ಲಕ್ನೋ: ಪರಿವಾರವಾದಿಗಳು ಪಡಿತರವನ್ನು ಲೂಟಿ ಮಾಡಿದರು. ಆದರೆ ಬಿಜೆಪಿಯ ಒಂದು ರಾಷ್ಟ್ರ ಒಂದು ಪಡಿತರ ಚೀಟಿಯೊಂದಿಗೆ ಅವರ ಆಟವನ್ನು ಕೊನೆಗೊಳಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಉತ್ತರ ಪ್ರದೇಶದ ಕೌಶಾಂಬಿಯಲ್ಲಿನ ಪ್ರಚಾರದಲ್ಲಿ ಮಾತನಾಡಿದ ಅವರು, ಪರಿವಾರವಾದಿಗಳು ಬಡವರ ಪಡಿತರವನ್ನು ದೀರ್ಘಕಾಲ ಲೂಟಿ ಮಾಡಿದ್ದಾರೆ. ಆದರೆ ಬಿಜೆಪಿ ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆಯನ್ನು ತರುವ ಮೂಲಕ ಅದನ್ನು ಕೊನೆಗೊಳಿಸಿದೆ ಎಂದು ಪರೋಕ್ಷವಾಗಿ ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಬಿಜೆಪಿಯ ಕೋವಿಡ್ ಲಸಿಕೆ ಬಗೆಗಿನ ಟೀಕೆಗಳಿಗಾಗಿ ವ್ಯಂಗ್ಯವಾಡಿದರು. ಇದನ್ನೂ ಓದಿ: ವಿಶ್ವದ ನಂ.1 ಚೆಸ್ ಆಟಗಾರನ ವಿರುದ್ಧ ಗೆಲುವು – ಮೋದಿಯಿಂದ ಪ್ರಜ್ಞಾನಂದನಿಗೆ ಅಭಿನಂದನೆ
ಈ ಹಿಂದೆ ನೀವು ಕೋವಿಡ್ ಸಮಯದಲ್ಲಿ ಕೆಲ ನಾಯಕರನ್ನು ನೋಡಬೇಕು, ಕೊರೊನಾ ಸಾಂಕ್ರಾಮಿಕ ರೋಗವು ದೇಶದೆಲ್ಲಡೆ ಅತ್ಯಂತ ಗರಿಷ್ಠ ಮಟ್ಟದಲ್ಲಿದ್ದಾಗ ಮಾತನಾಡಿದ ಒಬ್ಬರು ಬಿಜೆಪಿ ಸರ್ಕಾರ ನಿಯಂತ್ರಿಸಿದಾಗ ಕಣ್ಮರೆಯಾದರು ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಆರ್ಸಿಬಿಯಲ್ಲಿ K.G.F ಸ್ಟಾರ್ಸ್
ಲಸಿಕೆ ವಿರುದ್ಧ ಕೆಲ ಪಕ್ಷದ ನಾಯಕರು ಜನರಿಗೆ ತಪ್ಪು ಮಾಹಿತಿ ನೀಡಿ ಪ್ರಚೋದಿಸಿದ್ದರು. ಆದರೆ ಅಂತಹ ನಾಯಕರೇ ಕೊನೆಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಲಸಿಕೆ ಹಾಕಿಸಿಕೊಂಡಿದ್ದಾರೆ. ಯುಪಿಯ ಜನರಿಗೆ ಇಂತಹ ಪ್ರಚೋದಿತ ನಾಯಕರ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ತಿರುಗೇಟು ನೀಡಿದರು.
ಲಕ್ನೋ: ನ್ಯಾಯ ಸಿಗಲಿಲ್ಲವೆಂದು ಮಹಿಳೆಯೊಬ್ಬಳು ಪೊಲೀಸ್ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡಿರುವ ಘಟನೆ ನೊಯ್ಡಾದಲ್ಲಿ ನಡೆದಿದೆ.
ತನಗೆ ಲೈಂಗಿಕ ಕಿರುಕುಳ ನೀಡಿದ ಮಾವನ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ನಿರಾಕರಿಸಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ನಿನ್ನೆ ನೊಯ್ಡಾ 2ನೇ ಹಂತದ ಪೊಲೀಸ್ ಠಾಣೆಯ ಹೊರಗೆ ಬೆಂಕಿ ಹಚ್ಚಿಕೊಂಡಿದ್ದಾರೆ. ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ದೇಹ 40% ಸುಟ್ಟುಹೋಗಿದೆ. ಈ ಹಿನ್ನೆಲೆ ಆಕೆಯನ್ನು ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹ – ನವದಂಪತಿ ಆತ್ಮಹತ್ಯೆ
ನೊಯ್ಡಾದ ಇಲಾಬಸ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸರು ಸಂತ್ರಸ್ತೆಯ ದೂರನ್ನು ತೆಗೆದುಕೊಳ್ಳಲು ನಿರಕಾರಿಸಿದ್ದರು. ಪರಿಣಾಮ ಮಹಿಳೆ ಈ ರೀತಿ ಕೃತ್ಯಕ್ಕೆ ಕೈಹಾಕಿದ್ದಾಳೆ. ಘಟನೆ ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ತನ್ನ ಆಳಲನ್ನು ಹೇಳಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಏನಿದು ಘಟನೆ?
ಗೌತಮ್ ಬುಧ್ ನಗರದ ಜಂಟಿ ಪೊಲೀಸ್ ಕಮಿಷನರ್ ಲವ್ ಕುಮಾರ್ ಈ ಕುರಿತು ಮಾತನಾಡಿದ್ದು, ಮಹಿಳೆಯು ಇಲಬಾಸ್ ಗ್ರಾಮದ ನೀರಜ್ ಮತ್ತು ಸುಮಿತ್ ಹೆಸರಿನ ಇಬ್ಬರು ಪುರುಷರ ವಿರುದ್ಧ ಎನ್‍ಎಸ್‍ಇಜೆಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆದರೆ ಅವರು ದೂರು ತೆಗೆದುಕೊಳ್ಳಲು ನಿರಾಕರಿಸಿದ್ದು, ತನ್ನ ವ್ಯಕ್ತಿತ್ವಕ್ಕೆ ಹಾನಿ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಸಂಗೀತ ರೋಚಿಗೆದ್ದಿದ್ದಾಳೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 1,200 ವರ್ಷದಷ್ಟು ಹಳೆಯ ಮಕ್ಕಳ, ವಯಸ್ಕರ ಅವಶೇಷ ಪತ್ತೆ!
ಈ ವೇಳೆ ಆಕೆಯ ವಿರುದ್ಧವೂ ಪೊಲೀಸರಿಗೆ ದೂರು ಬಂದಿದೆ. ಈ ದೂರಿನಲ್ಲಿ ಸಂಗೀತ ಸಾಕಷ್ಟು ಜನರಿಂದ ಸಾಲ ಪಡೆದಿದ್ದಾರೆ. ಆದರೆ ತೆಗೆದುಕೊಂಡಿದ್ದ ಹಣವನ್ನು ಹಿಂತಿರುಗಿಸುತ್ತಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಸಂಬಂಧ ಭಾನುವಾರ ಎರಡೂ ಕಡೆಯವರನ್ನು ಠಾಣೆಗೆ ಕರೆಸಲಾಗಿತ್ತು. ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ತಿಳಿಸಲಾಗಿತ್ತು. ಆದರೆ ಆಕೆ ಮಂಗಳವಾರ ಪೊಲೀಸ್ ಠಾಣೆಗೆ ಬಂದು ಆತ್ಮಾಹುತಿಗೆ ಯತ್ನಿಸಿದ್ದಾಳೆ ಎಂದು ತಿಳಿಸಿದ್ದಾರೆ. ನೊಯ್ಡಾ ಹಂತ 1ರ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ.
ಲಕ್ನೋ: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ನಿಂದ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ.
ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಕಾಶಿ ವಿಶ್ವನಾಥನ ದರ್ಶನ ಪಡೆಯಲು ಹಲವು ಭಕ್ತಾದಿಗಳು ತುಂಬಾ ದಿನದಿಂದ ಕಾಯುತ್ತಿರುತ್ತಾರೆ. ಭಕ್ತರಿಗಾಗಿ ದೇವಸ್ಥಾನ ಟ್ರಸ್ಟ್ ಒಂದು ಹೊಸ ಅಪ್ಲಿಕೇಶನ್ ಬಿಟ್ಟಿದೆ. ಈ ಅಪ್ಲಿಕೇಶನ್ ನಲ್ಲಿ ಭಕ್ತರು ನೋಂದಾಯಿಸಿಕೊಳ್ಳುವ ಮೂಲಕ ದರ್ಶನವನ್ನು ಪಡೆಯಬಹುದು. ಈ ಆ್ಯಪ್ ಮೂಲಕ ಯಾವ ವೇಳೆ ಕಾಶಿ ದರ್ಶನ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳಬಹುದು. ಆ್ಯಪ್ ನಲ್ಲಿ ದರ್ಶನಕ್ಕೆ ಸರಿಯಾದ ಮಾರ್ಗ ಮತ್ತು ಸಮಯದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತೆ. ಇದನ್ನೂ ಓದಿ: ಈ ಅಪರೂಪದ ಕೃತಿಯ ದರ್ಶನ ಪಡೆದರೆ ಮಾನವನ ಎಲ್ಲ ಸಂಕಷ್ಟ ದೂರ!
ಆ್ಯಪ್‍ನಲ್ಲಿ ಭಕ್ತರು ನೋಂದಾಯಿಸಿಕೊಂಡರೆ ದೇವಾಲಯದ ಆಡಳಿತವು ಅವರಿಗೆ ಒಂದು ನಿರ್ದಿಷ್ಟ ಸಮಯ ಕೊಟ್ಟು ದೇವರ ದರ್ಶನ ಪಡೆಯುವಂತೆ ಸೂಚಿಸುತ್ತೆ. ಈ ಮೂಲಕ ದೇವಾಲಯದ ಆಡಳಿತ ಮಂಡಳಿಯು ಜನಸಂದಣಿಯನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
ಡೌನ್‍ಲೋಡ್ ಮಾಡುವುದು ಹೇಗೆ!
ಮಾಹಿತಿಗಳ ಪ್ರಕಾರ, ಆ್ಯಪ್ ಸದ್ಯಕ್ಕೆ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಲಿದೆ. ಇದನ್ನು ಪ್ಲೇ ಸ್ಟೋರ್‌ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ಅಪ್ಲಿಕೇಶನ್‍ನ ವೈಶಿಷ್ಟ್ಯವೆಂದರೆ ಇದು ಹಿಂದಿ, ಇಂಗ್ಲಿಷ್ ಮತ್ತು ದಕ್ಷಿಣ ಭಾರತದ ಹಲವು ಭಾಷೆಗಳನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.
ಯಾವ ರೀತಿ ಇರುತ್ತೆ?
ಶಿವರಾತ್ರಿ(ಮಾರ್ಚ್ 1) ದಿನ ಗಂಗಾನದಿಯ ಕಡೆಯಿಂದಲೂ ಹಲವು ಭಕ್ತರು ಬರತ್ತಾರೆ. ಅದಕ್ಕೆ ಭಕ್ತರಿಗಾಗಿ ಹೊಸ ಮಾರ್ಗವನ್ನು ತೆರೆಯಲಾಗುತ್ತಿದೆ ಎಂದು ವಿಭಾಗೀಯ ಆಯುಕ್ತ ದೀಪಕ್ ಅಗರವಾಲ್ ತಿಳಿಸಿದ್ದಾರೆ. ಅಲ್ಲದೆ ಎಲ್ಲ ಪ್ರವೇಶ ದ್ವಾರಗಳಿಂದ ಗರ್ಭಗುಡಿ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದೆ.
ವಿವಿಧೆಡೆ LED ಅಳವಡಿಸುವ ಮೂಲಕ ಕಾಶಿ ವಿಶ್ವನಾಥ ದೇವಸ್ಥಾನದ ಗರ್ಭಗುಡಿಯ ನೇರ ದರ್ಶನವನ್ನು ಭಕ್ತರಿಗೆ ಮಾಡಿಲಾಗುತ್ತಿದೆ. ವಿವಿಐಪಿಗಳು ಜಲಮಾರ್ಗದ ಮೂಲಕ ಬರುವಂತೆ ಮನವಿ ಮಾಡಲಾಗಿದೆ. ಮೈದಾಗಿನ್ ಮತ್ತು ಗೋಡೋಲಿಯಾದಿಂದ ಯಾವುದೇ ದೊಡ್ಡ ವಾಹನಗಳನ್ನು ಅನುಮತಿಸಲಾಗುವುದಿಲ್ಲ. ವಿಕಲಚೇತನರು ಮತ್ತು ವೃದ್ಧರಿಗಾಗಿ ದೇವಾಲಯದ ಆಡಳಿತ ಮಂಡಳಿಯಿಂದ ಇ-ರಿಕ್ಷಾಗಳನ್ನು ನಡೆಸಲಾಗುವುದು.
ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು, ವಿವಿಧೆಡೆ ನೀರಿಗಾಗಿ ಹಾಗೂ ರಾತ್ರಿ ವೇಳೆ ನಡೆಯುವ ಕಾರ್ಯಕ್ರಮಗಳಿಗೆ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಲ್ಲಲು ಆವರಣದಲ್ಲಿ ಸ್ಟೀಲ್ ರೇಲಿಂಗ್‍ಗಳನ್ನು ಅಳವಡಿಸಲಾಗುವುದು. ದೇವಾಲಯದಲ್ಲಿ ಟ್ಯಾಬ್ಲೋ ದರ್ಶನದ ವ್ಯವಸ್ಥೆಯು ಮುಂದುವರಿಯುತ್ತದೆ. ಈ ಮೂಲಕ ಭಕ್ತರಿಗೆ ದರ್ಶನ ಸುಲಭವಾಗಲಿದೆ. ಇದನ್ನೂ ಓದಿ: ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ
ಶ್ರೀ ಕಾಶಿ ವಿಶ್ವನಾಥ ಧಾಮದ ನಿರ್ಮಾಣದ ನಂತರ, ಇದು ಮಹಾ ಶಿವರಾತ್ರಿಯ ಮೊದಲ ಆಚರಣೆಯಾಗಿದೆ. ವಿವಿಧ ಆಚರಣೆಗಳು ಮತ್ತು ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಗರದಲ್ಲಿ ಬಿಗಿ ಭದ್ರತೆ ಮಾಡುವಂತೆ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ.
ಲಕ್ನೋ: ಯುಪಿಯಲ್ಲಿ ನವವಿವಾಹಿತ ದಂಪತಿಯು ಮದುವೆ ಮಂಟಪದಿಂದಲೇ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿ ಗಮನ ಸೆಳೆದಿದ್ದಾರೆ.
ಸಾಮಾನ್ಯವಾಗಿ ಚುನಾವಣೆಯಲ್ಲಿ ನವವಿವಾಹಿತರು ಮತದಾನ ಮಾಡಲು ಮತಗಟ್ಟೆಗಳಿಗೆ ಧಾವಿಸುವ ಚಿತ್ರಗಳು ಮತ್ತು ವೀಡಿಯೋಗಳು ಸಾಕಷ್ಟು ಬಾರಿ ಸುದ್ದಿಯಾಗಿವೆ. ಆದರೆ ಇಲ್ಲಿ ಕೇವಲ ನವವಿವಾಹಿತ ದಂಪತಿ ಮಾತ್ರ ಭಾನುವಾರ ಫಿರೋಜಾಬಾದ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ
A newly-wed bride, Julie cast her vote at polling booth no.305 in Firozabad assembly constituency before leaving for her in-laws’ house. She got married last night and was leaving for her in-laws’ house this morning. #UttarPradeshElection2022pic.twitter.com/YtRxthyNik
ನವವಿವಾಹಿತ ವಧು, ಜೂಲಿ ತನ್ನ ಅತ್ತೆಯ ಮನೆಗೆ ಹೊರಡುವ ಮೊದಲು ಫಿರೋಜಾಬಾದ್ ಜಿಲ್ಲೆಯಲ್ಲಿ ವಧುವಿನ ಅವತಾರದಲ್ಲೇ ಮತ ಚಲಾಯಿಸಿದ್ದಾರೆ. ನಿನ್ನೆ ರಾತ್ರಿ ಮದುವೆಯಾಗಿರುವ ಅವರು ಇಂದು ಬೆಳಗ್ಗೆ ಅತ್ತೆಯ ಮನೆಗೆ ತೆರಳುತ್ತಿದ್ದರು. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!
ಹತ್ರಾಸ್, ಫಿರೋಜಾಬಾದ್, ಇಟಾಹ್, ಕಾಸ್ಗಂಜ್, ಮೈನ್‍ಪುರಿ, ಫರೂಕಾಬಾದ್, ಕನೌಜ್, ಇಟಾವಾ, ಔರೈಯಾ, ಕಾನ್ಪುರ್ ದೇಹತ್, ಕಾನ್ಪುರ್ ನಗರ್, ಜಲೌನ್, ಝಾನ್ಸಿ, ಲಲಿತ್‍ಪುರ್, ಹಮೀರ್‍ಪುರ್ ಮತ್ತು ಮಹೋಬಾದಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, ಸಂಜೆ 6ರವರೆಗೆ ನಡೆಯಲಿದೆ.
2017ರ ಚುನಾವಣೆಯಲ್ಲಿ, ಬಿಜೆಪಿಯು ಈ 59 ಸ್ಥಾನಗಳಲ್ಲಿ 49 ಸ್ಥಾನಗಳನ್ನು ಗೆದ್ದಿದ್ದರೆ, ಸಮಾಜವಾದಿ ಪಕ್ಷ 9 ಸ್ಥಾನ ಹಾಗೂ ಕಾಂಗ್ರೆಸ್ 1 ಸ್ಥಾನ ಪಡೆದಿತ್ತು. ಆದರೆ ಬಹುಜನ ಸಮಾಜವಾದಿ ಪಕ್ಷವೂ ಈ ಕ್ಷೇತ್ರಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ.
ಯೋಜನೆಯ ಉಸ್ತುವಾರಿ ರಾಜೀವ್ ಕುಲಶ್ರೇಷ್ಠ ಮತ್ತು ಇತರ ಮೂವರು ಅಧಿಕಾರಿಗಳನ್ನು ಎಎಐ ನೇಮಿಸಿದ್ದು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಯೋಧ್ಯೆ ವಿಮಾನ ನಿಲ್ದಾಣದ ನಿರ್ದೇಶಕರನ್ನಾಗಿ ಲಾಲ್ಜಿ ಮತ್ತು ಎಎಐನ ಇಬ್ಬರು ಸಹಾಯಕ ಪ್ರಧಾನ ವ್ಯವಸ್ಥಾಪಕರನ್ನು ಈಗಾಗಲೇ ನೇಮಿಸಲಾಗಿದೆ.
ಎಎಐ ಅಧಿಕಾರಿಗಳ ಪ್ರಕಾರ, ಯೋಜನೆಯ ಮೊದಲ ಹಂತವು ಸುಮಾರು ಒಂದೂವರೆ ಅಥವಾ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ 150 ಕೋಟಿ ರೂ. ಯೋಜನೆಯ ಮೊದಲ ಹಂತದಲ್ಲಿ, ಎಟಿಆರ್-72 ವಿಮಾನಗಳ ಲ್ಯಾಂಡಿಂಗ್‍ಗಾಗಿ 2,250 ಮೀಟರ್ ರನ್‍ವೇ ನಿರ್ಮಿಸಬೇಕಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಜಬ್ ಹೈಡ್ರಾಮಾ – ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಆರು ಯುವಕರು ವಶ
ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜನವರಿ 8ರಂದು ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಸಮಾರಂಭ ನಡೆಸಲು ಸಾಧ್ಯವಾಗಿರಲಿಲ್ಲ.
ಅಧಿಕಾರಿಗಳ ಪ್ರಕಾರ ಅಯೋಧ್ಯೆ ವಿಮಾನ ನಿಲ್ದಾಣವನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಸುಮಾರು 550 ಎಕರೆ ಭೂಮಿ ಅಗತ್ಯವಿದೆ. ಈ ಪೈಕಿ, ಅಯೋಧ್ಯೆಯಲ್ಲಿ ಅಸ್ತಿತ್ವದಲ್ಲಿರುವ ಏರ್‍ಸ್ಟ್ರಿಪ್ ಮತ್ತು ಟರ್ಮಿನಲ್ ಈಗಾಗಲೇ 182 ಎಕರೆಗಳನ್ನು ಹೊಂದಿದೆ.
ಅಯೋಧ್ಯೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರವು 250 ಕೋಟಿ ರೂಪಾಯಿ ಮಂಜೂರು ಮಾಡಿದ್ದು, ಉತ್ತರ ಪ್ರದೇಶ ಸರ್ಕಾರ ಹೆಚ್ಚುವರಿ ಭೂಮಿಯನ್ನು ಖರೀದಿಸಲು 321 ಕೋಟಿ ರೂಪಾಯಿಗೆ ಅನುಮೋದನೆ ನೀಡಿದೆ.
ನವೆಂಬರ್ 2018 ರಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎ320 ಮತ್ತು ಬಿ737 ನಂತಹ ದೊಡ್ಡ ವಿಮಾನಗಳಿಗಾಗಿ ಅಯೋಧ್ಯೆಯಲ್ಲಿ ಏರ್‍ಸ್ಟ್ರಿಪ್‍ನ ಅಭಿವೃದ್ಧಿ ಮತ್ತು ಸೂಕ್ತವಾದ ರನ್‍ವೇ ಮತ್ತು ಟರ್ಮಿನಲ್ ಕಟ್ಟಡದ ನಿರ್ಮಾಣವನ್ನು ಘೋಷಿಸಿದ್ದರು.
ವಿಮಾನ ನಿಲ್ದಾಣ ಯೋಜನೆಯನ್ನು ರಾಜ್ಯ ಸರ್ಕಾರವು ತ್ವರಿತವಾಗಿ ಟ್ರ್ಯಾಕ್ ಮಾಡಿತ್ತು. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯವು ತನ್ನ 23 ಎಕರೆ ಭೂಮಿಯನ್ನು ಕಳೆದ ಅಕ್ಟೋಬರ್‍ನಲ್ಲಿ ಹಸ್ತಾಂತರಿಸುವ ಪ್ರಸ್ತಾಪವನ್ನು ಸಹ ಅನುಮೋದಿಸಿತ್ತು.
ಉಪಕುಲಪತಿಗಳ ಅಧಿಕೃತ ನಿವಾಸ ಸೇರಿದಂತೆ ಈ ಭೂಮಿಯಲ್ಲಿರುವ ಸುಮಾರು 30 ಕಟ್ಟಡಗಳನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ.
ಅಯೋಧ್ಯೆ ವಿಮಾನ ನಿಲ್ದಾಣವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳಲ್ಲಿ ಒಂದಾಗಿದೆ. ಇದನ್ನು ದೇವಾಲಯಕ್ಕೆ ಬರುವ ಭಕ್ತರಿಗಾಗಿ ಅನುಮೋದಿಸಲಾಗಿದೆ.
ಲಕ್ನೋ: ನಾನೇಕೆ ಪ್ರಧಾನಿ ನರೇಂದ್ರ ಮೋದಿ ಮಾತನ್ನು ಕೇಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು.
ಮೋದಿ ಅವರು ಸಂದರ್ಶನವೊಂದರಲ್ಲಿ ಮಾತನಾಡುವಾಗ ‘ರಾಹುಲ್ ಯಾರ ಮಾತನ್ನು ಕೇಳುವುದಿಲ್ಲ’ ಎಂದಿದ್ದರು. ಈ ಹೇಳಿಕೆ ಕುರಿತು ಉತ್ತರಾಖಂಡದ ಮಂಗಳೂರಿನಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಮೋದಿ ಜೀ ನಾನು ಏನನ್ನು ಕೇಳುವುದಿಲ್ಲ ಎಂದಿದ್ದಾರೆ. ಅವರು ಏಕೆ ಈ ರೀತಿ ಹೇಳಿದ್ದಾರೆ ಎಂಬುದು ನಿಮಗೆ ಅರ್ಥವಾಗಿದೆಯೇ? ಎಂದು ಜನರನ್ನು ಪ್ರಶ್ನಿಸಿದರು. ಇದನ್ನೂ ಓದಿ: ಜನರನ್ನು ತಣ್ಣಗಾಗಿಸುವ ಬದಲು ಉದ್ಯೋಗವಕಾಶ ಹೆಚ್ಚಿಸಿ: ಯೋಗಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
ನಾವು ಜಾರಿ ನಿರ್ದೇಶನಾಲಯ(ಇಡಿ) ಮತ್ತು ಕೇಂದ್ರೀಯ ತನಿಖಾ ದಳದಂತಹ ಕೇಂದ್ರೀಯ ಸಂಸ್ಥೆಗಳ ಒತ್ತಡಕ್ಕೆ ಮಣಿಯುವುದಿಲ್ಲ. ಅಂದರೆ ಇಡಿ, ಸಿಬಿಐ ಒತ್ತಡವು ನನ್ನ ಮೇಲೆ ಕೆಲಸ ಮಾಡುವುದಿಲ್ಲ. ರಾಹುಲ್ ಎಂದೂ ಹಿಂದೆ ಸರಿಯುವುದಿಲ್ಲ. ನಾನು ಅವರ ಮಾತನ್ನು ಏಕೆ ಕೇಳಬೇಕು? ಎಂದು ವಾಗ್ವಾದ ಮಾಡಿದರು.
ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರಧಾನಿ ರಾಹುಲ್ ಅವರನ್ನು ಗುರಿಯಾಗಿಸಿಕೊಂಡು, ಏನನ್ನು ಕೇಳದ ಮತ್ತು ಸದನದಲ್ಲಿ ಕುಳಿತುಕೊಳ್ಳದ ವ್ಯಕ್ತಿ ಎಂದು ಹೇಳಿಕೆಯನ್ನು ಕೊಟ್ಟಿದ್ದರು. ಈ ಹೇಳಿಕೆಗೆ ರಾಹುಲ್ ಅವರು ತಿರುಗೇಟು ಕೊಟ್ಟಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೂಡ ಗುರುವಾರ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಷ್ಟ್ರಪತಿಗಳ ಭಾಷಣಕ್ಕೆ ಪ್ರಧಾನಿ ಸಂಸತ್ತಿನಲ್ಲಿ ಉತ್ತರ ಕೊಡುತ್ತಿದ್ದಾಗ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಲ್ಲಿ ಇರಲಿಲ್ಲ. ಅಷ್ಟೇ ಅಲ್ಲ, ಅವರು ಸಂಸತ್ತಿನಲ್ಲಿ ಅಷ್ಟಾಗಿ ಕಾಣುವುದಿಲ್ಲ. ಅವರು ಏನಾದರೂ ಹೇಳಿ ಸಂಸತ್ತಿನಿಂದ ಕಣ್ಮರೆಯಾಗುತ್ತಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಸಿಎಂ ಯೋಗಿ ವೇಷ ತೊಟ್ಟು ಮತಗಟ್ಟೆಗೆ ಬಂದ ವ್ಯಕ್ತಿ – ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದ ಜನ
ಲಕ್ನೋ: ಹಿಜಬ್ ಧರಿಸಿದ್ದ ಮಹಿಳೆ ಬೆನ್ನ ಮೇಲೆ ಯುವಕನೊಬ್ಬ ಸಮಾಜವಾದಿ ಪಕ್ಷದ ಸ್ಟಿಕ್ಕರ್ ಅಂಟಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕುರಿತು ಮಹಿಳೆಯೇ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಬ್ ವಿವಾದ ಭಾರತವನ್ನು ಆವರಿಸುತ್ತ ಇದೆ. ಈ ಪರಿಣಾಮ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ 2022ರ ಮೊದಲ ಹಂತದ ಮತದಾನ ಪ್ರಾರಂಭವಾಗುವುದಕ್ಕೂ ಮುನ್ನ ಪ್ರಚಾರ ಕಾರ್ಯ ನಡೆಯುತ್ತಿತ್ತು. ಈ ವೇಳೆ ಸಮಾಜವಾದಿ ಪಕ್ಷದ ಕಾರ್ಯಕರ್ತ, ಬುರ್ಖಾ ಧರಿಸಿದ ಮಹಿಳೆ ಬೆನ್ನಿನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ್ದಾನೆ.
यही है लाल टोपी के काले कारनामे।
एक राह चलती महिला के साथ सपा नेता की बदसलूकी देखिए…
ಈ ವೀಡಿಯೋವನ್ನು ನಿನ್ನೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಈ ವೀಡಿಯೋದಲ್ಲಿ ಒಬ್ಬ ಎಸ್‍ಪಿ ಕಾರ್ಯಕರ್ತ ತನ್ನ ಪಕ್ಷದ ಪೋಸ್ಟರ್ ಅನ್ನು ಮುಸ್ಲಿಂ ಮಹಿಳೆ ಬೆನ್ನ ಮೇಲೆ ಅಂಟಿಸುತ್ತಿರುವುದು ಕಂಡುಬಂದಿದೆ. ಇದಾದ ನಂತರ ಆತ ಮಹಿಳೆಯನ್ನು ಎಳೆದಾಡಿದ್ದಾನೆ. ಈ ಘಟನೆ ಲಕ್ನೋದಲ್ಲಿ ನಡೆದಿದೆ. ಇದು ಕೆಂಪು ಟೋಪಿಯ ಕಪ್ಪು ಶೋಷಣೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಂದಿಗೆ ಎಸ್‍ಪಿ ನಾಯಕನ ಅನುಚಿತ ವರ್ತನೆಯನ್ನು ನೋಡಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ವೀಡಿಯೋವನ್ನು ಅನುರಾಗ್ ಅವರು ಮೊದಲ ಹಂತದ ಮತದಾನಕ್ಕೂ ಮುನ್ನ ಹಂಚಿಕೊಂಡಿದ್ದು, ಪಕ್ಷಕ್ಕೆ ನಿಮ್ಮ ಮತ ಹಾಕಬೇಡಿ ಎಂದು ಪರೋಕ್ಷವಾಗಿ ಜನರಿಗೆ ಕರೆ ಕೊಟ್ಟಿದ್ದಾರೆ. ವೀಡಿಯೋ ವೈರಲ್ ಆಗುತ್ತಿದಂತೆ ಮುಸ್ಲಿಂ ಮಹಿಳೆ ಮತ್ತು ಪೋಸ್ಟರ್ ಅಂಟಿಸಿದ ಯುವಕ ಈ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಮಹಿಳೆ-ಯುವಕ ಹೇಳಿದ್ದೇನು?
ಯುವಕ ಮೊಹಮ್ಮದ್ ಜೈನುದ್ ಈ ಕುರಿತು ಮಾಹಿತಿ ನೀಡಿದ್ದು, ನಾವು ಅಕ್ಕ-ತಮ್ಮ. ನಾವಿಬ್ಬರು ಸಮಾಜವಾದಿ ಪಕ್ಷದ ಪ್ರಚಾರ ಮಾಡುತ್ತಿದ್ದ ವೇಳೆ ವೀಡಿಯೋ ಮಾಡಲಾಗಿದೆ ಎಂದು ಹೇಳಿದ್ದಾರೆ.
ಬುರ್ಖಾಧಾರಿ ಶಬ್ಬೋ ಈ ಕುರಿತು ಪ್ರತಿಕ್ರಿಯಿಸಿದ್ದು, ಜೈನುದ್ ನನ್ನ ಕಿರಿಯ ಸಹೋದರ. ನಾವು ಒಟ್ಟಾಗಿ ಸಮಾಜವಾದಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದೆವು. ಪರಸ್ಪರ ತಮಾಷೆ ಮಾಡುತ್ತಿದ್ದೆವು. ಈ ಸಮಯದಲ್ಲಿ ನನಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಬಿಜೆಪಿ ಪಕ್ಷದವರು ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಲಕ್ನೋ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಆರಂಭವಾಗಿದ್ದು, ನಿಮ್ಮ ಮತವೇ ಉಜ್ವಲ ಭವಿಷ್ಯಕ್ಕೆ ಆಧಾರವೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತದಾರರಿಗೆ ಕರೆಕೊಟ್ಟಿದ್ದಾರೆ.
ಅಮಿತ್ ಶಾ ಅವರು ಟ್ವಿಟ್ಟರ್ ನಲ್ಲಿ, ಇಂದು ಉತ್ತರಪ್ರದೇಶದಲ್ಲಿ ಮೊದಲ ಹಂತದ ಮತದಾನವಾಗಲಿದ್ದು, ರಾಜ್ಯದಲ್ಲಿ ಅಭಿವೃದ್ಧಿಯೊಂದಿಗೆ ಭದ್ರತೆ, ಗೌರವ ಮತ್ತು ಉತ್ತಮ ಆಡಳಿತ ನೀಡುವ ಸರ್ಕಾರವನ್ನು ಆಯ್ಕೆ ಮಾಡಬೇಕು. ಈ ಹಂತದ ಮತದಾನದಲ್ಲಿ ನನ್ನ ಎಲ್ಲ ಸಹೋದರ ಸಹೋದರಿಯರು ನಮ್ಮ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ನಿಮ್ಮ ಒಂದು ಮತವು ಉತ್ತರಪ್ರದೇಶದ ಉಜ್ವಲ ಭವಿಷ್ಯದ ಆಧಾರವಾಗಿದೆ ಎಂದು ಟ್ವೀಟ್‍ನಲ್ಲಿ ಮಾಡಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ
आज उत्तर प्रदेश में प्रथम चरण का मतदान है। मैं इस चरण के सभी भाइयों-बहनों से अपील करता हूँ कि प्रदेश में विकास के साथ-साथ आपको सुरक्षा, सम्मान व सुशासन देने वाली सरकार को चुनने के लिए अधिक से अधिक संख्या में मतदान करें।
आपका एक वोट उत्तर प्रदेश के उज्ज्वल भविष्य का आधार है।
ಉತ್ತರಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮೊದಲ ಹಂತದ ಮತದಾನ ನಡೆಯಲಿದೆ. ಇಂದು ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ.
ಮಥುರಾ, ಮುಜಾಫರ್‍ನಗರ, ಮೀರತ್, ಗಾಜಿಯಾಬಾದ್, ಬುಲಂದ್‍ಶಹರ್, ಹಾಪುರ್, ಶಾಮ್ಲಿ, ಬಾಗ್‍ಪತ್, ಅಲಿಗಢ್, ಆಗ್ರಾ ಮತ್ತು ಗೌತಮ್ ಬುದ್ಧ ನಗರ ಜಿಲ್ಲೆಗಳಲ್ಲಿ ಇಂದು ಮತದಾನ ನಡೆಯಲಿದೆ. ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ 623 ಅಭ್ಯರ್ಥಿಗಳು ಕಣದಲ್ಲಿದ್ದು, ಸುಮಾರು 2.27 ಕೋಟಿ ಮತದಾರರು ಈ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಮೊದಲ ಹಂತದ ಚುನಾವಣಾ ಪ್ರಚಾರ ಮಂಗಳವಾರ ಸಂಜೆ ಮುಕ್ತಾಯಗೊಂಡಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು 412 ಕಂಪನಿಗಳ ಕೇಂದ್ರೀಯ ಅರೆಸೇನಾ ಪಡೆಗಳ ಸುಮಾರು 50,000 ಸಿಬ್ಬಂದಿಯನ್ನು ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಇದನ್ನೂ ಓದಿ: ಶುಭ ಸುದ್ದಿ – ಅಂತಿಮ ಹಂತದಲ್ಲಿದೆ 5ಜಿ ನೆಟ್ವರ್ಕ್
ಇಂದು ಮತದಾನ ನಡೆಯಲಿರುವ 58 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿ ಕಾಪಾಡಲು ಪೊಲೀಸರು ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.
ಲಕ್ನೋ: ಕಾನ್ಪುರದ ನರ್ವಾಲ್ ಪ್ರದೇಶದ ಜಮೀನಿನಲ್ಲಿ 10 ವರ್ಷದ ಬಾಲಕನ ದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತ ದೇಹವನ್ನು ಕಾನ್ಪುರ ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಕಾನ್ಪುರ ನರ್ವಾಲ್ ಜಿಲ್ಲೆಯ ಬೆಹ್ತಾ ಗ್ರಾಮದ ನಿವಾಸಿಯಾಗಿರುವ ಬಾಲಕ ಸೋಮವಾರದಿಂದ ನಾಪತ್ತೆಯಾಗಿದ್ದನು. ಅದಕ್ಕೆ ಪೋಷಕರು ಬಾಲಕನನ್ನು ಪತ್ತೆ ಮಾಡಿ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಪ್ರಕರಣದ ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಬಾಲಕನ ದೇಹ ಸಿಕ್ಕಿದ್ದು, ಚಿತ್ರಹಿಂಸೆ ಕೊಟ್ಟು ಸಾಯಿಸಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಬೆಳಗಾವಿಯ ಮೂವರು ಯುವತಿಯರು ನಾಪತ್ತೆ!
ಘಟನೆ ವಿವರ:
ಪೊಲೀಸರು ಬಾಲಕ ಶವವನ್ನು ಪತ್ತೆ ಮಾಡಿದಾಗ ಆತನ ಶವವೂ ವಿರೂಪಗೊಂಡ ಸ್ಥಿತಿಯಲ್ಲಿ ಸಿಕ್ಕಿದೆ. ಪರಿಣಾಮ ಪೊಲೀಸರು ಬಾಲಕನ ಶವದ ಬಗ್ಗೆ ವಿವರಿಸಿದ್ದು, ಬಾಲಕನ ಕಣ್ಣಿಗೆ ಮೊಳೆ ಹೊಡೆದಂತೆ ತೋರುತ್ತಿದ್ದು, ಆತನ ಮುಖವನ್ನು ಸಿಗರೇಟ್‍ನಿಂದ ಸುಡಲಾಗಿದೆ ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ. ದೇಹದ ಕುತ್ತಿಗೆ ಮೇಲೆ ಆಗಿರುವ ಕಲೆಗಳನ್ನು ನೋಡಿದರೆ ಬಾಲಕನನ್ನು ಕೊಲೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತೆ. ಅಲ್ಲದೆ ಬಾಲಕನನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ. ಪ್ರಸ್ತುತ ಬಾಲಕನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿಯಿಂದ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಸಿಒ ಸದರ್ ರಿಷಿಕೇಶ್ ಯಾದವ್ ಹೇಳಿದ್ದಾರೆ. ಪ್ರಸ್ತುತ ಕೆಲವು ಶಂಕಿತರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕಾನ್ಪುರ ಹೊರಾಂಗಣ ಎಸ್‍ಪಿ ಅಜಿತ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!
ಲಕ್ನೋ: ಚರಂಡಿ ವಿವಾದ ಬಗೆಹರಿಸಲು ಹೋದ ಪೊಲೀಸರನ್ನು ಗ್ರಾಮಸ್ಥರು ದೊಣ್ಣೆಯಿಂದ ಥಳಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಪಿಲಿಭಿತ್‍ನಲ್ಲಿ ಗ್ರಾಮಸ್ಥರ ನಡುವೆ ಚರಂಡಿ ವಿಚಾರದಲ್ಲಿ ಜಗಳವಾಗುತ್ತಿತ್ತು. ಪರಿಣಾಮ ಗ್ರಾಮದ ಕೆಲವರು ಈ ವಿಚಾರವನ್ನು ಬಗೆಹರಿಸಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದಕ್ಕೆ ಪೊಲೀಸರು ಗ್ರಾಮಕ್ಕೆ ಬಂದಿದ್ದು, ಜನರು ಅವರ ವಿರುದ್ಧವೇ ರೊಚ್ಚಿಗೆದ್ದಿದ್ದಾರೆ. ಗ್ರಾಮದ ಜನರೆ ಪೊಲೀಸರಿಗೆ ದೊಣ್ಣೆಯಿಂದ ಹೊಡೆಯಲು ಹೋಗಿದ್ದು, ಕಾನ್‍ಸ್ಟೆಬಲ್ ಒಬ್ಬರಿಗೆ ಮುರಿದಿದೆ. ಅಲ್ಲದೆ ಪೊಲೀಸರು ತಮ್ಮ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋಗಿದ್ದಾರೆ. ಇದನ್ನೂ ಓದಿ: ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!
ಏನಿದು?
ಇಕ್ಬಾಲ್ ಮತ್ತು ಆತನ ಸಹೋದರ ಮೌಸಂ ಅವರ ಮನೆಯ ಚರಂಡಿ ನೀರು ಸಾಲಿಗ್ರಾಮ ಮತ್ತು ಗ್ರಾಮದ ರಾಮಸ್ವರೂಪ ಅವರ ಹೊಲಗಳಿಗೆ ಹೋಗುತ್ತಿತ್ತು. ಪರಿಣಾಮ ಇದನ್ನು ಸಾಲಿಗ್ರಾಮ ವಿರೋಧಿಸಿದ್ದು, ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಈ ಹಿನ್ನೆಲೆ ಇಕ್ಬಾಲ್ ಪೊಲೀಸರಿಗೆ ಕರೆ ಮಾಡಿದ್ದು, ವಿಷಯವನ್ನು ತಿಳಿಸಿದ್ದಾರೆ. ಅದಕ್ಕೆ ಘಟನಾ ಸ್ಥಳಕ್ಕೆ ಜಾರಾ ಪೊಲೀಸ್ ಔಟ್‌ಪೋಸ್ಟ್ ಇನ್‍ಚಾರ್ಜ್ ಜಿತೇಂದ್ರ ಸಿಂಗ್, ಕಾನ್‍ಸ್ಟೆಬಲ್ ಮೋಹಿತ್ ಪಾಲ್ ಮತ್ತು ಹೆಡ್ ಕಾನ್‍ಸ್ಟೆಬಲ್ ಅನಿಲ್ ಬಂಗಂಜ್ ಹೋಗಿದ್ದಾರೆ.
ಪೊಲೀಸರು ಸ್ಥಳಕ್ಕೆ ತಲುಪುತ್ತಿದ್ದಂತೆ ಎರಡು ಕಡೆಗಳಲ್ಲಿ ಅನೇಕ ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಗ್ರಾಮದಲ್ಲಿ ಶಾಂತಿ ಕಾಪಾಡಲು ಪೊಲೀಸರು ಅಲ್ಲಿದ್ದವರನ್ನು ಸ್ಥಳದಿಂದ ಹೋಗಲು ತಿಳಿಸಿದರು. ಆದರೆ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸರನ್ನು ದೊಣ್ಣೆಗಳಿಂದ ಹೊಡೆದು ಅಲ್ಲಿಂದ ಓಡಿಸಲು ಯತ್ನಿಸಿದರು. ಹೇಗೋ ಪೊಲೀಸ್ ಸಿಬ್ಬಂದಿ ಹೊಲಗಳಿಂದ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ. ಈ ವೇಳೆ ಪೊಲೀಸರಿಗೆ ಗಾಯಗಳಾಗಿದ್ದು, ಕಾನ್ಸ್‍ಟೇಬಲ್ ಮೋಹಿತ್‍ನ ಮೂಗು ಮುರಿದಿದೆ.
ಹಲ್ಲೆ ವಿರುದ್ಧ ಪ್ರಕರಣ ದಾಖಲು!
ಪೊಲೀಸರ ವಿರುದ್ಧವೇ ಹಲ್ಲೆ ಮಾಡಿದ ಮಾಹಿತಿ ಪಡೆದ ಗಜರೌಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, 9 ಮಂದಿಯನ್ನು ಬಂಧಿಸಿದ್ದಾರೆ. ನಂತರ ಜರಾ ಪೊಲೀಸ್ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಮೇಲೆ ಹಲ್ಲೆ ಮಾಡಿದ ಪರಿಣಾಮ ಮಹಿಳೆ ಸೇರಿದಂತೆ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಪ್ರಕಾರ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಫಿಟ್ನೆಸ್‍ಗಾಗಿ ತಂದೆ ಜೊತೆ ಸೈಕ್ಲಿಂಗ್ – ಬಾಲಕನಿಗೆ ಡಿಕ್ಕಿ ಹೊಡೆದ ಟ್ರಕ್
ಪ್ರಸ್ತುತ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪಿಲಿಭಿತ್ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಪಿ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.