Tag: lucknow

  • ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್

    ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್

    ಲಕ್ನೋ: ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಮಾಜವಾದಿ ಪಕ್ಷದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

    ‘ಜನ್ ವಿಶ್ವಾಸ ಯಾತ್ರೆ’ ಯಲ್ಲಿ ಯುಪಿಯ ಕೌಶಂಬಿಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಜನರ ಹಣವನ್ನು ಲೂಟಿ ಮಾಡುತ್ತಿತ್ತು. ಆದರೆ ಈಗ ನಮ್ಮ ಸರ್ಕಾರ ಕಲ್ಯಾಣ ಯೋಜನೆಗಳಿಗೆ ಹಣವನ್ನು ಖರ್ಚು ಮಾಡಲಾಗುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕೋಟ್ಯಂತರ ರೂ. ದುರುಪಯೋಗ ಪಡಿಸಿಕೊಳ್ಳಲಾಗುತ್ತಿತ್ತು. ಆದರೆ ನಮ್ಮ ಸರ್ಕಾರ ಸಂಪೂರ್ಣ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದರು. ಇದನ್ನೂ ಓದಿ: ನಾನು ’24 ಕ್ಯಾರೆಟ್ ಕಾಂಗ್ರೆಸ್ಸಿಗ’, ಪಕ್ಷದೊಂದಿಗೆ ಯಾವುದೇ ಅಸಮಾಧಾನವಿಲ್ಲ: ಗುಲಾಂ ನಬಿ ಆಜಾದ್

    ಕೋವಿಡ್-19 ಲಸಿಕೆಗಳನ್ನು ಪ್ರತಿಪಕ್ಷಗಳು ವಿರೋಧಿಸುವ ಮೂಲಕ ಮಾನವೀಯತೆಯ ವಿರುದ್ಧ ಅಪರಾಧ ಎಸಗಿವೆ. ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ. ಅವರಿಗೆ ಬಡವರ ಬಗ್ಗೆ ಕಾಳಜಿಯಿಲ್ಲ. ಹಿಂದೆ ಅವರಿಗೆ ಜನರನ್ನು ಕಾಯಲು ಅವಕಾಶ ಸಿಕ್ಕಿತ್ತು. ಆದರೆ ಅವರು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕೆ ಈಗ ಅವರು ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದು, ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು.

    ಪಿಯೂಷ್ ಜೈನ್ ಅವರ ಮೇಲೆ ಕೇಂದ್ರೀಯ ಸಂಸ್ಥೆಗಳು ಇತ್ತೀಚೆಗೆ ದಾಳಿ ನಡೆಸಿದ್ದು, ಅವರ ಬಳಿ ಒಟ್ಟು 177.45 ಕೋಟಿ ನಗದು ಪತ್ತೆಯಾಗಿತ್ತು. ಈ ಹಿನ್ನೆಲೆ ಕಾನ್ಪುರದ ಉದ್ಯಮಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಐದು ವರ್ಷಗಳ ಕಾಲ ಅಧಿಕಾರದಿಂದ ಹೊರಗುಳಿದಿದ್ದರೂ, ಇಂದಿಗೂ ಅವರ ಮನೆಯ ಗೋಡೆಗಳಿಂದ ಕೋಟಿಗಟ್ಟಲೆ ಕರೆನ್ಸಿ ನೋಟುಗಳು ಹೊರಬರುತ್ತಿವೆ. ಇದನ್ನು ನೀವು ಸಹ ನೋಡಬಹುದು ಎಂದು ಟೀಕಿಸಿದರು.

    ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ಜನರಿಗೆ ನೀಡುತ್ತಿರುವ ಉಚಿತ ಆಹಾರದ ಹಣವನ್ನು, ಹಿಂದಿನ ಸರ್ಕಾರ ಭ್ರಷ್ಟಾಚಾರಕ್ಕೆ ಬಳಸುತ್ತಿತ್ತು ಎಂದು ಕಿಡಿಕಾರಿದರು. ಇದನ್ನೂ ಓದಿ: ಬಂಗಾಳದ ಐವರು ಬಿಜೆಪಿ ಶಾಸಕರು ಪಕ್ಷ ತೊರೆಯಬಹುದು: ಬಾಬುಲ್ ಸುಪ್ರಿಯೋ

    ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ ಅವರು, ಕೌಶಾಂಬಿಯಲ್ಲಿ ಸುಮಾರು 50,000 ಕುಟುಂಬಗಳಿಗೆ ಹೊಸ ಮನೆಗಳನ್ನು ಮಂಜೂರು ಮಾಡಲಾಗಿದೆ. ಮೊದಲು ಕಾವೇರಿ ಯಾತ್ರೆಗೆ ನಿರ್ಬಂಧವಿತ್ತು, ಆದರೆ ನಮ್ಮ ಸರ್ಕಾರ ಯಾತ್ರೆಗೆ ಬೇಕಾದ ಅನುಕೂಲವನ್ನು ಮಾಡಿಕೊಟ್ಟಿದೆ. ಈ ಹಿಂದೆ ಪ್ರಯಾಗ್‍ರಾಜ್‍ನ ಕುಂಭದಲ್ಲಿ ಕಾಲ್ತುಳಿತವಾಗಿತ್ತು. ಈಗ ಪ್ರಯಾಗ್‍ರಾಜ್‍ನಲ್ಲಿ ಕುಂಭ ಆಯೋಜಿಸಿದಾಗ, ಯಾವುದೇ ರೀತಿಯ ಅಪಾಯವು ಆಗಲಿಲ್ಲ. ಈ ಸಿದ್ಧತೆಗಳನ್ನು ನೋಡಿದ ಪ್ರಪಂಚದ ಎಲ್ಲ ಭಾಗಗಳ ಭಕ್ತರು ಶ್ಲಾಘಿಸಿದ್ದಾರೆ ಎಂದು ತಿಳಿಸಿದರು.

  • ಎಸ್‍ಪಿ ಆಡಳಿತವಿದ್ದಾಗ ಕೋಮುಗಲಭೆ, ಬಿಜೆಪಿಯಿಂದ ಅಭಿವೃದ್ಧಿ: ಅನುರಾಗ್ ಠಾಕೂರ್

    ಎಸ್‍ಪಿ ಆಡಳಿತವಿದ್ದಾಗ ಕೋಮುಗಲಭೆ, ಬಿಜೆಪಿಯಿಂದ ಅಭಿವೃದ್ಧಿ: ಅನುರಾಗ್ ಠಾಕೂರ್

    ಲಕ್ನೋ: ಸಮಾಜವಾದಿ ಪಕ್ಷವು ಉತ್ತರಪ್ರದೇಶವನ್ನು ಆಳುವಾಗ ರಾಜ್ಯವು ಕೋಮುಗಲಭೆಗೆ ಸಾಕ್ಷಿಯಾಗಿತ್ತು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.

    ಆಗ್ರಾದಲ್ಲಿ ನಡೆದ ಎಂಪಿ ಕ್ರೀಡಾ ಸ್ಪರ್ಧೆಯ ಸಮಾರಂಭದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷವು 2017 ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೊದಲು, ಸಮಾಜವಾದಿ ಪಕ್ಷ ಉತ್ತರಪ್ರದೇಶವನ್ನು ಆಳುತ್ತಿತ್ತು. ಆದರೆ ಆ ಸಂದರ್ಭದಲ್ಲಿ ರಾಜ್ಯವು ಕೋಮುಗಲಭೆಗೆ ಸಾಕ್ಷಿಯಾಗಿತ್ತು ಎಂದು ಆರೋಪಿಸಿದರು. ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ ಮುಂದೂಡಿ, ರ‍್ಯಾಲಿ-ಸಮಾರಂಭ ನಿಲ್ಲಿಸಿ: ಚುನಾವಣಾ ಆಯೋಗ, ಕೇಂದ್ರಕ್ಕೆ ಕೋರ್ಟ್‌ ಒತ್ತಾಯ

    ನಮ್ಮ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಕ್ರೀಡಾಕೂಟಗಳನ್ನು ನಡೆಸುತ್ತಿವೆ. ದೇಶದಲ್ಲಿ ಅಥವಾ ದೇಶದ ಹೊರಗೆ ಯಾರು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೋ ಅವರನ್ನ ಯಾವುದೇ ಕಾರಣಕ್ಕೂ ಉಳಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಉತ್ತರ ಪ್ರದೇಶದಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಜಾರಿ

    ಕ್ರೀಡಾ ಕೂಟವನ್ನು ಉದ್ದೇಶಿಸಿ ಪ್ರತಿಕ್ರಿಯೆ ನೀಡಿದ ಅವರು, ಈ ಕ್ರೀಡಾ ಕೂಟವು ಪ್ರತಿ ವರ್ಷ ಎಲ್ಲಾ ಸಂಸದೀಯ ಕ್ಷೇತ್ರಗಳಲ್ಲಿ ನಡೆಸುತ್ತೇವೆ. ಇಂತಹ ಕ್ರೀಡಾ ಸ್ಪರ್ಧೆಗಳು ನಮ್ಮ ದೇಶದ ಆಟಗಾರಿಗೆ ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯ ಆಗುತ್ತದೆ ಎಂದರು.

    ನಗರದ ಬಹುಬೇಡಿಕೆಯಾಗಿರುವ ಹೊಸ ಅಂತರಾಷ್ಟ್ರೀಯ ಕ್ರೀಡಾಂಗಣ ಆಗ್ರಾದಲ್ಲಿ ನಿರ್ಮಿಸುತ್ತೇವೆ. ಈ ಕ್ರೀಡಾಂಗಣದಲ್ಲಿ ಗ್ರ್ಯಾಂಡ್ ಕ್ರೀಡಾಕೂಟಗಳನ್ನು ಆಯೋಜಿಸುತ್ತೇವೆ. ಈ ಹಿಂದೆ ಕೇಂದ್ರ ಸಚಿವ ಎಸ್‍ಪಿ ಸಿಂಗ್ ಬಾಘೆಲ್, ಲೋಕಸಭೆ ಸಂಸದ ರಾಜ್‍ಕುಮಾರ್ ಚಹಾರ್, ಅವರು ಈ ಕ್ರೀಡಾಂಗಣ ನಿರ್ಮಿಸಲು ಒತ್ತಾಯಿಸಿದ್ದರು. ಆದರೆ ಹಿಂದಿನ ಸರ್ಕಾರವು ಈ ಕ್ರೀಡಾಂಗಣದ ಬೇಡಿಕೆಯನ್ನು ನಿರ್ಲಕ್ಷಿಸಿತ್ತು. ನಮ್ಮ ಸರ್ಕಾರವು ಜನಪರವಾದ ಸರ್ಕಾರವಾಗಿದೆ ಎಂದರು.

  • ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಗತ್ಯವಿಲ್ಲ: ರಾಕೇಶ್ ಟಿಕಾಯತ್

    ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಗತ್ಯವಿಲ್ಲ: ರಾಕೇಶ್ ಟಿಕಾಯತ್

    ಲಕ್ನೋ: ನಾನು ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ, ಅದರ ಅಗತ್ಯವೂ ಇಲ್ಲ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

    ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಚುನಾವಣೆಗೆ ಸ್ಪರ್ಧಿಸುವಂತೆ ರಾಕೇಶ್ ಟಿಕಾಯತ್ ಅವರಿಗೆ ಮನವಿ ಮಾಡಿದ್ದರು. ಆದರೆ ಆ ಮನವಿಯನ್ನು ಟಿಕಾಯತ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಉತ್ತರಪ್ರದೇಶದ ಶಾಮ್ಲಿಯಲ್ಲಿ ಮಾತನಾಡಿರುವ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಅಗತ್ಯವಿಲ್ಲ. ಉತ್ತರಪ್ರದೇಶದಲ್ಲಿ ವಿದ್ಯುತ್ ದರ ಹೆಚ್ಚಳ ಹಾಗೂ ರಾಜ್ಯದ ಕಬ್ಬು ಬೆಳೆಗಾರರಿಗೆ ಹಣ ಪಾವತಿ ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುವುದರ ವಿರುದ್ಧ ಮತ್ತೇ ಹೋರಾಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಚೀನಾದ 135 ವರ್ಷದ ವೃದ್ಧೆ ಸಾವು

    ರಾಜ್ಯ ಸರ್ಕಾರವು ಕಬ್ಬು ಬೆಳೆಗಾರರಿಗೆ ಸಮಯಕ್ಕೆ ಸರಿಯಾಗಿ ಹಣ ನೀಡುವಂತೆ ನೋಡಿಕೊಳ್ಳಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹರಿಯಾಣದಲ್ಲಿ ವಿದ್ಯುತ್ ದರ ಎಷ್ಟಿದೆಯೋ ಆ ದರವನ್ನು ಉತ್ತರಪ್ರದೇಶದಲ್ಲೂ ಅಳವಡಿಕೆ ಮಾಡಿಕೊಳ್ಳಬೇಕು. ಶಿಕ್ಷಣ, ನಿರುದ್ಯೋಗ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆಯೂ ದನಿಯೆತ್ತಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 18ನೇ ವಯಸ್ಸಿಗೆ ಪ್ರಧಾನಿಯನ್ನೇ ಆಯ್ಕೆ ಮಾಡುವ ಹೆಣ್ಣಿಗೆ ಬಾಳ ಸಂಗಾತಿ ಹೊಂದುವ ಹಕ್ಕು ಯಾಕಿಲ್ಲ: ಓವೈಸಿ ಪ್ರಶ್ನೆ

    ನಾನು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡುವುದಿಲ್ಲ. ರಾಜಕೀಯ ಪಕ್ಷಗಳು ತಮ್ಮ ಬ್ಯಾನರ್‌ನಲ್ಲಿ ನನ್ನ ಫೋಟೋ ಹಾಗೂ ಹೆಸರನ್ನು ಬಳಕೆ ಮಾಡಬಾರದು ಎಂದು ಹೇಳಿದ್ದರು. ಹಾಗೆ ಹೋರಾಟ ಮುಂದುವರೆಸುವುದಾಗಿಯೂ ಈ ಹಿಂದೆ ರಾಜಕೀಯ ಪಕ್ಷಗಳಿಗೆ ಎಚ್ಚರಿಗೆ ನೀಡಿದ್ದರು. ಇದನ್ನೂ ಓದಿ:  ಮಂಗ, ಶ್ವಾನಗಳ ವಾರ್‌ನಲ್ಲಿ ಪ್ರಾಣ ಕಳೆದುಕೊಂಡ 80 ನಾಯಿಮರಿಗಳು

  • 10 ಲಕ್ಷ ರೂ. ವರದಕ್ಷಿಣೆ ಕೇಳಿದ ವರನಿಗೆ ಮದುವೆ ಮನೆಯಲ್ಲೇ ಬಿತ್ತು ಗುಸಾ

    10 ಲಕ್ಷ ರೂ. ವರದಕ್ಷಿಣೆ ಕೇಳಿದ ವರನಿಗೆ ಮದುವೆ ಮನೆಯಲ್ಲೇ ಬಿತ್ತು ಗುಸಾ

    ಲಕ್ನೋ: ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ಪ್ರದೇಶದಲ್ಲಿ ವರನೊಬ್ಬ ಮದುವೆ ಸಮಯದಲ್ಲಿ ಹೆಚ್ಚು ಹಣ ಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾನೆ. ಈ ಪರಿಣಾಮ ಅಲ್ಲಿದ್ದ ಜನರು ಆತನನ್ನು ಥಳಿಸಿದ್ದು, ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡಲಾಗಿದೆ.

    ಸಾಹಿಬಾಬಾದ್‍ನ ಬ್ಯಾಂಕ್ವೆಟ್ ಹಾಲ್‍ನಲ್ಲಿ ಶುಕ್ರವಾರ ರಾತ್ರಿ ಆರತಕ್ಷತೆ ಸಮಾರಂಭ ನಡೆಯುತ್ತಿದ್ದು, ಈ ವೇಳೆ ವರನ ಕಡೆಯವರು 10 ಲಕ್ಷ ರೂ. ವರದಕ್ಷಿಣೆ ಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ವಧುವಿನ ಕಡೆಯವರು ವರನ ಜೊತೆ ಕೆಟ್ಟದಾಗಿ ಮಾತನಾಡು ಪ್ರಾರಂಭಿಸಿದ್ದಾರೆ. ನಂತರ ವರನನ್ನು ಮಂಟಪದಿಂದ ಎಳೆದೊಯ್ದು ಥಳಿಸಲು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ:  ಎರಡು ವರ್ಷಗಳಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ 57 ನೌಕರರ ವಿರುದ್ಧ ಶಿಸ್ತುಕ್ರಮ

    ಈ ವೇಳೆ ಆತನ ಸಂಬಂಧಿ ವಧುವಿನ ಕಡೆಯವರನ್ನು ತಡೆದಿದ್ದಾರೆ. ಗಲಾಟೆ ನಡೆಯುತ್ತಿರಬೇಕಾದರೆ ಸಂಭಾಗಣದಲ್ಲಿದ್ದ ಜನರು ಈ ಘಟನೆಯನ್ನು ಫೋನ್ ನಲ್ಲಿ ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಅದು ಅಲ್ಲದೇ ವರನ ವಿರುದ್ಧ ದೂರು ಸಹ ದಾಖಲಾಗಿದೆ.

    ವರನಿಗೆ 10 ಲಕ್ಷ ರೂ!
    ವಧುವಿನ ಪೋಷಕರಿಗೆ ವರನ ತಂದೆ ವರದಕ್ಷಿಣೆಯಾಗಿ 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದು, ಒಂದು ವೇಳೆ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮದುವೆಯನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ – 13 ಮಂದಿಗೆ 20 ವರ್ಷ ಜೈಲು

    ಅದು ಅಲ್ಲದೇ ವಧುವಿನ ಮನೆಯವರು ಈಗಾಗಲೇ 3 ಲಕ್ಷ ರೂಪಾಯಿ ನಗದು ಮತ್ತು 1 ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರವನ್ನು ವರನಿಗೆ ನೀಡಿದ್ದು, ಆದರೂ ಅವರು ಇನ್ನು ಹೆಚ್ಚು ಹಣಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ ನಮಗೆ ಇನ್ನು ಹೆಚ್ಚು ಕೊಡಲು ಸಾಧ್ಯವಾಗಲ್ಲ ಎಂದು ವರನ ಕಡೆಯವರಿಗೆ ಎಷ್ಟೇ ಮನವೊಲಿಸಿದರೂ ಅವರಿಗೆ ಮನವರಿಕೆ ಆಗಲಿಲ್ಲ. ಇದರಿಂದ ಕೋಪಗೊಂಡ ವಧುವಿನ ಮನೆಯವರು ವರನಿಗೆ ಥಳಿಸಿದ್ದಾರೆ.

    ವರನನ್ನು ಮುಝಮ್ಮಿಲ್ ಎಂದು ಗುರುತಿಸಲಾಗಿದ್ದು, ಆಗ್ರಾ ನಿವಾಸಿಯಾಗಿದ್ದಾನೆ. ಈತ ಈ ಹಿಂದೆ 2-3 ಬಾರಿ ಮದುವೆಯಾಗಿದ್ದಾನೆ ಎಂದು ವಧುವಿನ ಕಡೆಯವರು ಆರೋಪಿಸಿದ್ದಾರೆ.

  • ಮಹಿಳೆಯ ಕಾಲಿಗೆ ನಮಸ್ಕರಿಸಿದ ಮೋದಿ

    ಮಹಿಳೆಯ ಕಾಲಿಗೆ ನಮಸ್ಕರಿಸಿದ ಮೋದಿ

    ಲಕ್ನೋ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮನ್ನು ಭೇಟಿಯಾಗಲು ಬಂದಿದ್ದ ದಿವ್ಯಾಂಗ ಮಹಿಳೆಯೊರ್ವರ ಕಾಲಿಗೆ ಬಗ್ಗಿ ನಮಸ್ಕರಿಸಿದ್ದಾರೆ.

    ಡಿ.13 ರಂದು ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆ ಮೋದಿ ವಾರಣಾಸಿಗೆ ಆಗಮಿಸಿದ್ದರು. ಉದ್ಘಾಟನೆ ಬಳಿಕ ಮೋದಿ ಅವರನ್ನು ಭೇಟಿ ಮಾಡಲು ಶಿಖಾ ರಸ್ತೋಗಿ ಅವರು ಬಂದಿದ್ದರು. ಮಹಿಳೆಯನ್ನು ನೋಡಿದ ಪ್ರಧಾನಿ ತಕ್ಷಣವೇ ಆಕೆಯ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಈ ವೇಳೆ ಅವರು ಪ್ರಧಾನಿ ಮೋದಿಯವರನ್ನು ಕಂಡ ತಕ್ಷಣ ನಮಸ್ಕರಿಸಲು ಮುಂದಾಗಿದ್ದಾರೆ. ಆದರೆ ಅವರನ್ನು ತಡೆದು ಮೋದಿಯವರೇ ಆಕೆಯ ಕಾಲಿಗೆ ನಮಸ್ಕಾರಿಸಿದ್ದಾರೆ. ಅಂಗವಿಕಲ ಮಹಿಳೆಯ ಪಾದಗಳನ್ನು ಸ್ಪರ್ಶಿಸಿದ ದೃಶ್ಯವು ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುವುದರ ಜೊತೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಳಿಕೂದಲಿನಲ್ಲಿಯೇ ಹಸೆಮಣೆಯೇರಿದ ನಟನ ಮಗಳು

    ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಕೂಡ ಟ್ವಿಟ್ಟರ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ಎಲ್ಲಾ ಮಹಿಳಾ ಶಕ್ತಿಗೆ ದೊಡ್ಡ ಗೌರವವಾಗಿದೆ. ನಾವೆಲ್ಲರೂ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪತ್ನಿ ಜೊತೆಗೆ ರೋಮ್ಯಾಂಟಿಕ್ ಆಗಿ ಸ್ಟೆಪ್ಸ್ ಹಾಕಿದ ನಿಖಿಲ್

    ಬಳಿಕ ಮಾತನಾಡಿದ ಶಿಖಾ ಸಹೋದರ ವಿಶಾಲ್ ರಸ್ತೋಗಿ, ಶಿಖಾ ಹುಟ್ಟಿನಿಂದಲೇ ಅಂಗವಿಕಲಳು. ನನ್ನ ಸಹೋದರಿಯ ಬಗ್ಗೆ ನನಗೆ ಹೆಮ್ಮೆ ಇದೆ. ಮನೆಯಲ್ಲಿ ದಿವ್ಯಾಂಗ ಇರುವವರನ್ನು ದುರ್ಬಲರು ಎಂದು ಪರಿಗಣಿಸಬೇಡಿ ಎಂದು ನಾನು ಮನವಿ ಮಾಡಲು ಬಯಸುತ್ತೇನೆ ಎಂದಿದ್ದಾರೆ. ಮಹಿಳೆ ಕಾಲಿಗೆ ನಮಸ್ಕರಿಸಿದ ಮೋದಿ ಅವರ ಈ ಫೋಟೋವನ್ನು ಹಲವರು ಸಾಮಾಜಿಕ ಜಾಲತಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಗಂಗಾ ನದಿ ಕೊಳಕು ಅಂತ ತಿಳಿದಿದ್ದಕ್ಕೆ ಯೋಗಿ ಸ್ನಾನ ಮಾಡಲಿಲ್ಲ: ಅಖಿಲೇಶ್ ಯಾದವ್

    ಗಂಗಾ ನದಿ ಕೊಳಕು ಅಂತ ತಿಳಿದಿದ್ದಕ್ಕೆ ಯೋಗಿ ಸ್ನಾನ ಮಾಡಲಿಲ್ಲ: ಅಖಿಲೇಶ್ ಯಾದವ್

    ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಗಂಗಾ ನದಿ ಕೊಳಕು ಎಂದು ತಿಳಿದಿತ್ತು. ಹೀಗಾಗಿ ಅವರು ಸ್ನಾನ ಮಾಡಲಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.

    ಗಂಗಾ ನದಿ ಶುದ್ಧಿಕರಣಕ್ಕೆ ಬಿಜೆಪಿ ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡಿದೆಯಂತೆ ಆದರೆ ಗಂಗಾ ನದಿ ಕೊಳಕು ಎಂದು ಆದಿತ್ಯನಾಥ್ ಸ್ನಾನ ಮಾಡಲು ಹಿಂಜರಿದರು. ನನ್ನ ಪ್ರಶ್ನೆ ಏನೆಂದರೆ ಗಂಗಾ ಮಾತೆ ಎಂದಾದರೂ ಸ್ವಚ್ಛವಾಗಿದ್ದಾಳೆಯೇ? ಫಂಡ್‍ಗಳು ಹರಿದು ಬಂದರೂ ನದಿಯನ್ನು ಇನ್ನೂ ಸ್ವಚ್ಛಗೊಳಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಎರಡು ದಿನಗಳ ಕಾಲ ವಾರಣಾಸಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಉದ್ಘಾಟಿಸುವ ಮುನ್ನ ಸೋಮವಾರ ಲಲಿತಾ ಘಾಟ್‍ನಲ್ಲಿ ಪ್ರಾರ್ಥನೆ ಸಲ್ಲಿಸಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರು. ಇದನ್ನೂ ಓದಿ: ಹಣ ಬಲದ ಎದುರು ಜನ ಬಲಕ್ಕೆ ಸೋಲು: ಎಚ್‌ಡಿಕೆ

    ಇತ್ತೀಚೆಗಷ್ಟೇ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಸ್‍ಪಿ ಮತ್ತು ಬಿಜೆಪಿ ನಡುವಿನ ಇಬ್ಬರು ಸ್ಪರ್ಧಿಗಳ ನಡುವೆ ರಾಜಕೀಯ ಜಿದ್ದಾ, ಜಿದ್ದಿ ಸಿರೀಸ್ ಅನ್ನು ಅಖಿಲೇಶ್ ಯಾದವ್ ಅವರು ನೋಡಿ ಮಂಗಳವಾರ ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ: ಒಂದೇ ದಿನ 34 ಮಂದಿ ಮೇಲೆ ದಾಳಿ ಮಾಡಿದ ಶ್ವಾನ

    ವಾರಣಾಸಿಗೆ ಪ್ರಧಾನಿ ಮೋದಿ ಭೇಟಿ ನೀಡಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಜನರು ತಮ್ಮ ಅಂತಿಮ ದಿನಗಳನ್ನು ವಾರಣಾಸಿಯಲ್ಲಿ ಕಳೆಯುತ್ತಾರೆ ಎಂದು ಟಾಂಗ್ ನೀಡಿದ್ದಾರೆ.

  • ಮದುವೆ ಎಂದಿದ್ದಕ್ಕೆ ಕತ್ತು ಹಿಸುಕಿ ಕೊಲೆ ಮಾಡಿದ ಪ್ರಿಯಕರ!

    ಮದುವೆ ಎಂದಿದ್ದಕ್ಕೆ ಕತ್ತು ಹಿಸುಕಿ ಕೊಲೆ ಮಾಡಿದ ಪ್ರಿಯಕರ!

    ಲಕ್ನೋ: ಮಹಿಳೆಯೊಬ್ಬಳು ತನ್ನ ಪ್ರಿಯಕರನ್ನು ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಮಹಿಳೆಯೇ ಹತ್ಯೆಯಾದ ಘಟನೆ ಮಿರತ್‌ನಲ್ಲಿ ನಡೆದಿದೆ.

    ಸೈಫ್‌ಪುರ ಗ್ರಾಮದ ನಿವಾಸಿ ಕಾಂಚನಾ ಶರ್ಮಾ(22) ಕೊಲೆಯಾದ ಯುವತಿ. ಕಾಂಚನಾ ಬಿಎ ವಿದ್ಯಾರ್ಥಿನಿಯಾಗಿದ್ದು, ಹಸ್ತಿನಾಪುರದಲ್ಲಿ ಕಂಪ್ಯೂಟರ್ ಕೋಚಿಂಗ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಳು. ಮೂರು ತಿಂಗಳ ಹಿಂದೆ, ಅವಳು ರೋಹಿತ್‌ನನ್ನು ಭೇಟಿಯಾಗಿದ್ದಳು. ಈ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿತ್ತು.

    ಈ ಹಿನ್ನೆಲೆಯಲ್ಲಿ ಕಾಂಚನಾ ತನ್ನನ್ನು ಮದುವೆಯಾಗುವಂತೆ ರೋಹಿತ್‌ಗೆ ಒತ್ತಡ ಹೇರುತ್ತಿದ್ದಳು. ಬುಧವಾರ ಕಾಂಚನಾ ರೋಹಿತ್‌ಗೆ ಕರೆ ಮಾಡಿ, ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಈ ವಿಷಯ ಆರೋಪಿಯ ಕೋಪಕ್ಕೆ ಕಾರಣವಾಗಿದೆ. ನಂತರ ಅವರಿಬ್ಬರು ಭೇಟಿಯಾಗಿದ್ದಾರೆ. ಆಗ ರೋಹಿತ್ ಅವಳನ್ನು ಕಾರಿನಲ್ಲಿ ಕಾಡಿಗೆ ಕರೆದೊಯ್ದು ಕಾಂಚನಾಳ ಕತ್ತು ಹಿಸುಕಿದ್ದಾನೆ. ಅಲ್ಲದೆ ತನ್ನ ಸ್ನೇಹಿತರ ಸಹಾಯದಿಂದ ಕಾಂಚನಾಳನ್ನು ನದಿಗೆ ಎಸೆದಿದ್ದಾನೆ.

    ಕಾಂಚನಾ ಡಿ. 6ರಂದು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಅವಳ ತಂದೆ ಹಸ್ತಿನಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಪ್ರಾವಿಷನ್ ಸ್ಟೋರ್ ಮಾಲೀಕ ರೋಹಿತ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ಅಪಘಾತ – 49 ಮಂದಿ ಸಾವು, 58 ಮಂದಿಗೆ ಗಾಯ

    ರೋಹಿತ್ ಪ್ರಮುಖ ಆರೋಪಿಯಾಗಿದ್ದು, ರಾಹುಲ್ ಮತ್ತು ಸೌರಭ್ ಕೊಲೆಗೆ ಸಹಾಯ ಮಾಡಿದ್ದಾರೆ. ಮಹಿಳೆಯನ್ನು ಕೊಂದು ಶವವನ್ನು ಗಂಗಾ ನದಿಯಲ್ಲಿ ಎಸೆಯಲು ಸೌರಭ್‌ಗೆ ಅವನ ಸ್ನೇಹಿತರು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅದ್ಧೂರಿಯಾಗಿ ನೆರವೇರಿತು ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮದುವೆ

    ಪ್ರಕರಣ ಸಂಬಂಧ ಆರೋಪಿಗಳು ಮಹಿಳೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಸ್ತಿನಾಪುರದ ಭೀಮಕುಂಡ ಗಂಗಾ ನದಿಯಿಂದ ಮಹಿಳೆಯ ಶವ ಹೊರತೆಗೆಯಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

  • ಬಿಜೆಪಿ ಸರ್ಕಾರಕ್ಕೆ ರೆಡ್ ಅಲರ್ಟ್: ಅಖಿಲೇಶ್ ಯಾದವ್

    ಬಿಜೆಪಿ ಸರ್ಕಾರಕ್ಕೆ ರೆಡ್ ಅಲರ್ಟ್: ಅಖಿಲೇಶ್ ಯಾದವ್

    ಲಕ್ನೋ: ಸಮಾಜವಾದಿ ಪಕ್ಷ ಬೆಂಬಲಿಸುವ ಮುನ್ನ ಉತ್ತರಪ್ರದೇಶ ಜನರು ಎಚ್ಚರಿಕೆಯಿಂದಿರಿ. ಕೆಂಪು ಟೋಪಿ ಧರಿಸುವವರು ರಾಜ್ಯಕ್ಕೆ ಅಪಾಯಕಾರಿ. ಸಮಾಜವಾದಿ ಪಕ್ಷದ ಕೆಂಪು ಟೋಪಿ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಎಸ್‍ಪಿ ಮುಖಂಡ ಅಖಿಲೇಶ್ ಯಾದವ್, ಕೆಂಪು ಟೋಪಿಗಳು ಬಿಜೆಪಿ ಸರ್ಕಾರಕ್ಕೆ ರೆಡ್ ಅಲರ್ಟ್ ಅಗಿವೆ ಎಂದು ಟಾಂಗ್‍ ಕೊಟ್ಟಿದ್ದಾರೆ.

    modi

    ತಮ್ಮ ಪಕ್ಷದ ಸದಸ್ಯರ ಟ್ರೇಡ್‍ಮಾರ್ಕ್ ಕೆಂಪು ಟೋಪಿಗಳನ್ನು ಧರಿಸಿರುವ ಜನರು ಮುಂದಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಕಾರಣ ಬಿಜೆಪಿಗೂ ರೆಡ್ ಅಲರ್ಟ್ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

    ಮೋದಿ ಹೇಳಿದ್ದೇನು?: ಗೋರಖ್‍ಪುರದಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆ ಹಾಗೂ ಎಐಐಎಂಎಸ್ ಶಾಖೆ ಉದ್ಘಾಟಿಸಿದ ನಂತರ ಸಭೆಯಲ್ಲಿ ಅವರು ಮಾತನಾಡಿದರು. ಕೆಂಪು ಟೋಪಿ ಧರಿಸುವ ಈ ಜನರಿಗೆ ಸಾಮಾನ್ಯ ಜನರ ಬಗ್ಗೆ ಕಳಕಳಿ ಇಲ್ಲ. ಕೆಂಪು ಬಣ್ಣ ಅಪಾಯದ ಸಂಕೇತ. ರೆಡ್ ಕ್ಯಾಪ್ (ಕೆಂಪು ಟೋಪಿ) ಎಂದರೆ ಉತ್ತರ ಪ್ರದೇಶ ಪಾಲಿಗೆ ರೆಡ್ ಅಲರ್ಟ್ ಇದ್ದ ಹಾಗೆ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತಿ ಹೈಟೆಕ್ ಐಸಿಯು ವಾರ್ಡ್

    ತಮ್ಮ ತಿಜೋರಿಯನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ಸಮಾಜವಾದಿ ಪಕ್ಷದ ನಾಯಕರಿಗೆ ಅಧಿಕಾರ ಬೇಕಾಗಿತ್ತು. ಜೈಲಿನಲ್ಲಿರುವ ಉಗ್ರರ ಬಿಡುಗಡೆ ಹಾಗೂ ಪಾತಕಿಗಳಿಗೆ ಮುಕ್ತ ಅವಕಾಶ ನೀಡುವುದಕ್ಕಾಗಿಯೂ ಅಧಿಕಾರ ಬೇಕಿತ್ತು. ಸಮಾಜವಾದಿ ಚಿಂತಕರಾದ ರಾಮಮನೋಹರ್ ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರು ಪ್ರತಿಪಾದಿಸಿದ ತತ್ವಗಳನ್ನು ಸಮಾಜವಾದಿ ಪಕ್ಷ ಪಾಲನೆ ಮಾಡುತ್ತಿಲ್ಲ ಎಂದು ವಾಗ್ದಾಳಿ ಮಾಡಿದದರು. ಈ ವಿಚಾರವಾಗಿ ಅಖಿಲೇಶ್ ಯಾದವ್, ಮೋದಿ ಅವರಿಗೆ ತಿರುಗೇಟು ಟ್ವೀಟ್ ಮೂಲಕವಾಗಿ ನೀಡಿದ್ದಾರೆ. ಇದನ್ನೂ ಓದಿ: ಕೆಂಪು ಟೋಪಿ ಧರಿಸಿದವರು ಉತ್ತರಪ್ರದೇಶಕ್ಕೆ ಅಪಾಯಕಾರಿ: ಮೋದಿ

    ಟ್ವೀಟ್‍ನಲ್ಲಿ ಏನಿದೆ: ಬಿಜೆಪಿಗೆ ಕೆಂಪು ಟೋಪಿ ಜೊತೆಗೆ ಹಣದುಬ್ಬರ, ನಿರುದ್ಯೋಗ, ರೈತರು ಮತ್ತು ಕಾರ್ಮಿಕರ ದುಃಸ್ಥಿತಿ, ಹತ್ರಾಸ್ ಮತ್ತು ಲಖಿಂಪುರ ಖೇರಿ (ಘಟನೆಗಳು) ಮಹಿಳೆಯರು ಮತ್ತು ಯುವಕರ ದಬ್ಬಾಳಿಕೆ, ನಾಶವಾದ ಶಿಕ್ಷಣ ವ್ಯವಸ್ಥೆ, ವ್ಯಾಪಾರ ಮತ್ತು ಆರೋಗ್ಯದ ಬಗ್ಗೆ ರೆಡ್ ಅಲರ್ಟ್ ಇದೆ. ಇದು ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕುತ್ತದೆ ಎಂದು ಹೇಳಿದ್ದಾರೆ.

  • ಕೆಂಪು ಟೋಪಿ ಧರಿಸಿದವರು ಉತ್ತರಪ್ರದೇಶಕ್ಕೆ ಅಪಾಯಕಾರಿ: ಮೋದಿ

    ಕೆಂಪು ಟೋಪಿ ಧರಿಸಿದವರು ಉತ್ತರಪ್ರದೇಶಕ್ಕೆ ಅಪಾಯಕಾರಿ: ಮೋದಿ

    – ಕೆಂಪು ಬಣ್ಣ ಅಪಾಯದ ಸಂಕೇತ
    -ತಿಜೋರಿಯನ್ನು ಭರ್ತಿ ಮಾಡಿಲು ಸಮಾಜವಾದಿ ಪಕ್ಷಕ್ಕೆ ಅಧಿಕಾರಬೇಕು
    – ಸಮಾಜವಾದಿ ಪಕ್ಷ ಬೆಂಬಲಿಸುವ ಮುನ್ನ ಎಚ್ಚರಿಕೆ ಅಗತ್ಯ

    ನವದೆಹಲಿ: ಸಮಾಜವಾದಿ ಪಕ್ಷ ಬೆಂಬಲಿಸುವ ಮುನ್ನ ಉತ್ತರಪ್ರದೇಶ ಜನರು ಎಚ್ಚರಿಕೆಯಿಂದಿರಿ. ಕೆಂಪು ಟೋಪಿ ಧರಿಸುವವರು ರಾಜ್ಯಕ್ಕೆ ಅಪಾಯಕಾರಿ ಎಂಬುದನ್ನು ಜನರು ಮರೆಯಬಾರದು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಎಸ್‍ಪಿ ವಿರುದ್ಧ ಕಿಡಿಕಾರಿದ್ದಾರೆ.

    ಗೋರಖ್‍ಪುರದಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆ ಹಾಗೂ ಎಐಐಎಂಎಸ್ ಶಾಖೆ ಉದ್ಘಾಟಿಸಿದ ನಂತರ ಸಭೆಯಲ್ಲಿ ಅವರು ಮಾತನಾಡಿದರು. ಕೆಂಪು ಟೋಪಿ ಧರಿಸುವ ಈ ಜನರಿಗೆ ಸಾಮಾನ್ಯ ಜನರ ಬಗ್ಗೆ ಕಳಕಳಿ ಇಲ್ಲ. ಕೆಂಪು ಬಣ್ಣ ಅಪಾಯದ ಸಂಕೇತ. ರೆಡ್ ಕ್ಯಾಪ್ (ಕೆಂಪು ಟೋಪಿ) ಎಂದರೆ, ಉತ್ತರ ಪ್ರದೇಶ ಪಾಲಿಗೆ ರೆಡ್ ಅಲರ್ಟ್ ಇದ್ದ ಹಾಗೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ  ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತಿ ಹೈಟೆಕ್ ಐಸಿಯು ವಾರ್ಡ್

    Akhilesh Yadav

    ತಮ್ಮ ತಿಜೋರಿಯನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ಸಮಾಜವಾದಿ ಪಕ್ಷದ ನಾಯಕರಿಗೆ ಅಧಿಕಾರ ಬೇಕಾಗಿತ್ತು. ಜೈಲಿನಲ್ಲಿರುವ ಉಗ್ರರ ಬಿಡುಗಡೆ ಹಾಗೂ ಪಾತಕಿಗಳಿಗೆ ಮುಕ್ತ ಅವಕಾಶ ನೀಡುವುದಕ್ಕಾಗಿಯೂ ಅಧಿಕಾರ ಬೇಕಿತ್ತು. ಸಮಾಜವಾದಿ ಚಿಂತಕರಾದ ರಾಮಮನೋಹರ್ ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರು ಪ್ರತಿಪಾದಿಸಿದ ತತ್ವಗಳನ್ನು ಸಮಾಜವಾದಿ ಪಕ್ಷ ಪಾಲನೆ ಮಾಡುತ್ತಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ:  ಬೆಂಜ್ ಗುದ್ದಿದ ರಭಸಕ್ಕೆ 3 ವಾಹನಗಳು ಜಖಂ – 1 ಸಾವು, ಇಬ್ಬರು ಗಂಭೀರ

  • ಒಣ ಹುಲ್ಲಿಗೆ ಬಿದ್ದ ಬೆಂಕಿ- ಸುಟ್ಟು ಕರಕಲಾದ 3 ಮಕ್ಕಳು

    ಒಣ ಹುಲ್ಲಿಗೆ ಬಿದ್ದ ಬೆಂಕಿ- ಸುಟ್ಟು ಕರಕಲಾದ 3 ಮಕ್ಕಳು

    ಲಕ್ನೋ: ಒಣ ಹುಲ್ಲಿಗೆ ಬೆಂಕಿ ಬಿದ್ದು, 3ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಮಡಿಹಾನ್‍ನಲ್ಲಿ ನಡೆದಿದೆ.

    ರಾಣಿ (3), ಹರ್ಷಿತ್ (5), ಸುನೈನಾ (7) ಮೃತ ಮಕ್ಕಳಾಗಿದ್ದಾರೆ. ಒಣ ಹುಲ್ಲಿಗೆ ಬೆಂಕಿ ಬಿದ್ದವೇಳೆ ಅಲ್ಲಿ ಇದ್ದ ಮಕ್ಕಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದಾರೆ. ಪುಟ್ಟ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ನಾನ್ ಬೆಡ್‍ಶೀಟ್, ತಲೆದಿಂಬು- ಬೆಡ್‍ರೂಮ್ ಫೋಟೋ ವೈರಲ್

    ಒಣಹುಲ್ಲಿನ ಬಣವೆಯಲ್ಲಿ ಮಕ್ಕಳು ಆಟವಾಡುತ್ತಿದ್ದರು. ಆಗ ದಿಢೀರ್ ಅಂತಾ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅಲ್ಲಿ ಆಟವಾಡುತ್ತಾ ಕುಳಿತಿದ್ದ ಮಕ್ಕಳ ಅರಿಗೆ ಇದು ಬಾರದೆ ಇರುವುದರಿಂದ ದುರ್ಘಟನೆಯಲ್ಲಿ ಮೂವರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ.  ಇದನ್ನೂ ಓದಿ: ಫೋಟೋಶೂಟ್‌ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್

    POLICE JEEP

    ಈ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬೆಂಕಿ ಹೊತ್ತಿದ ಕುರಿತು ತನಿಖೆ ಮಾಡಲಾಗುತ್ತಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ತುಮಕೂರಿನಲ್ಲಿ ಮತ್ತೆ ಕೊರೊನಾ ಭೀತಿ – 42 ಪುಟ್ಟ ಮಕ್ಕಳಿಗೆ ವಕ್ಕರಿಸಿದ ಕೋವಿಡ್