Tag: L&T

  • L&T ಅಧ್ಯಕ್ಷರ ಹೇಳಿಕೆಗೆ ದೀಪಿಕಾ ಪಡುಕೋಣೆ ಅಸಮಾಧಾನ

    L&T ಅಧ್ಯಕ್ಷರ ಹೇಳಿಕೆಗೆ ದೀಪಿಕಾ ಪಡುಕೋಣೆ ಅಸಮಾಧಾನ

    ವಾರದಲ್ಲಿ 90 ಗಂಟೆ ಕೆಲಸ ಮಾಡಿ, ಭಾನುವಾರದ ರಜೆಯನ್ನು ತ್ಯಜಿಸಿ ಎಂದ L&T ಕಂಪನಿ ಮುಖ್ಯಸ್ಥ ಎಸ್.ಎನ್ ಸುಬ್ರಹ್ಮಣ್ಯನ್ (SN Subrahmanyan) ಹೇಳಿಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್.ಎನ್ ಸುಬ್ರಹ್ಮಣ್ಯನ್ ನೀಡಿರುವ ಹೇಳಿಕೆಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಅಡ್ಡದಾರಿಯಲ್ಲಿ ನಡೆಯುವ ಬದಲು ಮೌಲ್ಯಗಳಿಗೆ ಬದ್ಧನಾಗಿರುತ್ತೇನೆ – ಡಿವೋರ್ಸ್‌ ವದಂತಿ ಬಗ್ಗೆ ಚಾಹಲ್‌ ಫಸ್ಟ್‌ ರಿಯಾಕ್ಷನ್‌

    ಸಭೆವೊಂದರಲ್ಲಿ ಎಸ್.ಎನ್ ಸುಬ್ರಹ್ಮಣ್ಯನ್ ಮಾತನಾಡಿ, ನೌಕರರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದಿದ್ದಾರೆ. ವಾರ ಪೂರ್ತಿ ಕೆಲಸ ಮಾಡುವ ಮೂಲಕ ತಾವು ಉನ್ನತ ಹುದ್ದೆಯನ್ನು ಅಲಂಕರಿಸಲು ಶ್ರಮಿಸಬೇಕು. ಜೊತೆಗೆ ಭಾನುವಾರವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕೆಲಸ ಮಾಡಿದರೆ ಉತ್ತಮ ಎಂದಿದ್ದಾರೆ. ಅವರ ಈ ಮಾತು ಹೊಸ ವಿವಾದವನ್ನು ಹುಟ್ಟುಹಾಕಿದೆ. ಇದಕ್ಕೆ ದೀಪಿಕಾ ಪಡುಕೋಣೆ (Deepika Padukone) ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ದೀಪಿಕಾ, ಇಂತಹ ಹಿರಿಯ ಸ್ಥಾನದಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡುವುದು ಶಾಕಿಂಗ್‌ ವಿಚಾರ. ಮಾನಸಿಕ ಆರೋಗ್ಯವು ಬಹಳ ಮುಖ್ಯ ಎಂದಿದ್ದಾರೆ. ಮತ್ತೆ 2ನೇ ಇನ್ಸ್ಟಾಗ್ರಾಂ  ಸ್ಟೋರಿಯಲ್ಲಿ L&T ಮುಖ್ಯಸ್ಥರ ಹೇಳಿಕೆಯನ್ನು ಹಂಚಿಕೊಂಡು ಅವರು ‘ಇನ್ನಷ್ಟು ಕೆಟ್ಟದಾಗಿ ಮಾಡಿದ್ದಾರೆ’ ಎಂದು ನಟಿ ಅಸಮಾಧಾನ ಹೊರಹಾಕಿದ್ದಾರೆ. ದೀಪಿಕಾ ರಿಯಾಕ್ಷನ್ ನಂತರ ಮತ್ತಷ್ಟು ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

  • ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿಯನ್ನು ನಾವು ನಿರ್ಮಿಸಿಲ್ಲ, 2009 ರಲ್ಲಿ ಬೇರೊಂದು ಕಂಪನಿ ನಿರ್ಮಿಸಿದೆ: L&T ಸ್ಪಷ್ಟನೆ

    ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿಯನ್ನು ನಾವು ನಿರ್ಮಿಸಿಲ್ಲ, 2009 ರಲ್ಲಿ ಬೇರೊಂದು ಕಂಪನಿ ನಿರ್ಮಿಸಿದೆ: L&T ಸ್ಪಷ್ಟನೆ

    ನವದೆಹಲಿ: ಭಾರೀ ಮಳೆಗೆ ದೆಹಲಿ (Delhi) ಇಂದಿರಾಗಾಂಧಿ ವಿಮಾನ ನಿಲ್ದಾಣ (Indira Gandhi International Airport) ಮೇಲ್ಛಾವಣಿ ಕುಸಿದು ಕ್ಯಾಬ್ ಡ್ರೈವರ್‌ ಓರ್ವ ಮೃತಪಟ್ಟಿದ್ದು, 7 ಜನರಿಗೆ ಗಾಯಗಳಾಗಿವೆ. ಈ ಘಟನೆ ಸಂಬಂಧ ಬಿಜೆಪಿ ಕಾಂಗ್ರೆಸ್‌ (BJP-Congress) ಮಧ್ಯೆ ಕೆಸರೆರಚಾಟ ಆರಂಭವಾದ ಬೆನ್ನಲ್ಲೇ ಮೂಲಸೌಕರ್ಯ ಕಂಪನಿ ಎಲ್‌ ಆಂಡ್‌ ಟಿ (L&T) ಸ್ಪಷ್ಟನೆ ನೀಡಿದೆ.

    ಸ್ಪಷ್ಟನೆಯಲ್ಲಿ ಏನಿದೆ?
    ಕುಸಿದ ರಚನೆಯನ್ನು L&T ನಿರ್ಮಿಸಿಲ್ಲ ಅಥವಾ ಅದರ ನಿರ್ವಹಣೆಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂದು ನಾವು ಈ ಮೂಲಕ ಸ್ಪಷ್ಟಪಡಿಸಲು ಬಯಸುತ್ತೇವೆ. ಕುಸಿದು ಬಿದ್ದ ಭಾಗವನ್ನು ಮತ್ತೊಂದು ಕಂಪನಿಯು 2009 ರಲ್ಲಿ ನಿರ್ಮಿಸಿದೆ.  ಇದನ್ನೂ ಓದಿ: ಮೊದಲ ಮಾನ್ಸೂನ್ ಮಳೆಗೆ ರಾಷ್ಟ್ರ ರಾಜಧಾನಿ ತತ್ತರ – ರಸ್ತೆಗಳಲ್ಲಿ ಉಕ್ಕಿ ಹರಿದ ನೀರು

    ದೆಹಲಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (DIAL) ಕೋರಿಕೆಯ ಮೇರೆಗೆ, L&T 2019 ರಲ್ಲಿ ಟರ್ಮಿನಲ್‌ 1ರ ವಿಸ್ತರಣೆ ಯೋಜನೆಯನ್ನು ಕೈಗೆತ್ತಿಕೊಂಡಿತು. ಟರ್ಮಿನಲ್‌ ವಿಸ್ತೃತ ಭಾಗದಿಂದ ಸರಿಸುಮಾರು 110 ಮೀಟರ್‌ ದೂರದಲ್ಲಿ ಕುಸಿತವು ಸಂಭವಿಸಿದೆ. ಹೊಸದಾಗಿ ನಿರ್ಮಾಣದ ವಿಸ್ತೃತ ಭಾಗದ ಮೇಲೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಅಮೇರಿಕ ಅಧ್ಯಕ್ಷೀಯ ಚುನಾವಣೆ: ಬೈಡನ್, ಟ್ರಂಪ್ ಮುಖಾಮುಖಿ ಚರ್ಚೆ

    ಘಟನಾ ಸ್ಥಳಕ್ಕೆ ನಾಗರಿಕ ವಿಮಾನ ಸಚಿವ ರಾಮ್‌ಮೋಹನ್ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈಜ್ಞಾನಿಕ ಕಾರಣ ಹುಡುಕಲು ಸೂಚಿಸಿದ್ದೇನೆ. ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆಗೆ ನಿರ್ದೇಶಿಸಿದ್ದೇನೆ. ಮೃತನ ಕುಟುಂಬಕ್ಕೆ 20 ಲಕ್ಷ ರೂ. ಗಾಯಾಳುಗಳಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು.

     

  • ಸ್ಟೀಲ್ ಬ್ರಿಡ್ಜ್ ಬದಲು ಕೆಂಪೇಗೌಡ ಪ್ರಾಜೆಕ್ಟ್ – ಎಲ್&ಟಿ ಕಂಪನಿಗೆ ಜಾರ್ಜ್ ಋಣಸಂದಾಯ

    ಸ್ಟೀಲ್ ಬ್ರಿಡ್ಜ್ ಬದಲು ಕೆಂಪೇಗೌಡ ಪ್ರಾಜೆಕ್ಟ್ – ಎಲ್&ಟಿ ಕಂಪನಿಗೆ ಜಾರ್ಜ್ ಋಣಸಂದಾಯ

    ಬೆಂಗಳೂರು: ಕೊನೆಗೂ ಸಚಿವ ಕೆ.ಜೆ.ಜಾರ್ಜ್ ಒತ್ತಡಕ್ಕೆ ಮಣಿದು ಬಿಡಿಎ ಕೆಂಪೇಗೌಡ ಲೇಔಟ್‍ನ ಸಮಗ್ರ ಅಭಿವೃದ್ದಿಯ ಪ್ರಾಜೆಕ್ಟ್ ಟೆಂಡರನ್ನು ಎಲ್ ಅಂಡ್ ಟಿ ಕಂಪನಿಗೆ ನೀಡಿದೆ.

    ಈ ಹಿಂದೆ 2 ಸಾವಿರ ಕೋಟಿ ರೂ. ಮೊತ್ತದ ಸ್ಟೀಲ್ ಬ್ರಿಡ್ಜ್ ಟೆಂಟರ್ನ್ ಎಲ್&ಟಿ ಕಂಪನಿ ಪಡೆದಿತ್ತು. ಅದಕ್ಕಾಗಿ 65 ಕೋಟಿ ರೂಪಾಯಿ ಕಪ್ಪವನ್ನೂ ನೀಡಿದ್ದ ಬಗ್ಗೆ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಉಲ್ಲೇಖವಾಗಿತ್ತು. ನಂತರ ತೀವ್ರ ವಿರೋಧದ ಕಾರಣ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿತ್ತು.

    ಸ್ಟೀಲ್ ಬ್ರಿಡ್ಜ್ ಬದಲಾಗಿ ಕೆಂಪೇಗೌಡ ಲೇಔಟ್‍ನ ಸಮಗ್ರ ಅಭಿವೃದ್ದಿಗೆ 1 ಸಾವಿರದ 255 ಕೋಟಿಯ ಟೆಂಡರ್ ಎಲ್&ಟಿ ಕಂಪನಿಗೆ ನೀಡುತ್ತೆ ಅನ್ನೋ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದೀಗ ಆ ವರದಿಯಂತೆಯೇ ಎಲ್&ಟಿ ಕಂಪನಿಗೆ 1 ಸಾವಿರದ 255 ಕೋಟಿ ರೂಪಾಯಿ ಮೊತ್ತದ ಯೋಜನೆ ಟೆಂಡರ್ ನೀಡಲಾಗಿದೆ.

    400 ಕೋಟಿಗೂ ಅಧಿಕ ಸಾಲಕ್ಕೆ ಬಡ್ಡಿ ಕಟ್ಟುತ್ತಿರೋ ಬಿಡಿಎ ಇಷ್ಟೊಂದು ಬೃಹತ್ ಯೋಜನೆಗೆ ಎಲ್ಲಿಂದ ಹಣ ತರುತ್ತೋ ಅನ್ನೋದು ಜನರ ಪ್ರಶ್ನೆ.