Tag: Love Birds

  • ಬಿಗ್‌ಬಾಸ್ ಪ್ರಣಯ ಹಕ್ಕಿಗಳ ಪ್ರೇಮಕಥೆ ಪೀಕ್‌ಗೆ ತಲುಪಿತೇ?

    ಬಿಗ್‌ಬಾಸ್ ಪ್ರಣಯ ಹಕ್ಕಿಗಳ ಪ್ರೇಮಕಥೆ ಪೀಕ್‌ಗೆ ತಲುಪಿತೇ?

    ಬಿಗ್‌ಬಾಸ್‌ನ (Bigg Boss) ಪ್ರತಿ ಸೀಸನ್‌ನಲ್ಲೂ ಪ್ರೇಮಕಥೆ ಹುಟ್ಟೋದು ಸಾಮಾನ್ಯ. ಈ ಸೀಸನ್‌ನಲ್ಲಿ ದ್ವೇಷದ ಕಥೆ ಹೆಚ್ಚಾಗಿದ್ದರಿಂದ ಪ್ರೇಮಕಥೆ ಕಳೆದುಹೋಗಿತ್ತು. ಗಿಲ್ಲಿ, ಕಾವ್ಯ ಸ್ನೇಹಿತರಂತಿದ್ದಾರೆ. ಇದು ನಿಜವಾದ ಪ್ರೇಮಕಥೆಯಲ್ಲ ಅನ್ನೋದು ವೀಕ್ಷಕರಿಗೆ ತಿಳಿದಿದೆ. ಆದರೆ ಇವರ ಮಧ್ಯೆ ಅಸಲಿ ಲವ್‌ಬರ್ಡ್ಸ್ (Love Birds) ಹುಟ್ಟುಕೊಂಡಿದ್ದಾರೆ. ಆ ಜೋಡಿಯೇ ರಾಶಿಕಾ ಹಾಗೂ ಸೂರಜ್.

    ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಸೂರಜ್ ಸಿಂಗ್ ಮನೆಗೆ ಎಂಟ್ರಿ ಕೊಟ್ಟ ದಿನವೇ ಮನೆಯಲ್ಲಿರೋ ಹುಡುಗಿಯರ ಮಧ್ಯೆ ಒಬ್ಬರಿಗೆ ರೋಸ್ ಕೊಡುವ ಚಟುವಟಿಕೆಯಲ್ಲಿ ರಾಶಿಕಾಗೆ (Rashika) ಕೆಂಪು ಗುಲಾಬಿ ಕೊಟ್ಟಿದ್ದರು. ಹಾಗೆಯೇ ಶುರುವಾದ ಕಣ್ಣೋಟಗಳು ಕಲೆತು ಬಲಿತು ಜೋಡಿಯಾಗಿದೆ.

    ಮಾಡೆಲ್/ಶೆಫ್ ಆಗಿರುವ ಸೂರಜ್ (Suraj Singh) ರಾಶಿಕಾರನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸೂರಜ್ ಸೌಮ್ಯ ಸ್ವಭಾವಕ್ಕೆ ಹ್ಯಾಡ್ಸಂ ಲುಕ್‌ಗೆ ರಾಶಿಕಾ ಬೌಲ್ಡ್‌ ಆದಂತಿದೆ. ಸದ್ಯಕ್ಕಂತೂ ಮನೆಯಲ್ಲಿ ಪ್ರಯಣ ಪಕ್ಷಿಗಳಂತೆ ಈ ಜೋಡಿ ಸುತ್ತಾಡುತ್ತಿದೆ. ಇಷ್ಟು ಸಾಲದು ಎನ್ನುವಂತೆ ಅಶ್ವಿನಿ ಗೌಡ, ಸೂರಜ್‌ರನ್ನು ಮಗ ಎಂದು ಕರೆದಿದ್ದಾರೆ. ಹಿಂದೊಮ್ಮೆ ರಾಶಿಕಾರನ್ನು ಸೊಸೆ ಎಂದು ಕರೆದಿದ್ದರು. ಇದನ್ನೂ ಓದಿ:  ಗಿಲ್ಲಿ ಕಾಲೆಳೆದು ಹೊಟ್ಟೆ ಹುಣ್ಣಾಗಿಸಿದ ಕಿಚ್ಚ ಸುದೀಪ್

    ಪ್ರತಿ ಪ್ರೇಮಿಗಳ ನಡುವೆ ಏರ್ಪಡುವಂತೆ ಸಣ್ಣದೊಂದು ಪೊಸೆಸ್ಸಿವ್‌ನೆಸ್ ಇಬ್ಬರಲ್ಲಿ ಮೂಡಿದೆ. ರಾಶಿಕಾಗಾಗಿ ಸೂರಜ್ ವಿಶೇಷ ತಿನಿಸು ಮಾಡಿಕೊಡುತ್ತಿದ್ದಾರೆ. ಇಬ್ಬರು ಏಕಾಂತ ಬಯಸುತ್ತಿದ್ದಾರೆ. ಕೈ ಹಿಡಿದು ನೀನ್ಯಾಕೆ ನನ್ನ ಅವೈಡ್ ಮಾಡ್ದೆ, ನೀನ್ಯಾಕೆ ನನ್ನನ್ನು ಆಗ ಮಾತನಾಡಿಸಿಲ್ಲ? ಬೇಜಾರಾಯ್ತಾ? ಯಾರ್ ಏನೇ ಅಂದ್ರೂ ನಾನ್ ನಿನ್ನ ಜೊತೆ ಇರ್ತೀನಿ ಆಯ್ತಾ? ಈ ರೀತಿಯ ಸಂಭಾಷಣೆಗಳು ಇಬ್ಬರ ನಡುವೆ ಏರ್ಪಟ್ಟಿದೆ. ಇದನ್ನೂ ಓದಿ:  ಉತ್ತರ ಭಾರತದಲ್ಲಿ ಕಾಂತಾರ ಸಿನಿಮಾ ಹವಾ: ಬಾಕ್ಸಾಫೀಸ್‌ನಲ್ಲಿ 200 ಕೋಟಿ ಕ್ಲಬ್!

    ಸದ್ಯಕ್ಕೆ ಸೂರಜ್ ರಾಶಿಕಾ ಲವ್‌ಸ್ಟೋರಿ ಫಸ್ಟ್‌ ಹಾಫ್‌ನಲ್ಲಿದೆ. ಸೆಕೆಂಡ್‌ ಹಾಫ್‌ನಲ್ಲಿ ಇನ್ನೇನಾಗುತ್ತೋ? ಕ್ಲೈಮ್ಯಾಕ್ಸ್‌ವರೆಗೂ ಇರುತ್ತೋ ಇಲ್ವೋ ಎಂಬ ಕುತೂಹಲ ಹೆಚ್ಚಾಗಿದೆ.

  • ಅಜ್ಜಿ, ಮೊಮ್ಮಗಳಿಗೆ ಫ್ರೀ ಟಿಕೆಟ್‌ – 4 ಲವ್‌ ಬರ್ಡ್ಸ್‌ಗಳಿಗೆ 444 ರೂ. ಟಿಕೆಟ್‌!

    ಅಜ್ಜಿ, ಮೊಮ್ಮಗಳಿಗೆ ಫ್ರೀ ಟಿಕೆಟ್‌ – 4 ಲವ್‌ ಬರ್ಡ್ಸ್‌ಗಳಿಗೆ 444 ರೂ. ಟಿಕೆಟ್‌!

    ಬೆಂಗಳೂರು: ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಅಜ್ಜಿ ಮತ್ತು ಮೊಮ್ಮಗಳಿಗೆ ‘ಶಕ್ತಿ ಯೋಜನೆ’ಯಡಿ (Shakti Scheme) ಫ್ರೀ ಬಸ್‌ ಪ್ರಯಾಣ ಟಿಕೆಟ್‌ ಸಿಕ್ಕಿತು. ಆದರೆ ಅವರು ಜೊತೆಯಲ್ಲಿ ತಂದಿದ್ದ ಲವ್‌ ಬರ್ಡ್ಸ್‌ಗಳಿಗೆ ಪ್ರಯಾಣ ಶುಲ್ಕ ಬರೋಬ್ಬರಿ 444 ರೂ. ಬಿದ್ದಿದೆ.

    ಅಜ್ಜಿ ಮತ್ತು ಮೊಮ್ಮಗಳು ಮೈಸೂರು ಕಡೆಗೆ ಬಸ್‌ನಲ್ಲಿ ಉಚಿತ ಪ್ರಯಾಣ ಬೆಳೆಸಿದ್ದರು. ತಮ್ಮ ಜೊತೆ ಪಂಜರದಲ್ಲಿ ಲವ್‌ ಬರ್ಡ್ಸ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಅಜ್ಜಿ-ಮೊಮ್ಮಗಳಿಗೆ ಕಂಡಕ್ಟರ್‌ ಫ್ರೀ ಟಿಕೆಟ್‌ ಕೊಟ್ಟರು. ಆದರೆ ಲವ್‌ ಬರ್ಡ್ಸ್‌ಗಳಿಗೆ ಪ್ರಯಾಣ ಶುಲ್ಕ ಹಾಕಿದ್ದಾರೆ. ಇದನ್ನೂ ಓದಿ: ಸುಮಲತಾ ಅಂಬರೀಶ್‌ ಜೊತೆ ಮಾತುಕತೆಗೆ ನಾವು ಸಿದ್ಧ – ನಿಖಿಲ್

    ಮೊಮ್ಮಗಳ ಜೊತೆ ನಾಲ್ಕು ಲವ್ ಬರ್ಡ್ಸ್ ಹಕ್ಕಿಗಳನ್ನು ಅಜ್ಜಿಯೊಬ್ಬರು ತೆಗೆದುಕೊಂಡು ಮೈಸೂರಿಗೆ ಹೊರಟಿದ್ದರು. ಕೆಎಸ್‌ಆರ್‌ಟಿಸಿ ಕಂಡಕ್ಟರ್‌, ಅಜ್ಜಿ-ಮೊಮ್ಮಗಳಿಗೆ ಫ್ರೀ ಟಿಕೆಟ್‌ ಕೊಟ್ಟಿದ್ದಾರೆ. ಆದರೆ ಲವ್‌ ಬರ್ಡ್ಸ್‌ಗಳಿಗೆ ಟಿಕೆಟ್‌ ನೀಡಿದ್ದಾರೆ. ನಾಲ್ಕು ಮಕ್ಕಳು ಎಂದು ಟಿಕೆಟ್‌ನಲ್ಲಿ ನಮೂದು ಮಾಡಿದ್ದಾರೆ.

    ಒಂದು ಬರ್ಡ್‌ ಪ್ರಯಾಣ ವೆಚ್ಚವಾಗಿ 111 ರೂ. ಬಿದ್ದಿದೆ. ಒಟ್ಟು ನಾಲ್ಕು ಹಕ್ಕಿಗಳಿಗೆ 444 ರೂಪಾಯಿ ಟಿಕೆಟ್ ನೀಡಲಾಗಿದೆ. ಇಂದು ಬೆಳಗ್ಗೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮಂತ್ರಿಯೇ ಆಗಲಿಲ್ಲ ರಾಜ – ಒಡೆಯರ್ ಕನಸು ಅವರ ಜೊತೆಯೆ ಮಣ್ಣಾಯಿತು

  • `ಲವ್ ಬರ್ಡ್ಸ್’ ಚಿತ್ರದಲ್ಲಿ ಮಿಲನಾ ನಾಗರಾಜ್: ಸಿನಿಮಾದ ಫಸ್ಟ್ ಲುಕ್ ಔಟ್

    `ಲವ್ ಬರ್ಡ್ಸ್’ ಚಿತ್ರದಲ್ಲಿ ಮಿಲನಾ ನಾಗರಾಜ್: ಸಿನಿಮಾದ ಫಸ್ಟ್ ಲುಕ್ ಔಟ್

    `ಲವ್ ಮಾಕ್ಟೈಲ್‌ʼ (Love Mocktail) ಸಿನಿಮಾದ  ಸೂಪರ್ ಸಕ್ಸಸ್ ನಂತರ `ಲವ್ ಬರ್ಡ್ಸ್’ (Love Birds) ಆಗಿ ಮಿಂಚಲು ಕೃಷ್ಣ ಮತ್ತು ಮಿಲನಾ ರೆಡಿಯಾಗಿದ್ದಾರೆ. ಇದೀಗ ಮಿಲನಾ ಅವರ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

     

    View this post on Instagram

     

    A post shared by Milana Nagaraj (@milananagaraj)

    ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಮಿಲನಾ ನಾಗರಾಜ್ (Milana Nagaraj) ಜೋಡಿ `ಲವ್ ಬರ್ಡ್ಸ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿರುವ ಬಗ್ಗೆ ಈ ಹಿಂದೆ ಸುದ್ದಿಯಾಗಿತ್ತು. ಈಗ ಈ ಸಿನಿಮಾದ ಮಿಲನಾ ನಾಗರಾಜ್ ಪಾತ್ರದ ಲುಕ್ ಬಿಡುಗಡೆ ಆಗಿದೆ. ಮಿಲನಾ ಈ ಸಿನಿಮಾದಲ್ಲಿ ಫ್ಯಾಷನ್ ಡಿಸೈನರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

     

    View this post on Instagram

     

    A post shared by Milana Nagaraj (@milananagaraj)

    ಸ್ಯಾಂಡಲ್‌ವುಡ್‌ನ ರಿಯಲ್ ಲವ್ ಬರ್ಡ್ಸ್ ಎಂದೇ ಕರೆಯಲ್ಪಡುವ ಕ್ರಿಸ್‌ಮಿ ಜೋಡಿ ಲವ್ ಮಾಕ್ಟೈಲ್, ಲವ್ ಮಾಕ್ಟೈಲ್‌ 2, ಮಿ.ಬ್ಯಾಚುಲರ್ ಸಿನಿಮಾಗಳ ನಂತರ `ಲವ್ ಬರ್ಡ್ಸ್’ ಆಗಿ ಮಿಂಚಲು ಸಜ್ಜಾಗಿದ್ದಾರೆ. ಈಗಾಗಲೇ ಸಿನಿಮಾದ ಶೇ. 80ರಷ್ಟು ಚಿತ್ರಿಕರಣ ಕಂಪ್ಲೀಟ್ ಆಗಿದೆ.

     

    View this post on Instagram

     

    A post shared by Milana Nagaraj (@milananagaraj)

    `ಲವ್ ಬರ್ಡ್ಸ್’ ಸಿನಿಮಾದಲ್ಲಿ ಗಂಡ ಹೆಂಡತಿ ಸಂಬಂಧದ ಬಗೆಗಿನ ಕಥೆ ಇದೆ. ಮದುವೆಯನ್ನು ಹೇಗೆ ಸುಂದರಗೊಳಿಸಬಹುದು ಎಂಬ ಬಗ್ಗೆ ತೆರೆಯ ಮೇಲೆ ತೋರಿಸಲು ನಿರ್ದೇಶಕ ಪಿ.ಸಿ ಶೇಖರ್ (Director Pc Shekar) ಹೊರಟಿದ್ದಾರೆ. ಮಿಲನಾ ನಾಗರಾಜ್ ಫ್ಯಾಷನ್ ಡಿಸೈನರ್ (Fashion Designer) ಆಗಿ ಸಖತ್ ಬೋಲ್ಡ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿರುವ ಅವರು ಇಂಡಿಪೆಂಡೆಂಟ್ ಯುವತಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಡಾರ್ಲಿಂಗ್ ಕೃಷ್ಣ ಕೂಡ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಅಖಾಡಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

     

    View this post on Instagram

     

    A post shared by Milana Nagaraj (@milananagaraj)

    ಸದ್ಯ ಈ ಚಿತ್ರದ ಮಿಲನಾ ಲುಕ್ ಏಲ್ಲೆಡೆ ಸದ್ದು ಮಾಡುತ್ತಿದೆ. ನಟಿಯ ಮೊದಲ ಲುಕ್ ನೆಟ್ಟಿಗರ ಗಮನ ಸೆಳೆದಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ಅಬ್ಬರಿಸಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತೆರೆಯ ಮೇಲೂ ಒಂದಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ

    ತೆರೆಯ ಮೇಲೂ ಒಂದಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ

    ವ್ ಮಾಕ್ಟೈಲ್ ಚಿತ್ರದಲ್ಲಿ ಜೋಡಿಯಾಗಿ ಸಿನಿರಂಗವನ್ನು ರಂಜಿಸಿದ್ದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್, ಈ ಸಿನಿಮಾದಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ಅವರು ಜೊತೆಯಾದರು. ಸತಿ ಪತಿಯಾಗಿ ಒಂದೊಳ್ಳೆ ಜೀವನ ಸಾಗಿಸುತ್ತಿದ್ದಾರೆ. ಸಿನಿಮಾದಲ್ಲಿ ಪ್ರೇಮಿಯಾಗಿ ಪಾತ್ರ ಮಾಡಿದ್ದವರು, ನಿಜ ಜೀವನದಲ್ಲೂ ಅದನ್ನು ಮುಂದುವರೆಸಿಕೊಂಡು ಹೋಗಿ, ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾ

    ಲವ್ ಮಾಕ್ಟೈಲ್ ಇಬ್ಬರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಆನಂತರ ಅವರು ಲವ್ ಮಾಕ್ಟೈಲ್ 2 ನಲ್ಲೂ ಜೊತೆಯಾಗಿಯೇ ನಟಿಸಿದರು. ಬಾಕ್ಸ್ ಆಫೀಸಿನಲ್ಲಿ ಅದು ಅಷ್ಟೇನೂ ಸದ್ದು ಮಾಡದೇ ಇದ್ದರೂ, ಜೋಡಿಯು ನೋಡುಗರಿಗೆ ಇಷ್ಟವಾಯಿತು. ಈಗ ಅದನ್ನೇ ಮುಂದುವರೆಸುವ ನಿಟ್ಟಿನಲ್ಲಿ ನಿರ್ದೇಶಕ ಪಿ.ಸಿ.ಶೇಖರ್ ಮತ್ತೊಂದು ಹೊಸ ಸಿನಿಮಾವನ್ನು ಇದೇ ಜೋಡಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಅದಕ್ಕೆ ಬ್ಯುಟಿಫುಲ್ ಆಗಿರುವ ಶೀರ್ಷಿಕೆಯನ್ನೂ ಇಟ್ಟಿದ್ದಾರೆ. ಇದನ್ನೂ ಓದಿ : ‘ಕಾಳಿ’ ಟೈಟಲ್ ಧ್ರುವ ಸರ್ಜಾಗಾ? ಅಥವಾ ಅಭಿಷೇಕ್ ಅಂಬರೀಶ್ ಗಾ?

    ಪಿ.ಸಿ. ಶೇಖರ್ ಸಿನಿಮಾ ರಂಗದಲ್ಲಿ ಕೊಂಚ ಗ್ಯಾಪ್ ತಗೆದುಕೊಂಡು ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೆ ಲವ್ ಬರ್ಡ್ಸ್ ಎಂದು ಹೆಸರಿಟ್ಟಿದ್ದಾರೆ. ರಿಯಲ್ ಲೈಫ್‍ನ ಲವ್ ಬರ್ಡ್ಸ್ ಅನ್ನೇ ನಾಯಕ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕಥೆಗೂ ಮತ್ತು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಜೋಡಿಗೂ ಒಂದಾಣಿಕೆ ಆಗುತ್ತಿದ್ದರಿಂದ, ಇದೇ ಜೋಡಿಯನ್ನು ಆಯ್ಕೆ ಮಾಡಿಕೊಂಡು, ಸಿನಿಮಾ ಮಾಡುತ್ತಿದ್ದಾರೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ

    ಲವ್ ಬರ್ಡ್ಸ್ ಚಿತ್ರಕ್ಕೆ ಮಿಲನಾ ನಾಗರಾಜ್ ನಾಯಕಿಯಾದರೆ, ಡಾರ್ಲಿಂಗ್ ಕೃಷ್ಣ ನಾಯಕ. ಮದುವೆಯಾದ ಜೋಡಿಯ ನಂತರದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆಯಂತೆ. ದಾಂಪತ್ಯ ಜೀವನದ ಹಲವು ಸಂಗತಿಗಳನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರಂತೆ ನಿರ್ದೇಶಕರು.

  • ಭವಿಷ್ಯದಲ್ಲಿ ಅರ್ಜುನ್ ಕಪೂರ್‌ ಕೊನೆ ಬಾಯ್‌ ಫ್ರೆಂಡ್‌: ಮಲೈಕಾ ಅರೋರಾ

    ಭವಿಷ್ಯದಲ್ಲಿ ಅರ್ಜುನ್ ಕಪೂರ್‌ ಕೊನೆ ಬಾಯ್‌ ಫ್ರೆಂಡ್‌: ಮಲೈಕಾ ಅರೋರಾ

    ಬಿಟೌನ್ ಅಂಗಳದ ಅಚ್ಚು ಮೆಚ್ಚಿನ ಜೋಡಿಗಳಲ್ಲಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಕೂಡ ಒಬ್ಬರು. ಸಾಕಷ್ಟು ವರ್ಷಗಳಿಂದ ಲಿಪ್ ಇನ್ ರಿಲೇಷನ್ ಶಿಪ್‌ನಲ್ಲಿರೋ ಈ ಜೋಡಿ, ಭವಿಷ್ಯದಲ್ಲಿ ಒಟ್ಟಿಗೆ ಇರುವ ಆಲೋಚನೆ ಕುರಿತು ನಟಿ ಮಲೈಕಾ ಹೇಳಿಕೊಂಡಿದ್ದಾರೆ.

    ನಟಿ ಮಲೈಕಾ ಅರ್ಜುನ್ ಕಪೂರ್‌ಗಿಂತ ವಯಸ್ಸಿನಲ್ಲಿ ದೊಡ್ಡವರು, ಇವರ ಲವ್ವಿ ಡವ್ವಿ ನೋಡಿರೋ ನೆಟ್ಟಿಗರು ಅದೆಷ್ಟೋ ಬಾರಿ ಇವರಿಬ್ಬರದ್ದು ಟೈಮ್ ಪಾಸ್ ಲವ್ ಎಂದು ಹೇಳಿದ್ದು ಇದೆ. ಆದರೆ ಈಗ ಮಲೈಕಾ ತಮ್ಮ ಪ್ರೀತಿಯ ಜೀವನದ ಕುರಿತು ಮನಬಿಚ್ಚಿ ಸಂದರ್ಶನವೊಂದರಲ್ಲಿ ಮಾತಾನಾಡಿದ್ದಾರೆ.

    ಪ್ರತಿಯೊಂದು ರಿಲೇಶನ್‌ಶಿಷ್‌ನಲ್ಲಿಯೂ ತನ್ನದೇ ಆದ ರೀತಿ ನೀತಿಗಳಿರುತ್ತದೆ. ನಾವು ಒಟ್ಟಿಗೆ ಭವಿಷ್ಯವನ್ನು ಕಳೆಯುವ ವಿಚಾರ ನಮಗೆಷ್ಟೇ ತಿಳಿದಿರಬೇಕು ಎಂದು ಇನಿಯನ ಜತೆ ಭವಿಷ್ಯವನ್ನು ಒಟ್ಟಿಗೆ ಕಳೆಯುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಇವರಿಬ್ಬರ ಬ್ರೇಕ್ ಅಪ್ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಮಲೈಕಾರ ಈ ಮಾತು ಬ್ರೇಕ್ ಅಪ್ ಕಥೆಗೂ ಅಂತ್ಯ ಹಾಡಿದೆ.

    ನಾವು ಬಹಳಷ್ಟು ವಿಷಯಗಳನ್ನು ಒಟ್ಟಿಗೆ ಚರ್ಚಿಸುತ್ತೇವೆ. ನಾವು ಒಂದೇ ರೀತಿಯ ಆಲೋಚನೆಯನ್ನು ಹೊಂದಿದ್ದೇವೆ ಮತ್ತು ಒಬ್ಬರನೊಬ್ಬರು ತುಂಬಾ ಇಷ್ಟಪಡುತ್ತೇವೆ. ನಾವು ಭವಿಷ್ಯದಲ್ಲಿ ಒಟ್ಟಿಗೆ ಇರಲು ಬಯಸುತ್ತೇವೆ. ಸಂಬಂಧದಲ್ಲಿ ಯಾವಾಗೂ ನಾವು ಸೇಫ್ ಮತ್ತು ಪಾಸಿಟಿವ್ ಎಂಬ ಭಾವನೆ ಇರಬೇಕು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

     

    View this post on Instagram

     

    A post shared by Malaika Arora (@malaikaaroraofficial)

    ಕಾರ್ ಆಕ್ಸಿಡೆಂಟ್‌ನಿಂದ ಚೇತರಿಕೊಂಡಿರುವ ಮಲೈಕಾ, ಅರ್ಜುನ್ ಕಪೂರ್ ಜತೆಗಿನ ರಿಲೇಷನ್‌ಶಿಪ್ ಬಗ್ಗೆ ಮುಕ್ತವಾಗಿ ಮಾತಾನಾಡಿದ್ದಾರೆ. ಮಲೈಕಾ ಮತ್ತು ಅರ್ಜುನ್ ಕಪೂರ್ ಜತೆಗಿನ ರಿಲೇಷನ್‌ಶಿಷ್ ದೃಢಿಕರಿಸಿದ ನಂತರ ವಯಸ್ಸಿನ ಅಂತರದ ವಿಚಾರವಾಗಿ ಇವರಿಬ್ಬರು ಟ್ರೋಲ್ ಆಗಿದ್ದರು. ಇವು ಯಾವುದರ ಕುರಿತು ತಲೆಕೆಡೆಸಿಕೊಳ್ಳದೇ ಭವಿಷ್ಯದಲ್ಲಿ ಒಟ್ಟಿಗೆ ಇರುವ ಆಲೋಚನೆ ಕುರಿತು ನಟಿ ಮಲೈಕಾ ಮನಬಿಚ್ಚಿ ಮಾತಾನಾಡಿದ್ದಾರೆ.

  • ಲವ್ ಬರ್ಡ್ಸ್ ಪಂಜರದಲ್ಲಿ ನಾಗರಹಾವು

    ಲವ್ ಬರ್ಡ್ಸ್ ಪಂಜರದಲ್ಲಿ ನಾಗರಹಾವು

    ಮೈಸೂರು: ಲವ್ ಬರ್ಡ್ಸ್ ಪಂಜರದೊಳಕ್ಕೆ ನಾಗರಹಾವು ನುಗ್ಗಿ ಎರಡು ಪಕ್ಷಿಗಳನ್ನು ತಿಂದ ಘಟನೆ ಮೈಸೂರು ಹೊರವಲಯದ ರೂಪನಗರದಲ್ಲಿ ನಡೆದಿದೆ.

    ಜಯಪ್ರಕಾಶ್ ಮನೆಯಲ್ಲಿ ಪಂಜರದೊಳಗಿದ್ದ ಎರಡು ಲವ್ ಬರ್ಡ್ಸ್ ಗಳನ್ನು ತಿಂದು ತೇಗಿದ ನಾಗರಹಾವು ಉಳಿದ ಲವ್ ಪಕ್ಷಿಗಳನ್ನು ತಿನ್ನಲು ಪಂಜರದೊಳಗೆ ಅಡಗಿ ಕುಳಿತಿತ್ತು. ಈ ವೇಳೆ ಪಕ್ಷಿಗಳು ಭಯದಿಂದ ಪಂಜರದೊಳಗೆ ಚೀರಾಡಿಕೊಂಡು ಹಾರಾಡುತ್ತಿದ್ದವು.

    ಪಕ್ಷಿಗಳ ಅತಿಯಾದ ಚೀರಾಟ ಕೇಳಿ ಮನೆ ಮಂದಿ ಓಡಿ ಬಂದಿದ್ದಾರೆ. ಆಗ ಪಂಜರದಲ್ಲಿದ್ದ ನಾಗರಹಾವು ಕಂಡು ತಬ್ಬಿಬ್ಬಾಗಿದ್ದಾರೆ. ಕೂಡಲೇ ಮನೆಯವರು ಉರಗ ತಜ್ಞ ಸ್ನೇಕ್ ಶಾಮ್‍ಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಶ್ಯಾಂ ಪಂಜರದೊಳಗಿದ್ದ ನಾಗರಹಾವನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಆದರೆ ಪಂಜರದೊಳಗೆ ಸೇರಿಕೊಂಡು ಎರಡು ಲವ್ ಬರ್ಡ್ಸ್ ತಿಂದು ಹಾಕಿರುವುದರಿಂದ ಮನೆಯವರು ಬೇಸರ ವ್ಯಕ್ತಪಡಿಸಿದ್ದಾರೆ.

  • ವ್ಯಾಲೆಂಟೈನ್ಸ್ ಡೇ ದಿನ ಪ್ರೇಮಿಗಳಿಗಾಗಿ ಬಂತು ಲವ್ ಬರ್ಡ್ಸ್

    ವ್ಯಾಲೆಂಟೈನ್ಸ್ ಡೇ ದಿನ ಪ್ರೇಮಿಗಳಿಗಾಗಿ ಬಂತು ಲವ್ ಬರ್ಡ್ಸ್

    ಬೆಂಗಳೂರು: ಫೆಬ್ರವರಿ ತಿಂಗಳನ್ನು ಪ್ರೀತಿಯ ಮಾಸ ಎಂದು ಕರೆಯುತ್ತಾರೆ. ಮನಸ್ಸಲ್ಲಿ ಬಚ್ಚಿಟ್ಟ ಪ್ರೀತಿಯನ್ನು ಹೇಳಿಕೊಳ್ಳುವ ಇರುವ ಸಮಯ ಇದಾಗಿದೆ. ನನ್ನ ಹುಡುಗಿಗೆ ಏನ್ ಗಿಫ್ಟ್ ಕೊಡಲಿ ಎಂದು ಹುಡುಗರು ಫುಲ್ ಕನ್ಫ್ಯೂಸ್ ಆಗಿದ್ದರೆ, ಇತ್ತ ಹುಡುಗಿಯರು ಕ್ಯಾಂಡಲ್ ಲೈಟ್ ಡಿನ್ನರ್ ಗೆ ಬಂಕ್ ಆಗಿ ರೆಡಿಯಾಗಬೇಕು ಎಂದು ಭರ್ಜರಿ ಶಾಪಿಂಗ್ ನಡೆಸಿದ್ದಾರೆ.

    ಈಗ ಲವ್ ಬರ್ಡ್ಸ್ ಕೊಟ್ಟು ಪ್ರಪೋಸ್ ಮಾಡುವುದು ಹೊಸ ಟ್ರೇಂಡ್ ಆಗಿದೆ. ಹೀಗಾಗಿ ಮಾರ್ಕೆಟ್ ನಲ್ಲಿ ಕಲರ್ ಕಲರ್ ಜೋಡಿ ಹಕ್ಕಿಗಳು ಎಂಟ್ರಿ ಕೊಟ್ಟಿದ್ದು, ಪ್ರೇಮಚಿತ್ತಾರ ಮೂಡಿಸಿವೆ. ಇವುಗಳನ್ನೇ ನೀವು ಎಂದುಕೊಂಡು ನಿಮ್ಮ ಪ್ರಿಯತಮ ಅಥವಾ ಪ್ರಿಯತಮೆ ಮುದ್ದಾಡುತ್ತಾರೆ.

    ಇವುಗಳ ಜೊತೆಗೆ ಕಪಲ್ ಶೋ ಪೀಸ್, ಪೇರ್ ಲವ್ ಕೋಟ್ಸ್ ಮಗ್, ಸ್ಕ್ರಾಪ್ ಅಲ್ಬಂಗಳಿಗೂ ಲವರ್ಸ್ ಮುಗಿಬಿದ್ದು ಕೊಳ್ಳುತ್ತಿದ್ದಾರೆ. ಪ್ರಣಯದ ಸಂಕೇತವಾದ ದಿಂಬಿನ ಮೇಲೆ ಲವ್ ಕೋಟ್ಸ್ ಗಳನ್ನು ಬರೆಯಲಾಗಿದೆ. ಸ್ಪೆಷಲ್ ಆಗಿ ಗೊಂಬೆಗಳ ಗ್ರೀಟಿಂಗ್ಸ್ ಗಳಲ್ಲಿ ಪ್ರೇಮ ಪತ್ರ ಮೂಡಿದೆ.

    ಪೋರಟಿಂಥ್‍ಗೆ ಕ್ಯಾಂಡಲ್ ಲೈಟ್ ಡಿನ್ನರ್ ಫಿಕ್ಸ್ ಆಗಿದೆ. ಆ ದಿನ ನಾನು ಬಬ್ಲಿಯಾಗಿ ಕಾಣುವ ಡ್ರೆಸ್ ಹಾಕಬೇಕು ಎಂದು ಹುಡುಗಿಯರು ಫುಲ್ ಶಾಪಿಂಗ್ ಮಾಡುತ್ತಿದ್ದಾರೆ. ಕೆಲ ಹುಡುಗಿಯರು ನಾನು ಧರಿಸುವ ರೆಡ್ ಡ್ರೆಸ್ ನೋಡಿ, ನಮ್ಮ ಹುಡುಗ ಕ್ಲೀನ್ ಬೋಲ್ಡ್ ಆಗಬೇಕು ಎಂದು ಫುಲ್ ಪ್ರಿಪರೇಷನ್ ನಡೆಸಿದ್ದಾರೆ. ಅದಕ್ಕೆ ತಕ್ಕಂತೆ ಮಾರ್ಕೆಟ್‍ನಲ್ಲಿ ಕೆಂಪು ಬಣ್ಣದ ಡ್ರೆಸ್ ಗಳು ಹವಾ ಎಬ್ಬಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv