷ್ಟ ತಂದಿದೆ. ಇದರೊಂದಿಗೆ ಸುಧಾರಿಸಿಕೊಳ್ಳದಿದ್ದರೆ ಯಾರೂ ಯಾರಿಗೂ ಮಾಡದಂತಹ ಶಿಕ್ಷೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನಾಳೆಯಿಂದ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ಅನುಮತಿ- ವೀಕ್‍ಡೇಸ್‍ನಲ್ಲಿ ಅವಕಾಶ, ವೀಕೆಂಡ್‍ನಲ್ಲಿ ನಿರ್ಬಂಧ
ಲಕ್ನೋ: ರೈತರ ಸಮಸ್ಯೆಗಳು ಚರ್ಚೆಯಾಗಬೇಕು. ಸಂಪೂರ್ಣ ಪರಿಹಾರ ಸಿಗುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.
ವಿವಾದಾತ್ಮಕ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವುದಾಗಿ ನರೇಂದ್ರ ಮೋದಿ ಘೋಷಿಸಿದ ಹಿನ್ನೆಲೆಯಲ್ಲಿ ಲಕ್ನೋದ ಇಕೋ ಗಾರ್ಡನ್‍ನಲ್ಲಿ 100ಕ್ಕೂ ಹೆಚ್ಚು ಮಂದಿ ಜಮಾಯಿಸಿ ಸಭೆ ನಡೆಸಿದರು.
ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಪಡಿಸುವಂತೆ ಹಾಗೂ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು ವಜಾಗೊಳಿಸಿ, ಹಾಗೂ ಕಬ್ಬುಗಾರರಿಗೆ ಬಾಕಿ ಹಣ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಎಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ಒತ್ತಾಯಿಸಲಾಯಿತು. ಇದನ್ನೂ ಓದಿ: ಕೊನೆಯ ಎಸೆತದಲ್ಲಿ ಸಿಕ್ಸರ್, ತಮಿಳುನಾಡಿಗೆ ಟ್ರೋಫಿ – ಕರ್ನಾಟಕಕ್ಕೆ ವಿರೋಚಿತ ಸೋಲು
Lucknow | Owaisi & BJP share a bond of ‘chacha-bhatija’ (uncle-nephew). He should not talk about this on TV, he can just ask directly: BKU Leader Rakesh Tikait, on Asaduddin Owaisi’s demand of repealing CAA & NRC pic.twitter.com/R8iIZKoRnI
ನವೆಂಬರ್ 19ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು. ಆದರೆ ಸಂಸತ್‍ನಲ್ಲಿ ಔಪಚಾರಿಕವಾಗಿ ರದ್ದುಗೊಳಿಸುವವರೆಗೂ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂದು ರೈತ ಮುಖಂಡ ಟಿಕಾಯತ್ ತಿಳಿಸಿದರು. ಇದನ್ನೂ ಓದಿ: RR ಫ್ರಾಂಚೈಸಿ ಜೊತೆ ಮುನಿಸಿಕೊಂಡ ಸಂಜು ಸ್ಯಾಮ್ಸನ್?
MSP issue is still pending, Electricity Amendment Bill is also an concern, discussion should be held on these matters including incidents that took place during agitation.We’re not going back before the discussion: Rakesh Tikait (BKU) on mahapanchayat in Lucknow on Monday (21.11) pic.twitter.com/RPoK8XP3Cy
ಕೃಷಿ ಸುಧಾರಣಾ ಕಾಯ್ದೆಯ ಕುರಿತು ಸರ್ಕಾರ ಸುಳ್ಳು ಹೇಳಿಕೆಯನ್ನು ನೀಡುತ್ತಿದೆ. ಪ್ರಮುಖ ಮೂರು ಕೃಷಿ ಕಾಯ್ದೆ ರದ್ದುಗೊಳಿಸಿದರೆ ರೈತರು ತೊಂದರೆಯಿಂದ ಮುಕ್ತವಾಗುವುದಿಲ್ಲ. ಯಾವಾಗ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನನ್ನು ರಚಿಸುತ್ತದೆಯೋ ಅಂದು ರೈತರಿಗೆ ಹಾಗೂ ಕೃಷಿ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಯಾಗುತ್ತದೆ ಎಂದು ಬಿಕೆಯು ವಕ್ತಾರ ರಾಕೇಶ್ ಟಿಕಾಯತ್ ಅಭಿಪ್ರಾಯಪಟ್ಟರು.
ಲಕ್ನೋ: ಒಂದು ವೇಳೆ ತಾಲಿಬಾನ್ ಭಾರತದ ಕಡೆ ಬಂದರೆ ಅವರ ವಿರುದ್ಧ ವೈಮಾನಿಕ ದಾಳಿಗೆ ಭಾರತ ಸಿದ್ಧವಾಗಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಪ್ರತಿನಿಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ನಮ್ಮ ದೇಶ ಸುರಕ್ಷಿತವಾಗಿ ನಡೆಯುತ್ತಿದೆ. ಅದಕ್ಕೆ ಬೇರೆ ದೇಶದವರು ನಮ್ಮತ್ತ ಕಣ್ಣು ಎತ್ತಿ ನೋಡಲು ಸಾಧ್ಯವಿಲ್ಲ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಾಲಿಬಾನ್‍ನಿಂದ ತೊಂದರೆಗೀಡಾಗಿದೆ. ಒಂದು ವೇಳೆ ಆ ತಾಲಿಬಾನ್ ಗುಂಪು ಭಾರತದತ್ತ ಸಾಗಿದರೆ, ವೈಮಾನಿಕ ದಾಳಿ ಸಿದ್ಧವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ: ಮೋದಿ ಶುಭಾಶಯ
ಆದಿತ್ಯನಾಥ್ ಅವರು ಎಸ್‍ಬಿಎಸ್‍ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‍ಭರ್ ಅವರನ್ನು ಉಲ್ಲೇಖಿಸಿ, ರಾಜ್‍ಭರ್ ಅವರ ಚಿಂತನೆಯ ಪ್ರಕ್ರಿಯೆಯು ಅವರ ಕುಟುಂಬದ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದೆ ಎಂದು ವಿರೋಧಿಸಿದರು. ತಂದೆ ಮಂತ್ರಿ ಆಗಬೇಕು ಎಂದು ಬಯಸಿದರೆ, ಮಗ ಸಂಸದ ಮತ್ತು ಇನ್ನೊಬ್ಬ ಎಂಎಲ್‍ಸಿಯಾಗಲು ಬಯಸುತ್ತಾರೆ. ಮೊದಲು ಅಂತಹ ಬ್ಲ್ಯಾಕ್‍ಮೇಲ್ ಮಾಡುವವರ ಅಂಗಡಿಗಳನ್ನು ಮುಚ್ಚಬೇಕು ಎಂದರು.
ರಾಜ್‍ಭರ್ ಹೆಸರನ್ನು ಉಲ್ಲೇಖಿಸದೇ ಆದಿತ್ಯನಾಥ್ ಅವರು, ನನ್ನ ಸಂಪುಟದಲ್ಲಿ ರಾಜ್‍ಭರ್ ಸಮುದಾಯದ ಇಬ್ಬರು ಮಂತ್ರಿಗಳಿದ್ದರು. ಈ ಸಂಪುಟ ಸಭೆಯಲ್ಲಿ ಒಬ್ಬ ಸಚಿವರು ಬಹ್ರೈಚ್‍ನಲ್ಲಿ ಮಹಾರಾಜ ಸುಹೇಲ್‍ದೇವ್ ಅವರ ಗೌರವಾರ್ಥ ಸ್ಮಾರಕ ನಿರ್ಮಾಣವನ್ನು ವಿರೋಧಿಸಿದರು. ಆದರೆ ಅನಿಲ್ ರಾಜ್‍ಭರ್ ಅವರಿಗೆ ಸ್ಮಾರಕವು ಭವ್ಯವಾದ ಕಟ್ಟಡದ ರೀತಿಯಲ್ಲಿ ನಿರ್ಮಿಸಬೇಕು ಎಂಬ ಬಯಕೆ ಇತ್ತು ಎಂದು ತಿಳಿಸಿದರು.
ಇಂದು, ಬಹ್ರೈಚ್‍ನಲ್ಲಿ ಭವ್ಯವಾದ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ. ಬಿಜೆಪಿ ಸರ್ಕಾರವು ಬಹ್ರೈಚ್‍ನಲ್ಲಿರುವ ವೈದ್ಯಕೀಯ ಕಾಲೇಜಿಗೆ ಸುಹೇಲ್‍ದೇವ್ ಹೆಸರಿಟ್ಟಿದೆ. ವಿರೋಧ ಪಕ್ಷಗಳು ಮಹಾರಾಜ ಸುಹೇಲ್‍ದೇವ್‍ಗಾಗಿ ಏನು ಮಾಡಿದೆ ಎಂದು ಪ್ರಶ್ನೆಯನ್ನು ಕೇಳಿದರು.
ಮುಹಮ್ಮದ್ ಘೋರಿ ಮತ್ತು ಆಕ್ರಮಣಕಾರ ಘಾಜಿಯ ಅನುಯಾಯಿಗಳು ಸುಹೇಲ್‍ದೇವ್ ಸ್ಮಾರಕವನ್ನು ನಿರ್ಮಿಸಿದರೆ, ಜನರು ಘಾಜಿಯನ್ನು ಮರೆತುಬಿಡುತ್ತಾರೆ. ರಾಜಕೀಯ ಬ್ಲ್ಯಾಕ್‍ಮೇಲಿಂಗ್‍ನಲ್ಲಿ ತೊಡಗಿರುವವರನ್ನು ಕಸದ ಬುಟ್ಟಿಗೆ ಹಾಕುತ್ತಾರೆ, ಎಂಬ ಭಯದಿಂದ ಕೆಲವರು ಸುಹೇಲ್‍ದೇವ್‍ನ ಸ್ಮಾರಕವನ್ನು ಪರೋಕ್ಷವಾಗಿ ವಿರೋಧಿಸುತ್ತಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ
ಈ ವೇಳೆ, ರಾಮ ಭಕ್ತರನ್ನು ಹತ್ಯೆ ಮಾಡಿದವರು ದೇಶದ ಜನರನ್ನು ಕ್ಷಮೆ ಕೇಳುವ ಧೈರ್ಯವಿದೆಯೇ ಎಂದು ಪ್ರಶ್ನಿಸುವ ಮೂಲಕ ರಾಜಕೀಯ ವಿರೋಧಿಗಳ ವಿರುದ್ಧವೂ ವಾಗ್ದಾಳಿ ನಡೆಸಿದರು.
ದುಬೈ: ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‍ಗೆ 2 ಹೊಸ ತಂಡಗಳ ಎಂಟ್ರಿಯಾಗಿದೆ. 2022ರ ಐಪಿಎಲ್‍ಗೆ ಆರ್‌ಪಿ ಸಂಜೀವ್ ಗೋಯೆಂಕಾ (ಆರ್‌ಪಿಎಸ್‌ಜಿ) ಸಮೂಹದ ಲಕ್ನೋ ತಂಡ ಮತ್ತು ಸಿವಿಸಿ ಕ್ಯಾಪಿಟಲ್ ಪಾರ್ಟ್‌ನರ್ಸ್ ಒಡೆತನದ ಅಹಮದಾಬಾದ್ ತಂಡಗಳು ಕಣಕ್ಕೆ ಇಳಿಯಲಿದೆ.
ದುಬೈನಲ್ಲಿ ನಡೆದ ಬಿಡ್‍ನಲ್ಲಿ ಅಹಮದಾಬಾದ್ ತಂಡವನ್ನು ಭಾರತದ ಉದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಸಿವಿಸಿ ಗ್ರೂಪ್ 5,600 ಕೋಟಿ ರೂ. ಬಿಡ್ ಮಾಡಿದ್ದರೆ, ಆರ್‌ಪಿಎಸ್‌ಜಿ ಗ್ರೂಪ್ 7,090 ಕೋಟಿ ರೂ. ಲಕ್ನೋ ತಂಡವನ್ನು ಖರೀದಿ ಮಾಡಿದ್ದಾರೆ. ಈ ಮೂಲಕ ಐಪಿಎಲ್‍ನ ಮುಂದಿನ ಸೀಸನ್‍ನಲ್ಲಿ 8 ತಂಡಗಳ ಬದಲಾಗಿ 10 ತಂಡಗಳು ಕಣಕ್ಕಿಳಿಯಲಿದೆ. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ
ಬಿಸಿಸಿಐ ಎರಡು ತಂಡಗಳ ಬಿಡ್ ಮೂಲಕ 10 ಸಾವಿರ ಕೋಟಿ ರೂ. ನಿರೀಕ್ಷಿಸಿತ್ತು. ಆದರೆ ಈಗ 2,690 ಕೋಟಿ ರೂ. ಹೆಚ್ಚುವರಿಯಾಗಿ ಗಳಿಸಿದೆ. ಅಹಮದಾಬಾದ್ ತಂಡ ಖರೀದಿಸಲು ಅದಾನಿ ಗ್ರೂಪ್ 5,000 ಕೋಟಿ ರೂ. ಬಿಡ್ ಮಾಡಿತ್ತು. ಇದನ್ನೂ ಓದಿ: ಆತ್ಮಿಯ ಸ್ನೇಹಿತನ ವಿಶ್ವದಾಖಲೆ ಮುರಿದ ಕೊಹ್ಲಿ
ಒಟ್ಟು 10 ತಂಡಗಳು ಇರುವ ಕಾರಣ ಐಪಿಎಲ್ ಟೂರ್ನಿಯ ಪಂದ್ಯಾಟಗಳ ಸಂಖ್ಯೆ ಕೂಡ ಹೆಚ್ಚಾಗಲಿದೆ. ಜೊತೆಗೆ ಎಲ್ಲಾ ಆಟಗಾರರ ಹರಾಜು ಪ್ರಕ್ರಿಯೆಯ ಮೂಲಕ ತಂಡಗಳ ರಚನೆಯಾಗಲಿದೆ.
ಲಕ್ನೋ: ವಿರೋಧ ಪಕ್ಷಗಳು ಭಗವಾನ್ ರಾಮನ ವಿರುದ್ಧವಾಗಿವೆ, ಅಂತರ ಕಾಯ್ದುಕೊಳ್ಳಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ
ರಾಮ ದ್ರೋಹಿಗಳು ಕೇವಲ ನಂಬಿಕೆಗಷ್ಟೇ ಘಾಸಿಯುಂಟುಮಾಡುತ್ತಿಲ್ಲ ಬದಲಾಗಿ ಸಾಮಾಜಿಕ ಸಂರಚನೆಗೆ ಧಕ್ಕೆಯುಂಟು ಮಾಡುವುದರ ಜೊತೆಗೆ ಅಭಿವೃದ್ಧಿಗೂ ಅಡ್ಡಿಪಡಿಸುತ್ತಿದ್ದಾರೆ, ಇವರ ಆಳ್ವಿಕೆಯಲ್ಲಿ ರಾಜ್ಯವನ್ನು ದಂಗೆಯ ಬೆಂಕಿಗೆ ಎಸೆದಿದ್ದರು ಎಂದೂ ವಿರೋಧ ಪಕ್ಷದ ವಿರುದ್ಧವಾಗಿ ಕಿಡಿ ಕಾರಿದ್ದಾರೆ.
ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ವಿಶ್ವಕರ್ಮ ಸಮುದಾಯದವರ ಸಭೆಯಲ್ಲಿ ಮಾತನಾಡಿದ ಅವರು, ರಾಮನ ಹಿತೈಷಿಗಳಾಗದವರು ಎಂದಿಗೂ ನಿಮ್ಮ ಹಿತೈಷಿಗಳಾಗಲು ಸಾಧ್ಯವಿಲ್ಲ. ಭಯೋತ್ಪಾದಕರನ್ನು ರಕ್ಷಿಸುವ, ಗಲಭೆಕೋರರನ್ನು ಅಪ್ಪಿಕೊಳ್ಳುವ ರಾಮ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳುವುದು ಈಗಿನ ಹಾಗೂ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕೆ ಅತ್ಯಗತ್ಯ ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್‍ಪೂಲ್‍ನಲ್ಲಿ ಐರಾ, ಯಥರ್ವ್ ಮೋಜು ಮಸ್ತಿ
ಲಕ್ನೋ: ಕಾಂಗ್ರೆಸ್ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಮಹಿಳಾ ಪೊಲೀಸ್ ಕಾನ್ಸ್‌ಸ್ಟೇಬಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಉತ್ತರ ಪ್ರದೇಶದಿಂದ ಆಗ್ರಾಕ್ಕೆ ಹೋಗುವಾಗ ಲಕ್ನೋ ಹೊರವಲಯದಲ್ಲಿ ಪ್ರಿಯಾಂಕಾ ಗಾಂಧಿ ಜೊತೆ ಮಹಿಳಾ ಕಾನ್ಸ್‌ಸ್ಟೇಬಲ್ ಗುಂಪೊಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದಾಗ್ಯೂ ಈ ವಿಚಾರ ಕಾನ್ಸ್‌ಸ್ಟೇಬಲ್‍ಗಳಿಗೆ ಖುಷಿಯಾದ ವಿಚಾರವಾಗಿ ಪರಿಣಮಿಸದೇ ಸಮಸ್ಯೆಯಾಗಿ ಎದುರಾಗಿದೆ. ಇದನ್ನೂ ಓದಿ: ಮಹಿಳೆಯರ ಆತ್ಮರಕ್ಷಣೆಗಾಗಿ ವಿಶೇಷ ತರಬೇತಿ: ಬಸವರಾಜ ಬೊಮ್ಮಾಯಿ
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ನನ್ನ ಜೊತೆ ಫೋಟೋ ತೆಗೆದುಕೊಳ್ಳುವುದು ಅಪರಾಧ ಆಗಿದ್ದರೆ, ನನಗೆ ಶಿಕ್ಷೆ ನೀಡಬೇಕು, ಆದರೆ ಮಹಿಳಾ ಕಾನ್ಸ್‌ಸ್ಟೇಬಲ್‌ಗಳನ್ನು ದೂಷಿಸುವುದು ಏಕೆ? ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ- ನಾಳೆ ತುಮಕೂರು ಬಂದ್
खबर आ रही है कि इस तस्वीर से योगी जी इतने व्यथित हो गए कि इन महिला पुलिसकर्मियों पर कार्यवाही करना चाहते हैं।
अगर मेरे साथ तस्वीर लेना गुनाह है तो इसकी सजा भी मुझे मिले, इन कर्मठ और निष्ठावान पुलिसकर्मियों का कैरियर ख़राब करना सरकार को शोभा नहीं देता। pic.twitter.com/6wiGunRFEe
ಯೋಗಿ ಆದಿತ್ಯನಾಥ್ ಅವರಿಗೆ ಈ ಫೋಟೋ ವಿಚಾರವಾಗಿ ಅಸಮಾಧಾನವಿದ್ದು, ಅವರು ಈ ಮಹಿಳಾ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಇದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ. ನನ್ನೊಂದಿಗೆ ಫೋಟೋ ತೆಗೆದುಕೊಂಡಿರುವುದು ಅಪರಾಧವಾಗಿದ್ದರೆ, ಅದಕ್ಕಾಗಿ ನನಗೆ ಶಿಕ್ಷೆ ನೀಡಬೇಕು. ಅದನ್ನು ಹೊರತುಪಡಿಸಿ ಈ ಶ್ರಮಜೀವಿ ಮತ್ತು ನಿಷ್ಠಾವಂತ ಪೊಲೀಸರ ವೃತ್ತಿಯನ್ನು ಹಾಳುಮಾಡುವುದು ಸರ್ಕಾರಕ್ಕೆ ಕ್ಷೋಭೆಯಲ್ಲ ಎಂದಿದ್ದಾರೆ.
25 ಲಕ್ಷ ಕಳ್ಳತನ ಮಾಡಿದ ಆರೋಪದಲ್ಲಿ ಅರುಣ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದರು. ಆದರೆ ಆ ವ್ಯಕ್ತಿಯು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆಗ್ರಾಕ್ಕೆ ತೆರಳುತ್ತಿದ್ದರು. ಆದರೆ ಈ ವೇಳೆ ಪ್ರಿಯಾಂಕಾ ಗಾಂಧಿ ಭೇಟಿಯಿಂದ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದ್ದಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದಿದರು. ಆದರೆ ಸ್ವಲ್ಪ ಸಮಯದ ನಂತರ ಬಿಡುಗಡೆಗೊಳಿಸಿ ಕೇವಲ ನಾಲ್ಕು ಮಂದಿಗೆ ಮಾತ್ರ ಆಗ್ರಾಗೆ ಹೋಗಲು ಅನುಮತಿ ನೀಡಲಾಯಿತು.
ಲಕ್ನೋ: ಮದುವೆಯಾದ 10ನೇ ದಿನ ನವವಿವಾಹಿತೆ 8 ತಿಂಗಳ ಗರ್ಭಿಣಿ ಆಗಿದ್ದಾಳೆ ಎಂದು ವೈದ್ಯರು ಹೇಳಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
ನವವಿವಾಹಿತ ಯುವತಿ ಮದುವೆಯಾಗಿ 10 ದಿನಕ್ಕೆ ವಿಪರೀತ ಹೊಟ್ಟೆ ನೋವು ಎಂದಳು, ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆಗ ವೈದ್ಯರು ಪರೀಕ್ಷೆ ನಡೆಸಿದಾಗ ಯುವತಿ 8 ತಿಂಗಳ ಗರ್ಭಿಣಿ ಎಂದು ತಿಳಿದಿದೆ. ವಿಷಯ ತಿಳಿದ ಪತಿ ಮತ್ತು ಮನೆಯವರಿಗೆ ಶಾಕ್ ಆಗಿದೆ. ಇದನ್ನೂ ಓದಿ:RSS ಒಂದು ಕೋಮುವಾದಿ ಸಂಘಟನೆ- ಸಿದ್ದರಾಮಯ್ಯ
ಮದುವೆಗೂ ಮುಂಚೆಯೇ ಇವರಿಬ್ಬರೂ ಒಟ್ಟಿಗಿದ್ದರು, ಆದ್ದರಿಂದಲೇ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಮಾತನಾಡಿದ್ದಾರೆ. ಅದಕ್ಕೆ ಉತ್ತರಿಸಿದ ಪತಿ, ತಾನು ಆಕೆಯೊಂದಿಗೆ ಮದುವೆಗೆ ಮುನ್ನ ಯಾವುದೇ ದೈಹಿಕ ಸಂಪರ್ಕ ಹೊಂದಿರಲಿಲ್ಲ. ಈ ಗರ್ಭಕ್ಕೂ ತನಗೂ ಸಂಬಂಧವಿಲ್ಲ ಎಂದಿದ್ದಾನೆ. ಮನೆಯವರ ಒತ್ತಾಯಕ್ಕೆ ಈ ಹುಡುಗಿ ಮದುವೆಗೆ ಆಗಿದ್ದಾಳೆ ಎನ್ನುವುದು ನಂತರ ತಿಳಿದು ಬಂದಿದೆ. ಇದನ್ನೂ ಓದಿ:ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ
ಯುವತಿಗೆ ತನ್ನ ಪ್ರಿಯಕರನನ್ನೇ ಮದುವೆಯಾಗಲು ಮನಸ್ಸಿತ್ತಂತೆ. ಆದರೆ ಮನೆಯವರು ಅದಕ್ಕೆ ಒಪ್ಪಿರಲಿಲ್ಲ. ಪ್ರೀತಿಸಿದವನನ್ನು ಮದುವೆಯಾಗಲು ಬಿಡದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿ ಬೆದರಿಸಿದ್ದಳಂತೆ. ಈ ಎಲ್ಲಾ ವಿಚಾರಗಳನ್ನು ನೆರೆಹೊರೆಯವರು ಈಗ ಹೇಳುತ್ತಿದ್ದಾರೆ.
ಲಕ್ನೋ: ಮಗ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವಾಗಿ ಮನನೊಂದಿದ್ದ ಮಾವ ಸೊಸೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.
ಪಿಂಕಿ, ಅಮಿತ್ ಬನ್ಸಾಲ್ ಮೃತರು. ರಾಮ್ ಕಿಶನ್ ಆರೋಪಿಯಾಗಿದ್ದಾನೆ. ಈತನ ಮಗ ನೇಣು ಬಿಗಿದುಕೊಂಡು ಆತ್ಮಹ್ಯೆ ಮಾಡಿಕೊಂಡಿದ್ದಾನೆ. ಮಗನನ್ನು ಕಳೆದುಕೊಂಡಿದ್ದ ಕೋಪವನ್ನು ಸೊಸೆಯ ಮೇಲೆ ತಿರಿಸಿಕೊಳ್ಳಲು ಆಕೆಯನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಗಾನಗಂಧರ್ವ ಭಾಗವತ ಪದ್ಯಾಣ ಗಣಪತಿ ಭಟ್ ಇನ್ನಿಲ್ಲ
ಮೀರತ್ನಲ್ಲಿರುವ ತನ್ನ ಕಚೇರಿಯಲ್ಲಿ ರಾಮ್ ಕಿಶನ್ ಮಗ ಆತ್ಮಹತ್ಯೆಗೆ ಶರಣಾಗಿದ್ದನು. ಮಗ ಅಮಿತ್ ಬನ್ಸಾಲ್ ಒಳಾಂಗಣ ವಿನ್ಯಾಸಕಾರನಾಗಿ( Interior Designer) ಕೆಲಸ ಮಾಡುತ್ತಿದ್ದ. ತನ್ನ ಮಗನ ಸಾವಿನಿಂದ ಕೋಪಗೊಂಡ ರಾಮ್ ಕಿಶನ್ ತನ್ನ ಸೊಸೆಯನ್ನು ಕಟ್ಟರ್ ನಿಂದ ಹೊಡೆದು ಬನ್ಸಾಲ್ ಕಚೇರಿಯಲ್ಲಿ ಗಂಭೀರವಾಗಿ ಗಾಯಗೊಳಿಸಿದ್ದನು. ಇಡೀ ಘಟನೆಯು ಕಚೇರಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?
ಘಟನೆ ನಡೆದ ದಿನ ಪಿಂಕಿ ತನ್ನ ಪತಿ ಅಮಿತ್ ಬನ್ಸಾಲ್‍ಗೆ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ. ನಂತರ ಆತನ ಕಚೇರಿಗೆ ಹೋದಾಗ ಅಮಿತ್ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದನು. ಈ ವೇಳೆ ಪಿಂಕಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಗ ಮಾವ ಕೂಡ ಕಚೇರಿಗೆ ಬಂದಿದ್ದಾನೆ. ಮಗನ ಸಾವನ್ನು ಕಂಡು ಕೆಂಡಾಮಂಡಲನಾಗಿದ್ದಾನೆ. ರಾಮ್ ಕಿಶನ್ ಕೋಪದಿಂದ ಪಿಂಕಿಯನ್ನು ಥಳಿಸಿ, ಕಟ್ಟರ್ ನಿಂದ ಅವಳ ಮೇಲೆ ಹಲ್ಲೆ ಮಾಡಿದನು. ಆಗ ಸ್ಥಳಕ್ಕೆ ನೌಚಂಡಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಗಾಯಗೊಂಡಿದ್ದ ಪಿಂಕಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪಿಂಕಿ ಸಾವನ್ನಪಿದ್ದಾಳೆ.
ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ರಾಮ್ ಕಿಶನ್‍ನನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ. ಪಿಂಕಿ ಗಾಜಿಯಾಬಾದ್ ಮೂಲದವಳಾಗಿದ್ದು, ಮೃತ ದಂಪತಿಗೆ 8 ತಿಂಗಳ ಮಗಳಿದ್ದಾಳೆ.
ಲಕ್ನೋ: ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರ ಸಂಘರ್ಷದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರದ ಹಣ ಬೇಕಿಲ್ಲ. ಆದರೆ ಅವರಿಗೆ ನ್ಯಾಯ ಬೇಕಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಆ ಕುಟುಂಬಗಳಿಗೆ ಭೇಟಿ ನೀಡಿದಾಗ ಅವರು ಸರ್ಕಾರದಿಂದ 45 ಲಕ್ಷ ರೂಪಾಯಿ ಪರಿಹಾರ ನೀಡಿರುವುದಾಗಿ ತಿಳಿಸಿದರು. ಆದರೆ ಅವರಿಗೆ ಬೇಕಾಗಿರುವುದು ಹಣವಲ್ಲ ನ್ಯಾಯ ಎಂದು ನುಡಿದಿದ್ದಾರೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ, ಆರೋಪಿ ಆಶಿಶ್ ಮಿಶ್ರಾ ಅವರ ತಂದೆ ಕ್ಯಾಬಿನೆಟ್‍ನಲ್ಲಿ ತಮ್ಮ ಸ್ಥಾನದಲ್ಲಿರುವವರೆಗೂ ನ್ಯಾಯಯುತವಾಗಿ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಈ ಘಟನೆ ಕುರಿತಂತೆ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದು, ಗೃಹ ಸಚಿವರು ಕೂಡ ಅಲ್ಲಿಯೇ ಇರುವುದರಿಂದ ನ್ಯಾಯಯುತವಾಗಿ ತನಿಖೆ ನಡೆಸಲಾಗುತ್ತದೆ ಎಂಬುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಲಖಿಂಪುರ ಖೇರಿ ಹಿಂಸಾಚಾರ- ಯುಪಿ ಸರ್ಕಾರದಿಂದ 45 ಲಕ್ಷ ರೂ.ಪರಿಹಾರ ಘೋಷಣೆ
ಇದೇ ವೇಳೆ ಆಶಿಶ್ ಮಿಶ್ರಾ ಬಂಧನ ವಿಳಂಬ ಕುರಿತಂತೆ ಮಾತನಾಡಿದ ಅವರು, ಪೊಲೀಸರು ಎರಡು ಬಾರಿ ಆತನಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ. ಕೊಲೆಗಾರನನ್ನು ಬಂಧಿಸುವ ಮೊದಲು ಆತನು ಚೇತರಿಸಿಕೊಳ್ಳಲು ಸಮಯ ನೀಡಲಾಗಿದೆಯೇ? ಪೊಲೀಸರು ಯಾಕೆ ಆತನನ್ನು ಇನ್ನೂ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಯವರು, ಮಗನ ವಿರುದ್ಧ ಕೊಲೆ ಆರೋಪ ಇರುವುದರಿಂದ ಅಜಯ್ ಮಿಶ್ರಾ ತೆನಿ ಅವರನ್ನು ಕೆಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ
ಇತ್ತೀಚೆಗಷ್ಟೇ ಮೋದಿಯವರು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಕ್ನೋಗೆ ಭೇಟಿ ನೀಡಿ 3 ದಿನಗಳ ಕಾಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ದೇಶದ ಜನರಿಗೆ ನೀವು ಏನು ಸಂದೇಶ ನೀಡಿದ್ದೀರಾ ಎಂದು ಕೇಳಲು ಬಯಸುತ್ತೇನೆ. ನೀವು ಇಲ್ಲಿಗೆ ಬಂದಿದ್ದರೂ ಒಂದು ಮಾತು ಕೂಡ ಆಡಲಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗೆಸ್ಟ್ ಹೌಸ್‌ನಲ್ಲಿ ಕಸ ಗುಡಿಸುತ್ತಿರೋ ಪ್ರಿಯಾಂಕಾ ಗಾಂಧಿ ವೀಡಿಯೋ ವೈರಲ್
ನೀವು ಸಾಮಾನ್ಯ ವ್ಯಕ್ತಿಯಾಗಿದ್ದರೆ, ದಲಿತ, ಬಡ ಮಹಿಳೆಯರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನೀವು ದೇಶಕ್ಕೆ ಸಂದೇಶ ಸಾರಲು ಬಯಸಿದರೆ, ನೀವು ಅಧಿಕಾದಲ್ಲಿದ್ದರೆ, ನೀವು ಹೃದಯ ಶ್ರೀಮಂತ ವ್ಯಕ್ತಿಯಾಗಿದ್ದರೆ ಅಥವಾ ನೀವು ಬಿಜೆಪಿ ನಾಯಕರೇ ಆಗಿದ್ದರೆ, ನಿಮಗೆ ನ್ಯಾಯ ದಕ್ಕಿಸಿಕೊಡಬಹುದಾದ ಶಕ್ತಿ ಇದೆ. ಒಂದು ವೇಳೆ ನೀವು ನ್ಯಾಯ ಒದಗಿಸಿ ಕೊಟ್ಟರೆ ದೇಶದ ಪ್ರಧಾನಿ ಯಾರಿಗೂ ಹೆದರುವುದಿಲ್ಲ ಎಂಬ ಸಂದೇಶ ನೀಡಿದಂತೆ ಆಗುತ್ತದೆ. ಸಚಿವರಿಗೆ ಯಾವುದೇ ರೀತಿಯ ಕಾನೂನು ಅನ್ವಯವಾಗುವುದಿಲ್ಲ ಮತ್ತು ತೊಂದರೆಯಾಗುವುದಿಲ್ಲ. ತನಿಖೆ ಮಾಡುವ ಅವಶ್ಯಕತೆ ಕೂಡ ಇರುವುದಿಲ್ಲ. ಆದರೆ ನ್ಯಾಯ ಒದಗಿಸದೇ ಇದ್ದಲ್ಲಿ ಇದು ಸಾರ್ವಜನಿಕರಿಗೆ ತಪ್ಪಾದ ಸಂದೇಶ ಸಾರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.