Tag: love

  • ಮಾಡಬಾರದ್ದನ್ನು ಮಾಡಿ ದಕ್ಷಿಣ ಭಾರತ ಹುಡುಗೀರು ಮದ್ವೆಯಾಗೋಕೆ ಲಾಯಕ್ಕಿಲ್ಲ ಎಂದ ವಂಚಕ!

    ಮಾಡಬಾರದ್ದನ್ನು ಮಾಡಿ ದಕ್ಷಿಣ ಭಾರತ ಹುಡುಗೀರು ಮದ್ವೆಯಾಗೋಕೆ ಲಾಯಕ್ಕಿಲ್ಲ ಎಂದ ವಂಚಕ!

    – ಹುಬ್ಬಳ್ಳಿಯಲ್ಲಿ ಆರ್‍ಪಿಎಫ್ ಮಹಿಳಾ ಪೇದೆಗೆ ವಂಚನೆ
    – ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ರೈಲ್ವೇ ಎಂಜಿನಿಯರ್

    ಹುಬ್ಬಳ್ಳಿ: ಮಹಿಳಾ ಪೊಲೀಸ್ ಪೇದೆಗೆ ಮದುವೆಯಾಗುತ್ತೇನೆಂದು ನಂಬಿಸಿ ವಂಚಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ರೈಲ್ವೆ ಮಹಿಳಾ ಪೆÇಲೀಸ್ ಪೇದೆಯಾಗಿ ಕೆಲಸ ಮಾಡುತಿದ್ದ ಸೋನಿ (33) ಎಂಬ ಯುವತಿಗೆ ಸೌತ್ ವೆಸ್ಟರ್ನ್ ರೈಲ್ವೆ ಇಂಜಿನಿಯರ್ ಕಮಲೇಶ್ ಎಂಬ ಯುವಕ ಮದುವೆ ಆಗುವುದಾಗಿ ಹೇಳಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಮಾಡಿ ಈಗ ಬೇರೊಂದು ಯುವತಿಯೊಂದಿಗೆ ಮದುವೆಗೆ ಮುಂದಾಗಿದ್ದಾನೆ. ವಂಚನೆಗೆ ಒಳಗಾದ ಯುವತಿ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

    ಯುವತಿಯ ದೂರಿನಲ್ಲಿ ಏನಿದೆ..?
    ನಾನು ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಪ್ರೊಟೆಕ್ಷನ್ ಫೋರ್ಸ್ ಹುಬ್ಬಳ್ಳಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಮಹಿಳಾ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದೆ. ಕಳೆದ ಎರಡು ವರ್ಷಗಳ ಹಿಂದೆ ನನಗೆ ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಸೀನಿಯರ್ ಸೆಕ್ಷನ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕಮಲೇಶ್ ಕುಮಾರ್ ಎಂಬುವರ ಪರಿಚಯವಾಯಿತು. ನಂತರ ನಾವಿಬ್ಬರ ಒಳ್ಳೆಯ ಸ್ನೇಹಿತರಾದೆವು. ನಂತರ ಕಮಲೇಶ್ ಆಗಾಗ ನನ್ನೊಂದಿಗೆ ಫೋನ್‍ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ದ. ಕಮಲೇಶ್ ಒಂದು ದಿನ ನನ್ನನ್ನು ಪ್ರೀತಿಸುವುದಾಗಿ ಹೇಳಿದ. ಆದ್ರೆ ನಾ ಅದಕ್ಕೆ ಒಪ್ಪಲಿಲ್ಲ.

    ಒಂದು ದಿನ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಇರುವ ತನ್ನ ಕ್ವಾಟರ್ಸ್‍ಗೆ ನನನ್ನು ಕರೆದ. ಆದ್ರೆ ನಾ ಹೋಗಲಿಲ್ಲ, ಇಲ್ಲ ನನ್ನ ಮನೆಯವರು ನಿಗಾಗಿ ಕಾಯುತ್ತಿದ್ದಾರೆ. ನಿನನ್ನು ಪರಿಚಯ ಮಾಡಿಕೊಡುವುದಿದೆ ಬಾ ಎಂದು ಕರೆದ. ಮಧ್ಯಪ್ರದೇಶದಿಂದ ನನ್ನ ತಂದೆ ತಾಯಿಗಳು ಬಂದಿದ್ದಾರೆ, ನೀ ಬರಲೇಬೇಕು ಎಂದು ಕೇಳಿಕೊಂಡ. ಹೀಗಾಗಿ ನಾನು ಅವನ ಮನೆಗೆ ಹೋಗಲು ಒಪ್ಪಿದೆ. ಅದೇ ಪ್ರಕಾರವಾಗಿ ನಾನು ಅವನ ಮನೆಗೆ ಹೋದೆ. ಆದ್ರೆ ಅವನ ಮನೆಯಲ್ಲಿ ಯಾರು ಇರಲಿಲ್ಲ. ಅದೇ ಸಮಯದಲ್ಲಿ ಕಮಲೇಶ್ ನನ್ನನ್ನು ಮದುವೆ ಆಗುವುದಾಗಿ ಹೇಳಿ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ. ಆದ್ರೆ ನನಗೆ ತುಂಬಾ ಭಯವಾಯಿತು. ಆದ್ರೆ ಕಮಲೇಶ್ ನನ್ನ ಹಣೆಗೆ ಸಿಂಧೂರ ಇಟ್ಟು ನಮ್ಮ ಮದುವೆ ಆಗಿದೆ, ನೀ ಇನ್ನು ಭಯ ಪಡುವ ಚಿಂತೆ ಇಲ್ಲ ಎಂದು ಹೇಳಿ ನನ್ನನ್ನು ನಂಬಿಸಿದ. ನಂತರ ನಾನು ಅವನನ್ನು ನಂಬಿದೆ. ಹೀಗೆ ಹಲವಾರು ಸಾರಿ ಕಮಲೇಶ್ ನನ್ನನ್ನು ದೈಹಿಕವಾಗಿ ಬಳಸಿಕೊಂಡ. ನಂತರ ನನಗೆ ಅಪಾರ ಪ್ರೀತಿ ತೋರಿಸುತ್ತಿದ್ದ. ಬಳಿಕ ಕೆಲ ದಿನಗಳ ನಂತರ ನನ್ನಿಂದ ದೂರವಾಗ ತೊಡಗಿದ. ನನಗೆ ಅವನು ಇಲ್ಲದ ಜೀವನ ಬೇಸರವಾಗತೊಡಗಿತು. ನೀ ಯಾಕೆ ಹೀಗೆ ಮಾಡುತ್ತೀಯಾ ಎಂದು ಕೇಳಿದರೂ ಅವನು ನನಗೆ ಏನೂ ಹೇಳಲಿಲ್ಲ.

    ನೀನು ಹೀಗೆಲ್ಲಾ ಮಾಡಿದ್ರೆ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಡುತ್ತೇನೆ ಎಂದು ನಾನು ಹೇಳಿದಾಗ ನನ್ನ ಬಳಿ ನಿನ್ನ ಅಶ್ಲೀಲ ವಿಡಿಯೋ ಇದೆ. ಇದನ್ನು ಫೇಸ್ ಬುಕ್‍ನಲ್ಲಿ ಕಳಿಸುತ್ತೇನೆ ಎಂದು ಹೆದರಿಸಿದ. ಹೀಗಾಗಿ ಭಯದಿಂದ ಸುಮ್ಮನಾದೆ. ಬಳಿಕ ನೀ ಹೀಗೆ ತಾಳ್ಮೆಗೆಟ್ಟರೆ ಹೇಗೆ..? ನೀ ತಾಳ್ಮೆಯಿಂದ ಇದ್ದುಬಿಡು ನಾ ನಮ್ಮ ಮನೆಯಲ್ಲಿ ಒಪ್ಪಿಸಿ ಮದುವೆ ಆಗುತ್ತೇನೆ ಎಂದು ಹೇಳಿ ಮತ್ತೆ ನನ್ನ ಜೊತೆ ಲೈಂಗಿಕ ಸಂಪರ್ಕ ಮಾಡಿದ.

    ನಂತರ 2015ರ ಡಿಸೆಂಬರ್ ತಿಂಗಳಲ್ಲಿ ಆತನ ಊರಾದ ಹೊಸಂಗಾಬಾದ್ ಹೋಗಿ ತನ್ನ ಮನೆಯವರನ್ನು ಒಪ್ಪಿಸಿ, ಮದುವೆ ಆಗುತ್ತೇನೆ ಎಂದು ಊರಿಗೆ ಹೋದ. ಆದ್ರೆ ಕೆಲ ದಿನಗಳ ನಂತರ ಹುಬ್ಬಳ್ಳಿಗೆ ಬಂದ ಅವನು ನಾ ಬೇರೊಂದು ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡೆ ಎಂದು ಹೇಳಿದ. ಅಲ್ಲದೆ ತನ್ನ ನಿಶ್ಚಿತಾರ್ಥದ ಫೋಟೋಗಳನ್ನು ಫೇಸ್ ಬುಕ್‍ನಲ್ಲಿ ಪ್ರಕಟಿಸಿದ.

    ಡಿಸೆಂಬರ್ 19ರಂದು ಆತನ ಮನೆಗೆ ಹೋಗಿ ನೀ ನನಗೆ ಮೋಸ ಮಾಡಿದೆ ಎಂದು ಹೇಳಿದೆ. ಆದಕ್ಕೆ ಆತ, ಸೌಥ್ ಕಿ ಲಡಕಿಯೋ ಸಿರ್ಫ್ ಯೂಸ್ ಕರ್ ಸಕತೆ ಹೈ. ಘರ್ ಬಸಾನೇ ಕೇ ಲಿಯೇ ತುಮ್ ಲೋಗ್ ಲಾಯಕ್ ನಹೀ ಹೈ ಎಂದು ಹೇಳಿದ. ಹೀಗಾಗಿ ಅವನ ಕಠೋರ ಮಾತುಗಳನ್ನು ಕೇಳಿದ ನನಗೆ ತುಂಬಾ ದುಃಖವಾಯಿತು. ನಂತರ ನನ್ನ ಮತ್ತು ಕಮಲೇಶ್ ವಿಚಾರ ಕಮಲೇಶ್ ಮದುವೆ ಆಗುತ್ತಿರುವ ಯುವತಿಯ ಮನೆಯಲ್ಲಿ ಗೊತ್ತಾಯಿತು. ಹೀಗಾಗಿ ಅವನ ನಿಶ್ಚಿತಾರ್ಥ ಕೂಡಾ ಮುರಿದು ಬಿದ್ದಿತ್ತು.

    ನಿನ್ನ ಜೊತೆ ದೇಹ ಹಂಚಿಕೊಂಡಿರುವ ನನಗೆ ನಿನ್ನ ಆಸರೆ ಬೇಕು, ನೀ ನನ್ನ ಮದುವೆಯಾಗಿ, ಈ ಸಮಾಜದಲ್ಲಿ ನನನ್ನು ಪತ್ನಿಯಾಗಿ ಸ್ವೀಕರಿಸು ಎಂದು ಅಂಗಲಾಚಿ ಕೇಳಿಕೊಂಡೆ. ಆದ್ರೆ ಅದಕ್ಕೆ ಅವನು ಒಪ್ಪಲಿಲ್ಲ. ನನಗೆ ದಾರಿ ಕಾಣದಾಯಿತು. ಹೀಗಾಗಿ ನಾನೇ ಅವನ ಊರಿಗೆ ಹೋಗಿ ಅವರ ಅಪ್ಪ, ಅಮ್ಮ, ಭಾವ, ಅತ್ತಿಗೆಗೆ ನಮ್ಮ ವಿಷಯ ಹೇಳಿದಿರಿ. ಆದ್ರೆ ಅದಕ್ಕೆ ಅವರು ನಿನ್ನ ಬಳಿ ಸಾಕ್ಷಿ ಇದೆಯಾ ಎಂದು ಕೇಳಿದ್ರು. ನನಗೆ ನನ್ನ ಜೀವನವೇ ಬೇಸರವಾಯಿತು. ನಾ ಮತ್ತೆ ಅಲ್ಲಿಂದ ಹುಬ್ಬಳ್ಳಿಗೆ ಬಂದೆ. ಇಲ್ಲಿ ಬಂದ ಮೇಲೆ ಅವನನ್ನು ಮದುವೆ ಆಗುವಂತೆ ಅಂಗಲಾಚಿ ಕೇಳಿಕೊಂಡೆ. ಪರಿ ಪರಿಯಾಗಿ ಬೇಡಿಕೊಂಡರೂ ಅವನು ನನ್ನನ್ನು ತಪ್ಪಿಸಿ ಓಡಾಡುತ್ತಿದ್ದಾನೆ.

    ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಾನು ಲಿಖಿತ ರೂಪದಲ್ಲಿ ದೂರು ನೀಡಿರುವೆ, ಆದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ನಾ ಇಂದು ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡುತ್ತಿರುವೆ. ನೀವಾದರೂ ನನಗೆ ನ್ಯಾಯ ಕೊಡಿಸುತ್ತೀರಿ ಎಂಬ ನಂಬಿಕೆ ನನಗೆ ಉಳಿದಿದೆ.

    ಇಂತಿ ನಿಮ್ಮ,

    ನೊಂದವಳು

  • 40ರ ಟೀಚರ್ ಜೊತೆ 16ರ ಹುಡುಗನ ಲವ್- ಮನೆಯವರ ವಿರೋಧಕ್ಕೆ ಮೇಡಂ ಜೊತೆ ಪರಾರಿ

    40ರ ಟೀಚರ್ ಜೊತೆ 16ರ ಹುಡುಗನ ಲವ್- ಮನೆಯವರ ವಿರೋಧಕ್ಕೆ ಮೇಡಂ ಜೊತೆ ಪರಾರಿ

    ಕಲಬುರಗಿ: ಆಕೆ 40ರ ಆಂಟಿ, ಆದ್ರೆ ಆ ಶಿಕ್ಷಕಿಗೆ ತನ್ನ ಕಾಮದಾಹ ತಿರಿಸಿಕೊಳ್ಳಲು ಬೇಕು 16ರ ನಾಟಿ ಬಾಯ್. ಇಂತಹದೊಂದು ವಿಚಿತ್ರವಾದ ಪ್ರಕರಣ ಬಿಸಿಲನಾಡು ಕಲಬುರಗಿಯಲ್ಲಿ ನಡೆದಿದೆ. ಶಿಕ್ಷಕಿಯ ಪ್ರೀತಿಗೆ ಬಲೆಗೆ ಬಿದ್ದ ಬಾಲಕ ಇದೀಗ ಮನೆ ಬಿಟ್ಟು ಪರಾರಿಯಾಗಿದ್ದು ಬಾಲಕನಿಗಾಗಿ ಪೋಷಕಕರು ಕಣ್ಣಿರಿಡುತ್ತಿದ್ದಾರೆ.

    ಕಲಬುರಗಿ ನಗರದ ಶೇಕ್ ರೋಜಾ ಬಡಾವಣೆ ನಿವಾಸಿಗಳಾದ ಅತಿಕ್ ಹಾಗೂ ಭಾನು ಬೇಗಂ ದಂಪತಿಗೆ 16 ವರ್ಷದ ಒಬ್ಬನೇ ಮಗನಿದ್ದು, 2 ವರ್ಷದ ಹಿಂದೆ ತನ್ನ ಶಿಕ್ಷಕಿ ಬಿಲ್ಕಿಸ್ ಪ್ರೀತಿಯ ಬಲೆಗೆ ಬಿದ್ದಿದ್ದ. ಯಾವಾಗ ಪೋಷಕರಿಗೆ ವಿಚಾರ ತಿಳಿದು ವಿರೋಧ ವ್ಯಕ್ತಪಡಿಸಿದ್ರೋ ಕಳೆದ ವರ್ಷ ನವೆಂಬರ್‍ನಲ್ಲಿ ಶಿಕ್ಷಕಿ ಜೊತೆ ಪರಾರಿಯಾಗಿದ್ದಾನೆ.

    ಬಾಲಕನ ಪೋಷಕರು

    ಮಗನ ನಾಪತ್ತೆ ಕುರಿತು ಪೋಷಕರು ಹಲವು ಬಾರಿ ದೂರು ಕೊಟ್ರು ಪೊಲೀಸರು ಕ್ಯಾರೆ ಅನ್ಲಿಲ್ಲ. ಮಕ್ಕಳ ಸಹಾಯವಾಣಿ ಸದಸ್ಯರ ನೆರವು ಪಡೆದಾಗ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಬಾಲಕನ ಮಿಸ್ಸಿಂಗ್ ಕೇಸ್ ದಾಖಲಾಗಿದೆ.

    ಶಿಕ್ಷಕಿ ಬಿಲ್ಕಿಸ್‍ಗೆ ಮದುವೆಯಾಗಿ 2 ಮಕ್ಕಳು ಇದ್ರು ಗಂಡನಿಗೆ ವಿಚ್ಛೇಧನ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

     

  • 2ನೇ ಮದುವೆಗೆ ಪೋಷಕರ ವಿರೋಧ – ಮಹಿಳೆ ಆತ್ಮಹತ್ಯೆಗೆ ಶರಣು

    2ನೇ ಮದುವೆಗೆ ಪೋಷಕರ ವಿರೋಧ – ಮಹಿಳೆ ಆತ್ಮಹತ್ಯೆಗೆ ಶರಣು

    ಮೈಸೂರು: ಎರಡನೇ ಮದುವೆಗೆ ಪೋಷಕರು ಒಪ್ಪದ ಕಾರಣ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಮೈಸೂರಿನ ನಾಯ್ಡು ನಗರದಲ್ಲಿ ನಡೆದಿದೆ.

    ಮೆಲೀನಾ (26) ಆತ್ಮಹತ್ಯೆಗೆ ಶರಣಾದ ಮಹಿಳೆ. ಮೆಲೀನಾ ವಿವಾಹದ ನಂತರ ತಮ್ಮ ಪತಿಯನ್ನು ಕಳೆದುಕೊಂಡು ತವರು ಮನೆಯಲ್ಲಿಯೇ ವಾಸವಾಗಿದ್ದರು. ಮೆಲೀನಾ ನಗರದ ಎನ್.ಆರ್.ಮೊಹಲ್ಲಾದ 21 ವರ್ಷದ ರೋಷನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದರು. ಮೆಲೀನಾ ಮನೆಯಲ್ಲಿ ರೋಷನ್ ಜೊತೆ ಮದುವೆ ಮಾಡಿಕೊಡುವಂತೆ ಕೇಳಿದ್ದರು. ಆದರೆ ಆತ ಮೆಲೀನಾಗಿಂತ 5 ವರ್ಷ ಚಿಕ್ಕವನಾದ ಕಾರಣ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ನೊಂದ ಮೆಲೀನಾ ನೇಣಿಗೆ ಕೊರಳೊಡ್ಡಿದ್ದಾರೆ.

    ಸಾವಿಗೂ ಮುನ್ನ ಮೆಲೀನಾ ಡೆತ್ ನೋಟ್ ಬರೆದಿಟ್ಟಿದ್ದು, ತಮ್ಮ ಸಂಬಂಧಿಕರ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾರೆ. ಡೆತ್ ನೋಟ್ ಆಧರಿಸಿ ಮಮತಾ, ಲಿಲ್ಲಿ, ಮಲ್ಲಿಕಾ ಮತ್ತು ಇರ್ದುರಾಜ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮ ರೋಷನ್ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

     

  • ಇಂದು ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಯುವತಿ ಮನೆಯಿಂದ ನಾಪತ್ತೆ

    ಇಂದು ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಯುವತಿ ಮನೆಯಿಂದ ನಾಪತ್ತೆ

    ಕೊಪ್ಪಳ: ಇಂದು ನಿಶ್ಚತಾರ್ಥ ಮಾಡಿಕೊಳ್ಳಬೇಕಿದ್ದ ಯುವತಿ ಮಂಗಳವಾರ ಮಧ್ಯಾಹ್ನ ತನ್ನ ಗೆಳತಿಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಮನೆಯಿಂದ ಹೊರ ಹೋದವಳು ನಾಪತ್ತೆಯಾಗಿದ್ದಾಳೆ.

    ಕವಿತಾ(22) ನಾಪತ್ತೆಯಾಗಿರುವ ಯುವತಿ. ಗಂಗಾವತಿ ತಾಲೂಕಿನ ಯರಡೋಣ ಗ್ರಾಮದ ನಿವಾಸಿಯಾಗಿರುವ ಕವಿತಾ ಜೊತೆ ಇಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಗ್ರಾಮದ ಯುವಕನೊಂದಿಗೆ ಮದುವೆ ನಿಶ್ಚಯ ಕಾರ್ಯಕ್ರಮ ನಡೆಯಬೇಕಿತ್ತು.

    ಶ್ರೀಕಾಂತ್

    ಪ್ರಿಯಕರನ ಜೊತೆ ಪರಾರಿ?: ಕವಿತಾ ಕಳೆದ 2 ವರ್ಷಗಳಿಂದ ಕಾರಟಗಿ ಗ್ರಾಮದ ಶ್ರೀಕಾಂತ್ ಎಂಬ ಯುವಕನ ಜೊತೆ ಪ್ರೇಮಾಂಕುರವಾಗಿತ್ತು. ಕವಿತಾ ಮತ್ತು ಶ್ರೀಕಾಂತ್ ಜಾತಿ ಬೇರೆಯಾಗಿದ್ದರಿಂದ ಕವಿತಾ ಮನೆಯಲ್ಲಿ ಇಬ್ಬರ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ವಿಷಯ ತಿಳಿದ ಕವಿತಾ ಪಾಲಕರು ತರಾತುರಿಯಲ್ಲಿ ಕವಿತಾಗೆ ಮದುವೆ ನಿಶ್ಚಯಕ್ಕೆ ಮುಂದಾಗಿದ್ದರು.

    ಈ ಮದುವೆ ಇಷ್ಟವಿಲ್ಲದ ಹಿನ್ನೆಲೆಯಲ್ಲಿ ನಿಶ್ಚಿತಾರ್ಥಕ್ಕೆ ಮುನ್ನಾ ದಿನ ಯುವತಿ ಪ್ರಿಯಕರ ಶ್ರೀಕಾಂತ್ ಜೊತೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

    ಕವಿತಾ ಪಾಲಕರ ಅನುಮಾನಕ್ಕೆ ಪುಷ್ಠಿ ಎನ್ನುವಂತೆ ಶ್ರೀಕಾಂತ್ ಕೂಡ ಗ್ರಾಮದಲ್ಲಿ ಕಾಣಿಸುತ್ತಿಲ್ಲ. ಈ ಬಗ್ಗೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಶ್ರೀಕಾಂತ್ ಕವಿತಾರನ್ನು ಅಪಹರಿಸಿದ್ದಾರೆ ಎಂದು ಕವಿತಾ ಪಾಲಕರು ದೂರು ನೀಡಲು ಮುಂದಾಗಿದ್ದಾರೆ.

     

  • ಯುವತಿ ಕಣ್ಣೆದುರೇ ಹೊಟ್ಟೆಗೆ ಚಾಕು ಚುಚ್ಚಿಕೊಂಡ ಯುವಕ

    ಮಂಡ್ಯ: ಯುವತಿಯೊಬ್ಬಳು ತನ್ನ ಪ್ರೀತಿಯನ್ನ ನಿರಾಕರಿಸಿದಳು ಎಂಬ ಕಾರಣಕ್ಕೆ ಅವಳ ಎದುರೇ ಭಗ್ನ ಪ್ರೇಮಿ ತನ್ನ ಹೊಟ್ಟೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.

    ಹಾಸನ ಮೂಲದ 29 ವರ್ಷದ ಯುವಕ ಉಮೇಶ್ ಆತ್ಮಹತ್ಯೆಗೆ ಯತ್ನಿಸಿದ ಭಗ್ನಪ್ರೇಮಿ. ಉಮೇಶನಿಗೆ ಯುವತಿ ಸಂಬಂಧಿಕಳೇ ಆಗಿದ್ದು ಹಲವು ವರ್ಷಗಳಿಂದ ಆಕೆಯನ್ನ ಪ್ರೀತಿ ಮಾಡುತ್ತಿದ್ದ. ಆದ್ರೆ ಯುವತಿ ಉಮೇಶನ ಪ್ರೀತಿ ನಿರಾಕರಿಸಿದ್ದಾಳೆ. ಇದರಿಂದ ಮಂಗಳವಾರ ರಾತ್ರಿ ಉಮೇಶ್ ಯುವತಿ ವಾಸವಿದ್ದ ರೂಮ್ ಬಳಿ ಬಂದಿದ್ದಾನೆ. ನನ್ನನ್ನು ಪ್ರೀತಿಸು, ಇಲ್ಲದಿದ್ರೆ ನಿನ್ನ ಕಣ್ಣೆದುರೇ ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

    ಯುವತಿ ಉಮೇಶನ ಮಾತಿಗೆ ಕರಗದಿದ್ದಾಗ, ಯುವಕ ಕೈಯಲ್ಲಿದ್ದ ಚಾಕುವಿನಿಂದ ಹೊಟ್ಟೆಗೆ ಚುಚ್ಚಿಕೊಂಡಿದ್ದಾನೆ. ಇದನ್ನ ಗಮನಿಸಿದ ಸ್ಥಳೀಯರು ತಕ್ಷಣ ಉಮೇಶನನ್ನ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಗರ್ಭಿಣಿಯಾಗಿಸಿ ಕೈಕೊಟ್ಟ ಯುವಕ- ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ

    ಹಾವೇರಿ: ಪ್ರೀತ್ಸು.. ಪ್ರೀತ್ಸು.. ಅಂತ ಹಿಂದೆ ಬಿದ್ದು 2 ವರ್ಷಗಳ ಕಾಲ ಪ್ರೀತಿ ಮಾಡಿ ಸಂಬಂಧ ಬೆಳೆಸ್ದ. ಕೊನೆಗೆ ಕೈಕೊಟ್ಟು ಎಸ್ಕೇಪ್ ಆದ ವಂಚಕನ ಪತ್ತೆಗಾಗಿ ಯುವತಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

    2 ವರ್ಷದ ಹಿಂದೆ ಅನ್ಯಜಾತಿಯ ಯುವಕ ಗಂಗಾಧರ್ ಎಂಬಾತ ಹಾವೇರಿಯ ರಾಣೇಬೆನ್ನೂರಿನ ಹರನಗಿರಿ ನಿವಾಸಿ ದುರ್ಗಾಳ ಬೆನ್ನು ಬಿದ್ದು ಪ್ರೀತಿ ಮಾಡಿದ್ದ. ಬಳಿಕ ದೈಹಿಕ ಸಂಪರ್ಕ ಬೆಳೆಸಿ ಕೈ ಕೊಟ್ಟು ಎಸ್ಕೇಪ್ ಆಗಿದ್ದಾನೆ. ಇದೀಗ ಯುವತಿ ಆರು ತಿಂಗಳ ಗರ್ಭಿಣಿಯಾಗಿದ್ದು, ನನಗೆ ನ್ಯಾಯ ಕೊಡಿಸಿ ಅಂತಿದ್ದಾಳೆ.

    ಯುವತಿ ಸದ್ಯ ಸರಸ್ವತಿ ಸ್ವಾಂತನ ಕೇಂದ್ರದ ಮೂಲಕ ದೂರು ದಾಖಲಿಸಿದ್ದಾಳೆ. ಸಂಸ್ಥೆಯ ಅಧ್ಯಕ್ಷೆ ಶಾರದಾ ಯುವತಿಗೆ ಧೈರ್ಯ ಹೇಳಿ ಮದುವೆ ಮಾಡಿಸುವ ಭರವಸೆ ನೀಡಿದ್ದಾರೆ. ಆದ್ರೆ ಪ್ರೀತಿಸಿ ಕೈ ಕೊಟ್ಟ ಆ ಮಹಾಶಯ ಎಲ್ಲಿದ್ದಾನೋ ಗೊತ್ತಿಲ್ಲ. ಆದ್ರೆ ನನ್ನನ್ನ ಆತನೊಂದಿಗೆ ಮದುವೆ ಮಾಡಿಸಿ, ನನಗೆ ನ್ಯಾಯ ಕೊಡಿಸಿ ಅಂತಾ ಹೇಳ್ತಿದ್ದಾಳೆ ಈ ಯುವತಿ.