Tag: Lovely Professional University

  • ಸ್ನಾನದ ವೀಡಿಯೋ ಲೀಕ್‌ ಕೇಸ್‌ ಬೆನ್ನಲ್ಲೇ ಪಂಜಾಬ್‌ನ ಮತ್ತೊಂದು ವಿವಿ ವಿವಾದ – ವಿದ್ಯಾರ್ಥಿ ಆತ್ಮಹತ್ಯೆ, ಭಾರಿ ಪ್ರತಿಭಟನೆ

    ಸ್ನಾನದ ವೀಡಿಯೋ ಲೀಕ್‌ ಕೇಸ್‌ ಬೆನ್ನಲ್ಲೇ ಪಂಜಾಬ್‌ನ ಮತ್ತೊಂದು ವಿವಿ ವಿವಾದ – ವಿದ್ಯಾರ್ಥಿ ಆತ್ಮಹತ್ಯೆ, ಭಾರಿ ಪ್ರತಿಭಟನೆ

    ಚಂಡೀಗಢ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್‌ ಪ್ರಕರಣದಿಂದ ವಿವಾದಕ್ಕೆ ಕಾರಣವಾದ ಚಂಡೀಗಢ ವಿಶ್ವವಿದ್ಯಾಲಯದಂತೆ (Chandigarh University) ಈಗ ಮತ್ತೊಂದು ವಿವಿ ಭಾರೀ ಸುದ್ದಿಯಲ್ಲಿದೆ. ಪಂಜಾಬ್‌ನ (Punjab) ಜಲಂಧರ್‌ನಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ (Lovely Professional University) ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಕೇರಳ ಮೂಲದ 21 ವರ್ಷದ ವಿದ್ಯಾರ್ಥಿ ಮಂಗಳವಾರ ಸಂಜೆ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಯಾಚುಲರ್ ಆಫ್ ಡಿಸೈನಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ ಅಗ್ನಿ ಎಸ್. ದಿಲೀಪ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್ ಪ್ರಕರಣ – ಬಾಯ್‌ಫ್ರೆಂಡ್‌ಗೆ ಹೆದರಿ ವೀಡಿಯೋ ಮಾಡಿದ್ಲು ಸಹಪಾಠಿ

    ಘಟನೆಯನ್ನು ಖಂಡಿಸಿ ವಿದ್ಯಾರ್ಥಿಗಳು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಳೀಸರು ತಿಳಿಸಿದ್ದಾರೆ.

    ಸದ್ಯ ಪ್ರತಿಭಟನೆಯನ್ನು ನಿಭಾಯಿಸಿದ್ದೇವೆ. ಆತ್ಮಹತ್ಯೆ ಬಗ್ಗೆ ಮೃತನ ಪೋಷಕರಿಗೆ ಮಾಹಿತಿ ನೀಡಿದ್ದೇವೆ. ಅವರ ಹೇಳಿಕೆ ಆಧರಿಸಿ ನಾವು ತನಿಖೆ ಮುಂದುವರಿಸುತ್ತೇವೆ ಎಂದು ಫಗ್ವಾರಾ ಪೊಲೀಸ್‌ ವರಿಷ್ಠಾಧಿಕಾರಿ ಮುಖ್ತಿಯಾರ್‌ ರೈ ತಿಳಿಸಿದ್ದಾರೆ. ಇದನ್ನೂ ಓದಿ: ಚಂಡೀಗಢ ವಿವಿ ಬಳಿಕ ಐಐಟಿ ಬಾಂಬೆ- ಹಾಸ್ಟೆಲ್ ಸ್ನಾನಗೃಹದಲ್ಲಿ ಇಣುಕಿದ ಕ್ಯಾಂಟೀನ್ ಸಿಬ್ಬಂದಿ ಬಂಧನ

    ಪ್ರತಿಭಟನೆಯಿಂದ ವಿವಿಯಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಎಚ್ಚರ ವಹಿಸಲು ಕ್ಯಾಂಪಸ್‌ನಲ್ಲಿ ಹೆಚ್ಚಿನ ಪೊಲೀಸ್‌ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀರಾಮನನ್ನು ಅವಹೇಳನ ಮಾಡಿದ್ದ ಪ್ರಾಧ್ಯಾಪಕಿ ವಜಾ

    ಶ್ರೀರಾಮನನ್ನು ಅವಹೇಳನ ಮಾಡಿದ್ದ ಪ್ರಾಧ್ಯಾಪಕಿ ವಜಾ

    ಚಂಡೀಗಢ: ಶ್ರೀರಾಮನನ್ನು ಅವಹೇಳನ ಮಾಡಿದ ಆರೋಪದ ಮೇಲೆ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಸಹಾಯಕ ಪ್ರಾಧ್ಯಾಪಕಿಯನ್ನು ವಜಾಗೊಳಿಸಲಾಗಿದೆ.

    ಪಂಜಾಬ್‍ನ ಜಂದರ್‌ನಲ್ಲಿ ಈ ಘಟನೆ ನಡೆದಿದೆ. ಗುಸಾರ್ಂಗ್ ಪ್ರೀತ್ ಕೌರ್ ವಜಾಗೊಂಡ ಸಹಾಯಕ ಪ್ರಾಧ್ಯಾಪಕಿ. ಶ್ರೀರಾಮನಿಗೆ ಅವಹೇಳನ ಮಾಡುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ಆಕೆಯನ್ನು ವಜಾಗೊಳಿಸುವಂತೆ ಒತ್ತಾಯಿಸಲಾಗಿತ್ತು.

    ವೀಡಿಯೋದಲ್ಲಿ ಏನಿದೆ?: ಶ್ರೀರಾಮ ಒಳ್ಳೆಯ ವ್ಯಕ್ತಿಯಲ್ಲ. ರಾವಣ ಒಳ್ಳೆಯ ವ್ಯಕ್ತಿ. ರಾಮ ಒಬ್ಬ ಕುತಂತ್ರದ ವ್ಯಕ್ತಿ ಎಂದು ನಾನು ಕಂಡುಕೊಂಡಿದ್ದೇನೆ. ಸೀತೆಯನ್ನು ಬಲೆಗೆ ಬೀಳಿಸಲು ಎಲ್ಲಾ ಉಪಾಯ ಮಾಡಿದನು. ಅವನು ಸೀತೆಯನ್ನು ತೊಂದರೆಗೆ ಸಿಲುಕಿಸಿದನು ಮತ್ತು ರಾವಣನ ಮೇಲೆ ಎಲ್ಲಾ ದೋಷಗಳನ್ನು ಹಾಕಿದನು. ಇಡೀ ಜಗತ್ತು ರಾಮನನ್ನು ಪೂಜಿಸುತ್ತಿದೆ ಮತ್ತು ರಾವಣ ಕೆಟ್ಟ ವ್ಯಕ್ತಿ ಎಂದು ಹೇಳುತ್ತಿದೆ ಎಂದು ಹೇಳಿದ್ದಳು. ಇದನ್ನೂ ಓದಿ: ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು: ಡಾ.ಕೆ.ಸುಧಾಕರ್

    ಈ ಬಗ್ಗೆ ವಿಶ್ವವಿದ್ಯಾಲಯ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಗುರ್ಸಾಂಗ್ ಪ್ರೀತ್ ನೀಡುವ ಹೇಳಿಕೆಗಳೆಲ್ಲವೂ ವೈಯಕ್ತಿಕವಾಗಿವೆ. ಇವು ಯಾವುದು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿಲ್ಲ. ನಾವು ಯಾವಾಗಲೂ ಜಾತ್ಯಾತೀತ ವಿಶ್ವವಿದ್ಯಾನಿಲಯವಾಗಿದ್ದೇವೆ. ಎಲ್ಲಾ ಧರ್ಮಗಳು ಮತ್ತು ನಂಬಿಕೆಯ ಜನರನ್ನು ಸಮಾನವಾಗಿ ಪ್ರೀತಿ ಮತ್ತು ಗೌರವದಿಂದ ನೋಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ: ಆನಂದ್ ಸಿಂಗ್