Tag: lpg cylinder

  • ಮುಂದಿನ ವರ್ಷದಿಂದ ಪ್ರತಿ ವಾರ ಎಲ್‌ಪಿಜಿ ದರ ಪರಿಷ್ಕರಣೆ?

    ಮುಂದಿನ ವರ್ಷದಿಂದ ಪ್ರತಿ ವಾರ ಎಲ್‌ಪಿಜಿ ದರ ಪರಿಷ್ಕರಣೆ?

    ನವದೆಹಲಿ: ಮುಂದಿನ ವರ್ಷದಿಂದ ಪ್ರತಿ ವಾರ ಎಲ್‌ಪಿಜಿ ಸಿಲಿಂಡರ್‌ ದರ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.

    ಹೌದು. ಸದ್ಯ ಈಗ ಪ್ರತಿ ತಿಂಗಳು ಎಲ್‌ಪಿಜಿ ದರ ಪರಿಷ್ಕರಣೆ ಆಗುತ್ತಿದೆ. ಪ್ರತಿ ತಿಂಗಳು ದರ ಪರಿಷ್ಕರಣೆ ಆಗುತ್ತಿರುವುದು ತೈಲ ಕಂಪನಿಗಳಿಗೆ ಸಮಸ್ಯೆ ಆಗುತ್ತಿರುವ ಕಾರಣ ಈಗ ವಾರಕ್ಕೊಮ್ಮೆ ದರ ಪರಿಷ್ಕರಣೆ ಬಯಸಿವೆ.

    ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಇಲ್ಲಿಯವರೆಗೆ ಅಧಿಕೃತ ಹೇಳಿಕೆ ಪ್ರಕಟಿಸಿಲ್ಲ. ಮುಂದಿನ ದಿನಗಳಲ್ಲಿ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.

    ಈ ಹಿಂದೆ ಪೆಟ್ರೋಲ್,‌ ಡೀಸೆಲ್‌ ದರ ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿತ್ತು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿದಿನ ಪರಿಷ್ಕರಣೆ ಆಗುತ್ತಿದ್ದ ಕಾರಣ ತೈಲ ಬೆಲೆ ಏರಿಕೆ/ ಇಳಿಕೆ ಆಗಿದ್ದರೂ ದರ ಪರಿಷ್ಕರಣೆ ಕೂಡಲೇ ಆಗುತ್ತಿರಲಿಲ್ಲ. ಆದರೆ 2017ರ ಜೂನ್‌ 16ರ ನಂತರ ದೇಶದಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಗೆ ಅನುಗುಣವಾಗಿ  ಪ್ರತಿನಿತ್ಯ ಪೆಟ್ರೋಲ್, ಡೀಸೆಲ್‌ ದರ ಬೆಳಗ್ಗೆ 6ಗಂಟೆಗೆ ಪರಿಷ್ಕರಣೆ ಆಗುತ್ತಿದೆ.

    ಕಳೆದ ನವೆಂಬರ್‌ನಲ್ಲಿ ಸಬ್ಸಿಡಿ ಸಹಿತ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 597 ರೂ. ಇತ್ತು. ಆದರೆ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಆಗುತ್ತಿರುವ ಕಾರಣ ಈಗ 697 ರೂ.ಗೆ ಏರಿಕೆಯಾಗಿದೆ.

    ವಾರಕ್ಕೊಮ್ಮೆ ದರವನ್ನು ಪರಿಷ್ಕರಿಸಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಯಾದರೂ ತೈಲ ಕಂಪನಿಗಳಿಗೆ ದೊಡ್ಡ ಸಮಸ್ಯೆ ಆಗುವುದಿಲ್ಲ. ಈಗ ತಿಂಗಳಿಗೊಮ್ಮೆ ದರ ಪರಿಷ್ಕರಣೆ ಇದ್ದಾಗ ದರ ಏರಿಕೆಯಾದರೆ ಅದರಿಂದಾಗುವ ನಷ್ಟವನ್ನು ತೈಲ ಕಂಪನಿಗಳೇ ಹೊರಬೇಕಾಗುತ್ತದೆ. ಈ ನಷ್ಟವನ್ನು ಸರಿದೂಗಿಸಲು ವಾರಕ್ಕೊಮ್ಮೆ ಎಲ್‌ಪಿಜಿ ದರ ಪರಿಷ್ಕರಣೆಯಾಗುವ ಪ್ರಸ್ತಾಪವನ್ನು ಮುಂದಿಟ್ಟಿದೆ.

  • ಲಾಕ್‍ಡೌನ್ ಎಫೆಕ್ಟ್- ಎಲ್‍ಪಿಜಿ ಗ್ರಾಹಕರ ಹೊರೆ ಕಡಿಮೆಗೊಳಿಸಿದ ಸರ್ಕಾರ

    ಲಾಕ್‍ಡೌನ್ ಎಫೆಕ್ಟ್- ಎಲ್‍ಪಿಜಿ ಗ್ರಾಹಕರ ಹೊರೆ ಕಡಿಮೆಗೊಳಿಸಿದ ಸರ್ಕಾರ

    ನವದೆಹಲಿ: ಕೊರೊನಾ ವೈರಸ್‍ನಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯ ಲಾಭವನ್ನು ಸಾಮಾನ್ಯ ಜನರು ಈಗ ಪಡೆಯುತ್ತಿದ್ದಾರೆ. ನೈಸರ್ಗಿಕ ಅನಿಲದ ಬೆನ್ನಲ್ಲೇ ಅಡಿಗೆ (ಎಲ್‍ಪಿಜಿ) ಅನಿಲದ ಬೆಲೆಯನ್ನು ಕಡಿಮೆ ಮಾಡಲಾಗಿದೆ.

    ದೇಶದ ಅತಿದೊಡ್ಡ ಸರ್ಕಾರಿ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ರಾಜಧಾನಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಸಿಲಿಂಡರ್‌ಗೆ 61 ರೂ. ಈ ಕಡಿತಗೊಳಿಸಿದೆ. ಮಾರ್ಚ್ ನಲ್ಲಿ ಒಂದು ಸಿಲೆಂಟರ್ ಬೆಲೆ 805.50 ರೂ. ಇತ್ತು. ಸದ್ಯ ಅದರ ಬೆಲೆ 744 ರೂ.ಗೆ ಇಳಿಕೆಯಾಗಿದೆ. ಹೊಸ ಬೆಲೆಯು ಏಪ್ರಿಲ್ 1ರಿಂದ ಜಾರಿಗೆ ಬಂದಿದೆ.

    ಹೋಳಿ ಹಬ್ಬಕ್ಕೂ ಮುನ್ನ ಅಂದ್ರೆ ಮಾರ್ಚ್ 1ರಿಂದ ಸಬ್ಸಿಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ 53 ರೂ. ಕಡಿಮೆ ಮಾಡಲಾಗಿತ್ತು. ಇದರಿಂದಾಗಿ ಬೆಲೆಯು 744 ರೂ.ಗೆ ಇಳಿಕೆ ಕಂಡಿತ್ತು. ಇಂದಿನಿಂದ ಮತ್ತೆ 61 ರೂ. ಕಡಿಮೆ ಮಾಡಿರುವುದು ಗ್ರಾಹಕರಿಗೆ ಖುಷಿ ತಂದಿದೆ.

    ಕೋಲ್ಕತ್ತಾದಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯು 65 ರೂ. ಇಳಿಕೆಯಾಗಿದೆ. ಈ ಮೂಲಕ ಮಾರ್ಚ್ ನಲ್ಲಿ 839.50 ರೂ. ಪಾವತಿಸಬೇಕಿದ್ದ ಗ್ರಾಹಕರು ಇಂದಿನಿಂದ 774.50 ರೂ. ಪಾವತಿಸಬೇಕು. ಮುಂಬೈನಲ್ಲಿ 62 ರೂ. ಇಳಿಕೆಯಾಗಿದ್ದು, 714.50 ರೂ.ಗೆ ಸಬ್ಸಿಡಿ ರಹಿತ ಸಿಲಿಂಡರ್ ಲಭ್ಯವಾಗಲಿದೆ. ಚೆನ್ನೈನಲ್ಲಿ 64.50 ರೂ. ಬೆಲೆ ಕಡಿಮೆಯಾಗಿದ್ದು, ಗ್ರಾಹಕರು ಒಂದು ಸಿಲಿಂಡರ್ ಗೆ 761.50 ರೂ. ಪಾವತಿಸಬೇಕಾಗುತ್ತದೆ.

    ಬೆಂಗಳೂರಿನಲ್ಲಿ ಮಾರ್ಚ್ ವೇಳೆಗೆ ಸಬ್ಸಿಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯು 809 ರೂ. ಇತ್ತು. ಬೆಲೆ ಇಳಿಯಿಂದಾಗಿ 747 ರೂ.ಗೆ ಲಭ್ಯವಾಗಲಿದೆ.

    ಫೆಬ್ರವರಿಯಲ್ಲಿ ಎಲ್‍ಪಿಜಿ ಬೆಲೆ ದಿಢೀರ್ ಹೆಚ್ಚಾದ ನಂತರ ಸರ್ಕಾರ ಗ್ಯಾಸ್ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ದ್ವಿಗುಣಗೊಳಿಸಿತ್ತು. ರಾಜಧಾನಿ ದೆಹಲಿಯಲ್ಲಿ ಪ್ರತಿ ಸಿಲಿಂಡರ್‍ಗೆ 153.86 ರೂ.ಗಳ ಸಬ್ಸಿಡಿಯನ್ನು 291.48 ರೂ.ಗೆ ಹೆಚ್ಚಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೇಳಿಕೆ ನೀಡಿತ್ತು. ಅಂತೆಯೇ ಪ್ರಧಾನಿ ಉಜ್ವಲ ಯೋಜನೆ ಅಡಿ ಪ್ರತಿ ಸಿಲಿಂಡರ್‍ಗೆ ಸಬ್ಸಿಡಿಯನ್ನು 174.86 ರೂ.ನಿಂದ 312.48 ರೂ.ಗೆ ಹೆಚ್ಚಿಸಲಾಗಿದೆ. ದೇಶೀಯ ಗ್ರಾಹಕರು ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ಪಡೆಯುತ್ತಾರೆ. ಇದಕ್ಕಿಂತ ಹೆಚ್ಚಿನದನ್ನು ನೀವು ಖರೀದಿಸಿದರೆ, ಗ್ರಾಹಕರು ಮಾರುಕಟ್ಟೆ ಬೆಲೆಯನ್ನು ಪಾವತಿಸಬೇಕಾಗುತ್ತದೆ.

  • ಹೊಸ ವರ್ಷದ ಮೊದಲ ದಿನವೇ ಆಘಾತ- ಎಲ್‍ಪಿಜಿ ಸಿಲಿಂಡರ್ ಬೆಲೆ ಏರಿಕೆ

    ಹೊಸ ವರ್ಷದ ಮೊದಲ ದಿನವೇ ಆಘಾತ- ಎಲ್‍ಪಿಜಿ ಸಿಲಿಂಡರ್ ಬೆಲೆ ಏರಿಕೆ

    – ಐದು ತಿಂಗಳಿನಲ್ಲಿ 139.50 ರೂ. ಏರಿಕೆ

    ನವದೆಹಲಿ: ಸತತ ಐದನೇ ತಿಂಗಳು ಗೃಹಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಹೊಸ ವರ್ಷದ ಮೊದಲ ದಿನವೇ ಗ್ರಾಹಕರಿಗೆ ಆಘಾತ ಉಂಟಾಗಿದೆ.

    1 ಜನವರಿ 2020ರಿಂದ ಸಿಲಿಂಡರ್‌ಗಳು ದುಬಾರಿಯಾಗಿವೆ. ಮಹಾನಗರಗಳಲ್ಲಿ ಇದರ ಬೆಲೆ 21.50 ರೂ.ಗೆ ಏರಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್‍ನ ವೆಬ್‍ಸೈಟ್‍ನ ಪ್ರಕಾರ, ಮಹಾನಗರಗಳಲ್ಲಿ 14.2 ಕೆಜಿ ಇಂಡೇನ್ ಅನಿಲವು 22 ರೂ. ಏರಿಕೆಯಾಗಿದೆ. ಇತ್ತ ದೆಹಲಿಯಲ್ಲಿ 14.2 ಕೆಜಿ ಎಲ್‍ಪಿಜಿ ಸಿಲಿಂಡರ್‌ಗೆ 714 ರೂ., ಕೋಲ್ಕತ್ತಾದಲ್ಲಿ 747 ರೂ., ಮುಂಬೈನಲ್ಲಿ 684.50 ಮತ್ತು ಚೆನ್ನೈನಲ್ಲಿ 734 ರೂ. ಆಗಿದೆ.

    ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಡಿಸೆಂಬರ್‍ನಲ್ಲಿ 14.2 ಕೆಜಿ ಅನಿಲದ ಬೆಲೆ ದೆಹಲಿಯಲ್ಲಿ 695 ರೂ., ಕೋಲ್ಕತ್ತಾದಲ್ಲಿ 725.50 ರೂ., ಮುಂಬೈನಲ್ಲಿ 665 ರೂ. ಮತ್ತು ಚೆನ್ನೈನಲ್ಲಿ 714 ರೂ. ಇತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಸುಮಾರು 62 ರೂ. ಏರಿಕೆ ಬಳಿಕ ಪ್ರತಿ ತಿಂಗಳು ಬೆಲೆ ಹೆಚ್ಚಾಗುತ್ತಲೇ ಹೋಯಿತು. ಈ ಮೂಲಕ ಕಳೆದ ಐದು ತಿಂಗಳಿನಲ್ಲಿ 139.50 ರೂ. ಏರಿಕೆ ಕಂಡಿದೆ.

    ಇದೇ ಸಮಯದಲ್ಲಿ, 19 ಕೆಜಿ ಸಿಲಿಂಡರ್ ಬೆಲೆಯೂ ಸುಮಾರು 33 ರೂ. ಏರಿಕೆ ಕಂಡಿದೆ. ಜನವರಿ 1ರಿಂದ 19 ಕೆಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 1,241 ರೂ., ಕೋಲ್ಕತ್ತಾದಲ್ಲಿ 1,308.50 ರೂ., ಮುಂಬೈನಲ್ಲಿ 1,190 ರೂ. ಮತ್ತು ಚೆನ್ನೈನಲ್ಲಿ 1,363 ರೂ. ನಿಗದಿಯಾಗಿದೆ. ಡಿಸೆಂಬರ್ ನಲ್ಲಿ 19 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1,211.50 ರೂ., ಕೋಲ್ಕತ್ತಾದಲ್ಲಿ 1,275.50 ರೂ., ಮುಂಬೈನಲ್ಲಿ 1,160.50 ರೂ. ಮತ್ತು ಚೆನ್ನೈನಲ್ಲಿ 1,333 ರೂ. ಇತ್ತು.

  • ಗೃಹ ಬಳಕೆಯ ಸಿಲಿಂಡರ್ ಸ್ಫೋಟ – ತಪ್ಪಿದ ಭಾರೀ ಅನಾಹುತ

    ಗೃಹ ಬಳಕೆಯ ಸಿಲಿಂಡರ್ ಸ್ಫೋಟ – ತಪ್ಪಿದ ಭಾರೀ ಅನಾಹುತ

    ಕೋಲಾರ: ಗೃಹ ಬಳಕೆ ಸಿಲಿಂಡರ್ ಸ್ಫೋಟಗೊಂಡು ಮನೆಯ ಛಾವಣಿ ಮತ್ತು ಗೃಹಬಳಕೆ ವಸ್ತುಗಳು ನಾಶಗೊಂಡಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ನಂಬಿವಾರಪಲ್ಲಿ ಗ್ರಾಮದಲ್ಲಿಂದು ನಡೆದಿದೆ.

    ಗ್ರಾಮದ ರವಣಮ್ಮ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಸಿಲಿಂಡರ್ ಸ್ಫೋಟದಿಂದ ಮನೆಯಲ್ಲಿದ್ದ ನಾಲ್ಕು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಗೃಹ ಬಳಕೆ ವಸ್ತುಗಳು ಸೇರಿದಂತೆ ಛಾವಣಿ ಸಂಪೂರ್ಣ ನಾಶವಾಗಿದ್ದು, ಸಿಲಿಂಡರ್‍ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮನೆಯಲ್ಲಿದ್ದ ನಾಲ್ಕು ಮಂದಿ ಹೊರ ಬಂದ ಹಿನ್ನಲೆಯಲ್ಲಿ ಭಾರೀ ಅನಾಹುತ ತಪ್ಪಿದೆ.

    ಘನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿರುವ ಶ್ರೀನಿವಾಸಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಲಿಂಡರ್ ಸ್ಫೋಟದಿಂದ ಮನೆಯ ಛಾವಣಿ ಮತ್ತು ಗೃಹ ಬಳಕೆ ಸೇರಿದಂತೆ ಮನೆಯಲಿದ್ದ ವಸ್ತುಗಳು ಸುಟ್ಟು ಹೋಗಿದೆ.

  • ಪ್ರತಿ ತಿಂಗಳು 4 ರೂ. ಏರಿಕೆ ಆಗುತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ: 2004ರಿಂದ ಇಲ್ಲಿಯವರೆಗೆ ಎಷ್ಟು ಬೆಲೆ ಏರಿಕೆಯಾಗಿದೆ?

    ಪ್ರತಿ ತಿಂಗಳು 4 ರೂ. ಏರಿಕೆ ಆಗುತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ: 2004ರಿಂದ ಇಲ್ಲಿಯವರೆಗೆ ಎಷ್ಟು ಬೆಲೆ ಏರಿಕೆಯಾಗಿದೆ?

    ನವದೆಹಲಿ: 2018ರ ಮಾರ್ಚ್ ಒಳಗಡೆ ಎಲ್‍ಪಿಜಿ ಸಿಲಿಂಡರ್ ಮೇಲೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗುವುದು ಎಂದು  ಕೇಂದ್ರ ಸರ್ಕಾರ ಹೇಳಿದೆ.

    ಲೋಕಸಭೆಗೆ ಉತ್ತರ ನೀಡಿದ ಕೇಂದ್ರ ಪೆಟ್ರೋಲಿಂಯ ಸಚಿವ ಧರ್ಮೇಂದ್ರ ಪ್ರಧಾನ್, ಸಬ್ಸಿಡಿಯನ್ನು ತೆಗೆದು ಹಾಕಲು ಪ್ರತಿ ತಿಂಗಳು, ಪ್ರತಿ ಸಿಲಿಂಡರ್ ಬೆಲೆಯನ್ನು 4 ರೂ. ಏರಿಸಲಾಗುವುದು ಎಂದು ಅವರು ಹೇಳಿದರು.

    ತೈಲ ಕಂಪೆನಿಗಳಿಗೆ ಪ್ರತಿ ತಿಂಗಳು ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆಯನ್ನು 2 ರೂ. ಏರಿಸಲು 2016ರ ಜುಲೈ 1 ರಿಂದ  ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

    ಪ್ರಸ್ತುತ ಸಬ್ಸಿಡಿ ಸಹಿತ 14.2 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 477.46 ರೂ. ಇದ್ದರೆ ಕಳೆದ ವರ್ಷದ ಜೂನ್ ನಲ್ಲಿ 419. 18 ರೂ. ಇತ್ತು. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 564 ರೂ. ಇದೆ.

    ಪ್ರಸ್ತುತ ದೇಶದಲ್ಲಿ 18.11 ಕೋಟಿ ಜನ ಸಬ್ಸಿಡಿ ಸಹಿತ ಸಿಲಿಂಡರ್ ಬಳಸುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ದೇಶದ 2.5 ಕೋಟಿ ಬಡ ಮಹಿಳೆಯರಿಗೆ ಗ್ಯಾಸ್ ಕನೆಕ್ಷನ್ ನೀಡಲಾಗಿದೆ. 2.66 ಕೋಟಿ ಬಳಕೆದಾರರು ಸಬ್ಸಿಡಿ ರಹಿತ ಸಿಲಿಂಡರ್ ಬಳಸುತ್ತಿದ್ದಾರೆ.

    ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿದ್ದೆ ತಡ ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಆಗಸ್ಟ್ ಮೊದಲ ವಾರದಲ್ಲಿ  ಭಾರೀ ಏರಿಕೆಯಾಗಿತ್ತು.   ಕಳೆದ 6 ವರ್ಷದಲ್ಲಿ ಅತಿ ಹೆಚ್ಚು ಏರಿಕೆಯಾಗಿದ್ದು, 14.2 ಕೆಜಿ ತೂಕದ ಸಿಲಿಂಡರ್ ಬೆಲೆ 32 ರೂ. ಏರಿಕೆಯಾಗಿತ್ತು. ದೆಹಲಿಯಲ್ಲಿ ಜಿಎಸ್‍ಟಿ ಜಾರಿಯಾಗುವುದಕ್ಕೂ ಮೊದಲು ಸಬ್ಸಿಡಿ ಸಹಿತ ಪ್ರತಿ ಸಿಲಿಂಡರ್ ಬೆಲೆ 446.65 ರೂ. ಇದ್ದರೆ, ನಂತರ ಈ ಬೆಲೆ 477.46 ರೂ.ಗೆ ತಲುಪಿದೆ.

    ಜೂನ್‍ವರೆಗೆ ಪ್ರತಿ ಸಿಲಿಂಡರ್‍ಗೆ 119.85 ರೂ. ಸಬ್ಸಿಡಿ ಸಿಗುತಿತ್ತು. ಆದರೆ ಹೊಸ ಅಧಿಸೂಚನೆಯಂತೆ ಈಗ 107 ರೂ. ಹಣ ಸಬ್ಸಿಡಿಯಾಗಿ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ. 1 ವರ್ಷದಲ್ಲಿ ಒಂದು ಕುಟುಂಬಕ್ಕೆ 14.2 ಕೆಜಿ ತೂಕದ 12  ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಕೇಂದ್ರ ಸರ್ಕಾರ  ವಿತರಿಸುತ್ತಿದೆ.

    ದೆಹಲಿಯಲ್ಲಿ ಯಾವ ವರ್ಷ ಎಷ್ಟಿತ್ತು?
    ಜನವರಿ 01, 2004 – 241.6 ರೂ.
    ಏಪ್ರಿಲ್ 01, 2005 – 294.75 ರೂ.
    ಮಾರ್ಚ್ 01, 2007 – 294.75 ರೂ.

    ಜೂನ್ 05, 2008 – 346.3 ರೂ.
    ಜನವರಿ 29, 2009 – 279.7 ರೂ.
    ಜನವರಿ 01, 2010 – 281.2 ರೂ.

    ಜೂನ್ 25, 2011 – 399.26 ರೂ.
    ಜುಲೈ 25, 2012 – 399 ರೂ.
    ಜನವರಿ 01, 2013 – 410.5 ರೂ.

    ಜನವರಿ 01, 2014 – 414 ರೂ.
    ಜನವರಿ 01, 2015 – 417.82 ರೂ.
    ಜನವರಿ 01, 2016 – 419.33 ರೂ.

    ಜನವರಿ 01, 2017 – 434. ರೂ.
    ಏಪ್ರಿಲ್ 01, 2017 – 440 ರೂ.
    ಜೂನ್ 01, 2017 – 446 ರೂ.
    ಮಾಹಿತಿ: www.iocl.com