Tag: LSG

  • ಲಕ್ನೋ ವಿರುದ್ಧ ಕೆಕೆಆರ್‌ಗೆ 98 ರನ್‌ಗಳ ಭರ್ಜರಿ ಜಯ – ಪ್ಲೆ-ಆಫ್‌ಗೆ ಶ್ರೇಯಸ್‌ ಪಡೆ ಇನ್ನಷ್ಟು ಹತ್ತಿರ

    ಲಕ್ನೋ ವಿರುದ್ಧ ಕೆಕೆಆರ್‌ಗೆ 98 ರನ್‌ಗಳ ಭರ್ಜರಿ ಜಯ – ಪ್ಲೆ-ಆಫ್‌ಗೆ ಶ್ರೇಯಸ್‌ ಪಡೆ ಇನ್ನಷ್ಟು ಹತ್ತಿರ

    ಲಕ್ನೋ: ಸುನೀಲ್‌ ನರೇನ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಕೋಲ್ಕತ್ತಾ ನೈಟ್‌ ರೈಡರ್ಸ್‌ 98 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಪ್ಲೇ-ಆಫ್‌ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

    ಭಾನುವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ತವರಿನಲ್ಲೇ ಲಕ್ನೋ ಸೋಲನುಭವಿಸಿತು. ಟಾಸ್‌ ಗೆದ್ದ ರಾಹುಲ್‌ ಪಡೆ ಫೀಲ್ಡಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 235 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಲಕ್ನೋ 16.1 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್‌ ಆಗಿ ಸೋತಿತು.

    ಲಕ್ನೋ ಪರ ಯಾವೊಬ್ಬ ಬ್ಯಾಟರ್‌ ಕೂಡ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾದರು. ನಾಯಕ ಕೆ.ಎಲ್‌.ರಾಹುಲ್‌ (25), ಮಾರ್ಕಸ್ ಸ್ಟೊಯಿನಿಸ್ (36), ಆಯುಷ್ ಬದೋನಿ (15), ಆಷ್ಟನ್ ಟರ್ನರ್ (16) ಗಳಿಸಿದರು. ಉಳಿದ ಬ್ಯಾಟರ್‌ಗಳು ಕೂಡ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದರು.

    ರಾಹುಲ್‌ ಪಡೆಯನ್ನು ಕಟ್ಟಿ ಹಾಕುವಲ್ಲಿ ಕೆಕೆಆರ್‌ ಬೌಲರ್‌ಗಳು ಯಶಸ್ವಿಯಾದರು. ಕೆಕೆಆರ್‌ ಪರ ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ತಲಾ 3 ವಿಕೆಟ್‌ ಕಿತ್ತು ಮಿಂಚಿದರು. ಆಂಡ್ರೆ ರಸೆಲ್ 2, ಮಿಚೆಲ್ ಸ್ಟಾರ್ಕ್ ಹಾಗೂ ಸುನಿಲ್ ನರೇನ್‌ ತಲಾ 1 ವಿಕೆಟ್‌ ಕಿತ್ತರು.

    ಇದಕ್ಕೂ ಮೊದಲು ಕೆಕೆಆರ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿತು. ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಮತ್ತು ಸುನೀಲ್‌ ನರೇನ್‌ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. ಹೊಡಿಬಡಿ ಆಟವಾಡಿದ ಜೋಡಿ 26 ಬಾಲ್‌ಗಳಿಗೆ 61 ರನ್‌ಗಳ ಜೊತೆಯಾಟವಾಡಿತು. ಸಾಲ್ಟ್‌ 14 ಬಾಲ್‌ಗೆ 32 ರನ್‌ ಗಳಿಸಿದರು.

    ನಂತರ ನರೇನ್‌ಗೆ ಆಂಗ್ಕ್ರಿಶ್ ರಘುವಂಶಿ (32) ಜೊತೆಯಾಗಿ ಉತ್ತಮ ರನ್‌ ಕಲೆಹಾಕಲು ಸಾಥ್‌ ನೀಡಿದರು. ಈ ಜೋಡಿ 46 ಬಾಲ್‌ಗೆ 79 ರನ್‌ಗಳ ಜೊತೆಯಾಟವಾಡಿತು.

    ನರೇನ್‌ ಬಿರುಸಿನ ಆಟ
    ಕೆಕೆಆರ್‌ ಪರ ಬಿರುಸಿನ ಆಟವಾಡಿದ ನರೇನ್‌ ಕೇವಲ 39 ಬಾಲ್‌ಗಳಿಗೆ 81 ರನ್‌ (6 ಫೋರ್‌, 7 ಸಿಕ್ಸರ್‌) ಚಚ್ಚಿದರು. ನಾಯಕ ಶ್ರೇಯರ್‌ ಐಯ್ಯರ್‌ 23, ರಮಣದೀಪ್ ಸಿಂಗ್ 25 ರನ್‌ಗಳಿಸಿ ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು. ಇತ್ತ ಲಕ್ನೋ ಪರ ನವೀನ್-ಉಲ್-ಹಕ್ 3, ಯಶ್ ಠಾಕೂರ್, ರವಿ ಬಿಷ್ಣೋಯ್, ಯುದ್ಧವೀರ್ ಸಿಂಗ್ ತಲಾ 1 ವಿಕೆಟ್‌ ಕಿತ್ತರು.

  • ಗಂಡು ಮಗುವಿಗೆ ಜನ್ಮ ನೀಡಿದ ಕೃನಾಲ್‌ ಪಾಂಡ್ಯ ಪತ್ನಿ

    ಗಂಡು ಮಗುವಿಗೆ ಜನ್ಮ ನೀಡಿದ ಕೃನಾಲ್‌ ಪಾಂಡ್ಯ ಪತ್ನಿ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೃನಾಲ್‌ ಪಾಂಡ್ಯ (Krunal Pandya) ಅವರ ಪತ್ನಿ ಪಂಖುರಿ ಶರ್ಮಾ ಅವರಿಂದು ತಮ್ಮ 2ನೇ ಮಗುವಿಗೆ ಜನ್ಮನೀಡಿದ್ದಾರೆ. ಶುಭ ಶುಕ್ರವಾರವೇ ಗಂಡು ಮಗುವಿನ ಜನನವಾಗಿದ್ದು ದಂಪತಿಗಳಿಬ್ಬರು ಸಂಭ್ರಮದಲ್ಲಿದ್ದಾರೆ.

    ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ತೆಗೆಸಿರುವ ಫೋಟೋವನ್ನು ಕೃನಾಲ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಹೆಸರು ವಾಯು ಎಂದು ಸಹ ಪಾಂಡ್ಯ ಹೇಳಿಕೊಂಡಿದ್ದಾರೆ. ಈ ಫೋಟೋ ಕಂಡು ಪಾಂಡ್ಯ ಅಭಿಮಾನಿಗಳೂ ಶುಭ ಹಾರೈಸಿದ್ದಾರೆ. 2022ರ ಜುಲೈನಲ್ಲಿ ಕೃನಾಲ್‌ ಮತ್ತು ಪಂಖುರಿ (Pankuri Sharma) ದಂಪತಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗುವಿನ ಹೆಸರು ಕವಿರ್‌. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮತ ಚಲಾಯಿಸಿದ ಟೀಂ ಇಂಡಿಯಾ ಮುಖ್ಯಕೋಚ್‌ – ಮತದಾನಕ್ಕೆ ಕರೆ ಕೊಟ್ಟ ಮಾಜಿ ಕ್ರಿಕೆಟರ್ಸ್‌!

    2017ರಲ್ಲಿ ಕೃನಾಲ್‌ ಪಾಂಡ್ಯ ಅವರು ತಮ್ಮ ಬಹುಕಾಲದ ಗೆಳತಿ ಪಂಖುರಿ ಶರ್ಮಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವೃತ್ತಿಯಲ್ಲಿ ಮಾಡೆಲ್‌ ಆಗಿದ್ದ ಪಂಖುರಿ, ತನಗೆ ಆಧಾರ ಸ್ತಂಭವಾಗಿ ನಿಂತಿದ್ದಾರೆ ಎಂದು ಕೃನಾಲ್‌ ಆಗಾಗ್ಗೆ ಹೇಳಿಕೊಂಡಿದ್ದಾರೆ.

    ಸದ್ಯ ಐಪಿಎಲ್‌ ಕಣದಲ್ಲಿರುವ ಕೃನಾಲ್‌ ಪಾಂಡ್ಯ ಅವರು ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರವಾಗಿ ಆಡುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು ನಗರ ಜಿಲ್ಲೆಯ 3 ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರ ಹೀಗಿದೆ..

  • ಮಿಂಚಿ ಮಾಯವಾದ ಮಯಾಂಕ್‌ – ಗಾಯದ ಸಮಸ್ಯೆ ಕುರಿತು ಬಿಗ್‌ ಅಪ್ಡೇಟ್‌ ಕೊಟ್ಟ ಕೃನಾಲ್‌ ಪಾಂಡ್ಯ!

    ಮಿಂಚಿ ಮಾಯವಾದ ಮಯಾಂಕ್‌ – ಗಾಯದ ಸಮಸ್ಯೆ ಕುರಿತು ಬಿಗ್‌ ಅಪ್ಡೇಟ್‌ ಕೊಟ್ಟ ಕೃನಾಲ್‌ ಪಾಂಡ್ಯ!

    – ಮತ್ತೆ ಕಣಕ್ಕಿಳಿಯುತ್ತಾರಾ ತಾರಾ ವೇಗಿ?

    ಲಕ್ನೋ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ತಮ್ಮ ವೇಗದ ಬೌಲಿಂಗ್‌ನಿಂದಲೇ ಭಾರೀ ಸದ್ದು ಮಾಡುತ್ತಿದ್ದ ಲಕ್ನೂ ಸೂಪರ್‌ ಜೈಂಟ್ಸ್‌ (LSG) ತಂಡದ ಮಯಾಂಕ್‌ ಯಾದವ್‌ (Mayank Yadav) ಪಕ್ಕೆಲುಬು ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

    ಸೂಪರ್‌ ಸಂಡೇ (ಏ.7) ಲಕ್ನೋ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧದ ಪಂದ್ಯದಲ್ಲಿ ಕೇವಲ ಒಂದು ಓವರ್‌ ಬೌಲಿಂಗ್‌ ಮಾಡಿದ ಮಯಾಂಕ್‌, ಯಾವುದೇ ವಿಕೆಟ್‌ ಪಡೆಯದೇ 13 ರನ್‌ ಬಿಟ್ಟುಕೊಟ್ಟರು. ಈ ಓವರ್‌ನ ಮೊದಲ ಎರಡು ಎಸೆತಗಳು ಗಂಟೆಗೆ 140 ಕಿಮೀ ವೇಗದಲ್ಲಿತ್ತು. ಒಂದು ಓವರ್‌ ಬೌಲಿಂಗ್‌ ಬಳಿಕ ತಕ್ಷಣವೇ ಪಕ್ಕೆಲುಬು ಸಮಸ್ಯೆಗೆ ತುತ್ತಾಗಿ ಮೈದಾನ ತೊರೆದರು. ಇದರ ಹೊರತಾಗಿಯೂ ಯಶ್‌ ಠಾಕೂರ್‌‌ ಅವರ ಮಾರಕ ದಾಳಿ, ಕೃನಾಲ್‌ ಪಾಂಡ್ಯ ಅವರ ಸ್ಪಿನ್‌ ಮೋಡಿಯಿಂದ ಕೆ.ಎಲ್‌ ರಾಹುಲ್‌ (KL Rahul) ಬಳಗ 33 ರನ್‌ಗಳ ಗೆಲುವು ಸಾಧಿಸಿತು. ಇದನ್ನೂ ಓದಿ: ಶ್ರೀಕೃಷ್ಣನ ಮೇಲಿನ ನಂಬಿಕೆಯಿಂದ ಮಾಂಸಾಹಾರ ತ್ಯಜಿಸಿದ್ರಾ ವೇಗಿ? – ಮಯಾಂಕ್‌ ತಾಯಿ ಹೇಳಿದ್ದೇನು?

    ಬಿಗ್‌ ಅಪ್ಡೇಟ್‌ ಕೊಟ್ಟ ಕೃನಾಲ್‌ ಪಾಂಡ್ಯ:
    ಮಯಾಂಕ್‌ ಯಾದವ್‌ ಅವರ ಗಾಯದ ಸಮಸ್ಯೆ ಕುರಿತು ಮಾತನಾಡಿದ ಕೃನಾಲ್‌ ಪಾಂಡ್ಯ (Krunal Pandya), ಇದು ಗಂಭೀರವಾದ ಗಾಯವಲ್ಲ. ಆದ್ದರಿಂದ ಮಯಾಂಕ್‌ ಮುಂದಿನ ಪಂದ್ಯಗಳಲ್ಲಿ ಕ್ರಮವಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಮಯಾಂಕ್‌ಗೆ ಏನಾಗಿದೆ ಎಂಬುದು ನಿಖರವಾಗಿ ನನಗೂ ತಿಳಿದಿಲ್ಲ. ಆದ್ರೆ ಪಂದ್ಯ ಆರಂಭಕ್ಕೂ ಮುನ್ನ ನೆಟ್ಸ್‌ನಲ್ಲಿ ಚೆನ್ನಾಗಿ ಬೌಲಿಂಗ್‌ ಅಭ್ಯಾಸ ಮಾಡುತ್ತಿದ್ದರು. ನನ್ನೊಂದಿಗೂ ಸಕಾರಾತ್ಮಕವಾಗಿ ಸಂಭಾಷಣೆ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.

    ಐಪಿಎಲ್‌ನಲ್ಲಿ ಐತಿಹಾಸಿಕ ದಾಖಲೆ:
    21 ವರ್ಷ ವಯಸ್ಸಿನ ಮಯಾಂಕ್‌ ಯಾದವ್‌ ಇತ್ತೀಚೆಗಷ್ಟೇ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. 150 ಕಿಮೀಗಿಂತಲೂ ಅಧಿಕ ವೇಗದಲ್ಲಿ ಬೌಲಿಂಗ್‌ ಮಾಡಿದ 4ನೇ ಬೌಲರ್‌ ಅಂತಲೂ ಕರೆಸಿಕೊಂಡಿದ್ದಾರೆ. ಇದನ್ನೂ ಓದಿ: ಮಯಾಂಕ್‌ ವೇಗಕ್ಕೆ ಐಪಿಎಲ್‌ನಲ್ಲಿ ದಾಖಲೆಗಳು ಪುಡಿ ಪುಡಿ!

    ಐಪಿಎಲ್‌ನಲ್ಲಿ ವೇಗದ ಬೌಲಿಂಗ್‌ ಮಾಡಿದ ಟಾಪ್‌-5 ಆಟಗಾರರು:
    * ಶಾನ್‌ ಟೈಟ್‌ – 2011ರಲ್ಲಿ – 157.7 ಕಿಮೀ
    * ಲಾಕಿ ಫರ್ಗೂಸನ್‌ – 2022ರಲ್ಲಿ – 157.3 ಕಿಮೀ
    * ಉಮ್ರಾನ್‌ ಮಲಿಕ್‌ – 2022ರಲ್ಲಿ – 157.0 ಕಿಮೀ
    * ಮಯಾಂಕ್‌ ಯಾದವ್‌ – 2024ರಲ್ಲಿ – 156.7 ಕಿಮೀ
    * ಅನ್‌ರಿಚ್‌ ನಾರ್ಟೆ – 2020ರಲ್ಲಿ – 156.2 ಕಿಮೀ

  • ಮಯಾಂಕ್‌ ವೇಗಕ್ಕೆ ಐಪಿಎಲ್‌ನಲ್ಲಿ ದಾಖಲೆಗಳು ಪುಡಿ ಪುಡಿ!

    ಮಯಾಂಕ್‌ ವೇಗಕ್ಕೆ ಐಪಿಎಲ್‌ನಲ್ಲಿ ದಾಖಲೆಗಳು ಪುಡಿ ಪುಡಿ!

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಯುವ ವೇಗಿ ಮಯಾಂಕ್‌ ಯಾದವ್‌ ಅವರ ಭರ್ಜರಿ ಬೌಲಿಂಗ್‌ ಪ್ರದರ್ಶನ ಲಕ್ನೋ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಅತ್ಯಂತ ವೇಗದ ಎಸೆತ ಎಸೆಯುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ.

    ಇದಕ್ಕೂ ಮುನ್ನ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 155.8 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿದ್ದ ಮಯಾಂಕ್, ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಅತೀ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಆರ್‌ಸಿಬಿ ವಿರುದ್ಧ ಸಮರ ಸಾರಿದ ಮಯಾಂಕ್‌ ಆಲ್‌ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರೂನ್ ಗ್ರೀನ್ ಮತ್ತು ರಜತ್ ಪಾಟಿದಾರ್ ವಿಕೆಟ್‌ ಕಬಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಇದರೊಂದಿಗೆ ಆತಿಥೇಯ ಆರ್‌ಸಿಬಿ ಎದುರು 4 ಓವರ್‌ಗಳಲ್ಲಿ 14 ರನ್‌ ಕೊಟ್ಟು 3 ವಿಕೆಟ್‌ ಪಡೆಯುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಪದಾರ್ಪಣೆ ಬಳಿಕ ಸತತ ಪಂದ್ಯಶ್ರೇಷ್ಠ ಪಡೆದ ಮೊದಲ ಆಟಗಾರ ಎಂಬ ದಾಖಲೆಯನ್ನೂ ತಮ್ಮ ಹೆಗಲಿಗೇರಿಸಿಕೊಂಡರು.

    ಐಪಿಎಲ್‌ನಲ್ಲಿ ಐತಿಹಾಸಿಕ ದಾಖಲೆ:
    21 ವರ್ಷ ವಯಸ್ಸಿನ ಮಯಾಂಕ್‌ ಯಾದವ್‌ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಹೊಸ ದಾಖಲೆಯನ್ನೂ ಬರೆದಿದ್ದಾರೆ. 150 ಕಿಮೀಗಿಂತಲೂ ಅಧಿಕ ವೇಗದಲ್ಲಿ ಬೌಲಿಂಗ್‌ ಮಾಡಿದ 4ನೇ ಬೌಲರ್‌ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: IPL 2024: ತವರಿನಲ್ಲೇ ಆರ್‌ಸಿಬಿಗೆ ಹೀನಾಯ ಸೋಲು – ಲಕ್ನೋಗೆ 28 ರನ್‌ಗಳ ಸೂಪರ್‌ ಜಯ

    ವೇಗದ ಬೌಲಿಂಗ್‌ ಮಾಡಿದ ಟಾಪ್‌-5 ಆಟಗಾರರು:
    * ಶಾನ್‌ ಟೈಟ್‌ – 2011ರಲ್ಲಿ – 157.7 ಕಿಮೀ
    * ಲಾಕಿ ಫರ್ಗೂಸನ್‌ – 2022ರಲ್ಲಿ – 157.3 ಕಿಮೀ
    * ಉಮ್ರಾನ್‌ ಮಲಿಕ್‌ – 2022ರಲ್ಲಿ – 157.0 ಕಿಮೀ
    * ಮಯಾಂಕ್‌ ಯಾದವ್‌ – 2024ರಲ್ಲಿ – 156.7 ಕಿಮೀ
    * ಅನ್‌ರಿಚ್‌ ನಾರ್ಟೆ – 2020ರಲ್ಲಿ – 156.2 ಕಿಮೀ

    ತನ್ನದೇ ದಾಖಲೆ ಬಗ್ಗೆ ಮಯಾಂಕ್‌ ಹೇಳಿದ್ದೇನು?
    ಆರ್‌ಸಿಬಿ ವಿರುದ್ಧ ಪಂದ್ಯ ಗೆದ್ದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಮಯಾಂಕ್‌, ವಿಕೆಟ್‌ ಪಡೆಯುವುದಕ್ಕಿಂತಲೂ ತಂಡಕ್ಕೆ ಪಂದ್ಯಗಳನ್ನು ಗೆದ್ದುಕೊಡುವುದೇ ನನ್ನ ಮುಖ್ಯಗುರಿ. 2 ಪಂದ್ಯಗಳಲ್ಲಿ ನಾನು 6 ವಿಕೆಟ್‌ ಪಡೆದಿರುವುದು ನನಗೆ ಮುಖ್ಯವಲ್ಲ. ನನ ಗುರಿ ಏನಿದ್ದರೂ ನನ್ನ ಫ್ರಾಂಚೈಸಿಗೆ ಸಾಧ್ಯವಾದಷ್ಟು ಪಂದ್ಯಗಳನ್ನು ಗೆದ್ದುಕೊಡುವುದು. ಇದೇ ನನ್ನ ಮುಖ್ಯ ಗುರಿ ಕೂಡ. ಪಂಜಾಬ್‌ ಕಿಂಗ್ಸ್‌ ಮತ್ತು ಆರ್‌ಸಿಬಿ ವಿರುದ್ಧದ ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಡಲು ನೆರವಾಗಿರುವುದಕ್ಕೆ ಬಹಳ ಸಂತಸವಿದೆ ಎಂದಿದ್ದಾರೆ.

    ಅಲ್ಲದೇ ನನ್ನ ದೇಹವನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದೇನೆ. ಸೇವಿಸುವ ಆಹಾರದ ಕಡೆಗೆ ಗಮನ ಕೊಟ್ಟು ನಂತರ ನಿದ್ರೆ ಮತ್ತು ಕಸರತ್ತಿನ ಕಡೆಗೆ ಗಮನ ನೀಡುತ್ತೇನೆ. ಫಾಸ್ಟ್‌ ಬೌಲರ್‌ ಒಬ್ಬನಿಗೆ ವಿಶ್ರಾಂತಿ ಅತ್ಯಗತ್ಯ. ಈ ಕಡೆಗೆ ಹೆಚ್ಚಿ ಆದ್ಯತೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಳಪೆ ಪ್ರದರ್ಶನದಿಂದ ಶಾಹೀನ್‌ ಶಾಗೆ ತಲೆದಂಡ – ಮತ್ತೆ ನಾಯಕನ ಪಟ್ಟಕ್ಕೇರಿದ ಬಾಬರ್‌ ಆಜಂ

  • ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್‌ ಕದನ!

    ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್‌ ಕದನ!

    – ಚೆನ್ನೈ ತವರು ಕ್ರೀಡಾಂಗಣದಲ್ಲಿ ಗೆದ್ದು ಬೀಗುತ್ತಾ ಆರ್‌ಸಿಬಿ?
    – ಈ ಸಲ ಕಪ್‌ ಯಾರದ್ದು?

    ಚೆನ್ನೈ: ಕ್ರಿಕೆಟ್‌ ಪ್ರೇಮಿಗಳಿಗೆ ಬಿಸಿಸಿಐ (BCCI) ಸಿಹಿ ಸುದ್ದಿ ಕೊಟ್ಟಿದ್ದು, ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ವೇಳಾಪಟ್ಟಿಯನ್ನು (IPL 2024 Schedule) ಪ್ರಕಟಿಸಿದೆ.

    ಲೋಕಸಭಾ ಚುನಾವಣೆ (Lok Sabha Elections) ಹಿನ್ನೆಲೆ ಮೊದಲ 15 ದಿನಗಳು ಕಾಲ ನಡೆಯುವ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಮುಂದಿನ ವೇಳಾಪಟ್ಟಿ ಪ್ರಕಟಿಸುವುದಾಗಿ ಬಿಸಿಸಿಐ (BCCI) ಸ್ಪಷ್ಟಪಡಿಸಿದೆ. 2019ರ ಲೋಕಸಭಾ ಚುನಾವಣೆ ಅವಧಿಯಲ್ಲೂ ಇದೇ ವಿಧಾನ ಅನುಸರಿ ಎರಡು ಹಂತಗಳಲ್ಲಿ ಟೂರ್ನಿಯನ್ನು ನಡೆಸಲಾಗಿತ್ತು. ಇದನ್ನೂ ಓದಿ: 2024ರ ಐಪಿಎಲ್‌ ಟೂರ್ನಿಯಿಂದಲೇ ಶಮಿ ಔಟ್‌ – ಗುಜರಾತ್‌ ಟೈಟಾನ್ಸ್‌ಗೆ ಭಾರೀ ಆಘಾತ

    2024ರ ಐಪಿಎಲ್​ ಟೂರ್ನಿ ಮಾರ್ಚ್​ 22ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಚೆನ್ನೈನ ಚಿದಂಬರಂ (ಚೆಪಾಕ್) ಕ್ರಿಕೆಟ್​ ಕ್ರೀಡಾಂಗಣದಲ್ಲಿ ಇತ್ತಂಡಗಳು ನಡುವೆ ಕಾದಾಟ ನಡೆಸಲಿವೆ. ಇದನ್ನೂ ಓದಿ: ಫೋಟೋ ಶೂಟ್‌ನಲ್ಲಿ ಮಿಂಚಿದ RCB ಸ್ಟಾರ್ಸ್‌ – ʻಈ ಸಲ ಕಪ್‌ ನಮ್ದೇʼ ಮತ್ತೆ ಶುರುವಾಯ್ತು ಟ್ರೆಂಡ್‌!

    ಸದ್ಯ ಮಾ. 22ರಿಂದ ಏಪ್ರಿಲ್ 7ರ ತನಕ 21 ಪಂದ್ಯಗಳು ನಡೆಯಲಿದ್ದು, ಈ ಪೈಕಿ 4 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯವು ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಉಳಿದ ಪಂದ್ಯಗಳು ಸಂಜೆ 7.30ಕ್ಕೆ ಪ್ರಾರಂಭವಾಗಲಿವೆ. ಡಬಲ್ ಹೆಡ್ಡರ್ ದಿನದಂದು ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಇದನ್ನೂ ಓದಿ: 10,000 ರನ್‌ ಪೂರೈಸಿ ದಾಖಲೆ; ಬಾಬಾರ್‌ ಸ್ಫೋಟಕ ಆಟಕ್ಕೆ ಗೇಲ್‌, ವಿರಾಟ್‌ ಕೊಹ್ಲಿ ದಾಖಲೆ ಉಡೀಸ್‌

    ಯಾರ ನಡುವೆ, ಯಾವ ದಿನ, ಎಲ್ಲಿ ಪಂದ್ಯ?
    1. ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಮಾರ್ಚ್ 22 ಚೆನ್ನೈ,
    2. ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 23, ಮೊಹಾಲಿ,
    3. ಕೋಲ್ಕತ್ತಾ ನೈಟ್​ ರೈಡರ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 23, ಕೋಲ್ಕತ್ತಾ
    4. ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಮಾರ್ಚ್ 24, ಜೈಪುರ
    5. ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್, ಮಾರ್ಚ್ 24, ಅಹಮದಾಬಾದ್
    6. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಮಾರ್ಚ್ 25, ಬೆಂಗಳೂರು
    7. ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ಮಾರ್ಚ್ 26, ಚೆನ್ನೈ
    8. ಸನ್​ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್, ಮಾರ್ಚ್ 27, ಹೈದರಾಬಾದ್
    9. ಆರ್‌ಆರ್‌ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 28 ಜೈಪುರ
    10. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್​ ರೈಡರ್ಸ್, ಮಾರ್ಚ್ 29 ಬೆಂಗಳೂರು
    11. ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್, ಮಾರ್ಚ್ 30, ಲಕ್ನೋ
    12. ಗುಜರಾತ್ ಟೈಟಾನ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 31, ಅಹಮದಾಬಾದ್
    13. ಡೆಲ್ಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಮಾರ್ಚ್ 31, ವಿಶಾಖಪಟ್ಟಣಂ
    14. ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಏಪ್ರಿಲ್ 1, ಮುಂಬೈ
    15. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್, ಏಪ್ರಿಲ್ 2, ಬೆಂಗಳೂರು
    16. ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್​ ರೈಡರ್ಸ್, ಏಪ್ರಿಲ್ 3, ವಿಶಾಖಪಟ್ಟಣಂ
    17. ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್, ಏಪ್ರಿಲ್ 4, ಅಹಮದಾಬಾದ್
    18. ಸನ್​ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್, ಏಪ್ರಿಲ್ 5, ಹೈದರಾಬಾದ್
    19. ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏಪ್ರಿಲ್ 6, ಜೈಪುರ
    20. ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಏಪ್ರಿಲ್ 7, ಮುಂಬೈ
    21. ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್, ಏಪ್ರಿಲ್ 7, ಲಕ್ನೋ

  • ಕೊಹ್ಲಿ ಕೆಣಕಿದ ನವೀನ್‌ಗೆ ಮುಂಬೈ ಸ್ಟಾರ್ಸ್‌ ಕೊಟ್ರು ಪಂಚ್‌ – RCB ಫ್ಯಾನ್ಸ್‌ಗೆ ಡಬಲ್‌ ಖುಷಿ

    ಕೊಹ್ಲಿ ಕೆಣಕಿದ ನವೀನ್‌ಗೆ ಮುಂಬೈ ಸ್ಟಾರ್ಸ್‌ ಕೊಟ್ರು ಪಂಚ್‌ – RCB ಫ್ಯಾನ್ಸ್‌ಗೆ ಡಬಲ್‌ ಖುಷಿ

    ಚೆನ್ನೈ: ಮುಂಬೈ ಇಂಡಿಯನ್ಸ್ (MI) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವೆ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 81 ರನ್‌ ಗಳಿಂದ ಭರ್ಜರಿ ಜಯ ಸಾಧಿಸಿ, 2ನೇ ಹಂತಕ್ಕೆ ತಲುಪಿದೆ.

    ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು ಮತ್ತು ಲಕ್ನೋಗೆ 20 ಓವರ್‌ ಗಳಲ್ಲಿ 182 ರನ್‌ ಗುರಿಯನ್ನು ನೀಡಿತು. ಆದ್ರೆ ಲಕ್ನೋ ತಂಡ 101 ರನ್‌ ಗಳಿಗೆ ಆಲ್ ಔಟ್ ಹೀನಾಯ ಸೋಲನುಭವಿಸಿತು. ಇದನ್ನೂ ಓದಿ: IPL 2023 Eliminator: 5 ರನ್‌ಗೆ 5 ವಿಕೆಟ್‌ ಉಡೀಸ್‌ – ಲಕ್ನೋ ಮನೆಗೆ, ಮುಂಬೈಗೆ 81ರನ್‌ಗಳ ಭರ್ಜರಿ ಜಯ

    ಈ ಐಪಿಎಲ್ ಸೀಸನ್‌ ನಲ್ಲಿ ಬಹಳ ವೈರಲ್ ಆದ ‘ಸ್ವೀಟ್ ಮ್ಯಾಂಗೊ’ ಎಂಬ ಪದವನ್ನು ನೀವೆಲ್ಲರೂ ಕೇಳಿರಬಹುದು. ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ನಡುವೆ 2ನೇ ಬಾರಿಗೆ ನಡೆದ ಲೀಗ್ ‌ಪಂದ್ಯದಲ್ಲಿ ವಿರಾಟ್‌ ಕೊಹ್ಲಿ (Virat Kohli), ಪಿಯೂಷ್‌ ಚಾವ್ಲಾ ಅವರ ಬೌಲಿಂಗ್‌ಗೆ ಔಟಾಗುತ್ತಿದ್ದಂತೆ, ಪಿಯೂಷ್‌ ಅವರ ಚಿತ್ರವನ್ನು ಕ್ಲಿಕ್ಕಿಸಿದ್ದ ಅಫ್ಘಾನಿಸ್ತಾನ ಮೂಲದ ಲಕ್ನೋ ಆಟಗಾರ ನವೀನ್ ಉಲ್ ಹಕ್ (Naveen ul Haq) ʻಸ್ವೀಟ್‌ ಮ್ಯಾಂಗೋಸ್‌ʼ ಪದದೊಂದಿಗೆ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಮೂಲಕ ಲಕ್ನೋ ಪಂದ್ಯದ ವೇಳೆ ನಡೆದ ಮಾತಿನ ಚಕಮಕಿ ಬಳಿಕ ಕೊಹ್ಲಿಯನ್ನ ಮತ್ತೆ ಕೆಣಕಿದ್ದರು.

    ಇದರಿಂದ ಕೊಹ್ಲಿ ಮತ್ತು ಆರ್‌ಸಿಬಿ ಫ್ಯಾನ್ಸ್‌ (RCB Fans) ಕೆಂಡಾಮಂಡಲವಾಗಿದ್ದರು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಇದೇ ವೇಳೆ ಮುಂಬೈ ಮತ್ತು ಲಖನೌ ನಡುವಿನ ಎಲಿಮಿನೇಟರ್-1 ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡುತ್ತಿದ್ದ ನವೀನ್ 4 ಓವರ್‌ ಗಳಲ್ಲಿ 38 ರನ್ ನೀಡಿದರೂ 4 ವಿಕೆಟ್ ಕಬಳಿಸಿ ಮುಂಬೈ ತಂಡವನ್ನು ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿಸಿದ್ದರು. ರೋಹಿತ್ ಶರ್ಮಾರನ್ನ ಔಟ್‌ ಮಾಡಿದ ನಂತರ ನವೀನ್ ಉಲ್ ಹಕ್ ಕಿವಿ ಮುಚ್ಚಿಕೊಂಡು, ಕೆ.ಎಲ್‌ ರಾಹುಲ್‌ ಸ್ಟೈಲ್‌ ಕಾಪಿ ಮಾಡಿ ಸಂಭ್ರಮಿಸಿದ್ದರು.

    ಅದೇ ರೀತಿಯಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರು ಪಂದ್ಯ ಗೆದ್ದ ಬಳಿಕ ರೆಸ್ಟ್‌ ರೂಮ್‌ನಲ್ಲಿ ಕುಳಿತಿದ್ದಾಗ, ಮೂರು ಮಾವಿನ ಹಣ್ಣುಗಳನ್ನು ಮೇಜಿನ ಮೇಲೆ ಇಟ್ಟುಕೊಂಡು ಕಿವಿ, ಕಣ್ಣು, ಬಾಯಿ ಮುಚ್ಚಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ಸದ್ದು ಮಾಡುತ್ತಿದ್ದಂತೆ ಆರ್‌ಸಿಬಿ ಹಾಗೂ ವಿರಾಟ್‌ ಕೊಹ್ಲಿ ಅಭಿಮಾನಿಗಳು ನವೀನ್‌ನನ್ನ ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದಾರೆ.

    ಮತ್ತೊಂದೆಡೆ ಆರ್‌ಸಿಬಿ ತಂಡವನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಸೋಲಿಸಿ, ಪ್ಲೇ ಆಫ್‌ಗೆ ಬರದಂತೆ ಮಾಡಿದ ಗುಜರಾತ್‌ ಟೈಟಾನ್ಸ್‌, ಪ್ಲೇ ಆಫ್‌ ಮೊದಲ ಪಂದ್ಯದಲ್ಲಿ ಸೋತಿದ್ದು ಅಭಿಮಾನಿಗಳಿಗೆ ಡಬಲ್‌ ಖುಷಿ ಕೊಟ್ಟಿದೆ. ಆರ್‌ಸಿಬಿ ಅಭಿಮಾನಿಗಳೂ ಸಹ ಇದರಿಂದ ಸಿಎಸ್‌ಕೆಗೆ ಸಪೋರ್ಟ್‌ ಮಾಡಿದ್ದಾರೆ. ಇದನ್ನೂ ಓದಿ: IPL 2023: ಧೋನಿಯಿಂದ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ- ಲಾಸ್ಟ್ 5 ಓವರ್‌ಗೂ ಮುನ್ನ ನಡೆದಿದ್ದೇನು?

  • 7 ಸಾವಿರ ರನ್‌ ಪೂರೈಸಿದ ರಾಹುಲ್‌ – ಕೊಹ್ಲಿ, ರೋಹಿತ್‌ ಸೇರಿ ಹಲವರ ದಾಖಲೆ ಉಡೀಸ್‌

    7 ಸಾವಿರ ರನ್‌ ಪೂರೈಸಿದ ರಾಹುಲ್‌ – ಕೊಹ್ಲಿ, ರೋಹಿತ್‌ ಸೇರಿ ಹಲವರ ದಾಖಲೆ ಉಡೀಸ್‌

    ಲಕ್ನೋ: ಇಲ್ಲಿನ ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಶನಿವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಮಂದಗತಿಯ ಬ್ಯಾಟಿಂಗ್‌ ನಡೆಸಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಾಯಕ ಕೆ.ಎಲ್‌ ರಾಹುಲ್‌ (KL Rahul) 68ರನ್‌ ಗಳಿಸುವ ಮೂಲಕ ಟಿ20 ಕ್ರಿಕೆಟ್‌ (T20 Cricket) ಇತಿಹಾಸದಲ್ಲಿ 7 ಸಾವಿರ ರನ್‌ ಪೂರೈಸಿದ ವಿಶೇಷ ಸಾಧನೆ ಮಾಡಿದ್ದಾರೆ. ಈ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma), ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat kohli), ಶಿಖರ್‌ ಧವನ್‌, ಸುರೇಶ್‌ ರೈನಾ ಅವರ ದಾಖಲೆಗಳನ್ನ ಉಡೀಸ್‌ ಮಾಡಿದ್ದಾರೆ.

    ಟಿ20 ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ ಪೂರ್ಣಗೊಳಿಸಲು ಕೆ.ಎಲ್‌ ರಾಹುಲ್‌ 210 ಪಂದ್ಯಗಳ 197 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಆ ಮೂಲಕ ವೇಗವಾಗಿ 7,000 ರನ್ ಪೂರ್ಣಗೊಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಆರ್‌ಸಿಬಿ ಮಾಜಿ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ 212 ಇನ್ನಿಂಗ್ಸ್‌, ಶಿಖರ್‌ ಧವನ್‌ 246, ಸುರೇಶ್‌ ರೈನಾ 251, ರೋಹಿತ್‌ ಶರ್ಮಾ 258 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ಮಾಡಿದ್ದರೆ, ಕೆ.ಎಲ್‌ ರಾಹುಲ್‌ ಕೇವಲ 197 ಇನ್ನಿಂಗ್ಸ್‌ಗಳಲ್ಲೇ ಈ ದಾಖಲೆ ಮಾಡುವ ಮೂಲಕ ಮೈಲುಗಲ್ಲು ಸಾಧಿಸಿದ್ದಾರೆ.

    2020ರ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ವಿನ್ನರ್‌ ಆಗಿದ್ದ ರಾಹುಲ್, 116 ಐಪಿಎಲ್‌ ಪಂದ್ಯಗಳಿಂದ 4 ಶತಕ, 33 ಅರ್ಧಶತಕ ಗಳೊಂದಿಗೆ 4,151 ರನ್ ಬಾರಿಸಿದ್ದರೆ. ಒಟ್ಟಾರೆ 210 ಪಂದ್ಯಗಳಿಂದ 6 ಶತಕ, 61 ಅರ್ಧಶತಕಗಳ ನೆರವಿನಿಂದ 7,054 ರನ್ ಚಚ್ಚಿದ್ದಾರೆ. ಇದರಲ್ಲಿ 72 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 2,265 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 2 ಶತಕ ಹಾಗೂ 22 ಅರ್ಧಶತಕಗಳೂ ಸೇರಿವೆ. ಅಜೇಯರಾಗಿ 110 ರನ್‌ ಗಳಿಸಿದ್ದು ಇವರ ವೈಯಕ್ತಿಕ ಗರಿಷ್ಠ ಸ್ಕೋರ್‌ ಆಗಿದೆ.

    ವಿಶ್ವ ಕ್ರಿಕೆಟಿಗರ ಪೈಕಿ ರಾಹುಲ್‌ ವೇಗವಾಗಿ 7 ಸಾವಿರ ರನ್‌ ಗಳಿಸಿದ ಆಟಗಾರರ ಸಾಲಿನಲ್ಲಿ 3ನೇ ಸ್ಥಾನ ಅಲಂಕರಿಸಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ 187 ಇನಿಂಗ್ಸ್‌ಗಳಲ್ಲಿಯೇ ಈ ಮೈಲುಗಲ್ಲು ಸಾಧಿಸಿದ್ದರು.

  • ಆರ್‌ಸಿಬಿ ಬೌಲರ್‌ಗಳಿಗೆ ಭೇಷ್ ಅಂದ ಕೆ.ಎಲ್ ರಾಹುಲ್

    ಆರ್‌ಸಿಬಿ ಬೌಲರ್‌ಗಳಿಗೆ ಭೇಷ್ ಅಂದ ಕೆ.ಎಲ್ ರಾಹುಲ್

    ಕೋಲ್ಕತ್ತಾ: ಮೊನ್ನೆ ನಡೆದ ಆರ್‌ಸಿಬಿ ಮತ್ತು ಲಕ್ನೋ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬೌಲರ್‌ಗಳು ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಕನ್ನಡಿಗ ಕೆ.ಎಲ್. ರಾಹುಲ್ ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿ ನಮ್ಮ ತಂಡದ ಬ್ಯಾಟ್ಸ್‌ಮ್ಯಾನ್‌ಗಳು ದೊಡ್ಡ ಹೊಡೆತಗಳನ್ನು ಆಡಲು ಪ್ರಯತ್ನಿಸಿದರು. ಆದರೆ ಎದುರಾಳಿ ತಂಡದ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು ಎಂದು ಹೇಳಿದ್ದಾರೆ.

    ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 208 ರನ್‌ಗಳ ಗುರಿ ಬೆನ್ನಟ್ಟಿದ್ದ ಲಕ್ನೋ ತಂಡವು 14 ರನ್‌ಗಳಿಂದ ಸೋಲನುಭವಿಸಿತು. ಅದಕ್ಕಾಗಿ ತಂಡದ ನಾಯಕ ರಾಹುಲ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ.

    ಪವರ್‌ಪ್ಲೇ ನಂತರದ ಏಳು ಓವರ್‌ಗಳಲ್ಲಿ ರಾಹುಲ್ ಒಂದು ಬೌಂಡರಿ ಮಾತ್ರ ಗಳಿಸಿದ್ದರು. ಇದೇ ಮೊದಲ ಬಾರಿ ಟೂರ್ನಿಯಲ್ಲಿ ಆಡಿದ ಲಕ್ನೋ ತಂಡವು ಗುರಿ ಬೆನ್ನಟ್ಟಿದ್ದ ಏಳು ಪಂದ್ಯಗಳ ಪೈಕಿ ಐದರಲ್ಲಿ ಸೋತಿದೆ.

    ಟೂರ್ನಿಯಲ್ಲಿ ಚೇಸಿಂಗ್ ಮಾಡಿದ ಪಂದ್ಯಗಳಲ್ಲಿ ನಮ್ಮ ಸಾಧನೆ ಚೆನ್ನಾಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಈ ವಿಷಯದಲ್ಲಿ ಸುಧಾರಣೆಗೆ ಪ್ರಯತ್ನಿಸುತ್ತೇವೆ ಎಂದು ರಾಹುಲ್ ಹೇಳಿದರು.

    ಈ ಪಂದ್ಯದಲ್ಲಿ ರಾಹುಲ್ 58 ಎಸೆತಗಳನ್ನು ಎದುರಿಸಿ 79 ರನ್ ಗಳಿಸಿದ್ದರು. ಟೂರ್ನಿಯಲ್ಲಿ ಒಟ್ಟು 600ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

  • ವನಿಂದು ಹಸರಂಗ ಕ್ಯಾಚ್ ವಿವಾದ – ಐಸಿಸಿ ನಿಯಮವೇನು?

    ವನಿಂದು ಹಸರಂಗ ಕ್ಯಾಚ್ ವಿವಾದ – ಐಸಿಸಿ ನಿಯಮವೇನು?

    ಕೋಲ್ಕತ್ತಾ: ಲಕ್ನೋ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ವನಿಂದು ಹಸರಂಗ ಕ್ಯಾಚ್ ಹಿಡಿದು ಬಿಟ್ಟ ಬಳಿಕ ಈ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ.

    ತೀವ್ರ ಪೈಪೋಟಿಯಿಂದ ಕೂಡಿದ್ದ ಬೆಂಗಳೂರು ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 207 ರನ್ ಪೇರಿಸಿತು. ಬಳಿಕ 208 ರನ್‍ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡದ ರಾಹುಲ್ ಮತ್ತು ದೀಪಕ್ ಹೂಡಾ ತಂಡದ ಗೆಲುವಿಗಾಗಿ ಭರ್ಜರಿ ಬ್ಯಾಟಿಂಗ್‍ಗೆ ಮುಂದಾದರು. ಈ ವೇಳೆ 10ನೇ ಓವರ್‌ನ 3ನೇ ಎಸೆತದಲ್ಲಿ ಹೂಡಾ ದೊಡ್ಡ ಹೊಡೆತಕ್ಕೆ ಮುಂದಾದರು. ಈ ವೇಳೆ ಬೌಂಡರಿ ಲೈನ್ ಪಕ್ಕದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹಸರಂಗ ಕ್ಯಾಚ್ ಹಿಡಿದು ನಿಯಂತ್ರಣ ಕಳೆದುಕೊಂಡು ಬಳಿಕ ಬಾಲ್ ಎಸೆದರು. ಆದರೆ ಬಾಲ್ ಹಸರಂಗ ಕೈನಲ್ಲಿ ಸೆಕೆಂಡ್‍ಗಳ ಕಾಲ ಹೋಲ್ಡ್ ಆಗಿತ್ತು. ಆದರೆ ಅಂಪೈರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ. ಇದನ್ನೂ ಓದಿ: ಸೋಲಿನ ಬಳಿಕ ನಾಯಕ ರಾಹುಲ್‌ನನ್ನು ದಿಟ್ಟಿಸಿದ ಗಂಭೀರ್ – ನೆಟ್ಟಿಗರಿಂದ ಟ್ರೋಲ್

    ಇತ್ತ ಆರ್‌ಸಿಬಿ ಆಟಗಾರರು ಕೂಡ ಈ ಬಗ್ಗೆ ಹೆಜ್ಜೆ ಗಮನಹರಿಸಲಿಲ್ಲ. ಆದರೆ ಹಸರಂಗ ಕೈನಲ್ಲಿ ಬಾಲ್ ಕೆಲ ಸೆಕೆಂಡ್‍ಗಳ ಕಾಲ ಹೋಲ್ಡ್ ಆಗಿದ್ದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ನಾವು ಸೋಲಲು ಇದೇ ಕಾರಣ – ಬೇಸರ ವ್ಯಕ್ತಪಡಿಸಿದ ಕೆ.ಎಲ್ ರಾಹುಲ್

    https://twitter.com/Indrabeing/status/1529518913352273921

    ಐಸಿಸಿ ನಿಯಮವೇನು?
    ಐಸಿಸಿ ನಿಯಮ 33.3 ಪ್ರಕಾರ ಕ್ಯಾಚ್ ಪ್ರಕ್ರಿಯೆಯು ಬಾಲ್ ಮೊದಲ ಬಾರಿಗೆ ಫೀಲ್ಡರ್ ಸಂಪರ್ಕಕ್ಕೆ ಬಂದಾಗಿನಿಂದ ಪ್ರಾರಂಭವಾಗುತ್ತದೆ. ಬಾಲ್ ಮತ್ತು ಫೀಲ್ಡರ್ ಸ್ವಂತ ಚಲನೆ ಮತ್ತು ಬಾಲ್ ಎರಡರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆದಾಗ ಕೊನೆಗೊಳ್ಳುತ್ತದೆ. ಈ ವೇಳೆ ಸ್ವಂತ ಚಲನೆ ಅಥವಾ ಬಾಲ್ ಮೇಲಿನ ನಿಯಂತ್ರಣ ಕಳೆದುಕೊಂಡರೇ ಇದು ಕ್ಯಾಚ್ ಎಂದು ಪರಿಗಣಿಸಲಾಗುವುದಿಲ್ಲ.

    ಈ ನಿಯಮದ ಪ್ರಕಾರ ಹಸರಂಗ ಹಿಡಿದ ಕ್ಯಾಚ್‌ ನಾಟೌಟ್‌ ಎಂಬ ತೀರ್ಮಾನಕ್ಕೆ ಬಂತು. ಇತ್ತ ಫೀಲ್ಡಿಂಗ್‌ನಲ್ಲಿ ಮಿಂಚಿದ ಹಸರಂಗ 5 ರನ್‌ಗಳನ್ನು ಸೇವ್‌ ಮಾಡಿ ತಂಡದ ಗೆಲುವಿಗೆ ನೆರವಾದರು.

     

  • ನಾವು ಸೋಲಲು ಇದೇ ಕಾರಣ – ಬೇಸರ ವ್ಯಕ್ತಪಡಿಸಿದ ಕೆ.ಎಲ್ ರಾಹುಲ್

    ನಾವು ಸೋಲಲು ಇದೇ ಕಾರಣ – ಬೇಸರ ವ್ಯಕ್ತಪಡಿಸಿದ ಕೆ.ಎಲ್ ರಾಹುಲ್

    ಕೋಲ್ಕತ್ತಾ: ಆರ್‌ಸಿಬಿ ವಿರುದ್ಧದ ಎಲಿಮಿನೇಟರ್ ಪಂದ್ಯ ಸೋತ ಬಳಿಕ ಲಕ್ನೋ ತಂಡದ ನಾಯಕ ಕೆ.ಎಲ್ ರಾಹುಲ್ ಸೋಲಿಗೆ ತಂಡದ ಫೀಲ್ಡಿಂಗ್ ಮುಖ್ಯ ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಾವು ಪಂದ್ಯ ಕೈಚೆಲ್ಲಲು ಪ್ರಮುಖ ಕಾರಣ ಸುಲಭ ಕ್ಯಾಚ್‍ಗಳನ್ನು ಕೈಚೆಲ್ಲಿಕೊಂಡಿದ್ದು. ಹೌದು ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ ಓರ್ವ ಶತಕ ಸಿಡಿಸಿ ಮಿಂಚಿದಾಗ ಎದುರಾಳಿ ತಂಡಕ್ಕೆ ಒತ್ತಡ ಹೆಚ್ಚಾಗುತ್ತದೆ. ರಜತ್ ಪಾಟಿದರ್ ಉತ್ತಮವಾಗಿ ಆಡಿದರು ಆದರೆ ಅವರ ಮೂರು ಕ್ಯಾಚ್‍ಗಳನ್ನು ಕೈಚೆಲ್ಲಿ ಕೈ ಸುಟ್ಟುಕೊಂಡಿದ್ದೇವೆ ಎಂದು ಪಂದ್ಯದ ಬಳಿಕ ರಾಹುಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಕ್ರಿಕೆಟ್ ಚಾಂಪಿಯನ್‍ಷಿಪ್‍ಗೆ ಮಾನ್ಯತೆ ಪಡೆದ ಐರ್ಲೆಂಡ್, ಬಾಂಗ್ಲಾದೇಶ

    ನಮ್ಮ ತಂಡ ಹೊಸ ತಂಡ ಹಲವು ತಪ್ಪುಗಳ ಮಧ್ಯೆ ಪ್ಲೇ ಆಫ್‍ಗೆ ತಲುಪಿರುವುದು ಖುಷಿ ನೀಡಿದೆ. ಮುಂದಿನ ಆವೃತ್ತಿಗೆ ಮತ್ತಷ್ಟು ಬಲಿಷ್ಠ ತಂಡವಾಗಿ ವಾಪಾಸ್ ಆಗುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ನೀಡಿದ ಸಾಲು ಸಾಲು ಕ್ಯಾಚ್‍ಗಳನ್ನು ಕೈಚೆಲ್ಲಿದ್ದು ಲಕ್ನೋ ಸೋಲಿಗೆ ಪ್ರಮುಖ ಕಾರಣವಾಯಿತು. ಅದರಲ್ಲೂ ನಾಯಕ ರಾಹುಲ್ ಕೂಡ ಕ್ಯಾಚ್ ಒಂದನ್ನು ಬಿಟ್ಟಿದ್ದರು. ಇತ್ತ ಮೂರು ಬಾರಿ ಸಿಕ್ಕ ಜೀವದಾನದಿಂದಾಗಿ ಪಾಟಿದರ್ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿ ಅಜೇಯ 112 ರನ್ (54 ಎಸೆತ, 12 ಬೌಂಡರಿ, 7 ಸಿಕ್ಸ್) ಸಿಡಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಆ ಬಳಿಕ ರಾಹುಲ್ ತಂಡದ ಗೆಲುವಿಗೆ ಶ್ರಮಿಸದರೂ ಅವರ ಆಟ ಗೆಲುವಿನ ದಡ ಸೇರಿಸುವಲ್ಲಿ ಎಡವಿತು. ಆರ್‌ಸಿಬಿ ಬೌಲರ್‌ಗಳು ಡೆತ್ ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ಮಾಡಿದ್ದು ಮತ್ತು ಫೀಲ್ಡರ್‌ಗಳು ರನ್‍ಗಳಿಗೆ ಕಡಿವಾಣ ಹಾಕಿದ್ದು ಆರ್‌ಸಿಬಿ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಿತ್ತು. ಇದರಿಂದ ಬೆಂಗಳೂರು 14 ರನ್‍ಗಳ ಅಂತರದ ಜಯದೊಂದಿಗೆ ಎರಡನೇ ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟಿದೆ. ಇದನ್ನೂ ಓದಿ: ಪೆಟ್ರೋಲ್ ಸಿಗುತ್ತಿಲ್ಲ, ಎಟಿಎಮ್‍ನಲ್ಲಿ ಹಣವಿಲ್ಲ – ಪಾಕ್ ದುಸ್ಥಿತಿ ಬಿಚ್ಚಿಟ್ಟ ಹಫೀಜ್

    ಎರಡನೇ ಕ್ವಾಲಿಫೈಯರ್ ಪಂದ್ಯ ಅಹಮದಾಬಾದ್‍ನಲ್ಲಿ ಮೇ 27 ಶುಕ್ರವಾರ ನಡೆಯಲಿದ್ದು, ರಾಜಸ್ಥಾನ ಮತ್ತು ಬೆಂಗಳೂರು ನಡುವಿನ ಪಂದ್ಯದಲ್ಲಿ ಗೆದ್ದ ತಂಡ ಗುಜರಾತ್ ತಂಡದೊಂದಿಗೆ ಫೈನಲ್ ಪಂದ್ಯವಾಡಲಿದೆ.