Tag: lucknow

  • ತಂಗಿ ಆರೋಗ್ಯ ಸರಿಯಿಲ್ಲವೆಂದು ಕ್ಯಾಬ್ ದರೋಡೆ ಮಾಡಿದ ಸಹೋದರರು..!

    ತಂಗಿ ಆರೋಗ್ಯ ಸರಿಯಿಲ್ಲವೆಂದು ಕ್ಯಾಬ್ ದರೋಡೆ ಮಾಡಿದ ಸಹೋದರರು..!

    ಲಕ್ನೋ: ತಂಗಿ ಆರೋಗ್ಯ ಸರಿಯಿಲ್ಲವೆಂದು ಅಣ್ಣಂದಿರು ಓಲಾ ಕ್ಯಾಬ್ ದರೋಡೆ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಗಾಜಿಪುರದ ಸೈದ್‍ಪುರ ಕೊತ್ವಾಲಿ ಪೊಲೀಸರು ನಾಲ್ವರು ದರೋಡೆಕೋರರನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಕ್ಯಾಬ್ ಬುಕ್ ಮಾಡಿ ಚಾಲಕನ ಮೇಲೆ ಹಲ್ಲೆ ನಡೆಸಿ ಕಾರನ್ನು ದರೋಡೆ ಮಾಡಿದ್ದರು. ವಿಷಯ ತಿಳಿದ ತಕ್ಷಣ ಪೊಲೀಸರು ತನಿಖೆ ಮಾಡಿ ಆರೋಪಿಗಳನ್ನು ಹಿಡಿದಿದ್ದು, ಟ್ಯಾಕ್ಸಿ ಜೊತೆಗೆ ಪಿಸ್ತೂಲ್, ಕಾಟ್ರಿಡ್ಜ್ ಮತ್ತು ಫೋನ್ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ:  ದೆಹಲಿ ನಾಯಕರು ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಂಜಿತ್ ಚನ್ನಿ

    Ola to now sell used cars

    ಕಾರಣವೇನು?
    ಬಂಧಿತ ಆರೋಪಿಗಳನ್ನು ಈ ಕೃತ್ಯಕ್ಕೆ ಕಾರಣವೇನು ಎಂದು ಕೇಳಿದಾಗ ಅವರು, ನಮ್ಮ ತಂಗಿಯ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ನಮ್ಮ ತಂಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಈ ಕೃತ್ಯ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

    ನಡೆದಿದ್ದೇನು?
    ಆರೋಪಿಗಳು ವಾರಣಾಸಿ ಕ್ಯಾಂಟ್‍ನಿಂದ ಕ್ಯಾಬ್ ಬುಕ್ ಮಾಡಿದ್ದಾರೆ. ಚಾಲಕ ಇವರನ್ನು ಕರೆದುಕೊಂಡು ಹೋಗುತ್ತಿರಬೇಕಾದರೆ ಸೈದ್‍ಪುರ ಬಳಿ ಕ್ಯಾಬ್ ಚಾಲಕನನ್ನು ಬೆದರಿಸಿದ್ದು, ಚೆನ್ನಾಗಿ ಥಳಿಸಿ ಕಾರಿನಿಂದ ಹೊರ ಹಾಕಿದ್ದಾರೆ. ಬಳಿಕ ಆರೋಪಿಗಳು ಕಾರಿನ ಸಮೇತ ಪರಾರಿಯಾಗಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಕಾರ್ ಚಾಲಕ ಜ್ಞಾನೇಂದ್ರ ಪಾಂಡೆ ದೂರು ನೀಡಿದ್ದಾರೆ.

    POLICE JEEP

    ಈ ದೂರಿನಲ್ಲಿ ಜ್ಞಾನೇಂದ್ರ ಅವರು, ವಾಹನ ಸಂಖ್ಯೆ ‘ಯುಪಿ 65 ಕೆಟಿ 1217’ ಸಂಖ್ಯೆಯ ಸುಜುಕಿ ಡಿಜೈರ್ ಕಾರನ್ನು ದರೋಡೆಕೋರರು ಕದ್ದಿದ್ದಾರೆ. ಈ ವೇಳೆ ಆರೋಪಿಗಳನ್ನು ನನ್ನ ಮೇಲೆ ಹಲ್ಲೆ ಮಾಡಿದ್ದು, ಕಾರಿನಿಂದ ಹೊರ ಹಾಕಿದ್ದಾರೆ. ಬಳಿಕ ಕಾರಿನ ಸಮೇತ ಪರಾರಿಯಾಗಿದ್ದಾರೆ. ಆ ಕಾರನ್ನು ನಾನು ಓಲಾಗೆ ಲಿಂಕ್ ಮಾಡಿಸಿಕೊಂಡು ಓಡಿಸುತ್ತಿದ್ದೆ ಎಂದು ವಿವರಣೆ ಕೊಟ್ಟಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದು, ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರನ್ನು ಮುಸುಕಿನಲ್ಲಿರಿಸಲಾಗಿದೆ: ಸುನಿಲ್ ಕುಮಾರ್

    ಆರೋಪಿಗಳನ್ನು ಪೊಲೀಸ್ ವರಿಷ್ಠಾಧಿಕಾರಿ ರಂಬದನ್ ಸಿಂಗ್ ಮಾಧ್ಯಮದ ಮುಂದೆ ಹಾಜರುಪಡಿಸಿ ಮಾತನಾಡಿದ್ದು, ಈ ಗುಂಪಿನಲ್ಲಿರುವ ಇಬ್ಬರು ಹಳೆಯ ಕ್ರಿಮಿನಲ್ ದಾಖಲೆ ಹೊಂದಿದ್ದಾರೆ. ಇನ್ನಿಬ್ಬರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಪ್ರಸ್ತುತ ಆರೋಪಿಗಳ ಬಳಿ ಇದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಪಿಸ್ತೂಲ್, ಕಾಟ್ರಿಡ್ಜ್ ಮತ್ತು ಫೋನ್ ಗಳನ್ನು ಸಹ ವಶಪಡಿಸಿಕೊಂಡಿದ್ದೇವೆ ಎಂದು ವಿವರಿಸಿದರು.

  • ಯುಪಿ ಚುನಾವಣೆಯಲ್ಲಿ ಐತಿಹಾಸಿಕ ಸೋಲಿನ ಭಯದಿಂದ ‘ಬಾಬಾಜಿ’ ಒತ್ತಡದಲ್ಲಿದ್ದಾರೆ: ಅಖಿಲೇಶ್

    ಯುಪಿ ಚುನಾವಣೆಯಲ್ಲಿ ಐತಿಹಾಸಿಕ ಸೋಲಿನ ಭಯದಿಂದ ‘ಬಾಬಾಜಿ’ ಒತ್ತಡದಲ್ಲಿದ್ದಾರೆ: ಅಖಿಲೇಶ್

    ಲಕ್ನೋ: ಯುಪಿ ಚುನಾವಣೆಯಲ್ಲಿ ಐತಿಹಾಸಿಕ ಸೋಲಿನ ಭಯದಿಂದ ‘ಬಾಬಾಜಿ’ ಒತ್ತಡದಲ್ಲಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸಮಾಜವಾದಿ ಪಕ್ಷದ(ಎಸ್‍ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ವ್ಯಂಗ್ಯವಾಡಿದರು.

    ಯೋಗಿ ಅವರ ಬಗ್ಗೆ ಅಖಿಲೇಶ್ ಯಾದವ್ ತಮ್ಮ ಟ್ವಿಟ್ಟರ್‌ನಲ್ಲಿ, ‘ನಾವು ಅವರಿಗೆ ‘ಕಂಪ್ರೆಸರ್’ ಎಂದು ಹೇಳಿದಾಗ, ಅವರು ‘ಕಡಿಮೆ ಒತ್ತಡ’ ಎಂದು ಅರ್ಥಮಾಡಿಕೊಂಡರು. ಬಾಬಾಜೀ ಅವರು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ. ಆದರೆ ನಿಜವಾಗಿಯೂ ಅವರು ಚುನಾವಣೆ ಸೋಲಿನ ಭಯದಿಂದ ‘ಒತ್ತಡ’ಕ್ಕೆ ಒಳಗಾಗಿದ್ದಾರೆ. ಮುಂದೆ ಬರುವ ಚುನಾವಣೆಯಲ್ಲಿ ಐತಿಹಾಸಿಕ ಸೋಲನ್ನು ಬಿಜೆಪಿ ಅನುಭವಿಸುತ್ತೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪಕ್ಷದ ನಾಯಕರು ಬೇರೆ ಪಕ್ಷದ ಸದಸ್ಯರ ಆಂತರಿಕ ವಿಚಾರದಲ್ಲಿ ಹೇಳಿಕೆ ಕೊಡಬಾರದು: ಡಿಕೆಶಿ

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಯಾದವ್ ಮತ್ತು ಯೋಗಿ ಆದಿತ್ಯನಾಥ್ ಮಾತಿನ ಸಮರ ನಡೆಯುತ್ತಿದ್ದಾರೆ. ಒಂದಲ್ಲ ಒಂದು ವಿಚಾರಕ್ಕೆ ಇಬ್ಬರು ಒಬ್ಬರನೊಬ್ಬರು ಕಾಲೆಳೆದುಕೊಳ್ಳುತ್ತಾ ಇರುತ್ತಾರೆ. ಇಬ್ಬರು ಪರಸ್ಪರ ಮಾತಿನ ದಾಳಿ ನಡೆಸುತ್ತಾ ಇರುತ್ತಾರೆ. ಅಲ್ಲದೆ ಬಿಜೆಪಿ ಪಕ್ಷವು ಚುನಾವಣೆಗಾಗಿ ನಡೆಸುತ್ತಿರುವ ರ್ಯಾಲಿಯಲ್ಲಿ ಯಾದವ್ ಅವರನ್ನು ‘ಬಾಬುವಾ’ ಎಂದು ಕರೆಯಲಾಗುತ್ತಿದ್ದು, ಈ ಹಿನ್ನೆಲೆ ಯಾದವ್ ಅವರು ಯೋಗಿ ಅವರನ್ನು ‘ಬಾಬಾಜಿ’ ಎಂದು ತಿರುಗೇಟು ಕೊಟ್ಟಿದ್ದಾರೆ.

    ಚುನಾವಣೆಯ ದಿನಾಂಕಗಳು ಹತ್ತಿರ ಬರುತ್ತಿದ್ದಂತೆ, ಉತ್ತರ ಪ್ರದೇಶದಲ್ಲಿ ಚುನಾವಣೆಯ ಪ್ರಚಾರ ಬರದಿಂದ ಸಾಗುತ್ತಿದೆ. ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ. ಇದನ್ನೂ ಓದಿ: ರಸ್ತೆಯಲ್ಲಿ ಬಲೂನ್ ಮಾರುತ್ತಿದ್ದವರ ಮೇಲೆ ಹರಿದ ಕಾರು – ತಾಯಿ ಸಾವು, ಮಗ ಬಚಾವ್

  • ಮಾಯಾವತಿ ಪಕ್ಷದ ಮಾಜಿ ಸಚಿವ ರಂಗನಾಥ್ ಮಿಶ್ರಾ ಬಿಜೆಪಿ ಸೇರ್ಪಡೆ

    ಮಾಯಾವತಿ ಪಕ್ಷದ ಮಾಜಿ ಸಚಿವ ರಂಗನಾಥ್ ಮಿಶ್ರಾ ಬಿಜೆಪಿ ಸೇರ್ಪಡೆ

    ಲಕ್ನೋ: ಉತ್ತರ ಪ್ರದೇಶದ ಮಾಜಿ ಸಚಿವ ರಂಗನಾಥ್ ಮಿಶ್ರಾ ಅವರು ಲಕ್ನೋದಲ್ಲಿ ಬಿಜೆಪಿ ಸೇರಿದ್ದಾರೆ.

    ರಂಗನಾಥ್ ಮಿಶ್ರಾ ಅವರು ಮಾಯಾವತಿ ನೇತೃತ್ವದ ಬಿಎಸ್‍ಪಿ ಸರ್ಕಾರದಲ್ಲಿ 2007-2012ರ ಅವಧಿಯಲ್ಲಿ ಮಾಧ್ಯಮಿಕ ಶಿಕ್ಷಣ ಸಚಿವರಾಗಿದ್ದರು. ಸಮಾಜವಾದಿ ಪಕ್ಷದ ಮಾಜಿ ಶಾಸಕ ಮನೀಶ್ ರಾವತ್ ಅವರು ಕೂಡ ಬಿಜೆಪಿ ಸೇರಿದ್ದಾರೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಮತಾಂತರ ತಡೆಗೆ ಕಾನೂನು ಅಗತ್ಯ, ಅದು ದುರುಪಯೋಗವಾಗ್ಬಾರ್ದು: ಕೇಜ್ರಿವಾಲ್

    Rangnath Mishra

    ಸ್ವತಂತ್ರಾಬ್ಜೆಪಿ ಮತ್ತು ಸತ್ಯಕುಮಾರ್ ಅವರ ಉಪಸ್ಥಿತಿಯಲ್ಲಿ ಸಿಧೌಲಿಯ ಮಾಜಿ ಎಸ್‍ಪಿ ಶಾಸಕ, ಮನೀಶ್ ರಾವತ್, ಭದೋಹಿಯ ಬಿಎಸ್‍ಪಿ ಶಾಸಕ, ರಂಗನಾಥ್ ಮಿಶ್ರಾ ಮತ್ತು ಎಸ್‍ಪಿ ನಾಯಕ, ಡಾ. ಮನೋಜ್ ಕುಮಾರ್ ಪ್ರಜಾಪತಿ ಲಕ್ನೋದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದನ್ನೂ ಓದಿ: ಗಾಡಿ ಟೋಯಿಂಗ್ ಮಾಡ್ತಿದ್ದ ASIಗೆ ಕಲ್ಲೇಟು- ವಿಕಲಚೇತನ ಮಹಿಳೆಗೆ ಬೂಟಿನಿಂದ ಒದ್ದ ನಾರಾಯಣ್

    ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವದ ಮೇಲೆ ನಂಬಿಕೆ ಇರುವುದರಿಂದ ಮನೀಶ್ ರಾವತ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು ಮತ್ತು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಅವರು ನಾಯಕರನ್ನು ಪಕ್ಷಕ್ಕೆ ಸ್ವಾಗತಿಸಿದರು.

  • ಯಾರನ್ನೂ ನಂಬಲ್ಲ, ಭದ್ರತಾ ಅಧಿಕಾರಿಯೇ ನನ್ನನ್ನು ಶೂಟ್ ಮಾಡ್ಬೋದು: ಅಬ್ದುಲ್ಲಾ ಆಝಂ ಖಾನ್

    ಯಾರನ್ನೂ ನಂಬಲ್ಲ, ಭದ್ರತಾ ಅಧಿಕಾರಿಯೇ ನನ್ನನ್ನು ಶೂಟ್ ಮಾಡ್ಬೋದು: ಅಬ್ದುಲ್ಲಾ ಆಝಂ ಖಾನ್

    ಲಕ್ನೋ: ನಾನು ಯಾರನ್ನೂ ನಂಬುವುದಿಲ್ಲ. ನನ್ನನ್ನು ಭದ್ರತಾ ಪೊಲೀಸ್ ಅಧಿಕಾರಿಯೇ ಶೂಟ್ ಮಾಡಬಹುದು ಎಂದು ಸಮಾಜವಾದಿ ಪಕ್ಷದ ಸಂಸದ ಆಝಂ ಖಾನ್ ಅವರ ಪುತ್ರ ಅಬ್ದುಲ್ಲಾ ಆಝಂ ಖಾನ್ ಹೇಳಿಕೆ ಕೊಟ್ಟಿದ್ದಾರೆ.

    ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮೊಂದಿಗೆ ಅಧಿಕಾರಿಗಳು, ಪೊಲೀಸರು, ಎರಡು ಸರ್ಕಾರಗಳಿವೆ. ನಾನು ಒಬ್ಬಂಟಿ, ನನ್ನೊಂದಿಗೆ ಯಾರೂ ಇಲ್ಲ. ನನ್ನೊಂದಿಗೆ ಇರುವ ಪೊಲೀಸರನ್ನು ನಾನು ನಂಬುವುದಿಲ್ಲ. ಅವರು ನನ್ನನ್ನು ಶೂಟ್ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

    ಭದ್ರತಾ ಪೊಲೀಸರನ್ನು ನನ್ನ ಭದ್ರತೆಗಾಗಿ ನಿಯೋಜಿಸಲಾಗಿಲ್ಲ. ನಾನು ಎಲ್ಲಿ ಇದ್ದೇನೆ ಎಂದು ತಿಳಿದುಕೊಳ್ಳಲು ನಿಯೋಜಿಸಲಾಗಿದೆ ಎಂದು ಕಿಡಿಕಾರಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಉತ್ತರಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಅಬ್ದುಲ್ಲಾ ಅವರನ್ನು ಸುವಾರ್ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲಾಗಿದೆ.

    ಈ ಹಿಂದೆ ಅಬ್ದುಲ್ಲಾ ವಿರುದ್ಧ ರಾಂಪುರದಲ್ಲಿ 43 ಪ್ರಕರಣಗಳು ದಾಖಲಾಗಿತ್ತು. ಪರಿಣಾಮ ಇವರು 23 ತಿಂಗಳ ಸೆರೆವಾಸದ ನಂತರ ಜನವರಿ 15 ರಂದು ಸೀತಾಪುರ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದರು.

    ಕಳೆದ ವರ್ಷ ಫೆಬ್ರವರಿಯಲ್ಲಿ ಅಬ್ದುಲ್ಲಾ ಮತ್ತು ಅವರ ತಂದೆಯನ್ನು ರಾಮ್‍ಪುರ ಜೈಲಿನಿಂದ ಸೀತಾಪುರ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ಬಿಜೆಪಿ ದಬ್ಬಾಳಿಕೆ ಕೊನೆಗೊಳ್ಳುತ್ತದೆ. ಮಾರ್ಚ್ 10 ರಂದು ದಬ್ಬಾಳಿಕೆಗಾರನನ್ನು ಸಿಂಹಾಸನದಿಂದ ಕೆಳಗಿಳಿಸಲಾಗುವುದು ಎಂದು ಹೇಳಿದ್ದರು. ಇದನ್ನೂ ಓದಿ: ಬಾಕಿ ವೇತನ ಪಾವತಿಗೆ ಆಗ್ರಹಿಸಿ ಸಿಬ್ಬಂದಿಯಿಂದ ಗ್ರಾ.ಪಂ ಕಚೇರಿಗೆ ಬೀಗ

    ಉತ್ತರಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27, ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

  • ಜೆಸಿಬಿ ಏರಿ ಮದುವೆ ಮಂಟಪಕ್ಕೆ ಬಂದ ವರ

    ಜೆಸಿಬಿ ಏರಿ ಮದುವೆ ಮಂಟಪಕ್ಕೆ ಬಂದ ವರ

    ಧು ವರರ ಮದುವೆ ಕಲ್ಪನೆಗಳೇ ಬದಲಾಗಿವೆ. ಪ್ರತೀ ಬಾರಿ ವಿಭಿನ್ನ ರೀತಿಯಲ್ಲಿ ವಧು ವರರು ಮಂಟಪಕ್ಕೆ ಆಗಮಿಸುವ ಸಾಕಷ್ಟು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಇದೀಗ ವರನೊಬ್ಬ ಜೆಸಿಬಿಯಲ್ಲಿ ಮದುವೆ ಮಂಟಪಕ್ಕೆ ಆಗಮಿಸಿದ ವೀಡಿಯೋ ವೈರಲ್ ಅಗಿದೆ.

    ಚಳಿಗಾಲವಾದ ಕಾರಣ ಉತ್ತರಭಾರತದ ರಾಜ್ಯಗಳಲ್ಲಿ ಹಿಮಪಾತ ವಾಗುತ್ತಿದೆ. ರಸ್ತೆಯೂ ಕಾಣದಷ್ಟು ದಟ್ಟ ಮಂಜು, ಹಿಮಪಾತ ಸಂಭವಿಸುತ್ತಿದೆ. ಈ ನಡುವೆ ವರನೊಬ್ಬ ನಡೆದುಕೊಂಡು ಬರಲು ಅಥವಾ ಕಾರಿನಲ್ಲಿ ಬರಲು ಸಾಧ್ಯವಾಗದೆ ಜೆಸಿಬಿಯಲ್ಲಿ ಬಂದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್

    ಈ ಹಿಂದೆ ಪಾಕಿಸ್ತಾನ ಪತ್ರಕರ್ತರೊಬ್ಬರು ಹಂಚಿಕೊಂಡ ವೀಡಿಯೋದಲ್ಲಿ ವಧುವರರಿಬ್ಬರೂ ಜೆಸಿಬಿಯನ್ನು ಓಡಿಸಿಕೊಂಡು ಮದುವೆ ಮಂಟಪಕ್ಕೆ ಬಂದಿದ್ದರು. ಇದರ ವೀಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ:  ಹಾರವನ್ನು ಕುತ್ತಿಗೆಗೆ ಎಸೆದ ವರ- ಮದುವೆ ಕ್ಯಾನ್ಸಲ್‌ ಮಾಡಿದ ವಧು

  • ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದ್ರೆ ಯಾರನ್ನೂ ಬಿಡಲ್ಲ: ಆದಿಲ್ ಚೌಧರಿ ವೀಡಿಯೋ ವೈರಲ್

    ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದ್ರೆ ಯಾರನ್ನೂ ಬಿಡಲ್ಲ: ಆದಿಲ್ ಚೌಧರಿ ವೀಡಿಯೋ ವೈರಲ್

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ, ಒಬ್ಬ ವ್ಯಕ್ತಿಯನ್ನೂ ಬಿಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ಅಭ್ಯರ್ಥಿ ಆದಿಲ್ ಚೌಧರಿ ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವೈರಲ್ ಆದ ವೀಡಿಯೋದಲ್ಲಿ ಏನಿದೆ?
    ವೀಡಿಯೋದಲ್ಲಿ ಹೆಸರಿಲ್ಲದ ವ್ಯಕ್ತಿಯನ್ನು ಉಲ್ಲೇಖಿಸಿ ಆದಿಲ್ ಚೌಧರಿ, ಚಿಂತಿಸಬೇಡಿ, ದೇವರ ಇಚ್ಛೆಯಂತೆ ನಾವು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಸರ್ಕಾರವನ್ನು ರಚಿಸಲಿದ್ದೇವೆ. ಒಂದು ವೇಳೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಒಬ್ಬ ವ್ಯಕ್ತಿಯನ್ನು ಉಳಿಸಲಾಗುವುದಿಲ್ಲ. ಅವರು ನಮ್ಮ ವಿರುದ್ಧ ಅಪರಾಧ ಎಸಗುತ್ತಿರುವ ರೀತಿಯಲ್ಲಿ, ನಾವು ಸೇಡು ತೀರಿಸಿಕೊಳ್ಳುತ್ತೇವೆ. ಅವರು ಏನನ್ನಾದರೂ ಮಾಡುವ ಮೊದಲು 100 ಬಾರಿ ಯೋಚಿಸಬೇಕು ಹಾಗೆಯೇ ಮಾಡುತ್ತೇವೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಪ್ರೀತಿ ಇದ್ದಲ್ಲಿಗೆ ಹೋಗುತ್ತೇನೆ: ರಮೇಶ್ ಜಾರಕಿಹೊಳಿ

    ವೀಡಿಯೋಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್ ಮಾಳವಿಯಾ, ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಎಸ್‍ಪಿ ಅಭ್ಯರ್ಥಿ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಎಂದು ಆರೋಪಿಸಿದ್ದಾರೆ. ಆದರೆ ಚೌಧರಿ ವೀಡಿಯೊದಲ್ಲಿ ಯಾವುದೇ ಸಮುದಾಯದ ಬಗ್ಗೆ ಮಾತನಾಡಿರುವುದು ಕಂಡುಬಂದಿಲ್ಲ. ಮೀರತ್ ದಕ್ಷಿಣದ ಎಸ್‍ಪಿ ಅಭ್ಯರ್ಥಿ ಚೌಧರಿಯವರು ನಾವು ಸರ್ಕಾರ ರಚಿಸಿದರೆ ಅವರನ್ನು ಬಿಡುವುದಿಲ್ಲ. ಒಬ್ಬೊಬ್ಬರಾಗಿ ಸೇಡು ತೀರಿಸಿಕೊಳ್ಳುತ್ತೇವೆ ಅಂತ ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ನಾಹಿದ್ ಹಸನ್ ಮತ್ತು ಆದಿಲ್ ಚೌಧರಿ ಅವರಂತಹ ಹಿಂದೂ ವಿರೋಧಿ ಗೂಂಡಾಗಳು. ಚುನಾವಣಾ ಅಭ್ಯರ್ಥಿಗಳನ್ನು ಮಾತ್ರ ನಾಮನಿರ್ದೇಶನ ಮಾಡಿದ್ದಾರೆ. ಅವರು ವೀಡಿಯೊದಲ್ಲಿ ಮಾಡಿದ ಕಾಮೆಂಟ್‍ಗಳನ್ನು ಸ್ಪಷ್ಟಪಡಿಸಲು ಕೇಳಿದಾಗ ಚೌಧರಿಯವರು ನೇರ ಉತ್ತರವನ್ನು ನೀಡಲಿಲ್ಲ. ಬಿಜೆಪಿ ವೀಡಿಯೊವನ್ನು ಎಡಿಟ್ ಮಾಡಿದೆ ಅಂತ ಆರೋಪಿಸಿದ್ದಾರೆ. ಕೇಸರಿ ಪಕ್ಷವು ಅಗತ್ಯವಿರುವ ಯಾವುದೇ ವಿಧಾನಗಳನ್ನು ಬಳಸಲು ಸಮರ್ಥವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಗಂಡನ ಕಿರುಕುಳ ತಾಳಲಾರದೇ ಗರ್ಭಿಣಿ ಆತ್ಮಹತ್ಯೆ

    ಈ ಕುರಿತು ಮೀರತ್ ಸಿಟಿ ಎಸ್‍ಪಿ ವಿನೀತ್ ಭಟ್ನಾಗರ್ ಅವರು ಎಸ್ಪಿ ಅಭ್ಯರ್ಥಿ ಬೆದರಿಕೆ ಹಾಕುತ್ತಿರುವ ವೀಡಿಯೋದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ವಿಡಿಯೋವನ್ನು ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. ಅದರಲ್ಲಿ ಚುನಾವಣಾ ಆಯೋಗದ ನೈತಿಕ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಹೇಳಿಕೆಗಳಿದ್ದರೆ, ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಅಖಿಲೇಶ್ ಆಡಳಿತದಲ್ಲಿ ಗಲಭೆ, ಗೂಂಡಾಗಿರಿ, ವಲಸೆ ಹೆಚ್ಚಿತ್ತು: ಕೇಶವ್ ಪ್ರಸಾದ್ ಮೌರ್ಯ

    ಅಖಿಲೇಶ್ ಆಡಳಿತದಲ್ಲಿ ಗಲಭೆ, ಗೂಂಡಾಗಿರಿ, ವಲಸೆ ಹೆಚ್ಚಿತ್ತು: ಕೇಶವ್ ಪ್ರಸಾದ್ ಮೌರ್ಯ

    ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಡಳಿತದಲ್ಲಿ ಗಲಭೆ, ಗೂಂಡಾಗಿರಿ, ವಲಸೆ ಹೆಚ್ಚಿತ್ತು ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ವಾಗ್ದಾಳಿ ಮಾಡಿದರು.

    ಇಂದು ಟ್ವಿಟ್ಟರ್‌ನಲ್ಲಿ ಮೌರ್ಯ ಅವರು, ಅಖಿಲೇಶ್ ಯಾದವ್ ಜೀ, ನಿಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಗಲಭೆ, ಗೂಂಡಾಗಿರಿ, ವಲಸೆಯ ನೋವನ್ನು ಜನರು ಮರೆತಿಲ್ಲ. ಭ್ರಷ್ಟಾಚಾರಕ್ಕೆ ಕಾರಣವಾದ ನಿಮ್ಮ ಅಧಿಕಾರಾವಧಿಯನ್ನು ಇಂದಿಗೂ ರಾಜ್ಯದ ಜನ ಮರೆತಿಲ್ಲ. ಈಗ ಜನರು ಉತ್ತಮ ಆಡಳಿತಕ್ಕೆ ಒಗ್ಗಿಕೊಂಡಿದ್ದಾರೆ. ಈಗ ಯಾರೂ ನಿಮ್ಮ ಆಕರ್ಷಣೆಗೆ ಮತ್ತು ದುರಾಸೆಗೆ ಬೀಳುವುದಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನೇತಾಜಿ ಕಾರ್ಯಕ್ರಮದಲ್ಲಿ TMC, BJP ಬೆಂಬಲಿಗರ ನಡುವೆ ಘರ್ಷಣೆ – ಕಲ್ಲು ತೂರಾಟ, 2 ಕಾರು ಧ್ವಂಸ

    ಜ.20ರಂದು, ಮೌರ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಅಖಿಲೇಶ್ ಯಾದವ್ ಅವರು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಅವರಿಗೆ ಇಂದು ಸವಾಲು ಹಾಕುತ್ತೇನೆ. ಅವರಿಗೆ ಧೈರ್ಯವಿದ್ದರೆ ಅವರೇ ಅಭಿವೃದ್ಧಿ ಮಾಡಿದ ಕ್ಷೇತ್ರದಲ್ಲಿ ಸ್ಪರ್ಧಿಸಲಿ. ಈಗ ಅವರು ಮೈನ್‍ಪುರಿ ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ನಾನು ಕೇಳಿದ್ದೇನೆ. ಪ್ರಮುಖ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಧೈರ್ಯವೂ ಅವರಿಗಿರಲಿಲ್ಲ ಎಂದು ಟೀಕಿಸಿದ್ದರು.

    ಬಿಜೆಪಿ ಅಖಿಲೇಶ್ ಯಾದವ್ ಅವರಿಗೆ ಟಫ್ ಫೈಟ್ ಕೊಡುತ್ತೆ. ನಂತರ ಅವರು ಸೈಕಲ್ ಸವಾರಿ ಮಾಡುವುದನ್ನು ಮರೆತುಬಿಡುತ್ತಾರೆ ಎಂದಿದ್ದರು.

    ಉತ್ತರಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಪುಷ್ಪ ಸಿನಿಮಾ ನೋಡಿ 24 ವರ್ಷದ ಯುವಕನ ಬರ್ಬರ ಹತ್ಯೆ – ಮೂವರು ಅರೆಸ್ಟ್

     

  • ಕ್ಲಬ್‍ಹೌಸ್ ಆ್ಯಪ್ ಚಾಟ್ ಪ್ರಕರಣ – 18ರ ಯುವಕ ಅರೆಸ್ಟ್

    ಕ್ಲಬ್‍ಹೌಸ್ ಆ್ಯಪ್ ಚಾಟ್ ಪ್ರಕರಣ – 18ರ ಯುವಕ ಅರೆಸ್ಟ್

    ಲಕ್ನೋ: ಕ್ಲಬ್‍ಹೌಸ್ ಆ್ಯಪ್‍ನಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ಚಾಟ್ ಮಾಡುತ್ತಿದ್ದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಕ್ಲಬ್‍ಹೌಸ್ ಆ್ಯಪ್‍ನಲ್ಲಿ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಮತ್ತು ನಿಂದನೀಯ ಕಮೆಂಟ್‍ಗಳನ್ನು ಮಾಡುತ್ತಿದ್ದ ಎಂದು ದೆಹಲಿ ಪೊಲೀಸರು ಲಕ್ನೋದ 18 ವರ್ಷದ ಯುವಕನನ್ನು ಬಂಧಿಸಿದ್ದಾರೆ.

    POLICE JEEP

    ಕ್ಲಬ್‍ಹೌಸ್ ಆ್ಯಪ್ ಚಾಟ್ ಪ್ರಕರಣ ತೀವ್ರವಾಗುತ್ತಿದ್ದಂತೆ ಆರೋಪಿಯನ್ನು ಹುಡುಕಲು ಲಕ್ನೋಗೆ ದೆಹಲಿ ಪೊಲೀಸರು ತೆರಳಿದ್ದರು. ಈ ಆ್ಯಪ್‍ನಲ್ಲಿ ‘ಬಿಸ್ಮಿಲ್ಲಾ’ ಎಂದು ಸುಳ್ಳು ಖಾತೆಯನ್ನು ತೆರೆದಿದ್ದ ಯುವಕ, ಮಹಿಳೆಯರ ಪೋಸ್ಟ್ ಗೆ ಅವಹೇಳನ ಕಮೆಂಟ್ ಮಾಡುತ್ತಿದ್ದನು. ಆದರೆ ಆತನ ನಿಜವಾದ ಹೆಸರು ರಾಹುಲ್ ಕಪೂರ್ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಜರಾಯಿ ತಹಶೀಲ್ದಾರ್ ಅರೆಸ್ಟ್

    ಪೊಲೀಸ್ ಉಪ ಆಯುಕ್ತ ಕೆಪಿಎಸ್ ಮಲ್ಹೋತ್ರಾ ಈ ಕುರಿತು ಮಾತನಾಡಿದ್ದು, ರಾಹುಲ್ ‘ಸಲ್ಲೋಸ್’ ವ್ಯಕ್ತಿ ಪ್ರೇರಣೆಯ ಮೇರೆಗೆ ಆಡಿಯೋ ಚಾಟ್ ರೂಮ್ ಅನ್ನು ರಚಿಸಿದ್ದ. ನಂತರ ಚಾಟ್ ರೂಮ್‍ನ ಮಾಡರೇಟರ್ ಕೀ ಅನ್ನು ಸಲ್ಲೋಸ್ ಗೆ ಕೊಟ್ಟಿದ್ದಾನೆ. ಕೀ ಬಳಸಿಕೊಂಡು ಆತ ಮಹಿಳೆಯರ ಜೊತೆ ಅಸಭ್ಯವಾಗಿ ಚಾಟ್ ಮಾಡುತ್ತಿದ್ದ ಎಂದು ತಿಳಿಸಿದರು.

    ಪ್ರಸ್ತುತ ರಾಹುಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಹೆಚ್ಚಿನ ತನಿಖೆ ಮಾಡಬೇಕಾಗಿದೆ ಎಂದು ತಿಳಿಸಿದರು.

  • ಐಪಿಎಲ್‌ನಲ್ಲೇ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ರಾಹುಲ್‌ಗೆ ಕ್ಯಾಪ್ಟನ್‌ ಪಟ್ಟ ಕಟ್ಟಿದ ಲಕ್ನೋ

    ಐಪಿಎಲ್‌ನಲ್ಲೇ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ರಾಹುಲ್‌ಗೆ ಕ್ಯಾಪ್ಟನ್‌ ಪಟ್ಟ ಕಟ್ಟಿದ ಲಕ್ನೋ

    ಮುಂಬೈ:  ಐಪಿಎಲ್‌ ಇತಿಹಾಸದಲ್ಲಿ ದುಬಾರಿ ಬೆಲೆ ನೀಡಿ ಕನ್ನಡಿಗ ಕೆಎಲ್‌ ರಾಹುಲ್‌ ಅವರನ್ನು ಲಕ್ನೋ ತಂಡ ಖರೀದಿಸಿ ನಾಯಕ ಪಟ್ಟ ನೀಡಿದೆ.

    ಹರಾಜಿಗೂ ಮೊದಲು ಲಕ್ನೋ ತಂಡ ಮೂವರು ಆಟಗಾರರನ್ನು ಆರಿಸಿಕೊಂಡಿದೆ. ಕೆಎಲ್‌ ರಾಹುಲ್‌ ಜೊತೆ ಆಸ್ಟ್ರೇಲಿಯದ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮತ್ತು ಭಾರತದ ಯುವ ಆಟಗಾರ ರವಿ ಬಿಷ್ಣೋಯ್ ಅವರನ್ನು ಲಕ್ನೋ ತಂಡ ಖರೀದಿಸಿದೆ.

    ರಾಹುಲ್ ಅವರಿಗೆ ಬರೋಬ್ಬರಿ 17 ಕೋಟಿ ರೂ. ನೀಡಿದೆ. ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಖರೀದಿಯಾದ ಆಟಗಾರನಾಗಿ ರಾಹುಲ್‌ ಹೊರಹೊಮ್ಮಿದ್ದಾರೆ.  ಸ್ಟೊಯಿನಿಸ್ 9.2 ಕೋಟಿ ರೂ. ಬಿಷ್ಣೋಯ್ ಅವರನ್ನು 4 ಕೋಟಿ ರೂ. ನೀಡಿ ಲಕ್ನೋ ತಂಡ ಖರೀದಿ ಮಾಡಿದೆ. ಇದನ್ನೂ ಓದಿ: 2022ರ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಭಾರತಕ್ಕೆ ಮೊದಲ ಎದುರಾಳಿ ಪಾಕ್

    ಈ ಹಿಂದೆ ದಕ್ಷಿಣ ಆ‍ಫ್ರಿಕಾದ ಕ್ರಿಸ್‌ ಮೋರಿಸ್‌ ಅವರನ್ನು 16.25 ಕೋಟಿ ನೀಡಿ ರಾಜಸ್ಥಾನ ತಂಡ ಖರೀದಿಸಿತ್ತು. ಈ ಬಾರಿ ಐಪಿಎಲ್‌ನಲ್ಲಿ ಚೆನ್ನೈ ತಂಡ ರವೀಂದ್ರ ಜಡೇಜಾ ಅವರಿಗೆ 16 ಕೋಟಿ ರೂ., ಧೋನಿಗೆ 12 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡರೆ, ಆರ್‌ಸಿಬಿ 15 ಕೋಟಿ ರೂ. ನೀಡಿ ಕೊಹ್ಲಿ ಅವರನ್ನು ಉಳಿಸಿಕೊಂಡಿದೆ.

    ಮೆಗಾ ಹರಾಜಿನ ಮೊದಲು ಡ್ರಾಫ್ಟ್ ಪಿಕ್‌ನ ಭಾಗವಾಗಿ ಲಭ್ಯವಿರುವ ಆಟಗಾರರ ಪೈಕಿ ಇಬ್ಬರು ಭಾರತೀಯ, ಒಬ್ಬ ವಿದೇಶಿ ಆಟಗಾರನನ್ನು ಆರಿಸಿಕೊಳ್ಳಲು  ಲಕ್ನೋ ಮತ್ತು ಅಹಮದಾಬಾದ್‌ ತಂಡಕ್ಕೆ  ಐಪಿಎಲ್‌ ಆಡಳಿತ ಮಂಡಳಿ  ಅವಕಾಶ ನೀಡಿತ್ತು.

    ರಾಹುಲ್ ಕಳೆದ ಎರಡು ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರಾಹುಲ್‌ ಮುನ್ನಡೆಸಿದ್ದರು. ಸ್ಟೊಯಿನಿಸ್ ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸಿದರೆ ಬಿಷ್ಣೋಯ್ ಪಂಜಾಬ್ ತಂಡದಲ್ಲಿ ಆಡಿದ್ದರು. ಇದನ್ನೂ ಓದಿ: ಒಂದೇ ರೈಡ್‍ನಲ್ಲಿ 8 ಅಂಕ – ವಿವಾದಾತ್ಮಕ ತೀರ್ಪು, ಸೋತ ಬುಲ್ಸ್

    ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಐಪಿಎಲ್‌ ಆಟ ಆರಂಭಿಸಿದ್ದ ರಾಹುಲ್‌ 2014ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಸೇರಿದ್ದರು. 2018ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 11 ಕೋಟಿ ರೂ. ನೀಡಿ ರಾಹುಲ್‌ ಅವರನ್ನು ಖರೀದಿಸಿತ್ತು.

  • ದೇಶದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪನೆ

    ದೇಶದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪನೆ

    ಲಕ್ನೋ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ಮೂಡಿ ಬಂದ ಹಿನ್ನೆಲೆಯಲ್ಲಿ ಭಾರತದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪನೆಗೊಂಡಿದೆ. ಭಾರತ ರಾಷ್ಟ್ರೀಯ ತಂಡದ ಪ್ರಧಾನ ಕೋಚ್ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಗೌರವ್ ಖನ್ನಾ, ಖಾಸಗಿ ಸಂಸ್ಥೆಯೊಂದರ ಜೊತೆ ಕೈಜೋಡಿಸಿ ಈ ಅಕಾಡೆಮಿ ಪ್ರಾರಂಭಿಸಿದ್ದಾರೆ.

    ಈ ಬಗ್ಗೆ ಗೌರವ್ ಖನ್ನಾ ಮಾತನಾಡಿ, 2024ರ ಪ್ಯಾರಾಲಿಂಪಿಕ್ಸ್‌ಗೆ ಭಾರತೀಯ ಶಟ್ಲರ್‌ಗಳ ಪ್ರದರ್ಶನ ಗುಣಮಟ್ಟವನ್ನು ಹೆಚ್ಚಿಸಲು ಈ ಅಕಾಡಮಿಯನ್ನು ಬಳಸಿಕೊಳ್ಳಲಾಗುತ್ತದೆ. 2028, 2023ರ ಒಲಂಪಿಕ್ಸ್‌ಗೆ ಹೊಸ ಪ್ರತಿಭೆಗಳನ್ನು ಹುಡುಕಿ, ಈ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತದೆ ಎಂದರು.

    ಭಾರತದಲ್ಲಿ ಹಲವಾರು ಪ್ಯಾರಾ ಚಾಂಪಿಯನ್‍ಗಳಿದ್ದಾರೆ. ಆದರೆ ಅವರು ಎಂದಿಗೂ ವೃತ್ತಿಪರ ಸೆಟಪ್‍ನಲ್ಲಿ ತರಬೇತಿ ಪಡೆದಿರಲಿಲ್ಲ. 2015ರಿಂದ ನಾನು ತಾತ್ಕಾಲಿಕವಾಗಿ ಬಾಡಿಗೆ ಸ್ಥಳಗಳಲ್ಲಿ ತರಬೇತಿ ಪಡೆಯುತ್ತಿದ್ದೆ. ಇದಕ್ಕಾಗಿಯೇ ಅಕಾಡೆಮಿಯನ್ನು ಪ್ರಾರಂಭಿಸಿದ್ದೇನೆ ಎಂದು ಹೇಳಿದರು.

    ಇಲ್ಲಿ ನಾವು ಪ್ಯಾರಾ-ಬ್ಯಾಡ್ಮಿಂಟನ್ ಆಟಗಾರರಿಗಾಗಿ ವಿಶ್ವ ದರ್ಜೆಯ ಸೌಲಭ್ಯವನ್ನು ನೀಡಿದ್ದೇವೆ. ಇಲ್ಲಿ ತರಬೇತಿ ನೀಡುವುದು ಮಾತ್ರವಲ್ಲದೆ ಅವರ ಆಟದ ಮೇಲೆ ಸಂಪೂರ್ಣವಾಗಿ ಗಮನ ಹರಿಸಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಲಡಾಖ್‌ನಲ್ಲಿ ಚೀನಾದಿಂದ ಪ್ಯಾಂಗ್ಯಾಂಗ್‌ ಸೇತುವೆ ನಿರ್ಮಾಣ – ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

    ಈ ಉನ್ನತ ಪ್ರದರ್ಶನ ಕೇಂದ್ರದಲ್ಲಿ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ಮಾನದಂಡದ ಅನ್ವಯ ನಿಂತು ಆಡಲು ಶಟ್ಲರ್‌ಗಳ ಅಭ್ಯಾಸಕ್ಕೆ 2 ಸಿಂಥೆಟಿಕ್ ಮ್ಯಾಟ್ಸ್‍ಗಳನ್ನು ಒಳಗೊಂಡ ಅಂಕಣ, ವೀಲ್ಹ್ ಚೇರ್ ಬಳಸಿ ಆಡುವ ಶಟ್ಲರ್‌ಗಳ ಅಭ್ಯಾಸಕ್ಕೆ 2 ಮರದ ಹಾಸಿನ ಅಂಕಣಗಳನ್ನು ಸಿದ್ಧಗೊಳಿಸಲಾಗಿದೆ. ಜಿಮ್ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಅಕಾಡೆಮಿ ಒಳಗೊಂಡಿದೆ. ಇದನ್ನೂ ಓದಿ:  ಮಹಾರಾಷ್ಟ್ರ ನಗರ ಪಂಚಾಯತ್‌ ಚುನಾವಣಾ ಫಲಿತಾಂಶ – ಬಿಜೆಪಿ ಅತಿ ದೊಡ್ಡ ಪಕ್ಷ

    ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪ್ರಮೋದ್ ಭಗತ್ ಮತ್ತು ಕೃಷ್ಣನಗರ ಸಿಂಗಲ್ಸ್‍ನಲ್ಲಿ ಚಿನ್ನದ ಪದಕ ಹಾಗೂ ಸುಹಾಸ್ ಯತಿರಾಜ್ ಮತ್ತು ಮನೋಜ್ ಸರ್ಕಾರ್ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು.