Tag: LTTE

  • ಭಾರತ ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ – ಸುಪ್ರೀಂ

    ಭಾರತ ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ – ಸುಪ್ರೀಂ

    – ಶ್ರೀಲಂಕಾ ಪ್ರಜೆಯ ಮನವಿ ತಿರಸ್ಕರಿಸಿದ ಕೋರ್ಟ್‌

    ನವದೆಹಲಿ: ಭಾರತವು ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ (Dharamshala) ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌ (Supreme Court) ಶ್ರೀಲಂಕಾದ ತಮಿಳು ಪ್ರಜೆಯೊಬ್ಬರ ಬಂಧನದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

    ಯುಎಪಿಎ (UAPA) ಪ್ರಕರಣದಲ್ಲಿ ವಿಧಿಸಲಾದ 7 ವರ್ಷಗಳ ಶಿಕ್ಷೆ ಮುಗಿದ ತಕ್ಷಣ ಅರ್ಜಿದಾರ ಶ್ರೀಲಂಕಾ ಪ್ರಜೆಯು (Sri Lankan) ಭಾರತವನ್ನು ತೊರೆಯಬೇಕು ಎಂದು ನಿರ್ದೇಶಿಸಿದ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಕೆ. ವಿನೋದ್‌ ಚಂದ್ರನ್‌ ಅವರಿದ್ದ ದ್ವೀಸದಸ್ಯ ಪೀಠ ವಿಚಾರಣೆ ನಡೆಸಿತು. ಇದನ್ನೂ ಓದಿ: ಬಿಡದಿ ಅಪ್ರಾಪ್ತ ಬಾಲಕಿ ಹತ್ಯೆ ಕೇಸ್‌ಗೆ ಟ್ವಿಸ್ಟ್ – ರೈಲು ಡಿಕ್ಕಿ ಹೊಡೆದು ಸಾವು; ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಈ ವೇಳೆ ಭಾರತವು ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡಬೇಕೇ? ನಾವು 140 ಕೋಟಿ ಜನಸಂಖ್ಯೆ ಹೊಂದಿದ್ದು ಕಷ್ಟಪಡುತ್ತಿದ್ದೇವೆ. ಇದು ಎಲ್ಲೆಡೆಯಿಂದ ಬಂದ ವಿದೇಶಿ ಪ್ರಜೆಗಳಿಗೆ ಆಶ್ರಯ ನೀಡಬಹುದಾದ ಧರ್ಮ ಛತ್ರವಲ್ಲ ಎಂದು ಕೋರ್ಟ್‌ ಹೇಳಿತು. ಇದನ್ನೂ ಓದಿ: ಕೊನೆ ಕ್ಷಣದವರೆಗೂ ಆಪರೇಷನ್ ಸಿಂಧೂರದ ಟಾರ್ಗೆಟ್ ಟಾಪ್ ಸೀಕ್ರೆಟ್ – ಗೊತ್ತಿದ್ದಿದ್ದು ಅಜಿತ್ ದೋವಲ್‍ಗೆ ಮಾತ್ರ!

    ಏನಿದು ಪ್ರಕರಣ?
    ಈ ಹಿಂದೆ ಶ್ರೀಲಂಕಾದಲ್ಲಿ ಸಕ್ರೀಯವಾಗಿದ್ದ ಭಯೋತ್ಪಾದಕ ಸಂಘಟನೆಯಾದ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‌ಟಿಟಿಇ) ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನದ ಮೇಲೆ ವಿದೇಶಿ ಪ್ರಜೆಯನ್ನು 2015 ರಲ್ಲಿ ಬಂಧಿಸಲಾಗಿತ್ತು. 2018 ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಸೆಕ್ಷನ್-10ರ ಅಡಿಯಲ್ಲಿ ಅಪರಾಧಕ್ಕಾಗಿ ವಿಚಾರಣಾ ನ್ಯಾಯಾಲಯವು ಅರ್ಜಿದಾರನನ್ನ ದೋಷಿ ಎಂದು ಘೋಷಿಸಿತು, 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ವಿಧಿಸಿತ್ತು. ಕೊನೆಗೆ 2022 ರಲ್ಲಿ, ಮದ್ರಾಸ್ ಹೈಕೋರ್ಟ್ ಆತನ ಶಿಕ್ಷೆಯನ್ನು 7 ವರ್ಷಗಳಿಗೆ ಇಳಿಸಿತು. ಶಿಕ್ಷೆ ಅವಧಿ ಮುಗಿದ ಬಳಿಕ ಅವನು ಭಾರತವನ್ನ ತೊರೆಯಬೇಕು, ಅಲ್ಲಿಯವರೆಗೆ ನಿರಾಶ್ರಿತರ ಶಿಬಿರದಲ್ಲೇ ಇರಬೇಕು ಎಂದು ನಿರ್ದೇಶನ ನೀಡಿತ್ತು.

    ಇದಾದ ಬಳಿಕ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಅರ್ಜಿದಾರ, ಅವರ ತಾಯ್ನಾಡಿನಲ್ಲಿ ಜೀವಕ್ಕೆ ಅಪಾಯವಿದೆ ಎಂದು ಅರ್ಜಿದಾರನ ಪರ ವಕೀಲರು ತಿಳಿಸಿದ್ದರು. ಅಲ್ಲದೇ ಅವರು ಕಳೆದ ಮೂರು ವರ್ಷಗಳಿಂದ ಬಂಧನದಲ್ಲಿದ್ದಾರೆ, ಗಡೀಪಾರು ಪ್ರಕ್ರಿಯೆ ಕೂಡ ಆರಂಭವಾಗಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದರು. ಅಲ್ಲದೇ ಬಹು ಕಾಯಿಲೆಗಳಿಂದ ಬಳಲುತ್ತಿರುವ ಅರ್ಜಿದಾರನ ಪತ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಅವರ ಮಗ ಭಾರತದಲ್ಲಿ ನೆಲೆಸಿದ್ದಾರೆ ಎಂದು ಕೋರ್ಟ್‌ ಗಮನಕ್ಕೆ ತಂದರು.

    ಇದಕ್ಕೆ ಮಧ್ಯಪ್ರವೇಶಿಸಿದ ನ್ಯಾ. ದತ್ತ ಅವರು, ಇಲ್ಲಿ ನೆಲೆಸಲು ನಿಮಗೆ ಏನು ಹಕ್ಕಿದೆ? ಎಂದು ಪ್ರಶ್ನಿಸಿದರು.. ಜೊತೆಗೆ ಅರ್ಜಿಯನ್ನು ವಜಾಗೊಳಿಸಿದ ನ್ಯಾ. ದತ್ತ ಅವರಿದ್ದ ಪೀಠ ಬಂಧನವು ಕಾನೂನಿಗೆ ಅನುಸಾರವಾಗಿರುವುದರಿಂದ ಆರ್ಟಿಕಲ್ 21 ಉಲ್ಲಂಘಿಸಲಾಗಿಲ್ಲ. ಆರ್ಟಿಕಲ್-19ರ ಪ್ರಕಾರ ಭಾರತದಲ್ಲಿ ನೆಲೆಸುವ ಮೂಲಭೂತ ಹಕ್ಕು ನಾಗರಿಕರಿಗೆ ಮಾತ್ರ ಇದೆ ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರದಿಂದ 4,195 ಕೋಟಿ ಅನುದಾನ ಬಾಕಿ; ಸಿಎಂ ಬೂಟಾಟಿಕೆ ಪ್ರದರ್ಶನ – ಜೋಶಿ ವಾಗ್ದಾಳಿ

  • ಎಲ್‌ಟಿಟಿಇ ಮುಖ್ಯಸ್ಥ ಜೀವಂತವಾಗಿದ್ದಾನಾ? – ಇದು ತಮಾಷೆ ಎಂದ ಶ್ರೀಲಂಕಾ

    ಎಲ್‌ಟಿಟಿಇ ಮುಖ್ಯಸ್ಥ ಜೀವಂತವಾಗಿದ್ದಾನಾ? – ಇದು ತಮಾಷೆ ಎಂದ ಶ್ರೀಲಂಕಾ

    ಕೊಲಂಬೋ: ಎಲ್‌ಟಿಟಿಇ (ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ) ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾನೆ ಎಂದು ಮಾಜಿ ಕಾಂಗ್ರೆಸ್ ನಾಯಕ ಪಾಜಾ ನೆಡುಮರನ್ ಸೋಮವಾರ ಸ್ಫೋಟಕ ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆ ಒಂದು ತಮಾಷೆ ಎಂದು ಶ್ರೀಲಂಕಾ (Sri Lanka) ಸೇನೆ ತಳ್ಳಿಹಾಕಿದೆ.

    2009ರಲ್ಲಿ ಶ್ರೀಲಂಕಾದ ಸೇನೆಯಿಂದ ಹತ್ಯೆಗೀಡಾಗಿದ್ದ ಎಲ್‌ಟಿಟಿಇ (LTTE) ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ (Velupillai Prabhakaran) ಇನ್ನೂ ಜೀವಂತವಾಗಿದ್ದಾನೆ, ಅವನು ಈಗ ಕಾಣಿಸಿಕೊಳ್ಳಲು ಅನುಕೂಲಕರ ವಾತಾವರಣವಿದೆ ಎಂದು ನೆಡುಮರನ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

    ಎಲ್‌ಟಿಟಿಇ ಮುಖ್ಯಸ್ಥ 2009ರ ಮೇ 19ರಂದು ಕೊಲ್ಲಲ್ಪಟ್ಟಿದ್ದಾನೆ. ಆತನ ಡಿಎನ್‌ಎ ಇದನ್ನು ಸಾಬೀತುಪಡಿಸಿದೆ ಎಂದು ಶ್ರೀಲಂಕಾದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ನಳಿನ್ ಹೆರಾತ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಉಸ್ತುವಾರಿ ಆಗಲು ಒಪ್ಪದ ಸಚಿವರು

    ಪ್ರಭಾಕರನ್ ಯಾರು?
    ಪೂರ್ವ ಮತ್ತು ಉತ್ತರ ಶ್ರೀಲಂಕಾದ ಭಾಗಗಳಲ್ಲಿ ಸ್ವತಂತ್ರ ತಮಿಳು ದೇಶಕ್ಕಾಗಿ 25 ವರ್ಷಗಳ ಕಾಲ ಶ್ರೀಲಂಕಾ ಸರ್ಕಾರದೊಂದಿಗೆ ಎಲ್‌ಟಿಟಿಇ ಹೋರಾಡಿತ್ತು. ಈ ಎಲ್‌ಟಿಟಿಇ ನಿಯಂತ್ರಣಕ್ಕೆ ಆಗಿನ ಪ್ರಧಾನಿ ರಾಜೀವ್ ಗಾಂಧಿ ಸೇನೆಯನ್ನು ಕಳುಹಿಸಿದ್ದರು.

    ಶ್ರೀಲಂಕಾ ಸರ್ಕಾರಕ್ಕೆ ಸಹಾಯ ಮಾಡಿದ್ದಕ್ಕೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಎಲ್‌ಟಿಟಿಇ ಬೆಂಬಲಿತ ಸದಸ್ಯರು ಹತ್ಯೆಗೈದಿದ್ದರು. ಈ ದಾಳಿಯ ಹಿಂದೆ ಪ್ರಭಾಕರನ್ ಕೈವಾಡವಿತ್ತು. 2009ರಲ್ಲಿ ಸರ್ಕಾರ ಮತ್ತು ಎಲ್‌ಟಿಟಿಇ ನಡುವಿನ ಕಾದಾಟದಲ್ಲಿ ಪ್ರಭಾಕರನ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಹೆಚ್‍ಡಿಕೆ ಟಕ್ಕರ್ ಕೊಡಲು ಚನ್ನಪಟ್ಟಣದಿಂದ ಕಣಕ್ಕಿಳಿಯುತ್ತಾರಾ ರಮ್ಯಾ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • LTTE ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತ: ಇಂದಿರಾ ಆಪ್ತ, ತಮಿಳು ನಾಯಕ ಸ್ಫೋಟಕ ಹೇಳಿಕೆ

    LTTE ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತ: ಇಂದಿರಾ ಆಪ್ತ, ತಮಿಳು ನಾಯಕ ಸ್ಫೋಟಕ ಹೇಳಿಕೆ

    ನವದೆಹಲಿ: ಎಲ್‍ಟಿಟಿಇ (ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ) ಮುಖ್ಯಸ್ಥ ಪ್ರಭಾಕರನ್ (Prabhakaran) ಇನ್ನೂ ಜೀವಂತವಾಗಿದ್ದಾನೆ ಎಂದು ಮಾಜಿ ಕಾಂಗ್ರೆಸ್ (Congress) ನಾಯಕ ಪಾಜಾ ನೆಡುಮರನ್ (Pazha Nedumaran) ಸೋಮವಾರ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

    ಪ್ರಭಾಕರನ್ ಆರೋಗ್ಯವಾಗಿ ಕುಟುಂಬಸ್ಥರೊಂದಿಗೆ ವಾಸವಾಗಿದ್ದಾರೆ. ಅವರು ತಮಿಳು ಜನರ ಏಳಿಗೆಗಾಗಿ ಮತ್ತೆ ಜನರೆದುರು ಬರಲಿದ್ದಾನೆ. ಅವರನ್ನು ಜನತೆ ಬೆಂಬಲಿಸಬೇಕು ಎಂದಿದ್ದಾರೆ. ನನ್ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಅವರು ಈ ಮಾಹಿತಿಯನ್ನು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ಪ್ರಭಾಕರನ್ ಕುಟುಂಬದ ಅನುಮತಿಯೊಂದಿಗೆ ಈ ಸುದ್ದಿ ಹಂಚಿಕೊಳ್ಳುತ್ತಿದ್ದೇನೆ. ಆದರೆ ಈಗ ನೆಲೆಸಿರುವ ಸ್ಥಳವನ್ನು ತಿಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.

    ಯಾರು ಈ ಪ್ರಭಾಕರನ್?: ಪೂರ್ವ ಮತ್ತು ಉತ್ತರ ಶ್ರೀಲಂಕಾದ ಭಾಗಗಳಲ್ಲಿ ಸ್ವತಂತ್ರ್ಯ ತಮಿಳು ದೇಶಕ್ಕಾಗಿ 25 ವರ್ಷಗಳ ಕಾಲ ಶ್ರೀಲಂಕಾ ಸರ್ಕಾರದೊಂದಿಗೆ ಎಲ್‍ಟಿಟಿಇ ಹೋರಾಡಿತ್ತು. ಈ ಎಲ್‍ಟಿಟಿಇ (LTTE) ನಿಯಂತ್ರಣಕ್ಕೆ ಪ್ರಧಾನಿ ರಾಜೀವ್ ಗಾಂಧಿ ಸೇನೆಯನ್ನು ಕಳುಹಿಸಿದ್ದರು. ಇದನ್ನೂ ಓದಿ: ಬಡವರು ಬಡವರಾಗೇ ಇರ‍್ಲಿ, ಶ್ರೀಮಂತರಾದ್ರೆ ಐಟಿ, ಇಡಿ, ಸಿಬಿಐ ಸಂಕಷ್ಟ : ಕೆಜಿಎಫ್ ಬಾಬು

    ಶ್ರೀಲಂಕಾ ಸರ್ಕಾರಕ್ಕೆ ಸಹಾಯ ಮಾಡಿದ್ದಕ್ಕೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಎಲ್‍ಟಿಟಿಇ ಬೆಂಬಲಿತ ಸದಸ್ಯರು ಹತ್ಯೆಗೈದಿದ್ದರು. ಈ ದಾಳಿಯ ಹಿಂದೆ ಪ್ರಭಾಕರನ್ ಕೈವಾಡವಿತ್ತು. 2009ರಲ್ಲಿ ಸರ್ಕಾರ ಮತ್ತು ಎಲ್‍ಟಿಟಿಇ ನಡುವಿನ ಕಾದಾಟದಲ್ಲಿ ಪ್ರಭಾಕರನ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ವಿದ್ಯುತ್ ಪೂರೈಕೆ: ಸುನಿಲ್ ಕುಮಾರ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಮಾಯಕರ ಕೊಲ್ಲುವುದನ್ನು ನಾನೆಂದೂ ಬೆಂಬಲಿಸಿಲ್ಲ: ಮುತ್ತಯ್ಯ ಮುರಳೀಧರನ್

    ಅಮಾಯಕರ ಕೊಲ್ಲುವುದನ್ನು ನಾನೆಂದೂ ಬೆಂಬಲಿಸಿಲ್ಲ: ಮುತ್ತಯ್ಯ ಮುರಳೀಧರನ್

    – ಲೆಜೆಂಡ್ ಸ್ಪಿನ್ನರ್‌ಗೆ ಮುಳುವಾಯ್ತು 2009ರ ಹೇಳಿಕೆ
    – 2009ರ ಮೇಯಲ್ಲಿ ಎಲ್‍ಟಿಟಿಇ ಧ್ವಂಸ

    ಚೆನ್ನೈ: ಅಮಾಯಕರ ಕೊಲ್ಲುವುದನ್ನು ನಾನು ಎಂದೂ ಬೆಂಬಲಿಸಿಲ್ಲ ಎಂದು ಶ್ರೀಲಂಕಾ ತಂಡದ ಮಾಜಿ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರು ಹೇಳಿದ್ದಾರೆ.

    ಸದ್ಯ ತಮಿಳುನಾಡಿನಲ್ಲಿ ಒಂದು ವಿವಾದ ಸಖತ್ ಸದ್ದು ಮಾಡುತ್ತಿದೆ. ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ ‘800’ನಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸುತ್ತಿರುವುದಕ್ಕೆ ತಮಿಳಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮುತ್ತಯ್ಯ 2009ರಲ್ಲಿ ತಮಿಳಿಗರ ವಿರುದ್ಧ ಹೇಳಿಕೆ ನೀಡಿದ್ದು, ಈ ಕಾರಣದಿಂದ ಅವರ ಸಿನಿಮಾದಲ್ಲಿ ವಿಜಯ್ ನಟಿಸಬಾರದು ಎಂದು ಹೇಳಲಾಗುತ್ತಿದೆ.

    2009ರ ಮೇನಲ್ಲಿ ಶ್ರೀಲಂಕಾದ ಸೇನೆ ಈಶಾನ್ಯ ಶ್ರೀಲಂಕಾದಲ್ಲಿ ವಾಸವಿದ್ದ ಅನೇಕ ಮಂದಿ ತಮಿಳಿಗರನ್ನು ಹೊಡೆದು ಹಾಕಿತ್ತು. ಅಂದು ಮುತ್ತಯ್ಯ ಮುರಳೀಧರನ್, ಇಂದು ನನಗೆ ಅತ್ಯಂತ ಸಂತೋಷದ ದಿನ ಎಂದು ಹೇಳಿದ್ದರು. ಈಗ ಈ ಕಾರಣಕ್ಕೆ ತಮಿಳುನಾಡಿನ ಕೆಲ ಚಿತ್ರ ಪ್ರೇಮಿಗಳು ಮತ್ತು ರಾಜಕಾರಣಿಗಳು ಸಾವಿರಾರು ತಮಿಳಿಗರು ಸತ್ತ ದಿನವನ್ನು ಸಂತೋಷದ ದಿನ ಎಂದಿದ್ದ ಮುತ್ತಯ್ಯ ಮುರಳೀಧರನ್ ಬಯೋಪಿಕ್‍ನಲ್ಲಿ ತಮಿಳಿನ ನಟ ಅಭಿನಯಿಸುವುದು ಬೇಡ ಎಂದು ಒತ್ತಾಯಿಸುತ್ತಿದ್ದಾರೆ.

    ಈಗ ಇದೇ ವಿಚಾರವಾಗಿ ಹೇಳಿಕೆ ನೀಡಿರುವ ಮುತ್ತಯ್ಯ ಮುರಳೀಧರನ್, ಅಂದು ನಾನು ಹೇಳಿದ ಹೇಳಿಕೆಯನ್ನು ತಿರುಚಲಾಗಿದೆ. ಅಂದು ನಾನು ಅಮಾಯಕರು ಸತ್ತಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿರಲಿಲ್ಲ. ಸುಮಾರು ವರ್ಷದಿಂದ ನಡೆದುಕೊಂಡು ಬರುತ್ತಿದ್ದ ಯುದ್ಧ, ಘರ್ಷಣೆ ಇಲ್ಲಿಗೆ ಕೊನೆಯಾಗಿದೆ. ಅದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದೆ. ನಾನು ಎಂದು ಅಮಾಯಕರ ಕೊಲ್ಲುವುದನ್ನು ಬೆಂಬಲಿಸಿಲ್ಲ ಎಂದು ಮುತ್ತಯ್ಯ ತಿಳಿಸಿದ್ದಾರೆ.

    ನಾನು ನನ್ನ ಬಯೋಪಿಕ್ ಮಾಡಲು ಏಕೆ ಒಪ್ಪಿಗೆ ಸೂಚಿಸಿದ್ದೇನೆ ಎಂದರೆ, ನನ್ನ ಕಥೆ ಇನ್ನೊಬ್ಬರಿಗೆ ಸ್ಫೂತಿಯಾಗಲಿ. ನನ್ನ ಈ ಮಟ್ಟಕ್ಕೆ ತರಲು ಕಷ್ಟಪಟ್ಟ ನನ್ನ ತಾಯಿ ನನ್ನ ಕುಟುಂಬ ಮತ್ತು ಸ್ನೇಹಿತರ ಕಷ್ಟ ಎಲ್ಲರಿಗೂ ಅರ್ಥವಾಗಲಿ ಎಂದು ಬಯೋಪಿಕ್ ಮಾಡಲು ಒಪ್ಪಿದ್ದೇನೆ. ನಾನು 30 ವರ್ಷ ಯದ್ಧದ ಮಧ್ಯದಲ್ಲಿ ಬೆಳೆದಿದ್ದೇನೆ. ನಾನು ಏಳು ವರ್ಷ ಇರುವಾಗಲೇ ನನ್ನ ತಂದೆ ತೀರಿಕೊಂಡರು. ಬಹಳ ದಿನ ನಾವು ಬೀದಿಯಲ್ಲಿ ಬದುಕಿದ್ದೇವೆ ಎಂದು ಹೇಳಿದ್ದಾರೆ.

    2009ರ ಮೇ – ಎಲ್‍ಟಿಟಿಇ ಧ್ವಂಸ
    ಈಶಾನ್ಯ ಶ್ರೀಲಂಕಾದಲ್ಲಿ ಹಿಂದೂ ತಮಿಳರಿಗೆ ಸ್ವತಂತ್ರ ಭೂಮಿ ಬೇಕು ಎಂದು ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಲಂ (ಎಲ್‍ಟಿಟಿಇ) ಎಂಬ ಪ್ರತ್ಯೇಕತಾವಾದಿ ಗುಂಪೊಂದು ಹುಟ್ಟಿಕೊಂಡಿತ್ತು. 1970ರಲ್ಲಿ ವೇಲುಪಿಳ್ಳೈ ಪ್ರಭಾಕರನ್ ಇದನ್ನು ಸ್ಥಾಪಿಸಿ ಪ್ರತ್ಯೇಕ ಭೂಮಿಗಾಗಿ ಹೋರಾಟ ಮಾಡುತ್ತಿದ್ದರು. ಆದರೆ 2009ರ ಮೇನಲ್ಲಿ ಶ್ರೀಲಂಕಾದ ಸಶಸ್ತ್ರ ಪಡೆಗಳು ಅವರ ಮೇಲೆ ದಾಳಿ ಮಾಡಿದ್ದರು. ಅಂದು ಲಕ್ಷಾಂತರ ತಮಿಳಿಗರು ಅಸುನೀಗಿದ್ದರು.