ಲಕ್ನೋ: ಅಪರಾಧ ಪ್ರಕರಣಗಳಲ್ಲಿ ಆಗಾಗ್ಗೆ ಸದ್ದು ಮಾಡುತ್ತಿರುವ ಉತ್ತರಪ್ರದೇಶದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಇಲ್ಲಿನ ಮುಜಾಫರ್‌ನಗರದಲ್ಲಿ ಬೆಳಕಿಗೆ ಬಂದಿದೆ.
ಮಹಿಳೆಯ ಗಂಡನನ್ನು ಹಿಡಿದು, ಮರಕ್ಕೆ ಕಟ್ಟಿಹಾಕಿ ಆತನ ಕಣ್ಣೆದುರೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮಂಗಳವಾರ ಹೊಸ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣವು ಈಚೆಗಷ್ಟೇ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯ ಮೇಲೆಯೇ ಐವರಿಂದ ರೇಪ್
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಪೊಲೀಸರು, ವ್ಯಕ್ತಿ ತನ್ನ ಪತ್ನಿಯನ್ನು ಆಕೆಯ ತಾಯಿಯ ಮನೆಯಿಂದ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಮಹಿಳೆಯನ್ನು ಮಾವಿನ ತೋಟಕ್ಕೆ ಎಳೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಾಲ್ವರು ಪುರುಷರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಉಳಿದ ಆರೋಪಿಗಳು ಆಕೆಯ ಗಂಡನ ಬಳಿ ನಿಂತಿದ್ದರು. ಇದಾದ ಬಳಿಕ ಯಾರಿಗೂ ಈ ವಿಷಯ ತಿಳಿಸದಂತೆ ದಂಪತಿಗೆ ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಯಿಯನ್ನೇ ಅತ್ಯಾಚಾರಗೈದ 23 ವರ್ಷದ ಮಗ
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲಕ್ನೋ: ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಮಾರ್ಚ್ 29 ರಿಂದ ನಿರಂತರ ವಿಚಾರಣೆ ನಡೆಸಲಾಗುವುದು ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ.
ವಾರಣಾಸಿ ಜಿಲ್ಲಾ ನ್ಯಾಯಾಲಯದ ವಿಚಾರಣೆಗೆ ತಡೆ ಕೋರಿ ವಾರಣಾಸಿಯ ಅಂಜುಮನ್ ಇಂತಾಝಾಮಿಯಾ ಮಸಾಜಿದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪ್ರಕಾಶ್ ಪಾಡಿಯಾ ಅವರ ಪೀಠ ನಿರಂತರ ವಿಚಾರಣೆ ನಡೆಸುವುದಾಗಿ ಹೇಳಿದೆ. ಇದನ್ನೂ ಓದಿ: ಸತತ 3ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ
ಜ್ಞಾನವಾಪಿ-ಕಾಶಿ ಭೂ ವಿವಾದ ಪ್ರಕರಣದಲ್ಲಿ ವಾರಣಾಸಿ ಕೆಳ ನ್ಯಾಯಾಲಯದ ಆದೇಶ ಸೇರಿದಂತೆ ಮೊಕದ್ದಮೆಗೆ ನ್ಯಾಯಾಲಯವು ಈಗಾಗಲೇ ತಡೆ ನೀಡಿದೆ. ಇದರಲ್ಲಿ ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‍ಐ) ನಿರ್ದೇಶನ ನೀಡಿತ್ತು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ತಾಯಿ, ಮಗ ಆತ್ಮಹತ್ಯೆ
ಸ್ವಯಂ ಭೂ ಭಗವಂತ ವಿಶ್ವೇಶ್ವರನು ವಿವಾದಿತ ರಚನೆಯಲ್ಲಿ ನೆಲೆಸಿದ್ದಾನೆ. ಆದ್ದರಿಂದ ವಿವಾದಿತ ಭೂಮಿ ಸ್ವತಃ ವಿಶ್ವೇಶ್ವರನ ಅವಿಭಾಜ್ಯ ಅಂಗವಾಗಿದೆ ಎಂದು ಸಲ್ಲಿಕೆಯಾಗಿತ್ತು. ಇದಕ್ಕೆ ಪ್ರತಿವಾದ ಮಂಡಿಸಿದ ಮಜಿದ್ ಸಮಿತಿಯು ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ, 1991 ರ ನಿಬಂಧನೆಗಳ ಪ್ರಕಾರ ಅನ್ವಯವಾಗುವುದಿಲ್ಲ. ಹೀಗಾಗಿ ಅರ್ಜಿ ವಜಾ ಮಾಡುವಂತೆ ಮನವಿ ಮಾಡಿತ್ತು.
ಲಕ್ನೋ: ಸಮಾಜವಾದಿ ಪಕ್ಷದ ಮೈತ್ರಿಕೂಟದ ಸವಾಲನ್ನು ಬದಿಗೊತ್ತಿ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಮೊದಲ ದಿನವೇ ನಮ್ಮ ಗೆಲುವು ಸ್ಪಷ್ಟವಾಗಿತ್ತು ಎಂದು ಕೇಶವ್ ಮೌರ್ಯ ಅವರನ್ನು ಸೋಲಿಸಿದ ಪಲ್ಲವಿ ಪಟೇಲ್ ತಿಳಿಸಿದರು.
ಯುಪಿಯಲ್ಲಿ ಗೆದ್ದ ಬಳಿಕ ಮೊದಲಬಾರಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಲ್ಲವಿ ಅವರು, ಸಿರತುದಲ್ಲಿನ ನನ್ನ ಗೆಲುವು ಮೊದಲ ದಿನದಿಂದ ಸ್ಪಷ್ಟವಾಗಿತ್ತು. ಏಕೆಂದರೆ ಮೌರ್ಯ ಮತ್ತು ಅವರ ಕುಟುಂಬವು ಸೃಷ್ಟಿಸಿದ ಅವ್ಯವಸ್ಥೆಯಿಂದ ಸಿರತುವಿನ ಜನರು ನೋವಿನಲ್ಲಿ ಮುಳುಗಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಸಭಾಪತಿ ಮೇಲೆ FIR ಹಾಕಿದ ಅಧಿಕಾರಿಯನ್ನ ಅಮಾನತು ಮಾಡಿ – ಪಕ್ಷಾತೀತವಾಗಿ ಒತ್ತಾಯ
ಪಲ್ಲವಿ ಹಿನ್ನೆಲೆ:
ಪಲ್ಲವಿ ಪಟೇಲ್ ಹೈದರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದ ಸೈಂಟಿಸ್ಟ್ ಆಗಿದ್ದರು. 2009ರಲ್ಲಿ ಪಲ್ಲವಿ ತಂದೆ ಮತ್ತು ಅಪ್ನಾ ದಳದ ಸಂಸ್ಥಾಪಕ ಸೋನೆಲಾಲ್ ಪಟೇಲ್ ಅವರ ಮರಣದ ನಂತರ 2009 ರಲ್ಲಿ ತಮ್ಮ ವೃತ್ತಿಯನ್ನು ತೊರೆದು ರಾಜಕೀಯಕ್ಕೆ ಸೇರಿದ್ದರು.
ಪಟೇಲ್ ಅವರ ಮರಣದ ನಂತರ, ಪಲ್ಲವಿ ಪಟೇಲ್ ಅವರ ತಾಯಿ ಕೃಷ್ಣಾ ಪಟೇಲ್ ಪಕ್ಷದ ಮುಖ್ಯಸ್ಥರಾದರು. 2014 ರ ಲೋಕಸಭಾ ಚುನಾವಣೆಯಲ್ಲಿ, ಅವರ ಸಹೋದರಿ ಮತ್ತು ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಪೂರ್ವ ಯುಪಿಯ ಮಿರ್ಜಾಪುರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು.
ಗೆದ್ದ ಸ್ವಲ್ಪದಿನಗಳ ಬಳಿಕ ಅನುಪ್ರಿಯಾ ಪಟೇಲ್ ಪ್ರತ್ಯೇಕ ಬಣವನ್ನು ರಚಿಸುವುದರೊಂದಿಗೆ ಪಕ್ಷವು ಬೇರ್ಪಟ್ಟಿತು. ನಂತರ ಅಪ್ನಾ ದಳ, ಬಿಜೆಪಿ ಜೊತೆ ಸೇರಿಕೊಂಡಿತು. 2019 ರಲ್ಲಿ ಲೋಕಸಭೆಗೆ ಮರು ಚುನಾಯಿತರಾದ ಕೇಂದ್ರ ಸಚಿವರಿಗೆ ನನ್ನ ಸಹೋದರಿಯೇ ಪ್ರಚಾರ ಮಾಡಿದರು. ಈ ವೇಳೆ ಸಿರತುದಲ್ಲಿ ನನ್ನ ವಿರುದ್ಧವೇ ಪ್ರಚಾರ ಮಾಡಲು ಮುಂದಾಗಿದ್ದರು ಎಂದು ವಿವರಿಸಿದರು.
ನನ್ನ ಸಹೋದರಿ ನನ್ನ ವಿರುದ್ಧವೇ ಪ್ರಚಾರ ಮಾಡಿರುವುದಕ್ಕೆ ನನಗೆ ಯಾವುದೇ ಬೇಸರಗಳಿಲ್ಲ. ಅವರು ಯಾವುದೂ ಒತ್ತಡದಲ್ಲಿರಬೇಕು. ಈ ಪ್ರಚಾರದಿಂದ ನನಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ ಆಕೆ ಪ್ರಚಾರವು ನನಗೆ ಕೆಲವು ರೀತಿಯಲ್ಲಿ ಒಳ್ಳೆಯದೆ ಆಗಿದೆ. ಅದಕ್ಕಾಗಿ ನಾನು ಅವಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತನ್ನ ಸಹೋದರಿಯೊಂದಿಗಿನ ಸಂಬಂಧದ ಬಗ್ಗೆ ಹೇಳಿದರು. ಇದನ್ನೂ ಓದಿ: ಯಾರೇ ಲಂಚ ಕೇಳಿದರೂ ಆಡಿಯೋ – ವೀಡಿಯೋ ನನಗೇ ಕಳುಹಿಸಿ: ಪಂಜಾಬ್ ಸಿಎಂ
ಕೇಶವ್ ಮೌರ್ಯ ವಿರುದ್ಧ 7,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸಿರತುದಿಂದ ಮೊದಲ ಬಾರಿಗೆ ಪಲ್ಲವಿ ಗೆದ್ದಿದ್ದಾರೆ. ಈ ವೇಳೆ ಸಿರತ್ತುನಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಗದ್ದಲ ಸೃಷ್ಟಿಸುತ್ತಿದ್ದ ಎರಡೂ ಕಡೆಯ ಬೆಂಬಲಿಗರನ್ನು ಚದುರಿಸಲು ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿ ಹಲವು ಬಾರಿ ಬಲಪ್ರಯೋಗ ಮಾಡಬೇಕಾಯಿತು.
ಲಕ್ನೋ: ಮದುವೆಗೆ ಒಪ್ಪಿಗೆ ನೀಡಿಲ್ಲವೆಂದು ಕೋಪಗೊಂಡ ಹುಡುಗಿ ಹೆತ್ತವರನ್ನೆ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬಿಜನೋರ್‌ನಲ್ಲಿ ನಡೆದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
17 ವರ್ಷದ ಹುಡುಗಿ 20 ವರ್ಷದ ಯುವಕನನ್ನು ಪ್ರೀತಿ ಮಾಡುತ್ತಿದ್ದಳು ಇವರ ಪ್ರೀತಿಗೆ ಹೆತ್ತವರು ಒಪ್ಪಿಗೆ ನೀಡಿಲ್ಲ. ಇಬ್ಬರು ಸೇರಿಕೊಂಡು ಕೊಲೆ ಮಾಡಿದ್ದಾರೆ. ಮಾರ್ಚ್ 6ರಂದು ಹುಡುಗಿ ತಂದೆ ಮೃತದೇಹ ಮನೆಯಲ್ಲಿ ಪತ್ತೆಯಾಗಿದೆ. ನಂತರ ಕೆಲವು ದಿನಗಳ ನಂತರ ಆಕೆ ತಾಯಿ ಮೃತದೇಹ ಪತ್ತೆಯಾಗಿದೆ. ಆದರೆ ಕೊಲೆ ವಿಚಾರವಾಗಿ ಹುಡಗಿ ಕಥೆ ಕಟ್ಟಿ ನಂಬಿಸುವ ಪ್ರಯತ್ನ ಮಾಡಿದ್ದಾಳೆ. ಇದನ್ನೂ ಓದಿ: ಹಿರಿಯ ವಕೀಲರು ಕಾಂಗ್ರೆಸ್ ಸಂಸ್ಕೃತಿಯ ವ್ಯಕ್ತಿಯಲ್ಲ: ಕಪಿಲ್ ಸಿಬಲ್ ವಿರುದ್ಧ ಗೆಹ್ಲೋಟ್ ಕಿಡಿ
ದಂಪತಿ ಒಂದೇ ರೀತಿ ಕೊಲೆಯಾಗಿರವ ವಿಚಾರವಾಗಿ ಅನುಮಾನಗೊಂಡು ತನಿಖೆ ನಡೆಸಿದಾಗ ಸತ್ಯ ಹೊರಗೆ ಬಂದಿದೆ. ಪರಿಯಸ್ಥರೇ ಕೊಲೆ ಮಾಡಿದ್ದಾರೆ ಎನ್ನುವ ಸಂದೇಹ ವ್ಯಕ್ತವಾಗಿತ್ತು. ನಂತರ ತನಿಖೆ ವೇಳೆ ಹುಡುಗಿ ತಾನೇ ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಹುಡುಗಿ ಅಪ್ರಾಪ್ತೆ ಆಗಿರುವುದರಿಂದ ಬಾಲಾರೋಪಿ ಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.
ಲಕ್ನೋ: ಹೋಳಿ ಹಬ್ಬದಂದು ‘ನರಬಲಿ’ ನೀಡಬೇಕೆಂದು 7 ವರ್ಷದ ಬಾಲಕಿಯನ್ನು ಅಪಹರಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.
ನೋಯ್ಡಾದಲ್ಲಿ ಹೋಳಿ ಹಬ್ಬದ ದಿನ ನರಬಲಿ ಕೊಡಬೇಕು ಎಂದು ಏಳು ವರ್ಷದ ಬಾಲಕಿಯನ್ನು ಅಪಹರಿಸಲಾಗಿದೆ. ಆದರೆ, ಆರೋಪಿಗಳ ಜಾಲವನ್ನು ಭೇದಿಸಿದ ಪೊಲೀಸರು ಬಾಗ್ಪತ್ ಜಿಲ್ಲೆಯಿಂದ ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ಬಾಲಕಿಯನ್ನು ಅಪಹರಿಸಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ: ಅಸ್ಸಾಂ ಸಿಎಂ
ನೋಯ್ಡಾ ಉಪ ಪೊಲೀಸ್ ಆಯುಕ್ತ ಹರೀಶ್ ಚಂದರ್ ಈ ಕುರಿತು ಮಾಹಿತಿ ನೀಡಿದ್ದು, ಮಾರ್ಚ್ 13 ರಂದು ಬಾಲಕಿ ನಾಪತ್ತೆಯಾಗಿದ್ದಳು. ಸೆಕ್ಟರ್ 63 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಛಿಜಾರ್ಸಿಯಲ್ಲಿ ಸ್ಥಳೀಯರು ಬಾಲಕಿಯನ್ನು ಹುಡುಕಿದರು. ಆದರೆ ಬಾಲಕಿ ಪತ್ತೆಯಾಗಿಲ್ಲ. ಈ ಹಿನ್ನೆಲೆ ಬಾಲಕಿಯ ಪೋಷಕರು ಪೊಲೀಸರನ್ನು ಸಂಪರ್ಕಿಸಿದರು ಎಂದು ತಿಳಿಸಿದರು.
ಪೋಷಕರು ದೂರು ನೀಡಿದ ಮೇಲೆ ಐಪಿಸಿ ಸೆಕ್ಷನ್ 363 ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿಯನ್ನು ಪರಿಶೀಲನೆ ಮಾಡಲಾಯಿತು. ಈ ವೇಳೆ ಆರೋಪಿಗಳ ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಲಾಯಿತು ಎಂದು ವಿವರಿಸಿದರು.
ಬಂಧಿತರನ್ನು ಸೋನು ವಾಲ್ಮಿಕಿ ಮತ್ತು ನೀತು ಎಂದು ಗುರುತಿಸಲಾಗಿದೆ. ಸತೇಂದ್ರ ಸೇರಿದಂತೆ ಇನ್ನೂ ಮೂವರು ತಲೆಮರೆಸಿಕೊಂಡಿದ್ದು, ಬಂಧಿತ ಆರೋಪಿಗಳು ಯಾವುದೇ ಅಪರಾಧದ ಇತಿಹಾಸ ಹೊಂದಿಲ್ಲದಿದ್ದರೂ ಆಗಾಗ್ಗೆ ಮದ್ಯ ಸೇವಿಸುತ್ತಿದ್ದರು ಎಂದು ಹೇಳಿದರು.
ನಡೆದಿದ್ದೇನು?
ಬಾಲಕಿ ವಾಸಿಸುತ್ತಿದ್ದ ಪಕ್ಕದ ಮನೆಯಲ್ಲಿಯೇ ಸೋನು ವಾಸಿಸುತ್ತಿದ್ದು, ಅವಿವಾಹಿತನಾಗಿದ್ದನು. ಈ ಹಿನ್ನೆಲೆ ಸೋನು ಸತೇಂದ್ರನನ್ನು ಸಂಪರ್ಕಿಸಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾನೆ. ಆಗ ಸತೇಂದ್ರ, ಹೋಳಿಯಲ್ಲಿ ನರಬಲಿ ಕೊಟ್ಟರೆ ಮದುವೆಯಾಗುವುದಾಗಿ ಹೇಳಿದ್ದಾನೆ. ಈ ಪರಿಣಾಮ 7 ವರ್ಷದ ಬಾಲಕಿಯನ್ನು ಸೋನು ಅಪಹರಿಸಿದ್ದು, ನರಬಲಿಗೆ ಎಲ್ಲ ಸಿದ್ಧತೆ ನಡೆದಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ‘ಕಾಪಾಡಿ ಕಾಪಾಡಿ’ ಎಂದು ಚೀರಾಡಿದ್ರು ಮಾನವೀಯತೆ ಮರೆತ ಜನರು – ಮೂವರು ಸಾವು
ಬಾಲಕಿಯನ್ನು ರಕ್ಷಿಸಿ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಪೊಲೀಸ್ ಕಮಿಷನರ್ ಅಲೋಕ್ ಸಿಂಗ್ 50,000 ರೂ. ಘೋಷಿಸಿದ್ದಾರೆ.
ಲಕ್ನೋ: 71 ವರ್ಷದ ಶಾಲಾ ಪ್ರಾಂಶುಪಾಲನೊಬ್ಬ ತಮ್ಮದೇ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಬಟ್ಟೆಬಿಚ್ಚಿ ಅತ್ಯಾಚಾರವೆಸಗಿದ್ದು ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.
ಗುರುವನ್ನು ದೇವರ ಸ್ಥಾನದಲ್ಲಿ ಇರಿಸಲಾಗಿದೆ. ತಂದೆ-ತಾಯಿ, ಗುರುಗಳು ಸಹ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ 71 ವರ್ಷದ ಪ್ರಾಂಶುಪಾಲ ತನ್ನ ಶಾಲೆಯಲ್ಲಿ 9 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಉತ್ತರ ಪ್ರದೇಶದಲ್ಲಿ ಮಕ್ಕಳ ಮೇಲಿನ ಅಪರಾಧಗಳಿಗೆ ಅಂತ್ಯವೇ ಇಲ್ಲದಂತಾಗಿದೆ. ಮೊಮ್ಮಗಳ ವಯಸ್ಸಿನ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ.
ಅಪರಾಧದ ವಿವರಗಳನ್ನು ಮರೆಮಾಚಿದ್ದಕ್ಕಾಗಿ ಅದೇ ಶಾಲೆಯ ಶಿಕ್ಷಕ ಮತ್ತು ಅತ್ಯಾಚಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ವರದಿಯ ಪ್ರಕಾರ, 3 ನೇ ತರಗತಿಯ ವಿದ್ಯಾರ್ಥಿಗೆ ತೀವ್ರ ರಕ್ತಸ್ರಾವವಾದ ನಂತರ ಮನೆಗೆ ಹಿಂದಿರುಗಿದ್ದಾಳೆ ಈ ವೇಳೆ ಬಾಲಕಿಯ ತಾಯಿಗೆ ಈ ವಿಷಯ ತಿಳಿದಿದೆ. ತೀವ್ರ ರಕ್ತಸ್ರಾವವಾಗುತ್ತಿದ್ದರು ಆ ಪುಟ್ಟ ಬಾಲಕಿ ತನ್ನ ನೋವನ್ನು ಪೋಷಕರಿಗೆ ತಿಳಿಸಿರಲಿಲ್ಲ. ಬಳಿಕ ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ:ಡಬಲ್ ಎಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ ಇದು: ಸಿದ್ದು ಕಿಡಿ
ಸಂತ್ರಸ್ತೆ ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ತಂದೆಯ ದೂರಿನ ನಂತರ, ಶಾಲಾ ಪ್ರಾಂಶುಪಾಲರ ವಿರುದ್ಧ ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ 376 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಯಾವುದೋ ಕಾರಣಕ್ಕೆ ನನ್ನ ಮಗಳನ್ನು ತರಗತಿ ಕೋಣೆಗೆ ಕರೆದೊಯ್ದ ಪ್ರಾಂಶುಪಾಲರು ಆಕೆಯ ಬಟ್ಟೆ ಬಿಚ್ಚಿಸಿ ಅತ್ಯಾಚಾರವೆಸಗಿದ್ದಾರೆ. ನಮ್ಮ ಮಗಳು ತನ್ನ ಮೇಲೆ ನಡೆದ ದೌರ್ಜನ್ಯದ ಅರಿವಿಲ್ಲದೆ ಮನೆಗೆ ಬಂದು ಅಮ್ಮ ನನಗೆ ತುಂಬಾ ನೋವಾಗುತ್ತಿದೆ ಎಂದು ಹೇಳಿದ್ದಾಳೆ. ಈ ವೇಳೆ ನಾವು ಅವಳನ್ನು ವೈದ್ಯರ ಬಳಿಗೆ ಕರೆದೊಯ್ದಾಗ, ನಮಗೆ ಅದು ತಿಳಿದಿತ್ತು ಅಂತ ಹುಡುಗಿಯ ತಂದೆ ಆರೋಪಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಎಲ್ಲಾ ಸಂಬಂಧಿತ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ:ನಮ್ಮ ಇಲಾಖೆಯಲ್ಲಿ ಅನುದಾನ ಇಲ್ಲ- ಸದನದಲ್ಲಿ ಜಲಸಂಪನ್ಮೂಲ ಸಚಿವರ ಅಳಲು
ಸೆಪ್ಟೆಂಬರ್ 2018ರಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ಬಿಹಾರದ ಫುಲ್ವಾರಿ ಷರೀಫ್ ಖಾಸಗಿ ಶಾಲೆಯ ಪ್ರಾಂಶುಪಾಲರು ಮತ್ತು ಗುಮಾಸ್ತರು 5ನೇ ತರಗತಿ ವಿದ್ಯಾರ್ಥಿನಿಯನ್ನು 9 ತಿಂಗಳ ಕಾಲ ಅತ್ಯಾಚಾರ ಮಾಡಿದ್ದಾರೆ. 10 ವರ್ಷದ ಬಾಲಕಿ ಗರ್ಭಿಣಿಯಾದಾಗ ಅತ್ಯಾಚಾರದ ವಿಷಯ ಬೆಳಕಿಗೆ ಬಂದಿತ್ತು.
ಲಕ್ನೋ: ರಾಜವಂಶಗಳು ಯಾವಾಗಲೂ ತಮ್ಮ ಸ್ವಹಿತಾಸಕ್ತಿಗಳನ್ನು ಪೂರೈಸಲು ಅವಕಾಶ ಹುಡುಕುತ್ತಿರುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯ ಕೊನೆಯ ಹಂತದ ಪ್ರಚಾರದ ವೇಳೆ ಪ್ರಧಾನಿ ಮೋದಿ ಉಕ್ರೇನ್ ಬಿಕ್ಕಟ್ಟನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ರಾಜಕೀಯ ನಾಯಕರ ವಿರುದ್ಧ ಸಿಡಿದರು. ಈ ಕುರಿತು ಮಾತನಾಡಿದ ಅವರು, ರಾಜವಂಶಗಳು ಯಾವಾಗಲೂ ತಮ್ಮ ಸ್ವಹಿತಾಸಕ್ತಿಗಳನ್ನು ಪೂರೈಸಲು ಅವಕಾಶಗಳನ್ನು ಹುಡುಕುತ್ತವೆ. ನಿರಂತರ ವಿರೋಧ, ತೀವ್ರ ಹತಾಶೆ ಮತ್ತು ಋಣಾತ್ಮಕತೆ ಅವರ ರಾಜಕೀಯ ಸಿದ್ಧಾಂತವಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ತನ್ನದೇ ದೇಶದ ಸಂಧಾನಕರನನ್ನು ಹತ್ಯೆಗೈದ ಉಕ್ರೇನ್
ರಾಷ್ಟ್ರವು ಸವಾಲುಗಳನ್ನು ಎದುರಿಸುವಾಗಲೂ ವಿರೋಧ ಪಕ್ಷಗಳು ರಾಜಕೀಯ ಹಿತಾಸಕ್ತಿಗಳನ್ನು ನೋಡುತ್ತವೆ. ಪರಿಸ್ಥಿತಿಯನ್ನು ಇನ್ನಷ್ಟು ಕ್ಲಿಷ್ಟಕರಗೊಳಿಸುತ್ತವೆ. ದೇಶದ ಮುಂದೆ ಕೆಲವು ಸವಾಲುಗಳು ಬಂದಾಗ, ಈ ರಾಜವಂಶಗಳು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಹುಡುಕುತ್ತವೆ. ಭಾರತದ ಭದ್ರತಾ ಪಡೆಗಳು ಮತ್ತು ಜನರು ಬಿಕ್ಕಟ್ಟನ್ನು ಎದುರಿಸಿದರೆ, ವಿರೋಧ ಪಕ್ಷಗಳು ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತವೆ. ಈಗ ಇರುವ ಪರಿಸ್ಥಿತಿಗಳನ್ನು ಇನ್ನಷ್ಟು ಬಿಕ್ಕಟ್ಟು ಮಾಡುತ್ತಿದ್ದಾರೆ. ಹಿಂದೆ ಕೊರೊನಾ ಸಮಯದಲ್ಲಿ ಇದೇ ರೀತಿ ಮಾಡಿದ್ದರೂ, ಇಂದು ಉಕ್ರೇನ್ ಬಿಕ್ಕಟ್ಟಿನ ಸಮಯದಲ್ಲಿಯೂ ಅದೇ ರೀತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಕಳೆದ ಎರಡು ವರ್ಷಗಳಿಂದ 80 ಕೋಟಿಗೂ ಹೆಚ್ಚು ಬಡವರು, ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗದವರಿಗೆ ಉಚಿತ ಪಡಿತರವನ್ನು ಒದಗಿಸಲಾಗುತ್ತಿದೆ. ಆಹಾರಧಾನ್ಯ ಯೋಜನೆ ಜಾರಿಯಿಂದ ಇಡೀ ವಿಶ್ವವೇ ಬೆರಗಾಗಿದೆ. ಇದರಿಂದ ಬಡವರು ಸಂತೋಷವಾಗಿರುವುದು ನನಗೆ ಖುಷಿ ತಂದಿದೆ. ಇದೆಲ್ಲ ರಾಜವಂಶದವರು ಗುರುತಿಸುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದರು.
ರಾಹುಲ್ ಗಾಂಧಿ ಹೇಳಿಕೆಗೆ ಟಾಂಗ್ ಕೊಟ್ಟ ಮೋದಿ , ಅರಮನೆಗಳಲ್ಲಿ ವಾಸಿಸುವವರಿಗೆ ಮನೆಯಲ್ಲಿ ಶೌಚಾಲಯವಿಲ್ಲದೆ ಬಡ ತಾಯಿ ಪಡುವ ತೊಂದರೆ ತಿಳಿದಿಲ್ಲ. ಅವರು ಸೂರ್ಯೋದಯಕ್ಕೆ ಮುಂಚೆಯೇ ತಮ್ಮ ಎಲ್ಲ ಕೆಲಸಗಳನ್ನು ಮುಗಿಸಲು ಯಾವ ರೀತಿ ಯೋಚಿಸುತ್ತಾರೆ. ದಿನವಿಡೀ ಯಾವ ರೀತಿ ನೋವನ್ನು ಸಹಿಸಿಕೊಳ್ಳಬೇಕು ಎಂಬುದು ಅವರಿಗೆ ತಿಳಿದಿಲ್ಲ ಎಂದು ಸಿಡಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಶೌಚಾಲಯ ಸ್ವಚ್ಛಗೊಳಿಸುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಆದೇಶಿಸಲಾಗಿದೆ: ರಾಹುಲ್ ಗಾಂಧಿ
ಪ್ರಧಾನಿ ಮೋದಿ ಕಳೆದ ಎರಡು ದಿನಗಳಿಂದ ವಾರಣಾಸಿಯಲ್ಲಿ ಪ್ರಚಾರದ ಸಲುವಾಗಿ ಬೀಡು ಬಿಟ್ಟಿದ್ದಾರೆ.
ಅಜಂಗಢ, ಮೌ, ಜೌನ್‍ಪುರ್, ಘಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ, ಭದೋಹಿ ಮತ್ತು ಸೋನ್‍ಭದ್ರ ಸೇರಿದಂತೆ ಒಂಬತ್ತು ಜಿಲ್ಲೆಗಳ ಒಟ್ಟು 54 ವಿಧಾನಸಭಾ ಸ್ಥಾನಗಳಿಗೆ ಮಾರ್ಚ್ 7 ರಂದು ಚುನಾವಣೆ ನಡೆಯಲಿದೆ.
ಲಕ್ನೋ: ಹೆಂಡತಿ ಹೆಚ್ಚು ಸಮಯ ಚಾಟ್ ಮಾಡುವುದರಲ್ಲೇ ಸಮಯವನ್ನು ಕಳೆಯುತ್ತಿದ್ದ ಹಿನ್ನೆಲೆ, ಪತಿಯು ಸೀರೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಉನ್ನಾವೋ ಜಿಲ್ಲೆಯ ಹಸನ್‍ಗಂಜ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅಹ್ಮದ್‍ಪುರ ವಡೆ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಹೆಂಡತಿಯನ್ನು ಕೊಂದ ನಂತರ ಪತಿಯೇ ಪೊಲೀಸರ ಬಳಿ ಬಂದು ತಪ್ಪನ್ನು ಒಪ್ಪಿಕೊಂಡಿದ್ದಾನೆ. ನನ್ನ ಪತ್ನಿ ಹೆಚ್ಚು ಸಮಯ ಫೋನ್ ನೋಡುವುದರಲ್ಲಿ ಮತ್ತು ಬೇರೆಯವರ ಜೊತೆ ಚಾಟ್ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಳು. ಅದಕ್ಕೆ ಆಕೆ ಮೇಲೆ ಕೋಪ ಹೆಚ್ಚಾಗಿ ಈ ಕೆಲಸ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ನಾನಾ ವೇಷ ತೊಟ್ಟು ಜನರಿಗೆ ಟೋಪಿ ಹಾಕಿದ್ದ ಸ್ವಾಮೀಜಿ ಪೊಲೀಸರ ಅತಿಥಿ!
ಈ ಕುರಿತು ಮಾತನಾಡಿದ ಪೊಲೀಸ್ ಅಧಿಕಾರಿಗಳು, ಪತ್ನಿ ಆರತಿ ಯಾವಾಗಲೂ ತನ್ನ ಫೋನ್‌ನಲ್ಲಿ ಬ್ಯುಸಿಯಾಗಿರುತ್ತಿದ್ದಳು. ಪತಿ ಅರುಣ್ ಒಂದು ವೇಳೆ ಆಕೆಯ ಫೋನ್ ಚೆಕ್ ಮಾಡಲು ಬಂದ್ರೆ ಅವನ ಜೊತೆಗೆ ಜಗಳವಾಡುತ್ತಿದ್ದಳು. ಈ ಹಿನ್ನೆಲೆ ಅರುಣ್ ಕೋಪಗೊಂಡು ಜಗಳವಾಡಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಸೀರೆಯನ್ನು ತೆಗೆದುಕೊಂಡು ಆಕೆಯ ಕುತ್ತಿಗೆಗೆ ಸುತ್ತಿ ಬಿಗಿದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ವಿವರಿಸಿದ್ದಾರೆ.
ಪ್ರಸ್ತುತ ಪೊಲೀಸರು ಆರೋಪಿ ಅರುಣ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಬಂಧಿಸಿದ್ದಾರೆ. ಅರುಣ್ ಎಂಟು ವರ್ಷಗಳ ಹಿಂದೆ ಆರತಿ ಅವರನ್ನು ಮದುವೆಯಾಗಿದ್ದರು. ಇವರಿಗೆ ಒಬ್ಬ ಮಗನಿದ್ದ. ಅವರು ತಮ್ಮ ಮನೆ ಸಮೀಪದ ಅಂಗಡಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆಂಜನೇಯನ ಜನ್ಮಭೂಮಿ ಹೈಜಾಕ್ – ಬಿಜೆಪಿ ಯಾಕೆ ಸುಮ್ಮನಿದೆ ಉಗ್ರಪ್ಪ ಪ್ರಶ್ನೆ
ಲಕ್ನೋ: ಸಮಾಜವಾದಿ ಪಕ್ಷ (ಎಸ್‍ಪಿ) ಆಡಳಿತದಲ್ಲಿ ಉತ್ತರ ಪ್ರದೇಶವು ಅಪರಾಧ ಪ್ರಕರಣಗಳಲ್ಲಿ ನಂಬರ್ 1 ಆಗಿತ್ತು ಎಂದು ಅಖಿಲೇಶ್ ಯಾದವ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.
ಎಸ್‍ಪಿಯನ್ನು ಗುರಿಯಾಗಿಸಿ ಬಲಿಯಾದಲ್ಲಿ ನಡೆದ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಖಿಲೇಶ್ ಯಾದವ್ ಅವರ ಸರ್ಕಾರದ ಅವಧಿಯಲ್ಲಿ ಉತ್ತರ ಪ್ರದೇಶವು ಲೂಟಿ, ಕೊಲೆ ಮತ್ತು ಅತ್ಯಾಚಾರದಂತಹ ಅಪರಾಧಗಳಲ್ಲಿ ನಂಬರ್ 1 ಆಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಗೌರವದಿಂದ ನೋವಾಗಿದೆ: ಬಿಜೆಪಿ ಸೇರ್ಪಡೆಯಾದ ಗುಲಾಂ ನಬಿ ಸೋದರಳಿಯ
ಯಾದವ್ ಯುಪಿಗಾಗಿ ಕೆಲಸ ಮಾಡಲಿಲ್ಲ. ಎಸ್‍ಪಿ ಆಡಳಿತವಿದ್ದಾಗ ಲೂಟಿಗಳು, ಕೊಲೆಗಳು, ಅತ್ಯಾಚಾರಗಳಲ್ಲಿ 1 ಆಗಿತ್ತು. ಅಖಿಲೇಶ್ ಯಾದವ್ ಅವರೇ ನಿಮಗೆ ನಾಚಿಕೆಯಾಗಬೇಕು. ನೀವು ಜನರ ಬಳಿ ಬಂದು ಮತ ಕೇಳಲು ಯಾವ ಮುಖವನ್ನು ಇಟ್ಟುಕೊಂಡು ಬರುತ್ತೀರಾ. ನೀವು ಜನರಿಗೆ ಏನೂ ಮಾಡಿಲ್ಲ. ಯೋಗಿ ಜಿ ನಾಯಕತ್ವದಲ್ಲಿ, ಲೂಟಿಯಲ್ಲಿ 70% ಕುಸಿತ, ಕೊಲೆಗಳಲ್ಲಿ 29% ಕುಸಿತವಾಗಿದೆ ಎಂದರು.
ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಹೊಗಳಿದ ಅವರು, ಯೋಗಿ ಅವರು ಮಾಫಿಯಾಗಳಿಂದ ರಾಜ್ಯವನ್ನು ಈಗಾಗಲೇ ಮುಕ್ತಗೊಳಿಸಿದ್ದಾರೆ. ಈ ಹಿಂದೆ ಸರ್ಕಾರಿ ಭೂಮಿಯನ್ನು ಬಾಹುಬಲಿಗಳು ಕಿತ್ತುಕೊಂಡಿದ್ದರು. ದಲಿತರು, ಹಿಂದುಳಿದವರು, ಎಲ್ಲರೂ ವಂಚಿತರಾಗಿದ್ದರು. ಈ ಪರಿವಾರವಾದಿಗಳು ತಮ್ಮ ಅಧಿಕಾರ ಅವಧಿಯಲ್ಲಿ ಬಡವರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಬಿಜೆಪಿಯು ಭೂಮಾಫಿಯಾಗಳಿಂದ ಜನರ ಭೂಮಿಯನ್ನು ಮುಕ್ತಗೊಳಿಸಿದೆ ಎಂದು ಹೇಳಿದರು.
ಈ ಹಿಂದೆ ಉತ್ತರ ಪ್ರದೇಶಕ್ಕೆ ಮೊಹರಂ ಹಬ್ಬದಂದು ವಿದ್ಯುತ್ ಬರುತ್ತಿತ್ತು. ಆದರೆ ಪರಶುರಾಮ ಜಯಂತಿ, ಶ್ರೀರಾಮ ನವಮಿ ಮತ್ತು ಶ್ರೀಕೃಷ್ಣ ಜನ್ಮೋತ್ಸವದಂದು ವಿದ್ಯುತ್ ಪೂರೈಕೆ ಇರಲಿಲ್ಲ ಎಂದು ಸಿಡಿದರು.
ರಾಜ್ಯದಲ್ಲಿ ಈ ಬಾರಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನಾಲ್ಕು ಹಂತದ ಮತದಾನವು ಅದಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಳೆಯ ಪಕ್ಷವು ಎಪ್ಪತ್ತರ ದಶಕದಲ್ಲಿ ‘ಗರೀಬಿ ಹಟಾವೋ’ ಘೋಷಣೆಯನ್ನು ನೀಡಿತ್ತು. ಆದರೆ ಬಡವರನ್ನು ಮರೆತೆ ಹೋದರು. ಅವರು ಬಡತನವನ್ನು ತೊಡೆದುಹಾಕಲು ಸಾಧ್ಯವಾಗಲಿಲ್ಲ. ಆದರೆ ಬಡ ಜನರನ್ನು ಹೋಗಲಾಡಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಮೋದಿ ಸರ್ಕಾರವು ಬಡವರ ಕಲ್ಯಾಣಕ್ಕಾಗಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!
ಉತ್ತರ ಪ್ರದೇಶದಲ್ಲಿ ಇಂದು ಐದನೇ ಹಂತದ ಮತದಾನ ನಡೆಯುತ್ತಿದ್ದು, ಮಾರ್ಚ್ 3 ಮತ್ತು ಮಾರ್ಚ್ 7 ರಂದು ಕೊನೆಯ ಎರಡು ಹಂತಗಳು ನಡೆಯಲಿವೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಲಕ್ನೋ: ನನ್ನ ತಾಯಿಗೆ 100 ವರ್ಷ ವಯಸ್ಸಾಗಿದ್ದರೂ ಅವರು ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಎಂದೂ ಹಿಂದೆ ಸರಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರಪ್ರದೇಶದಲ್ಲಿ ರ‍್ಯಾಲಿ ಕೈಗೊಂಡಿದ್ದರು. ಈ ವೇಳೆ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವಾಗ, ನನ್ನ 100 ವರ್ಷದ ತಾಯಿ ತಮ್ಮ ಕೋವಿಡ್ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳುವುದರಲ್ಲಿ ಹಿಂದೆ ಸರಿದಿಲ್ಲ. ಆದರೆ ‘ರಾಜವಂಶದವರು ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಲು ಹಿಂದೆ ಸರಿದಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು. ಇದನ್ನೂ ಓದಿ: ನಾಳೆ ಬಿಡುಗಡೆ ಆಗಲಿರುವ ಗಂಗೂಬಾಯಿ ಕಾಠಿಯಾವಾಡಿ ಟೈಟಲ್ ಬದಲಾಗತ್ತಾ? ಕೋರ್ಟ್ ಕೊಟ್ಟ ಸಲಹೆ ಏನು?
ನನಗೆ ಮತ್ತು ನನ್ನ ತಾಯಿಗೆ ಲಸಿಕೆ ಸಿಕ್ಕಿದೆ. ಅವರು 100 ವರ್ಷ ವಯಸ್ಸಿನವರಾಗಿದ್ದಾರೆ. ಆದರೆ ಲಸಿಕೆ ಮಾಡಿಸಿಕೊಳ್ಳುವುದಕ್ಕೆ ಭಯಪಡಲಿಲ್ಲ. ಅವರ ಸರದಿಗಾಗಿ ಕಾಯುತ್ತಿದ್ದರು. ಅವರ ಲಸಿಕೆ ದಿನ ಬಂದ ತಕ್ಷಣ ಅವರು ಲಸಿಕೆ ಪಡೆದರು ತಿರುಗೇಟು ನೀಡಿದರು.
ನನ್ನ ತಾಯಿ 100 ವರ್ಷ ವಯಸ್ಸಿನವಳು. ಆದರೆ ಯಾವುದೇ ರೋಗಗಳಿಲ್ಲ. ಆದ್ದರಿಂದ ಅವರಿಗೆ ಬೂಸ್ಟರ್ ಡೋಸ್ ಸಿಕ್ಕಿಲ್ಲ. ಆದರೆ ‘ಪರಿವಾರ ವಾದಿಗಳು (ರಾಜವಂಶಗಳು)’ ಎಲ್ಲರಿಗೂ ಲಸಿಕೆ ಮಾಡಲಾಗಿದೆಯಾ ಎಂದು ಖಚಿತಪಡಿಸಿಕೊಳ್ಳುತ್ತಿದ್ದರು ಎಂದು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: BJP, RSS ನಾಯಕರ ಮಾಹಿತಿಯನ್ನು SDPIಗೆ ಕೊಟ್ಟ ಪೊಲೀಸ್ ಅಮಾನತು!
ತಮ್ಮ ಸರ್ಕಾರವು ಜನರಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ಕೊಟ್ಟಿದೆ. ಒಂದು ವೇಳೆ ರಾಜವಂಶಗಳಿಗೆ ಬಿಟ್ಟಿದ್ರೆ ಲಸಿಕೆಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಟೀಕಿಸಿದರು. ಈ ಬಾರಿಯ ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದ ಕಾಂಗ್ರೆಸ್ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ ಮೋದಿ ಅವರನ್ನು ‘ಘೋರ್ ಪರಿವಾರ ವಾದಿಗಳು’ ಎಂದು ಕರೆದಿದ್ದಾರೆ.