Tag: Love Proposal

  • ಮದುವೆಗೆ ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿ, ತಾನೂ ಸಾಯಲು ಪ್ರಯತ್ನಿಸಿದ ಪಾಗಲ್ ಪ್ರೇಮಿ

    ಮದುವೆಗೆ ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿ, ತಾನೂ ಸಾಯಲು ಪ್ರಯತ್ನಿಸಿದ ಪಾಗಲ್ ಪ್ರೇಮಿ

    ವಿಶಾಖಪಟ್ಟಣಂ: ಪ್ರೀತಿಸಿದ ಹುಡುಗಿ ತನ್ನನ್ನು ಮದುವೆಯಾಗಲು ಒಪ್ಪಲಿಲ್ಲ ಎಂದು ಯುವಕನೊಬ್ಬ ಆಕೆಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡು ಸಾಯಲು ಪ್ರಯತ್ನಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಭೂಪಾಲಪಲ್ಲೆ ಮೂಲದ ಪಿ. ಹರ್ಷವರ್ಧನ್ ಹಾಗೂ ವಿಶಾಖಪಟ್ಟಣಂ ಮೂಲದ ಯುವತಿ ಇಬ್ಬರೂ ಖಾಸಗಿ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ಓದುತ್ತಿದ್ದರು. ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚಾಗಿದ್ದರಿಂದ ಅವರು ತಮ್ಮ ತಮ್ಮ ಮನೆಗಳಲ್ಲಿಯೇ ವಾಸವಾಗಿದ್ದರು. ಹರ್ಷವರ್ಧನ್ ಆ ಯುವತಿಯನ್ನು ಪ್ರೀತಿ ಮಾಡುತ್ತಿರುವುದಾಗಿ ಪ್ರಪೋಸಲ್ ಮಾಡಿದ ಮೇಲೆ ಆಕೆ ಆತನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಆತ ಕೋಪಗೊಂಡಿದ್ದ. ಇದನ್ನೂ ಓದಿ: ತಮಿಳು ಚಿತ್ರತಂಡದ ನಂತರ ಮತ್ತೆ ಸಕ್ಕರೆ ನಾಡಿನಲ್ಲಿ ತೆಲುಗು ಸಿನಿಮಾದವರಿಂದ ಅವಾಂತರ

    ಕೆಲವು ದಿನಗಳ ಹಿಂದೆ ಯುವಕ ಆಕೆಯನ್ನು ವೈಜಾಗ್‍ನ ಲಾಡ್ಜ್‌ಗೆ ಕರೆದುಕೊಂಡು ಹೋದ ಆತ ಆಕೆಯ ಮೇಲೆ ಪೆಟ್ರೋಲ್ ಸುರಿದು, ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿ ಜೋರಾಗಿ ಹೊತ್ತಿಕೊಂಡ ನಂತರ ಅವರಿಬ್ಬರೂ ಸಹಾಯಕ್ಕಾಗಿ ಹೊರಗೆ ಓಡಿಬಂದಿದ್ದಾರೆ. ಆಗ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ಧಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕಳ್ಳತನ ಮಾಡುವುದಕ್ಕೂ ಮುನ್ನ ದೇವರ ಪಾದ ಮುಟ್ಟಿ ನಮಸ್ಕರಿಸಿದ!- ವೀಡಿಯೋ ವೈರಲ್

    ನಾನು ಮದುವೆಯಾಗಲು ಒಪ್ಪದ ಕಾರಣದಿಂದ ನನ್ನನ್ನು ಕೊಲೆ ಮಾಡಲು ಮುಂದಾಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆದರೆ ಆತ ನಾವಿಬ್ಬರು ಪ್ರೀತಿಸುತ್ತದ್ದೆವೆ, ಹೀಗಾಗಿ ಒಟ್ಟಿಗೆ ಸಾಯಲು ನಿರ್ಧಾರ ಮಾಡಿದ್ದೆವು ಎಂದು ಹೇಳಿದ್ದಾನೆ. ಇಬ್ಬರು ಬೇರೆ ಬೇರೆ ಹೇಳಿಕೆ ನೀಡಿದ್ದಾರೆ ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಬೋಟ್‍ನಲ್ಲಿ ಲವ್ ಪ್ರಪೋಸ್, ಯುವಕನಿಗೆ ಒದ್ದ ಪ್ರೇಯಸಿ- ವಿಡಿಯೋ

    ಬೋಟ್‍ನಲ್ಲಿ ಲವ್ ಪ್ರಪೋಸ್, ಯುವಕನಿಗೆ ಒದ್ದ ಪ್ರೇಯಸಿ- ವಿಡಿಯೋ

    – ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

    ನವದೆಹಲಿ: ಹಲವರು ತಮ್ಮ ಪ್ರೇಯಸಿಗೆ ವಿಶೇಷವಾಗಿ ಲವ್ ಪ್ರಪೋಸ್ ಮಾಡಬೇಕೆಂಬ ಕನಸು ಕಂಡಿರುತ್ತಾರೆ. ಹಲವರು ಅದೇ ರೀತಿ ಪ್ರಪೋಸ್ ಮಾಡುತ್ತಾರೆ. ಹೀಗೆ ವಿಶೇಷವಾಗಿ ಪ್ರಪೋಸ್ ಮಾಡಲು ಹೋಗಿ ಇಲ್ಲೊಬ್ಬ ಪ್ರೇಯಸಿಯಿಂದ ಒದಿಸಿಕೊಂಡ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ಥಿಯೋ ಶಾಂತೋನಾಸ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಟ್ವೀಟ್ ಮಾಡಲಾಗಿದ್ದು, ಇನ್ನೊಂದು ಬೋಟ್‍ನಲ್ಲಿ ಕುಳಿತಿದ್ದ ಗೆಳತಿಗೆ ಪ್ರಪೋಸ್ ಮಾಡಲು ವ್ಯಕ್ತಿ ಬೋಟ್ ನಲ್ಲಿ ತೆರಳಿದ್ದು, ತನ್ನದೇ ಸಪೋರ್ಟ್‍ನಿಂದ ಬೋಟ್ ಮೇಲೆ ನಿಂತು. ಗೆಳತಿ ಬಳಿ ತೆರಳಿದ್ದಾನೆ. ಇನ್ನೊಂದು ಬೋಟ್‍ನಲ್ಲಿ ಯುವತಿ ಸಹ ತನ್ನ ಬಾಯ್‍ಫ್ರೆಂಡ್ ಬಳಿಗೆ ಬೋಟ್ ತರಲು ಯತ್ನಿಸಿದ್ದಾಳೆ.

    ಹೀಗೆ ಬೋಟ್ ನಿಧಾನವಾಗಿ ಚಲಿಸುತ್ತಿರುವಾಗ ತನ್ನ ಬಾಯ್ ಫ್ರೆಂಡ್‍ಗೆ ಕಿಸ್ ನೀಡಲು ಯುವತಿ ಪ್ರಯತ್ನಿಸಿದ್ದಾಳೆ. ಈ ವೇಳೆ ಅವಳ ಕಾಲು ಜಾರಿದ್ದು, ಬೋಟ್‍ನಲ್ಲೇ ಬಿದ್ದಿದ್ದಾಳೆ. ಆದರೆ ಯುವತಿ ಕಾಲು ಬಾಯ್‍ಫ್ರೆಂಡ್ ಎದೆಗೆ ತಾಗಿದ್ದು, ತಕ್ಷಣ ಬೋಟ್‍ನ ವೇಗ ಹೆಚ್ಚಳವಾಗಿದೆ. ಆಗ ಯುವತಿ ಗೆಳೆಯ ನೀರಿನಲ್ಲಿ ಬಿದ್ದಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    https://twitter.com/TheoShantonas/status/1310241716096643078

    ಘಟನೆಯಲ್ಲಿ ಜೋಡಿಗೂ ಸಹ ಯಾವುದೇ ರೀತಿಯ ಗಾಯಗಳಾಗಿಲ್ಲ. ಸ್ವಲ್ಪ ಸಮಯದ ಬಳಿಕ ದಡ ಸೇರಿದ್ದಾರೆ. ದಡ ಸೇರುತ್ತಿದ್ದಂತೆ ಅಲ್ಲಿದ್ದವರು ಗಾಯಗಳಾಗಿರುವ ಕುರಿತು ಪ್ರಶ್ನಿಸಿದ್ದು, ಎಲ್ಲ ಸರಿಯಾಗಿದೆ. ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಖುಷಿ ವಿಚಾರವೆಂದರೆ ನನ್ನ ಪ್ರಪೋಸಲ್‍ನ್ನು ಅವಳು ಒಪ್ಪಿಕಂಡಳು, ಎಸ್ ಅಂದಳು ಎಂದು ಯುವಕ ತಿಳಿಸಿದ್ದಾನೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದು, ಲಕ್ಷಾಂತರ ವ್ಯೂವ್ಸ್ ಪಡೆದಿದೆ. ನೆಟ್ಟಿಗರು ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಹಲವರು ಕಮೆಂಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.