Tag: Lucknow Super Giants

  • RCB ಪ್ಲೇ ಆಫ್‌ ಲೆಕ್ಕಾಚಾರ ಏನು? – ಮತ್ತೆ ಮುಖಾಮುಖಿಯಾಗ್ತಾರಾ ಕೊಹ್ಲಿ-ಗಂಭೀರ್‌?

    RCB ಪ್ಲೇ ಆಫ್‌ ಲೆಕ್ಕಾಚಾರ ಏನು? – ಮತ್ತೆ ಮುಖಾಮುಖಿಯಾಗ್ತಾರಾ ಕೊಹ್ಲಿ-ಗಂಭೀರ್‌?

    ಮುಂಬೈ: ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ಕಣಕ್ಕಿಳಿಯುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡಕ್ಕೆ ಗುರುವಾರದ ಪಂದ್ಯದ ಸೋಲು-ಗೆಲುವಿನ ಲೆಕ್ಕಾಚಾರದ ಮೇಲೆ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಆರ್‌ಸಿಬಿ ಪ್ಲೇ ಆಫ್‌ (Playoffs) ಪ್ರವೇಶಿಸುವ ಅವಕಾಶ ಪಡೆದುಕೊಳ್ಳಲಿದೆ.

    ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 2023ರ ಐಪಿಎಲ್‌ (IPL 2023) ಆವೃತ್ತಿಯಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಅತ್ಯುತ್ತಮ ಅವಕಾಶವಿದೆ. ಹಾಗಾಗಿ ತನ್ನ ಕೊನೆಯ ಎರಡೂ ಪಂದ್ಯಗಳು ಆರ್‌ಸಿಬಿ ಪಾಲಿಗೆ ನಿರ್ಣಾಯಕವಾಗಿದೆ. ಇದನ್ನೂ ಓದಿ: ಯಾರಾದ್ರು ಕೊಟ್ರೆ ನಾವೂ ತಿರುಗಿಸಿ ಕೊಡ್ತೀವಿ – ಮತ್ತೆ ಗಂಭೀರ್‌ಗೆ ಕೌಂಟರ್‌ ಕೊಟ್ಟ ಕಿಂಗ್‌ ಕೊಹ್ಲಿ

    ಪ್ರಸ್ತುತ ಆರ್‌ಸಿಬಿಗೆ ಮುಂಬೈ ಇಂಡಿಯನ್ಸ್ (Mumbai Indians) ತಂಡದಿಂದ ಕಠಿಣ ಪೈಪೋಟಿ ಎದುರಾಗಿದೆ. ಮುಂಬೈ ಇಂಡಿಯನ್ಸ್‌ -0.128 ರನ್‌ರೇಟ್‌ ಹೊಂದಿದ್ದರೆ, ಆರ್‌ಸಿಬಿ +0.166 ರನ್‌ರೇಟ್‌ನೊಂದಿಗೆ 5ನೇ ಸ್ಥಾನದಲ್ಲಿದೆ. ಒಂದು ವೇಳೆ ಆರ್‌ಸಿಬಿ ಉಳಿದೆರಡು ಪಂದ್ಯಗಳಲ್ಲಿ ಗೆದ್ದರೆ ಪ್ಲೇ ಆಫ್‌ ಪ್ರವೇಶಿಸಲಿದೆ. ಮುಂಬೈ ರನ್‌ ರೇಟ್‌ ಕಡಿಮೆ ಇರುವುದರಿಂದ ಮುಂದಿನ ಪಂದ್ಯದಲ್ಲಿ ಗೆದ್ದು 15 ಅಂಕ ಪಡೆದರೂ ಆರ್‌ಸಿಬಿ 2 ಪಂದ್ಯಗಳಲ್ಲಿ ಗೆದ್ದರೆ ಪ್ಲೇ ಆಫ್‌ ಪ್ರವೇಶಿಸಬಹುದು. ಇದನ್ನೂ ಓದಿ: ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ – ಕೊಹ್ಲಿ, ಗಂಭೀರ್ ಕಿರಿಕ್‌ಗೆ ಕಾರಣ ಏನು?

    ಹಾಗೆಯೇ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ಉಳಿದ ಒಂದೊಂದು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಚೆನ್ನೈ 2 ಮತ್ತು ಲಕ್ನೋ 3ನೇ ಸ್ಥಾನದಲ್ಲಿ ಮುಂದುವರಿಯಲಿದೆ. ಆಗ ಮತ್ತೊಮ್ಮೆ ಪ್ಲೇ ಆಫ್‌ನ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಆರ್‌ಸಿಬಿ ನಡುವೆ ಹೈವೋಲ್ಟೇಜ್‌ ಕದನ ಏರ್ಪಡಲಿದೆ. ಒಂದು ವೇಳೆ ಚೆನ್ನೈ ಸೋತು, ಲಕ್ನೋ ಗೆದ್ದರೆ ಲಕ್ನೋ 2ನೇ ಸ್ಥಾನಕ್ಕೆ ಜಿಗಿಯಲಿದೆ. ಆರ್‌ಸಿಬಿ ಚೆನ್ನೈನೊಂದಿಗೆ ಸೆಣಸಬೇಕಾಗುತ್ತದೆ.

  • ಲಕ್ನೋ ಸೂಪರ್‌ ಜೈಂಟ್ಸ್‌ಗೆ 5 ರನ್‌ ರೋಚಕ ಜಯ – RCBಗೆ ಮತ್ತೆ ಕಂಟಕವಾದ ಲಕ್ನೋ

    ಲಕ್ನೋ ಸೂಪರ್‌ ಜೈಂಟ್ಸ್‌ಗೆ 5 ರನ್‌ ರೋಚಕ ಜಯ – RCBಗೆ ಮತ್ತೆ ಕಂಟಕವಾದ ಲಕ್ನೋ

    ಲಕ್ನೋ: ಮಾರ್ಕಸ್‌ ಸ್ಟೋಯ್ನಿಸ್‌ (Marcus Stoinis) ಸಿಕ್ಸರ್‌, ಬೌಂಡರಿ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants), ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿ, ಪ್ಲೆ ಆಫ್‌ ಹಾದಿಯನ್ನ ಸುಗಮವಾಗಿಸಿಕೊಂಡಿದೆ. ಆದರೆ ಪ್ಲೆ ಆಫ್‌ ಪ್ರವೇಶಿಸುವ ಕನಸು ಕಂಡಿದ್ದ ಆರ್‌ಸಿಬಿಗೆ ಮತ್ತೆ ಸಂಕಷ್ಟ ತಂದೊಡ್ಡಿದೆ.

    ಕೊನೆಯ 2‌ ಓವರ್‌ಗಳಲ್ಲಿ ಮುಂಬೈ ಗೆಲುವಿಗೆ 30 ರನ್‌ಗಳ ಅಗತ್ಯವಿದ್ದಾಗ 19ನೇ ಓವರ್‌ನಲ್ಲೇ 19ರನ್‌ ದಾಖಲಾಯಿತು. ಕೊನೆಯ ಓವರ್‌ನಲ್ಲಿ 11 ರನ್‌ಗಳು ಬೇಕಿದ್ದಾಗ ಟಿಮ್‌ ಡೇವಿಡ್‌ ಹಾಗೂ ಕ್ಯಾಮರೂನ್‌ ಗ್ರೀನ್‌ ಕಳಪೆ ಪ್ರದರ್ಶನದಿಂದಾಗಿ 5 ರನ್‌ ಗಳಷ್ಟೇ ಸೇರ್ಪಡೆಯಾಯಿತು. ಕೊನೆಗೆ ಮುಂಬೈ 5 ರನ್‌ಗಳಿಂದ ವಿರೋಚಿತ ಸೋಲನುಭವಿಸಿತು. 5ನೇ ಸ್ಥಾನದಲ್ಲಿದ್ದ ಆರ್‌ಸಿಬಿ (RCB) ತಂಡಕ್ಕೂ ಲಕ್ನೋ ಗೆಲವು ಸಂಕಷ್ಟ ತಂದಂತಾಗಿದೆ. ಒಂದು ವೇಳೆ ಆರ್‌ಸಿಬಿ ಸತತ ಎರಡು ಪಂದ್ಯಗಳಲ್ಲಿ ಗೆದ್ದು ಮುಂಬೈ ಮುಂದಿನ ಪಂದ್ಯದಲ್ಲೂ ಸೋತರಷ್ಟೇ ಆರ್‌ಸಿಬಿಗೆ ಪ್ಲೆ ಆಫ್‌ ಪ್ರವೇಶಿಸುವ ಅವಕಾಶ ಸಿಗಲಿದೆ.

    ತವರಿನ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ 3 ವಿಕೆಟ್‌ ನಷ್ಟಕ್ಕೆ 177 ರನ್‌ ಕಲೆಹಾಕಿತ್ತು. 178 ರನ್‌ ಗುರಿ ಪಡೆದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿ ಗೆದ್ದು ಬೀಗಿತು. ಈ ಮೂಲಕ ಪ್ಲೆ ಆಫ್‌ಗೆ ಬಹುತೇಕ ಅರ್ಹತೆ ಪಡೆದುಕೊಂಡಿತು.

    ಬೌಲಿಂಗ್‌ ಪಿಚ್‌ನಲ್ಲಿ ಇದೇ ಮೊದಲಬಾರಿಗೆ ಇತ್ತಂಡಗಳಿಂದಲೂ ರನ್‌ ಹೊಳೆ ಹರಿಯಿತು. ಲಕ್ನೋ ಪರ ಮಾರ್ಕಸ್‌ ಸ್ಟೋಯ್ನಿಸ್‌ ಹಾಗೂ ಮುಂಬೈ ಇಂಡಿಯನ್ಸ್‌ ಪರ ರೋಹಿತ್‌ ಶರ್ಮಾ (Rohit Sharma), ಇಶಾನ್‌ ಕಿಶನ್‌ (Ishan Kishan) ಭರ್ಜರಿ ಸಿಕ್ಸರ್‌ ಬೌಂಡರಿ ಬ್ಯಾಟಿಂಗ್‌ ನಡೆಸಿದರು.

    ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಲಕ್ನೋ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿದ್ರು. ಮೊದಲ ವಿಕೆಟ್‌ ಜೊತೆಯಾಟಕ್ಕೆ ಈ ಜೋಡಿ 9.4 ಓವರ್‌ಗಳಲ್ಲಿ 90 ರನ್‌ ಸಿಡಿಸಿತ್ತು. ರೋಹಿತ್‌ ಶರ್ಮಾ 25 ಎಸೆತಗಳಲ್ಲಿ 37 ರನ್‌ (1 ಬೌಂಡರಿ, 3 ಸಿಕ್ಸರ್‌) ಗಳಿಸಿದರೆ, ಇಶಾನ್‌ ಕಿಶನ್‌ 39 ಎಸೆತಗಳಲ್ಲಿ 59 ರನ್‌ (1 ಸಿಕ್ಸರ್‌, 8 ಬೌಂಡರಿ) ಚಚ್ಚಿದರು. ಕಳೆದೆರಡು ಪಂದ್ಯದಲ್ಲಿ ಅಬ್ಬರಿಸಿದ್ದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಸೂರ್ಯಕುಮಾರ್‌ ಯಾದವ್‌ 7 ರನ್‌ ಹಾಗೂ ನಿಹಾಲ್‌ ವಧೇರಾ 16 ರನ್‌ ಗಳಿಸಿ ನಿರಾಸೆ ಮೂಡಿಸಿದರು.

    ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್‌ ಡೇವಿಡ್‌ ಬ್ಯಾಟಿಂಗ್‌ ನೆರವಿನಿಂದ ರನ್‌ ಗಳಿಸಿದ್ದ ಮುಂಬೈ ಗೆಲುವಿನ ಕನಸು ಕಂಡಿತ್ತು. ಕೊನೆಯ ಓವರ್‌ನಲ್ಲಿ ಡೇವಿಡ್‌ ಹಾಗೂ ಕ್ಯಾಮರೂನ್‌ ಗ್ರೀನ್‌ ಕಳಪೆ ಪ್ರದರ್ಶನದಿಂದ ಮುಂಬೈ ವಿರೋಚಿತ ಸೋಲನುಭವಿಸಿತು. ಟಿಮ್‌ ಡೇವಿಡ್‌ 19 ಎಸೆತಗಳಲ್ಲಿ 32 ರನ್‌ ಗಳಿಸಿದರು.

    ಲಕ್ನೋ ಪರ ಬೌಲಿಂಗ್‌ ದಾಳಿ ನಡೆಸಿದ ರವಿ ಬಿಷ್ಣೋಯಿ, ಯಶ್‌ ಠಾಕೂರ್‌ ತಲಾ 2 ವಿಕೆಟ್‌ ಉರುಳಿಸಿದರೆ, ಮೊಹ್ಸಿನ್‌ ಖಾನ್‌ 1 ವಿಕೆಟ್‌ ಪಡೆದು ಮಿಂಚಿದರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ ಆರಂಭದಲ್ಲೇ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ದೀಪಕ್‌ ಹೂಡ 5 ರನ್‌, ಕ್ವಿಂಟನ್‌ ಡಿ ಕಾಕ್‌ 16 ರನ್‌ ಹಾಗೂ ಪ್ರೇರಕ್‌ ಮಂಕಡ್‌ ಶೂನ್ಯಕ್ಕೆ ಔಟಾಗಿದ್ದರು. ಬಳಿಕ ಒಂದಾದ ನಾಯಕ ಕೃನಾಲ್‌ ಪಾಂಡ್ಯ ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ ಜೋಡಿ 59 ಎಸೆತಗಳಲ್ಲಿ 82 ರನ್‌ ಸಿಡಿಸಿತ್ತು. ನಂತರದಲ್ಲಿ ನಿಕೋಲಸ್‌ ಪೂರನ್‌‌ ಹಾಗೂ ಸ್ಟೋಯ್ನಿಸ್‌ ಜೋಡಿ 24 ಎಸೆತಗಳಲ್ಲಿ 60 ರನ್‌ ಬಾರಿಸಿತು. ಕೊನೆಯವರೆಗೂ ಅಜೇಯರಾಗಿ ಹೋರಾಡಿದ ಸ್ಟೋಯ್ನಿಸ್‌ 47 ಎಸೆತಗಳಲ್ಲಿ 89 ರನ್‌ (8 ಸಿಕ್ಸರ್‌, 4 ಬೌಂಡರಿ) ಚಚ್ಚಿದರೆ, ಕೃನಾಲ್‌ ಪಾಂಡ್ಯ 42 ಎಸೆತಗಳಲ್ಲಿ 49 ರನ್‌ ಗಳಿಸಿದರು. ಅರ್ಧ ಶತಕ ಗಳಿಸದೆಯೇ ಕಾಲು ನೋವು ಸಮಸ್ಯೆಯಿಂದ ಕ್ರೀಸ್‌ ಬಿಟ್ಟು ಹೊರನಡೆದರು. ನಿಕೋಲಸ್‌ ಪೂರನ್‌ 8 ರನ್‌ ಗಳಿಸಿ ಅಜೇಯರಾಗುಳಿದರು.

    ಮುಂಬೈ ಪರ ಜೇಸನ್‌ ಬೆಹ್ರೆನ್‌ಡ್ರೋಫ್‌ 4 ಓವರ್‌ಗಳಲ್ಲಿ 30 ರನ್‌ ನೀಡಿ 2 ವಿಕೆಟ್‌ ಕಿತ್ತರೆ, ಪಿಯೂಷ್‌ ಚಾವ್ಲಾ 3 ಓವರ್‌ಗಳಲ್ಲಿ 1 ವಿಕೆಟ್‌ 26 ರನ್‌ ನೀಡಿ 1 ವಿಕೆಟ್‌ ಪಡೆದರು.

  • ಲಕ್ನೋ ವಿರುದ್ಧ ಪಂದ್ಯಕ್ಕೂ ಮುನ್ನ ನಾಯಿಯಿಂದ ಕಚ್ಚಿಸಿಕೊಂಡ ಸಚಿನ್‌ ತೆಂಡೂಲ್ಕರ್‌ ಪುತ್ರ

    ಲಕ್ನೋ ವಿರುದ್ಧ ಪಂದ್ಯಕ್ಕೂ ಮುನ್ನ ನಾಯಿಯಿಂದ ಕಚ್ಚಿಸಿಕೊಂಡ ಸಚಿನ್‌ ತೆಂಡೂಲ್ಕರ್‌ ಪುತ್ರ

    ಲಕ್ನೋ: ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ವಿರುದ್ಧ ಮಂಗಳವಾರ ನಡೆಯುತ್ತಿರುವ ನಿರ್ಣಾಯಕ ಪಂದ್ಯಕ್ಕೂ‌ ಮುನ್ನ ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ಯುವ ಆಲ್‌ರೌಂಡರ್‌ ಆಟಗಾರ ಅರ್ಜುನ್‌ ತೆಂಡೂಲ್ಕರ್‌ ನಾಯಿಯಿಂದ ಕಚ್ಚಿಸಿಕೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ.

    ಲಕ್ನೋ ತವರಿನ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಲಕ್ನೋ ಆಟಗಾರ ಯುದ್ವೀರ್‌ ಸಿಂಗ್‌ ಅವರನ್ನ ಭೇಟಿಯಾದ ಅರ್ಜುನ್‌ ನಾಯಿ ಕಚ್ಚಿರುವುದಾಗಿ ತಾವೇ ಹೇಳಿಕೊಂಡಿದ್ದಾರೆ. ಯುದ್ವೀರ್‌, ಅರ್ಜುನ್‌ (Arjun Tendulkar) ಹೇಗಿದ್ದೀಯಾ? ಎಂದು ಕೇಳುತ್ತಿದ್ದಂತೆ ಸಚಿನ್‌ ತೆಂಡೂಲ್ಕರ್‌ ಪುತ್ರ ನಾಯಿ ಕಚ್ಚಿದೆ ಎಂದು ಹೇಳಿ ತಮ್ಮ ಕೈ ತೋರಿಸಿದ್ದಾರೆ. ಲಕ್ನೋ ಸೂಪರ್‌ ಜೈಂಟ್ಸ್‌ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಈ ಕುರಿತ ವೀಡಿಯೋವನ್ನು ಹಂಚಿಕೊಂಡಿದೆ. ಇದನ್ನೂ ಓದಿ: ಪಾಂಡ್ಯ ಪಡೆ ಲ್ಯಾವೆಂಡರ್‌ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದು ಏಕೆ? – ಗೊತ್ತಾದ್ರೆ ನೀವೂ ಬೇಷ್ ಅಂತೀರಾ

    ಪಂಜಾಬ್‌ ಕಿಂಗ್ಸ್‌ ವಿರುದ್ಧ ಒಂದೇ ಓವರ್‌ನಲ್ಲಿ 31 ರನ್‌ ಚಚ್ಚಿಸಿಕೊಂಡು ಸುದ್ದಿಯಾಗಿದ್ದ ಅರ್ಜುನ್‌ ತೆಂಡೂಲ್ಕರ್‌ ಇದೀಗ ನಾಯಿಯಿಂದ ಕಚ್ಚಿಸಿಕೊಂಡಿರುವುದಾಗಿ ಹೇಳಿ ಸುದ್ದಿಯಾಗಿದ್ದಾರೆ. 5 ಬಾರಿ ಚಾಂಪಿಯನ್ಸ್‌ ಆಗಿರುವ ಮುಂಬೈ ಇಂಡಿಯನ್ಸ್‌ ತಂಡದ ಪರವಾಗಿ ಈ ಸೀಸನ್‌ನಲ್ಲಿ ಅರ್ಜುನ್‌ ತೆಂಡೂಲ್ಕರ್‌ ಕೆಲವು ಪಂದ್ಯಗಳನ್ನಾಡಿದ್ದಾರೆ. 4 ಪಂದ್ಯಗಳಲ್ಲಿ 30.66 ಸರಾಸರಿ ಹಾಗೂ 9.35 ಎಕಾನಮಿ ರೇಟ್‌ನಲ್ಲಿ 3 ವಿಕೆಟ್‌ ಪಡೆದಿದ್ದಾರೆ. ಈ ಋತುವಿನಲ್ಲಿ ಈವರೆಗೆ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದುಕೊಂಡಿದ್ದು, 13 ರನ್‌ ಗಳಿಸಿದ್ದಾರೆ. ಇದನ್ನೂ ಓದಿ: ಕುಸ್ತಿಪಟುಗಳ ಪ್ರತಿಭಟನೆ ವಿಶ್ವವ್ಯಾಪಿಯಾಗಿಸಲು ಚಿಂತನೆ – ಬ್ರಿಜ್‌ ಭೂಷಣ್‌ ಬಂಧನಕ್ಕೆ ಮೇ 21 ಗಡುವು

    ಮಂಗಳವಾರ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ನ ನಿರ್ಣಾಯಕ ಪಂದ್ಯ ನಡೆಯುತ್ತಿದ್ದು, ಮುಂಬೈ ಇಂಡಿಯನ್ಸ್‌ ಜಯ ಸಾಧಿಸಿದರೆ ಪ್ಲೇ ಆಫ್‌ಗೆ ಬಹುತೇಕ ಅರ್ಹತೆ ಪಡೆದುಕೊಳ್ಳಲಿದೆ. ಆರಂಭದಲ್ಲಿ ರನ್‌ ಕದಿಯಲು ಪರದಾಡಿದ ಸೂರ್ಯಕುಮಾರ್‌ ಇದೀಗ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೆ, ಲಕ್ನೋ ಬೌಲಿಂಗ್‌ ಪಿಚ್‌ ಆಗಿರುವುದರಿಂದ ಯಾವ ತಂಡದ ಹಣೆಬರಹ ಹೇಗೆ ಅನ್ನೋದನ್ನ ಕಾದುನೋಡಬೇಕಿದೆ.

  • ದಿಲ್‌ ಗೆದ್ದ ಗಿಲ್‌ – ಗುಜರಾತ್‌ ಟೈಟಾನ್ಸ್‌ಗೆ 56 ರನ್‌ಗಳ ಭರ್ಜರಿ ಜಯ

    ದಿಲ್‌ ಗೆದ್ದ ಗಿಲ್‌ – ಗುಜರಾತ್‌ ಟೈಟಾನ್ಸ್‌ಗೆ 56 ರನ್‌ಗಳ ಭರ್ಜರಿ ಜಯ

    ಅಹಮದಾಬಾದ್‌: ಶುಭಮನ್‌ ಗಿಲ್‌ (Shubman Gill), ವೃದ್ಧಿಮಾನ್‌ ಸಾಹಾ (Wriddhiman Saha) ಶತಕದ ಜೊತೆಯಾಟ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 56 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ (Gujarat Titans) 227 ರನ್‌ ಪೇರಿಸಿತು. 228 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ನಯನತಾರಾ ದಂಪತಿ IPL ಕ್ರೇಜ್‌ – CSKಗೆ ಬಲ ತುಂಬಿದ ಲೇಡಿ ಸೂಪರ್‌ ಸ್ಟಾರ್‌

    ಗೆಲುವಿಗೆ 228 ರನ್‌ಗಳ ಗುರಿ ಪಡೆದ ಲಕ್ನೋ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಕೈಲ್‌ ಮೇಯರ್ಸ್‌ ಹಾಗೂ ಕ್ವಿಂಟನ್‌ ಡಿಕಾಕ್‌ 8.2 ಓವರ್‌ಗಳಲ್ಲಿ 88 ರನ್‌ಗಳ ಜೊತೆಯಾಟವಾಡಿದ್ದರು. ಈ ಜೋಡಿ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ರನ್‌ ವೇಗವೂ ಕಡಿಮೆಯಾಯಿತು. ಅಂತಿಮವಾಗಿ ಲಕ್ನೋ 171 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

    ಲಕ್ನೋ ಪರ ಕ್ವಿಂಟನ್‌ ಡಿಕಾಕ್‌ 70 ರನ್‌ (41 ಎಸೆತ, 7 ಬೌಂಡರಿ, 3 ಸಿಕ್ಸರ್‌), ಕೈಲ್‌ ಮೇಯರ್ಸ್‌ 48 ರನ್‌ (32 ಎಸೆತ, 7 ಬೌಂಡರಿ, 2 ಸಿಕ್ಸರ್‌), ದೀಪಕ್‌ ಹೂಡಾ 11 ರನ್‌, ಆಯುಷ್‌ ಬದೋನಿ 21 ರನ್‌ ಗಳಿಸಿದರು. ಇದನ್ನೂ ಓದಿ: ಐಪಿಎಲ್ ಅಖಾಡದಲ್ಲಿ ಪಾಂಡ್ಯ ಸಹೋದರರ ಸವಾಲ್ – ಯಾರಿಗೆ ಒಲಿಯಲಿದೆ ಜಯದ ಕಿರೀಟ?

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿ ಗುಜರಾತ್‌ ಟೈಟಾನ್ಸ್‌ ತಂಡ ಸ್ಫೋಟಕ ಪ್ರದರ್ಶನ ನೀಡಿತು. ಆರಂಭಿಕ ಆಟಗಾರರಾದ ಶುಭಮನ್‌ ಗಿಲ್ ಹಾಗೂ ವೃದ್ಧಿಮಾನ್ ಸಾಹಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ, ಸಿಕ್ಸರ್‌, ಬೌಂಡರಿಗಳ ಮಳೆ ಸುರಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 12.1 ಓವರ್‌ಗಳಲ್ಲಿ ಬರೋಬ್ಬರಿ 142 ರನ್‌ಗಳಿಸಿತು. ಸಾಹಾ ಕೇವಲ 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 81 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಮತ್ತೊಂದೆಡೆ ಶುಭಮನ್‌ ಗಿಲ್‌ ಕೊನೆಯವರೆಗೂ ವಿಕೆಟ್ ಕಳೆದುಕೊಳ್ಳದೆ ತಂಡದ ಮೊತ್ತವನ್ನು ಹೆಚ್ಚಿಸಿದರು.

    ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ 25 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ನಂತರ ಡೇವಿಡ್ ಮಿಲ್ಲರ್ ಕೂಡ ಸ್ಫೋಟಕ ಪ್ರದರ್ಶನ ನೀಡಿದರು. ಮಿಲ್ಲರ್ 12 ಎಸೆತಗಳನ್ನು ಎದುರಿಸಿ 21 ರನ್‌ಗಳಿಸಿ ಅಜೇಯರಾಗುಳಿದರು. ಇನ್ನೂ ಆರಂಭದಿಂದ ಕೊನೆಯವರೆಗೂ ಲಕ್ನೋ ಸೂಪರ್ ಜೈಂಟ್ಸ್ ಬೌಲರ್‌ಗಳನ್ನು ಚೆಂಡಾಡಿದ ಗಿಲ್ ಅಜೇಯ 94 ರನ್‌ (2 ಬೌಂಡರಿ, 7 ಸಿಕ್ಸರ್‌) ಗಳಿಸಿದರು.

    ಗುಜರಾತ್‌ ಟೈಟಾನ್ಸ್‌ ಪರ ಮೋಹಿತ್‌ ಶರ್ಮಾ 4 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಶಮಿ, ರಶೀದ್‌ ಖಾನ್‌, ನೂರ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ಐಪಿಎಲ್ ಅಖಾಡದಲ್ಲಿ ಪಾಂಡ್ಯ ಸಹೋದರರ ಸವಾಲ್ – ಯಾರಿಗೆ ಒಲಿಯಲಿದೆ ಜಯದ ಕಿರೀಟ?

    ಐಪಿಎಲ್ ಅಖಾಡದಲ್ಲಿ ಪಾಂಡ್ಯ ಸಹೋದರರ ಸವಾಲ್ – ಯಾರಿಗೆ ಒಲಿಯಲಿದೆ ಜಯದ ಕಿರೀಟ?

    ಗಾಂಧಿನಗರ: ಇದೇ ಮೊದಲ ಬಾರಿಗೆ ಐಪಿಎಲ್ (IPL) ಇತಿಹಾಸದಲ್ಲಿ ಅಣ್ಣ ತಮ್ಮ ಇಬ್ಬರು ಎದುರಾಳಿಗಳಾಗಿ ಕಣಕ್ಕಿಳಿದಿದ್ದಾರೆ. 16ನೇ ಐಪಿಎಲ್ ಆವೃತ್ತಿಯಲ್ಲಿ ಭಾನುವಾರ ನಡೆಯುತ್ತಿರುವ ಗುಜರಾತ್ ಟೈಟಾನ್ಸ್ (Gujarat Titans) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ನಡುವಿನ ಪಂದ್ಯವೂ ಸಹೋದರರ ಸವಾಲ್‍ಗೆ ವೇದಿಕೆಯಾಗಿದೆ.

    ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ಲಕ್ನೋ ತಂಡದ ನಾಯಕನಾಗಿ ಕೃನಾಲ್ ಪಾಂಡ್ಯ (Krunal Pandya) ಕಣಕ್ಕಿಳಿದಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಗಳನ್ನು ಹೊಂದಿರುವ ಇತ್ತಂಡದ ನಾಯಕರು ಕಣದಲ್ಲಿ ಅಬ್ಬರಿಸುತ್ತಿದ್ದಾರೆ. ಇದನ್ನೂ ಓದಿ: ಶೇಕ್‍ಹ್ಯಾಂಡ್ ವಿವಾದಕ್ಕೆ ತೆರೆ ಎಳೆದ ಕೊಹ್ಲಿ, ಗಂಗೂಲಿ

    ಐಪಿಎಲ್ ಫ್ರಾಂಚೈಸಿಯಲ್ಲಿ ಈ ಹಿಂದೆ ಅನೇಕ ಸಹೋದರರು ಎದುರಾಳಿಗಳಾಗಿ ಕಣಕ್ಕಿಳಿದಿದ್ದಾರೆ. ಆದ್ರೆ ಇದೇ ಮೊದಲ ಬಾರಿಗೆ ನಾಯಕರಾಗಿ ಅಣ್ಣ ತಮ್ಮ ಕಣದಲ್ಲಿ ಅಬ್ಬರಿಸುತ್ತಿರುವುದು ರೋಚಕವಾಗಿದೆ. ಕಳೆದ ವಾರ ಆರ್‌ಸಿಬಿ (RCB) ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಕೆ.ಎಲ್ ರಾಹುಲ್ (KL Rahul) ಗಾಯಕ್ಕೆ ತುತ್ತಾಗಿದ್ದರಿಂದ ಕೃನಾಲ್ ಪಾಂಡ್ಯ ನಾಯಕತ್ವ ವಹಿಸಿಕೊಂಡಿದ್ದಾರೆ.

    ಇನ್ನೂ 2022ರಲ್ಲಿ ಮೊದಲಬಾರಿಗೆ ಐಪಿಎಲ್ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವದಲ್ಲಿ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆಲ್ಲುವ ಮೂಲಕ ಪಾಂಡ್ಯ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಇತ್ತಂಡಗಳಿಗೂ ಇದು ಸವಾಲಿನ ಪಂದ್ಯವಾಗಿದೆ.

    2023ರ ಆವೃತ್ತಿಯಲ್ಲಿ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿರುವ ಗುಜರಾತ್ ತಂಡ 14 ಅಂಕಗಳೊಂದಿಗೆ ಟಾಪ್ 1 ಸ್ಥಾನದಲ್ಲಿದೆ. ಆದ್ರೆ 10 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿರುವ ಲಕ್ನೋ 11 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗುಜರಾತ್ ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಲಕ್ನೋ ಗೆದ್ದರೆ ಟಾಪ್ 2ನೇ ಸ್ಥಾನಕ್ಕೆ ಬರಲಿದೆ.

    ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್, ಕೈಲ್ ಮೇಯರ್ಸ್, ದೀಪಕ್ ಹೂಡಾ, ಕರಣ್ ಶರ್ಮಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಸ್ವಪ್ನಿಲ್ ಸಿಂಗ್, ಯಶ್ ಠಾಕೂರ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್ ಮತ್ತು ಅವೇಶ್ ಖಾನ್.

    ಇಂಪ್ಯಾಕ್ಟ್ ಪ್ಲೇಯರ್ಸ್: ಆಯುಷ್ ಬಡೋನಿ, ಅಮಿತ್ ಮಿಶ್ರಾ, ಡೇನಿಯಲ್ ಸಾಮ್ಸ್, ಯದ್ವೀರ್ ಸಿಂಗ್ ಮತ್ತು ಪ್ರೇರಕ್ ಮಂಕಡ್.

    ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ, ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್ ಮತ್ತು ಮೊಹಮ್ಮದ್ ಶಮಿ.

    ಇಂಪ್ಯಾಕ್ಟ್ ಪ್ಲೇಯರ್ಸ್: ಅಲ್ಜಾರಿ ಜೋಸೆಫ್, ದಸುನ್ ಶನಕ, ಕೆಎಸ್ ಭರತ್, ಶಿವಂ ಮಾವಿ ಮತ್ತು ಜಯಂತ್ ಯಾದವ್. ಇದನ್ನೂ ಓದಿ: RCBಯನ್ನು ಹುರಿದು ಮುಕ್ಕಿದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ 

  • IPL ಟೂರ್ನಿಯಿಂದ ಕನ್ನಡಿಗ ಕೆ.ಎಲ್‌ ರಾಹುಲ್‌ ಔಟ್‌

    IPL ಟೂರ್ನಿಯಿಂದ ಕನ್ನಡಿಗ ಕೆ.ಎಲ್‌ ರಾಹುಲ್‌ ಔಟ್‌

    ಲಕ್ನೋ: ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಾಯಕ ಕೆ.ಎಲ್‌ ರಾಹುಲ್‌ (KL Rahul) 16ನೇ ಆವೃತ್ತಿಯ ಐಪಿಎಲ್‌ (IPL 2023) ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

    ಜೊತೆಗೆ ಆಸ್ಟ್ರೇಲಿಯಾ (Australia) ವಿರುದ್ಧ ಜೂನ್‌ 7 ರಂದು ಲಂಡನ್‌ನಲ್ಲಿ ನಡೆಯಲಿರುವ ವಿಶ್ವಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ (WTC) ಪಂದ್ಯಕ್ಕೂ ಲಭ್ಯರಾಗುವ ಅನುಮಾನ ಮೂಡಿದೆ. ಇದನ್ನೂ ಓದಿ: ಲಕ್ನೋಗೆ ಡಬಲ್‌ ಶಾಕ್‌ – ಕೆ.ಎಲ್‌ ರಾಹುಲ್‌ IPL ಟೂರ್ನಿಯಿಂದಲೇ ಔಟ್‌?

    ವೈದ್ಯಕೀಯ ತಂಡದ ಸಲಹೆಯ ಮೇರೆಗೆ ಶೀಘ್ರದಲ್ಲೇ ನಾನು ತೊಡೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತೇನೆ. ಮುಂದಿನ ವಾರಗಳಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದು, ಆದಷ್ಟು ಬೇಗ ಗುಣಮುಖನಾಗುವ ಕಡೆಗೆ ಗಮನಹರಿಸುತ್ತೇನೆ. ಆದ್ರೆ ಈ ಬಾರಿ ಐಪಿಎಲ್‌ನಿಂದ ದೂರ ಉಳಿಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ನಾಯಕನಾಗಿ ಟೂರ್ನಿಯ ನಿರ್ಣಾಯಕ ಅವಧಿಯಲ್ಲಿ ತಂಡದ ಜೊತೆ ಇರಲು ಸಾಧ್ಯವಾಗದೇ ಇರುವುದರಿಂದ ನನಗೆ ತುಂಬಾ ನೋವಾಗುತ್ತಿದೆ ಎಂದು ಕೆ.ಎಲ್ ರಾಹುಲ್‌ ತಮ್ಮ ಇನ್ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    ಮುಂದಿನ ಪಂದ್ಯಗಳಲ್ಲಿ ನಮ್ಮ ಹುಡುಗರು ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾಗಲಿದ್ದಾರೆಂಬ ಬಗ್ಗೆ ನನಗೆ ಸಂಪೂರ್ಣನಂಬಿಕೆ ಇದೆ. ಪ್ರತಿಯೊಂದು ಪಂದ್ಯವನ್ನು ವೀಕ್ಷಿಸುವ ಮೂಲಕ ತಂಡವನ್ನು ಹುರಿದುಂಬಿಸುತ್ತೇನೆ ಎಂದು ರಾಹುಲ್‌ ಹೇಳಿದ್ದಾರೆ. ಇದನ್ನೂ ಓದಿ: ಯಾರಾದ್ರು ಕೊಟ್ರೆ ನಾವೂ ತಿರುಗಿಸಿ ಕೊಡ್ತೀವಿ – ಮತ್ತೆ ಗಂಭೀರ್‌ಗೆ ಕೌಂಟರ್‌ ಕೊಟ್ಟ ಕಿಂಗ್‌ ಕೊಹ್ಲಿ

    ಇದೇ ಮೇ 1ರಂದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧದ ಪಂದ್ಯದ ವೇಳೆ ಬೌಂಡರಿ ತಡೆಯುವ ಪ್ರಯತ್ನದಲ್ಲಿ ಕೆ.ಎಲ್‌ ರಾಹುಲ್ ಬೌಂಡರಿ ತಡೆಯಲು ಮುಂದಾದಾಗ ನೆಲಕ್ಕೆ ಉರುಳಿದ್ದರು. ಈ ವೇಳೆ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ನೋವು ತಾಳಲಾರದೆ ಅವರು, ತಮ್ಮ ತಂಡದ ಸಹಾಯಕ ಸಿಬ್ಬಂದಿ ನೆರವಿನಿಂದ ಮೈದಾನ ತೊರೆದಿದ್ದರು.

    ಇದಾದ ಬಳಿಕ ಅವರು ಫೀಲ್ಡಿಂಗ್‌ಗೆ ಮರಳಲೇ ಇಲ್ಲ. ಕೊನೆಗೆ 19ನೇ ಓವರ್‌ನಲ್ಲಿ ಇನ್ನೂ ಮೂರು ಎಸೆತಗಳು ಬಾಕಿಯಿದ್ದಾಗ ಮತ್ತೆ ನೋವಿನಲ್ಲೂ ಕಣಕ್ಕಿಳಿದಿದ್ದರು. ಮೂರು ಎಸೆತಗಳನ್ನ ಎದುರಿಸಿದರೂ ಯಾವುದೇ ರನ್‌ ಕದಿಯಲು ಆಗಲಿಲ್ಲ. ಗಾಯಕ್ಕೆ ತುತ್ತಾಗಿದ್ದ ಕೆ.ಎಲ್‌ ರಾಹುಲ್ ಅವರನ್ನ ಲಕ್ನೋ ಫ್ರಾಂಚೈಸಿಯಿಂದ ಬಿಸಿಸಿಐ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಲಕ್ನೋ ಸೂಪರ್‌ ಜೈಂಟ್ಸ್‌ ತಂಡವೂ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

  • IPL 2023: ಜಯದ ನಿರೀಕ್ಷೆಯಲ್ಲಿದ್ದ ಚೆನ್ನೈಗೆ ಭಾರೀ ನಿರಾಸೆ – ಮಳೆಗೆ ಪಂದ್ಯ ರದ್ದು

    IPL 2023: ಜಯದ ನಿರೀಕ್ಷೆಯಲ್ಲಿದ್ದ ಚೆನ್ನೈಗೆ ಭಾರೀ ನಿರಾಸೆ – ಮಳೆಗೆ ಪಂದ್ಯ ರದ್ದು

    ಲಕ್ನೋ: ತವರಿನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಜಯದ ನಿರೀಕ್ಷೆಯಲ್ಲಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡಕ್ಕೆ ಭಾರೀ ನಿರಾಸೆಯಾಗಿದೆ. ಮಳೆಯಿಂದಾಗಿ (Rain) ಪಂದ್ಯ ರದ್ದಾದ ಕಾರಣ ಇತ್ತಂಡಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಉಳಿದುಕೊಂಡಿವೆ.

    ಇಲ್ಲಿನ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದೆ ಅಲ್ಪ ಮೊತ್ತ ಗಳಿಸುವಷ್ಟಕ್ಕೆ ಸೀಮಿತವಾಯಿತು. ಇದನ್ನೂ ಓದಿ: ಲಕ್ನೋಗೆ ಡಬಲ್‌ ಶಾಕ್‌ – ಕೆ.ಎಲ್‌ ರಾಹುಲ್‌ IPL ಟೂರ್ನಿಯಿಂದಲೇ ಔಟ್‌?

    ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕುವ ನಿರೀಕ್ಷೆಯಲ್ಲಿತ್ತು. ಆದರೆ ಯುವ ಆಟಗಾರ ಆಯುಷ್ ಬದೋನಿ (Ayush Badoni) ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೆಕ್ಕಾಚಾರವನ್ನ ತಲೆಕೆಳಗಾಗಿಸಿದರು. ಕೊನೆಯ ಹಂತದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬದೋನಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ತಂಡ ಗೌರವಯುತ ಮೊತ್ತ ಗಳಿಸಲು ಕಾರಣವಾದರು. 19.2 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ ಲಕ್ನೋ 125 ರನ್‌ ಗಳಿಸಿತ್ತು. ಇನ್ನೂ 4 ಎಸೆತಗಳು ಬಾಕಿಯಿರುವಾಗಾಲೇ ಮಳೆ ಕಾಟ ಶುರುವಾಯಿತು. ಎಡಬಿಡದೇ ಮಳೆ ಸುರಿಯುತ್ತಿದ್ದರಿಂದ ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ರದ್ದಾಯಿತು.

    ಲಕ್ನೋ ಪರ ಆಯುಷ್‌ ಬದೋನಿ 33 ಎಸೆತಗಳಲ್ಲಿ ಸ್ಫೋಟಕ 59 ರನ್‌ (4 ಸಿಕ್ಸರ್‌, 2 ಬೌಂಡರಿ) ಸಿಡಿಸಿದರೆ, ನಿಧಾನಗತಿ ಬ್ಯಾಟಿಂಗ್‌ ಮಾಡಿದ ನಿಕೋಲಸ್‌ ಪೂರನ್‌ (Nicholas Pooran) 20 ರನ್‌ ಕೊಡುಗೆ ನೀಡಿದರು. ಇದನ್ನೂ ಓದಿ: ಪಾಂಡ್ಯ ಹೋರಾಟ ವ್ಯರ್ಥ – ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ರನ್‌ ರೋಚಕ ಜಯ

    ಚೆನ್ನೈ ಸೂಪರ್ ಕಿಂಗ್ಸ್‌ ಪರ ಮೊಯಿನ್‌ ಅಲಿ, ಮಹೀಶ್‌ ತೀಕ್ಷಣ ಹಾಗೂ ಮಹೇಶ್‌ ಪತಿರಣ ತಲಾ ಎರಡು ವಿಕೆಟ್‌ ಕಿತ್ತರೆ, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್‌ ಪಡೆದು ಮಿಂಚಿದರು.

    9 ಪಂದ್ಯಗಳಲ್ಲಿ ಇತ್ತಂಡಗಳು ತಲಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದವು. ಇಂದು ಚೆನ್ನೈ ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ನಿರೀಕ್ಷೆಯಲ್ಲಿತ್ತು. ಆದರೆ ಮಳೆಯಿಂದಾಗಿ ಇತ್ತಂಡಗಳಿಯೂ ನಿರಾಸೆಯಾಗಿದೆ.

  • ಲಕ್ನೋಗೆ ಡಬಲ್‌ ಶಾಕ್‌ – ಕೆ.ಎಲ್‌ ರಾಹುಲ್‌ IPL ಟೂರ್ನಿಯಿಂದಲೇ ಔಟ್‌?

    ಲಕ್ನೋಗೆ ಡಬಲ್‌ ಶಾಕ್‌ – ಕೆ.ಎಲ್‌ ರಾಹುಲ್‌ IPL ಟೂರ್ನಿಯಿಂದಲೇ ಔಟ್‌?

    ಲಕ್ನೋ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಸೋಲನುಭವಿಸಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡಕ್ಕೆ ಡಬಲ್‌ ಶಾಕ್‌ ಕೊಟ್ಟಂತಾಗಿದೆ. ಲಕ್ನೋ ತಂಡದ ಇಬ್ಬರು ಪ್ರಮುಖ ಆಟಗಾರರು ಐಪಿಎಲ್‌ 2023ನಿಂದಲೇ (IPL 2023) ಹೊರಗುಳಿಯಲಿದ್ದಾರೆ.

    9 ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು 5ರಲ್ಲಿ ಗೆಲುವು ಸಾಧಿಸಿದ್ದು, 4 ಪಂದ್ಯಗಳಲ್ಲಿ ಸೋತಿದೆ. ಸದ್ಯ ಪಾಂಯಿಂಟ್ಸ್‌ ಪಟ್ಟಿಯಲ್ಲಿ 3 ಸ್ಥಾನದಲ್ಲಿರುವ ಲಕ್ನೋ ಪ್ಲೇ ಆಫ್‌ ತಲುಪಲು ಉಳಿದ 5 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಬೇಕಿದೆ. ಈ ನಡುವೆ ನಾಯಕ ಕೆ.ಎಲ್‌ ರಾಹುಲ್‌ (KL Rahul) ಹಾಗೂ ಜಯದೇವ್‌ ಉನಾದ್ಕಟ್‌ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಎದುರಾಗಿದೆ. ಇದನ್ನೂ ಓದಿ: ಯಾರಾದ್ರು ಕೊಟ್ರೆ ನಾವೂ ತಿರುಗಿಸಿ ಕೊಡ್ತೀವಿ – ಮತ್ತೆ ಗಂಭೀರ್‌ಗೆ ಕೌಂಟರ್‌ ಕೊಟ್ಟ ಕಿಂಗ್‌ ಕೊಹ್ಲಿ

    ಸೋಮವಾರ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದ ವೇಳೆ ಬೌಂಡರಿ ತಡೆಯುವ ಪ್ರಯತ್ನದಲ್ಲಿ ಕೆ.ಎಲ್‌ ರಾಹುಲ್ ಬೌಂಡರಿ ತಡೆಯಲು ಮುಂದಾದಾಗ ನೆಲಕ್ಕೆ ಉರುಳಿದ್ದರು. ಈ ವೇಳೆ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ನೋವು ತಾಳಲಾರದೆ ಅವರು, ತಮ್ಮ ತಂಡದ ಸಹಾಯಕ ಸಿಬ್ಬಂದಿ ನೆರವಿನಿಂದ ಮೈದಾನ ತೊರೆದಿದ್ದರು. ಇದಾದ ಬಳಿಕ ಅವರು ಫೀಲ್ಡಿಂಗ್‌ಗೆ ಮರಳಲೇ ಇಲ್ಲ. ಕೊನೆಗೆ 19ನೇ ಓವರ್‌ನಲ್ಲಿ ಇನ್ನೂ ಮೂರು ಎಸೆತಗಳು ಬಾಕಿಯಿದ್ದಾಗ ಮತ್ತೆ ನೋವಿನಲ್ಲೂ ಕಣಕ್ಕಿಳಿದಿದ್ದರು. ಮೂರು ಎಸೆತಗಳನ್ನ ಎದುರಿಸಿದರೂ ಯಾವುದೇ ರನ್‌ ಕದಿಯಲು ಆಗಲಿಲ್ಲ.

    ಗಾಯಕ್ಕೆ ತುತ್ತಾಗಿರುವ ಕೆ.ಎಲ್‌ ರಾಹುಲ್ ಅವರನ್ನು ಲಕ್ನೋ ಫ್ರಾಂಚೈಸಿಯಿಂದ ಬಿಸಿಸಿಐ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕೆ.ಎಲ್‌ ರಾಹುಲ್‌ ಅವರ ಗಾಯ ಗಂಭೀರವಾಗಿದ್ದರೆ, ಟೂರ್ನಿಯಿಂದ ಹೊರ ಬೀಳುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಅವರು ಕೆಲ ಪಂದ್ಯಗಳ ಬಳಿಕ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂದು ಐಪಿಎಲ್‌ ಮಂಡಳಿ ತಿಳಿಸಿದೆ. ಇದನ್ನೂ ಓದಿ: ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ – ಕೊಹ್ಲಿ, ಗಂಭೀರ್ ಕಿರಿಕ್‌ಗೆ ಕಾರಣ ಏನು?

    ಈಗಾಗಲೇ ಕೆ.ಎಲ್‌ ರಾಹುಲ್‌ ಅವರ ಗಾಯದ ಭಾಗವನ್ನು ಸ್ಕ್ಯಾನ್‌ಗೆ ಒಳಪಡಿಸಲಾಗಿದ್ದು, ಅವರಿಗೆ ನೋವು ಇನ್ನೂ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲ ಪಂದ್ಯಗಳಿಗೆ ಅವರು ಅಲಭ್ಯರಾಗಲಿದ್ದಾರೆ. ಕೆ.ಎಲ್‌ ರಾಹುಲ್‌ ಅವರ ಗಾಯದ ಪರಿಸ್ಥಿತಿಯನ್ನು ಆಧರಿಸಿ ಬಿಸಿಸಿಐ ಹಾಗೂ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ ಲಕ್ನೋ ನಾಯಕನ ಐಪಿಎಲ್ ಟೂರ್ನಿಯಲ್ಲಿ ಮುಂದುವರಿಯಬೇಕಾ? ಅಥವಾ ಬೇಡವಾ? ಎಂಬುದನ್ನು ತೀರ್ಮಾನಿಸಲಿದೆ.

    ಜಯದೇವ್‌ ಉನದ್ಕತ್ ಅವರ ವಿಷಯದಲ್ಲಿಯೂ ಕಠಿಣ ತೀರ್ಮಾನಕ್ಕೆ ಬಿಸಿಸಿಐ ಮುಂದಾಗುತ್ತಿದೆ. ಅವರ ಭುಜದ ಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಅವರು ಮುಂದೆ ಐಪಿಎಲ್‌ನಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಜೊತೆಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲೂ ಸ್ಥಾನ ಕಳೆದುಕೊಳ್ಳುವ ಸ್ಥಾನವಿದೆ ಎಂದು ಹೇಳಲಾಗಿದೆ.

  • ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ – ಕೊಹ್ಲಿ, ಗಂಭೀರ್ ಕಿರಿಕ್‌ಗೆ ಕಾರಣ ಏನು?

    ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ – ಕೊಹ್ಲಿ, ಗಂಭೀರ್ ಕಿರಿಕ್‌ಗೆ ಕಾರಣ ಏನು?

    ಲಕ್ನೋ: ಸೋಮವಾರ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದ ಬಳಿಕ ವಿರಾಟ್ ಕೊಹ್ಲಿ (Virat Kohli) ಮತ್ತು ಗೌತಮ್ ಗಂಭೀರ್ ಅವರಿಗೆ ತಮ್ಮ ಐಪಿಎಲ್ (IPL) ಪಂದ್ಯದ ಶೇ.100 ರಷ್ಟು ದಂಡ ವಿಧಿಸಲಾಗಿದೆ.

    ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅತಿರೇಖದ ವರ್ತನೆಯಿಂದ ಐಪಿಎಲ್ ನೀತಿ ಸಂಹಿತೆ (IPL Code of Conduct) ಉಲ್ಲಂಘಿಸಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ (25 ಲಕ್ಷ ರೂ.) ಹಾಗೂ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ 100 ಪ್ರತಿಶತದಷ್ಟು (1.07 ಕೋಟಿ ರೂ.) ದಂಡ ವಿಧಿಸಲಾಗಿದೆ. ಐಪಿಎಲ್ ನೀತಿಸಂಹಿತೆಯ ಆರ್ಟಿಕಲ್ 2.21ರ ಅಡಿಯಲ್ಲಿ ಗೌತಮ್ ಗಂಭೀರ್ 2ನೇ ಹಂತದ ಅಪರಾಧ ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದೆ. ಈ ನಡುವೆ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನವೀನ್-ಉಲ್-ಹಕ್‌ಗೆ (Naveen-ul-Haq) ಶೇ.50 ರಷ್ಟು(1.79 ಲಕ್ಷ ರೂ.) ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಒಂದು ಹುಡ್ಗನ್ನ ಪಟಾಯಿಸಿಕೊಡು ವಿರಾಟ್‌ – ಪೋಸ್ಟರ್‌ ಹಿಡಿದು ರಿಕ್ವೆಸ್ಟ್‌ ಮಾಡಿದ RCB ಫ್ಯಾನ್ಸ್‌

    ಏನಿದು ಕೊಹ್ಲಿ-ಗಂಭೀರ್ ವಾರ್?
    ಏಕನಾ ಕ್ರೀಡಾಂಗಣದಲ್ಲಿ ನಡೆದ 43ನೇ ಪಂದ್ಯದಲ್ಲಿ ಆರ್‌ಸಿಬಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್‌ಗಳ ಜಯ ಸಾಧಿಸಿತು. ಈ ಹಿಂದೆ ಆರ್‌ಸಿಬಿ ತವರಿನಲ್ಲಿ ಲಕ್ನೋ ವಿರುದ್ಧದ ವಿರೋಚಿತ ಸೋಲಿಗೆ ಸೇಡು ತೀರಿಸಿಕೊಂಡಿತು. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಈ ಹಿಂದೆಯೂ ಹಲವು ಬಾರಿ ಜಗಳ ನಡೆದಿವೆ. ಆ ನಂತರ ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಆದರೆ ಸೋಮವಾರ ನಡೆದ ಪಂದ್ಯದ ಬಳಿಕ ಇವರಿಬ್ಬರ ನಡುವಿನ ಜಗಳ ಅತಿರೇಕಕ್ಕೆ ತಲುಪಿತ್ತು. ಒಂದು ವೇಳೆ ಸಹ ಆಟಗಾರರು ಮಧ್ಯ ಬಾರದೇ ಇದ್ದಿದ್ದರೆ ಕೈಕೈ ಮಿಲಾಯಿಸುವುದಕ್ಕೂ ಕಾರಣವಾಗುತ್ತಿತ್ತು. ಇದನ್ನೂ ಓದಿ: ಬೊಂಬಾಟ್‌ ಬೌಲಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ – RCBಗೆ 18 ರನ್‌ಗಳ ಭರ್ಜರಿ ಜಯ

    ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಣ ಪಂದ್ಯದಲ್ಲಿ ಲಕ್ನೋ ತಂಡ 1 ವಿಕೆಟ್‌ಗಳ ಜಯ ದಾಖಲಿಸಿತ್ತು. ಆ ಪಂದ್ಯದ ಬಳಿಕ ಗಂಭೀರ್ ಬಾಯ್ಮೇಲೆ ಬೆರೆಳಿಟ್ಟು ಆರ್‌ಸಿಬಿ ಪ್ರೇಕ್ಷಕರು ಸುಮ್ಮನಿರುವಂತೆ ಸೂಚಿಸಿ ಸಂಭ್ರಮಿಸಿದ್ದರು. ಲಕ್ನೋ ತಂಡದ ಅವೇಶ್ ಖಾನ್ ಹೆಲ್ಮೆಟ್ ಕಿತ್ತೆಸೆದು ಅತಿರೇಖದ ವರ್ತನೆ ತೋರಿಸಿದ್ದರು. ಇದಕ್ಕೆ ಪ್ರತಿಯಾಗಿ ತವರಿನಲ್ಲಿ ಬುದ್ಧಿ ಕಲಿಸಲು ನಿರ್ಧರಿಸಿದ್ದ ಆರ್‌ಸಿಬಿ ತಂಡ ಕೊನೆಗೂ ಗೆದ್ದು ಬೀಗಿತು. ಪಂದ್ಯದ ನಡುವೆ ವಿರಾಟ್ ಅಭಿಮಾನಿಗಳು ಸುಮ್ಮನಿರಬಾರದು ?ಹೃದಯತುಂಬಿ ಸಂಭ್ರಮಿಸಬೇಕು’ ಎಂದು ಸನ್ನೆ ಮೂಲಕ ತೋರಿಸಿದರು.

    127 ರನ್ ಗುರಿ ಬೆನ್ನತ್ತಿದ ಲಕ್ನೋ ತಂಡ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇನಿಂಗ್ಸ್ ಅಂತ್ಯದಲ್ಲಿ ಅಮಿತ್ ಮಿಶ್ರಾ 19 ರನ್ ಮತ್ತು ವೇಗಿ ನವೀನ್ ಉಲ್ ಹಕ್ 13 ನಡುವೆ ಸಣ್ಣ ಜೊತೆಯಾಟವೊಂದು ಮೂಡಿಬಂದಿತ್ತು. ಕವರ್ಸ್ ವಿಭಾಗದಲ್ಲಿ ಒಂದು ಫೋರ್ ಕೂಡ ಬಾರಿಸಿದ್ದ ನವೀನ್ ಆರ್‌ಸಿಬಿ ತಾರೆ ವಿರಾಟ್ ಕೊಹ್ಲಿ ಅವರನ್ನ ದುರುಗುಟ್ಟಿ ನೋಡಿ, ದೊಡ್ಡ ಜಗಳಕ್ಕೆ ಸಣ್ಣ ಕಿಡಿ ಹಚ್ಚಿದ್ದರು. ಪಂದ್ಯ ಮುಗಿದ ಬಳಿಕ ನವೀನ್ ಮತ್ತು ಕೊಹ್ಲಿ ಕೈ ಕುಲುಕುವಾಗಲೂ ಮಾತಿನ ಚಕಮಕಿ ನಡೆದಿತ್ತು. ಕೈ-ಕೈ ಮಿಲಾಯಿಸುವುದಕ್ಕೂ ಮುಂದಾಗಿದ್ದರು. ಆದ್ರೆ ಮ್ಯಾಕ್ಸ್ವೆಲ್ ಹಾಗೂ ಹರ್ಷಲ್ ಪಟೇಲ್ ಸಮಾಧಾನಪಡಿಸಿ ಕಳುಹಿಸಿದ್ದರು.

    ಕೊಹ್ಲಿ ಮತ್ತು ನವೀನ್ ನಡುವಣ ಸಣ್ಣ ಜಗಳವನ್ನು ಅಲ್ಲೇ ಇದ್ದ ಎರಡೂ ತಂಡಗಳ ಆಟಗಾರರು ಬಗೆ ಹರಿಸಿದ್ದರು. ಆದರೆ, ಡಗೌಟ್‌ನಿಂದ ಹೊರಬಂದ ಗೌತಮ್ ಗಂಭೀರ್ ಜಗಳವನ್ನು ಮತ್ತಷ್ಟು ಗಂಭೀರವಾಗಿಸಿದರು. ವಿರಾಟ್ ಜೊತೆಗೆ ಮಾತನಾಡುತ್ತಿದ್ದ ಎಲ್‌ಎಸ್‌ಜಿ ಆಟಗಾರ ಕೈಲ್ ಮೇಯರ್ಸ್ ಅವರನ್ನು ಎಳೆದೊಯ್ದ ಗಂಭೀರ್ ಈ ಸಂದರ್ಭದಲ್ಲಿ ಮಾತಿನ ಚಕಮಕಿಯೇ ನಡೆಸಿದರು. ಕೊಹ್ಲಿ ಮತ್ತು ಗಂಭೀರ್‌ನ ತಡೆದು ನಿಲ್ಲಿಸಲು ಎರಡೂ ತಂಡದ ಆಟಗಾರರು ಹರಸಾಹನ ನಡೆಸಿದರು. ಈ ವೇಳೆ ಕೆ.ಎಲ್ ರಾಹುಲ್ ಹಾಗೂ ಅಮಿತ್ ಮಿಶ್ರಾ ಪರಿಸ್ಥಿತಿಯನ್ನು ತಣ್ಣಗಾಗಿಸಿದರು.

    ಕೊಹ್ಲಿ-ಗಂಭೀರ್ ಜಗಳಕ್ಕೆ ಕಾರಣವೇನು?
    ಕಳೆದ ಏಪ್ರಿಲ್ 10ರಂದು ಬೆಂಗಳೂರಿನಲ್ಲಿ ನಡೆದಿದ್ದ ಆರ್‌ಸಿಬಿ ಹಾಗೂ ಲಕ್ನೋ ನಡುವಣ ಪಂದ್ಯದಲ್ಲಿ ಲಕ್ನೋ ಆಟಗಾರರು ಅತಿರೇಕದ ವರ್ತನೆ ತೋರಿದ್ದರು. ಕೊನೆಯ ಎಸೆತದಲ್ಲಿ ಗೆಲುವು ಪಡೆದ ಬಳಿಕ ಅವೇಶ್ ಖಾನ್ ತಮ್ಮ ಹೆಲ್ಮೆಟ್ ಅನ್ನು ನೆಲಕ್ಕೆ ಜೋರಾಗಿ ಎಸೆದು ಸಂಭ್ರಮಿಸಿದ್ದರು. ಅಷ್ಟೇ ಅಲ್ಲದೆ, ಲಕ್ನೋ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ತಮ್ಮ ಕೈ ಸನ್ನೆಯ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಸೈಲೆನ್ಸ್ ಎಂದು ಹೇಳಿದ್ದರು. ಈ ಎಲ್ಲಾ ಘಟನೆಗಳನ್ನು ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ಆಟಗಾರರು ಗಮನಿಸಿದ್ದರು ಮತ್ತು ಲಕ್ನೋ ಆಟಗಾರರ ಈ ವರ್ತನೆ ಬಗ್ಗೆ ಅಸಮಾಧಾನಗೊಂಡಿದ್ದರು. ಸೋಮವಾರ ಪಂದ್ಯ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ಕೂಡ ಕೈ ಸನ್ನೆ ಮೂಲಕ ಗಂಭೀರ್‌ಗೆ ತಿರುಗೇಟು ನೀಡಿದರು.

    ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ 19.5 ಓವರ್‌ಗಳಲ್ಲಿ 108 ರನ್ ಗಳಿಗೆ ಸರ್ವಪತನ ಕಂಡು ತವರಿನಲ್ಲಿ ಸೋತು ಮುಖಭಂಗ ಅನುಭವಿಸಿತು.

  • ಒಂದು ಹುಡ್ಗನ್ನ ಪಟಾಯಿಸಿಕೊಡು ವಿರಾಟ್‌ – ಪೋಸ್ಟರ್‌ ಹಿಡಿದು ರಿಕ್ವೆಸ್ಟ್‌ ಮಾಡಿದ RCB ಫ್ಯಾನ್ಸ್‌

    ಒಂದು ಹುಡ್ಗನ್ನ ಪಟಾಯಿಸಿಕೊಡು ವಿರಾಟ್‌ – ಪೋಸ್ಟರ್‌ ಹಿಡಿದು ರಿಕ್ವೆಸ್ಟ್‌ ಮಾಡಿದ RCB ಫ್ಯಾನ್ಸ್‌

    ಲಕ್ನೋ: ‌ಐಪಿಎಲ್‌ (IPL 2023) ಹಬ್ಬದಲ್ಲಿ ಪ್ರತಿದಿನವೂ ಒಂದೊಂದು ವಿಶೇಷತೆಗಳು ಕಂಡುಬರ್ತಿದೆ. ಅದರಲ್ಲೂ ಆರ್‌ಸಿಬಿ (RCB) ಮ್ಯಾಚ್‌ ಇದ್ದರೆ ಅಭಿಮಾನಿಗಳಂತೂ ಸುದ್ದಿಯಲ್ಲೇ ಇರ್ತಾರೆ.

    ಸೋಮವಾರ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ವಿರುದ್ಧ ನಡೆಯುತ್ತಿದ್ದ ಪಂದ್ಯದ ವೇಳೆ ಯುವತಿಯರಿಬ್ಬರು ʻಒಂದು ಹುಡ್ಗನ್ನ ಪಟಾಯಿಸಿಕೊಡು ವಿರಾಟ್‌ʼ ಅಂತಾ ಪೋಸ್ಟರ್‌ ಹಿಡಿದುಕೊಂಡು ಸುದ್ದಿಯಾಗಿದ್ದಾರೆ.

    ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ ಟೂರ್ನಿಯಲ್ಲಿ ಆರ್‌ಸಿಬಿ ತಂಡಕ್ಕೆ ಸಾಕಷ್ಟು ಟ್ರೆಂಡ್‌ ಇದೆ. ಇಲ್ಲಿಯವರೆಗೂ ಒಂದೇ ಒಂದು ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ಆರ್‌ಸಿಬಿ, ಇತರೆ ಎಲ್ಲಾ ತಂಡಗಳಿಗಿಂತಲೂ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನ ಹೊಂದಿದೆ. ಇದನ್ನೂ ಓದಿ: ನಮ್ಮ ಬ್ಲಡ್‌ ಗ್ರೂಪ್‌ RCB ಪಾಸಿಟಿವ್‌ – ಫ್ಯಾನ್ಸ್‌ ಪೋಸ್ಟರ್‌ ವೈರಲ್‌

    ಕೆಕೆಆರ್‌ (KKR) ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಫ್ಯಾನ್ಸ್‌ ʻನಮ್ಮದು ಆರ್‌ಸಿಬಿ ಬ್ಲಡ್‌ ಗ್ರೂಪ್‌ʼ ಅಂತಾ ಪೋಸ್ಟರ್‌ ಹಿಡಿದುಕೊಂಡಿದ್ದರು. ಇದು ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಆದರೀಗ ಇಬ್ಬರು ಯುವತಿಯರು ಒಂದು ಹುಡುಗನನ್ನ ಹುಡುಕಿಕೊಡುವಂತೆ ರಿಕ್ವೆಸ್ಟ್‌ ಮಾಡಿದ್ದಾರೆ. ಯುವತಿಯರ ನಡೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕುಸ್ತಿಪಟುಗಳು ಬೀದಿಗಿಳಿದು ಪ್ರತಿಭಟನೆ ಮಾಡ್ತಿರೋದು ದೇಶದ ಘನತೆಗೆ ಧಕ್ಕೆ – ಪಿ.ಟಿ ಉಷಾ ಬೇಸರ

    ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಕೇವಲ 126 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.