Tag: love failure

  • ಚಲಿಸ್ತಿದ್ದ ರೈಲಿನ ಮುಂದೆ ಹಾರಿ ಯುವಕ ಆತ್ಮಹತ್ಯೆ- ಸಾಯೋ ಮುನ್ನ ವಿಡಿಯೋ ರೆಕಾರ್ಡ್

    ಚಲಿಸ್ತಿದ್ದ ರೈಲಿನ ಮುಂದೆ ಹಾರಿ ಯುವಕ ಆತ್ಮಹತ್ಯೆ- ಸಾಯೋ ಮುನ್ನ ವಿಡಿಯೋ ರೆಕಾರ್ಡ್

    – ಯಾರನ್ನೂ ಹೃದಯದಿಂದ ಪ್ರೀತಿಸ್ಬೇಡಿ ಎಂದ

    ಭುವನೇಶ್ವರ: ಲವ್ ಫೇಲ್ಯೂರ್ ಆಗಿದ್ದಕ್ಕೆ ಯುವಕನೊಬ್ಬ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ಕಟಕ್‍ನಲ್ಲಿ ನಡೆದಿದೆ.

    ಮೃತ ಯುವಕನನ್ನು ರೌಸಾ ಪಾಟ್ನಾ ನಿವಾಸಿ ಮನೋಜ್ ಸ್ವೈನ್ ಎಂದು ಗುರುತಿಸಲಾಗಿದೆ. ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಮೊಬೈಲ್ ಫೋನಿನಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ವಿಡಿಯೋದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣ ಏನೆಂಬುದನ್ನು ತಿಳಿಸಿದ್ದಾನೆ.

    ಮೃತ ಮನೋಜ್ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾನೆ. ಮನೋಜ್ ಸುಮಾರು ಮೂರು ವರ್ಷಗಳಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಇತ್ತೀಚೆಗೆ ಆಕೆ ಬೇರೆ ಯುವಕನನ್ನು ಪ್ರೀತಿಸುತ್ತಿದ್ದು, ಕಳೆದ ವರ್ಷ ಡಿಸೆಂಬರ್ ನಲ್ಲಿ ಆತನೊಂದಿಗೆ ಮದುವೆ ಕೂಡ ನಿಗದಿಪಡಿಸಲಾಗಿದೆ ಎಂದು ತಿಳಿದು ಬಂದಿದೆ.

    “ನಾನು ಅವಳ ಜೊತೆ ಮಾತನಾಡಲು ಕರೆದೆ. ಆದರೆ ಆಕೆ, ನನಗೆ ನಮ್ಮ ಜಾತಿಯ ಹುಡುಗನ ಜೊತೆ ಮದುವೆ ಫಿಕ್ಸ್ ಆಗಿದೆ. ಹೀಗಾಗಿ ನೀನು ನನ್ನನ್ನು ಮರೆಯಬೇಕು ಎಂದು ಕೇಳಿಕೊಂಡಳು. ಅಷ್ಟೇ ಅಲ್ಲದೇ ನೀನು ಯಾರು ಎಂದು ನನಗೆ ಗೊತ್ತಿಲ್ಲ. ನನ್ನ ಜೀವನದಿಂದ ದೂರ ಹೋಗು ಎಂದು ನನ್ನನ್ನು ಕೇಳಿಕೊಂಡಳು. ಅದಕ್ಕಾಗಿಯೇ ನಾನು ನನ್ನ ಜೀವನವನ್ನು ಮುಗಿಸುತ್ತಿದ್ದೇನೆ” ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

    ಕೊನೆಗೆ “ಯಾರನ್ನೂ ಹೃದಯದಿಂದ ತುಂಬಾ ಪ್ರೀತಿಸಬೇಡಿ” ಎಂದು ಮನೋಜ್ ಮನವಿ ಮಾಡಿಕೊಂಡಿದ್ದಾನೆ. ನಂತರ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಯ ಬಗ್ಗೆ ಮಾಹಿತಿ ಪಡೆದ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಅಧಿಕಾರಿಗಳು ಆತ್ಮಹತ್ಯೆ ಸ್ಥಳದಲ್ಲಿ ಒಂದು ಪತ್ರವನ್ನು ಸಹ ವಶಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

  • ಪ್ರಿಯಕರ ಫೋನ್ ರಿಸೀವ್ ಮಾಡಲಿಲ್ಲ ಅಂತ ಪ್ರೇಯಸಿ ನೇಣಿಗೆ ಶರಣು!

    ಪ್ರಿಯಕರ ಫೋನ್ ರಿಸೀವ್ ಮಾಡಲಿಲ್ಲ ಅಂತ ಪ್ರೇಯಸಿ ನೇಣಿಗೆ ಶರಣು!

    ಚಿಕ್ಕಬಳ್ಳಾಪುರ: ಪ್ರಿಯಕರ ಫೋನ್ ಕರೆ ರಿಸೀವ್ ಮಾಡಲಿಲ್ಲ ಅಂತ ಮನನೊಂದ ಯುವತಿಯೊರ್ವಳು ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಕಂದವಾರ ಗ್ರಾಮದಲ್ಲಿ ನಡೆದಿದೆ.

    ಸ್ವಾತಿ(22) ಮೃತ ಯುವತಿ. ತನ್ನ ತಂದೆಯ ಜೊತೆ ಕೆಲಸ ಮಾಡುತ್ತಿದ್ದ ನವೀನ್ ಎಂಬಾತನನ್ನ ಸ್ವಾತಿ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಆದ್ರೆ ಕಳೆದ 4, 5 ದಿನಗಳಿಂದ ಯುವಕ ಫೋನ್ ಕರೆಗೆ ಸ್ಪಂದಿಸುತ್ತಿರಲಿಲ್ಲ. ಇದರಿಂದ ಯುವತಿ ಬಹಳಷ್ಟು ನೊಂದಿದ್ದಳು. ಅಲ್ಲದೆ ತನ್ನ ಪ್ರೀತಿ ವೈಫಲ್ಯವಾಯಿತು ಎಂದು ಮನನೊಂದು ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಕಂದವಾರ ಗ್ರಾಮದಲ್ಲಿರುವ ತನ್ನ ಮನೆಯ ಕೊಠಡಿಯೊಂದರಲ್ಲಿ ಫ್ಯಾನ್‍ಗೆ ನೇಣು ಬಿಗಿದುಕೊಂಡು ಯುವತಿ ಸ್ವಾತಿ ಶುಕ್ರವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಮೃತ ಯುವತಿ ತಂದೆ ನವೀನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

    ಸದ್ಯ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲವ್ ಫೇಲ್ಯೂರಿಗೆ ಮದ್ದರೆಯಲು ಗೋವಾಕ್ಕೆ ಹೊರಟ ಭಟ್ರು!

    ಲವ್ ಫೇಲ್ಯೂರಿಗೆ ಮದ್ದರೆಯಲು ಗೋವಾಕ್ಕೆ ಹೊರಟ ಭಟ್ರು!

    ಬೆಂಗಳೂರು: ನಿರ್ದೇಶಕ ಯೋಗರಾಜ ಭಟ್ ಈಗ ಪಂಚತಂತ್ರ ಚಿತ್ರವನ್ನ ಬೇಗನೆ ಮುಗಿಸಿಕೊಳ್ಳೋದರತ್ತ ಗಮನ ನೆಟ್ಟಿದ್ದಾರೆ. ತಮ್ಮ ತಂಡದೊಂದಿಗೆ ಊರು ತುಂಬಾ ಸುತ್ತುತ್ತಾ ಬಿಡುವಿರದೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಯೋಗರಾಜ್ ಭಟ್ ಇದೀಗ ಗೋವಾದತ್ತ ತೆರಳಿದ್ದಾರೆ.

    ಆರಂಭದಿಂದ ಇದುವರೆಗೂ ಅವ್ಯಾಹತವಾಗಿ ಚಿತ್ರೀಕರಣ ನಡೆಸುತ್ತಿರೋ ಭಟ್ಟರೀಗ ಪಂಚತಂತ್ರವನ್ನು ಅಂತಿಮ ಘಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ಈಗ ಉಳಿದುಕೊಂಡಿರೋದು ಒಂದು ಹಾಡು ಮಾತ್ರ. ಇದಕ್ಕಾಗಿ ಒಂದೊಳ್ಳೆ ಲೊಕೇಷನ್ ಆಯ್ಕೆ ಮಾಡಿಕೊಂಡು ಗೋವಾಗೆ ತೆರಳಿದ್ದಾರೆ. ಅಲ್ಲಿ ಲವ್ ಡಿಸೆಪಾಯಿಂಟಾಗಿ ಕಂಗಾಲಾದ ನಾಯಕನನ್ನು ಸಮಾಧಾನಿಸುವ, ಕಿಚಾಯಿಸುವ ಗೆಳೆಯರ ಹಾಡೊಂದು ಚಿತ್ರೀಕರಿಸಲ್ಪಡಲಿದೆ.

    ಈ ವಿಶೇಷವಾದ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಟೀಸರ್ ಮೂಲಕವೂ ಭಾರೀ ಸದ್ದು ಮಾಡಿರೋ ಈ ಚಿತ್ರವನ್ನು ನವೆಂಬರ್ ಮಧ್ಯ ಭಾಗದಲ್ಲಿ ತೆರೆಗಾಣಿಸಲು ಯೋಗರಾಜ ಭಟ್ಟರು ನಿರ್ಧರಿಸಿದ್ದಾರಂತೆ. ಈಗ ಗೋವಾದಲ್ಲಿ ಚಿತ್ರೀಕರಣ ನಡೆಸುತ್ತಿರೋ ಈ ಹಾಡೂ ಇಡೀ ಚಿತ್ರದ ಮುಖ್ಯ ಆಕರ್ಷಣೆಯಾಗಿರಲಿದೆಯಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೇಮ ವೈಫಲ್ಯಕ್ಕೆ ಪ್ರಿಯತಮೆ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ!

    ಪ್ರೇಮ ವೈಫಲ್ಯಕ್ಕೆ ಪ್ರಿಯತಮೆ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ!

    ಬೆಂಗಳೂರು: ಪ್ರೇಮ ವೈಫಲ್ಯವಾದರೆ ಪಾಗಲ್ ಪ್ರೇಮಿಗಳು ಎಂತಹ ಕೃತ್ಯಕ್ಕೆ ಬೇಕಾದರೂ ಇಳಿಯುತ್ತಾರೆ. ಇಂತಹದ್ದೇ ಪ್ರಕರಣವೊಂದು ಬೆಂಗಳೂರು ಹೊರ ವಲಯದ ಆನೇಕಲ್‍ನಲ್ಲಿ ನಡೆದಿದ್ದು, ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರಿಯತಮೆ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ್ದಾನೆ.

    ಬೆಳ್ಳಂದೂರು ನಿವಾಸಿ ಗಿರೀಶ್ ಕೃತ್ಯ ಎಸಗಿದ ಪಾಗಲ್ ಪ್ರೇಮಿ. ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಕೆಯನ್ನು ಆನೇಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಆಗಿದ್ದೇನು?: ಯುವತಿಯ ಮನೆಯಲ್ಲಿ ಆಕೆಯನ್ನು ಬಿಟ್ಟು ಬೇರೆ ಯಾರೂ ಇಲ್ಲವೆಂದು ಗಿರೀಶ್ ಇಂದು ಬೆಳಗ್ಗೆ ಖಚಿತ ಪಡೆಸಿಕೊಂಡಿದ್ದಾನೆ. ಬಳಿಕ ಮನೆಗೆ ನುಗ್ಗಿದ ಗಿರೀಶ್ ಯುವತಿಯನ್ನು ಹಿಡಿದು, ಕತ್ತು ಕೊಯ್ದು ಹತ್ಯೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ಜೋರಾಗಿ ಕಿರುಚಾಡಿದ್ದಾಳೆ. ಇದನ್ನು ನೆರೆಹೊರೆಯವರು ಕೇಳಿಸಿಕೊಂಡಿದ್ದು, ತಕ್ಷಣವೇ ಯುವತಿಯ ಮನೆ ಕಡೆಗೆ ಬಂದಿದ್ದಾರೆ. ಇದನ್ನು ನೋಡಿದ ಗಿರೀಶ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಯುವತಿಯನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಾಗಲ್ ಪ್ರೇಮಿ ಗಿರೀಶ್ ವಿರುದ್ಧ ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲವ್ ಫೆಲ್ಯೂರ್ ಆಗಿದ್ದಕ್ಕೆ ಮರಕ್ಕೆ ನೇಣು ಬಿಗಿದು ಟೆಕ್ಕಿ ಆತ್ಮಹತ್ಯೆ!

    ಲವ್ ಫೆಲ್ಯೂರ್ ಆಗಿದ್ದಕ್ಕೆ ಮರಕ್ಕೆ ನೇಣು ಬಿಗಿದು ಟೆಕ್ಕಿ ಆತ್ಮಹತ್ಯೆ!

    ಹೈದರಾಬಾದ್: ಪ್ರೇಮ ವೈಫಲ್ಯ ಆಗಿದ್ದಕ್ಕೆ ಟೆಕ್ಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

    ಯತೀಶ್ ಆತ್ಮಹತ್ಯೆಗೆ ಶರಣಾದ ಟೆಕ್ಕಿ. ಯತೀಶ್ ಬಾಂದ್ಲಾಗುಡದಲ್ಲಿ ವಾಸವಿದ್ದು, ವಿಪ್ರೋ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬುಧವಾರ ರಾತ್ರಿ ಉಪ್ಪಲ್ ಎಚ್‍ಎಂಡಿಎ ಲೇಔಟ್‍ನ ಮರವೊಂದರಲ್ಲಿ ಯತೀಶ್‍ನ ಮೃತದೇಹ ಪತ್ತೆಯಾಗಿದೆ. ಅದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಯತೀಶ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾಗ ಡೆತ್‍ನೋಟ್ ದೊರೆತಿದೆ. ಲವ್ ಫೆಲ್ಯೂರ್ ಆಗಿದ್ದಕ್ಕೆ ಯತೀಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಡೆತ್‍ನೋಟ್‍ನಿಂದ ತಿಳಿದು ಬಂದಿದೆ.

    ಯತೀಶ್ ಮೃತದೇಹವನ್ನು ಒಸ್ಮಾನಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಅಪಾಯಕಾರಿ ಕೆಮಿಕಲ್ ಇಂಜೆಕ್ಟ್ ಮಾಡ್ಕೊಂಡು ನರ್ಸ್ ಆತ್ಮಹತ್ಯೆ

    ಅಪಾಯಕಾರಿ ಕೆಮಿಕಲ್ ಇಂಜೆಕ್ಟ್ ಮಾಡ್ಕೊಂಡು ನರ್ಸ್ ಆತ್ಮಹತ್ಯೆ

    ನೆಲ್ಲೂರು: ಸರ್ಕಾರಿ ಆಸ್ಪತ್ರೆಯ ನರ್ಸ್‍ವೊಬ್ಬರು ಅಪಾಯಕಾರಿ ಕೆಮಿಕಲ್ ಇಂಜೆಕ್ಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.

    26 ವರ್ಷದ ಮಮತಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರು ಮಲತಃ ಗುಂಟೂರು ಜಿಲ್ಲೆಯ ನರಸರಪೇಟ್‍ನ ಕೇಸನಪಲ್ಲಿ ಗ್ರಾಮದವರು. ಮಮತಾ ತಂದೆ ಯೇಸುರತ್ನಂ ಕೆಲವು ವರ್ಷಗಳ ಹಿಂದೆ ಹೆಂಡತಿಯಿಂದ ದೂರವಾಗಿದ್ದರು. ಮಮತಾ ಹಾಗೂ ಸಹೋದರ ಕೋಟೇಶ್ವರ್ ರಾವ್‍ನನ್ನು ತಾಯಿ ಮಾರ್ತಮ್ಮ ಸಾಕಿ ಬೆಳೆಸಿದ್ದರು. ಸಂಕಷ್ಟದ ನಡುವೆಯೂ ಮಗಳಿಗೆ ಒಳ್ಳೇ ವಿದ್ಯಾಭ್ಯಾಸ ಕೊಡಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಮಮತಾ ನರ್ಸಿಂಗ್ ಪದವಿ ಮುಗಿಸಿದ ಬಳಿಕ ನೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ 11 ತಿಂಗಳ ಗುತ್ತಿಗೆ ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದರು. ಮೊದಲಿಗೆ ಆಸ್ಪತ್ರೆಗೆ ಸೇರಿದ ವಸತಿ ನಿಲಯದಲಿ ವಾಸವಿದ್ದರು. ಬಳಿಕ ತನ್ನ ಸ್ನೇಹಿತೆಯರಾದ ಭವಾನಿ ಹಾಗೂ ಪದ್ಮಶ್ರೀಯೊಂದಿಗೆ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು.

    ಸೋಮವಾರದದು ಕೆಲಸ ಮುಗಿಸಿ ಮನೆಗೆ ಬಂದ ಮಮತಾ ಎಂದಿನಂತೆ ತನ್ನ ಸ್ನೇಹಿತೆಯರೊಂದಿಗೆ ಊಟ ಸೇವಿದ್ದರು. ಸ್ನೇಹಿತೆಯರು ಮಲಗಲು ಹೋದ ಬಳಿಕ ಮಮತಾ ತನ್ನ ಪ್ರಿಯಕರ ತೇಜಾನೊಂದಿಗೆ ಮಾತನಾಡಿದ್ದರು. ಬಳಿಕ ತಾನು ತಂದಿದ್ದ ಸಿರಿಂಜ್ ಹಾಗೂ ಕೆಮಿಕಲ್ ತೆಗೆದುಕೊಂಡು ದೇಹಕ್ಕೆ ಇಂಜೆಕ್ಟ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಕಲವೇ ಕ್ಷಣಗಳಲ್ಲಿ ಮಮತಾ ಕುಸಿದು ಬಿದ್ದಿದ್ದಾರೆ. ನಂತರ ನಸುಕಿನ ಜಾವ ಸುಮಾರು 4 ಗಂಟೆ ವೇಳೆಗೆ ಮಮತಾ ಸ್ನೇಹಿತೆಯೊಬ್ಬರು ಹಾಸಿಗೆ ಮೇಲೆ ಬಿದ್ದಿದ್ದ ಮಮತಾರನ್ನು ನೋಡಿ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಮಮತಾರನ್ನ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗಾಗಲೇ ತಡವಾಗಿತ್ತು. ಮಮತಾ ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ವಿಷಯ ತಿಳಿದು ಮಮತಾ ತಾಯಿ ಹಾಗೂ ಸಹೋದರ ಕೂಡ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

    ಸದ್ಯ ಮಮತಾ ತಾಯಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರೇಮ ವೈಫಲ್ಯದಿಂದ ಮಮತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಮಮತಾ ತಾಯಿ ಫೋನ್ ಮಾಡಿ ಆಕೆಗೆ ಮದುವೆ ನಿಶ್ಚಯಿಸಿರುವುದಾಗಿ ಹೇಳಿದ್ದರು. ಆದ್ರೆ ಈಗಲೇ ಮದುವೆ ಬೇಡ ಎಂದು ಮಮತಾ ತನ್ನ ತಾಯಿಯೊಂದಿಗೆ ವಾದಿಸಿದ್ದರು ಎಂದು ವರದಿಯಾಗಿದೆ.

  • ಆರು ಬಾರಿ ಚೂರಿಯಿಂದ ಇರಿದು ನಡುಬೀದಿಯಲ್ಲೇ ವಿದ್ಯಾರ್ಥಿನಿಯನ್ನು ಕೊಂದೇಬಿಟ್ಟ!

    ಆರು ಬಾರಿ ಚೂರಿಯಿಂದ ಇರಿದು ನಡುಬೀದಿಯಲ್ಲೇ ವಿದ್ಯಾರ್ಥಿನಿಯನ್ನು ಕೊಂದೇಬಿಟ್ಟ!

    ಮಂಗಳೂರು: ಪ್ರೇಮ ವೈಫಲ್ಯದ ಹಿನ್ನಲೆಯಲ್ಲಿ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯನ್ನು ನಡುಬೀದಿಯಲ್ಲೇ ಚೂರಿ ಇರಿದು ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

    ನೆಹರು ಮೆಮೊರಿಯಲ್ ಕಾಲೇಜಿನ ಬಿಎಸ್‍ಸಿ ವಿದ್ಯಾರ್ಥಿನಿ ಅಕ್ಷತಾಳನ್ನು ಅದೇ ಕಾಲೇಜಿನಲ್ಲಿ ಓದುತ್ತಿದ್ದ ಕಾರ್ತಿಕ್ ಸುಳ್ಯದ ರಥಬೀದಿಯಲ್ಲಿ ಆರು ಬಾರಿ ಚೂರಿಯಿದ ಇರಿದು ಕೊಲೆ ಮಾಡಿದ್ದಾನೆ.

    ಕಾರ್ತಿಕ್ ಹಲವು ಬಾರಿ ಅಕ್ಷತಾ ಜೊತೆ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದು ಆಕೆ ನಿರಾಕರಿಸಿದ್ದಳು. ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ರಥಬೀದಿಯಲ್ಲಿ ಆಕೆಗೆ ಚೂರಿಯಿಂದ ಇರಿದಿದ್ದಾನೆ. ಆಕೆಯನ್ನು ಕೊಲೆ ಮಾಡಿದ ಬಳಿಕ ತಾನೂ ಆದೇ ಚೂರಿಯಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಈ ದೃಶ್ಯವನ್ನು ನೋಡಿದ ಸ್ಥಳೀಯರು ಕೂಡಲೇ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • ಪ್ರೀತ್ಸೇ ಅಂತಾ ಆಂಟಿ ಹಿಂದೆ ಬಿದ್ದಿದ್ದ..! – ನೋ ಅಂದಿದ್ದಕ್ಕೆ ಕೆರೆಗೆ ಹಾರಿ ಪ್ರಾಣಬಿಟ್ಟ?

    ಪ್ರೀತ್ಸೇ ಅಂತಾ ಆಂಟಿ ಹಿಂದೆ ಬಿದ್ದಿದ್ದ..! – ನೋ ಅಂದಿದ್ದಕ್ಕೆ ಕೆರೆಗೆ ಹಾರಿ ಪ್ರಾಣಬಿಟ್ಟ?

    ಬೆಂಗಳೂರು: ಪ್ರೀತ್ಸೇ, ಪ್ರೀತ್ಸೇ ಅಂತಾ ಮದುವೆಯಾದ ಯುವತಿ ಹಿಂದೆ ಬಿದ್ದ. ಆದರೆ ಆ ಯುವತಿ ಈತನ ಪ್ರೀತಿಯನ್ನು ಸ್ಪಷ್ಟವಾಗಿ ನಿರಾಕರಿಸಿದಳು. ಇದರಿಂದ ಮನನೊಂದಿದ್ದ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬೆಂಗಳೂರು ಹೊರವಲಯದ ಸರ್ಜಾಪುರ ಕೆರೆಯಲ್ಲಿ ನಡೆದಿದೆ.

    ಸರ್ಜಾಪುರ ನಿವಾಸಿ ವೆಂಕಟೇಶ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಬುಧವಾರದಿಂದ ವೆಂಕಟೇಶ್ ನಾಪತ್ತೆಯಾಗಿದ್ದ. ಬುಧವಾರ ಸಂಜೆ 5 ಗಂಟೆಗೆ ಮನೆಯವರು ಫೋನ್ ಮಾಡಿದಾಗ ವೆಂಕಟೇಶ್, ನಾನು ಸರ್ಜಾಪುರ ಕೆರೆ ಪಕ್ಕ ಇದ್ದೇನೆ. ಇನ್ನೆರಡು ಗಂಟೆಯಲ್ಲಿ ಮನೆಗೆ ವಾಪಸ್ ಬರುತ್ತೇನೆ ಎಂದು ಹೇಳಿದ್ದನಂತೆ. ಆದರೆ 2 ತಾಸು ಕಳೆದರೂ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ವೆಂಕಟೇಶ್ ತಂದೆ, ತಾಯಿ ಹಾಗೂ ತಮ್ಮ ಕೆರೆ ಬಳಿ ಬಂದಿದ್ದಾರೆ. ಈ ವೇಳೆ ಹುಡುಕಾಟ ನಡೆಸುತ್ತಿದ್ದಾಗ ವೆಂಕಟೇಶ್ ಚಪ್ಪಲಿ ಕೆರೆಯಲ್ಲಿ ತೇಲುತ್ತಿರುವುದು ಗಮನಕ್ಕೆ ಬಂದಿದೆ. ನಂತರ ಪೋಷಕರು ಸರ್ಜಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈತ 6 ತಿಂಗಳ ಹಿಂದಷ್ಟೇ ಮದುವೆಯಾಗಿರೋ ಯುವತಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದ. ಆದರೆ ಆ ಯುವತಿ ಈತನ ಪ್ರೀತಿಗೆ ನೋ ಅಂದಿದ್ದಳು. ಇದರಿಂದ ಆತ ತುಂಬಾ ಮನನೊಂದಿದ್ದ. ಹೀಗಾಗಿ ಆತ ಈ ಕೃತ್ಯವೆಸಗಿರಬಹುದು ಎಂದು ವೆಂಕಟೇಶ್ ಸ್ನೇಹಿತರು ಮಾಹಿತಿ ನೀಡಿದ್ದಾರೆ.

    ನಿನ್ನೆ ದಿನಪೂರ್ತಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಆದರೆ ಇಂದು ಬೆಳಗ್ಗೆ 11.30ರ ವೇಳೆಗೆ ಮೃತದೇಹ ಕೆರೆಯಲ್ಲಿ ತೇಲಿ ಬಂದಿದೆ. ಈ ಕೆರೆ 15 ರಿಂದ 20 ಅಡಿ ಆಳವಿದೆ. ಪೊಲೀಸರು ಸದ್ಯ ವೆಂಕಟೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಪುತ್ರನನ್ನು ಕಳೆದುಕೊಂಡ ವೆಂಕಟೇಶ್ ಪೋಷಕರ ಆಕ್ರಂದನ ಸ್ಥಳದಲ್ಲಿ ಮುಗಿಲುಮುಟ್ಟಿತ್ತು. ಪ್ರಕರಣ ದಾಖಲಿಸಿರುವ ಸರ್ಜಾಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

     

     

  • ಲವ್ವರ್ ಬಿಟ್ಟು ಆತನ ಸ್ನೇಹಿತನ ಜೊತೆ ಲವ್: ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

    ಲವ್ವರ್ ಬಿಟ್ಟು ಆತನ ಸ್ನೇಹಿತನ ಜೊತೆ ಲವ್: ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

    ಬೆಂಗಳೂರು: ಪ್ರೇಮ ವೈಫಲ್ಯದಿಂದ ಮನನೊಂದು ನಗರದಲ್ಲಿ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕೋರಮಂಗಲದಲ್ಲಿರುವ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಕುಮಾರ್ ಹೆಬ್ಬಾಳದ ಸ್ನೇಹಿತನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

    ಉತ್ತರ ಕನ್ನಡ ಮೂಲದ ಸುನೀಲ್ ಕುಮಾರ್ ಕಳೆದ 1 ವರ್ಷದಿಂದ ಕೋಲ್ಕತ್ತ ಮೂಲದ ಸಹೋದ್ಯೋಗಿ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಸುನೀಲ್ ಕುಮಾರ್ ಸ್ನೇಹಿತನ ಪ್ರೀತಿಗೆ ಆಕೆ ಬಿದ್ದಿದ್ದಳು.

    ಪ್ರೇಯಸಿ ಕೈ ಕೊಟ್ಟಿದ್ದಕ್ಕೆ ಸುನೀಲ್ ಕುಮಾರ್ ಖಿನ್ನತೆಗೆ ಒಳಗಾಗಿದ್ದರು. ಈ ವಿಚಾರವನ್ನು ತನ್ನ ಸ್ನೇಹಿತರ ಜೊತೆಗೂ ಹೇಳಿಕೊಂಡಿದ್ದರು. ಆದರೆ ಶುಕ್ರವಾರ ರಾತ್ರಿ ಸ್ನೇಹಿತ ಮನೆಗೆ ಬಂದಿದ್ದ ಸುನೀಲ್ ಕುಮಾರ್ ಅಲ್ಲೇ ನೇಣಿಗೆ ಶರಣಾಗಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.