Tag: LSG

  • RCB ವಿರುದ್ಧದ ಪಂದ್ಯದಲ್ಲಿ ನಾನಾ ಅವತಾರ – ಪಂತ್‌ ಸೇರಿ ಎಲ್‌ಎಸ್‌ಜಿಗೆ ಬಿತ್ತು ಭಾರಿ ದಂಡ

    RCB ವಿರುದ್ಧದ ಪಂದ್ಯದಲ್ಲಿ ನಾನಾ ಅವತಾರ – ಪಂತ್‌ ಸೇರಿ ಎಲ್‌ಎಸ್‌ಜಿಗೆ ಬಿತ್ತು ಭಾರಿ ದಂಡ

    – ನಿಧಾನಗತಿಯ ಓವರ್‌ ಕಾಯ್ದುಕೊಂಡಿದ್ದಕ್ಕೆ ರಿಷಭ್‌ ಪಂತ್‌ಗೆ 30 ಲಕ್ಷ ಫೈನ್‌

    ಲಕ್ನೋ: ಐಪಿಎಲ್‌ ಟೂರ್ನಿಯ ಆರ್‌ಸಿಬಿ (RCB) ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಿಷಭ್ ಪಂತ್ (Rishabh Pant) ಸೇರಿ ಎಲ್‌ಎಸ್‌ಜಿ (LSG) ತಂಡಕ್ಕೆ ಬಿಸಿಸಿಐ ದಂಡ ವಿಧಿಸಿದೆ.

    ಮಂಗಳವಾರ ನಡೆದ ಲೀಗ್‌ ಹಂತದ ಕೊನೆ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಅವರಿಗೆ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಾಧ್ಯಮ ಸಲಹಾ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಆರ್‌ಸಿಬಿ ಕ್ವಾಲಿಫೈಯರ್‌ 1 ಎಂಟ್ರಿಗೆ ಕೊಡುಗೆ ನೀಡಿದ ಕೊಹ್ಲಿಗೆ ದಿನೇಶ್‌ ಕಾರ್ತಿಕ್‌ ವಿಶೇಷ ಗೌರವ

    ಐಪಿಎಲ್‌ನ ಕನಿಷ್ಠ ಓವರ್ ದರ ಅಪರಾಧಗಳಿಗೆ ಸಂಬಂಧಿಸಿದಂತೆ ನೀತಿ ಸಂಹಿತೆಯ ಅಡಿಯಲ್ಲಿ ಮೂರನೇ ಬಾರಿಗೆ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ, ರಿಷಭ್ ಪಂತ್‌ಗೆ 30 ಲಕ್ಷ ದಂಡ ವಿಧಿಸಲಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಪ್ಲೇಯಿಂಗ್ XI ನ ಉಳಿದ ಸದಸ್ಯರಿಗೆ ತಲಾ 12 ಲಕ್ಷ ಅಥವಾ ಅವರ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಲಾಗಿದೆ.

    ಮಂಗಳವಾರ ನಡೆದ ರೋಚಕ ಪಂದ್ಯದಲ್ಲಿ ಲಕ್ನೋ ವಿರುದ್ಧ ಆರ್‌ಸಿಬಿ ವಿಕೆಟ್‌ಗಳ ಸೋಲನುಭವಿಸಿತು. ಲಕ್ನೋ ತಂಡದ ಐಪಿಎಲ್ 2025 ಅಭಿಯಾನವು ಅವರ ತವರು ನೆಲದಲ್ಲಿ ಕಹಿ ಅನುಭವದೊಂದಿಗೆ ಕೊನೆಗೊಂಡಿತು. ಇದನ್ನೂ ಓದಿ: ಆರ್‌ಸಿಬಿಯಲ್ಲಿರುವ ಅಣ್ಣ ಹುರಿದುಂಬಿಸಿದ್ರು, ನಾನು ನನ್ನ ಆಟವಾಡಿದೆ: ಜಿತೇಶ್‌ ಶರ್ಮಾ

    ಪಂಜಾಬ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದು, ಆರ್‌ಸಿಬಿ ಎರಡು ಹೆಚ್ಚುವರಿ ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಏರಿದೆ. ಆರ್‌ಸಿಬಿ ಗುರುವಾರ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯವನ್ನು ಆಡಲಿದೆ. ಇತ್ತ ಮೂರನೇ ಸ್ಥಾನಕ್ಕೆ ಕುಸಿದ ಗುಜರಾತ್ ಟೈಟಾನ್ಸ್ ಶುಕ್ರವಾರ ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿದೆ.

  • ಆರ್‌ಸಿಬಿಯಲ್ಲಿರುವ ಅಣ್ಣ ಹುರಿದುಂಬಿಸಿದ್ರು, ನಾನು ನನ್ನ ಆಟವಾಡಿದೆ: ಜಿತೇಶ್‌ ಶರ್ಮಾ

    ಆರ್‌ಸಿಬಿಯಲ್ಲಿರುವ ಅಣ್ಣ ಹುರಿದುಂಬಿಸಿದ್ರು, ನಾನು ನನ್ನ ಆಟವಾಡಿದೆ: ಜಿತೇಶ್‌ ಶರ್ಮಾ

    ಲಕ್ನೋ: ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿ ತಂಡವನ್ನು ಕ್ವಾಲಿಫೈಯರ್‌ಗೆ ತೆಗೆದುಕೊಂಡ ಹೋದ ನಾಯಕ ಜಿತೇಶ್‌ ಶರ್ಮಾ (Jitesh Sharma) ಆರ್‌ಸಿಬಿಯಲ್ಲಿರುವ (RCB) ಅಣ್ಣನ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

    ಆರ್‌ಸಿಬಿಯಲ್ಲಿರುವ ಅಣ್ಣ ಯಾರೂ ಅಲ್ಲ. ದಿನೇಶ್‌ ಕಾರ್ತಿಕ್‌ (Dinesh Karthik) ಅವರನ್ನೇ ಜಿತೇಶ್‌ ಶರ್ಮಾ ಅಣ್ಣ ಎಂದು ಸಂಬೋಧಿಸಿ ಗೌರವ ನೀಡಿದ್ದಾರೆ.

    ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ಜಿತೇಶ್‌ ಶರ್ಮಾ ಅವರನ್ನು ಮುರಳಿ ಕಾರ್ತಿಕ್‌ ಮಾತನಾಡಿಸಿದರು. ಈ ವೇಳೆ, ವಿರಾಟ್ ಕೊಹ್ಲಿ ಔಟಾದಾಗ ನಾನು ಈ ಬಾರಿ ಆಟ ಆಡಲೇಬೇಕು ಎಂದು ನಿರ್ಧರಿಸಿದೆ. ನನ್ನ ಬಳಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇದೆ ಎಂದು ನನ್ನ ಗುರು, ಮಾರ್ಗದರ್ಶಕ ಡಿಕೆ ಅಣ್ಣ ಹೇಳಿ ಹುರಿದುಂಬಿಸಿದರು. ಅದರಂತೆ ನಾನು ನನ್ನ ಆಟವಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: IPL 2025 | ಪಂದ್ಯ ಸೋತು ಹೃದಯ ಗೆದ್ದ ಪಂತ್‌

     

     

    ನನಗೆ ಅನಿಸಿಕೆಗಳನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ನಾನು ಆ ರೀತಿಯ ಆಡಿ ಪಂದ್ಯವನ್ನು ಗೆಲ್ಲಿಸಿದ್ದೇನೆ ಎಂದು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: 9 ವರ್ಷಗಳ ಬಳಿಕ ಕ್ವಾಲಿಫೈಯರ್‌ 1ಗೆ ಲಗ್ಗೆಯಿಟ್ಟ ಆರ್‌ಸಿಬಿ

    ಎಲ್ಲಾ ಹೊರೆ ನನ್ನ ಮೇಲಿರುವುದರಿಂದ ನನಗೆ ಒತ್ತಡ ಇತ್ತು. ಆದರೆ ನನ್ನೊಂದಿಗೆ ವಿರಾಟ್, ಕೃನಾಲ್, ಭುವಿ ಇದ್ದಾರೆ.  ನಾವು ಚೆನ್ನಾಗಿ ಆಡಲು ಪ್ರಯತ್ನಿಸುತ್ತೇವೆ. ಮುಂದಿನ ಪಂದ್ಯದಲ್ಲೂ ಇದೇ ರೀತಿಯ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

    ಲಕ್ನೋ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 11.2 ಓವರ್‌ಗಳಲ್ಲಿ 123 ರನ್‌ಗಳಿಸಿದ್ದಾಗ 54 ರನ್‌(30 ಎಸೆತ, 10 ಬೌಂಡರಿ) ಹೊಡೆದಿದ್ದ ಕೊಹ್ಲಿ ಔಟಾಗಿದ್ದರು.  ನಂತರ ಮುರಿಯದ 5ನೇ ವಿಕೆಟಿಗೆ ಮಯಾಂಕ್‌ ಅಗರ್‌ವಾಲ್‌ ಮತ್ತು ಜಿತೇಶ್‌ ಶರ್ಮಾ 45 ಎಸೆತಗಳಲ್ಲಿ 107 ರನ್‌ ಜೊತೆಯಾಟವಾಡಿ ಪಂದ್ಯವನ್ನು ಗೆಲ್ಲಿಸಿದ್ದಾರೆ.

    107 ರನ್‌ಗಳ ಜೊತೆಯಾಟದಲ್ಲಿ ಮಯಾಂಕ್‌ 12 ಎಸೆತಗಳಲ್ಲಿ 20 ರನ್‌ ಹೊಡೆದರೆ ಜಿತೇಶ್‌ ಶರ್ಮಾ 85(33 ಎಸೆತ, 8 ಬೌಂಡರಿ, 6 ಸಿಕ್ಸ್‌) ಹೊಡೆಯುವ ಮೂಲಕ ಗೆಲುವಿನ ದಡ ಸೇರಿಸಿದರು.

  • ಕೇವಲ 26 ರನ್‌ ಗಳಿಸಿದರೂ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ

    ಕೇವಲ 26 ರನ್‌ ಗಳಿಸಿದರೂ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ

    – ಐಪಿಎಲ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಕೂಲ್‌ ಕ್ಯಾಪ್ಟನ್‌

    ಚೆನ್ನೈ: ಲಕ್ನೋ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಎಂ.ಎಸ್‌.ಧೋನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ.

    ನಿನ್ನೆ ನಡೆದ ಪಂದ್ಯದಲ್ಲಿ 11 ಬಾಲ್‌ಗೆ ಧೋನಿ ಗಳಿಸಿದ್ದು 26 ರನ್‌. ಹೀಗಿದ್ದರೂ ಅವರಿಗೆ ಪ್ಲೇಯರ್‌ ಆಫ್‌ ದಿ ಮ್ಯಾಚ್‌ ಅವಾರ್ಡ್‌ ನೀಡಲಾಗಿದೆ. ಅದು ಯಾಕೆ ಎಂಬ ಕತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಸ್ವತಃ ಧೋನಿಯೇ, ‘ನನಗೆ ಯಾಕೆ ಈ ಪ್ರಶಸ್ತಿ ನೀಡಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ.

    ಎಂಎಸ್ ಧೋನಿ 11 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ ಅಜೇಯ 26 ರನ್ ಗಳಿಸಿದರು. ಎಲ್‌ಎಸ್‌ಜಿ ನೀಡಿದ 166 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಜಯ ಸಾಧಿಸಿತು. ತಂಡ ಐದು ವಿಕೆಟ್‌ ಕಳೆದುಕೊಂಡಿದ್ದಾಗ, ಶಿವಂ ದುಬೆ ಮತ್ತು ಧೋನಿ 57 ರನ್‌ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಧೋನಿ ಪರಿಣಾಮಕಾರಿ ಇನ್ನಿಂಗ್ಸ್‌ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

    ಹಿಂದಿನ ಐದು ಪಂದ್ಯಗಳಲ್ಲಿ ಸತತ ಸೋಲಿನ ಸರಣಿಯನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಕೊನೆಗೊಳಿಸಿದೆ. ನಾಯಕ ಎಂ.ಎಸ್.ಧೋನಿ ರನ್‌ ಚೇಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು. ತಾನೊಬ್ಬ ಉತ್ತಮ ಫಿನಿಷರ್‌ಗಳಲ್ಲಿ ಒಬ್ಬ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದರು.

    ಐಪಿಎಲ್ ಇತಿಹಾಸದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಸಿಎಸ್‌ಕೆ ನಾಯಕ ಪಾತ್ರರಾಗಿದ್ದಾರೆ. 43 ವರ್ಷ ವಯಸ್ಸಿನ ಧೋನಿ, 2014ರ ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ 42ರ ಪ್ರವೀಣ್ ತಾಂಬೆ ಅವರ ದಾಖಲೆಯನ್ನು ಮುರಿದಿದ್ದಾರೆ.

    ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಆಟಗಾರರು ಇವರು..
    43 ವರ್ಷ – ಎಂಎಸ್ ಧೋನಿ vs ಎಲ್‌ಎಸ್‌ಜಿ, ಲಕ್ನೋ, 2025
    42 ವರ್ಷ – ಪ್ರವೀಣ್ ತಾಂಬೆ vs ಕೆಕೆಆರ್, ಅಹಮದಾಬಾದ್, 2014
    42 ವರ್ಷ – ಪ್ರವೀಣ್ ತಾಂಬೆ vs ಆರ್‌ಸಿಬಿ, ಅಬುಧಾಬಿ, 2014

  • ಕೊನೆಗೂ ಗೆದ್ದ ಚೆನ್ನೈ – ಲಕ್ನೋ ವಿರುದ್ಧ ರೋಚಕ ಜಯ

    ಕೊನೆಗೂ ಗೆದ್ದ ಚೆನ್ನೈ – ಲಕ್ನೋ ವಿರುದ್ಧ ರೋಚಕ ಜಯ

    ಲಕ್ನೋ: ಕೊನೆಯಲ್ಲಿ ನಾಯಕ ಧೋನಿ (MS Dhoni) ಮತ್ತು ಶಿವಂ ದುಬೆ (Shivam Dube) ಅವರ ಸ್ಫೋಟಕ ಆಟದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಲಕ್ನೋ ಸೂಪರ್‌ ಜೈಂಟ್ಸ್‌ (LSG) ವಿರುದ್ಧ ರೋಚಕ 4 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಲಕ್ನೋ 7 ವಿಕೆಟ್‌ ನಷ್ಟಕ್ಕೆ 166 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಇನ್ನು ಮೂರು ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ ನಷ್ಟಕ್ಕೆ 5 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿತು.

     

    ಚೆನ್ನೈ ಕಳೆದ 5 ಪಂದ್ಯಗಳಲ್ಲಿ ಸತತ ಸೋಲನ್ನು ಅನುಭವಿಸಿತ್ತು. ಈಗ 7ನೇ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ನೀಡಿದೆ. ಮುರಿಯದ 6ನೇ ವಿಕೆಟಿಗೆ ಧೋನಿ ಮತ್ತು ದುಬೆ 28 ಎಸೆತಗಳಲ್ಲಿ 57 ರನ್‌ ಹೊಡೆಯುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಧೋನಿ ಔಟಾದಗೇ 26 ರನ್‌ (11 ಎಸೆತ, 4 ಬೌಂಡರಿ) ಶಿವಂ ದುಬೆ ಔಟಾಗದೇ 43 ರನ್‌ (37 ಎಸೆತ, 3 ಬೌಂಡರಿ, 2 ಸಿಕ್ಸ್‌ ) ಹೊಡೆದರು.

    ಚೆನ್ನೈ ಆರಂಭ ಉತ್ತಮವಾಗಿತ್ತು. ಮೊದಲ ವಿಕೆಟಿಗೆ ರಚಿನ್‌ ರವೀಂದ್ರ ಮತ್ತು ಶೇಕ್‌ ರಶೀದ್‌ 52 ರನ್‌ ಜೊತೆಯಾಟವಾಡಿದರು. ಇಂದು ಮೊದಲ ಪಂದ್ಯವಾಡಿದ ಶೇಕ್‌ ರಶೀದ್‌ 27 ರನ್‌ ಹೊಡೆದರೆ ರಚಿನ್‌ ರವೀಂದ್ರ 37 ರನ್‌(22 ಎಸೆತ, 5 ಬೌಂಡರಿ) ಹೊಡೆದು ವಿಕೆಟ್‌ ಒಪ್ಪಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡರೂ ದುಬೆ ತಾಳ್ಮೆಯಿಂದ ಇನ್ನಿಂಗ್ಸ್‌ ಕಟ್ಟಿದ್ದರು.

     

    ಲಕ್ನೋ ಪರ ನಾಯಕ ರಿಷಭ್‌ ಪಂತ್‌ ಈ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿದರು. 63 ರನ್‌(49 ಎಸೆತ, 4 ಬೌಂಡರಿ, 4 ಸಿಕ್ಸ್‌) ಆರಂಭಿಕ ಆಟಗಾರ ಮಿಚೆಲ್‌ ಮಾರ್ಷ್‌ 30 ರನ್‌( 25 ಎಸೆತ, 2 ಬೌಂಡರಿ, 2 ಸಿಕ್ಸ್‌) ಹೊಡೆದು ‌ಔಟಾದರು. ನೂರ್‌ ಅಹ್ಮದ್ ಮತ್ತು ಪತಿರಾನ ತಲಾ ಎರಡು ವಿಕೆಟ್‌ ಪಡೆದರು.

  • ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಈ ಐಪಿಎಲ್‌ನಲ್ಲಿ ಪೂರನ್‌ ದಾಖಲೆ

    ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಈ ಐಪಿಎಲ್‌ನಲ್ಲಿ ಪೂರನ್‌ ದಾಖಲೆ

    ಹೈದರಾಬಾದ್‌: ಲಕ್ನೋ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ನಿಕೋಲಸ್ ಪೂರನ್ (Nicholas Pooran) ಅವರು ಐಪಿಎಲ್‌ನಲ್ಲಿ (IPL) ವೇಗದ ಅರ್ಧಶತಕ ಸಿಡಿಸಿ ಈ ಐಪಿಎಲ್‌ನಲ್ಲಿ ದಾಖಲೆ ಬರೆದಿದ್ದಾರೆ.

    ಸನ್‌ರೈಸರ್ಸ್‌ ವಿರುದ್ಧ ಕೇವಲ 18 ಎಸೆತಗಳಲ್ಲಿ 50 ರನ್‌ ಸಿಡಿಸಿ ಪೂರನ್‌ ಸಾಧನೆ ಮಾಡಿದ್ದಾರೆ. 4 ರನ್‌ಗೆ 1 ವಿಕೆಟ್‌ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಆಗಮಿಸಿದ ಪೂರನ್‌ ಬೌಂಡರಿ, ಸಿಕ್ಸ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

    ಪೂರನ್‌ ಔಟಾದಾಗ ತಂಡದ ಮೊತ್ತ 120 ಆಗಿತ್ತು. ಈ ಪೈಕಿ ಪೂರನ್‌ ಒಬ್ಬರೇ 70 ರನ್‌ (26 ಎಸೆತ, 6 ಬೌಂಡರಿ, 6 ಸಿಕ್ಸ್‌) ಚಚ್ಚಿದ್ದರು. ಇದನ್ನೂ ಓದಿ: ಕಿಂಗ್ಸ್ ಗೆಲುವಿಗೆ ಕನ್ನಡಿಗನ ಕಾಣಿಕೆ – ವೈಶಾಖ್ ವಿಜಯ್ ಯಾರು?

    2025ರ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಆಟಗಾರರು
    ಪೂರನ್‌ (ಎಲ್‌ಎಸ್‌ಜಿ) – 50 ರನ್‌, 18 ಎಸೆತ
    ಮಾರ್ಷ್‌ (ಎಲ್‌ಎಸ್‌ಜಿ) – 50 ರನ್‌, 21 ಎಸೆತ
    ಹೆಡ್‌(ಎಸ್‌ಆರ್‌ಹೆಚ್‌) – 50 ರನ್‌, 21 ಎಸೆತ

    ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಯಶಸ್ವಿ ಜೈಸ್ವಾಲ್‌ ಹೆಸರಿನಲ್ಲಿದೆ. ಜೈಸಸ್ವಾಲ್‌ 13 ಎಸೆತದಲ್ಲಿ ಅರ್ಧಶತಕ ಸಿಡಿಸಿದರೆ ಕೆಎಲ್‌ ರಾಹುಲ್‌ 14 ಎಸೆತದಲ್ಲಿ 50 ಹೊಡೆದಿದ್ದಾರೆ.

  • IPL 2025 | 10 ತಂಡಗಳ ನಾಯಕರ ಹೆಸರು ಫೈನಲ್‌ – 9 ಮಂದಿ ಭಾರತೀಯರದ್ದೇ ಆರ್ಭಟ

    IPL 2025 | 10 ತಂಡಗಳ ನಾಯಕರ ಹೆಸರು ಫೈನಲ್‌ – 9 ಮಂದಿ ಭಾರತೀಯರದ್ದೇ ಆರ್ಭಟ

    ಐಸಿಸಿ ಚಾಂಪಿಯನ್ಸ್ ಟ್ರೋಫಿ, ಡಬ್ಲ್ಯೂಪಿಎಲ್‌ ಬಳಿಕ ಕ್ರಿಕೆಟ್ ಪ್ರಿಯರ ಚಿತ್ತ ಈಗ ಐಪಿಎಲ್ ಕಡೆ ತಿರುಗಿದೆ. ಪ್ರತಿಷ್ಠಿಯ 18ನೇ ಆವೃತ್ತಿಯ ಈ ಕ್ರೀಡಾಕೂಟ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್‌ ಪ್ರೇಮಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈಗಾಗಲೇ ಎಲ್ಲಾ ಹತ್ತು ಫ್ರಾಂಚೈಸ್ ಗಳು ತಮ್ಮತಮ್ಮ ನಾಯಕರ ಹೆಸರನ್ನು ಆಯಾ ಫ್ರಾಂಚೈಸಿಗಳು ಅಂತಿಮಗೊಳಿಸಿವೆ.

    ಹಿಂದೆಲ್ಲಾ ಟೂರ್ನಿಗಳಲ್ಲಿ ವಿದೇಶಿ ಆಟಗಾರರೇ ಹೆಚ್ಚಾಗಿ ನಾಯಕರಾಗಿದ್ದ ಉದಾಹರಣೆಗಳಿವೆ. ಆದರೆ, ಈ ಬಾರಿಯ ಐಪಿಎಲ್ ನಲ್ಲಿ ಒಬ್ಬರು ಮಾತ್ರವೇ ವಿದೇಶಿ ಆಟಗಾರ ನಾಯಕನಾಗಿದ್ದು, ಮಿಕ್ಕೆಲ್ಲ ತಂಡಗಳಿಗೆ ಟೀಂ ಇಂಡಿಯಾದ ಆಟಗಾರರೇ ನಾಯಕರಾಗಿರುವುದು ವಿಶೇಷ. ಈ ಮೊದಲು ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್, ಆಡಂ ಗಿಲ್ಕ್ರಿಸ್ಟ್, ಶೇನ್ ವಾರ್ನ್, ಸ್ಟೀವನ್ ಸ್ಮಿತ್, ಕ್ಯಾಮರೂನ್ ವೈಟ್, ಶ್ರೀಲಂಕಾದ ಕುಮಾರ ಸಂಗಕ್ಕರ, ನ್ಯೂಜಿಲ್ಯಾಂಡ್ ದೇಶದ ಕೇನ್ ವಿಲಿಯಮ್ಸನ್, ಡೇನಿಯಲ್ ವೆಟ್ಟೋರಿ, ಬ್ರಿಂಡನ್‌ ಮಕಲಂ ಮುಂತಾದ ವಿದೇಶಿ ಆಟಗಾರರು ಫ್ರಾಂಚೈಸ್ ನಾಯಕರಾಗಿದ್ದರು.

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನೂ ಮೂವರು ವಿದೇಶಿ ಆಟಗಾರರು ಮುನ್ನಡೆಸಿದ್ದರು. 2009ರಲ್ಲಿ ಕೆವಿನ್ ಪೀಟರ್ಸನ್, 2011 ಮತ್ತು 2012ರಲ್ಲಿ ಡೇನಿಯಲ್ ವೆಟ್ಟೋರಿ ಮತ್ತು 2022, 2023 ಮತ್ತು 2024ರ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ನಾಯಕರಾಗಿದ್ದರು. ಇದೇ ರೀತಿ ಬಹುತೇಕ ಎಲ್ಲಾ ಫ್ರಾಂಚೈಸ್ ನಾಯಕರೂ ಕೆಲವು ಆವೃತ್ತಿಗಳಲ್ಲು ನಾಯಕರಾಗಿದ್ದರು. ಉದಾಹರಣೆಗೆ, ಮುಂಬೈ ಇಂಡಿಯನ್ಸ್ ತಂಡವನ್ನು ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ (2008), ವೆಸ್ಟ್ ಇಂಡೀಸ್ ತಂಡದ ಡ್ವೇನ್‌ ಬ್ರಾವೋ (2010) ಮತ್ತು ಕೀರನ್ ಪೊಲಾರ್ಡ್ (2014 – 2021) ಸ್ಟ್ಯಾಂಡ್ ಇನ್ ನಾಯಕರಾಗಿದ್ದರು. ಆದ್ರೆ 18ನೇ ಆವೃತ್ತಿಯಲ್ಲಿ ಭಾರತೀಯರ ಆರ್ಭಟವೇ ಜೋರಾಗಿದೆ. 10 ತಂಡಗಳ ಪೈಕಿ 9 ಮಂದಿ ಭಾರತೀಯರೇ ನಾಯಕರಾಗಿ ಮಿಂಚುತ್ತಿದ್ದಾರೆ.

    ಚಾಂಪಿಯನ್‌ಗೆ ಪಟ್ಟ ಕಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌
    ಡೆಲ್ಲಿ ಕ್ಯಾಪಿಟಲ್ಸ್ ತಂಡವೂ ನಾಯಕರು ಯಾರು ಎನ್ನುವುದನ್ನು ಶುಕ್ರವಾರ (ಮಾ. 14) ಬಹಿರಂಗಗೊಳಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಆಲ್ರೌಂಡ್ ಸಾಧನೆ ತೋರಿದ ಮತ್ತು ತಂಡದ ಸಹ ಆಟಗಾರರಿಂದ ಬಾಪೂ ಎಂದು ಕರೆಯಲ್ಪಡುವ ಅಕ್ಷರ್ ಪಟೇಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕರ್ನಾಟಕ ಮೂಲದ ಕೆ.ಎಲ್.ರಾಹುಲ್ ಅವರನ್ನೂ 14 ಕೋಟಿಗೆ ಖರೀದಿಸಿತ್ತು. ಅಕ್ಷರ್ ಪಟೇಲ್ ಮತ್ತು ಕೆ.ಎಲ್.ರಾಹುಲ್ ನಡುವೆ ನಾಯಕತ್ವಕ್ಕೆ ಪೈಪೋಟಿ ನಡೆದಿತ್ತು. ಆದರೆ, ನಾಯಕನ ಜವಾಬ್ದಾರಿ ರಾಹುಲ್ ಬೇಡ ಎಂದ ಕಾರಣಕ್ಕಾಗಿ ಅಕ್ಷರ್ ಪಟೇಲ್‌ಗೆ ಕ್ಯಾಪ್ಟೆನ್ಸಿ ಒಲಿದು ಬಂತು ಎಂದು ಹೇಳಲಾಗುತ್ತಿದೆ.

    ಐಪಿಎಲ್‌ನ 10 ತಂಡಗಳು ಮತ್ತು ನಾಯಕರ ಪಟ್ಟಿ ಹೀಗಿದೆ…

    1. ಮುಂಬೈ ಇಂಡಿಯನ್ಸ್ – ಹಾರ್ದಿಕ್ ಪಾಂಡ್ಯ
    2. ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಜತ್ ಪಾಟೀದಾರ್
    3. ಕೋಲ್ಕತ ನೈಟ್ ರೈಡರ್ಸ್ – ಅಜಿಂಕ್ಯ ರಹಾನೆ
    4. ಚೆನ್ನೈ ಸೂಪರ್ ಕಿಂಗ್ಸ್ – ರುತುರಾಜ್ ಗಾಯಕ್ವಾಡ್
    5. ಗುಜರಾತ್ ಟೈಟನ್ಸ್ – ಶುಭ್ಮನ್ ಗಿಲ್
    6. ರಾಜಸ್ಥಾನ ರಾಯಲ್ಸ್ – ಸಂಜು ಸ್ಯಾಮ್ಸನ್
    7. ಲಕ್ನೋ ಸೂಪರ್ ಜೈಂಟ್ಸ್‌ – ರಿಷಭ್ ಪಂತ್
    8. ಪಂಜಾಬ್ ಕಿಂಗ್ಸ್ – ಶ್ರೇಯಸ್ ಐಯ್ಯರ್
    9. ಡೆಲ್ಲಿ ಕ್ಯಾಪಿಟಲ್ಸ್ – ಅಕ್ಷರ್ ಪಟೇಲ್
    10. ಸನ್ ರೈಸರ್ಸ್ ಹೈದರಾಬಾದ್ – ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ).
  • IPL 2025 | ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಿಷಬ್‌ ನೂತನ ಸಾರಥಿ

    IPL 2025 | ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಿಷಬ್‌ ನೂತನ ಸಾರಥಿ

    ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌-2025ರ ಆವೃತ್ತಿಗಾಗಿ ಟೀಂ ಇಂಡಿಯಾ ಆಟಗಾರ ರಿಷಬ್‌ ಪಂತ್‌ (Rishabh Pant) ಅವರನ್ನು ಲಕ್ನೋ ಸೂಪರ್‌ ಜೈಂಟ್ಸ್‌ (LSG) ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.

    ಕೆ.ಎಲ್‌ ರಾಹುಲ್‌ (KL Rahul) ಅವರನ್ನು ತಂಡದಿಂದ ಕೈಬಿಟ್ಟ ಬಳಿಕ ವಿಂಡೀಸ್‌ನ ಸ್ಫೋಟಕ ಆಟಗಾರ ನಿಕೋಲಸ್‌ ಪೂರನ್‌ ಅವರಿಗೆ ನಾಯಕತ್ವದ ಹೊಣೆ ನೀಡಲಾಗುತ್ತದೆ ಎಂಬ ವದಂತಿ ಹರಿದಾಡಿತ್ತು. ಆದ್ರೆ ವದಂತಿಗಳಿಗೆ ಬ್ರೇಕ್‌ ಹಾಕಿರುವ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ (Sanjiv Goenka) ಅವರು, ರಿಷಬ್‌ ಅವರಿಗೆ ನಾಯಕತ್ವದ ಹೊಣೆ ನೀಡಿದ್ದಾರೆ. ರಿಷಬ್‌ಗೆ ಜೆರ್ಸಿ ವಿತರಿಸಿದ ಫೋಟೋದೊಂದಿಗೆ ಮಾಹಿತಿಯನ್ನ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಿಜಯ್‌ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ

    ಇತಿಹಾಸದಲ್ಲೇ ದಾಖಲೆ ಬೆಲೆಗೆ ಹರಾಜು:
    2025ರ ಐಪಿಎಲ್‌ (IPL 2025) ಆವೃತ್ತಿಗೆ ನಡೆದ ಮೆಗಾ ಹರಾಜಿನಲ್ಲಿ ರಿಷಬ್‌ ಪಂತ್‌, ಐಪಿಎಲ್‌ ಇತಿಹಾಸದಲ್ಲೇ ದಾಖಲೆಯ ಬೆಲೆಗೆ ಹರಾಜಾದರು. 20.50 ಕೋಟಿ ರೂ.ವರೆಗೆ ಲಕ್ನೋ ತಂಡ ಬಿಡ್‌ ಮಾಡಿತ್ತು. ಈ ವೇಳೆ ಡೆಲ್ಲಿ ತಂಡ ಆರ್‌ಟಿಎಂ ಆಯ್ಕೆಗೆ ಮುಂದಾಯಿತು. ಪಂತ್‌ ಬಿಟ್ಟುಕೊಡದಿರಲು ಪಟ್ಟು ಹಿಡಿದ ಸಂಜೀವ್‌ ಗೋಯೆಂಕಾ ಏಕಾಏಕಿ 27 ಕೋಟಿ ರೂ.ಗಳಿಗೆ ಬೆಲೆ ಏರಿಸಿದರು. ದುಬಾರಿ ಬೆಲೆಗೆ ಪಂತ್‌ರನ್ನ ಖರೀದಿಸಲು ಡೆಲ್ಲಿ ಫ್ರಾಂಚೈಸಿ ಹಿಂದೆ ಸರಿಯಿತು. ಹಾಗಾಗಿ ಪಂತ್‌ 27 ಕೋಟಿ ರೂ.ಗಳಿಗೆ ಲಕ್ನೋ ತಂಡದ ಪಾಲಾದರು.

    ಅತಿಹೆಚ್ಚು ರನ್‌ ಗಳಿಸಿದ 22ನೇ ಆಟಗಾರ:
    ಐಪಿಎಲ್‌ ವೃತ್ತಿ ಜೀವನದಲ್ಲಿ ಈವರೆಗೆ 111 ಪಂದ್ಯಗಳನ್ನಾಡಿರುವ ರಿಷಬ್‌‌ ಪಂತ್‌ 3,248 ರನ್‌ ಗಳಿಸಿದ್ದಾರೆ. ಇದರಲ್ಲಿ 18 ಅರ್ಧಶತಕ ಹಾಗೂ 1 ಶತಕವೂ ಸೇರಿದೆ. ಈ ಮೂಲಕ ಅತಿಹೆಚ್ಚು ರನ್‌ ಗಳಿಸಿದ 22ನೇ ಆಟಗಾರನಾಗಿದ್ದಾರೆ. ಇದನ್ನೂ ಓದಿ: Kho Kho World Cup | ಭಾರತಕ್ಕೆ ಡಬಲ್‌ ಧಮಾಕ – ಮಹಿಳೆಯರು, ಪುರುಷರ ತಂಡಕ್ಕೆ ಖೋ ಖೋ ವಿಶ್ವಕಪ್‌ ಕಿರೀಟ

    2022ರಲ್ಲಿ ಐಪಿಎಲ್‌ಗೆ ಫ್ರಾಂಚೈಸಿ ಪದಾರ್ಪಣೆ:
    ಇನ್ನೂ 2022ರ ಆವೃತ್ತಿಯಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ಫ್ರಾಂಚೈಸಿ ಆರಂಭದ 2 ಆವೃತ್ತಿಗಳಲ್ಲಿ (2022, 2023) ಕೆ.ಎಲ್‌ ರಾಹುಲ್‌ ನಾಯಕತ್ವದಲ್ಲಿ ಪ್ಲೇ ಆಫ್‌ ಪ್ರವೇಶಿಸಿತ್ತು. 2024ರ ಆವೃತ್ತಿಯಲ್ಲಿ ಲೀಗ್‌ ಸುತ್ತಿನಲ್ಲೇ ಲಕ್ನೊ ತಂಡ ಹೊರಬಿದ್ದಿತು. ಹೀಗಾಗಿ ನಾಯಕತ್ವ ಬದಲಿಸುವ ತೀರ್ಮಾನಕ್ಕೆ ಸಂಜೀವ್‌ ಗೋಯೆಂಕಾ ಮುಂದಾದರು. ಇದನ್ನೂ ಓದಿ: ಸದ್ದಿಲ್ಲದೇ ಸಪ್ತಪದಿ ತುಳಿದ ಒಲಿಂಪಿಕ್ಸ್‌ ಪದಕ ವಿಜೇತ ನೀರಜ್ ಚೋಪ್ರಾ

  • IPL 2025 Auction: ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಪಂತ್‌ ಸೇಲ್‌ – 27 ಕೋಟಿಗೆ ಲಕ್ನೋ ಪಾಲು

    IPL 2025 Auction: ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಪಂತ್‌ ಸೇಲ್‌ – 27 ಕೋಟಿಗೆ ಲಕ್ನೋ ಪಾಲು

    ಪಿಎಲ್‌ 2025 ಮೆಗಾ ಹರಾಜಿನಲ್ಲಿ ರಿಷಬ್‌ ಪಂತ್‌ ದಾಖಲೆ ಬರೆದಿದ್ದಾರೆ. ಬರೋಬ್ಬರಿ 27 ಕೋಟಿಗೆ ಲಕ್ನೋ ಸೂಪರ್‌ಜೈಂಟ್ಸ್‌ ಪಾಲಾಗಿದ್ದಾರೆ. ಆ ಮೂಲಕ ಐಪಿಎಲ್‌ನಲ್ಲೇ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.

    ರಿಷಬ್‌ಗಾಗಿ ಲಕ್ನೋ ಫ್ರಾಂಚೈಸಿ ಮೊದಲು ಬಿಡ್‌ ಮಾಡಿತು. ಬಳಿಕ ಆರ್‌ಸಿಬಿ, ಎಸ್‌ಆರ್‌ಹೆಚ್‌ ಬಿಡ್‌ ಮಾಡಿದವು. 20.75 ಕೋಟಿಗೆ ಲಕ್ನೋ ಬಿಡ್‌ ಮಾಡಿತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ಆರ್‌ಟಿಎಂ ಬಳಸುವುದಾಗಿ ಹೇಳಿತು.

    ಎಲ್‌ಎಸ್‌ಜಿ ಬಿಡ್‌ ಮೊತ್ತವನ್ನು 27 ಕೋಟಿಗೆ ಏರಿಸಿದ್ದರಿಂದ ಡೆಲ್ಲಿ ಹಿಂದೆ ಸರಿಯಿತು. ಅಂತಿಮವಾಗಿ ಪಂತ್‌ ದಾಖಲೆ ಮೊತ್ತಕ್ಕೆ ಲಕ್ನೋ ಪಾಲಾದರು.

    ಐಪಿಎಲ್‌ ವೃತ್ತಿ ಜೀವನದಲ್ಲಿ ಈವರೆಗೆ 107 ಪಂದ್ಯಗಳನ್ನಾಡಿರುವ ರಿಷಬ್‌ ಪಂತ್‌ 3,284 ರನ್‌ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 18 ಅರ್ಧಶತಕಗಳು ಸೇರಿವೆ.

    ಇತ್ತೀಚೆಗೆ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಸಿಡಿಸಿದ್ದರು. ಟೀಂ ಇಂಡಿಯಾ ಸೋತ ಹೊರತಾಗಿಯೂ ಪಂತ್‌ ಅವರ ಬ್ಯಾಟಿಂಗ್‌ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಸಹಯವಾಗಿಯೇ ಜನಪ್ರಿಯತೆ ಹೆಚ್ಚಿಸಿತ್ತು.

  • IPL 2025: ಮರಳಿ ಆರ್‌ಸಿಬಿಗೆ ರಾಹುಲ್‌? – ಡೆಲ್ಲಿ ತೊರೆದು ಸಿಎಸ್‌ಕೆ ಸೇರಲಿದ್ದಾರೆ ರಿಷಭ್‌ ಪಂತ್‌?

    IPL 2025: ಮರಳಿ ಆರ್‌ಸಿಬಿಗೆ ರಾಹುಲ್‌? – ಡೆಲ್ಲಿ ತೊರೆದು ಸಿಎಸ್‌ಕೆ ಸೇರಲಿದ್ದಾರೆ ರಿಷಭ್‌ ಪಂತ್‌?

    ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೆ ಸದ್ಯದಲ್ಲೇ ಬಿಸಿಸಿಐ ದಿನಾಂಕ ನಿಗದಿ ಪಡಿಸಲಿದೆ. ಇದೇ ಜುಲೈ ತಿಂಗಳಾಂತ್ಯದ ವೇಳೆಗೆ ಬಿಸಿಸಿಐ (BCCI) ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ನಡುವೆ ಫ್ರಾಂಚೈಸಿಗಳಲ್ಲಿ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ.

    3 ವರ್ಷಗಳಿಗೊಮ್ಮೆ ನಡೆಯುವ ಮೆಗಾ ಹರಾಜಿನಲ್ಲಿ ಯಾವ ಯಾವ ದಿಗ್ಗಜ ಆಟಗಾರರು ಯಾವ ತಂಡವನ್ನು ಸೇರಲಿದ್ದಾರೆ ಅನ್ನೋ ಬಗ್ಗೆ ಕ್ರಿಕೆಟ್‌ ಪ್ರಿಯರ ಚಿತ್ತ ಹರಿದಿದೆ. ಸಿಎಸ್‌ಕೆ ತಂಡದ ಲೆಜೆಂಡ್‌ ಎಂ.ಎಸ್‌ ಧೋನಿ (MS Dhoni) ಅವರು ಐಪಿಎಲ್‌ಗೆ ನಿವೃತ್ತಿ ಹೇಳುವ ಸಾಧ್ಯತೆಗಳಿವೆ ಎಂಬ ಸುದ್ದಿಗಳ ನಡುವೆ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals0 ತಂಡದ ನಾಯಕ ರಿಷಭ್‌ ಪಂತ್‌, ಮುಂದಿನ ಆವೃತ್ತಿಗೆ ಸಿಎಸ್‌ಕೆ (CSK) ತಂಡ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: IPL 2025: ಮೆಗಾ ಹರಾಜು ಪ್ರಕ್ರಿಯೆ ಶುರು; ರಿಟೇನ್‌ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ!

    2016ರಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪ್ರತಿನಿಧಿಸುತ್ತಿರುವ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌ ಮುಂದಿನ ವರ್ಷದ ಐಪಿಎಲ್‌ಗೆ ನಡೆಯಲಿರುವ ಮೆಗಾ ಹರಾಜಿಗೂ ಮುನ್ನವೇ ಡೆಲ್ಲಿ ಫ್ರಾಂಚೈಸಿ ತೊರೆದು 5 ಬಾರಿ ಚಾಂಪಿಯನ್‌ ಆಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಸೇರಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ. ಇದನ್ನೂ ಓದಿ: Women’s Asia Cup 2024: ಸಿಂಹಿಣಿಯರ ಅಬ್ಬರಕ್ಕೆ ಪಾಕ್ ಧೂಳಿಪಟ – ಭಾರತಕ್ಕೆ ಗೆಲುವಿನ ಶುಭಾರಂಭ!

    2024ರ ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 14 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್‌ ಪ್ರವೇಶಿಸುವಲ್ಲಿ ವಿಫಲವಾಯಿತು. ಟ್ರೋಫಿ ತಂದುಕೊಡುವಲ್ಲಿ ವಿಫಲರಾದ ಡೆಲ್ಲಿ ತಂಡದ ಮುಖ್ಯಕೋಚ್‌ ಆಗಿದ್ದ ರಿಕಿ ಪಾಂಟಿಂಗ್‌ಗೆ ಫ್ರಾಂಚೈಸಿ ಈಗಾಗಲೇ ಕೊಕ್‌ ನೀಡಿದೆ. ರಿಷಭ್‌ ಪಂತ್‌ ಅವರನ್ನೂ ಉಳಿಸಿಕೊಳ್ಳುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಮುಂದಿನ ಕೋಚ್‌ ಎನ್ನಲಾಗುತ್ತಿರುವ ಗಂಗೂಲಿ ಅವರು ರಿಷಭ್‌ ಪರವಾಗಿದ್ದಾರೆ ಎನ್ನಲಾದರೂ ಫ್ರಾಂಚೈಸಿ ತೀರ್ಮಾನ ಅಂತಿಮವಾಗಲಿದೆ. ಹೀಗಾಗಿ ಪಂತ್‌ ಮೆಗಾ ಹರಾಜಿಗೂ ಮುನ್ನವೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಸೇರಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.

    ಕನ್ನಡಿಗನಿಗೆ ಮಣೆಹಾಕಲಿದೆಯೇ ಆರ್‌ಸಿಬಿ?
    2022ರಲ್ಲಿ ಆರಂಭವಾದ ಲಕ್ನೋ ಸೂಪರ್‌ ಜೈಂಟ್ಸ್‌ (LSG) ತಂಡದ ನಾಯಕನಾಗಿರುವ ಕನ್ನಡಿಗ ಕೆ.ಎಲ್‌ ರಾಹುಲ್‌ (KL Rahul) ಈ ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ. 2024ರ ಐಪಿಎಲ್‌ ಆವೃತ್ತಿಯಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಲಕ್ನೋ ಹೀನಾಯವಾಗಿ ಸೋತಿತ್ತು. ಈ ವೇಳೆ ಲಕ್ನೋ ಫ್ರಾಂಚೈಸಿ ಮಾಲೀಕರಾದ ಸಂಜೀವ್‌ ಗೋಯೆಂಕಾ ರಾಹುಲ್‌ ವಿರುದ್ಧ ಮೈದಾನದಲ್ಲೇ ರೇಗಾಡಿದ್ದರು. ಈ ವೀಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಯಿಂದ ರಾಹುಲ್‌, ಲಕ್ನೋ ತಂಡದಲ್ಲಿ ಮುಂದುವರಿಯುವ ಆಸಕ್ತಿ ಕಳೆದುಕೊಂಡಿದ್ದಾರೆ. ಮುಂಬರುವ ಮೆಗಾ ಹರಾಜಿಗೂ ಮುನ್ನ ಅವರು ಆರ್‌ಸಿಬಿ (RCB) ಪಾಲಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಭದ್ರತಾ ಕಾರಣಕ್ಕಾಗಿ ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ರೆ ಬಿಸಿಸಿಐ ಬರೆದುಕೊಡಲಿ – ಪಾಕ್‌ ಪಟ್ಟು!

    ಐಪಿಎಲ್‌ ವೃತ್ತಿ ಆರಂಭಿಸಿದ್ದು ಆರ್‌ಸಿಬಿಯಿಂದಲೇ:
    2013ರಿಂದ ಐಪಿಎಲ್‌ ವೃತ್ತಿ ಬದುಕು ಆರಂಭಿಸಿದ ಕೆ.ಎಲ್‌ ರಾಹುಲ್‌ ಮೊದಲು ಸೇರಿದ್ದು ಆರ್‌ಸಿಬಿ ತಂಡವನ್ನೇ. 2013 ರಿಂದ 2016ರ ಆವೃತ್ತಿಗಳಲ್ಲಿ ರಾಹುಲ್‌ ಆರ್‌ಸಿಬಿ ತಂಡದಲ್ಲಿಯೇ ಇದ್ದರು. ಆ ನಂತರ 2014 ಮತ್ತು 2015ರಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಪಾಲಾದರು. 2018 ರಿಂದ 2021ರ ವರೆಗೆ ಪಂಜಾಬ್‌ ಕಿಂಗ್ಸ್‌ ತಂಡದಲ್ಲಿದ್ದ ಕೆ.ಎಲ್‌ ರಾಹುಲ್‌ 2022ರಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಸೇರಿಕೊಂಡರು. ಇದನ್ನೂ ಓದಿ: Wimbledon Champion: ಸತತ 2ನೇ ಬಾರಿಗೆ ಅಲ್ಕರಾಜ್‌ಗೆ ವಿಂಬಲ್ಡನ್‌ ಕಿರೀಟ – ಜೊಕೊವಿಕ್‌ಗೆ ಮತ್ತೆ ಸೋಲು!

  • 16 ಬೌಂಡರಿ, 14 ಸಿಕ್ಸರ್‌; ನೋ ಲಾಸ್‌ನಲ್ಲಿ ಸನ್‌ ರೈಸರ್ಸ್‌ ಪಾಸ್‌ – ಹೈದರಾಬಾದ್‌ಗೆ 10 ವಿಕೆಟ್‌ಗಳ ಅದ್ಧೂರಿ ಜಯ!

    16 ಬೌಂಡರಿ, 14 ಸಿಕ್ಸರ್‌; ನೋ ಲಾಸ್‌ನಲ್ಲಿ ಸನ್‌ ರೈಸರ್ಸ್‌ ಪಾಸ್‌ – ಹೈದರಾಬಾದ್‌ಗೆ 10 ವಿಕೆಟ್‌ಗಳ ಅದ್ಧೂರಿ ಜಯ!

    – ಹೆಡ್‌, ಅಭಿಷೇಕ್‌ ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್‌
    – ಲಕ್ನೋ ಸೂಪರ್‌ ಜೈಂಟ್ಸ್‌ಗೆ ಪ್ಲೇ ಆಫ್‌ ಹಾದಿ ಕಠಿಣ

    ಹೈದರಾಬಾದ್‌: ಮತ್ತೊಮ್ಮೆ ಅಭಿಷೇಕ್‌ ಶರ್ಮಾ, ಟ್ರಾವಿಸ್‌ ಹೆಡ್‌ (Travis Head) ಅವರ ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ತಂಡವು ಲಕ್ನೋ ವಿರುದ್ಧ 10 ವಿಕೆಟ್‌ಗಳ ಅದ್ಧೂರಿ ಜಯ ಸಾಧಿಸಿದೆ. ಈ ಮೂಲಕ ಪ್ಲೇ ಆಫ್‌ಗೆ ಮತ್ತಷ್ಟು ಹತ್ತಿರವಾಗಿದೆ. ಆದ್ರೆ ಹೀನಾಯ ಸೋಲಿನೊಂದಿಗೆ ಲಕ್ನೋ ಸೂಪರ್‌ ಜೈಂಟ್ಸ್‌ (LSG) ಪ್ಲೇ ಆಫ್‌ ಹಾದಿಯನ್ನು ಕಠಿಣವಾಗಿಸಿಕೊಂಡಿದೆ.

    ಕೋಲ್ಕತ್ತಾ ನೈಟ್‌ರೈಡರ್ಸ್‌ (KKR), ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಈಗಾಗಲೇ ತಲಾ 16 ಅಂಕಗಳೊಂದಿಗೆ ಪ್ಲೇ ಆಫ್‌ ಸಮೀಪದಲ್ಲಿವೆ. ಇದೀಗ 12 ರಲ್ಲಿ 7ನೇ ಗೆಲುವಿನೊಂದಿಗೆ 14 ಅಂಕ ಗಳಿಸಿ ಸನ್‌ ರೈಸರ್ಸ್‌ ಸಹ ಪ್ಲೇ ಆಫ್‌ ಪ್ರವೇಶಿಸಲು ಹತ್ತಿರವಾಗಿದೆ. 11 ಪಂದ್ಯಗಳಲ್ಲಿ ತಲಾ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಸಿಎಸ್‌ಕೆ, ಡೆಲ್ಲಿ ಕ್ಯಾಪಿಟಲ್ಸ್‌ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದು, ಲಕ್ನೋ 6ನೇ ಸ್ಥಾನದಲ್ಲೇ ಉಳಿಯುವಂತಾಗಿದೆ. ಮುಂದಿನ 2 ಪಂದ್ಯಗಳಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲುವು ಸಾಧಿಸಿದರೆ ಮಾತ್ರವೇ ಲಕ್ನೋಗೆ ಪ್ಲೇ ಆಫ್‌ ತಲುಪುವ ಹಾದಿ ಸಲೀಸಾಗಲಿದೆ. ಇದೇವೇಳೆ ಡೆಲ್ಲಿ, ಸಿಎಸ್‌ಕೆ ತಂಡಗಳೂ ಗೆಲುವು ಕಾಯ್ದುಕೊಂಡರೆ ಲಕ್ನೋ ತಂಡ ಪ್ಲೇ ಆಫ್‌ನಿಂದ ಹೊರಬೀಳಲಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಲಕ್ನೋ ಸೂಪರ್‌ ಜೈಂಟ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿತ್ತು. 166 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹೈದರಾಬಾದ್‌ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ 9.4 ಓವರ್‌ಗಳಲ್ಲೇ 167 ರನ್‌ ಸಿಡಿಸಿ ಗೆಲುವು ದಾಖಲಿಸಿತು. ಇದನ್ನೂ ಓದಿ: 7 ದಿನಗಳ ಒಳಗಡೆ ವಿಚಾರಣೆಗೆ ಹಾಜರಾಗಿ – ನಡ್ಡಾ, ವಿಜಯೇಂದ್ರಗೆ ಬೆಂಗಳೂರು ಪೊಲೀಸರಿಂದ ಸಮನ್ಸ್‌

    ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್‌ ಶರ್ಮಾ (Abhishek Sharma) ಹಾಗೂ ಟ್ರಾವಿಸ್‌ ಹೆಡ್‌ ಲಕ್ನೋ ತಂಡ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚೆಂಡಾಡಿದರು. ಇದರಿಂದಾಗಿ ಹೈದರಾಬಾದ್‌ ಪವರ್‌ ಪ್ಲೇ ನಲ್ಲೇ ಯಾವುದೇ ವಿಕೆಟ್‌ ನಷ್ಟವಿಲ್ಲದೇ 107 ರನ್‌ ಕಲೆಹಾಕಿತ್ತು. ಬಳಿಕವೂ ವಿಕೆಟ್‌ ಬಿಟ್ಟುಕೊಡದೇ ಬ್ಯಾಟಿಂಗ್‌ ಅಬ್ಬರ ನಿಲ್ಲಿಸದ ಬ್ಯಾಟರ್ಸ್‌ ಕೇವಲ 9.4 ಓವರ್‌ಗಳಲ್ಲೇ 167 ರನ್‌ ಚಚ್ಚಿ ಗೆಲುವಿನ ಮೆಟ್ಟಿಲೇರಿದರು.

    ಸನ್‌ ರೈಸರ್ಸ್‌ ಪರ 296.66 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಟ್ರಾವಿಸ್‌ ಹೆಡ್‌ 30 ಎಸೆತಗಳಲ್ಲಿ ಸ್ಫೋಟಕ 89 ರನ್‌ (8 ಸಿಕ್ಸರ್‌, 8 ಬೌಂಡರಿ) ಚಚ್ಚಿದರೆ, 267.85 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಭಿಷೇಕ್‌ ಶರ್ಮಾ 28 ಎಸೆತಗಳಲ್ಲಿ 75 ರನ್‌ (6 ಸಿಕ್ಸರ್), 8 ಬೌಂಡರಿ) ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದನ್ನೂ ಓದಿ: ಚೆನ್ನೈ ಕಂಪನಿಯಲ್ಲಿ 3 ಕೋಟಿ ರೂ. ಕೊಟ್ಟು ಪೆನ್‌ಡ್ರೈವ್‌ ಖರೀದಿಸಿದ್ದಾರೆ: ಜಿ.ಟಿ ದೇವೇಗೌಡ ಗಂಭೀರ ಆರೋಪ

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ನಿಧಾನಗತಿಯ ಬ್ಯಾಟಿಂಗ್‌ನೊಂದಿಗೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 11.2 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ ಕೇವಲ 66 ರನ್‌ ಗಳಿಸಿತ್ತು. ಬಳಿಕ ಮುರಿಯದ 5ನೇ ವಿಕೆಟ್‌ಗೆ ಜೊತೆಗೂಡಿದ ನಿಕೋಲಸ್‌ ಪೂರನ್‌ ಹಾಗೂ ಆಯುಷ್‌ ಬದೋನಿ ಜೋಡಿ 52 ಎಸೆತಗಳಲ್ಲೇ 99 ರನ್‌ಗಳ ಜೊತೆಯಾಟ ನೀಡಿತು.

    ಇದರಿಂದ ಲಕ್ನೋ ತಂಡ 160 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಗಿತು. ಜೊನೆಯವರೆಗೂ ಹೋರಾಡಿದ ಆಯುಷ್‌ ಬದೋನಿ 30 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ 55 ರನ್‌ ಚಚ್ಚಿದರೆ, ನಿಕೋಲಸ್‌ ಪೂರನ್‌ 26 ಎಸೆತಗಳಲ್ಲಿ 1 ಸಿಕ್ಸರ್‌, 6 ಬೌಂಡರಿಯೊಂದಿಗೆ 48 ರನ್‌ ಬಾರಿಸಿದರು. ಇದರೊಂದಿಗೆ ಕೆ.ಎಲ್‌ ರಾಹುಲ್‌ 29, ಕೃನಾಲ್‌ ಪಾಂಡ್ಯ 24, ಕ್ವಿಂಟನ್‌ ಡಿಕಾಕ್‌ 2 ರನ್‌, ಸ್ಟೋಯ್ನಿಸ್‌ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಹೈದರಾಬಾದ್‌ ಪರ ಭುವನೇಶ್ವರ್‌ ಕುಮಾರ್‌ 2 ವಿಕೆಟ್‌ ಕಿತ್ತರೆ, ಪ್ಯಾಟ್‌ ಕಮ್ಮಿನ್ಸ್‌ 1 ವಿಕೆಟ್‌ ಪಡೆದರು.