Tag: love reset

  • ‘ಲವ್ ರೀಸೆಟ್’ ಅಂತಿದ್ದಾರೆ ನಟಿ ಸಂಜನಾ ಬುರ್ಲಿ

    ‘ಲವ್ ರೀಸೆಟ್’ ಅಂತಿದ್ದಾರೆ ನಟಿ ಸಂಜನಾ ಬುರ್ಲಿ

    ಹಿರಿತೆರೆಯಲ್ಲಿ ಮೊದಲ ಚಿತ್ರ ನಿರ್ದೇಶಿಸುವವರು ಮೊದಲು ಕಿರುಚಿತ್ರದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುತ್ತಾರೆ. ಎಷ್ಟೋ ಕಿರುಚಿತ್ರಗಳು ಜನರ ಮನಸ್ಸಿಗೆ ಹತ್ತಿರವಾಗಿರುವುದು ಹೌದು. ಅಂತಹ ವಿಭಿನ್ನ ಕಿರುಚಿತ್ರ ಲವ್ ರೀಸೆಟ್ (Love Reset) ಇತ್ತೀಚೆಗೆ ಬಿಡುಗಡೆಯಾಗಿದೆ. ಶ್ರೀಗಣೇಶ್ ನಿರ್ದೇಶಿಸಿ, ಪುಟ್ಟಕ್ಕನ ಮಕ್ಕಳು ಖ್ಯಾತಿಯ ಪವನ್ ಕುಮಾರ್ (Pawan Kumar) ಹಾಗೂ ಸಂಜನಾ ಬುರ್ಲಿ (Sanjana Burli) ನಾಯಕ, ನಾಯಕಿಯಾಗಿ ನಟಿಸಿರುವ ಈ ಕಿರುಚಿತ್ರದ ಪ್ರೀಮಿಯರ್ ಹಾಗೂ ಪತ್ರಿಕಾಗೋಷ್ಠಿ ಇತ್ತೀಚಿಗೆ ನಡೆಯಿತು. ಪುಟ್ಟಕ್ಕನ ಮಕ್ಕಳು ಧಾರಾವಾಹಿ ತಂಡದವರು, ಬಿಗ್ ಬಾಸ್ ಖ್ಯಾತಿಯ ಸ್ನೇಹಿತ್, ಭೂಮಿ ಶೆಟ್ಟಿ, ರಮೇಶ್ ಪಂಡಿತ್, ಕಲಾಗಂಗೋತ್ರಿ ಮಂಜು, ಪದ್ಮಕಲಾ ಸೇರಿದಂತೆ ಅನೇಕ ಗಣ್ಯರು ಪ್ರೀಮಿಯರ್ ಗೆ ಆಗಮಿಸಿ ತಂಡಕ್ಕೆ ಶುಭ ಕೋರಿದರು.

    ಪ್ರದರ್ಶನದ ನಂತರ ಮಾತನಾಡಿದ ನಿರ್ದೇಶಕ ಶ್ರೀಗಣೇಶ್,  ನಾನು ಮೂಲತಃ ಐಟಿ ಉದ್ಯೋಗಿ.  ಸಿನಿಮಾ ಮಾಡಬೇಕೆಂಬ ಆಸೆಯಿದೆ. ಅದರ ಪೂರ್ವಭಾವಿಯಾಗಿ ಈ ಕಿರುಚಿತ್ರ ಮಾಡಿದ್ದೇನೆ. ಇದೊಂದು ಪ್ರೇಮ ಕಥಾನಕ. ಈಗಿನ ಪ್ರೇಮಿಗಳ ಮನಸ್ಥಿತಿಯನ್ನು 25 ನಿಮಿಷಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಈ ಕಿರುಚಿತ್ರದಲ್ಲಿ ವಿ. ನಾಗೇಂದ್ರ ಪ್ರಸಾದ್ ಬರೆದಿರುವ “ಅನುರಾಗದ ನೆನಪೀಗ ಕೊನೆಯಾಗಲಿ’ ಎಂಬ ಸುಂದರವಾದ ಹಾಡೊಂದಿದೆ. ಸರಿಗಮಪ ಖ್ಯಾತಿಯ ಸುನೀಲ್, ಅನನ್ಯ ಪ್ರಕಾಶ್ ದನಿಯಾಗಿರುವ ಈ ಹಾಡಿಗೆ ಜೋಯಲ್ ಹಾಗೂ ಅಭಿಲಾಶ್ ಸಂಗೀತ ನೀಡಿದ್ದಾರೆ ಎಂದು ತಿಳಿಸಿದರು.

    ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮುರಳಿ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲೂ ನಟಿಸುವ ಆಸಯಿದೆ. ಈ ಕಿರುಚಿತ್ರದಲ್ಲಿ ಅಮರ್ ನನ್ನ ಪಾತ್ರದ ಹೆಸರು. ಪ್ರೀತಿ ಹಾಗೂ ಕೆರಿಯರ್ ವಿಷಯ ಬಂದಾಗ ಹುಡುಗ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದನ್ನು ನಿರ್ದೇಶಕರು ಇದರಲ್ಲಿ ತೋರಿಸಿದ್ದಾರೆ ಎಂದು ನಾಯಕ ಪವನ್ ಕುಮಾರ್ ತಿಳಿಸಿದರು.  ಕಥೆ ಬಹಳ ಡಿಫರೆಂಟ್ ಆಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ನೋಡಿ ಹಾರೈಸಿ ಎಂದರು ನಾಯಕಿ ಸಂಜನ ಬುರ್ಲಿ.

     

    ಛಾಯಾಗ್ರಾಹಕ ಪ್ರಜ್ವಲ್ ಭಾರದ್ವಾಜ್ ಸೇರಿದಂತೆ ಅನೇಕ ತಂತ್ರಜ್ಞರು ಕಿರುಚಿತ್ರದ ಬಗ್ಗೆ ಮಾತನಾಡಿದರು. ರಂಜಿತ್ ಶಂಕರೇಗೌಡ ಸಹ ನಿರ್ದೇಶಕರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

  • ‘ಲವ್ ರೀಸೆಟ್’ ಅಂತ ಕಥೆ ಹೇಳಲು ಸಜ್ಜಾದ ನಟಿ ಸಂಜನಾ ಬುರ್ಲಿ

    ‘ಲವ್ ರೀಸೆಟ್’ ಅಂತ ಕಥೆ ಹೇಳಲು ಸಜ್ಜಾದ ನಟಿ ಸಂಜನಾ ಬುರ್ಲಿ

    ಕಿರುತೆರೆ ಜನಪ್ರಿಯ ‘ಪುಟ್ಟಕ್ಕನ ಮಕ್ಕಳು’ (Puttakana Makkalu) ಸೀರಿಯಲ್ ನಾಯಕಿ ಸಂಜನಾ ಬುರ್ಲಿ (Sanjana Burli) ಇದೀಗ ಲವ್ ರೀಸೆಟ್ ಅಂತ ಹೊಸ ಲವ್ ಸ್ಟೋರಿ ಹೇಳಲು ಸಜ್ಜಾಗಿದ್ದಾರೆ. ಸದ್ಯ ಸಂಕ್ರಾಂತಿ ಹಬ್ಬದಂದು (ಜ.15) ‘ಲವ್ ರೀಸೆಟ್’ (Love Reset) ಚಿತ್ರದ ಟ್ರೈಲರ್ ಮೂಲಕ ನಟಿ ಸದ್ದು ಮಾಡುತ್ತಿದ್ದಾರೆ.

    ಸಂಜನಾ ಬುರ್ಲಿ ಮತ್ತು ಪವನ್ ಕುಮಾರ್ (Pavan Kumar) ನಟಿಸಿರುವ ‘ಲವ್ ರೀಸೆಟ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಸ್ನೇಹ ಪಾತ್ರ ಮರೆಸುವಷ್ಟು ಡಿಫರೆಂಟ್ ರೋಲ್‌ನಲ್ಲಿ ಸಂಜನಾ ನಟಿಸಿದ್ದು, ಟ್ರೈಲರ್ ಝಲಕ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರಶಂಸೆ ಸಿಗುತ್ತಿದೆ. ಇದೀಗ ಬಿಟ್ಟಿರುವ ಟ್ರೈಲರ್ ತುಣುಕಿನಲ್ಲಿ ಚಿತ್ರದ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.

    ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಆ್ಯಕ್ಟೀವ್ ಇರುವ ನಟಿ ಸಂಜನಾಗೆ ‘ಲವ್ ರೀಸೆಟ್’ ಚಿತ್ರದ ಕಥೆ ಹೇಳಿದಾಗ, ಸ್ಟೋರಿ ಲೈನ್ ವಿಭಿನ್ನ ಎಂದೆನಿಸಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೊಸ ಬಗೆಯ ಪ್ರೇಮ ಕಥೆ ಹೇಳಲು ನಟಿ ರೆಡಿಯಾಗಿದ್ದಾರೆ.

    ‘ಲವ್ ರೀಸೆಟ್’ ಎಂಬ ಈ ಕಿರುಚಿತ್ರದಲ್ಲಿ ಸಂಜನಾ ಬುರ್ಲಿ, ಪುಟ್ಟಕ್ಕನ ಮಕ್ಕಳು, ಕಿನ್ನರಿ ಸೀರಿಯಲ್ ನಟ ಪವನ್ ಕುಮಾರ್, ನಿಖಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀ ಗಣೇಶ್ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ:ವಿನಯ್‌, ನಿಧಿ ಹೆಗಡೆ ನಟನೆಯ ‘ಶಾಖಾಹಾರಿ’ ಚಿತ್ರದ ಮೆಲೋಡಿ ಸಾಂಗ್‌ ರಿಲೀಸ್

    ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್‌ನಲ್ಲಿ ನಾದಿನಿ, ಭಾವ ಕ್ಯಾರೆಕ್ಟರ್‌ ನಟಿಸುತ್ತಿರೋ ಸಂಜನಾ-ಪವನ್‌ ಈ ಚಿತ್ರ ರೊಮ್ಯಾಂಟಿಕ್‌ ಕಪಲ್‌ ಆಗಿ ಕಾಣಿಸಿಕೊಂಡಿರೋದ್ರಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಸದ್ಯ ಟ್ರೈಲರ್‌ನಿಂದ ಮೋಡಿ ಮಾಡುತ್ತಿರುವ ‘ಲವ್ ರೀಸೆಟ್’ ಚಿತ್ರ ಇದೇ ಜ.22ರಂದು ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಲಿದೆ.