Tag: Lucknow Agra Expressway

  • ಟ್ರಕ್‌ಗೆ ಸ್ಕಾರ್‌ಪಿಯೊ ಡಿಕ್ಕಿ – ಭೀಕರ ಅಪಘಾತಕ್ಕೆ ಐವರು ವೈದ್ಯರ ದುರ್ಮರಣ

    ಟ್ರಕ್‌ಗೆ ಸ್ಕಾರ್‌ಪಿಯೊ ಡಿಕ್ಕಿ – ಭೀಕರ ಅಪಘಾತಕ್ಕೆ ಐವರು ವೈದ್ಯರ ದುರ್ಮರಣ

    ಲಕ್ನೋ: ಸ್ಕಾರ್‌ಪಿಯೊ ಎಸ್‌ಯುವಿ (Scorpio SUV) ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ವೈದ್ಯರು ಸಾವನ್ನಪ್ಪಿರುವ ಘಟನೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ ವೇನಲ್ಲಿ (Agra Lucknow Express Way) ನಡೆದಿದೆ.

    ಮೃತಪಟ್ಟವರು ಉತ್ತರ ಪ್ರದೇಶದ (Uttar Pradesh) ವೈದ್ಯಕೀಯ ವಿಜ್ಞಾನ ವಿವಿಯಲ್ಲಿ ಸ್ನಾತಕೋತರ ತರಬೇತಿ ಪಡೆದ ವೈದ್ಯರು. ದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.ಇದನ್ನೂ ಓದಿ: ಕೇಂದ್ರದಿಂದ ಅನುದಾನ ತಂದು ಸಂಪನ್ಮೂಲ ಹೆಚ್ಚಿಸಿಕೊಳ್ತೇವೆ – ಪರಮೇಶ್ವರ್‌

    ಮೃತರನ್ನು ಆಗ್ರಾ ಮೂಲದ ಡಾ. ಅನಿರುದ್ಧ್ ವರ್ಮಾ (29), ಭದೋಹಿಯ ಡಾ. ಸಂತೋಷ್ ಕುಮಾರ್ ಮೌರ್ಯ (46), ಕನೌಜ್‌ನ ಡಾ. ಅರುಣ್ ಕುಮಾರ್ (34) ಮತ್ತು ಬರೇಲಿಯ ಡಾ. ನಾರ್ದೇವ್ (35) ನಾಲ್ವರು ವೈದ್ಯರಾಗಿದ್ದು ಹಾಗೂ ಇನ್ನೋರ್ವನ್ನು ಲ್ಯಾಬ್ ಟೆಕ್ನಿಷಿಯನ್ ಡಾ. ಜೈವೀರ್ ಸಿಂಗ್ (38) ಎಂದು ಗುರುತಿಸಲಾಗಿದೆ.

    ಪೊಲೀಸರ ಮಾಹಿತಿ ಪ್ರಕಾರ, ಅತಿವೇಗವಾಗಿ ಕಾರು ಚಾಲನೆ ಮಾಡುತ್ತಿದ್ದರಿಂದ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಕ್ಕದಲ್ಲಿದ್ದ ಟಕ್ರ‍್ಗೂ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.

    ಮೃತಪಟ್ಟವರನ್ನು ಹೊರತುಪಡಿಸಿ ಇನ್ನೋರ್ವ ಗಂಭೀರ ಗಾಯಗೊಂಡಿದ್ದು, ಚಿಕಿತ್ಞೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಜಾನ್ಸ್ ಟಿನ್ನಿಸ್‌ವುಡ್ 112ನೇ ವಯಸ್ಸಿನಲ್ಲಿ ನಿಧನ

  • ಬೆಳ್ಳಂಬೆಳಗ್ಗೆ ಭೀಕರ ಅಪಘಾತ – 18 ಮಂದಿ ದುರ್ಮರಣ, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಬೆಳ್ಳಂಬೆಳಗ್ಗೆ ಭೀಕರ ಅಪಘಾತ – 18 ಮಂದಿ ದುರ್ಮರಣ, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಲಕ್ನೋ: ಬೆಳ್ಳಂಬೆಳಗ್ಗೆ ದೆಹಲಿಗೆ ತೆರಳುತ್ತಿದ್ದ ಡಬಲ್‌ ಡೆಕ್ಕರ್‌ ಬಸ್‌ (Double Decker Bus0 ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು 18 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ (Lucknow Agra Expressway) ನಡೆದಿದೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

    ಘಟನೆ ಮಾಹಿತಿ ಪಡೆದು ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು (UP Police) ಗಾಯಾಳುಗಳನ್ನು ರಕ್ಷಿಸಿದ್ದಾರೆ. ಬಳಿಕ ಚಿಕಿತ್ಸೆಗಾಗಿ ಬಂಗಾರ್‌ಮೌನ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ಪ್ರಾಥಮಿಕ ಮೂಲಗಳು ತಿಳಿಸಿವೆ.

    ಈ ಕುರಿತು ಮಾಹಿತಿ ನೀಡಿರುವ ಉನ್ನಾವೋ ಮ್ಯಾಜಿಸ್ಟ್ರೇಟ್‌ ಗೌರಂಗ್‌ ರಾಠಿ, ಬುಧವಾರ (ಇಂದು) ಮುಂಜಾನೆ 5:15ರ ಸುಮಾರಿಗೆ ಬಿಹಾರದ ಮೋತಿಹಾರಿಯಿಂದ ಬರುತ್ತಿದ್ದ ಡಬಲ್‌ ಡೆಕ್ಕರ್‌ ಖಾಸಗಿ ಬಸ್, ಹಾಲಿನ ಟ್ಯಾಂಕರ್‌ಗೆ (Milk Tanker) ಡಿಕ್ಕಿ ಹೊಡೆದಿದೆ. ಇದರಿಂದ 18 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಸುಮಾರು 20ಕ್ಕೂ ಮಂದಿ ಗಾಯಗೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬಸ್‌ನ ಅತಿವೇಗದ ಚಾಲನೆಯೇ ಕಾರಣವಾಗಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಸಮೀಪದ ಗರ್ಹಾ ಗ್ರಾಮದ ನಿವಾಸಿಗಳು ಸಿಒ ಅರವಿಂದ್ ಚೌರಾಸಿಯಾ ನೇತೃತ್ವದ ಪೊಲೀಸ್ ತಂಡಕ್ಕೆ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಿದ್ದಾರೆ. ಘಟನೆ ಕಂಡು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಸಂತಾಪ ಸೂಚಿಸಿದ್ದಾರೆ.