Tag: love affair

  • ಪ್ರೇಯಸಿಯ ಒತ್ತಡಕ್ಕೆ ಮಣಿದು ಪತ್ನಿಯನ್ನೇ ಹತ್ಯೆಗೈದ ಬಿಜೆಪಿ ನಾಯಕ

    ಪ್ರೇಯಸಿಯ ಒತ್ತಡಕ್ಕೆ ಮಣಿದು ಪತ್ನಿಯನ್ನೇ ಹತ್ಯೆಗೈದ ಬಿಜೆಪಿ ನಾಯಕ

    ಜೈಪುರ: ಇಲ್ಲಿನ ಬಿಜೆಪಿ ನಾಯಕನೊಬ್ಬ ಪ್ರೇಯಸಿಯ ಒತ್ತಡಕ್ಕೆ ಮಣಿದು ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ರಾಜಸ್ಥಾನದ (Rajastan) ಅಜ್ಮೀರ್‌ನಲ್ಲಿ ನಡೆದಿದೆ.

    ಪತಿ ರೋಹಿತ್ ಸೈನಿ, ಆತನ ಪ್ರೇಯಸಿ (Lover) ರಿತು ಬಂಧಿತ ಆರೋಪಿಗಳು. ಆ.10ರಂದು ರೋಹಿತ್ ಸೈನಿ ಪತ್ನಿ ಸಂಜು ಸೈನಿ ಅನುಮಾನಾಸ್ಪವಾಗಿ ಶವವಾಗಿ ಪತ್ತೆಯಾಗಿದ್ದರು. ಇದನ್ನೂ ಓದಿ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಡಿಕ್ಕಿ – ರಾಯರ ದರ್ಶನ ಪಡೆದು ವಾಪಸ್ಸಾಗ್ತಿದ್ದ ಇಬ್ಬರು ಸಾವು

    ಮೊದಲಿಗೆ ಆರೋಪಿ ರೋಹಿತ್, ದರೋಡೆಕೋರರು ಮನೆಗೆ ನುಗ್ಗಿ ತನ್ನ ಪತ್ನಿಯನ್ನು ಕೊಂದು ಬೆಲೆಬಾಳುವ ವಸ್ತುಗಳೊಂದಿಗೆ ದೋಚಿ ಪರಾರಿಯಾಗಿದ್ದಾರೆ ಕಥೆ ಕಟ್ಟಿದ್ದ. ಆರೋಪಿಯ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಕೊಲೆಯ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೇರೆ ಯುವತಿಯೊಂದಿಗೆ ಪತಿ ಲವ್ವಿಡವ್ವಿ – ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿಗೆ ಪತ್ನಿ ಆತ್ಮಹತ್ಯೆ

    ಆರೋಪಿ ರೋಹಿತ್ ಮದುವೆಯಾಗಿದ್ದರೂ ರಿತು ಎಂಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಇವರಿಬ್ಬರ ಸಂಬಂಧಕ್ಕೆ ಪತ್ನಿ ಸಂಜು ಅಡ್ಡಿಯಾಗಿದ್ದಳು. ಹೀಗಾಗಿ ಪ್ರೇಯಸಿ ರಿತು ನಿನ್ನ ಪತ್ನಿ ಸಂಜುವನ್ನು ನಮ್ಮ ದಾರಿಯಿಂದ ತೆಗೆದು ಹಾಕು ಎಂದಿದ್ದಳು.

    ಪ್ರೇಯಸಿಯ ಒತ್ತಡಕ್ಕೆ ಮಣಿದು ರೋಹಿತ್, ಪತ್ನಿಯನ್ನೇ ಹತ್ಯೆಗೈದಿದ್ದ. ಬಳಿಕ ದರೋಡೆಕೋರರು ಮನೆಗೆ ನುಗ್ಗಿ ಚಿನ್ನಾಭರಣ ದೋಚಿ, ಪತ್ನಿಯನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿ ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸಿದ್ದರು.

    ಆರೋಪಿ ರೋಹಿತ್‌ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಕೊಲೆ ರಹಸ್ಯವನ್ನು ಬಾಯಿಬಿಟ್ಟಿದ್ದಾನೆ. ಇದೀಗ ಪೊಲೀಸರು ಆರೋಪಿ ರೋಹಿತ್ ಸೈನಿ ಹಾಗೂ ಆತನ ಪ್ರೇಯಸಿ ರಿತುಳನ್ನು ಬಂಧಿಸಿದ್ದಾರೆ.

  • ಮಗಳ ಕತ್ತು ಸೀಳಿ ಹತ್ಯೆಗೈದ ಪಾಪಿ ತಂದೆ

    ಮಗಳ ಕತ್ತು ಸೀಳಿ ಹತ್ಯೆಗೈದ ಪಾಪಿ ತಂದೆ

    ಲಕ್ನೋ: ಪಾಪಿ ತಂದೆಯೊಬ್ಬ ಮಗಳ ಪ್ರೇಮ ಸಂಬಂಧಕ್ಕೆ ಕೋಪಗೊಂಡು ಯುವತಿಯ ಕತ್ತು ಸೀಳಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ.

    ಜ್ಯೋತಿ (18) ಕೊಲೆಗಿಡಾದ ಯುವತಿ. ಆರೋಪಿ ವಿಜಯ್, ಗುರ್ಬಕ್ಷ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುರ್ಮಿಯಮಾವು ಗ್ರಾಮದಲ್ಲಿ ವಾಸಿಸುತ್ತಿದ್ದನು. ಆರೋಪಿ ಕೂಲಿ ಕೆಲಸ ಮಾಡುತ್ತಿದ್ದು, ತನ್ನ ಮನೆಯಲ್ಲಿಯೇ ಅಂಗಡಿಯೊಂದನ್ನು ನಡೆಸುತ್ತಿದ್ದನು. ಇದನ್ನೂ ಓದಿ: ಮಗಳನ್ನೇ ಅತ್ಯಾಚಾರ ಮಾಡುವ ಶಿಕ್ಷಕನಿಗೆ ಪತ್ನಿಯೂ ಸಾಥ್

    ಅವನ ಅಂಗಡಿಗೆ ಧಮೇಂದ್ರ ಎಂಬಾತ ನಿರಂತರವಾಗಿ ಭೇಟಿ ನೀಡುತ್ತಿದ್ದು, ಜ್ಯೋತಿಯೊಂದಿಗೆ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದನು. ಇದರಿಂದ ಕೋಪಗೊಂಡ ವಿಜಯ್ ತನ್ನ ಮಗಳನ್ನು ಗ್ರಾಮದ ಹೊರಗಿನ ಹೊಲದಲ್ಲಿ ಶೌಚಕ್ಕೆ ಹೋಗಿದ್ದ ವೇಳೆ ಚಾಕುವಿನಿಂದ ಕತ್ತು ಸೀಳಿ ಕೊಂದಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿ ದೇಶದ್ರೋಹಿ ಶಕ್ತಿ ಇನ್ನೂ ಜೀವಂತ ಅನ್ನೋದಕ್ಕೆ ಛೋಟಾ ಪಾಕಿಸ್ತಾನ ಘೋಷಣೆಯೇ ಸಾಕ್ಷಿ: ಮುತಾಲಿಕ್

    ಘಟನೆ ಕುರಿತು ಆರೋಪಿಯನ್ನು ಬಂಧಿಸಲಾಗಿದ್ದು, ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಶ್ವಜೀತ್ ಶ್ರೀವಾಸ್ತವ ತಿಳಿಸಿದ್ದಾರೆ.

  • ಅತ್ತಿಗೆಯನ್ನ ಹೆಂಡ್ತಿಯಾಗಿ ಇಟ್ಕೊಂಡ-ತಮ್ಮನ ಎದೆಗೆ ಬಾಣ ಬಿಟ್ಟು ಕೊಂದ ಅಣ್ಣ

    ಅತ್ತಿಗೆಯನ್ನ ಹೆಂಡ್ತಿಯಾಗಿ ಇಟ್ಕೊಂಡ-ತಮ್ಮನ ಎದೆಗೆ ಬಾಣ ಬಿಟ್ಟು ಕೊಂದ ಅಣ್ಣ

    – ಕೊಲೆಯ ಬಳಿಕ ಪೊಲೀಸರಿಗೆ ಶರಣು
    – ಪತಿಗೆ ಮೋಸ ಮಾಡಿ ಮೈದುನನ ಜೊತೆ ಕಳ್ಳ ಸಂಬಂಧ

    ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಪ್ರೀತಿಸುತ್ತಿದ್ದ ಸಹೋದರ (ಚಿಕ್ಕಪ್ಪನ ಮಗ) ನನ್ನು ಬಾಣದ ಮೂಲಕ ಕೊಲೆ ಮಾಡಿರುವ ಘಟನೆ ಓಡಿಶಾದಲ್ಲಿ ನಡೆದಿದೆ.

    ಈ ಘಟನೆ ಒಡಿಶಾದ ಕಿಯೊಂಜ್ಹಾರ ಜಿಲ್ಲೆಯ ಟೆಲ್ಕೊಯಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಜಿತು ಮುಂಡಾ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ನಂತರ ಆರೋಪಿ ಶಂಕರ್ ಪೊಲೀಸರಿಗೆ ಶರಣಾಗಿದ್ದಾನೆ.

    ಏನಿದು ಪ್ರಕರಣ?
    ಶಂಕರ್ ಮುಂಡಾ ಸಂಬಂಧದಲ್ಲಿ ಮೃತ ಜಿತುಗೆ ಸಹೋದರ ಆಗಬೇಕು. ಆದರೆ ಮೃತ ಜಿತು ತನ್ನ ಸಹೋದರ ಶಂಕರ್ ಪತ್ನಿ ಅಂದರೆ ಅತ್ತಿಗೆಯನ್ನು ಪ್ರೀತಿಸುತ್ತಿದ್ದನು. ಅಲ್ಲದೇ ಆಕೆಯ ಜೊತೆ ಅನೈತಿಕ ಸಂಬಂಧ ಕೂಡ ಇಟ್ಟುಕೊಂಡಿದ್ದನು. ಈ ವಿಚಾರ ಶಂಕರ್‌ಗೆ ಗೊತ್ತಾಗಿದೆ. ಬಳಿಕ ಶಂಕರ್ ಮತ್ತೆ ಈ ರೀತಿ ಮಾಡದಂತೆ ಜಿತುಗೆ ಎಚ್ಚರಿಕೆ ನೀಡಿದ್ದಾನೆ.

    ಎಚ್ಚರಿಕೆ ನೀಡಿದರೂ ಮೃತ ಜಿತು ಅತ್ತಿಗೆಯೊಂದಿಗೆ ಸಂಬಂಧವನ್ನು ಮುಂದುವರಿಸಿದ್ದನು. ಅಲ್ಲದೇ ಜಿತು 15 ದಿನಗಳ ಹಿಂದೆ ಅತ್ತಿಗೆಯನ್ನು ತನ್ನ ಹೆಂಡತಿಯಾಗಿ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. ಇದರಿಂದ ಕೋಪಗೊಂಡ ಶಂಕರ್ ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ.

    ಅದರಂತೆಯೇ ಶುಕ್ರವಾರ ಜಿತು, ಆರೋಪಿ ಶಂಕರ್ ಸಹೋದರಿಯ ಮಗನ ಜೊತೆಗೆ ಶಂಕರ್ ಮನೆಯ ಮುಂದೆ ಟ್ರ್ಯಾಕ್ಟರ್ ನಿಲ್ಲಿಸಲು ಹೋಗಿದ್ದಾನೆ. ಆಗ ಶಂಕರ್ ತನ್ನ ಬಿಲ್ಲು ಮತ್ತು ಬಾಣದಿಂದ ಜಿತುವಿನ ಎದೆಗೆ ಬಾಣ ಬಿಟ್ಟಿದ್ದಾನೆ. ಪರಿಣಾಮ ಜಿತು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಆರೋಪಿ ಶಂಕರ್ ಕೊಲೆ ಮಾಡಿದ ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.