Tag: Lucknow Hotel

  • ಕೌಟುಂಬಿಕ ಕಲಹ – ಹೊಸವರ್ಷಕ್ಕೂ ಮುನ್ನಾದಿನವೇ ತಾಯಿ, ನಾಲ್ವರು ಸಹೋದರಿಯರ ಹತ್ಯೆಗೈದ ಯುವಕ

    ಕೌಟುಂಬಿಕ ಕಲಹ – ಹೊಸವರ್ಷಕ್ಕೂ ಮುನ್ನಾದಿನವೇ ತಾಯಿ, ನಾಲ್ವರು ಸಹೋದರಿಯರ ಹತ್ಯೆಗೈದ ಯುವಕ

    ಲಕ್ನೋ: ಕೌಟುಂಬಿಕ ಕಲಹದ (Family Dispute) ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಹತ್ಯೆ ಮಾಡಿರುವ ಘಟನೆ ಯುಪಿ ರಾಜಧಾನಿ ಲಕ್ನೋದ ಹೋಟೆಲ್‌ನಲ್ಲಿ (Lucknow Hotel) ನಡೆದಿದೆ.

    ಆರೋಪಿಯನ್ನು ಅರ್ಷದ್ ಎಂದು ಗುರುತಿಸಲಾಗಿದ್ದು, ಕುಟುಂಬಸ್ಥರಿಗೆ ಡ್ರಿಂಕ್ಸ್‌ ಮತ್ತು ಆಹಾರದಲ್ಲಿ ಅಮಲಿನ ಪದಾರ್ಥ ನೀಡಿ ಹತ್ಯೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ (Preliminary Investigation) ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ‌. ಇದನ್ನೂ ಓದಿ: 8 ಗಂಟೆ ಕೆಲಸ ಮಾಡ್ತಾ ಕುಳಿತರೆ ಹೆಂಡ್ತಿ ಓಡಿಹೋಗ್ತಾಳೆ – ಗೌತಮ್‌ ಅದಾನಿ ಹಾಸ್ಯ!

    ಆಗ್ರಾ ಮೂಲದ ಕುಟುಂಬವು ಡಿಸೆಂಬರ್ 30 ರಿಂದ ಲಕ್ನೋದ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು. ಮೃತರನ್ನು ಆರೋಪಿ ಅರ್ಷದ್ ತಾಯಿ ಅಸ್ಮಾ ಮತ್ತು ಅವರ ಸಹೋದರಿಯರು ಕ್ರಮವಾಗಿ 9, 16, 18 ಮತ್ತು 19 ವರ್ಷ ವಯಸ್ಸಿನವರು ಎಂದು ಗುರುತಿಸಲಾಗಿದೆ. ಅಮಲಿನ ಪದಾರ್ಥ ನೀಡಿದ ಬಳಿಕ ಕೆಲವರನ್ನು ಕತ್ತು ಹಿಸುಕಿ, ಇನ್ನೂ ಕೆಲವರನ್ನು ಬ್ಲೇಡ್ ಬಳಿಸಿ ಹತ್ಯೆ ಮಾಡಿದ್ದಾನೆ.

    ಘಟನೆಯ ನಂತರ ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿ 24 ವರ್ಷದ ಅರ್ಷದ್‌ನನ್ನು ಹೋಟೆಲ್‌ನಲ್ಲಿ ಬಂಧಿಸಿದ್ದಾರೆ. ಫೋರೆನ್ಸಿಕ್ ತಂಡವು ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿದ ನಂತರ ಅಪರಾಧದ ಸ್ಥಳವನ್ನು ಸೀಲ್ ಮಾಡಿದೆ. ಇದನ್ನೂ ಓದಿ: 2025 ನಿಮಗೆ ಯಶಸ್ಸು, ಕೊನೆಯಿಲ್ಲದ ಸಂತೋಷ ತರಲಿ: ಜನತೆಗೆ ಹೊಸ ವರ್ಷದ ಶುಭಕೋರಿದ ಪ್ರಧಾನಿ ಮೋದಿ

    ಪೊಲೀಸ್ ಮೂಲಗಳ ಪ್ರಕಾರ, ಘಟನೆಗೂ ಮುನ್ನ ಕುಟುಂಬ ಸದಸ್ಯರಿಗೆ ಅಮಲಿನ ಪದಾರ್ಥ ಇರುವ ಆಹಾರ ಬಡಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಅರ್ಷದ್‌ನ ತಂದೆ ಬಾದರ್‌ನನ್ನೂ ಶಂಕಿತ ಆರೋಪಿ ಎಂದು ಗುರುತಿಸಲಾಗಿದೆ. ಆದ್ರೆ ಆತ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

    ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಕೊಲೆಗಾರನ ಉದ್ದೇಶದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಬಹಿರಂಗಪಡಿಸಬಹುದು ಎಂದು ಲಕ್ನೋದ ಉನ್ನತ ಪೊಲೀಸ್ ಅಧಿಕಾರಿ ರವೀನಾ ತ್ಯಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಮತ ಖರೀದಿ ಯತ್ನವನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ – ಭಾಗವತ್‌ಗೆ ಕೇಜ್ರಿವಾಲ್ ಪ್ರಶ್ನೆ

    ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ವಕ್ತಾರ ಫಕ್ರುಲ್ ಹಸನ್ ಚಂದ್, ಕುಟುಂಬವು ಇನ್ನಿಲ್ಲದಿರುವುದು ದುಃಖಕರವಾಗಿದೆ. ನಿರುದ್ಯೋಗ, ಒತ್ತಡ, ಬಡತನಬವೂ ಹತ್ಯೆಯ ಹಿಂದಿನ ಒಂದು ಕಾರಣವಾಗಿರಬಹುದು. ನಮ್ಮ ಪಕ್ಷವು ಸಂತ್ರಸ್ತರ ಪರವಾಗಿ ನಿಂತಿದೆ ಮತ್ತು ಅವರ ಸಾವಿನ ಬಗ್ಗೆ ದುಃಖವನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.

  • ಮ್ಯೂಸಿಕ್‌ ಸೌಂಡ್‌ ಕಡಿಮೆ ಮಾಡಿ ಎಂದಿದ್ದಕ್ಕೆ ಸೇನಾಧಿಕಾರಿ ಕಾರಿಗೆ ಬೆಂಕಿ ಇಟ್ಟವರ ಹೋಟೆಲ್‌ಗೆ ಬಿತ್ತು ಬೀಗ

    ಮ್ಯೂಸಿಕ್‌ ಸೌಂಡ್‌ ಕಡಿಮೆ ಮಾಡಿ ಎಂದಿದ್ದಕ್ಕೆ ಸೇನಾಧಿಕಾರಿ ಕಾರಿಗೆ ಬೆಂಕಿ ಇಟ್ಟವರ ಹೋಟೆಲ್‌ಗೆ ಬಿತ್ತು ಬೀಗ

    ಲಕ್ನೋ: ಉತ್ತರ ಪ್ರದೇಶ (Uttar Pradesh) ರಾಜಧಾನಿ ಲಕ್ನೋದಲ್ಲಿ (Lucknow) ಸೇನಾ ಅಧಿಕಾರಿಯೊಬ್ಬರ ಕಾರಿಗೆ (Car) ಹೋಟೆಲ್‌ ಮ್ಯಾನೇಜರ್‌ವೊಬ್ಬ ಬೆಂಕಿ (Fire) ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೋಟೆಲ್‌ಗೆ ಬೀಗ ಹಾಕಲಾಗಿದೆ.

    ಹೋಟೆಲ್‌ನಲ್ಲಿ (Hotel) ಮ್ಯೂಸಿಕ್‌ ಸೌಂಡ್‌ ಜೋರಾಗಿ ಬರುತ್ತಿದೆ. ಕಿರಿಕಿರಿಯಾಗುತ್ತಿದೆ ಎಂದು ವಿರೋಧಿಸಿದ್ದಕ್ಕೆ ಸೇನಾ ಮೇಜರ್‌ನ ಕಾರಿಗೆ ಬೆಂಕಿ ಹಚ್ಚಲಾಗಿತ್ತು. ಪರಿಣಾಮವಾಗಿ ಹೋಟೆಲ್‌ನ್ನು ಸೀಲ್‌ ಮಾಡಲಾಗಿದೆ. ಇದನ್ನೂ ಓದಿ: ಜೋಶಿಮಠದ ಅಪಾಯಕಾರಿ ಕಟ್ಟಡ ನೆಲಸಮ ಕಾರ್ಯಾಚರಣೆ ಪ್ರಾರಂಭ – 600ಕ್ಕೂ ಹೆಚ್ಚು ಕಡೆ ಗುರುತು

    ಮೇಜರ್ ಅಭಿಜಿತ್ ಸಿಂಗ್ ಅವರ ಮನೆಗೆ ಹೋಟೆಲ್‌ ಸಮೀಪದಲ್ಲಿದೆ. ರಾತ್ರಿ ಹೊತ್ತು ಸಂಗೀತ ಜೋರಾಗಿ ಕೇಳುತ್ತಿದೆ, ನಿಲ್ಲಿಸಿ ಎಂದು ಹೋಟೆಲ್ ಸಿಬ್ಬಂದಿಗೆ ಅಭಿಜಿತ್‌ ಸಿಂಗ್‌ ಹೇಳಿದ್ದಾರೆ. ಆದರೆ ಇದಕ್ಕೆ ಹೋಟೆಲ್‌ನವರು ತಲೆಕೆಡಿಸಿಕೊಂಡಿಲ್ಲ. ಇದರಿಂದ ಪರಸ್ಪರರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಸಂಗೀತವನ್ನು ನಿಲ್ಲಿಸಿದ್ದರು.

    ಸಂಗೀತವನ್ನು ನಿಲ್ಲಿಸಿದ ನಂತರ ಸೇನಾಧಿಕಾರಿ ಮನೆಗೆ ವಾಪಸ್‌ ಆಗಿದ್ದಾರೆ. ಸೋಮವಾರ ಬೆಳಗಿನ ಜಾವ ತಮ್ಮ ಕಾರು ಹೊತ್ತಿ ಉರಿಯುತ್ತಿರುವುದನ್ನು ನೋಡಿದ್ದಾರೆ. ಬೆಂಕಿ ನಂದಿಸುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಇದನ್ನೂ ಓದಿ: ಬಾಲಕಿ ಮನೆಗೆ ನುಗ್ಗಿ ಚಾಕು ತೋರಿಸಿ ಹಣೆಗೆ ಬಿಂದಿಯಿಟ್ಟು ವಿದ್ಯಾರ್ಥಿ ಎಸ್ಕೇಪ್!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k