Tag: Love Jihad

  • ಮದುವೆಯಾಗೋದಾಗಿ ನಂಬಿಸಿ ಸೆಕ್ಸ್ – ಮತಾಂತರಕ್ಕೆ ಒಪ್ಪದ್ದಕ್ಕೆ ಹಿಂದೂ ಯುವತಿಗೆ ವಂಚಿಸಿದ್ದವ ಅರೆಸ್ಟ್

    ಮದುವೆಯಾಗೋದಾಗಿ ನಂಬಿಸಿ ಸೆಕ್ಸ್ – ಮತಾಂತರಕ್ಕೆ ಒಪ್ಪದ್ದಕ್ಕೆ ಹಿಂದೂ ಯುವತಿಗೆ ವಂಚಿಸಿದ್ದವ ಅರೆಸ್ಟ್

    – ದೈಹಿಕ ಸಂಪರ್ಕ ಬೆಳೆಸಿ, ವರಸೆ ಬದಲಿಸಿ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಆಗಿದ್ದ ಆರೋಪಿ

    ಬೆಂಗಳೂರು: ಮದುವೆಯಾಗ್ತೀನಿ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಮತಾಂತರಕ್ಕೆ ಒಪ್ಪದ್ದಕ್ಕೆ ಹಿಂದೂ ಯುವತಿಗೆ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮೊಹಮ್ಮದ್ ಇಶಾಕ್ ಬಂಧಿತ ಆರೋಪಿಯಾಗಿದ್ದು, ಹಿಂದೂ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ವರಸೆ ಬದಲಿಸಿ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಆಗಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಮಹಾರಾಷ್ಟ್ರ ವೈದ್ಯೆ ಆತ್ಮಹತ್ಯೆ ಕೇಸ್ – 5 ತಿಂಗಳಿಂದ ಮಾನಸಿಕವಾಗಿ ಕಿರುಕುಳ ನೀಡಿದ್ದ ಟೆಕ್ಕಿ ಅರೆಸ್ಟ್

    ಆರೋಪಿ ವಿರುದ್ಧ ಸಂತ್ರಸ್ತ ಯುವತಿ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ದೂರು ದಾಖಲಿಸಿದ್ದರು. ಕೃತ್ಯ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಪೊಲೀಸರು ಪ್ರಕರಣವನ್ನು ವರ್ಗಾಯಿಸಿದ್ದರು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಯನ್ನು ಆರೋಪಿ ಇಶಾಕ್ ಪ್ರೀತಿಸಿ, ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಆರೋಪಿ ಹಾಗೂ ಆತನ ಭಾವ ಸೇರಿಕೊಂಡು ಯುವತಿಯನ್ನು ಮತಾಂತರ ಆಗುವಂತೆ ಒತ್ತಡ ಹೇರಿದ್ದರು. ಆದರೆ ಯುವತಿ ಒಪ್ಪದ್ದಕ್ಕೆ ವರಸೆ ಬದಲಿ ಮುಸ್ಲಿಂ ಯುವತಿಯ ಜೊತೆ ಎಂಗೇಜ್‌ಮೆಂಟ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಯುವತಿಯ ದೂರಿನಲ್ಲೇನಿದೆ?
    ಸಂತ್ರಸ್ತ ಯುವತಿ ಹಾಗೂ ಆರೋಪಿ ಇಶಾಕ್ 2024ರ ಅ.17ರಂದು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಅಲ್ಲಿಂದ ಸ್ನೇಹ ಬೆಳೆದು, ಪ್ರೀತಿ ಶುರುವಾಗಿತ್ತು. ಮೆಸೇಜ್‌ನಿಂದಲೇ ಯುವತಿಯನ್ನು ಮೋಡಿ ಮಾಡಿದ್ದ. ಬಳಿಕ ಅ.30ರಂದು ಥಣಿಸಂದ್ರದ ಮಾಲ್‌ನಲ್ಲಿ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಭೇಟಿ ವೇಳೆ ಮನೆಯವರ ಜೊತೆ ಮಾತನಾಡಿ ಮದುವೆ ಆಗ್ತೀನಿ ಅಂತ ನಂಬಿಸಿದ್ದ.

    ಭೇಟಿಯಾದ ದಿನವೇ ದಾಸರಹಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿ, ಯುವತಿಯನ್ನು ಕರೆದುಕೊಂಡು ಹೋಗಿದ್ದ. ಮದುವೆ ಆಗ್ತೀನಿ ನಂಬಿಸಿ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದ. ಅದಾದ ಸ್ವಲ್ಪ ದಿನಗಳ ನಂತರ ಆತನಿಗೆ ಬೇರೆ ಬೇರೆ ಹುಡುಗಿಯರ ಸಹವಾಸ ಇರೋದು ಯುವತಿಗೆ ತಿಳಿದು, ಆತನಿಗೆ ಪ್ರಶ್ನೆ ಮಾಡಿದ್ದಳು. ಇದೆಲ್ಲ ಆದ ನಂತರ 2025ರ ಸೆ.14ರಂದು ಆರೋಪಿ ಇಶಾಕ್ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ. ವಿಷಯ ತಿಳಿದ ಯುವತಿ ಆತನನ್ನು ಪ್ರಶ್ನೆ ಮಾಡಿದಾಗ, ನಿನ್ನ ದಾರಿ ನೀನು ನೋಡ್ಕೋ ಎಂದು ಹೇಳಿದ್ದ ಅಂತ ಯುವತಿನಲ್ಲಿ ದೂರಿನಲ್ಲಿ ಉಲ್ಲೇಖಿಸಿದ್ದರು.

    ಕಳೆದ ಮೂರು ತಿಂಗಳಿನಿಂದ ಇಶಾಕ್ ನನ್ನ ಅವೈಡ್ ಮಾಡ್ತಿದ್ದ. ಅದಾದ ಬಳಿಕ ಅವನಿಗೆ ಎಂಗೇಜ್‌ಮೆಂಟ್ ಆಗಿರೋ ವಿಷಯ ತಿಳಿಯಿತು. ನಾನು ಆತ್ಮಹತ್ಯೆಗೂ ಯತ್ನಿಸಿದೆ. ಆಗ ಆತನ ಪೋಷಕರು ಕರೆ ಮಾಡಿ, ಅವನನ್ನು ಮದುವೆಯಾಗಬೇಕು ಅಂದ್ರೆ ಮುಸ್ಲಿಂಗೆ ಮತಾಂತರ ಆಗಬೇಕು ಎಂದು ಕಂಡೀಷನ್ ಹಾಕಿದ್ದರು. ಅವನು ಯಾವಾಗಲೂ ಬೇರೆ ಯುವತಿಯರ ಜೊತೆ ಚಾಟ್ ಮಾಡ್ತಿದ್ದ. ಒಂದು ವರ್ಷದಿಂದ ನನ್ನ ಜೊತೆ ಸುತ್ತಾಡಿದ್ದ ಎಲ್ಲಾ ರೀತಿಯಲ್ಲಿ ಮೂವ್ ಆಗಿದ್ದು, ಈಗ ನನಗೆ ಮೋಸ ಮಾಡಿದ್ದಾನೆ ಎಂದು ಯುವತಿ ನೋವನ್ನು ಹೇಳಿಕೊಂಡಿದ್ದಳು.ಇದನ್ನೂ ಓದಿ: ಮಧ್ಯಪ್ರದೇಶ | ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ – ಆರೋಪಿ ಅರೆಸ್ಟ್‌

  • ಪ್ರೀತಿಸಿ, ಮದುವೆಯಾಗ್ತೀನಿ ಅಂತ ನಂಬಿಸಿ ಸೆಕ್ಸ್ – ಹಿಂದೂ ಹುಡುಗಿಗೆ ವಂಚಿಸಿ ಮುಸ್ಲಿಂ ಯುವತಿ ಜೊತೆ ಎಂಗೇಜ್

    ಪ್ರೀತಿಸಿ, ಮದುವೆಯಾಗ್ತೀನಿ ಅಂತ ನಂಬಿಸಿ ಸೆಕ್ಸ್ – ಹಿಂದೂ ಹುಡುಗಿಗೆ ವಂಚಿಸಿ ಮುಸ್ಲಿಂ ಯುವತಿ ಜೊತೆ ಎಂಗೇಜ್

    – ಮೊದಲ ಭೇಟಿಯಲ್ಲೇ ಮೋಡಿ ಮಾಡಿ ಲವ್ವರ್‌ನ ರೂಮ್‌ಗೆ ಕರೆದುಕೊಂಡು ಹೋಗಿದ್ದ ವಂಚಕ

    ಬೆಂಗಳೂರು: ಪ್ರೀತಿಸಿ, ಮದುವೆಯಾಗ್ತೀನಿ ಎಂದು ನಂಬಿಸಿ ಹಿಂದೂ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಆರೋಪಿಯನ್ನು ಮೊಹಮದ್ ಇಶಾಕ್ ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಸಂತ್ರಸ್ತ ಯುವತಿ ಹೆಚ್‌ಎಸ್‌ಆರ್ (HSR Layout) ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: ಬಿಗ್‌ ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

    ಸಂತ್ರಸ್ತ ಯುವತಿ ಹಾಗೂ ಆರೋಪಿ ಇಶಾಕ್ 2024ರ ಅ.17ರಂದು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಅಲ್ಲಿಂದ ಸ್ನೇಹ ಬೆಳೆದು, ಪ್ರೀತಿ ಶುರುವಾಗಿತ್ತು. ಮೆಸೇಜ್‌ನಿಂದಲೇ ಯುವತಿಯನ್ನು ಮೋಡಿ ಮಾಡಿದ್ದ. ಬಳಿಕ ಅ.30ರಂದು ಥಣಿಸಂದ್ರದ ಮಾಲ್‌ನಲ್ಲಿ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಭೇಟಿ ವೇಳೆ ಮನೆಯವರ ಜೊತೆ ಮಾತನಾಡಿ ಮದುವೆ ಆಗ್ತೀನಿ ಅಂತ ನಂಬಿಸಿದ್ದ.

    ಭೇಟಿಯಾದ ದಿನವೇ ದಾಸರಹಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿ, ಯುವತಿಯನ್ನು ಕರೆದುಕೊಂಡು ಹೋಗಿದ್ದ. ಮದುವೆ ಆಗ್ತೀನಿ ನಂಬಿಸಿ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದ. ಅದಾದ ಸ್ವಲ್ಪ ದಿನಗಳ ನಂತರ ಆತನಿಗೆ ಬೇರೆ ಬೇರೆ ಹುಡುಗಿಯರ ಸಹವಾಸ ಇರೋದು ಯುವತಿಗೆ ತಿಳಿದು, ಆತನಿಗೆ ಪ್ರಶ್ನೆ ಮಾಡಿದ್ದಳು. ಇದೆಲ್ಲ ಆದ ನಂತರ 2025ರ ಸೆ.14ರಂದು ಆರೋಪಿ ಇಶಾಕ್ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ. ವಿಷಯ ತಿಳಿದ ಯುವತಿ ಆತನನ್ನು ಪ್ರಶ್ನೆ ಮಾಡಿದಾಗ, ನಿನ್ನ ದಾರಿ ನೀನು ನೋಡ್ಕೋ ಎಂದು ಹೇಳಿದ್ದ ಅಂತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಕಳೆದ ಮೂರು ತಿಂಗಳಿನಿಂದ ಇಶಾಕ್ ನನ್ನ ಅವೈಡ್ ಮಾಡ್ತಿದ್ದ. ಅದಾದ ಬಳಿಕ ಅವನಿಗೆ ಎಂಗೇಜ್‌ಮೆಂಟ್ ಆಗಿರೋ ವಿಷಯ ತಿಳಿಯಿತು. ನಾನು ಆತ್ಮಹತ್ಯೆಗೂ ಯತ್ನಿಸಿದೆ. ಆಗ ಆತನ ಪೋಷಕರು ಕರೆ ಮಾಡಿ, ಅವನನ್ನು ಮದುವೆಯಾಗಬೇಕು ಅಂದ್ರೆ ಮುಸ್ಲಿಂಗೆ ಮತಾಂತರ ಆಗಬೇಕು ಎಂದು ಕಂಡೀಷನ್ ಹಾಕಿದ್ದರು. ಅವನು ಯಾವಾಗಲೂ ಬೇರೆ ಯುವತಿಯರ ಜೊತೆ ಚಾಟ್ ಮಾಡ್ತಿದ್ದ. ಒಂದು ವರ್ಷದಿಂದ ನನ್ನ ಜೊತೆ ಸುತ್ತಾಡಿದ್ದ ಎಲ್ಲಾ ರೀತಿಯಲ್ಲಿ ಮೂವ್ ಆಗಿದ್ದು, ಈಗ ನನಗೆ ಮೋಸ ಮಾಡಿದ್ದಾನೆ ಎಂದು ಯುವತಿ ನೋವು ತೋಡಿಕೊಂಡಿದ್ದಾಳೆ.

    ಸದ್ಯ ಈ ಸಂಬಂಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ವಾಪಸ್ – ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ

  • ನಾನು ಯಾವುದೇ ಲವ್‌ ಜಿಹಾದ್‌ ಮಾಡಿಲ್ಲ, ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದೇವೆ: ಯೂಟ್ಯೂಬರ್‌ ಮುಕಳೆಪ್ಪ

    ನಾನು ಯಾವುದೇ ಲವ್‌ ಜಿಹಾದ್‌ ಮಾಡಿಲ್ಲ, ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದೇವೆ: ಯೂಟ್ಯೂಬರ್‌ ಮುಕಳೆಪ್ಪ

    – ನನ್ನ ಪತ್ನಿ ಹಿಂದೂ ಧರ್ಮವನ್ನೇ ಪಾಲಿಸ್ತಾಳೆ, ನಾನು ಕೂಡ ಕನ್ನಡ ಹಿಂದೂನೇ ಎಂದ ಯೂಟ್ಯೂಬರ್‌

    ಧಾರವಾಡ: ನಾನು ಯಾವುದೇ ಲವ್‌ ಜಿಹಾದ್‌ ಮಾಡಿಲ್ಲ. ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದೇವೆ ಎಂದು ಲವ್‌ ಜಿಹಾದ್‌ ಆರೋಪವನ್ನು ಯೂಟ್ಯೂಬರ್‌ ಮುಕಳೆಪ್ಪ ತಳ್ಳಿಹಾಕಿದ್ದಾರೆ.

    ಅನ್ಯ ಧರ್ಮದ ಯುವತಿ ಜೊತೆ ಮದುವೆ ಪ್ರಕರಣ ಆರೋಪ ಸಂಬಂಧ ಮೊದಲ ಬಾರಿಗೆ ತನ್ನ ಹೇಳಿಕೆ ಬಿಡುಗಡೆ ಮಾಡಿದ ಧಾರವಾಡದ ಕಾಮಿಡಿ ಯೂಟ್ಯೂಬರ್‌ ಮುಕಳೆಪ್ಪ, ನನ್ನ ಪತ್ನಿ ಮತಾಂತರ ಆಗಿಲ್ಲ. ಆಕೆ ಹಿಂದೂ ಧರ್ಮವನ್ನೇ ಪಾಲಿಸುತ್ತಾಳೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಕಳೆಪ್ಪ ಜೊತೆ ಆತನ ಪತ್ನಿ ಕೂಡ ಹೇಳಿಕೆ ನೀಡಿದ್ದಾರೆ.

    ವೀಡಿಯೋದಲ್ಲಿ ಮೊದಲು ಮಾತನಾಡಿದ ಮುಕಳೆಪ್ಪ, ಎಲ್ಲರೂ ಮುಕಳೆಪ್ಪ ಲವ್ ಜಿಹಾದ್ ಎಂದು ಹೇಳುತ್ತಿದ್ದಾರೆ. ಆದರೆ,‌ ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ. ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದೇವೆ. ನಾವು ಇಬ್ಬರೂ ಮತಾಂತರಗೊಂಡಿಲ್ಲ. ನನ್ನ ಪತ್ನಿ ಯಾವ ಧರ್ಮದಲ್ಲಿ ಹುಟ್ಟಿದ್ದಾಳೆ, ಅದೇ ಧರ್ಮ ಪಾಲಿಸುತ್ತೇನೆ. ನಾನು ಹುಟ್ಟಿದ ಧರ್ಮವನ್ನೇ ನಾನು ಪಾಲಿಸುತ್ತೇನೆ. ಯಾವುದೇ ಮತಾಂತರ ಮಾಡಲ್ಲ. ಕಲಾವಿದರಲ್ಲಿ ಯಾವುದೇ ಜಾತಿ-ಧರ್ಮ ತರಬೇಡಿ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂದರೆ ನಾನು‌ ಕೂಡ ಕನ್ನಡ ಹಿಂದೂನೇ. ನಮಗೆ ಯಾವುದೇ ಥರದ ಕಿರಿಕಿರಿ ಮಾಡೋದು ಮತ್ತು ನಮ್ಮ ಬಗ್ಗೆ ವೀಡಿಯೋ ಮಾಡಿ‌ ಹಾಕೋದು ಮಾಡಬೇಡಿ. ನಮ್ಮನ್ನ ಬದುಕಲು ಬಿಡಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ.

    ವೀಡಿಯೋ ಬಿಡುಗಡೆ ಮಾಡಿರುವ ಮುಕಳೆಪ್ಪ ಮತ್ತು ಆತನ ಪತ್ಮಿ ಗಾಯತ್ರಿ, ನಮ್ಮನ್ನ ಬದುಕಲು ಬಿಡಿ ಎಂದು ಕೇಳಿಕೊಂಡಿದ್ದಾರೆ. ಅದೇ ವೇಳೆ ಮುಕಳೆಪ್ಪ ಪತ್ನಿ ಕೂಡ ಮಾತನಾಡಿ, ನಾನು ಯಾವತ್ತೂ ಹಿಂದೂ ಆಗಿಯೇ ಇದ್ದೇನೆ. ನನ್ನ ಪತಿ ನನ್ನನ್ನು ಮಾತಾಂತರ ಮಾಡಿದ್ದಾರೆ ಎನ್ನುವುದೆಲ್ಲ ಸುಳ್ಳು. ಇದನ್ನ‌ ಯಾರೂ ನಂಬಬೇಡಿ. ಮುಕಳೆಪ್ಪನನ್ನ ಇಷ್ಟು ದಿನ ಹೇಗೆ ನೋಡಿದ್ದೀರೋ ಅದೇ ರೀತಿ ನೋಡ್ರಿ. ಕೈ‌ಮುಗಿದು ಕೇಳ್ತೇನೆ. ನಮ್ಮನ್ನ ಬದುಕಲು ಬಿಡಿ ಎಂದ ಗಾಯತ್ರಿ ಹೇಳಿದ್ದಾರೆ.

    ನಾವಿಬ್ಬರೂ ಒಪ್ಪಿ ಮದುವೆಯಾಗಿದ್ದೇವೆ. ಯಾರು ಕೂಡ ಮೈಂಡ್ ವಾಶ್ ಮಾಡಿಲ್ಲ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸ್ವತಃ ನಾವೇ ಗಂಡ ಹೆಂಡತಿ ಕುಳಿತು ಹೇಳುತಿದ್ದೇವೆ. ಮೂರು ವರ್ಷ ಪ್ರೀತಿಸಿ ಮದುವೆಯಾಗಿದ್ದೇವೆ ಎಂದು ತಿಳಿಸಿದ್ದಾರೆ.

  • ಕಲಬುರಗಿಯಲ್ಲಿ ಬಿಎಸ್ಸಿ ಪದವೀಧರೆ ನಾಪತ್ತೆ – ಲವ್ ಜಿಹಾದ್ ಆರೋಪ, ಕೇಸ್‌ ದಾಖಲು

    ಕಲಬುರಗಿಯಲ್ಲಿ ಬಿಎಸ್ಸಿ ಪದವೀಧರೆ ನಾಪತ್ತೆ – ಲವ್ ಜಿಹಾದ್ ಆರೋಪ, ಕೇಸ್‌ ದಾಖಲು

    ಕಲಬುರಗಿ: ಕಳೆದ ಜು.30 ರಂದು ಕಲಬುರಗಿಯ (Kalaburagi) ಜೈನ ಸಮುದಾಯದ ಬಿಎಸ್ಸಿ ಪದವೀಧರೆ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಹಿಂದೂ ಸಂಘಟನೆಗಳಿಂದ (Hindu organizations) ವ್ಯಾಪಕ ಖಂಡನೆ ವ್ಯಕ್ತವಾಗಿದೆ.

    ಗೊಬ್ಬುರ ಗ್ರಾಮದ ಮಹಾವೀರ ಜೈನ್ ಎಂಬುವರ ಪುತ್ರಿ ನಾಪತ್ತೆಯಾಗಿದ್ದಾರೆ. ಈಕೆ ನಗರದ ಖಾಸಗಿ ಕಾಲೇಜವೊಂದರಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಜು.30ರಂದು ಬಿಎಸ್ಸಿ ಬರೆಯಲು ಬರೆಯೋದಕ್ಕಾಗಿ ಕಾಲೇಜಿಗೆ ಬಂದಿದ್ದ ಯುವತಿ ಮನೆಗೆ ಹಿಂದಿರುಗದೇ ನಾಪತ್ತೆಯಾಗಿದ್ದಾಳೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ಇಂದು ಕೊನೆಯ ಪಾಯಿಂಟ್‌ನಲ್ಲಿ ಶೋಧ

    ನಾಪತ್ತೆಯಾಗಿರುವ ಯುವತಿ ಗೊಬ್ಬರ ಗ್ರಾಮದ ಮಶಾಕ್ ಎಂಬಾತನೊಂದಿಗೆ ಮೆಸೇಜ್ ಮಾಡ್ತಿದ್ದಳು ಎನ್ನಲಾಗಿದೆ. ಅನ್ಯಕೋಮಿನ ಯುವಕನೊಂದಿಗೆ ಮೆಸೇಜ್ ಮಾಡ್ತಿದ್ದಕ್ಕೆ ಮಗಳಿಗೆ ಬೈದು ಕಾಲೇಜು ಬಿಡಿಸಿ, ಪರೀಕ್ಷೆ ಬರೆಯೋದಕ್ಕೆ ಮಾತ್ರ ಪೋಷಕರು ಕಳುಹಿಸಿದ್ದರು. ಈಗ ಯುವತಿ ಅದೇ ಗ್ರಾಮದ ಅನ್ಯಕೋಮಿನ ಯುವಕನ ಜೊತೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಲವ್ ಜಿಹಾದ್ ಆರೋಪ ಕೇಳಿ ಬಂದಿದೆ.

    ಯುವತಿ ನಾಪತ್ತೆಯಾದ ಕುರಿತು ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 24 ಗಂಟೆಗಳಲ್ಲಿ ಭಾರತದ ಎಲ್ಲ ಆಮದುಗಳ ಮೇಲೆ ಸುಂಕ ಗಣನೀಯ ಏರಿಕೆ – ಟ್ರಂಪ್‌ ಮತ್ತೆ ಬೆದರಿಕೆ

  • ಗದಗ | ವಿಚಿತ್ರ ಲವ್‌ಜಿಹಾದ್ ಪ್ರಕರಣ – ಬಲವಂತವಾಗಿ ಹಿಂದೂ ಯುವಕನ ಮತಾಂತರ ಮಾಡಿಸಿರೋ ಆರೋಪ

    ಗದಗ | ವಿಚಿತ್ರ ಲವ್‌ಜಿಹಾದ್ ಪ್ರಕರಣ – ಬಲವಂತವಾಗಿ ಹಿಂದೂ ಯುವಕನ ಮತಾಂತರ ಮಾಡಿಸಿರೋ ಆರೋಪ

    ಗದಗ: ಪ್ರೀತಿಸಿ ಮದುವೆಯಾದ ವಿವಾಹಿತೆ ಹಿಂದೂ ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿರೋ ಆರೋಪ ಗದಗ (Gadag) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಗದಗ ನಗರದ ಗಾಂಧಿನಗರ ನಿವಾಸಿ ವಿಶಾಲಕುಮಾರ್ ಗೋಕಾವಿ ಹಾಗೂ ವಿವಾಹಿತೆ ತಹಸೀನಾ 3 ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಅಲ್ಲದೇ ಈ ಜೋಡಿಯು 2024ರ ನವೆಂಬರ್ 24ರಲ್ಲಿ ಗದಗ ರಿಜಿಸ್ಟರ್ ಕಚೇರಿನಲ್ಲಿ ಮದುವೆಯಾಗಿದ್ದರು. ರಿಜಿಸ್ಟರ್ ಮ್ಯಾರೇಜ್ ಬಳಿಕ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳಲು ತಹಸೀನಾ ಒತ್ತಾಯಿಸಿದ್ದಳು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಆನ್‌ಲೈನ್‌ ಜೂಜಿಗೆ ದಾಸನಾಗಿದ್ದ ಹೆಡ್ ಕಾನ್‌ಸ್ಟೆಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ

    ವಿಶಾಲಕುಮಾರ್, ಎರಡೂ ಕುಟುಂಬವು ಒಟ್ಟಿಗೆ ಚೆನ್ನಾಗಿರುವ ಉದ್ದೇಶದಿಂದ ಮದುವೆಗೆ ಒಪ್ಪಿ ಮುಸ್ಲಿಂ ಸಂಪ್ರದಾಯದಂತೆಯೂ ಮದುವೆವಾಗಿದ್ದ. ಈ ವೇಳೆ ಯುವತಿ ಮನೆಯವರು ನೀನು ಹಿಂದೂ ಧರ್ಮ ಬಿಟ್ಟು, ಮುಸ್ಲಿಂ ಧರ್ಮ ಸ್ವೀಕರಿಸು ಎಂದು ವಿಶಾಲಕುಮಾರ್‌ಗೆ ಒತ್ತಾಯ ಮಾಡಿದ್ದರು. 2025 ಏಪ್ರಿಲ್ 25ರಂದು ಜಮಾತ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮತ್ತೆ ಮದುವೆ ಮಾಡಿದ್ದರು. ಅಲ್ಲದೇ ಮದುವೆಯಲ್ಲಿ ವಿಶಾಲಕುಮಾರ್‌ಗೆ ಅರಿವಿಲ್ಲದಂತೆ ಆತನ ಹೆಸರು ಬದಲಾವಣೆ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: 50% ಒಟ್ಟಾರೆ ಮೀಸಲಾತಿ ಮಿತಿ ತೆಗೆದು, 75%ಗೆ ಹೆಚ್ಚಿಸಬೇಕು: ಸಿದ್ದರಾಮಯ್ಯ ಪ್ರಸ್ತಾಪ

    ಬಳಿಕ ತಹಸೀನ್ ಹಾಗೂ ಆಕೆ ತಾಯಿ ಬೇಗಂ ಬಾನು ಜಮಾತ್‌ಗೆ ಹೋಗುವಂತೆ ಬಲವಂತ ಮಾಡಿದ್ದರು. ಟೋಪಿ, ಜುಬ್ಬಾ ಧರಿಸು, ಹಣೆ ಮೇಲಿನ ಕುಂಕುಮ ಅಳಿಸು, ಕಿವಿ ಹಾಕಿರುವ ರಿಂಗ್ ತೆಗೆ, ಗಡ್ಡ ಬಿಡು, ನಿತ್ಯ ನಮಾಜ್ ಮಾಡುವಂತೆ ಒತ್ತಾಯ ಮಾಡುತ್ತಿದ್ದರು. ಈ ಮಧ್ಯ ವಿಶಾಲಕುಮಾರ್, ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರ ತಿಳಿದ ಯುವಕನ ಕುಟುಂಬದಿಂದ ಹಿಂದೂ ಸಂಪ್ರದಾಯದಂತೆ ಮದುವೆಗೆ ಸಿದ್ಧತೆ ನಡೆಸಿದ್ದರು. ಜೂನ್ 5ರಂದು ಮದುವೆ ನಿಗದಿಯಾಗಿತ್ತು. ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ದರ್ಶನ್ ಫೋಟೋ ರಿವೀಲ್

    ಆರಂಭದಲ್ಲಿ ಮುದುವೆಗೆ ಒಪ್ಪಿಗೆ ನೀಡಿದ್ದ ತಹಸೀನಾ, ಬಳಿಕ ಕುಟುಂಬಸ್ಥರ ಹಾಗೂ ಮುಸ್ಲಿಂ ಮುಖಂಡರ ಒತ್ತಾಯಕ್ಕೆ ಮಣಿದು ನಿರಾಕರಣೆ ಮಾಡಿದ್ದಾಳೆ. ಈಗ ವರಸೆ ಬದಲಿಸಿದ ಯುವತಿ ಕುಟುಂಬಸ್ಥರು, ಮುಸ್ಲಿಂ ಧರ್ಮಕ್ಕೆ ಮತಾಂತರ ಆಗದಿದ್ದರೆ, ಮುಂದೆ ಪರಿಣಾಮ ಬೇರೆಯಾಗುತ್ತೆ. ಅಲ್ಲದೇ ರೇಪ್ ಕೇಸ್ ಹಾಕ್ತೇನೆ. ಕೊಲೆ ಮಾಡಿಸ್ತಿನಿ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ವಿಶಾಲಕುಮಾರ್ ಆರೋಪಿಸಿದ್ದಾನೆ.

    ಈ ಯುವಕನ ಹೋರಾಟಕ್ಕೆ ಶ್ರೀರಾಮ ಸೇನೆ ಸಾಥ್ ನೀಡಿದ್ದು, ಇದು ಲವ್ ಜಿಹಾದ್ (Love Jihad). ಹೀಗಾಗಿ ಯುವತಿ ಹಾಗೂ ಅವರ ಕುಟುಂಬದ ಮೇಲೆ ಕ್ರಮ ಜರುಗಿಸುವಂತೆ ಒತ್ತಾಸಿದ್ದಾರೆ.

  • ಮೈಸೂರು | ಲವ್ ಜಿಹಾದ್‌ಗೆ ನಕಲಿ ವಿಳಾಸ ಬಳಕೆ – ಹಿಂದೂ ಯುವತಿ ಮದ್ವೆಗೆ ಅನ್ಯಕೋಮಿನ ಯುವಕ ಯತ್ನ

    ಮೈಸೂರು | ಲವ್ ಜಿಹಾದ್‌ಗೆ ನಕಲಿ ವಿಳಾಸ ಬಳಕೆ – ಹಿಂದೂ ಯುವತಿ ಮದ್ವೆಗೆ ಅನ್ಯಕೋಮಿನ ಯುವಕ ಯತ್ನ

    ಮೈಸೂರು: ಯಾರದ್ದೋ ಮನೆಯ ವಿಳಾಸವನ್ನು ತನ್ನ ಮನೆಯ ವಿಳಾಸ ಅಂತ ಸಬ್‌ ರಿಜಿಸ್ಟ್ರಾರ್ ಕಚೇರಿಗೆ ಕೊಟ್ಟು ಹಿಂದೂ ಯುವತಿಯನ್ನು ಮದುವೆಯಾಗಲು ಮುಸ್ಲಿಂ ಯುವಕ ಯತ್ನಿಸಿರುವ ಘಟನೆ ಮೈಸೂರಿನ ಚಾಮರಾಜ ಕ್ಷೇತ್ರದ ಮಡಿವಾಳ ಬೀದಿಯಲ್ಲಿ ಬೆಳಕಿಗೆ ಬಂದಿದೆ.

    ಸಲ್ಮಾನ್ ಎಂಬ ಯುವಕ ಮೈಸೂರಿನ ಮಡಿವಾಳ ಬೀದಿಯ ಮನೆ ನಂ. 130 ರಲ್ಲಿ ವಾಸವಿದ್ದೇನೆ ಎಂದು ಸಬ್ ರಿಜಿಸ್ಟ್ರಾರ್‌ಗೆ ಸಲ್ಲಿಕೆ ಮಾಡಿದ್ದಾನೆ.  ಇದನ್ನೂ ಓದಿ: ನಟಿಗೆ 14.2 ಕೆಜಿ ಚಿನ್ನ ದುಬೈನಲ್ಲಿ ಸಿಕ್ಕಿದ್ದು ಹೇಗೆ? – ರನ್ಯಾಗೆ DRIಯಿಂದ ಡ್ರಿಲ್‌

    ಹಿಂದೂ ಯುವತಿಯ ಜೊತೆ ಮದುವೆಯಾಗಲು ಸಬ್ ರಿಜಿಸ್ಟ್ರಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದಾನೆ. ಆದರೆ ಅಸಲಿಗೆ ಸಲ್ಮಾನ್ ಈ ಮನೆಯಲ್ಲಿ ಬಾಡಿಗೆ ಇಲ್ಲ. ಅಲ್ಲದೇ ಈ ಯುವಕ ಯಾರು ಅಂತನೂ ಮನೆಯ ಮಾಲೀಕನಿಗೆ ಗೊತ್ತಿಲ್ಲ. ಈ ವಿಚಾರ ಗೊತ್ತಾಗಿ ಸಬ್ ರಿಜಿಸ್ಟ್ರಾರ್‌ಗೆ ಮನೆಯ ಮಾಲೀಕ ರವೀಂದ್ರ ದೂರು ನೀಡಿದ್ದಾರೆ. ಇದನ್ನೂ ಓದಿ: ಮದ್ವೆ ಆದಾಗ ತೆಳ್ಳಗಿದ್ದೆ, ಈಗ ಡುಮ್ಮಿ – ಖಾರದಪುಡಿ ಎರಚಿ ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ!

    ಸಲ್ಮಾನ್ ಯಾರು ಅಂತಲೇ ಗೊತ್ತಿಲ್ಲ. ನಮ್ಮ ಮನೆಯ ವಿಳಾಸವನ್ನ ದುರುಪಯೋಗ ಪಡಿಸಿಕೊಂಡಿದ್ದಾನೆ. ನಾನು ಯಾವ ಕುಟುಂಬಕ್ಕೂ ಮನೆ ಬಾಡಿಗೆ ಕೊಟ್ಟಿಲ್ಲ. ಒಂದು ಪಕ್ಷದ ಕಚೇರಿಗೆ ಮಾತ್ರ ಬಾಡಿಗೆ ಕೊಟ್ಟಿದ್ದೇನೆ. ನನಗೆ ನನ್ನ ಮನೆಯ ವಿಳಾಸ ಬಳಸಿರುವ ಸಲ್ಮಾನ್‌ ಯಾರು ಎಂಬುದೇ ಗೊತ್ತಿಲ್ಲ. ನನಗೆ ವಾಟ್ಸಪ್‌ ಮೂಲಕ ಮಾಹಿತಿ ಬಂತು. ಕೂಡಲೇ ನಾನು ಸಬ್ ರಿಜಿಸ್ಟ್ರಾರ್‌ಗೆ ದೂರು ಕೊಟ್ಟಿದ್ದೇನೆ ಅಂತ ಮನೆಯ ಮಾಲೀಕ ಎಂ.ರವೀಂದ್ರ ಹೇಳಿದ್ದಾರೆ.

    ಅಲ್ಲದೇ ಈ ವಿವಾಹ ನೊಂದಣಿಯನ್ನ ವಜಾಮಾಡಿ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.  ಇದನ್ನೂ ಓದಿ: ರಾಯಚೂರಿನಲ್ಲಿ `ಮಹಾನಟಿʼ – ಪುನೀತ್‌ ನನ್ನ ನೆಚ್ಚಿನ ನಟ ಅಂದ್ರು ಕೀರ್ತಿ ಸುರೇಶ್‌ 

  • ಯುಪಿ ಆಯ್ತು.. ಲವ್ ಜಿಹಾದ್, ಬಲವಂತದ ಮತಾಂತರದ ವಿರುದ್ಧ ಸಮರ ಸಾರಿದ ಮಹಾರಾಷ್ಟ್ರ

    ಯುಪಿ ಆಯ್ತು.. ಲವ್ ಜಿಹಾದ್, ಬಲವಂತದ ಮತಾಂತರದ ವಿರುದ್ಧ ಸಮರ ಸಾರಿದ ಮಹಾರಾಷ್ಟ್ರ

    – ಲವ್‌ ಜಿಹಾದ್‌ ವಿರುದ್ಧ ಕಾನೂನು ರೂಪಿಸಲು ಸಮಿತಿ ರಚಿಸಿದ ‘ಮಹಾ’ ಸರ್ಕಾರ

    ಮುಂಬೈ: ಲವ್ ಜಿಹಾದ್ (Love Jihad) ಮತ್ತು ಬಲವಂತದ ಮತಾಂತರದ ವಿರುದ್ಧ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ (Maharashtra) ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ಸರ್ಕಾರ ಏಳು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಲವ್ ಜಿಹಾದ್ ಮತ್ತು ಬಲವಂತದ ಮತಾಂತರವನ್ನು ನಿಲ್ಲಿಸಲು ಕಾನೂನು ಕ್ರಮಗಳನ್ನು ಸೂಚಿಸುತ್ತದೆ.

    ಮಹಾರಾಷ್ಟ್ರದ ಡಿಜಿಪಿ ಅವರನ್ನು ಈ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇತರ ಹಲವು ರಾಜ್ಯಗಳಲ್ಲಿಯೂ ಸಹ ರಾಜ್ಯ ಸರ್ಕಾರಗಳು ಲವ್ ಜಿಹಾದ್ ಮತ್ತು ಬಲವಂತದ ಮತಾಂತರವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಂಡಿವೆ. ಈಗ ಮಹಾರಾಷ್ಟ್ರ ಕೂಡ ಈ ಸರಣಿಗೆ ಸೇರಿದೆ.

    ಮಹಾರಾಷ್ಟ್ರ ಸರ್ಕಾರ ರಚಿಸಿದ ಸಮಿತಿಯಲ್ಲಿ, ಮಹಾರಾಷ್ಟ್ರದ ಡಿಜಿಪಿ ಜೊತೆಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆ, ಕಾನೂನು ಮತ್ತು ನ್ಯಾಯಾಂಗ ಇಲಾಖೆ, ಸಾಮಾಜಿಕ ನ್ಯಾಯ ಇಲಾಖೆ ಮತ್ತು ವಿಶೇಷ ಸಹಾಯ ಇಲಾಖೆಯ ಕಾರ್ಯದರ್ಶಿಗಳು ಮತ್ತು ಗೃಹ ಇಲಾಖೆಯ ಉಪ ಕಾರ್ಯದರ್ಶಿ ಕೂಡ ಇದ್ದಾರೆ.

    ಈ ಸಂಬಂಧ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಅಧ್ಯಯನದ ನಂತರ, ಲವ್ ಜಿಹಾದ್ ಮತ್ತು ಬಲವಂತದ ಮತಾಂತರದ ಘಟನೆಗಳನ್ನು ಎದುರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಸಮಿತಿಯು ತಿಳಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಮಿತಿಯು ಇತರ ರಾಜ್ಯಗಳಲ್ಲಿ ಇದಕ್ಕೆ ಸಂಬಂಧಿಸಿದ ಕಾನೂನುಗಳನ್ನು ಸಹ ಅಧ್ಯಯನ ಮಾಡುತ್ತದೆ.

    ಲವ್ ಜಿಹಾದ್ ಎಂಬ ಪದವನ್ನು ಬಲಪಂಥೀಯ ಕಾರ್ಯಕರ್ತರು ಮತ್ತು ಸಂಘಟನೆಗಳು ಹೆಚ್ಚಾಗಿ ಬಳಸುತ್ತಾರೆ. ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಮದುವೆಯಾಗಿ ಇಸ್ಲಾಂಗೆ ಮತಾಂತರಿಸಲು ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸುತ್ತಾರೆ.

  • ನಮ್ಮ ಮಕ್ಕಳು ಲವ್‌ ಜಿಹಾದ್‌ಗೆ ತುತ್ತಾಗಿದ್ದಾರೆ, ಸಹಾಯ ಮಾಡಿ: ಶ್ರೀರಾಮಸೇನೆಯ ಸಹಾಯ ಕೇಳಿದ ಪೊಲೀಸ್‌ ಅಧಿಕಾರಿಗಳು

    ನಮ್ಮ ಮಕ್ಕಳು ಲವ್‌ ಜಿಹಾದ್‌ಗೆ ತುತ್ತಾಗಿದ್ದಾರೆ, ಸಹಾಯ ಮಾಡಿ: ಶ್ರೀರಾಮಸೇನೆಯ ಸಹಾಯ ಕೇಳಿದ ಪೊಲೀಸ್‌ ಅಧಿಕಾರಿಗಳು

    ಬೆಳಗಾವಿ: ಕರ್ನಾಟಕದಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ಮಕ್ಕಳೇ ಲವ್ ಜಿಹಾದ್‌ಗೆ ತುತ್ತಾಗಿದ್ದಾರೆ. ಆ ಪೊಲೀಸ್ ಅಧಿಕಾರಿಗಳು  ನಮ್ಮ ಬಳಿ ಬಳಿ ಸಹಾಯ ಕೇಳಿದ್ದಾರೆ ಎಂದು ಶ್ರೀರಾಮ ಸೇನೆಯ (Sri Rama Sene) ರಾಜ್ಯಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ (Pramod Muthalik) ಹೇಳಿದ್ದಾರೆ.

    ಪ್ರೇಮಿಗಳ ದಿನದಂದು (Valentine’s Day) ಲವ್ ಜಿಹಾದ್ (Love Jihad) ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಲವ್ ಜಿಹಾದ್ ತಡೆಯಲು ಈಗಾಗಲೇ ಸಹಾಯವಾಣಿ ತೆರೆದಿದ್ದೇವೆ. ಲವ್ ಜಿಹಾದ್ ವಿಚಾರದಲ್ಲಿ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪ್ರೇಮಿಗಳ ದಿನದಂದು ಯುವತಿಯರು‌ ತ್ರಿಶೂಲ‌ ಹಾಗೂ ಖಾರದ ಪುಡಿ ಇಟ್ಟುಕೊಂಡು ಓಡಾಡಬೇಕು. ಹಿಂದೂ ಸಮಾಜದ ಹಿತದೃಷ್ಟಿಯಿಂದ ತ್ರಿಶೂಲ ಧಿಕ್ಷೆ ನೀಡಲಾಗಿದೆ. ಲವ್ ಜಿಹಾದ್ ವಿರುದ್ಧ ಶ್ರೀರಾಮ ಸೇನೆ ಹೋರಾಟ ಮಾಡುತ್ತಿದೆ ಎಂದರು. ಇದನ್ನೂ ಓದಿ: ಗೃಹಿಣಿ ಅನುಮಾನಾಸ್ಪದ ಸಾವು – ಪತಿ ವಿರುದ್ಧ ಕೊಲೆ ಆರೋಪ

    ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಕೊಲೆ ಮಾಡಲಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಗಂಭೀರ ಕಾನೂನುಗಳಿಲ್ಲದೆ ಮಹಿಳೆಯರು ಇಂದು ಪರಿಪತಪಿಸುವಂತಾಗಿದೆ. ನ್ಯಾಯಾಲಯದಲ್ಲಿ ತ್ವರಿತವಾಗಿ ಶಿಕ್ಷೆ ಆಗಬೇಕಿದೆ ಎಂದು ಆಗ್ರಹಿಸಿದರು.

    ಈಗಾಗಲೇ ನಮ್ಮ ಸಹಾಯವಾಣಿಯ ಮೂಲಕ‌ 40% ರಷ್ಟು ಲವ್ ಜಿಹಾದ್ ತಡೆಯಲಾಗಿದೆ. 100 ಕಡೆಗಳಲ್ಲಿ ತ್ರಿಶೂಲ‌ ಧಿಕ್ಷಾ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದರು.

  • Love Jihad| ನಾಪತ್ತೆಯಾಗಿದ್ದ ಯುವತಿ ಅನ್ಯಕೋಮಿನ ಯುವಕನೊಂದಿಗೆ ಪತ್ತೆ

    Love Jihad| ನಾಪತ್ತೆಯಾಗಿದ್ದ ಯುವತಿ ಅನ್ಯಕೋಮಿನ ಯುವಕನೊಂದಿಗೆ ಪತ್ತೆ

    ಮಂಗಳೂರು: ನಾಪತ್ತೆಯಾಗಿದ್ದ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನ ಜೊತೆ ಪತ್ತೆಯಾಗಿದ್ದು ಲವ್ ಜಿಹಾದ್ (Love Jihad) ಆರೋಪ ಕೇಳಿಬಂದಿದೆ.

    ನಾಪತ್ತೆಯಾಗಿದ್ದ ಮುಸ್ಲಿಂ ಯುವಕ ಮಹಮ್ಮದ್ ಅಶ್ಫಾಕ್ ಹಾಗೂ ಹಿಂದೂ ಯುವತಿಯನ್ನು ಪಾಂಡೇಶ್ವರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈಗಾಗಲೇ ಅಶ್ಫಾಕ್‍ಗೆ ಮದುವೆಯಾಗಿದೆ. ಅಲ್ಲದೇ ಆತನ ವಿರುದ್ಧ ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ 8 ಕ್ರಿಮಿನಲ್ ಪ್ರಕರಣಗಳಿವೆ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: Valmiki Scam | ಮಾಲ್‌, ಪಾರ್ಕ್‌, ಜಂಕ್ಷನ್‌ನಲ್ಲಿ ಕೋಟಿ ಕೋಟಿ ಸಂದಾಯ

    ಮಗಳು ನಾಪತ್ತೆಯಾಗಿದ್ದ ಬಗ್ಗೆ ಯುವತಿಯ ತಂದೆ ಮಂಗಳೂರು ಪೊಲೀಸ್ ಕಮೀಷನರ್‌ಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕಾಲೇಜಿನಲ್ಲಿದ್ದ ಯುವತಿಯನ್ನು ಅಶ್ಫಾಕ್ ಅಪಹರಣ ಮಾಡಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವನ್ನು ಲವ್ ಜಿಹಾದ್ ಎಂದು ವಿಎಚ್‍ಪಿ ಆರೋಪಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದೆ. ಇದನ್ನೂ ಓದಿ: ಮುಂಬೈ ಹಿಟ್&ರನ್ ಕೇಸ್ – ಆರೋಪಿಗೆ ಮದ್ಯ ನೀಡಿದ್ದ ಪಬ್ ನೆಲಸಮ

  • ವಿವಾಹಿತ ಮಹಿಳೆಯ ಖಾಸಗಿ ಫೋಟೋ ವೈರಲ್ ಬೆದರಿಕೆ ಹಾಕಿ ಮತಾಂತರಕ್ಕೆ ಯತ್ನ – ಲವ್ ಜಿಹಾದ್ ಆರೋಪ, ಇಬ್ಬರು ಅರೆಸ್ಟ್

    ವಿವಾಹಿತ ಮಹಿಳೆಯ ಖಾಸಗಿ ಫೋಟೋ ವೈರಲ್ ಬೆದರಿಕೆ ಹಾಕಿ ಮತಾಂತರಕ್ಕೆ ಯತ್ನ – ಲವ್ ಜಿಹಾದ್ ಆರೋಪ, ಇಬ್ಬರು ಅರೆಸ್ಟ್

    – ನೀನು ಕೀಳು ಜಾತಿಯಲ್ಲೇ ಇರುತ್ತಿ, ನಮ್ಮ ಜಾತಿಗೆ ಮತಾಂತರವಾಗು
    – ಕುಂಕುಮ ಹಚ್ಚಬೇಡ, 5 ಬಾರಿ ನಮಾಜ್ ಮಾಡು

    ಬೆಳಗಾವಿ: ವಿವಾಹಿತ ಮಹಿಳೆಯೊಬ್ಬಳ ಖಾಸಗಿ ಫೋಟೋ ಇಟ್ಟುಕೊಂಡು ಮತಾಂತರಕ್ಕೆ ಪೀಡಿಸಿ, ಲವ್ ಜಿಹಾದ್ ಜಾಲಕ್ಕೆ ತಳ್ಳಲು ಯತ್ನಿಸಲಾಗಿದೆ ಎಂಬ ಆರೋಪ ಸವದತ್ತಿಯ (Saundatti) ಮುನವಳ್ಳಿಯಲ್ಲಿ ಕೇಳಿ ಬಂದಿದೆ.

    ಮುನವಳ್ಳಿ ನಗರದಲ್ಲಿ ಸಂತ್ರಸ್ತ ಮಹಿಳೆಯ ಪತಿ ಕಿರಾಣಿ ಅಂಗಡಿ ಹೊಂದಿದ್ದರು. ಪತಿ ಇಲ್ಲದೇ ಇರುವಾಗ ಆರೀಫ್ ಬೇಪಾರಿ ಎಂಬಾತ ಅಂಡಿಗೆ ಬಂದು ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಮೊಬೈಲ್ ನಂಬರ್ ಪಡೆದು ಇಲ್ಲ ಸಲ್ಲದ ಆಮೀಷ ಒಡ್ಡಿ ಮಹಿಳೆಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ, ಬೆಳಗಾವಿಗೆ ಕರೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೀಫ್‍ಗೆ ಐವರು ಸಾಥ್ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

    ಎಫ್ಐಆರ್ ಪ್ರತಿ

    ಇಷ್ಟೇ ಅಲ್ಲದೇ ಲೈಂಗಿಕ ದೌರ್ಜನ್ಯ ಎಸಗುವ ಫೋಟೋಗಳನ್ನು ತೆಗೆದುಕೊಂಡು ದುಷ್ಕರ್ಮಿಗಳು ಮತಾಂತರಕ್ಕೆ ಪೀಡಿಸಿದ್ದಾರೆ. ಮತಾಂತರಗೊಳ್ಳದೇ ಇದ್ದರೆ ಖಾಸಗಿ ಫೋಟೋಗಳನ್ನು ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ. ಹಣೆಗೆ ಕುಂಕುಮ ಹಚ್ಚುವುದನ್ನು ನಿಲ್ಲಿಸಬೇಕು, ಹಿಂದೂ ಸಂಪ್ರದಾಯ ಬಿಡಬೇಕು. ನಿತ್ಯ ಬುರ್ಖಾ ಧರಿಸಬೇಕು. ಐದು ಸಲ ನಮಾಜ್ ಮಾಡಬೇಕು ಎಂದು ಪೀಡಿಸಿದ್ದಾರೆ. ಅಲ್ಲದೇ ಒತ್ತಾಯಪೂರ್ವಕವಾಗಿ ಮಹಿಳೆಗೆ ಬುರ್ಖಾ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

    ದುಷ್ಕರ್ಮಿಗಳ ವಿರುದ್ಧ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮತಾಂತರಕ್ಕೆ ಯತ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಈ ಸಂಬಂಧ ಬೆಳಗಾವಿ ಜಿಲ್ಲೆಯ ಸವದತ್ತಿ ಪೊಲೀಸ್ ಠಾಣೆಯಲ್ಲಿ, ಆರೀಫ್ ಬೇಪಾರಿ, ಆದೀಲ್, ಶೋಯಲ್, ಮುಕ್ತಮ್, ಉಮರ್, ಕರೆವ್ವ ಕಟ್ಟಿಮನಿ ಹಾಗೂ ಕೌಸರ್ ಎಂಬವರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಇದೀಗ ಮತಾಂತರಕ್ಕೆ ಯತ್ನಿಸಿದ ರಫೀಕ್ ಬೇಫಾರಿ ಆತನ ಪತ್ನಿ ಕೌಸರ್ ಬೇಫಾರಿ ಬಂಧಿಸಲಾಗಿದೆ ಎಂದು ಎಸ್ಪಿ ಡಾ.ಭೀಮಾ ಶಂಕರ್ ಗುಳೇದ ಮಾಹಿತಿ ನೀಡಿದ್ದಾರೆ.