Tag: Low BP

  • ಪತಿ ಅಂತ್ಯಕ್ರಿಯೆ ವೇಳೆ ಲೋ ಬಿಪಿಯಿಂದ ಪತ್ನಿ ಸಾವು – ಸಾವಿನಲ್ಲೂ ಒಂದಾದ ದಂಪತಿ

    ಪತಿ ಅಂತ್ಯಕ್ರಿಯೆ ವೇಳೆ ಲೋ ಬಿಪಿಯಿಂದ ಪತ್ನಿ ಸಾವು – ಸಾವಿನಲ್ಲೂ ಒಂದಾದ ದಂಪತಿ

    ಹಾವೇರಿ: ಪತಿ ಅಂತ್ಯಕ್ರಿಯೆ ವೇಳೆ ಪತ್ನಿಯೂ ಸಾವನ್ನಪ್ಪಿದ ಘಟನೆ ರಾಣೆಬೆನ್ನೂರಿನ (Ranebennur) ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಷ್ಟು ದಿನ ಅನ್ಯೂನ್ಯವಾಗಿದ್ದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ

    ವೀರಬಸಪ್ಪ ಗೋಣಗೇರ (70) ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದರು. ಪತಿ ಅಂತ್ಯಕ್ರಿಯೆಗೆ ಹೋದ ಪತ್ನಿ ಬಸಮ್ಮ ವೀರಬಸಪ್ಪ ಗೋಣಗೇರ (60) ಅವರಿಗೆ ಲೋ ಬಿಪಿಯಾಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ರೌಡಿಶೀಟರ್‌ನನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಅಂತ ಪರಿಚಯಿಸಿದ ಗಿರೀಶ್ ಮಟ್ಟಣ್ಣನವರ್

    ಪತಿ, ಪತಿಯನ್ನು ಇಬ್ಬರನ್ನು ಅಂತ್ಯಕ್ರಿಯೆಯನ್ನು ಒಂದೇ ಚಿತೆಯಲ್ಲಿ ನಡೆಸಿದ್ದಾರೆ. ಸಾವಿನಲ್ಲೂ ಒಂದಾದ ಆದರ್ಶ ದಂಪತಿಯ ಅಂತ್ಯಸಂಸ್ಕಾರವನ್ನು ಗ್ರಾಮಸ್ಥರು ನೆರೆವೇರಿಸಿದ್ದಾರೆ.

  • Bidar | ಲೋ ಬಿಪಿಯಿಂದ ಮಹಿಳಾ ಪೊಲೀಸ್ ಪೇದೆ ಸಾವು

    Bidar | ಲೋ ಬಿಪಿಯಿಂದ ಮಹಿಳಾ ಪೊಲೀಸ್ ಪೇದೆ ಸಾವು

    ಬೀದರ್: ಲೋ ಬಿಪಿಯಿಂದ (Low BP) ಮಹಿಳಾ ಪೊಲೀಸ್ ಪೇದೆ (Police Constable) ಸಾವನ್ನಪ್ಪಿದ ಘಟನೆ ಬೀದರ್‌ನಲ್ಲಿ (Bidar) ನಡೆದಿದೆ.

    ಮಹಿಳಾ ಪೊಲೀಸ್ ಪೇದೆ ಸರಿತಾ (28) ಲೋ ಬಿಪಿಯಿಂದ ಸಾವನ್ನಪ್ಪಿದ್ದಾರೆ. ಬೀದರ್‌ನ ಸಬ್ ಅರ್ಬನ್ ಪೊಲೀಸ್ ಠಾಣೆಯ ಪೊಲೀಸ್ ಪೇದೆಯಾಗಿದ್ದ ಸರಿತಾ ಹೆರಿಗೆ ಬಳಿಕ ಲೋ ಬಿಪಿಯಾಗಿ ಸಾವನ್ನಪ್ಪಿದ್ದಾರೆ. ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚಾವರಂ ಗ್ರಾಮದ ಪೊಲೀಸ್ ಪೇದೆಯಾಗಿದ್ದು, ಹಲವು ವರ್ಷಗಳಿಂದ ಬೀದರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಭೂಮಿಗೆ ಮರಳಿದ ಶುಕ್ಲಾಗೆ ಪತ್ನಿ, ಪುತ್ರನಿಂದ ಅಪ್ಪುಗೆಯ ಸ್ವಾಗತ

    ಒಂದು ವಾರದ ಹಿಂದೇ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದ ಸರಿತಾ ಹೆರಿಗೆ ಬಳಿಕ ಒಂದು ವಾರ ನಾರ್ಮಲ್ ಆಗಿಯೇ ಇದ್ದರು. ಆದರೆ ಬುಧವಾರ ತಡರಾತ್ರಿ ಏಕಾಏಕಿ ಲೋ ಬಿಪಿಯಾಗಿ ಮಹಿಳಾ ಪೊಲೀಸ್ ಪೇದೆ ಸಾವನ್ನಪ್ಪಿದ್ದು, ಠಾಣೆಯ ಪೊಲೀಸ್ ಸಿಬ್ಬಂದಿ ಭಾವುಕಾಗಿದ್ದಾರೆ. ಬೀದರ್‌ನ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಸರಿತಾ ಪತಿ ಕುಪೇಂದ್ರ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಡೆವಿಲ್ ಸಾಂಗ್ ಶೂಟಿಂಗ್ – ದರ್ಶನ್ ಫೋಟೋ ರಿವೀಲ್

  • ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ – 4 ದಿನಗಳಲ್ಲಿ 4 ಸಾವು

    ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ – 4 ದಿನಗಳಲ್ಲಿ 4 ಸಾವು

    ಬೆಂಗಳೂರು: ಇತ್ತೀಚಿಗೆ ಮಕ್ಕಳಲ್ಲಿ ಹೃದಯಾಘಾತವಾಗುತ್ತಿರುವ (HeartAttack) ವಿದ್ರಾವಕ ಘಟನೆಗಳು ನಡೆಯುತ್ತಲೇ ಇವೆ. ದಿನಕಳೆದಂತೆ ಹೃದಯಾಘಾತಗಳು ಹೆಚ್ಚಾಗುತ್ತಲೇ ಇದ್ದು, ರಾಜ್ಯದಲ್ಲಿ ಇತ್ತೀಚಿಗೆ ಹೃದಯಾಘಾತದಿಂದ ಮಕ್ಕಳು ಸಾವನ್ನಪ್ಪಿರುವ ಕೆಲವು ಘಟನೆಗಳ ಕುರಿತು ಮಾಹಿತಿ ಇಲ್ಲಿದೆ…

    ಹಾಸನ:
    11 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಆಲೂರು ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಸಚಿನ್ ಎಂದು ಗುರುತಿಸಲಾಗಿದೆ. ಗ್ರಾಮದ ಕಾವ್ಯಶ್ರೀ ಎಂಬುವವರ ಮಗ ಸಚಿನ್ ಎಂದು ತಿಳಿಯಲಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ. ಶುಕ್ರವಾರ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿರುವರಿಂದ ಶಾಲೆಗೆ ಹೋಗದೇ ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದ. ಅದೇ ವೇಳೆ ಏಕಾಏಕಿ ಮತ್ತೇ ನೋವು ಕಾಣಿಸಿಕೊಂಡಿದೆ. ಇದ್ದ ಜಾಗದಲ್ಲಿಯೇ ಸಚಿನ್ ಕೊನೆಯುಸಿರೆಳೆದಿದ್ದಾನೆ.ಇದನ್ನೂ ಓದಿ: Manipur | ಸಚಿವರ ಆಪ್ತ ಸಹಾಯಕನೇ ಕಿಡ್ನ್ಯಾಪ್‌ – ದುಷ್ಕರ್ಮಿಗಳ ಗುಂಪಿಗೆ ತೀವ್ರ ಶೋಧ

    ರಾಯಚೂರು:
    9 ವರ್ಷದ ಬಾಲಕ ಕಡಿಮೆ ರಕ್ತದೊತ್ತಡದಿಂದ ಸಾವನ್ನಪ್ಪಿರುವ ಘಟನೆ ರಾಯಚೂರು (Raichuru) ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ನಿವಾಸಿ ಶಿವಪ್ರಸಾದ್ ಎಂದು ಗುರುತಿಸಲಾಗಿದೆ. ಗ್ರಾಮದ ಶಿವಣ್ಣ ವಕೀಲ್ ಎಂಬುವವರ ಮಗ ಶಿವಪ್ರಸಾದ್ ಎಂದು ತಿಳಿಯಲಾಗಿದೆ. 5ನೇ ತರಗತಿಯಲ್ಲಿ ಓದುತ್ತಿದ್ದ ಶಿವಪ್ರಸಾದ್ ತರಗತಿಯಲ್ಲಿಯೇ ಲೋಬಿಪಿಯಿಂದ ಅಸ್ವಸ್ಥನಾಗಿದ್ದಾನೆ. ಬಳಿಕ ಅಲ್ಲಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

    ರಾಯಚೂರು:
    14 ವರ್ಷದ ಬಾಲಕ ಕಡಿಮೆ ರಕ್ತದೊತ್ತಡದಿಂದ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಅತ್ತನೂರು ಗ್ರಾಮದ ತರುಣ್ ಅತ್ತನೂರು ಎಂದು ಗುರುತಿಸಲಾಗಿದೆ. ತರಗತಿ ನಡೆಯುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ್ದು, ತಕ್ಷಣವೇ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ಖಾಸಗಿ ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ಸಾವನ್ನಪ್ಪಿದ್ದಾನೆ.

    ಯಾದಗಿರಿ:
    ಪರೀಕ್ಷೆ ಬರೆಯುತ್ತಿರುವಾಗ 16 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಶಹಾಪೂರ ತಾಲ್ಲೂಕಿನ ಕರ್ಕಳ್ಳಿ ತಾಂಡಾದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಚೇತನಕುಮಾರ್ ರಾಠೋಡ್ ಎಂದು ಗುರುತಿಸಲಾಗಿದೆ. ಶಹಾಪೂರ ನಗರದ ಖಾಸಗಿ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

    ವಿದ್ಯಾರ್ಥಿ ಚೇತನಕುಮಾರ್ ರಾಠೋಡ ಸಾವಿಗೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದ್ದು, ಮುಖ್ಯಮಂತ್ರಿಯ ವಿಶೇಷ ಕರ್ತವ್ಯಾಧಿಕಾರಿಗೆ ವಿದ್ಯಾರ್ಥಿಯ ಸಾವಿನ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಡಿಡಿಪಿಐ ಅವರಿಂದ ಘಟನೆಯ ವರದಿ ಸಲ್ಲಿಸಲಾಗಿದೆ.ಇದನ್ನೂ ಓದಿ: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ – ಹರಿದ್ವಾರದಲ್ಲಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ

    ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ತಂಡ ಭೇಟಿ ನೀಡಿ ವಿಚಾರಣೆ ಮಾಡಿದ್ದು, ಆರೋಗ್ಯ ಸಂಬಂಧಿ ಸಮಸ್ಯೆಯಿಂದ ವಿದ್ಯಾರ್ಥಿ ಹಠಾತ್ ನಿಧನ ಹೊಂದಿದ್ದಾನೆ. ಸ್ಪಂದನ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾದ 15 ನಿಮಿಷದಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಾನೆಂದು ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಲಿಖಿತ ಹೇಳಿಕೆಯೊಂದಿಗೆ ವರದಿ ಸಲ್ಲಿಸಲಾಗಿದ್ದು, ಶಾಲಾ ಅವಧಿಯಲ್ಲಿ ನಿತ್ರಾಣ ಹಾಗೂ ಲೋ ಬಿಪಿಯಿಂದ ಮರಣ ಹೊಂದಿದ್ದಾನೆ ಮಾಹಿತಿಯ ವರದಿ ಸಲ್ಲಿಸಲಾಗಿದೆ. ಈ ಬಗ್ಗೆ ಸಿಎಂ ಕರ್ತವ್ಯಾಧಿಕಾರಿಯಿಂದ ಸರ್ಕಾರದ ಸ್ಪಂದನೆ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

  • ರಾಯಚೂರು| ತರಗತಿಯಲ್ಲಿ ಲೋ ಬಿಪಿಯಿಂದ ಕುಸಿದು ಬಿದ್ದ ವಿದ್ಯಾರ್ಥಿ – ಹೃದಯಾಘಾತದಿಂದ ಸಾವು

    ರಾಯಚೂರು| ತರಗತಿಯಲ್ಲಿ ಲೋ ಬಿಪಿಯಿಂದ ಕುಸಿದು ಬಿದ್ದ ವಿದ್ಯಾರ್ಥಿ – ಹೃದಯಾಘಾತದಿಂದ ಸಾವು

    ರಾಯಚೂರು: ಖಾಸಗಿ ಶಾಲೆಯೊಂದರಲ್ಲಿ (School) ತರಗತಿಯಲ್ಲಿ ಪಾಠ ನಡೆಯುತ್ತಿದ್ದ ವೇಳೆ ವಿದ್ಯಾರ್ಥಿಯೋರ್ವ (Student) ಕುಸಿದು ಬಿದ್ದು ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ ಘಟನೆ ರಾಯಚೂರು (Raichur) ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನಡೆದಿದೆ.

    ತರುಣ್ ಅತ್ತನೂರು (14) ಮೃತ ದುರ್ದೈವಿ. ಸಿರವಾರ (Sirawara) ತಾಲೂಕಿನ ಅತ್ತನೂರು ಗ್ರಾಮದ ಎಂಟನೇ ತರಗತಿ ವಿದ್ಯಾರ್ಥಿ ತರುಣ್ ಎಂದಿನಂತೆ ಶಾಲೆಗೆ ಆಗಮಿಸಿದ್ದ. ಆದರೆ ಶಾಲೆಯಲ್ಲಿ ಲೋ ಬಿಪಿಯಿಂದ ಏಕಾಏಕಿ ಕುಸಿದು ಬಿದ್ದಿದ್ದ. ಈತನನ್ನು ಶಿಕ್ಷಕರು, ಸಿಬ್ಬಂದಿಗಳು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಇದನ್ನೂ ಓದಿ: Mysuru| ಕಲುಷಿತ ನೀರು ಸೇವನೆ ಶಂಕೆ- ಓರ್ವ ಸಾವು, 12 ಜನ ಅಸ್ವಸ್ಥ

    ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ಮಾರ್ಗ ಮಧ್ಯೆ ಹೃದಯಾಘಾತದಿಂದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಗ್ಯಾರಂಟಿಯಿಂದಾಗಿ ಅನುದಾನ ಸಿಗ್ತಿಲ್ಲ: ದರ್ಶನ್ ಪುಟ್ಟಣ್ಣಯ್ಯ

  • ಜಾತ್ರೆಯಲ್ಲಿ ಆಟವಾಡಿ ಮನೆಗೆ ತೆರಳಿದ್ದ ಬಾಲಕ ಹಠಾತ್ ಸಾವು

    ಜಾತ್ರೆಯಲ್ಲಿ ಆಟವಾಡಿ ಮನೆಗೆ ತೆರಳಿದ್ದ ಬಾಲಕ ಹಠಾತ್ ಸಾವು

    ಚಿಕ್ಕಬಳ್ಳಾಪುರ: ಜಾತ್ರೆಯಲ್ಲಿ (Fair) ಆಟವಾಡಿ ಮನೆಗೆ ತೆರಳಿದ್ದ ಬಾಲಕ ಹಠಾತ್ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದಲ್ಲಿ (Doddaballapura) ನಡೆದಿದೆ.

    ಶಾಂತಿನಗರ (Shanthingara) ನಿವಾಸಿ ಮಂಜುನಾಥ್ ಅವರ ಪುತ್ರ ಶ್ರೇಯಸ್ (9) ಮೃತ ಬಾಲಕ. ಈತ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ಜಾತ್ರೆಗೆ ಹೋಗಿದ್ದ. ಅಲ್ಲದೇ ಮೈದಾನದಲ್ಲಿ ವಿವಿಧ ಆಟಗಳನ್ನಾಡಿ ಮನೆಗೆ ತೆರಳಿದ್ದ. ಈ ವೇಳೆ ಆತನ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಆತನ ಪೋಷಕರು ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಬೈಕ್ ಅಪಘಾತದಲ್ಲಿ ಕಾಫಿನಾಡಿನ ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಸಾವು

    ಬಿಪಿ ಲೋ (Low BP) ಆದ ಕಾರಣ ಮಗ ಸಾವನ್ನಪ್ಪಿದ್ದಾನೆ ಎಂದು ಮೃತನ ಪೋಷಕರು ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಇದನ್ನೂ ಓದಿ: ಪೊಲೀಸರು ವಶಕ್ಕೆ ಪಡೆಯುತ್ತಿದ್ದ ವೇಳೆ ಮಹಡಿಯಿಂದ ಬಿದ್ದು ಯುವಕ ದುರ್ಮರಣ!

  • ಸಾವಿನಲ್ಲೂ ಒಂದಾದ ಕರುಳಬಳ್ಳಿ

    ಸಾವಿನಲ್ಲೂ ಒಂದಾದ ಕರುಳಬಳ್ಳಿ

    ಮಂಡ್ಯ: ಮಗನ ಸಾವಿನ ಸುದ್ದಿ ಕೇಳಿ ತಾಯಿಯು ಕೂಡಾ ಸಾವನ್ನಪ್ಪಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ನಡೆದಿದೆ.

    ಕುಶಾಲ್ (45) ಮೃತ ಮಗನಾಗಿದ್ದು, ನಿನ್ನೆ ಗ್ರಾಮದ ತಮ್ಮ ನಿವಾಸದಲ್ಲಿ ಕುಶಾಲ್ ಟಿವಿ ನೋಡುತ್ತಿರುತ್ತಾನೆ. ಈ ವೇಳೆ ಇದ್ದಕ್ಕಿದ್ದಂತೆ ಕುಶಾಲ್‍ಗೆ ಲೋ ಬಿಪಿಯಾಗಿ, ಕೆಳಗೆ ಬಿದ್ದು ಒದ್ದಾಡುತ್ತಿರುತ್ತಾನೆ. ಇದನ್ನು ಕಂಡ ಅಕ್ಕ-ಪಕ್ಕದ ಮನೆಯವರು ಕುಶಾಲ್‍ನ್ನು ಮನೆಯಿಂದ ಹೊರಗಡೆಗೆ ಕರೆದುಕೊಂಡು ಬರುತ್ತಾರೆ.

    ಮನೆಯಿಂದ ಹೊರಗೆ ಬರುತ್ತಿದ್ದಂತೆ ಕುಶಾಲ್ ಕೊನೆಉಸಿರು ಬಿಡುತ್ತಾನೆ. ಮನೆಯ ಪಕ್ಕದಲ್ಲೇ ಇದ್ದ ಕುಶಾಲ್ ತಾಯಿ ಲಕ್ಷ್ಮಮ್ಮ (69) ಏನ್ ಆಯ್ತು ಎಂದು ಬಂದು ನೋಡುತ್ತಾರೆ. ಈ ವೇಳೆ ತನ್ನ ಮಗ ಸಾವನ್ನಪ್ಪಿರುವ ದೃಶ್ಯ ಕಂಡು ಲಕ್ಷ್ಮಮ್ಮಗೆ ಹೃದಯಾಘಾತವಾಗಿ, ಬಳಿಕ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನಲ್ಲೂ ಕರಳು ಮತ್ತು ಬಳ್ಳಿ ಒಂದಾಗಿವೆ ಎಂದು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

  • ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಬೆಳಗಾವಿ: ಚಾಲನೆ ಮಾಡುವಾಗಲೇ ತಲೆ ತಿರುಗುತ್ತಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ತಕ್ಷಣ ಬಸ್ಸಿಗೆ ಬ್ರೇಕ್ ಹಾಕಿ ಪಕ್ಕಕ್ಕೆ ನಿಲ್ಲಿಸಿ ಚಾಲಕರೊಬ್ಬರು ಭಾರೀ ಅನಾಹುತವನ್ನು ತಪ್ಪಿಸಿದ ಘಟನೆ ಅಥಣಿಯಿಂದ ತೆಲಸಂಗ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿದ್ದಾಗ ತೆಲಸಂಗ ಗ್ರಾಮದ ಬಳಿ ನಡೆದಿದೆ.

    ನಾಗಪ್ಪ ಮಲ್ಲಪ್ಪ ಹುರ್ಕಿ(33) ಅನಾಹುತ ತಪ್ಪಿಸಿದ ಚಾಲಕ. ನಾಗಪ್ಪ ಬೈಲಹೊಂಗಲ ತಾಲೂಕಿನ ಹಣಬರಟ್ಟಿ ಗ್ರಾಮದ ನಿವಾಸಿಯಾಗಿದ್ದು, ಅಥಣಿಯಿಂದ ತೆಲಸಂಗ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿವಾಗ ಲೋ ಬಿಪಿಯಿಂದಾಗಿ ತಲೆ ತಿರುಗುತ್ತಿರುವುದು ಗೊತ್ತಾಗಿದೆ. ತಕ್ಷಣ ಚಾಲಕ ಆ ವೇಳೆ ಬಸ್‍ಗೆ ಬ್ರೇಕ್ ಹಾಕಿ ಪಕ್ಕಕ್ಕೆ ನಿಲ್ಲಿಸಿದ್ದಾರೆ.

    ರಾಜ್ಯ ಸಾರಿಗೆ ಸಂಸ್ಥೆಯ ಅಥಣಿ ಘಟಕದ ಬಸ್‍ನಲ್ಲಿ 9 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ತಕ್ಷಣ ಬಸ್ ನಿಲ್ಲಿಸಿದ್ದರಿಂದ ಪ್ರಯಾಣಿಕರು ಆತಂಕಗೊಂಡಿದ್ದು, ವಿಷಯ ತಿಳಿದ ಕೂಡಲೇ ನಿಟ್ಟುಸಿರು ಬಿಟ್ಟಿದ್ದಾರೆ.

    ಸದ್ಯ ಚಾಲಕ ನಾಗಪ್ಪನಿಗೆ ತೆಲಸಂಗ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ನೀಡಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.