Tag: LSG

  • ಶತಕ ಸಿಡಿಸಿ ರಾರಾಜಿಸಿದ ರಾಹುಲ್ – ಮುಂಬೈಗೆ ಸತತ 6ನೇ ಸೋಲು

    ಶತಕ ಸಿಡಿಸಿ ರಾರಾಜಿಸಿದ ರಾಹುಲ್ – ಮುಂಬೈಗೆ ಸತತ 6ನೇ ಸೋಲು

    ಮುಂಬೈ: ಮುಂಬೈ ವಿರುದ್ಧ ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡಿದ ಫಲವಾಗಿ ಲಕ್ನೋ 18 ರನ್‌ಗಳಿಂದ ಗೆದ್ದರೆ, 15ನೇ ಆವೃತ್ತಿ ಐಪಿಎಲ್‍ನಲ್ಲಿ ಹೀನಾಯ ಪ್ರದರ್ಶನ ನೀಡಿದ ಮುಂಬೈ ತಂಡ ಸತತ 6ನೇ ಸೋಲುಕಂಡು ಅಂಕಪಟ್ಟಿಯಲ್ಲಿ ಪಾತಾಳಕ್ಕಿಳಿದಿದೆ.

    ಮುಂಬೈ ಗೆಲುವಿಗೆ ಕೀರನ್ ಪೋಲಾರ್ಡ್ ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದರೂ ಜಯ ದಕ್ಕಿಸಿಕೊಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 181 ರನ್ ಸಿಡಿಸಿ 18  ರನ್‌ಗಳಿಂದ ಸೋಲೊಪ್ಪಿಕೊಂಡಿತು.

    200 ರನ್‍ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡ ಆರಂಭಿಕ ಆಘಾತ ಅನುಭವಿಸಿತು. ನಾಯಕ ರೋಹಿತ್ ಶರ್ಮಾ 6 ರನ್ (7 ಎಸೆತ, 1 ಬೌಂಡರಿ) ಬಾರಿಸಿ ನಿರಾಸೆ ಮೂಡಿಸಿದರು. ಆ ಬಳಿಕ ಇಶಾನ್ ಕಿಶನ್ 13 ರನ್ (17 ಎಸೆತ, 2 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಆ ಬಳಿಕ ಡೆವಾಲ್ಡ್ ಬ್ರೆವಿಸ್ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾಗಿ 31 ರನ್ (13 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಆ ಬಳಿಕ ಬಂದ ಸೂರ್ಯ ಕುಮಾರ್ ಯಾದವ್ 37 ರನ್ (27 ಎಸೆತ, 3 ಬೌಂಡರಿ) ಮತ್ತು ತಿಲಕ್ ವರ್ಮಾ 26 ರನ್ (2 ಬೌಂಡರಿ) ಸಿಡಿಸಿ ತಂಡಕ್ಕೆ ಅಲ್ಪಮಟ್ಟಿನ ಕೊಡುಗೆ ನೀಡಿದರು.

    ಈ ಮೊದಲು ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಎದುರಾಳಿ ಲಕ್ನೋ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಲಕ್ನೋ ತಂಡ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಂತೆ ನಾಯಕ ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್‍ನಲ್ಲಿ ಆರ್ಭಟಿಸಿದರು. ಆರಂಭದಿಂದಲೇ ಮುಂಬೈ ಬೌಲರ್‌ಗಳಿಗೆ ಬೆವರಿಳಿಸಿದ ಈ ಜೋಡಿ ಮೊದಲ ವಿಕೆಟ್‍ಗೆ 52 ರನ್ (33 ಎಸೆತ) ಸಿಡಿಸಿ ಉತ್ತಮ ಆರಂಭ ನೀಡಿತು. ಈ ವೇಳೆ ದಾಳಿಗಿಳಿದ ಫ್ಯಾಬಿಯನ್ ಅಲೆನ್, ಡಿ ಕಾಕ್ 24 ರನ್ (13 ಎಸೆತ, 4 ಬೌಂಡರಿ, 1 ಸಿಕ್ಸ್) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

    ಮುಂಬೈಗೆ ಕಾಡಿದ ಕನ್ನಡಿಗ ಜೋಡಿ
    ಡಿ ಕಾಕ್ ಔಟ್ ಆದ ಬಳಿಕ ಜೊತೆಯಾದ ಮನೀಶ್ ಪಾಂಡೆ ಮತ್ತು ಕೆ.ಎಲ್ ರಾಹುಲ್ ತಮ್ಮ ಆಟಕ್ಕೆ ವೇಗ ನೀಡಿದರು. ಇಬ್ಬರೂ ಮುಂಬೈ ಬೌಲರ್‌ಗಳ ಬೆಂಕಿ ಚೆಂಡಿಗೆ ಬೌಂಡರಿ, ಸಿಕ್ಸರ್‌ಗಳನ್ನು ಸರಾಗವಾಗಿ ಸಿಡಿಸಿದ ಈ ಜೋಡಿ 2ನೇ ವಿಕೆಟ್‍ಗೆ 72 ರನ್ (47 ಎಸೆತ) ಜೊತೆಯಾಟವಾಡಿತು. ಈ ವೇಳೆ ಮನೀಶ್ ಪಾಂಡೆ 38 ರನ್ (29 ಎಸೆತ, 6 ಬೌಂಡರಿ) ಸಿಡಿಸಿ ವಿಕೆಟ್ ಕೈ ಚೆಲ್ಲಿಕೊಂಡರು.

    ರಾಹುಲ್ ಶತಕದ ವೈಭವ
    ಇತ್ತ ರಾಹುಲ್ ಮಾತ್ರ ಮುಂಬೈ ಬೌಲರ್‌ಗಳನ್ನು ಕೊನೆಯ ಎಸೆತದವರೆಗೆ ಕಾಡಿದರು. ಜೊತೆಗೆ ಐಪಿಎಲ್ ಇತಿಹಾಸದಲ್ಲಿ ತಮ್ಮ ಮೂರನೇ ಶತಕ ಸಿಡಿಸಿ ಮಿಂಚಿದರು. ಅಂತಿಮವಾಗಿ ರಾಹುಲ್ ಅಜೇಯ 103 ರನ್ (60 ಎಸೆತ, 9 ಬೌಂಡರಿ, 5 ಸಿಕ್ಸ್) ಚಚ್ಚಿ ತಂಡದ ಮೊತ್ತವನ್ನು 190ರ ಗಡಿದಾಟಿಸಿದರು. ಲಕ್ನೋ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಸಿಡಿಸಿತು.

    ರನ್ ಏರಿದ್ದು ಹೇಗೆ
    50 ರನ್ 32 ಎಸೆತ
    100 ರನ್ 69 ಎಸೆತ
    150 ರನ್ 90 ಎಸೆತ
    199 ರನ್ 120 ಎಸೆತ

  • ರಾಹುಲ್ ಗೋಲ್ಡನ್ ಡಕ್ – ನಿರಾಸೆಗೊಂಡ ಆಥಿಯಾ ಶೆಟ್ಟಿ

    ರಾಹುಲ್ ಗೋಲ್ಡನ್ ಡಕ್ – ನಿರಾಸೆಗೊಂಡ ಆಥಿಯಾ ಶೆಟ್ಟಿ

    ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಲಕ್ನೋ ನಾಯಕ ಕೆಎಲ್ ರಾಹುಲ್ ಗೋಲ್ಡನ್ ಡಕ್ ಆಗುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ನಿರಾಸೆಗೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯ ವೀಕ್ಷಣೆಗಾಗಿ ರಾಹುಲ್ ಗೆಳತಿ ಆಥಿಯಾ ಶೆಟ್ಟಿ, ನಟ ಸುನೀಲ್ ಶೆಟ್ಟಿ ಆಗಮಿಸಿದ್ದರು. ಆದರೆ ಈ ಪಂದ್ಯದಲ್ಲಿ ರಾಹುಲ್ ಬ್ಯಾಟಿಂಗ್ ಆಗಮಿಸುತ್ತಿದ್ದಂತೆ ಟ್ರೆಂಟ್ ಬೌಲ್ಟ್ ಎಸೆದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಔಟ್ ಆದರು. ಈ ವೇಳೆ ಕ್ಯಾಮೆರಾಮ್ಯಾನ್ ಗ್ಯಾಲರಿಯಲ್ಲಿದ್ದ ಆಥಿಯಾ ಶೆಟ್ಟಿ ಕಡೆ ಫೋಕಸ್ ಮಾಡುತ್ತಿದ್ದಂತೆ ಆಥಿಯಾ, ರಾಹುಲ್ ಔಟ್ ಆಗಿರುವುದನ್ನು ಕಂಡು ನಿರಾಸೆಯಾದರು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗುತ್ತಿದೆ. ಇದನ್ನೂ ಓದಿ: ಚಹಲ್, ಹೆಟ್ಮೆಯರ್ ಆಟಕ್ಕೆ ಲಕ್ನೋ ಲಾಕ್ – ರಾಜಸ್ಥಾನಕ್ಕೆ ರೋಚಕ ಜಯ

    KL RAhul

    166 ರನ್‍ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡ ನಾಯಕ ಕೆ.ಎಲ್ ರಾಹುಲ್ ಮತ್ತು ಕೆ. ಗೌತಮ್‍ರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಡಿ ಕಾಕ್ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಡಿ ಕಾಕ್ ಆಟ 39 ರನ್ (32 ಎಸೆತ, 2 ಬೌಂಡರಿ, 1 ಸಿಕ್ಸ್)ಗೆ ಅಂತ್ಯಗೊಂಡಿತು. ಲಕ್ನೋ ಪರ ದೀಪಕ್ ಹೂಡಾ 25 ರನ್ ಮತ್ತು ಕೃನಾಲ್ ಪಾಂಡ್ಯ 22 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಡೆಲ್ಲಿ ಗೆಲುವಿನ ಸಂಭ್ರಮಾಚರಣೆ- ಹೌ ಈಸ್ ದಿ ಜೋಶ್: ವಾರ್ನರ್

    ಕೊನೆಯಲ್ಲಿ ದುಷ್ಮಂತ ಚಮೀರ 13 ರನ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅಜೇಯ 38 ರನ್ (17 ಎಸೆತ, 2 ಬೌಂಡರಿ, 4 ಸಿಕ್ಸ್) ಸಿಡಿಸಿ ಲಕ್ನೋ ಗೆಲುವಿಗೆ ಶ್ರಮಿಸಿದರು ಫಲ ನೀಡಲಿಲ್ಲ. ಅಂತಿಮವಾಗಿ ಲಕ್ನೋ ತಂಡ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಲಕ್ನೋ ವಿರುದ್ಧ ರಾಜಸ್ಥಾನ ರಾಯಲ್ಸ್ 3 ರನ್‍ಗಳ ರೋಚಕ ಗೆಲುವು ಕಂಡಿತು.

  • ಚಹಲ್, ಹೆಟ್ಮೆಯರ್ ಆಟಕ್ಕೆ ಲಕ್ನೋ ಲಾಕ್ – ರಾಜಸ್ಥಾನಕ್ಕೆ ರೋಚಕ ಜಯ

    ಚಹಲ್, ಹೆಟ್ಮೆಯರ್ ಆಟಕ್ಕೆ ಲಕ್ನೋ ಲಾಕ್ – ರಾಜಸ್ಥಾನಕ್ಕೆ ರೋಚಕ ಜಯ

    ಮುಂಬೈ: ಬೌಲಿಂಗ್‍ನಲ್ಲಿ ಚಹಲ್ ಮತ್ತು ಬ್ಯಾಟಿಂಗ್‍ನಲ್ಲಿ ಶಿಮ್ರಾನ್ ಹೆಟ್ಮೆಯರ್ ಭರ್ಜರಿ ಆಟದ ನೆರವಿನಿಂದ ಲಕ್ನೋ ವಿರುದ್ಧ ರಾಜಸ್ಥಾನ ತಂಡ 3 ರನ್‍ಗಳ ರೋಚಕ ಜಯ ದಾಖಲಿಸಿದೆ.

    ರಾಜಸ್ಥಾನ ಗೆದ್ದಿದ್ದು ಹೇಗೆ?
    ಕೊನೆಯ ಓವರ್‌ನಲ್ಲಿ ಲಕ್ನೋ ಗೆಲುವಿಗೆ 15 ರನ್ ಬೇಕಾಗಿತ್ತು. ಕುಲದೀಪ್ ಸೇನ್ ಎಸೆದ ಕೊನೆಯ ಓವರ್‌ನಲ್ಲಿ ಕೇವಲ 11 ರನ್ ಬಿಟ್ಟುಕೊಟ್ಟು ಸೂಪರ್ ಸ್ಪೆಲ್ ಮಾಡಿದರು. ಈ ಮೊದಲು ರಾಜಸ್ಥಾನ ಪರ ಚಹಲ್ 4 ವಿಕೆಟ್ ಕಿತ್ತು ಮಿಂಚಿದರೆ, ಬ್ಯಾಟಿಂಗ್‍ನಲ್ಲಿ ಹೆಟ್ಮೆಯರ್ ಅರ್ಧಶತಕ ಸಿಡಿಸಿ ಮಿಂಚಿದ ನೆರವಿನಿಂದ ರಾಜಸ್ಥಾನ ತಂಡ 3 ರನ್‍ಗಳ ರೋಚಕ ಗೆಲುವು ಕಂಡಿತು.

    166 ರನ್‍ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡ ನಾಯಕ ಕೆ.ಎಲ್ ರಾಹುಲ್ ಮತ್ತು ಕೆ. ಗೌತಮ್‍ರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಡಿ ಕಾಕ್ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಡಿ ಕಾಕ್ ಆಟ 39 ರನ್ (32 ಎಸೆತ, 2 ಬೌಂಡರಿ, 1 ಸಿಕ್ಸ್)ಗೆ ಅಂತ್ಯಗೊಂಡಿತು. ಲಕ್ನೋ ಪರ ದೀಪಕ್ ಹೂಡಾ 25 ರನ್ ಮತ್ತು ಕೃನಾಲ್ ಪಾಂಡ್ಯ 22 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ದುಷ್ಮಂತ ಚಮೀರ 13 ರನ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅಜೇಯ 38 ರನ್ (17 ಎಸೆತ, 2 ಬೌಂಡರಿ, 4 ಸಿಕ್ಸ್) ಸಿಡಿಸಿ ಲಕ್ನೋ ಗೆಲುವಿಗೆ ಶ್ರಮಿಸಿದರು ಫಲ ನೀಡಲಿಲ್ಲ. ಅಂತಿಮವಾಗಿ ಲಕ್ನೋ ತಂಡ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಯಿತು.


    ಈ ಮೊದಲು ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಆದರೆ ರಾಜಸ್ಥಾನ ತಂಡ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತು. ಜೋಸ್ ಬಟ್ಲರ್ 13 ರನ್ (11 ಎಸೆತ, 1 ಬೌಂಡರಿ, 1 ಸಿಕ್ಸ್) ಸಂಜು ಸ್ಯಾಮ್ಸನ್ 13 ರನ್ (12 ಎಸೆತ, 2 ಬೌಂಡರಿ) ಮತ್ತು  ಪಡಿಕ್ಕಲ್ 29 ರನ್ (4 ಬೌಂಡರಿ) ಸಿಡಿಸಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು.

    ಆದರೆ ಇನ್ನೊಂದೆಡೆ ಶಿಮ್ರಾನ್ ಹೆಟ್ಮೆಯರ್ ಲಕ್ನೋ ಬೌಲರ್‌ಗಳ ಬೆವರಿಳಿಸಿದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಸ್ಫೋಟಕ ಆಟಕ್ಕೆ ಮುಂದಾದ ಹೆಟ್ಮೆಯರ್ ಅಜೇಯ 59 ರನ್ (36 ಎಸೆತ, 1 ಬೌಂಡರಿ, 6 ಸಿಕ್ಸ್) ಸಿಡಿಸಿ ರಾಜಸ್ಥಾನಕ್ಕೆ ಆಸರೆಯಾದರು. ಇವರಿಗೆ ಉತ್ತಮ ಸಾಥ್ ನೀಡಿದ ಆರ್ ಅಶ್ವಿನ್ 28 ರನ್ (23 ಎಸೆತ, 2 ಸಿಕ್ಸ್) ಸಿಡಿಸಿ ನೆರವಾದರು. ಅಂತಿಮವಾಗಿ ರಾಜಸ್ಥಾನ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ ಒಟ್ಟುಗೂಡಿಸಿತು.

    ಲಕ್ನೋ ಪರ ಜೇಸನ್ ಹೋಲ್ಡರ್ ಮತ್ತು ಕೆ.ಗೌತಮ್ ತಲಾ 2 ವಿಕೆಟ್ ಕಿತ್ತು ಮಿಂಚಿದರು. ಅವೇಶ್ ಖಾನ್ ಒಂದು ವಿಕೆಟ್ ತನ್ನದಾಗಿಸಿಕೊಂಡರು.

  • ಡೆಲ್ಲಿಗೆ ಡಿಚ್ಚಿ ಹೊಡೆದ ಡಿಕಾಕ್ – ಲಕ್ನೋಗೆ 6 ವಿಕೆಟ್‌ಗಳ ಭರ್ಜರಿ ಜಯ

    ಡೆಲ್ಲಿಗೆ ಡಿಚ್ಚಿ ಹೊಡೆದ ಡಿಕಾಕ್ – ಲಕ್ನೋಗೆ 6 ವಿಕೆಟ್‌ಗಳ ಭರ್ಜರಿ ಜಯ

    ಮುಂಬೈ: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಲಕ್ನೋ ಪರ ಕ್ವಿಂಟನ್ ಡಿ ಕಾಕ್ ಅಬ್ಬರದ ಆಟದ ನಡುವೆಯೂ ಗೆಲುವಿಗಾಗಿ ಪರದಾಡಿದ ಲಕ್ನೋ ಅಂತಿಮವಾಗಿ 2 ಎಸೆತ ಬಾಕಿ ಇರುವಂತೆ 6 ವಿಕೆಟ್ ಅಂತರದಿಂದ ಗೆದ್ದು ಬೀಗಿತು.

    159 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಲಕ್ನೋ ತಂಡ ಉತ್ತಮ ಆರಂಭ ಪಡೆಯಿತು. ನಾಯಕ ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್‍ಗೆ 73 ರನ್ (58 ಎಸೆತ)ಗಳ ಭರ್ಜರಿ ಆರಂಭ ನೀಡಿದರು. ರಾಹುಲ್ 24 ರನ್ (25 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಆದರೂ ಡಿ ಕಾಕ್ ಆರ್ಭಟ ಮಾತ್ರ ನಿಲ್ಲಿಸಲಿಲ್ಲ. ಆದರೆ ಡಿ ಕಾಕ್ ಅಬ್ಬರದ ಬ್ಯಾಟಿಂಗ್ 80 ರನ್ (52 ಎಸೆತ, 9 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ಅಂತಿಮವಾಗಿ ಬದೋನಿ ಮತ್ತು ಕೃನಾಲ್ ಪಾಂಡ್ಯ 19.4 ಓವರ್‌ಗಳಲ್ಲಿ ಅಂತ್ಯಕ್ಕೆ 155 ರನ್ ಸಿಡಿಸಿ ಲಕ್ನೋಗೆ 6 ವಿಕೆಟ್‍ಗಳ ಜಯ ತಂದುಕೊಟ್ಟರು.

    ಸಾಧಾರಣ ಮೊತ್ತ ಬೆನ್ನಟ್ಟಿದ ಲಕ್ನೋ ತಂಡ ಉತ್ತಮ ಆರಂಭ ಪಡೆಯಿತು. ನಾಯಕ ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್‍ಗೆ 73 ರನ್ (58 ಎಸೆತ)ಗಳ ಭರ್ಜರಿ ಆರಂಭ ನೀಡಿದರು. ರಾಹುಲ್ 24 ರನ್ (25 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಆದರೂ ಡಿ ಕಾಕ್ ಆರ್ಭಟ ಮಾತ್ರ ನಿಲ್ಲಿಸಲಿಲ್ಲ.

    ಈ ಮೊದಲು ಟಾಸ್ ಗೆದ್ದ ಲಕ್ನೋ ನಾಯಕ ಕೆಎಲ್ ರಾಹುಲ್ ಎದುರಾಳಿ ತಂಡ ಡೆಲ್ಲಿಯನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಡೆಲ್ಲಿ ಪರ ಪೃಥ್ವಿ ಶಾ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಅಲ್ಲದೆ ಮೊದಲ ವಿಕೆಟ್‍ಗೆ ಡೇವಿಡ್ ವಾರ್ನರ್ ಜೊತೆ 67 ರನ್ (45 ಎಸೆತ)ಗಳ ಜೊತೆಯಾಟವಾಡಿದರು. ಆದರೆ ಇದರಲ್ಲಿ ವಾರ್ನರ್ ಗಳಿಕೆ 4 ಮಾತ್ರ ಅಷ್ಟರಲ್ಲೇ ವಾರ್ನರ್ ಸುಸ್ತಾದರು. ಬಳಿಕ ಬಂದ ರೋವ್ಮನ್ ಪೋವೆಲ್ 3 ರನ್‍ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

    ನಂತರ ರಿಷಭ್ ಪಂತ್ ಮತ್ತು ಸರ್ಫರಾಜ್ ಖಾನ್ 4ನೇ ವಿಕೆಟ್‍ಗೆ ಜೊತೆಯಾಗಿ ನಿಧಾನಗತಿಯಲ್ಲಿ ರನ್ ಸೇರಿಸಿದರು. ಕೊನೆಯ ಎಸೆತದ ವರೆಗೂ ಬ್ಯಾಟಿಂಗ್ ಮುಂದುವರಿಸಿದ ಈ ಜೋಡಿ 4ನೇ ವಿಕೆಟ್‍ಗೆ ಮುರಿಯದ 75 ರನ್ (57 ಎಸೆತ)ಗಳ ಜೊತೆಯಾಟವಾಡಿತು. ಪಂತ್ ಅಜೇಯ 39 ರನ್ (36 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಸರ್ಫರಾಜ್ ಖಾನ್ 36 ರನ್ (28 ಎಸೆತ, 3 ಬೌಂಡರಿ) ಸಿಡಿಸಿ ಮಿಂಚಿದರು. ಅಂತಿಮವಾಗಿ ಡೆಲ್ಲಿ ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 149 ರನ್ ಪೇರಿಸಿತು.

  • ಹೈದರಾಬಾದ್ ಗೆಲುವಿನ ಹೋಪ್ಸ್‌ ಹೋಲ್ಡ್ ಮಾಡಿದ ಹೋಲ್ಡರ್ – ಲಕ್ನೋಗೆ ರೋಚಕ ಜಯ

    ಹೈದರಾಬಾದ್ ಗೆಲುವಿನ ಹೋಪ್ಸ್‌ ಹೋಲ್ಡ್ ಮಾಡಿದ ಹೋಲ್ಡರ್ – ಲಕ್ನೋಗೆ ರೋಚಕ ಜಯ

    ಮುಂಬೈ: ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದ ಹೈದರಾಬಾದ್ ಮತ್ತು ಲಕ್ನೋ ತಂಡಗಳ ಪೈಕಿ ಅಂತಿಮವಾಗಿ ಲಕ್ನೋ ತಂಡ ಗೆಲುವಿನ ಕೇಕೆ ಹಾಕಿದೆ.

    ಗೆದ್ದಿದ್ದು ಹೇಗೆ:
    ಲಕ್ನೋಗೆ ಕೊನೆಯ 12 ಎಸೆತಗಳಲ್ಲಿ 26 ರನ್ ಅವಶ್ಯಕತೆ ಇತ್ತು. 19ನೇ ಓವರ್‌ನಲ್ಲಿ 10 ರನ್‌ ಬಂತು. ಕೊನೆಯ 6 ಎಸೆತಗಳಲ್ಲಿ 16 ರನ್ ಬೇಕಿತ್ತು ಕೊನೆಯ ಓವರ್ ಎಸೆದ ಜೇಸನ್ ಹೋಲ್ಡರ್ ಕೇವಲ 3 ರನ್ ನೀಡಿ 3 ವಿಕೆಟ್ ಕಿತ್ತು ಲಕ್ನೋಗೆ 12 ರನ್‍ಗಳ ರೋಚಕ ಜಯ ತಂದು ಕೊಟ್ಟರು.

    170 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ರಾಹುಲ್ ತ್ರಿಪಾಠಿ 44 ರನ್ (30 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ನಿಕೋಲಸ್ ಪೂರನ್ 34 ರನ್ (24 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಕ್ಸ್ ಸಿಡಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 157 ರನ್ ಸಿಡಿಸಿ 12 ರನ್‍ಗಳಿಂದ ಸೋಲೊಪ್ಪಿಕೊಂಡಿತು.

    ಎದುರಾಳಿ ನಾಯಕ ವಿಲಿಯಮ್ಸನ್ ನಿರ್ಧಾರದಂತೆ ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ಲಕ್ನೋ ತಂಡ ಆರಂಭದಲ್ಲಿ ಪಟ ಪಟನೇ ಮೂರು ವಿಕೆಟ್ ಕಳೆದುಕೊಂಡಿತು.

    ಬಳಿಕ ಒಂದಾದ ನಾಯಕ ಕೆಎಲ್ ರಾಹುಲ್ ಮತ್ತು ದೀಪಕ್ ಹೂಡಾ ತಂಡಕ್ಕೆ ಆಧಾರವಾದರು. ಈ ಜೋಡಿ 4ನೇ ವಿಕೆಟ್‍ಗೆ 87 ರನ್ (62 ಎಸೆತ)ಗಳ ಜೊತೆಯಾಟವಾಡಿತು. ಹೂಡ 51 ರನ್ (33 ಎಸೆತ, 3 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು. ಬಳಿಕ ಮತ್ತೆ ಲಕ್ನೋ ಕುಸಿತಕ್ಕೊಳಗಾಯಿತು. ರಾಹುಲ್ 68 ರನ್ (50 ಎಸೆತ, 6 ಬೌಂಡರಿ, 1 ಸಿಕ್ಸ್) ಬಾರಿಸಿ 18ನೇ ಓವರ್‍ನಲ್ಲಿ ವಿಕೆಟ್ ಕೈಚೆಲ್ಲಿಕೊಂಡರು. ಕೊನೆಯಲ್ಲಿ ಆಯುಷ್ ಬದೋನಿ 19 ರನ್ (12 ಎಸೆತ, 3 ಬೌಂಡರಿ) ನೆರವಿನಿಂದ ಲಕ್ನೋ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 169 ರನ್ ಪೇರಿಸಿತು.

    ಹೈದರಾಬಾದ್ ಪರ ವಾಷಿಂಗ್ಟನ್ ಸುಂದರ್, ರೊಮಾರಿಯೋ ಶೆಫರ್ಡ್, ಎನ್ ನಟರಾಜನ್ ತಲಾ 2 ವಿಕೆಟ್ ಕಿತ್ತರು.