Tag: Love Marriage

  • ಇನ್‌ಸ್ಟಾ ಪ್ರೇಮಿಯನ್ನ ಮದ್ವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ಸಾವು

    ಇನ್‌ಸ್ಟಾ ಪ್ರೇಮಿಯನ್ನ ಮದ್ವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ಸಾವು

    ಕೊಪ್ಪಳ: ಇನ್‌ಸ್ಟಾದಲ್ಲಿ (Instagram) ಪರಿಚಯವಾದ ಯುವಕನೊಂದಿಗೆ ಮದ್ವೆಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppala) ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಗೊಣ್ಣಾಗರ ಗ್ರಾಮದಲ್ಲಿ ನಡೆದಿದೆ.

    ಪುಷ್ಪವತಿ (23) ಅನುಮಾನಾಸ್ಪದ ಸಾವನ್ನಪ್ಪಿರುವ ಗೃಹಿಣಿಯಾಗಿದ್ದು, ಮೂರು ತಿಂಗಳ ಹಸುಗೂಸು ಇದೆ. 2ನೇ ದಿನಗಳ ಹಿಂದೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದ್ದು, ಪತಿ ಕುಟುಂಬಸ್ಥರ ವಿರುದ್ಧವೇ ಕೊಲೆ ಆರೋಪ ಕೇಳಿಬಂದಿದೆ. ಇದನ್ನೂ ಓದಿ:  ಸೊಸೆಗೆ ವರದಕ್ಷಿಣೆ ಕಿರುಕುಳ ಆರೋಪ – ಎಸ್.ನಾರಾಯಣ್, ಪತ್ನಿ, ಪುತ್ರನ ವಿರುದ್ಧ ಎಫ್‌ಐಆರ್

    ಮೂಲತಃ ಹಾಸನ ಜಿಲ್ಲೆಯ ಪುಷ್ಪವತಿ ಇನ್‌ಸ್ಟಾದಲ್ಲಿ ಪರಿಚಯವಾಗಿದ್ದ ಮರಿಯಪ್ಪ ಎಂಬಾತನನ್ನ ಪ್ರೀತಿಸಿ ಮದ್ವೆಯಾಗಿದ್ದರು (Marriage). ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗ ಹಿನ್ನೆಲೆ ಪತಿ ಮನೆಯವರೇ ಹೊಡೆದು ನೇಣು ಹಾಕಿರುವುದಾಗಿ ಪುಷ್ಪವತಿ ಕುಟುಂಬಸ್ಥರು ಆರೋಪಿಸಿದ್ದಾರೆ. 2 ದಿನಗಳ ಹಿಂದೆ ಸಾವನ್ನಪ್ಪಿದ್ರು, ಶವ ಇನ್ನು ಅದೇ ಸ್ಥಳದಲ್ಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನೇಣು ಬಿಗಿದುಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

    ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪುಷ್ಪವತಿ ಕುಟುಂಬಸ್ಥರು ನಿನ್ನೆಯಷ್ಟೇ ಹಾಸನದಿಂದ ಕೊಪ್ಪಳಕ್ಕೆ ಬಂದಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ನಟ ಪ್ರಥಮ್‌ಗೆ ಡ್ರ್ಯಾಗರ್‌ ತೋರಿಸಿ ಧಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದ್ದ ರೌಡಿಶೀಟರ್‌ ಅರೆಸ್ಟ್‌

  • ಸ್ಯಾಂಡಲ್‌ವುಡ್‌ ನಟನ ಬಾಳಲ್ಲಿ ಬಿರುಗಾಳಿ – ನಟ ಅಜಯ್ ರಾವ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

    ಸ್ಯಾಂಡಲ್‌ವುಡ್‌ ನಟನ ಬಾಳಲ್ಲಿ ಬಿರುಗಾಳಿ – ನಟ ಅಜಯ್ ರಾವ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

    ಇತ್ತೀಚೆಗೆ ಸೆಲೆಬ್ರಿಟಿಗಳು ವಿಚ್ಛೇದನ (Divorce) ತೆಗೆದುಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಪ್ರತಿ ದಿನ ಒಬ್ಬರಲ್ಲ ಒಬ್ಬರ ಡಿವೋರ್ಸ್ ಸುದ್ದಿಗಳು ಬೆಳಕಿಗೆ ಬರುತ್ತಲೇ ಇವೆ, ಈಗ ಆ ಸಾಲಿಗೆ ಸ್ಯಾಂಡಲ್‌ವುಡ್‌ನ ನಟ ಅಜಯ್‌ ರಾವ್‌ (Ajay Rao) ಕೂಡ ಸೇರಿಕೊಂಡಿದ್ದಾರೆ. ಹೌದು. ನಟ ಅಜಯ್‌ ರಾವ್‌ ಪತ್ನಿ ಸಪ್ನಾ (Sapna) ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

    2014ರಲ್ಲಿ ಡಿಸೆಂಬರ್‌ 18ರಲ್ಲಿ ಪ್ರೀತಿಸಿ ಮದ್ವೆಯಾಗಿದ್ದ (Love Marriage) ಈ ಜೋಡಿ ಇತ್ತೀಚಿಗೆ ಹೊಸ ಮನೆಯ ಗೃಹ ಪ್ರವೇಶ ಮಾಡಿತ್ತು. ಹೊಸಪೇಟೆಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಇತ್ತೀಚೆಗಷ್ಟೇ ಹೊಸ ಮನೆಗೆ ಗೃಹ ಪ್ರವೇಶ ಮಾಡಿತ್ತು ಈ ಜೋಡಿ. ಇದನ್ನೂ ಓದಿ: `ಗ್ರೀನ್ ಗರ್ಲ್’ಗೆ ಸಿಕ್ತು ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯ ಸಾಥ್

    ಇದೀಗ ನಟನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಪತ್ನಿ ಸ್ವಪ್ನ ರಾವ್‌ ವಿಚ್ಛೇದನ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಜಯ್‌ ರಾವ್‌ ಸಪ್ನಾ ದಂಪತಿಗೆ ಓರ್ವ ಪುತ್ರಿ ಕೂಡ ಇದ್ದಾರೆ. ಇದನ್ನೂ ಓದಿ: ಡಿ ಗ್ಯಾಂಗ್‌ಗೆ ಮತ್ತಷ್ಟು ಢವಢವ – ಫಾಸ್ಟ್‌ ಟ್ರ್ಯಾಕ್ ಕೋರ್ಟ್‌ಗೆ ಮನವಿ ಸಲ್ಲಿಸಲು ಪೊಲೀಸರ ತಯಾರಿ

    11 ವರ್ಷಗಳ ಬಳಿಕ ದೂರಾಗಲು ನಿರ್ಧರಿಸಿದ್ದೇಕೆ? 
    2014ರಲ್ಲಿ ಮದ್ವೆಯಾಗಿದ್ದ ಈ ಜೋಡಿ 11 ವರ್ಷಗಳ ಬಳಿಕ ದಾಂಪತ್ಯ ಜೀವನಕ್ಕೆ ವಿದಾಯ ಹೇಳಲು ಬಯಸಿದೆ. ಅಜಯ್ ರಾವ್ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪತ್ನಿ ದೂರು ದಾಖಲಿಸಿದ್ದಾರೆ. ಪತ್ನಿ ಜೊತೆಗೆ ಮಗಳು ಚರಿಷ್ಮಾ ಸಹ ಅಜಯ್ ರಾವ್ ವಿರುದ್ಧ ದೂರು ದಾಖಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಇವರೇ ಕರ್ಕೊಂಡು ಹೋಗಿ ಹೊಡಿ ಬಡಿ ಮಾಡಿದ್ದು ತಪ್ಪು: ಪ್ರಿಯಾ ಹಾಸನ್‌

  • ಗದಗ | ವಿಚಿತ್ರ ಲವ್‌ಜಿಹಾದ್ ಪ್ರಕರಣ – ಬಲವಂತವಾಗಿ ಹಿಂದೂ ಯುವಕನ ಮತಾಂತರ ಮಾಡಿಸಿರೋ ಆರೋಪ

    ಗದಗ | ವಿಚಿತ್ರ ಲವ್‌ಜಿಹಾದ್ ಪ್ರಕರಣ – ಬಲವಂತವಾಗಿ ಹಿಂದೂ ಯುವಕನ ಮತಾಂತರ ಮಾಡಿಸಿರೋ ಆರೋಪ

    ಗದಗ: ಪ್ರೀತಿಸಿ ಮದುವೆಯಾದ ವಿವಾಹಿತೆ ಹಿಂದೂ ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿರೋ ಆರೋಪ ಗದಗ (Gadag) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಗದಗ ನಗರದ ಗಾಂಧಿನಗರ ನಿವಾಸಿ ವಿಶಾಲಕುಮಾರ್ ಗೋಕಾವಿ ಹಾಗೂ ವಿವಾಹಿತೆ ತಹಸೀನಾ 3 ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಅಲ್ಲದೇ ಈ ಜೋಡಿಯು 2024ರ ನವೆಂಬರ್ 24ರಲ್ಲಿ ಗದಗ ರಿಜಿಸ್ಟರ್ ಕಚೇರಿನಲ್ಲಿ ಮದುವೆಯಾಗಿದ್ದರು. ರಿಜಿಸ್ಟರ್ ಮ್ಯಾರೇಜ್ ಬಳಿಕ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳಲು ತಹಸೀನಾ ಒತ್ತಾಯಿಸಿದ್ದಳು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಆನ್‌ಲೈನ್‌ ಜೂಜಿಗೆ ದಾಸನಾಗಿದ್ದ ಹೆಡ್ ಕಾನ್‌ಸ್ಟೆಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ

    ವಿಶಾಲಕುಮಾರ್, ಎರಡೂ ಕುಟುಂಬವು ಒಟ್ಟಿಗೆ ಚೆನ್ನಾಗಿರುವ ಉದ್ದೇಶದಿಂದ ಮದುವೆಗೆ ಒಪ್ಪಿ ಮುಸ್ಲಿಂ ಸಂಪ್ರದಾಯದಂತೆಯೂ ಮದುವೆವಾಗಿದ್ದ. ಈ ವೇಳೆ ಯುವತಿ ಮನೆಯವರು ನೀನು ಹಿಂದೂ ಧರ್ಮ ಬಿಟ್ಟು, ಮುಸ್ಲಿಂ ಧರ್ಮ ಸ್ವೀಕರಿಸು ಎಂದು ವಿಶಾಲಕುಮಾರ್‌ಗೆ ಒತ್ತಾಯ ಮಾಡಿದ್ದರು. 2025 ಏಪ್ರಿಲ್ 25ರಂದು ಜಮಾತ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮತ್ತೆ ಮದುವೆ ಮಾಡಿದ್ದರು. ಅಲ್ಲದೇ ಮದುವೆಯಲ್ಲಿ ವಿಶಾಲಕುಮಾರ್‌ಗೆ ಅರಿವಿಲ್ಲದಂತೆ ಆತನ ಹೆಸರು ಬದಲಾವಣೆ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: 50% ಒಟ್ಟಾರೆ ಮೀಸಲಾತಿ ಮಿತಿ ತೆಗೆದು, 75%ಗೆ ಹೆಚ್ಚಿಸಬೇಕು: ಸಿದ್ದರಾಮಯ್ಯ ಪ್ರಸ್ತಾಪ

    ಬಳಿಕ ತಹಸೀನ್ ಹಾಗೂ ಆಕೆ ತಾಯಿ ಬೇಗಂ ಬಾನು ಜಮಾತ್‌ಗೆ ಹೋಗುವಂತೆ ಬಲವಂತ ಮಾಡಿದ್ದರು. ಟೋಪಿ, ಜುಬ್ಬಾ ಧರಿಸು, ಹಣೆ ಮೇಲಿನ ಕುಂಕುಮ ಅಳಿಸು, ಕಿವಿ ಹಾಕಿರುವ ರಿಂಗ್ ತೆಗೆ, ಗಡ್ಡ ಬಿಡು, ನಿತ್ಯ ನಮಾಜ್ ಮಾಡುವಂತೆ ಒತ್ತಾಯ ಮಾಡುತ್ತಿದ್ದರು. ಈ ಮಧ್ಯ ವಿಶಾಲಕುಮಾರ್, ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರ ತಿಳಿದ ಯುವಕನ ಕುಟುಂಬದಿಂದ ಹಿಂದೂ ಸಂಪ್ರದಾಯದಂತೆ ಮದುವೆಗೆ ಸಿದ್ಧತೆ ನಡೆಸಿದ್ದರು. ಜೂನ್ 5ರಂದು ಮದುವೆ ನಿಗದಿಯಾಗಿತ್ತು. ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ದರ್ಶನ್ ಫೋಟೋ ರಿವೀಲ್

    ಆರಂಭದಲ್ಲಿ ಮುದುವೆಗೆ ಒಪ್ಪಿಗೆ ನೀಡಿದ್ದ ತಹಸೀನಾ, ಬಳಿಕ ಕುಟುಂಬಸ್ಥರ ಹಾಗೂ ಮುಸ್ಲಿಂ ಮುಖಂಡರ ಒತ್ತಾಯಕ್ಕೆ ಮಣಿದು ನಿರಾಕರಣೆ ಮಾಡಿದ್ದಾಳೆ. ಈಗ ವರಸೆ ಬದಲಿಸಿದ ಯುವತಿ ಕುಟುಂಬಸ್ಥರು, ಮುಸ್ಲಿಂ ಧರ್ಮಕ್ಕೆ ಮತಾಂತರ ಆಗದಿದ್ದರೆ, ಮುಂದೆ ಪರಿಣಾಮ ಬೇರೆಯಾಗುತ್ತೆ. ಅಲ್ಲದೇ ರೇಪ್ ಕೇಸ್ ಹಾಕ್ತೇನೆ. ಕೊಲೆ ಮಾಡಿಸ್ತಿನಿ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ವಿಶಾಲಕುಮಾರ್ ಆರೋಪಿಸಿದ್ದಾನೆ.

    ಈ ಯುವಕನ ಹೋರಾಟಕ್ಕೆ ಶ್ರೀರಾಮ ಸೇನೆ ಸಾಥ್ ನೀಡಿದ್ದು, ಇದು ಲವ್ ಜಿಹಾದ್ (Love Jihad). ಹೀಗಾಗಿ ಯುವತಿ ಹಾಗೂ ಅವರ ಕುಟುಂಬದ ಮೇಲೆ ಕ್ರಮ ಜರುಗಿಸುವಂತೆ ಒತ್ತಾಸಿದ್ದಾರೆ.

  • ಹುಬ್ಬಳ್ಳಿ | ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದ ಹೊತ್ತೊಯ್ದ ಪೋಷಕರು

    ಹುಬ್ಬಳ್ಳಿ | ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದ ಹೊತ್ತೊಯ್ದ ಪೋಷಕರು

    – ಯುವತಿ ತಂಟೆಗೆ ಬಾರದಂತೆ ಪತಿಗೆ ಧಮ್ಕಿ

    ಹುಬ್ಬಳ್ಳಿ: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದ ಬಲವಂತವಾಗಿ ಪೋಷಕರು ಎತ್ತೊಯ್ದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.

    ಹುಬ್ಬಳ್ಳಿಯ ಬೈರಿಕೊಪ್ಪ (Barikoppa) ಗ್ರಾಮದ ನಿರಂಜನ್ ಹಾಗೂ ಸುಷ್ಮಾರ ಪರಸ್ಪರ ಪ್ರೀತಿಗೆ ಹೆತ್ತವರ ವಿರೋಧವಿತ್ತು. ಕಳೆದ ಎಂಟು ವರ್ಷದಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೇ ಈ ಜೋಡಿ 2 ವರ್ಷದ ಹಿಂದೆಯೇ ಗದಗನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿ ಬಂದಿದ್ದರು. ಇದನ್ನೂ ಓದಿ: Ahmedabad Tragedy | ಡಿಎನ್‌ಎ ಮ್ಯಾಚ್ – 3 ದಿನಗಳ ಬಳಿಕ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

    ಬಳಿಕ ಪೋಷಕರ ವಿರೋಧಕ್ಕೆ ಮಣಿದು, ಇಬ್ಬರು ದೂರವಾಗಿ ವೇದನೆ ಪಡುತ್ತಿದ್ದರು. ಇದೀಗ ಪ್ರೀತಿಸಿ ಮದುವೆಯಾದ ಪತಿಯನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ನಿರಂಜನ್ ಮನೆಗೆ ಸುಷ್ಮಾ ಬಂದಿದ್ದರು. ಈ ವೇಳೆ ಯುವತಿ ತಂದೆ ಪರಶುರಾಮ, ಮಾವಂದಿರಾದ ಮಹಾಂತೇಶ್, ಮಂಜು ಸೇರಿ ನಿರಂಜನ್‌ಗೆ ಧಮ್ಕಿ ಹಾಕಿ ಗಂಡನ ಮನೆಯಲ್ಲಿ ಕುಳಿತಿದ್ದ ಸುಷ್ಮಾಳನ್ನು ಗೋಣಿ ಚೀಲದಲ್ಲಿ ಎತ್ತೊಯ್ದಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನ F-35 ಫೈಟರ್‌ ಜೆಟ್‌ ಕೇರಳದಲ್ಲಿ ತುರ್ತು ಭೂಸ್ಪರ್ಶ – ಕಾರಣ ಏನು?

    ಸುಷ್ಮಾ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪತಿ ನಿರಂಜನ್‌ಗೆ ಆಕೆ ಕುಟುಂಬಸ್ಥರು ಧಮ್ಕಿ ಹಾಕಿದ್ದಾರೆ. ಸದ್ಯ ಈ ಜೋಡಿ ರಕ್ಷಣೆಗಾಗಿ ಹುಬ್ಬಳ್ಳಿಯ ಪೊಲೀಸರ ಮೊರೆ ಹೋಗಿದ್ದಾರೆ. ಇದನ್ನೂ ಓದಿ: Bengaluru | ಪಾರ್ಟಿ ಮಾಡಲು ಪಬ್‌ಗೆ ಕರೆಸಿ, ಸುಪಾರಿ ನೀಡಿ ಗೆಳೆಯನ ಸುಲಿಗೆ

    ಮದುವೆಯಾಗಿ ನಾವು ಒಂದು ತಿಂಗಳು ಜೊತೆಗೆ ಇದ್ದೆವು. ನಮ್ಮ ಮನೆಗೆ ಬಂದು ಒತ್ತಾಯ ಪೂರ್ವಕವಾಗಿ ನನ್ನ ಪತ್ನಿಯನ್ನು ಎತ್ತಿಕೊಂಡು ಹೋಗಿದ್ದಾರೆ. ಅಲ್ಲದೆ ನನಗೂ ಬೆದರಿಕೆ ಹಾಕಿದ್ದಾರೆ. ನಮ್ಮಿಬ್ಬರಿಗೂ ರಕ್ಷಣೆ ನೀಡಬೇಕೆಂದು ನಿರಂಜನ್ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

  • ಭಾರತ-ಪಾಕ್‌ ಉದ್ವಿಗ್ನತೆ ನಡುವೆಯೂ ಹೆಚ್ಚಿದ ವೈವಾಹಿಕ ಸಂಬಂಧ – ಲವ್‌ಸ್ಟೋರಿಗಳಿಗೆ ಕಾರಣ ಏನು?

    ಭಾರತ-ಪಾಕ್‌ ಉದ್ವಿಗ್ನತೆ ನಡುವೆಯೂ ಹೆಚ್ಚಿದ ವೈವಾಹಿಕ ಸಂಬಂಧ – ಲವ್‌ಸ್ಟೋರಿಗಳಿಗೆ ಕಾರಣ ಏನು?

    ಭಾರತ ಮತ್ತು ಪಾಕಿಸ್ತಾನ (India And Pakistan) ನಡುವಿನ ರಾಜಕೀಯ ಸಂಬಂಧಗಳು ಎಷ್ಟೇ ಕಹಿಯಾಗಿದ್ದರೂ ಉಭಯ ದೇಶದ ಕೆಲ ನಾಗರಿಕರ ನಡುವಿನ ಸಂಬಂಧ ಗಟ್ಟಿಯಾಗಿವೆ. ಅದರಲ್ಲೂ ಕೆಲ ಮುಸ್ಲಿಂ ಕುಟುಂಬಗಳ ನಡುವಿನ ವಿವಾಹ ಸಂಬಂಧಗಳು ಸಾಮಾನ್ಯವಾಗಿವೆ. ಆದ್ರೆ ಪಹಲ್ಗಾಮ್‌ ದಾಳಿಯ ಬಳಿಕ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ದೇಶ ತೊರೆಯುವಂತೆ ಭಾರತ ಕಟ್ಟಾಜ್ಞೆ ಹೊರಡಿಸಿದ್ದು, ಬಹಳಷ್ಟು ಜನರನ್ನ ಈಗಾಗಲೇ ಗಡಿಯಿಂದ ಕಳುಹಿಸಲಾಗಿದೆ. ಈ ನಡುವೆ ಉಭಯ ರಾಷ್ಟ್ರಗಳ ನಡುವಿನ ವಿವಾಹ ಸಂಬಂಧಗಳು ಏಕೆ ಇಷ್ಟೊಂದು ಗಟ್ಟಿಯಾಗಿದ್ದವು ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ, ಇದಕ್ಕೆ ಉತ್ತರವೂ ಇಲ್ಲಿದೆ.

    ಜನರಿಗೆ ಯಾವುದೇ ಧರ್ಮ, ಲಿಂಗ ಅಥವಾ ದೇಶದಲ್ಲಿ ಮದುವೆಯಾಗಬೇಕೆಂಬುದು ವೈಯಕ್ತಿಕ ವಿಷಯವಾದರೂ, ಶತ್ರು ರಾಷ್ಟ್ರಗಳ ಜೊತೆಗಿನ ಸಂಬಂಧಗಳಿಂದ ದೂರ ಉಳಿಯುತ್ತಾರೆ. ಆದ್ರೆ ಭಾರತ ಮತ್ತು ಪಾಕಿಸ್ತಾನದ ಪರಿಸ್ಥಿತಿ ವಿಭಿನ್ನವಾಗಿದೆ. ದೇಶ ವಿಭಜನೆಯ ನಂತರವೂ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಲೇ ಇದ್ದವು. ಇದರ ನಡುವೆ ವಿವಾಹಗಳೂ ನಡೆಯುತ್ತಿದ್ದವು, ಪಹಲ್ಗಾಮ್‌ನಲ್ಲಿ ಉಗ್ರರ ಪೈಶಾಚಿಕ ಕೃತ್ಯದ ಬಳಿಕ ಈ ಸಂಬಂಧದ ಚಿತ್ರಣಗಳು ಸ್ಪಷ್ಟವಾಗಿ ಗೋಚರಿಸಿವೆ.

    ಹೌದು. 2 ರಾಷ್ಟ್ರಗಳ ನಡುವಿನ ವಿವಾಹ ಸಂಬಂಧಗಳ ಬಗ್ಗೆ ನಿಖರ ಮಾಹಿತಿ ಇಲ್ಲ. ಆದಾಗ್ಯೂ ಪ್ರತಿವರ್ಷ ನೂರಾರು ಮಂದಿ ಪಾಕ್‌ ಪ್ರಜೆಗಳನ್ನ ಅಥವಾ ಪಾಕ್‌ ಪ್ರಜೆಗಳು ಭಾರತೀಯರನ್ನ ವಿವಾಹವಾಗಿರುವುದು ಕಂಡುಬಂದಿದೆ. ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ರಾಜಸ್ಥಾನ್‌, ಪಂಜಾಬ್‌ ಮತ್ತು ಗುಜರಾತ್‌ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮದುವೆಗಳು ನಡೆದಿವೆ. ವಿಶೇಷವಾಗಿ ರಾಜಸ್ಥಾನದ ಪಶ್ಚಿಮ ಭಾಗದ ಜೈಸಲ್ಮೇರ್ ಮತ್ತು ಬಾರ್ಮೇರ್‌ನಲ್ಲಿ ಪ್ರತಿ ವರ್ಷ ಸುಮಾರು 200 ಗಡಿಯಾಚೆಗಿನ ಸಂಬಂಧಗಳು ನಡೆಯುತ್ತಿವೆ. ಗುಜರಾತ್‌ನ ಪಾಕಿಸ್ತಾನದ ಗಡಿಯಲ್ಲೂ ಇದೇ ಪರಿಸ್ಥಿತಿ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ.

    ಗಡಿ ಪ್ರೀತಿಗೆ ವೇದಿಕೆಯಾದ ಸೋಷಿಯಲ್‌ ಮೀಡಿಯಾ
    ಇದರ ಹಿಂದೆ ಕೆಲ ಸಾಮಾಜಿಕ ಕಾರಣಗಳೂ ಇವೆ. ಏಕೆಂದ್ರೆ ದೇಶ ವಿಭಜನೆಗೂ ಮೊದಲು ಈಗಿನ ಗಢಿ ಭಾಗಗಳಲ್ಲಿ ಅನೇಕ ಕುಟುಂಬಗಳೂ ಒಂದೇ ಹಳ್ಳಿ, ಪಟ್ಟಣಗಳಲ್ಲಿ ವಾಸಿಸುತ್ತಿದ್ದವು. 1947ರ ನಂತರ ಇವೆಲ್ಲವು ಬೇರ್ಪಪಟ್ಟವು, ಆದ್ರೆ ಎರಡೂ ಕಡೆಗಳಲ್ಲಿ ವೈವಾಹಿಕ ಸಂಬಂಧ ಗಟ್ಟಿಯಾಗಿ ಉಳಿದುಕೊಂಡಿತ್ತು. ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾಗಳಲ್ಲಿ ಪರಿಚಿತವಾದ ಜೋಡಿಗಳೂ ಸಹ ಸಂಪರ್ಕ ಸಾಧಿಸಿ, ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದರು. ಸೀಮಾ ಹೈದರ್‌, ಭಾರತದದಿಂದ ಪಾಕ್‌ಗೆ ತೆರಳಿದ ಅಂಜು ಮಹಿಳೆಯರ ಕಥೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.

    ಪೌರತ್ವ ಪಡೆಯುವ ಮುನ್ನ…
    ಇನ್ನೂ ಪಾಕಿಸ್ತಾನಿ ಪ್ರಜೆಯೊಬ್ಬರು ಭಾರತೀಯರನ್ನು ಮದುವೆಯಾದ್ರೆ ಅವರಿಗೆ ಇಲ್ಲಿಯೇ ಉಳಿಯಲು ವಿಶೇಷ ವೀಸಾ ಸಿಗುತ್ತದೆ. ಆದ್ರೆ ಈ ಪ್ರಕ್ರಿಯೆಯು ಸುಲಭವಲ್ಲ ಮೊದಲನೆಯದ್ದಾಗಿ ಎಕ್ಸ್‌ ವೀಸಾ ನೀಡಲಾಗುತ್ತದೆ. ಇದು 6 ತಿಂಗಳಿಂದ 1 ವರ್ಷದ ವರೆಗೆ ಅಸ್ತಿತ್ವದಲ್ಲಿರುತ್ತದೆ. ಬಳಿಕ ಆ ಪ್ರಜೆ ಭಾರತದ ಪೌರತ್ವ ಪಡೆಯುವವರೆಗೂ ನವೀಕರಣಗೊಳ್ಳುತ್ತಲೇ ಇರುತ್ತದೆ. ಈ ಎಕ್ಸ್‌ ವೀಸಾಗೆ ವಿವಾಹ ನೋಂದಣಿ ಕೂಡ ಅಗತ್ಯ. ಪೊಲೀಸರು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ವೀಸಾ ನೀಡುತ್ತಾರೆ. ಇದಲ್ಲದೇ ಪಾಕಿಸ್ತಾನಿ ಪ್ರಜೆ ಹಿಂದೂ, ಸಿಖ್, ಜೈನ, ಬೌದ್ಧ, ಕ್ರಿಶ್ಚಿಯನ್ ಅಥವಾ ಪಾರ್ಸಿ ಸಮುದಾಯಕ್ಕೆ ಸೇರಿದಾಗ, ದೀರ್ಘಾವಧಿಯ ವೀಸಾ (LTV) ಸಹ ಲಭ್ಯವಿದೆ. ಇದು ದೀರ್ಘಕಾಲದವರೆಗೆ ನಡೆಯುತ್ತದೆ ಮತ್ತು ಪೌರತ್ವ ಪಡೆಯುವ ಪ್ರಕ್ರಿಯೆಯ ಒಂದು ಭಾಗವೆಂದು ಪರಿಗಣಿಸಲಾಗುತ್ತದೆ.

    ಪೌರತ್ವ ಪಡೆಯಲು ಷರತ್ತುಗಳೇನು?
    ಮದುವೆ ನಂತರ ಪಾಕ್‌ ಪ್ರಜೆಯು ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಬೇಕಾದ್ರೆ ಕೆಲ ಷರತ್ತುಗಳೂ ಇವೆ. ಆತ ಕನಿಷ್ಠ 7 ವರ್ಷಗಳ ಕಾಲ ದೇಶವಾಸಿಯಾಗಿರಬೇಕು. ಅಲ್ಲಿಯವರೆಗೆ ಭಾರತೀಯರನ್ನು ವರಿಸಿದ ಪಾಕ್‌ ಪ್ರಜೆಗೆ ತನ್ನ ಪತಿ ಮತ್ತವರ ಕುಟುಂಬಸ್ಥರು ಇರುವ ನಗರಕ್ಕೆ ಸೀಮಿತವಾಗಿ ವೀಸಾ ಸಿಗುತ್ತದೆ. ಬೇರೆ ನಗರ ಪ್ರವೇಶಿಸಬೇಕಾದ್ರೆ ಅವರು ಪೊಲೀಸರಿಂದ ಅನುಮತಿ ಪಡೆಯಬೇಕು.

    ಪಾಕಿಸ್ತಾನಿಯರ ಮೇಲೆ ಅನುಮಾನ ಇದ್ದೇ ಇತ್ತು:
    ವಿವಾಹ ಸಂಬಂಧ ಹೊಂದಿದ್ದ ಹೊರತಾಗಿಯೂ ಪಾಕಿಸ್ತಾನಿಯರ ಮೇಲೆ ಭಾರತೀಯ ತನಿಖಾ ಸಂಸ್ಥೆಗಳು ನಿಗಾ ಇಟ್ಟಿದ್ದವು. ಏಕೆಂದರೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹನಿಟ್ರ್ಯಾಪ್‌ ಅಥವಾ ನಕಲಿ ವಿವಾಹಗಳ ಮೂಲಕ ಮಿಲಿಟರಿ ಮತ್ತು ದೇಶದ ಭದ್ರತಾ ಮಾಹಿತಿಗಳನ್ನು ಕದಿಯಲು ಪ್ರಯತ್ನಿಸುತ್ತಿತ್ತು. ಭಾರತೀಯ ಪುರುಷರನ್ನು ವರಿಸಿದ್ದ ಪಾಕಿಸ್ತಾನಿ ಮಹಿಳೆಯರು ಬೇಹುಗಾರಿಕೆ ನಡೆಸಲು ಶುರು ಮಾಡಿದ್ದರು, ಪಂಜಾಬ್‌ ಮತ್ತು ರಾಜಸ್ಥಾನ ಗಡಿಯಲ್ಲಿ ಇಂತಹ ಅನೇಕ ಪ್ರಕರಣಗಳು ಕಂಡುಬಂದಿವೆ, ಹೀಗಾಗಿ RAw ಮತ್ತು ಮಿಲಿಟರಿ ಸದಾ ಅವರ ಮೇಲೆ ಒಂದು ಕಣ್ಣಿಟ್ಟಿರುತ್ತದೆ.

    ಹಲವು ವೀಸಾಗಳಿಗೆ ನಿಬಂಧನೆ:
    ಮದುವೆ ಸಂಬಂಧಗಳ ಹೊರತಾಗಿಯೂ ಪಾಕಿಸ್ತಾನದ ಹಲವು ಜನರು ಭಾರತಕ್ಕೆ ಬರುತ್ತಲೇ ಇದ್ದರು. ಹಲವು ವೀಸಾಗಳಿಗೆ ನಿಬಂಧನೆಗಳನ್ನು ವಿಧಿಸಲಾಗಿದೆ.
    * ಪಾಕ್‌ನಿಂದ ಬಂಧವರಿಗೆ ಪ್ರವಾಸಿ ವೀಸಾ ಇರುವುದಿಲ್ಲ, ಸಂದರ್ಶಕರ ವೀಸಾದಲ್ಲಿ ಬರಬಹುದು. ಸಂದರ್ಶಕರು ತಮ್ಮ ಸಂಬಂಧಿಕರ ವಿಳಾಸ ಮತ್ತು ಇತರ ದಾಖಲೆಗಳನ್ನ ಒದಗಿಸಬೇಕಾಗುತ್ತದೆ.
    * ದೀರ್ಘಾವಧಿಯ ವೀಸಾವು ಭಾರತೀಯ ಪೌರತ್ವವನ್ನು ಬಯಸುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ ಮಾತ್ರ ನೀಡಲಾಗುತ್ತದೆ.
    * ಪತ್ರಕರ್ತರು ಅಥವಾ ಸಂಶೋಧಕರಿಗೆ ವ್ಯಾಪಾರ ವೀಸಾ, ವಿದ್ಯಾರ್ಥಿ ವೀಸಾ ಮತ್ತು ವಿವಿಧ ರೀತಿಯ ವೀಸಾಗಳನ್ನ ಪಡೆಯುವ ಅವಕಾಶ ಇರಲಿದೆ. ಇದರ ಹೊರತಾಗಿ ವೈದ್ಯಕೀಯ ಸೌಲಭ್ಯ ಪಡೆಯುವವರಿಗೆ ಮೆಡಿಕಲ್‌ ವೀಸಾ ಲಭ್ಯವಿರುತ್ತದೆ.

    ಅದೇ ರೀತಿ ಭಾರತೀಯ ನಾಗರಿಕರೂ ಪಾಕಿಸ್ತಾನಕ್ಕೆ ಹೋಗಲು ಕೆಲವು ನಿಯಮಗಳನ್ನ ಅನುಸರಿಸಬೇಕಾಗುತ್ತದೆ. ಯಾವ ನಗರಗಳಿಗೆ ಭೇಟಿ ನೀಡಲಿದ್ದಾರೆ? ಎಲ್ಲಿ ವಾಸ್ತವ್ಯ? ಎಲ್ಲಾ ಪೂರ್ಣ ವಿಳಾಸವನ್ನು ನೀಡಬೇಕಾಗುತ್ತದೆ. ಸದ್ಯ ಉಭಯ ದೇಶಗಳ ನಡುವಿನ ಉದ್ವಿಗ್ನತೆಯಿಂದಾಗಿ ಎಲ್ಲ ರಾಜತಾಂತ್ರಿಕ ಸಂಬಂಧಗಳು ಸ್ತಬ್ಧವಾಗಿದೆ. ಮುಂದಿನ ಬೆಳವಣಿಗೆಯನ್ನ ಕಾದುನೋಡಬೇಕಿದೆ.

  • ಎರಡೇ ವಾರಕ್ಕೆ ಮುರಿದು ಬಿತ್ತು ಹಿಂದೂ ಯುವಕ, ಮುಸ್ಲಿಂ ಯುವತಿಯ ಪ್ರೇಮ ವಿವಾಹ

    ಎರಡೇ ವಾರಕ್ಕೆ ಮುರಿದು ಬಿತ್ತು ಹಿಂದೂ ಯುವಕ, ಮುಸ್ಲಿಂ ಯುವತಿಯ ಪ್ರೇಮ ವಿವಾಹ

    ಚಿಕ್ಕಬಳ್ಳಾಪುರ: ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿಯ (Muslim Girl) ಪ್ರೇಮವಿವಾಹ ಕೇವಲ 15 ದಿನಕ್ಕೆ ಮುರಿದುಬಿದ್ದಿದೆ.

    ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಮೈಲಪನಹಳ್ಳಿ ಗ್ರಾಮದ 23 ವರ್ಷದ ಫಸಿಹಾ ಹಾಗೂ ಇದೇ ಗ್ರಾಮದ 25 ವರ್ಷದ ನಾಗಾರ್ಜುನ ಇಬ್ಬರು ಪರಸ್ಪರ 2 ವರ್ಷಗಳಿಂದ ಪ್ರೀತಿ ಮಾಡಿ ಕಳೆದ ತಿಂಗಳು ಮಾರ್ಚ್ 23 ರಂದು ಪ್ರೇಮವಿವಾಹವಾಗಿದ್ರು. ಪ್ರೇಮ ವಿವಾಹಕ್ಕೆ (Love Marriage) ಯುವಕನ ಮನೆಯಲ್ಲಿ ಒಪ್ಪಿಗೆ ಇದ್ರೂ ಯುವತಿ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಹೀಗಾಗಿ ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ಮೊರೆ ಹೋಗಿದ್ರು. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಪೋಷಕರ ವಿರೋಧದ ನಡ್ವೆ ಹಿಂದೂ ಯುವಕ – ಮುಸ್ಲಿಂ ಯುವತಿ ಪ್ರೇಮ ವಿವಾಹ

    ಠಾಣೆಯಲ್ಲಿ ಎರಡೂ ಕಡೆಯ ಪೋಷಕರನ್ನ ಕರೆಸಿ ವಿಚಾರಣೆ ಮಾಡಲಾಗಿ ಯುವತಿಯನ್ನ ಸಹ ಅವರ ಪೋಷಕರ ಜೊತೆ ಮಾತನಾಡಲು ಅವಕಾಶ ನೀಡಲಾಗಿತ್ತು. ಆದ್ರೆ ಯುವತಿ ತಾನು ಮದುವೆಯಾದ ಯುವಕನ ಜೊತೆಯಲ್ಲೇ ಹೋಗುವುದಾಗಿನ ತಿಳಿಸಿ ನಾಗಾರ್ಜುನನ ಕೈ ಹಿಡಿದು ಹೊರಟಿದ್ದಳು. ಇದನ್ನೂ ಓದಿ: ಚಿಕ್ಕಬಳ್ಳಾಪುರ ನಗರಸಭೆಯ 6 ಮಂದಿ ಕಾಂಗ್ರೆಸ್ ಸದಸ್ಯರು ಅನರ್ಹ – ಸುಧಾಕರ್ ವಿರುದ್ಧ ಸೇಡು ತೀರಿಸಿಕೊಂಡ ಪ್ರದೀಪ್ ಈಶ್ವರ್

    ಇದೀಗ ಮದುವೆಯಾಗಿ 15 ದಿನ ಕಳೆಯೋದರೊಳಗೆ ಯುವತಿ ಫಸಿಹಾ ತಾಯಿ ಮನೆ ಸೇರಿಕೊಂಡಿದ್ದಾಳೆ. ತಾಯಿಗೆ ಅನಾರೋಗ್ಯ ಇದೆ ನನ್ನ ನೋವಲ್ಲೇ ಕೊರಗಿ ನೋವು ತಿನ್ನುತ್ತಾರೆ ಅನ್ನೋ ಕಾರಣ ನೀಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟು ತಾಯಿ ಮನೆ ಸೇರಿಕೊಂಡಿದ್ದಾಳೆ.

    Chikkaballapura Marriage 3

    ಇದ್ರಿಂದ ಪೋಷಕರ ವಿರೋಧದ ನಡುವೆ ಸಮುದಾಯಗಳು, ಸಮಾಜದಲ್ಲಿ ಸಾಕಷ್ಟು ಚರ್ಚೆಗೀಡು ಮಾಡಿದ್ದ ಹಿಂದೂ ಯುವಕ-ಮುಸ್ಲಿಂ ಯುವತಿಯ ಮದುವೆ ಮುರಿದು ಬಿದ್ದಿದೆ. ಇದನ್ನೂ ಓದಿ: Chikkaballapura | ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 20ಕ್ಕೂ ಹೆಚ್ಚು ಟ್ಯಾಕ್ಸಿಗಳು ವಶಕ್ಕೆ

  • ಚಿಕ್ಕಬಳ್ಳಾಪುರ | ಪೋಷಕರ ವಿರೋಧದ ನಡ್ವೆ ಹಿಂದೂ ಯುವಕ – ಮುಸ್ಲಿಂ ಯುವತಿ ಪ್ರೇಮ ವಿವಾಹ

    ಚಿಕ್ಕಬಳ್ಳಾಪುರ | ಪೋಷಕರ ವಿರೋಧದ ನಡ್ವೆ ಹಿಂದೂ ಯುವಕ – ಮುಸ್ಲಿಂ ಯುವತಿ ಪ್ರೇಮ ವಿವಾಹ

    – ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ನವದಂಪತಿ

    ಚಿಕ್ಕಬಳ್ಳಾಪುರ: ಒಂದೇ ಗ್ರಾಮದ ಬೇರೆ ಬೇರೆ ಧರ್ಮದ ಯುವಕ – ಯುವತಿ ಪರಸ್ಪರ ಪ್ರೀತಿಸಿ ಪ್ರೇಮವಿವಾಹವಾಗಿ ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದೆ.

    ಚಿಕ್ಕಬಳ್ಳಾಪುರ ತಾಲೂಕಿನ ಮೈಲಪನಹಳ್ಳಿ ಗ್ರಾಮದ ನಾಗಾರ್ಜುನ ಹಾಗೂ ಫಸಿಯಾ ಎಂಬುವವರು 2 ವರ್ಷದಿಂದ ಪರಸ್ಪರ ಪ್ರೀತಿಸಿ ಈಗ ಮದುವೆಯಾಗಿದ್ದಾರೆ (Love Marriage). ಇದನ್ನೂ ಓದಿ: ಕದನ ವಿರಾಮ ಮಾತುಕತೆ ನಡ್ವೆ ರಷ್ಯಾ ಡ್ರೋನ್ ದಾಳಿ – ಉಕ್ರೇನ್‌ನಲ್ಲಿ 5 ವರ್ಷದ ಮಗು ಸೇರಿ 7 ಮಂದಿ ಸಾವು

    ಮದುವೆಗೆ ಯುವತಿ ಪೋಷಕರ ವಿರೋಧದಿಂದ ಮನೆಯಂದ ಹೋಗಿ ಮದುವೆಯಾಗಿದ್ದಾರೆ. ಮನೆಯವರು ಅಡ್ಡಿ ವಿರೋಧದ ಹಿನ್ನಲೆಯಲ್ಲಿ ನವ ವಧುವರರು ಸೀದಾ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ (Chikkaballapura Rural Police Station) ಆಗಮಿಸಿ ರಕ್ಷಣೆ ಕೊಡುವಂತೆ ಕೋರಿಕೊಂಡಿದ್ದಾರೆ. ಎರಡು ಕೆಡೆಯವರ ತಂದೆ-ತಾಯಿ ಬಂಧು ಬಳಗ ಕರೆಸಿ ಯುವತಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿ ತಾನು ಇಷ್ಟಪಟ್ಟೇ ಮದುವೆಯಾಗಿದ್ದು ಆತನ ಜೊತೆಯಲ್ಲೇ ಜೀವನ ಮಾಡುವುದಾಗಿ ತಿಳಿಸಿದ್ದಾರೆ.

    ಯುವತಿ ಹೇಳಿಕೆ ಬಳಿಕ ನೂತನ ದಂಪತಿಗೆ ರಕ್ಷಣೆ ನೀಡಿ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ. ಇನ್ನೂ ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದ ಹಲವರಿಗೆ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದ ಡಿಕೆಶಿ ರಾಜೀನಾಮೆ ನೀಡಬೇಕು: ಆರ್.ಅಶೋಕ್

  • ಮಗಳ ಪ್ರೇಮ ವಿವಾಹಕ್ಕೆ ನೊಂದು ಮಹಿಳೆ ಆತ್ಮಹತ್ಯೆ

    ಮಗಳ ಪ್ರೇಮ ವಿವಾಹಕ್ಕೆ ನೊಂದು ಮಹಿಳೆ ಆತ್ಮಹತ್ಯೆ

    ಬೆಂಗಳೂರು: ಮಗಳ ಪ್ರೇಮ ವಿವಾಹಕ್ಕೆ (Love Marriage) ನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ನಗರದ (Nelamangala City) ಸರ್ಕಾರಿ ಆಸ್ಪತ್ರೆ ಎದುರಿನ ಪಾರ್ಕ್‌ನಲ್ಲಿ ನಡೆದಿದೆ.

    ನೆಲಮಂಗಲ ತಾಲ್ಲೂಕಿನ ಅಂಜನಾ ನಗರದ 45 ವರ್ಷದ ಮಹಿಳೆ ಲಕ್ಷ್ಮಮ್ಮ ನೇಣಿಗೆ ಶರಣಾದ ಮಹಿಳೆ. ಇದನ್ನೂ ಓದಿ: ಬುರ್ಖಾ ವಿದ್ಯಾರ್ಥಿನಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ: ಪ್ರತಾಪ್‌ ಸಿಂಹ

    ಇತ್ತೀಚೆಗಷ್ಟೇ ತನ್ನ ಮಗಳು ಪ್ರೇಮ ವಿವಾಹವಾಗಿ ಮನೆಬಿಟ್ಟು ಹೋಗಿದ್ದಳು. ಇದರಿಂದ ಮನನೊಂದಿದ್ದ ಲಕ್ಷ್ಮಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನೆಲಮಂಗಲ ಟೌನ್ ಪೊಲೀಸ್ ಠಾಣಾ (Nelamangala Town Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Election Results – ಟ್ರೆಂಡ್‌ ಬೇಗನೇ ಗೊತ್ತಾದ್ರೂ ತಡವಾಗಲಿದೆ ಅಧಿಕೃತ ಫಲಿತಾಂಶ 

  • ಓಡಿಹೋಗಿ ಮದುವೆಯಾದ ಪ್ರೇಮಿಗಳು – ಯುವಕನ ಪೋಷಕರ ಮೇಲೆ ಯುವತಿ ಕಡೆಯವರಿಂದ ಹಲ್ಲೆ

    ಓಡಿಹೋಗಿ ಮದುವೆಯಾದ ಪ್ರೇಮಿಗಳು – ಯುವಕನ ಪೋಷಕರ ಮೇಲೆ ಯುವತಿ ಕಡೆಯವರಿಂದ ಹಲ್ಲೆ

    – ಬೆಳಗಾವಿ ಪ್ರಕರಣ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಅಮಾನವೀಯ ಘಟನೆ

    ಚಿಕ್ಕಬಳ್ಳಾಪುರ: ಬೆಳಗಾವಿಯಲ್ಲಿ (Belagavi) ಪ್ರೇಮ ವಿವಾಹ (Love Marriage) ಪ್ರಕರಣದಲ್ಲಿ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲೂ (Chikkaballapura) ಸಹ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಮನೋಜ್ ಹಾಗೂ ಅಂಕಿತಾ ಇಬ್ಬರು ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿ ಭಾನುವಾರ ಮದುವೆಯಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಂಕಿತಾ ಕುಟುಂಬಸ್ಥರು ಇಂದು ಯುವಕನ ತಂದೆ-ತಾಯಿ ಮನೆ ಮೇಲೆ ದಾಳಿ ನಡೆಸಿ ತಾಯಿ ವೆಂಕಟಲಕ್ಷ್ಮಮ್ಮ ಹಾಗೂ ತಂದೆ ಗಂಗರಾಜು ಮೇಲೆ ನಡುರಸ್ತೆಯಲ್ಲೇ ಮನಸ್ಸೋಇಚ್ಛೆ ಹಲ್ಲೆ (Assault) ನಡೆಸಿದ್ದಾರೆ. ಇದನ್ನೂ ಓದಿ: ಕೆಸಿ ಜನರಲ್ ಆಸ್ಪತ್ರೆ ಎಡವಟ್ಟಿನಿಂದ ಮಗು ಸಾವು- ಮಗು ಸತ್ತೋದ ಮೇಲೆ ಬಿಲ್ ಕೇಳಿದ ಆರೋಪ

    ಮಧ್ಯಾಹ್ನದ ವೇಳೆಗೆ 20 ಮಂದಿ ಅಂಕಿತಾ ಪೋಷಕರ ಕಡೆಯವರು ಯುವಕನ ಮನೆ ಮೇಲೆ ದಾಳಿ ಮಾಡಿ ಮನೆಯಲ್ಲಿದ್ದ ವೆಂಕಟಲಕ್ಷ್ಮಮ್ಮ ಹಾಗೂ ಗಂಗರಾಜುವಿನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಂಬುಲೆನ್ಸ್ ಸಹ ಗ್ರಾಮದೊಳಗೆ ಬರಲು ಬಿಡದೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಬಂದ ನಂತರ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ-ಯುವತಿ ಪರಾರಿಯಾಗಲು ಯುವಕನ ಪೋಷಕರು ಸಹ ಕಾರಣ ಎಂದು ಈ ಕೃತ್ಯ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.  ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಟ್&ರನ್‌ಗೆ ವೃದ್ಧೆ ಬಲಿ

  • ಇದೆಂಥ ಕೆಲಸ ಮಾಡಿದ್ಲು ಈಕೆ – ದುಬೈಗೆ ಕರೆದುಕೊಂಡು ಹೋಗದಿದ್ದಕ್ಕೆ ಗಂಡನ ಮುಖಕ್ಕೆ ಗುದ್ದಿ ಕೊಂದೇಬಿಡೋದಾ!

    ಇದೆಂಥ ಕೆಲಸ ಮಾಡಿದ್ಲು ಈಕೆ – ದುಬೈಗೆ ಕರೆದುಕೊಂಡು ಹೋಗದಿದ್ದಕ್ಕೆ ಗಂಡನ ಮುಖಕ್ಕೆ ಗುದ್ದಿ ಕೊಂದೇಬಿಡೋದಾ!

    ಮುಂಬೈ: ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿಯ ನಡುವೆ ವೈಮನಸ್ಸು ಉಂಟಾಗುತ್ತಿರುವುದು ಸಹಜವಾಗಿಬಿಟ್ಟಿದೆ. ಸಣ್ಣ ಸಣ್ಣ ಕಾರಣಕ್ಕೆ ಭಿನ್ನಾಭಿಪ್ರಾಯ ಮೂಡುತ್ತಿದ್ದು, ಕೊಲೆಯಲ್ಲಿ ಅಂತ್ಯವಾಗುತ್ತಿದೆ. ಇದಕ್ಕೆ ಪುಣೆಯಲ್ಲಿ ನಡೆದಿರುವ ಘಟನೆ ತಾಜಾ ಉದಾಹರಣೆಯಾಗಿದೆ.

    ಹೌದು. 36 ವರ್ಷದ ವ್ಯಕ್ತಿಯೊಬ್ಬ ತನ್ನ ಹುಟ್ಟುಹಬ್ಬಕ್ಕೆ ದುಬೈಗೆ (Dubai Trip) ಕರೆದುಕೊಂಡು ಹೋಗಲಿಲ್ಲ ಅಂತಾ, ಹೆಂಡತಿ ತನ್ನ ಗಂಡನನ್ನ ಹೊಡೆದು ಸಾಯಿಸಿದ್ದಾಳೆ. ಗಂಡನ ಮುಖಕ್ಕೆ ಗುದ್ದಿ ಸಾಯಿಸಿದ್ದಾಳೆ. ಪುಣೆಯ ವನವಡಿ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಡ್‌ನಲ್ಲಿ ಈ ಘಟನೆ ನಡೆದಿದೆ.

    ಮೃತ ವ್ಯಕ್ತಿಯನ್ನು ನಿಖಿಲ್‌ ಘನ್ನಾ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಉದ್ಯಮಿಯಾಗಿದ್ದ ಈತ 6 ವರ್ಷಗಳ ಹಿಂದೆ ರೇಣುಕಾ ಎಂಬ ಮಹಿಳೆಯೊಂದಿಗೆ ಪ್ರೇಮ ವಿವಾಹವಾಗಿದ್ದರು.

    ಪ್ರಾಥಮಿಕ ತನಿಖೆ ಪ್ರಕಾರ, ಶುಕ್ರವಾರ ಮಧ್ಯಾಹ್ನದ ವೇಳೆಗೆ ಘಟನೆ ನಡೆದಿದೆ. ರೇಣುಕಾ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು (Birthday Celebration) ಪತಿ ನಿಖಿಲ್‌ ದುಬೈಗೆ ಕರೆದುಕೊಂಡು ಹೋಗದ ಕಾರಣ ಇಬ್ಬರ ನಡುವೆ ಜಗಳವಾಗಿತ್ತು. ಅಲ್ಲದೇ ತನ್ನ ಹುಟ್ಟುಹಬ್ಬ ಮತ್ತು ವಾರ್ಷಿಕೋತ್ಸವಕ್ಕೂ ದುಬಾರಿ ಉಡುಗೊರೆ ನೀಡಲಿಲ್ಲ. ತಮ್ಮ ಸಂಬಂಧಿಕರ ಹುಟ್ಟುಹಬ್ಬಕ್ಕೆ ರೇಣುಕಾ ಹೋಗಬೇಕು ಅಂದಾಗಲೂ ನಿಖಿಲ್‌ ಆಕೆಯನ್ನು ತಡೆದಿದ್ದರು. ಇದರಿಂದ ರೇಣುಕಾ ಅಸಮಾಧಾನಗೊಂಡಿದ್ದಳು.

    ಶುಕ್ರವಾರ ದುಬೈಗೆ ಕರೆದುಕೊಂಡು ಹೋಗದಿರುವ ಬಗ್ಗೆ ಇಬ್ಬರ ನಡುವೆ ಜಗಳವಾಗಿದೆ. ಆಗ ಕೋಪದಲ್ಲಿ ರೇಣುಕಾ ನಿಖಿಲ್‌ನ ಮುಖಕ್ಕೆ ಗುದ್ದಿದ್ದಾಳೆ. ಗುದ್ದಿದ ರಭಸಕ್ಕೆ ನಿಖಿಲ್‌ನ ಮೂಗು ಮತ್ತು ಕೆಲವು ಹಲ್ಲುಗಳು ಮುರಿದಿವೆ. ತೀವ್ರ ರಕ್ತಸ್ರಾವದಿಂದ ನಿಖಿಲ್ ಪ್ರಜ್ಞೆ ಕಳೆದುಕೊಂಡು, ಕೆಲ ಸಮಯದ ನಂತರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಗುಡ್‌ನ್ಯೂಸ್ – ಚುನಾವಣೆಗೂ ಮುನ್ನ ಸಲ್ಲಿಸಿದ ಅರ್ಜಿಗಳ ವಿಲೇವಾರಿ

    ಸದ್ಯ ಪೊಲೀಸರು ರೇಣುಕಾ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಹೆಚ್ಚಿನ ತನಿಖೆಗಾಗಿ ಆಕೆಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: Kambala: ಇಂದಿನಿಂದ 2 ದಿನ ಬೆಂಗ್ಳೂರಿನಲ್ಲಿ ಕಂಬಳದ ರಂಗು – ಸಾರ್ವಜನಿಕರಿಗೆ ಪ್ರವೇಶ ಉಚಿತ