Tag: Love Marriage

  • ಪ್ರೇಮ ವಿವಾಹವಾಗಿದ್ದಕ್ಕೆ ದಲಿತರಿಂದಲೇ ದಲಿತ ಕುಟುಂಬಕ್ಕೆ ಬಹಿಷ್ಕಾರ!

    ಪ್ರೇಮ ವಿವಾಹವಾಗಿದ್ದಕ್ಕೆ ದಲಿತರಿಂದಲೇ ದಲಿತ ಕುಟುಂಬಕ್ಕೆ ಬಹಿಷ್ಕಾರ!

    – ಬಹಿಷ್ಕಾರ ಕುಟುಂಬ ಮಾತನಾಡಿಸಿದವ್ರಿಗೆ ದಂಡ, ಶಿಕ್ಷೆಯ ಎಚ್ಚರಿಕೆ
    – ಪ್ರೀತಿಸಿ ಮದುವೆಯಾದ ಕಾರಣಕ್ಕೆ 14 ವರ್ಷ ವನವಾಸ

    ಗದಗ: ಪ್ರೀತಿ (Love) ವಿಚಾರಕ್ಕಾಗಿಯೇ ಗ್ರಾಮದ ಆ ಕುಟುಂಬದ ಮನೆಗಳು ಧ್ವಂಸವಾದವು. ಏಕಾಏಕಿ ಮನೆ ಖಾಲಿ ಮಾಡಿಸಿದ್ರು. ಇಡೀ ಸಮುದಾಯವೇ ಆ ಒಂದು ಕುಟುಂಬವನ್ನು ಕುಲದಿಂದ ಬಹಿಷ್ಕಾರ ಹಾಕಿದೆ. ದಿಕ್ಕು ಕಾಣದೇ ಕುಟುಂಬ ಬೀದಿಗೆ ಬಂದಿದೆ. ನಾವು ಸವರ್ಣಿಯರು ದಲಿತರನ್ನು ಬಹಿಷ್ಕಾರ ಹಾಕುವುದನ್ನು ನೋಡಿದ್ದೆವೆ, ಕೇಳಿದ್ದೇವೆ. ಆದರೆ ಇಲ್ಲಿ ದಲಿತರೇ ದಲಿತರನ್ನ ಬಹಿಷ್ಕಾರ ಹಾಕಿದ್ದಾರೆ. ಮನನೊಂದು ಕುಟುಂಬದ 11 ಜನ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

    ಹೌದು. ಗದಗ (Gadag) ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ಎಸ್. ಸಾಬಣ್ಣ ಮಾದರ ಎಂಬ ಕುಟುಂಬಕ್ಕೆ ಈಗ ಬಹಿಷ್ಕಾರ ಹಾಕಲಾಗಿದೆ. ಇವರ ಮಗ ಶಿವಾನಂದ ಮಾದರ ಎಂಬಾತ ಅದೇ ಜಾತಿಯ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದರು (Love Marriage). ಸಂಬಂಧದಲ್ಲಿ ಶಿವಾನಂದ ಹಾಗೂ ಯುವತಿ ತಂದೆ ಮಗಳಾಗಬೇಕಂತೆ. ಅದನ್ನು ಮರೆತು 2009 ರಲ್ಲಿ ಮದುವೆ ಆದ್ರು. ಆಗ ಯುವತಿ ಕುಟುಂಬಸ್ಥರು ಇವರ ಮೇಲೆ ಕತ್ತಿ ಮಸಿಯಲಾರಂಬಿಸಿದ್ರು. 2009 ರಲ್ಲಿ ಊರು ತೊರೆದು 14 ವರ್ಷ ವನವಾಸ ಮುಗಿಸಿ ಈಗ ಊರಿಗೆ ಬಂದಿದ್ದಾರೆ. ಆದರೂ ಇವರ ಮೇಲಿನ ಸಿಟ್ಟು, ಕೋಪ ಇನ್ನೂ ತನ್ನಗಾಗಿಲ್ಲ. ದಲಿತ ಸಮಾಜದಿಂದ ನಮ್ಮನ್ನು ಬಹಿಷ್ಕಾರ ಹಾಕಿದ್ದಾರೆ.

    ಊರಿನವರು ಯಾರೇ ನಮ್ಮನ್ನು ಮಾತನಾಡಿಸಿದ್ರೆ, ಸಹಾಯ ಮಾಡಿದ್ರೆ ಅವರಿಗೂ ಒಂದು ಸಾವಿರ ದಂಡ ಹಾಗೂ ಶಿಕ್ಷೆ ಘೋಷಣೆ ಮಾಡಿದ್ದಾರೆ. ದಲಿತರಿಂದಲೇ ದಲಿತರಿಗೆ ಬಹಿಷ್ಕಾರ ಹಾಕಿ ಅನ್ಯಾಯ ಮಾಡಿದ್ದಾರೆ. ಸಾಕಷ್ಟು ಮನನೊಂದಿದ್ದೇವೆ. ನಮಗೆ ಸಾವೊಂದೇ ಪರಿಹಾರ ಎಂದು ನೊಂದ ಕುಟುಂಬಸ್ಥರು ಹೇಳುತ್ತಿದ್ದಾರೆ. ಇದನ್ನೂ ಓದಿ: ಮೋದಿ ಹಾದಿಯಲ್ಲೆ ಸಿದ್ದರಾಮಯ್ಯ – ಜಾತಿ, ಧರ್ಮ ಸಮೀಕರಣಕ್ಕೆ ರಣತಂತ್ರ

    ಶಿವಾನಂದ ಹಾಗೂ ಯುವತಿ ಇಬ್ಬರೂ ಮಾದಿಗ ಜನಾಂಗದವರು. ಆದರೂ ಇಬ್ಬರ ಪ್ರೀತಿ ಕುಟುಂಬದ ನೆಮ್ಮದಿ ಹಾಳು ಮಾಡಿದೆ. ಇತ್ತೀಚೆಗೆ ಯುವತಿ ತಂದೆ ಮೃತಪಟ್ಟ ನಂತರ ಇವರನ್ನು ಊರಿಗೆ ಕರೆಸಿಕೊಂಡಿದ್ದಾರೆ. ಆಸ್ತಿಗೆ ಸಹಿ ಹಾಕಿಸಿಕೊಂಡಿದ್ದಾರಂತೆ. 14 ವರ್ಷದ ನಂತರ ಊರಿಗೆ ಬಂದರೂ ದಬ್ಬಾಳಿಕೆ ನಿಲ್ಲುತ್ತಿಲ್ಲವಂತೆ. ಕಳೆದ 3 ದಿನಗಳ ಹಿಂದೆಯಷ್ಟೇ ಈ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರಂತೆ. 3 ಜನ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗ ಮಾಡಿದ ತಪ್ಪಿಗೆ ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಇದನ್ನೂ ಓದಿ: ಮೆಗಾ ಸ್ನಾತಕೋತ್ತರ ಶೈಕ್ಷಣಿಕ ಉತ್ಸವದ ಮೊದಲ ದಿನ ಭರ್ಜರಿ ರೆಸ್ಪಾನ್ಸ್- ಬನ್ನಿ ಭಾಗವಹಿಸಿ, ಬಹುಮಾನ ಗೆಲ್ಲಿ

    ಕುಟುಂಬದ 11 ಜನ ಕಳೆದ 3 ದಿನದಿಂದ ಬಿಸಿಲು, ಮಳೆ, ಚಳಿಯಲ್ಲಿ ರಸ್ತೆ ಬದಿ ಕಾಲ ಕಳೆಯುತ್ತಿದ್ದಾರೆ. 2009ರಲ್ಲಿ ಯುವತಿ ಕುಟುಂಬಸ್ಥರಿಂದ 2 ಮನೆ ಧ್ವಂಸಮಾಡಿದ್ದಾರೆ. ನಂತರ 1019 ರಲ್ಲಿ ನವ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ನಿರ್ಮಾಣವಾದ ಒಂದು ಮನೆ ಸಹ ಧ್ವಂಸ ಮಾಡಿದ್ದಾರಂತೆ. ಈಗ ಇದ್ದ ಮನೆ ಸಹ ಖಾಲಿ ಮಾಡಿಸಿದ್ದಾರೆ. ಕುಟುಂಬ ಯಜಮಾನ ಸಾಬಣ್ಣ, ಶಾಂತವ್ವ, ಮಗ ಶಿವಾನಂದ, ಸೊಸೆ, ಮತ್ತೋರ್ವ ಮಗ ಮುತ್ತಣ್ಣ, ರೇಣುಕಾ, ಅಂಜನಾದೇವಿ ಸೇರಿ 5 ಜನ ಮಕ್ಕಳು ಬೀದಿಪಾಲಾಗಿವೆ. ಜೀವನವೇ ಸಾಕಾಗಿದೆ. ನೆಮ್ಮದಿಯಿಂದ ಜೀವನ ಮಾಡಲು ಅನುಕೂಲ ಕಲ್ಪಿಸಿಕೊಡಿ. ಇಲ್ಲವೆ ಸಾಯಲು ಅನುಮತಿ ಕೊಡಿ ಅಂತಿದೆ ನೊಂದ ಕುಟುಂಬ.

    ಪ್ರೀತಿಸಿ ಮದುವೆಯಾದ ಕಾರಣಕ್ಕೆ ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಈಗ ನರಗುಂದ ತಹಶಿಲ್ದಾರ್, ಪೊಲೀಸ್ (Gadag Police) ಇಲಾಖೆ, ಗ್ರಾಮ ಪಂಚಾಯತಿ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆದರೆ ಸಮಸ್ಯೆ ಬಗೆಹರಿಸುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ತಂಗಿಯ Love Marriage ಬಗ್ಗೆ ವ್ಯಂಗ್ಯವಾಡ್ತಿದ್ದ ಸ್ನೇಹಿತನನ್ನ 30 ಬಾರಿ ಇರಿದು ಕೊಂದ ಸಹೋದರ

    ತಂಗಿಯ Love Marriage ಬಗ್ಗೆ ವ್ಯಂಗ್ಯವಾಡ್ತಿದ್ದ ಸ್ನೇಹಿತನನ್ನ 30 ಬಾರಿ ಇರಿದು ಕೊಂದ ಸಹೋದರ

    ನವದೆಹಲಿ: ತನ್ನ ತಂಗಿಯ ಪ್ರೇಮ ವಿವಾಹದ (Love Marriage) ಬಗ್ಗೆ ವ್ಯಂಗ್ಯ ಮಾಡುತ್ತಿದ್ದ ಸ್ನೇಹಿತನನ್ನು (Friend) ಯುವತಿಯ ಸಹೋದರ 30 ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ದೆಹಲಿಯ (NewDelhi) ಜಹಾಂಗೀರ್‌ಪುರದಲ್ಲಿ ನಡೆದಿದೆ.

    ಹೌದು. ದೆಹಲಿಯಲ್ಲಿ ಪೊಲೀಸರ ಕಠಿಣ ಕ್ರಮಗಳ ಹೊರತಾಗಿಯೂ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹಾಗೆಯೇ ತನ್ನ ತಂಗಿಯ ಪ್ರೇಮ ವಿವಾಹವನ್ನು ವ್ಯಂಗ್ಯ ಮಾಡಿದ್ದಕ್ಕಾಗಿ ಯುವತಿಯ ಸಹೋದರ ಚಿರಾಗ್, ರಾಹುಲ್ (30) ಎಂಬಾತನನ್ನು 30 ಬಾರಿ ಇರಿದು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: RSS ಸಾಧನದಂತೆ ರಾಜ್ಯಪಾಲರು ಕಾರ್ಯ ನಿರ್ವಹಿಸ್ತಿದ್ದಾರೆ: ಪಿಣರಾಯಿ ವಾಗ್ದಾಳಿ

    ಅಷ್ಟಕ್ಕೂ ನಡೆದಿದ್ದೇನು?
    ಜಹಾಂಗೀರ್‌ಪುರದಲ್ಲಿ ವಾಸವಿದ್ದ ಚಿರಾಗ್ ತಂಗಿ ಕೆಲ ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ರಾಹುಲ್ ಕೂಡ ಇದರಲ್ಲಿ ಭಾಗಿಯಾಗಿದ್ದನು. ಆದರೆ ರಾಹುಲ್ ಆಗಾಗ್ಗೆ ತನ್ನ ತಂಗಿಯ ಪ್ರೇಮ ವಿವಾಹದ ಬಗ್ಗೆ ಹೀಯಾಳಿಸುತ್ತಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಅದು ವಿಕೋಪಕ್ಕೆ ತಿರುಗಿ ಈಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಚಿರಾಗ್ 30 ಬಾರಿ ಚಾಕುವಿನಿಂದ ಇರಿದಿದ್ದ. ಅಷ್ಟರಲ್ಲಿ ಜಗಳ ಬಿಡಿಸಿದ ಸಹಚರರು ರಾಹುಲ್‌ನನ್ನು ಗಾಯಗೊಂಡ ಸ್ಥಿತಿಯಲ್ಲಿ ಬಿಜೆಆರ್‌ಎಂ ಆಸ್ಪತ್ರೆಗೆ ಕರೆದೊಯ್ದರು, ಅಷ್ಟರಲ್ಲಾಗಲೇ ರಾಹುಲ್ ಮೃತಪಟ್ಟಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಕೇಸ್ (FIR) ದಾಖಲಿಸಿ ತನಿಖೆ ನಡೆಸುತ್ತಿರುವ ಪೊಲೀಸರು (Delhi Police), ಘಟನೆಗೆ ಸಂಬಂಧಿಸಿದಂತೆ ನಾಲ್ವರು ಅಪ್ರಾಪ್ತರನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹ – ನವದಂಪತಿ ಆತ್ಮಹತ್ಯೆ

    ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹ – ನವದಂಪತಿ ಆತ್ಮಹತ್ಯೆ

    ಮೈಸೂರು: ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹವಾದ ನವದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ.

    ಇಬ್ಬರೂ ಅನ್ಯ ಜಾತಿಗೆ ಸೇರಿದ ಹಿನ್ನೆಲೆ ಪೋಷಕರ ಈ ಜೋಡಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಈ 4 ತಿಂಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿ ವಿವಾಹವಾಗಿದ್ದರು. ಮದುವೆಯಾಗಿ ಕೇವಲ ನಾಲ್ಕು ತಿಂಗಳಿಗೆ ಈ ನವಜೋಡಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಹುಣಸೂರು ತಾಲೂಕಿನ ಸಿಂಗರಮಾರನಹಳ್ಳಿಯಲ್ಲಿ ನಡೆದಿದೆ. ಇದನ್ನೂ ಓದಿ:  1,200 ವರ್ಷದಷ್ಟು ಹಳೆಯ ಮಕ್ಕಳ, ವಯಸ್ಕರ ಅವಶೇಷ ಪತ್ತೆ!

    ಏನಿದು ಘಟನೆ?
    ಗ್ರಾಮದ ರಾಕೇಶ್(25), ಅರ್ಚನಾ(20)ಮೃತ ಪ್ರೇಮಿಗಳು. ರಾಕೇಶ್ ಮತ್ತು ಅರ್ಚನಾ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಬ್ಬರೂ ಒಂದೇ ಊರಿನ ಅಕ್ಕಪಕ್ಕದ ಮನೆಯವರು. ಪೋಷಕರು ವಿರೋಧ ಇದ್ದ ಹಿನ್ನೆಲೆ ಪ್ರೇಮಿಗಳು ನಾಲ್ಕು ತಿಂಗಳ ಹಿಂದೆ ಓಡಿ ಹೋಗಿ ಮದುವೆಯಾಗಿದ್ದರು.

    10,000+ Free Couples & Love Images

    ತಡರಾತ್ರಿ ಗ್ರಾಮಕ್ಕೆ ಬಂದು ಊರ ಹೊರವಲಯದಲ್ಲಿ ಮರಕ್ಕೆ ನವದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಅನ್ಯ ಜಾತಿಗೆ ಸೇರಿದ ಹಿನ್ನೆಲೆ ಪೋಷಕರ ವಿರೋಧವಿತ್ತು. ಆದರೂ ಇಬ್ಬರು ಮದುವೆಯಾಗಿದ್ದು, ಈ ದುಸ್ಥಿತಿ ಬಂದಿರುವುದು ವಿಪರ್ಯಾಸವಾಗಿದೆ. ಇದನ್ನೂ ಓದಿ: ಅತಿ ಹಿಂದುಳಿದ ವರ್ಗಗಳಿಗೂ ರಾಜಕೀಯ ಮೀಸಲಾತಿ ನೀಡಲು ಆಯೋಗ ರಚಿಸಬೇಕು – ರಾಜ್ಯಪಾಲರಿಗೆ ಮನವಿ

    ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕ್ಷುಲ್ಲಕ ಕಾರಣಕ್ಕೆ ಕುಟುಂಬಗಳ ಮಧ್ಯೆ ಮಾರಾಮಾರಿ- ಮೂವರಿಗೆ ಗಾಯ

    ಕ್ಷುಲ್ಲಕ ಕಾರಣಕ್ಕೆ ಕುಟುಂಬಗಳ ಮಧ್ಯೆ ಮಾರಾಮಾರಿ- ಮೂವರಿಗೆ ಗಾಯ

    ಗದಗ: ಕ್ಷುಲ್ಲಕ ಕಾರಣಕ್ಕೆ 2 ಕುಟುಂಬಗಳ ಮಧ್ಯೆ ಮಾರಾಮಾರಿ ಗಲಾಟೆ ನಡೆದಿದ್ದು, ಈ ಹಿನ್ನೆಲೆ ಮೂವರಿಗೆ ಗಾಯವಾಗಿರುವ ಘಟನೆ ತಾಲೂಕಿನ ಸೊರಟೂರು ಗ್ರಾಮದಲ್ಲಿ ನಡೆದಿದೆ.

    ಹಳೆ ವೈಷಮ್ಯದಿಂದ ಕುಡಿದ ಮತ್ತಿನಲ್ಲಿ ಅಡಿವೆಪ್ಪ ಕಣ್ಣೂರು ಹಾಗೂ ಕೃಷ್ಣಾ ಸುಬ್ಬಣ್ಣವರ್ ಕುಟುಂಬದ ಮಧ್ಯೆ ತಡರಾತ್ರಿ ಜಗಳವಾಗಿದೆ. ಈ ವೇಳೆ ಇಬ್ಬರು ಅಶ್ಲೀಲ ಪದಗಳನ್ನು ಬಳಸಿದ್ದಾರೆ. ಕೈಕೈ ಮಿಲಾಯಿಸಿದ್ದು, ಎರಡು ಕುಟುಂಬದ ಮೂವರಿಗೆ ಗಾಯಗಳಾಗಿವೆ. ಪ್ರಸ್ತುತ ಗಾಯಾಳುಗಳು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಘಟನೆಗೆ ಕಾರಣವೇನು?
    ಸುಬ್ಬಣ್ಣವರ್ ಕುಟುಂಬದ ಯುವತಿಯನ್ನು, ಕಣ್ಣೂರು ಕುಟುಂಬದ ಯುವಕ ಪ್ರೀತಿಸಿ ಮದುವೆಯಾಗಿದ್ದಾರೆ. ಇದು ಅಂತರ್ಜಾತಿ ವಿವಾಹವಾದ್ದರಿಂದ ಎರಡು ಕುಟುಂಬದ ಮಧ್ಯೆ ಆಗಾಗ ಜಗಳ ನಡೆಯುತ್ತಲೇ ಇತ್ತು. ಆದರೆ ನಿನ್ನೆ ಕೃಷ್ಣಾ ಸುಬ್ಬಣ್ಣವರ್ ಕುಟುಂಬದ ಹೆಣ್ಣು ಮಕ್ಕಳನ್ನು ಅಡಿವೆಪ್ಪ ಕಣ್ಣೂರ್ ನಿಂದಿಸಿದ್ದರು ಎಂದು ಆರೋಪ ಮಾಡಲಾಗಿದೆ. ಈ ಹಿನ್ನೆಲೆ ಪ್ರಶ್ನೆ ಮಾಡಿದಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಇದನ್ನೂ ಓದಿ: ರಾಜ್ಯದ ಏಕೈಕ ಸ್ವರ್ಣ ಗೌರಿ ದೇವಾಲಯದಲ್ಲಿಲ್ಲ ಪೂಜೆ, ಪುನಸ್ಕಾರ

    ಗದಗನ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರೀತಿಸಿ ಮದುವೆಯಾಗಿ, ಮಕ್ಕಳಾದ ಬಳಿಕ ಜಾತಿ ನೆಪ- ಪತ್ನಿ, ಮಕ್ಕಳನ್ನು ಮನೆಯಿಂದ ಹೊರ ಹಾಕಿದ ಪಾಪಿ

    ಪ್ರೀತಿಸಿ ಮದುವೆಯಾಗಿ, ಮಕ್ಕಳಾದ ಬಳಿಕ ಜಾತಿ ನೆಪ- ಪತ್ನಿ, ಮಕ್ಕಳನ್ನು ಮನೆಯಿಂದ ಹೊರ ಹಾಕಿದ ಪಾಪಿ

    – ಮನೆ ಎದುರು ಅಂಗಲಾಚಿದರೂ ಒಪ್ಪದ ಮನೆಯವರು

    ಕೋಲಾರ: ಪ್ರೀತಿಸಿ ಮದುವೆಯಾಗಿ ಎರಡು ಮಕ್ಕಳಾದ ಬಳಿಕ ಜಾತಿ ಹೆಸರಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಮತ್ತೊಂದು ಮದುವೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ತನ್ನ ಪತಿಗಾಗಿ ಮಕ್ಕಳೊಂದಿಗೆ ಪತಿಯ ಮನೆ ಬಳಿ ಅತ್ತೆಯನ್ನು ಅಂಗಲಾಚಿದರೂ ಮನೆಗೆ ಸೇರಿಸಿಕೊಳ್ಳದೆ, ಅವಮಾನ ಮಾಡಿದ್ದಾರೆ.

    5 ವರ್ಷದ ಹಿಂದೆ ಬಂಗಾರಪೇಟೆ ತಾಲೂಕಿನ ದೊಡ್ಡ ಚಿನ್ನಹಳ್ಳಿಯ ಸುನಿಲ್, ಚಿಕ್ಕ ಅಂಕಂಡಹಳ್ಳಿಯ ಕಾವ್ಯಾ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ 4 ವರ್ಷದ ಹಾಗೂ 9 ತಿಂಗಳ ಎರಡು ಗಂಡು ಮಕ್ಕಳಿವೆ. ಈ ಮಧ್ಯೆ ಪತಿ ತನ್ನ ತಾಯಿಯ ಮನೆಗೆ ಹೋಗಿ ಬರುತ್ತಿದ್ದು, ಮನೆಯವರ ಮಾತು ಕೇಳಿರುವ ಸುನಿಲ್, ಮತ್ತೊಂದು ಮದುವೆಯಾಗಿದ್ದಾನೆ ಎಂದು ಕಾವ್ಯಾ ಆರೋಪಿಸಿದ್ದಾರೆ. ಹೀಗಾಗಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಹಾಯ ಪಡೆದು ಪತಿಯ ಮನೆ ಎದುರು ಮನೆಗೆ ಸೇರಿಸಿಕೊಳ್ಳುವಂತೆ ಬೇಡಿಕೊಂಡಿದ್ದಾರೆ.

    ಕಾಲಿಗೆ ಬೀಳುವೆ, ಕೈ ಮುಗಿಯುವೆ ಅಂದರೂ ಜಾತಿ ನೆಪ ಹೇಳಿ ಗಂಡನ ಮನೆಯವರು ಮನೆಯೊಳಗೆ ಸೇರಿಸಿಕೊಳ್ಳುತ್ತಿಲ್ಲ. ಇದರಿಂದ ನೊಂದ ಮಹಿಳೆ ಕೆಲಕಾಲ ಗಂಡನೆ ಮನೆ ಎದುರು ಪ್ರತಿಭಟನೆ ಮಾಡಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾಳೆ. ಪತಿ ಸುನಿಲ್ ಮದುವೆಯಾಗಿ ಮೋಸ ಮಾಡಿದ್ದು, ಜಾತಿ ನೆಪದಲ್ಲಿ ನನ್ನನ್ನು ನಿರಾಕರಿಸುತ್ತಿದ್ದಾನೆ ಎಂದು ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಕಾವ್ಯಾ ದೂರು ನೀಡಿದ್ದಾಳೆ.

  • ಲವ್ ಮ್ಯಾರೇಜ್ – ಯುವತಿ ಕುಟುಂಬಸ್ಥರಿಂದ ಯುವಕನ ಅಡಿಕೆ ತೋಟ ನಾಶ

    ಲವ್ ಮ್ಯಾರೇಜ್ – ಯುವತಿ ಕುಟುಂಬಸ್ಥರಿಂದ ಯುವಕನ ಅಡಿಕೆ ತೋಟ ನಾಶ

    – 250 ಅಡಿಕೆ ಗಿಡಗಳ ನಾಶ

    ತುಮಕೂರು: ಪ್ರೀತಿಸಿ ಮದುವೆಯಾಗಿದ್ದ ಯುವತಿ ಕುಟುಂಬಸ್ಥರು ಯುವಕನ ಅಡಿಕೆ ತೋಟ ನಾಶ ಮಾಡಿರುವ ಘಟನೆ ತುಮಕೂರು ತಾಲೂಕಿನ ಮಲ್ಲಸಂದ್ರಪಾಳ್ಯದಲ್ಲಿ ನಡೆದಿದೆ.

    ಮಲ್ಲಸಂದ್ರಪಾಳ್ಯದ ರವಿಚಂದ್ರ ಮತ್ತು ಅನು ಇಬ್ಬರು ಪ್ರೀತಿಸಿ ಎರಡು ದಿನಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಮದುವೆಗೆ ಅನು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಮದುವೆ ಬಳಿಕ ಅನು ಸೋದರ ಸಂತೋಷ್ ಮತ್ತು ತಾಯಿ ಗಂಗಮ್ಮ ಅಡಿಕೆ ಗಿಡಗಳನ್ನ ನಾಶಪಡಿಸಿದ್ದಾರೆ ಎಂದು ರವಿಚಂದ್ರ ಕುಟುಂಬಸ್ಥರು ಆರೋಪಿಸಿದ್ದಾರೆ.

    ಮದುವೆಗೆ ರವಿಚಂದ್ರ ಅವರಿಗೆ ಸೇರಿದ 250 ಅಡಿಕೆ ಗಿಡಗಳು ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಪ್ರೇಮ ವಿವಾಹವಾದ ತಂಗಿ – ಮನೆಗೆ ಕರೆಸಿ ಕೊಂದ ಅಣ್ಣಂದಿರು

    ಪ್ರೇಮ ವಿವಾಹವಾದ ತಂಗಿ – ಮನೆಗೆ ಕರೆಸಿ ಕೊಂದ ಅಣ್ಣಂದಿರು

    – ಶವಕ್ಕಾಗಿ ಕಣ್ಣೀರು ಹಾಕುತ್ತಾ ಅಲೆದಾಡುತ್ತಿರೋ ಪತಿ

    ಲಕ್ನೋ: ಅಂತರ್ ಜಾತಿ ವಿವಾಹವಾಗಿದ್ದ ತಂಗಿಯನ್ನ ಆಕೆಯ ಅಣ್ಣಂದಿರು ಕೊಲೆ ಮಾಡಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಮೈನಪುರಿ ಜಿಲ್ಲೆಯಲ್ಲಿ ನಡೆದಿದೆ.

    ಯುವತಿ ಕಳೆದ ಕೆಲ ದಿನಗಳ ಹಿಂದೆ ಮನೆಯ ವಿರೋಧದ ನಡುವೆ ಪ್ರೀತಿಸಿದ ಯುವಕನನ್ನ ಮದುವೆ ಆಗಿದ್ದಳು. ಕೆಲ ಗೆಳೆಯರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಮದುವೆಯಾಗಿ ದೆಹಲಿಯಲ್ಲಿ ನೆಲೆಸಿದ್ದರು. ಮದುವೆಯಾದ ನಂತರ ಆಕೆ ಅಣ್ಣಂದಿರನ್ನ ಮನೆಗೆ ಕರೆಸಿಕೊಂಡಿದ್ದಾರೆ. ನಿಮ್ಮ ಮದುವೆಗೆ ಒಪ್ಪಿಗೆ ಇದ್ದು ಮನೆಗೆ ಬಾ ಅಂತ ಮೊಸಳೆ ಕಣ್ಣೀರು ಹಾಕಿದ್ದಾರೆ.

    ಅಣ್ಣ ಕರೆದ ಅಂತ ಯುವತಿ ದೆಹಲಿಯಿಂದ ಮೈನಪುರಿಗೆ ತೆರಳಿದ್ದಳು. ಈ ವೇಳೆ ಆಕೆಯ ಅಣ್ಣ ಮತ್ತು ಸಂಬಂಧಿ ಇಬ್ಬರು ಆಕೆಯನ್ನ ಕೊಲೆ ಮಾಡಿದ್ದಾರೆ. ನಂತರ ಶವ ಯಾರಿಗೂ ಸಿಗದಂತೆ ಮಾಡಿದ್ದಾರೆ ಎಂದು ಯುವತಿಯ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಓರ್ವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಶವಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಇತ್ತ ಪತಿ ಪತ್ನಿಯ ಶವ ನೀಡುವಂತೆ ಕಣ್ಣೀರು ಹಾಕುತ್ತಾ ಅಲೆದಾಡುತ್ತಿದ್ದಾನೆ.

  • ನಾಯಿ ಚೈನ್‍ನಿಂದ ಕತ್ತು ಹಿಸುಕಿ, ಚಾಕುವಿನಿಂದ ಇರಿದು ಪತ್ನಿಯ ಕೊಲೆಗೈದ!

    ನಾಯಿ ಚೈನ್‍ನಿಂದ ಕತ್ತು ಹಿಸುಕಿ, ಚಾಕುವಿನಿಂದ ಇರಿದು ಪತ್ನಿಯ ಕೊಲೆಗೈದ!

    – ಎರಡು ತಿಂಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದ ಜೋಡಿ
    – ಕೆಲಕಾಲ ಶವದ ಬಳಿಯೇ ಕುಳಿತು ನಂತ್ರ ತಂದೆಗೆ ಫೋನ್

    ಭೋಪಾಲ್: ನಾಯಿ ಚೈನ್ ನಿಂದ ಕತ್ತು ಹಿಸುಕಿ ನಂತ್ರ ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆಗೈದಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಕೊಲೆಯ ಬಳಿಕ ಪತ್ನಿಯ ಶವ ಬಳಿಯೇ ಕೆಲ ಸಮಯ ಕುಳಿತ ಆರೋಪಿ ತದನಂತರ ತನ್ನ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ.

    22 ವರ್ಷದ ಅಂಶು ಶರ್ಮಾ ಪತಿ ಹರ್ಷನಿಂದ ಕೊಲೆಯಾದ ಪತ್ನಿ. ಆಗಸ್ಟ್ 8ರಂದು ದೇವಸ್ಥಾನದಲ್ಲಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅಂಶು ಮತ್ತು ಹರ್ಷ ಪ್ರೇಮ ವಿವಾಹವಾಗಿದ್ದರು. ಮದುವೆ ಬಳಿಕ ಅಂಶು ಮತ್ತು ಹರ್ಷ ಜಾವರಾ ಕಾಂಪೌಂಡ್ ನಲ್ಲಿರುವ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ದಂಪತಿ ನಡುವೆ ಸಣ್ಣ ಸಣ್ಣ ವಿಷಯಗಳಿಗೂ ಜಗಳ ನಡೆಯುತ್ತಿತ್ತು. ಸದ್ಯ ಪೊಲೀಸರು ಮೃತದೇಹವನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ:  ಪತ್ನಿ ಕೊಲೆ ಆರೋಪದಲ್ಲಿ ಪತಿಗೆ ಜೈಲು ಶಿಕ್ಷೆ – 7 ವರ್ಷಗಳ ನಂತ್ರ ಹೆಂಡ್ತಿ ಪತ್ತೆ

    ಸೊಸೆ ಅಂಶು ಕೆಲ ತಿಂಗಳ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಕಂಪನಿಯಲ್ಲಿ ಇಬ್ಬರ ಭೇಟಿಯಾಗಿತ್ತು. ಇಬ್ಬರ ಸ್ನೇಹ ಕೆಲವೇ ದಿನಗಳಲ್ಲಿ ಪ್ರೇಮದ ರೂಪ ಪಡೆದುಕೊಂಡಿದ್ದರಿಂದ ಜೊತೆಯಾಗಿರಲು ನಿರ್ಧರಿಸಿದ್ದರು. ಅಂಶು ತನ್ನ ಪೋಷಕರಿಗೆ ತಿಳಿಸದೇ ಹರ್ಷನ ಜೊತೆಗಿರಲು ಬಂದಿದ್ದನು. ನಂತರ ಆರ್ಯ ಸಮಾಜದ ಪದ್ಧತಿಯಂತೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಎಂದು ಆರೋಪಿ ಹರ್ಷನ ತಂದೆ ರಾಜೀವ್ ಶರ್ಮಾ ಹೇಳಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ಅಡ್ಡಿ – ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆಗೈದ ಪತ್ನಿ!

    ಫೋನ್ ಮಾಡಿ ನಮ್ಮನ್ನು ಕರೆಸಿಕೊಳ್ಳಲಾಯ್ತು. ಅಲ್ಲಿ ಹಿರಿಯ ಪೊಲೀಸ್ ಅಧಿಕಾರಿ ನಮ್ಮ ಮಗಳ ಕೊಲೆ ಆಗಿರುವ ವಿಷಯ ತಿಳಿಸಿದರು. ಮೂರು ತಿಂಗಳ ಹಿಂದೆ ಖಾಸಗಿ ಕಂಪನಿಯಲ್ಲಿ ಅಂಶು ಮತ್ತು ಹರ್ಷನ ಪರಿಚಯವಾಗಿತ್ತು. ಎರಡು ತಿಂಗಳ ಹಿಂದೆ ಪುತ್ರಿಯನ್ನ ಹರ್ಷ ಕರೆದುಕೊಂಡು ಹೋಗಿದ್ದನು. ನಮಗೆ 10-12 ದಿನಗಳ ಬಳಿಕ ಇಬ್ಬರು ಮದುವೆ ಆಗಿರುವ ವಿಷಯ ತಿಳಿಯಿತು. ಇಬ್ಬರು ಚೆನ್ನಾಗಿಯೇ ಇದ್ರು. ಗಂಡ- ಹೆಂಡತಿ ನಡುವೆ ಜಗಳ ನಡೆದಿರಲಿಲ್ಲ ಎಂದು ಅಂಶು ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ರೌಡಿ ಬಾಂಬೆ ಸಲೀಂ ಪತ್ನಿ ಜೊತೆ ಚಾಟಿಂಗ್- ಯುವಕನ ಭೀಕರ ಕೊಲೆ

  • ಲವ್ ಮ್ಯಾರೇಜ್ ದಂಡ 1,500 ರೂ.ಕೊಡದ್ದಕ್ಕೆ ವ್ಯಕ್ತಿಯ ಕೊಲೆ

    ಲವ್ ಮ್ಯಾರೇಜ್ ದಂಡ 1,500 ರೂ.ಕೊಡದ್ದಕ್ಕೆ ವ್ಯಕ್ತಿಯ ಕೊಲೆ

    – ಪಂಚಾಯಿತಿ ನಿಯಮ ಪಾಲಿಸದ್ದಕ್ಕೆ ಗ್ರಾಮಸ್ಥರಿಂದ ಕೃತ್ಯ

    ಚೆನ್ನೈ: ಪ್ರೀತಿಸಿ ವಿವಾಹವಾಗಿದ್ದಕ್ಕೆ ದಂಡ ವಿಧಿಸಿದ್ದ 1,500 ರೂ.ಗಳನ್ನು ಕೊಡಲಿಲ್ಲವೆಂದು ಗ್ರಾಮಸ್ಥರು ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

    ತಮಿಳುನಾಡಿನ ಗೌತಮಪುರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಂತ್ರಸ್ತನನ್ನು ರವಿ ಎಂದು ಗುರುತಿಸಲಾಗಿದೆ. ಪಂಚಾಯಿತಿಯ ನಿಯಮದಂತೆ ಯುವಕನ ಕುಟುಂಬಸ್ಥರು 1,500 ರೂ. ನೀಡಲು ನಿರಾಕರಿಸಿದ ಹಿನ್ನೆಲೆ ಕೊಲೆ ಮಾಡಲಾಗಿದೆ. ಇಂತಹ ವಿಲಕ್ಷಣ ನಿಯಮವನ್ನು 10 ವರ್ಷಗಳ ಹಿಂದೆ ರೂಪಿಸಲಾಗಿದ್ದು, ಸ್ಥಳೀಯ ಕುಟುಂಬದ ಯಾವುದೇ ಸದಸ್ಯರು ಪ್ರೀತಿಸಿ ವಿವಾಹವಾದಲ್ಲಿ 1,500 ರೂ.ಗಳ ದಂಡವನ್ನು ಪಾವತಿಸಬೇಕು. ಈ ಹಣವನ್ನು ಊರಿನಲ್ಲಿ ಆಯೋಜಿಸುವ ಕಾರ್ಯಕ್ರಮ ಹಾಗೂ ಸಮಾರಂಭಗಳಿಗೆ ಬಳಸಿಕೊಳ್ಳಲು ಯೋಜಿಸಲಾಗಿದೆ.

    ರವಿಯವರ ಸೊಸೆ ಎರಡು ವರ್ಷಗಳ ಹಿಂದೆ ತನಗಿಷ್ಟ ಬಂದ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಾಳೆ. ಆದರೆ ಪಂಚಾಯಿತಿಯ ನಿಯಮದಂತೆ ಹಣ ಪಾವತಿಸಲು ಮಹಿಳೆಯ ತಂದೆ ರವಿ ನಿರಾಕರಿಸಿದ್ದಾರೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಹತ್ತು ವರ್ಷಗಳ ಹಿಂದೆ ರವಿಯವರೇ ಈ ನಿಯಮ ಪರಿಚಯಿಸಿದ್ದರು ಎಂದು ಅಂಬಸಮುದ್ರಮ್ ಡಿಎಸ್‍ಪಿ ಸುಭಾಷಿಣಿ ಮಾಹಿತಿ ನೀಡಿದ್ದಾರೆ.

    ರವಿಯವರು 1,500 ರೂ.ಗಳನ್ನು ಪಾವತಿಸಲು ನಿರಾಕರಿಸಿದ್ದು, ಹಣ ನೀಡುವುದು ತಡವಾಗಿದ್ದಕ್ಕೆ ಪಂಚಾಯಿತಿಯವರು 1 ಲಕ್ಷ ರೂ. ನೀಡುವಂತೆ ಕೇಳಿದ್ದಾರೆ. 10 ಜನ ಗ್ರಾಮಸ್ಥರು ರವಿ ಮನೆ ಬಳಿ ಬಂದು ವಾದ ಮಾಡಲು ಮುಂದಾಗಿದ್ದಾರೆ. ನಂತರ ಜಗಳ ತಾರಕಕ್ಕೇರಿದೆ. ಈ ವೇಳೆ ಗ್ರಾಮಸ್ಥರು ರವಿಯವರ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ.

    ಘಟನೆ ನಂತರ ರವಿಯನ್ನು ತಿರುನೆಲ್ವೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವನ್ನಪ್ಪಿದ್ದಾರೆ. ಆತ ದೂರು ನೀಡಲು ಆಗಮಿಸಿದ್ದ. ಆದರೆ ಪ್ರತಿ ಬಾರಿ ನಾವು ವಿಚಾರಣೆ ನಡೆಸುತ್ತೇವೆ. ಆದರೆ ರವಿ ವಿಚಾರಣೆಗೆ ಸಹಕರಿಸಲಿಲ್ಲ. ಈ ವಿಚಿತ್ರ ನಿಯಮವನ್ನು ರದ್ದುಪಡಿಸುವಂತೆ ಗ್ರಾಮಸ್ಥರಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೂ ಗ್ರಾಮಸ್ಥರು ಇದನ್ನು ಮುಂದುವರಿಸಿದ್ದಾರೆ ಎಂದು ಡಿಎಸ್‍ಪಿ ತಿಳಿಸಿದ್ದಾರೆ.

  • ಪ್ರೇಮ ಪ್ರಕರಣದ ಗಲಾಟೆಯಲ್ಲಿ ಐವರ ಕೊಲೆ- ಒಂದೇ ಗುಂಡಿಯಲ್ಲಿ ಅಂತ್ಯ ಸಂಸ್ಕಾರ

    ಪ್ರೇಮ ಪ್ರಕರಣದ ಗಲಾಟೆಯಲ್ಲಿ ಐವರ ಕೊಲೆ- ಒಂದೇ ಗುಂಡಿಯಲ್ಲಿ ಅಂತ್ಯ ಸಂಸ್ಕಾರ

    – ಐದು ಜನ ಕೊಲೆ ಆರೋಪಿಗಳ ಬಂಧನ

    ರಾಯಚೂರು: ಪ್ರೇಮ ವಿವಾಹಕ್ಕೆ ವಿರೋಧ ಹಿನ್ನೆಲೆ ಹಳೇ ವೈಷಮ್ಯದಿಂದ ರಾಯಚೂರಿನ ಸಿಂಧನೂರಿನ ಸುಕಾಲಪೇಟೆಯಲ್ಲಿ ನಡೆದ ಒಂದೇ ಕುಟುಂಬದ ಐವರ ಕಗ್ಗೊಲೆ ಪ್ರಕರಣದ ಶವಗಳಿಗೆ ಒಂದೇ ಗುಂಡಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

    ಮರಣೋತ್ತರ ಪರೀಕ್ಷೆ ಬಳಿಕ ಜೆಸಿಬಿ ಮೂಲಕ ಗುಂಡಿ ತೋಡಿ ಶವಗಳನ್ನ ಮುಚ್ಚಲಾಗಿದೆ. ಐದು ಜನ ಕೊಲೆ ಆರೋಪಿಗಳನ್ನೂ ಬಂಧಿಸಲಾಗಿದೆ. ಯುವತಿ ಸಂಬಂಧಿಕರಾದ ಅಂಬಣ್ಣ, ಸೋಮಶೇಖರ್, ಸಣ್ಣ ಫಕೀರಪ್ಪ, ರೇಖಾ, ಗಂಗಮ್ಮ ಬಂಧಿತ ಆರೋಪಿಗಳು.

    ಮನೆಯವರ ವಿರೋಧದ ನಡುವೆ ಯುವತಿ ಮಂಜುಳ ಅದೇ ಬಡಾವಣೆಯ ಮೌನೇಶ್‍ನನ್ನು ಏಳು ತಿಂಗಳ ಕೆಳಗೆ ಮದುವೆಯಾಗಿದ್ದಳು. ಹುಡುಗನ ಮನೆಯಲ್ಲಿ ಮದುವೆಗೆ ಸಮ್ಮತಿಯಿದ್ದಿದ್ದರಿಂದ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ ಯುವತಿ ಮಂಜುಳಾ ತಂದೆ ಫಕಿರಪ್ಪ ಎರಡನೇ ಮದುವೆಯಾಗಿ ಮೊದಲ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದನ್ನು ಪ್ರಶ್ನಿಸಲು ಮಂಜುಳಾ ತವರು ಮನೆಗೆ ಹೋದಾಗ ಗಲಾಟೆಯಾಗಿದೆ. ತಂದೆಯ ವಿರುದ್ಧ ಯುವತಿ ಪೊಲೀಸ್ ಠಾಣೆಗೆ ಹೋದಾಗ, ಮನೆಗೆ ಬಂದ ಆರೋಪಿಗಳು ಸಿಕ್ಕಸಿಕ್ಕವರನ್ನು ಕೊಚ್ಚಿಹಾಕಿದ್ದಾರೆ.

    ಘಟನೆಯಲ್ಲಿ ಯುವಕನ ತಂದೆ ಈರಪ್ಪ, ತಾಯಿ ಸುಮಿತ್ರಾ, ಅಣ್ಣಂದಿರಾದ ಹನುಮೇಶ್, ನಾಗರಾಜ್ ಹಾಗೂ ಅತ್ತಿಗೆ ಶ್ರೀದೇವಿ ಸೇರಿ ಐದು ಜನ ಕೊಲೆಯಾಗಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.