Tag: love

  • ಕೆಟ್ಟ ಅಭಿರುಚಿಯ ಚಾಟಿಂಗ್, ವಿಡಿಯೋ ಮಾಡಿದ್ದ ಜೋಡಿ – ಹೈಕೋರ್ಟ್‌ನಲ್ಲಿ ಮಹಿಳೆಯ ರೇಪ್‌ ಕೇಸ್ ವಜಾ

    ಕೆಟ್ಟ ಅಭಿರುಚಿಯ ಚಾಟಿಂಗ್, ವಿಡಿಯೋ ಮಾಡಿದ್ದ ಜೋಡಿ – ಹೈಕೋರ್ಟ್‌ನಲ್ಲಿ ಮಹಿಳೆಯ ರೇಪ್‌ ಕೇಸ್ ವಜಾ

    -ನಿರಾಸೆಯಲ್ಲಿ ಸಂಬಂಧ ಅಂತ್ಯಗೊಂಡರೆ ರೇಪ್ ಅಲ್ಲ

    ಬೆಂಗಳೂರು: ಆರಂಭದಲ್ಲಿ ಪರಸ್ಪರ ಸಮ್ಮತಿ ಮೇರೆಗೆ ಇಬ್ಬರ ನಡುವೆ ಸಂಬಂಧ (Relationship) ಚೆನ್ನಾಗಿದ್ದು, ಕೊನೆಗೆ ಯಾವುದೇ ಕಾರಣಕ್ಕೆ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅದು ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka Highcourt) ಮಹತ್ವದ ತೀರ್ಪು ನೀಡಿದೆ.

    ಮಹಿಳೆಯೊಬ್ಬರು ಡೇಟಿಂಗ್ ಆಪ್‌ನಲ್ಲಿ ಪರಿಚಯವಾಗಿದ್ದ ಸಾಂಪ್ರಸ್ ಆಂಥೋಣಿ ಎಂಬಾತನ ಒಂದು ವರ್ಷಗಳ ಕಾಲ ಆತ್ಮಿಯವಾಗಿದ್ದರು. ಬಳಿಕ ಮಹಿಳೆ, ಸಾಂಪ್ರಸ್ ಆಂಥೋಣಿ ವಿರುದ್ಧ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಕೇಸಿನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ವಾಟ್ಸಪ್‌ನಲ್ಲಿ ಇಬ್ಬರು ಪರಸ್ಪರ ಚಾಟಿಂಗ್ ಮಾಡಿದ್ದು, ಹಾಗೇ ಫೋಟೋ, ವಿಡಿಯೋಗಳನ್ನೂ ವಿನಿಮಯ ಮಾಡಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಬಳಿಕ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ. ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಮಹಿಳೆ ಸಾಂಪ್ರಸ್ ಆಂಥೋಣಿ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿದೆ. ಇದನ್ನೂ ಓದಿ: 5 ವರ್ಷವೂ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಮಾತು ಮೊದಲ ಬಾರಿಗೆ ಬದಲಾಯ್ತು!

    ಇನ್‌ಸ್ಟಾಗ್ರಾಂನಲ್ಲಿ ಇಬ್ಬರು ಕೆಟ್ಟ ಅಭಿರುಚಿಯ ಚಾಟಿಂಗ್ ಮಾಡಿದ್ದರು. ಪರಸ್ಪರ ಫೋಟೋ, ವಿಡಿಯೋಗಳನ್ನೂ ವಿನಿಮಯ ಮಾಡಿಕೊಂಡಿದ್ದರು. ಆದ್ರೆ, ಆರೋಪ ಪಟ್ಟಿ ಸಲ್ಲಿಸಿದ್ದ ಪೊಲೀಸರು ಇನ್‌ಸ್ಟಾಗ್ರಾಂ ಚಾಟಿಂಗ್ ಪರಿಗಣಿಸಿರಲಿಲ್ಲ. ಇವುಗಳನ್ನು ಪರಿಶೀಲಿಸಿದರೆ ಮಹಿಳೆಯ ದೂರು ಸುಳ್ಳೆಂದು ಸಾಬೀತಾಗಿದೆ. ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ:  ಕರೂರಿನಲ್ಲಿ ಭೇಟಿಯಾಗದ್ದಕ್ಕೆ ಕ್ಷಮಿಸಿ – ಮೃತರ ಕುಟುಂಬಸ್ಥರನ್ನ ಭೇಟಿಯಾಗಿ 7.8 ಕೋಟಿ ಪರಿಹಾರ ವಿತರಿಸಿದ ವಿಜಯ್

  • ಪ್ರೀತಿಸುವಂತೆ ಫ್ಯಾಷನ್ ಡಿಸೈನರ್‌ಗೆ ಕಿರುಕುಳ – ಇವಿಪಿ ಫಿಲ್ಮ್ ಸಿಟಿ ಮಾಲೀಕನ ವಿರುದ್ಧ ಎಫ್‍ಐಆರ್

    ಪ್ರೀತಿಸುವಂತೆ ಫ್ಯಾಷನ್ ಡಿಸೈನರ್‌ಗೆ ಕಿರುಕುಳ – ಇವಿಪಿ ಫಿಲ್ಮ್ ಸಿಟಿ ಮಾಲೀಕನ ವಿರುದ್ಧ ಎಫ್‍ಐಆರ್

    ಬೆಂಗಳೂರು: ನಗರದ ಫ್ಯಾಷನ್ ಡಿಸೈನರ್ (Fashion Designer) ಒಬ್ಬರಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ತಮಿಳುನಾಡಿನ ಇವಿಪಿ ಫಿಲ್ಮ್‌ ಸಿಟಿ (EVP Film City) ಮಾಲೀಕ ಸಂತೋಷ್ ರೆಡ್ಡಿ ವಿರುದ್ಧ ವೈಯಾಲಿಕಾವಲ್ (Vyalikaval) ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಪ್ರೀತಿ (Love) ನಿರಕಾರಣೆ ಮಾಡಿದ್ದಕ್ಕೆ ಸಂತೋಷ್ ರೆಡ್ಡಿ ಫ್ಯಾಷನ್ ಡಿಸೈನರ್ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಫ್ಯಾಷನ್ ಡಿಸೈನರ್ ಪೊಲೀಸರಿಗೆ ದೂರು ನೀಡಿದ್ದಾರೆ.

    ಸಂತೋಷ್ ರೆಡ್ಡಿ ತನ್ನ ಕಸೀನ್ ಮದ್ವೆಗೆ ಬಟ್ಟೆ ಬೇಕು ಎಂದು ಫ್ಯಾಷನ್ ಡಿಸೈನರ್‌ನ್ನು ಸಂಪರ್ಕಿಸಿದ್ದರಂತೆ. ಮಗಳು ಭಾವನ್ಯ ರೆಡ್ಡಿಯಿಂದ ಫ್ಯಾಷನ್ ಡಿಸೈನರ್ ಸಂಪರ್ಕ ಮಾಡಿದ್ದನಂತೆ. ಪರಿಚಯ ಸ್ನೇಹಕ್ಕೆ ತಿರುಗಿ, ಫ್ಯಾಮಿಲಿ ಫ್ರೆಂಡ್‍ನಂತೆ ಇದ್ದನಂತೆ. ನಂತರ ನಿಮ್ಮ ಬ್ಯುಸಿನೆಸ್‍ಗೆ ಹೂಡಿಕೆ ಮಾಡ್ತಿನಿ ಎಂದಿದ್ದ. ಅಲ್ಲದೇ ತನ್ನ ಮಗಳು ಭಾವನ್ಯ ರೆಡ್ಡಿಗೆ ಗಂಡು ಇದ್ದರೆ ನೋಡಿ ಎಂದು ಸಂತ್ರಸ್ತೆಗೆ ಇನ್ನಷ್ಟು ಹತ್ತಿರವಾಗಿದ್ದ ಎನ್ನಲಾಗಿದೆ.

    ಒಂದು ದಿನ ತನ್ನ ಮಗಳು ನನ್ನ ಜೊತೆ ಮಾತನಾಡುತ್ತಿಲ್ಲ ಎಂದು ಮಹಿಳೆ ಇದ್ದ ಬೆಂಗಳೂರಿನ ನಿವಾಸಕ್ಕೆ ಬಂದಿದ್ದ. ನನಗೆ ನಿಮ್ಮ ಸಹಾಯಬೇಕು ಎಂದು ಭಾವನಾತ್ಮಕವಾಗಿ ಮಾತಾಡಿದ್ದ. ಈ ವೇಳೆ ಫ್ಯಾಷನ್ ಡಿಸೈನರ್ ಸಮಾಧಾನ ಮಾಡಿದ್ದರಂತೆ. ಆಗ ಏಕಾಏಕಿ ನಿನ್ನನ್ನ ಪ್ರೀತಿ ಮಾಡ್ತಿನಿ, ನೀನು ಕೂಡ ಪ್ರೀತಿಸ್ಲೇಬೇಕು ಎಂದು ಗೋಗರೆದಿದ್ದನಂತೆ. ಇದನ್ನ ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದನಂತೆ.

    ನೀನು ಲವ್ ಮಾಡಿಲ್ಲ ಅಂದ್ರೆ ನಿನ್ನಿಬ್ಬರು ಮಕ್ಕಳನ್ನ ಕೊಂದು ನಿನ್ನನ್ನೂ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಏಯ್‌ ಹುಡುಗ.. ನನಗೆಲ್ಲ ಗೊತ್ತು ಕಣೋ..!

    ಏಯ್‌ ಹುಡುಗ.. ನನಗೆಲ್ಲ ಗೊತ್ತು ಕಣೋ..!

    ಹಾಯ್‌ ತೇಜಸ್ವಿ..
    ನಿನ್ನ ಡಬ್ಬ ಲೆಟರ್‌ ಥರ ನಾನು ಸೌಖ್ಯ.. ನೀ ಸೌಖ್ಯಾನಾ? ಚಿನ್ನ, ಬಂಗಾರ ಅಂತೆಲ್ಲ ಬರಿಯಲ್ಲ ತೇಜಸ್ವಿ ನಾನು.. ನಿನ್ನಷ್ಟೆಲ್ಲ ಮಾತಾಡೋಕಾಗಲಿ, ಬರೆಯೋಕಾಗಲಿ ನನಗೆ ಬರಲ್ಲ ಹಾಗೇ ಸುಮ್ನೆ ಬರಿತಿದಿನಿ.. ಇದನ್ನೇ ಓದಿ ಖುಷಿ ಪಡು, ಅಷ್ಟೇ!

    ನೀನು ಕಳೆದ ವಾರ ಬರೆದ ಕತೆನೆಲ್ಲ ಓದಿದೆ. ʻನನಗೆಲ್ಲ ಗೊತ್ತು ತೇಜಸ್ವಿ..!ʼ ನೀನು ಅವತ್ತು ಬಸ್‌ಲ್ಲಿ ನನ್ನ ಪಕ್ಕದಲ್ಲೇ ಕೂರಬೇಕು ಅಂತ ಬಂದೆ, ಆದ್ರೆ ಹಿಂದಿನ ಸೀಟ್‌ಗೆ ಹೋದೆ..! ಮಾಸ್ಕ್‌ ನೀನು ಮುಖಕ್ಕೆ ಮಾತ್ರ ಹಾಕಿದ್ದು ತೇಜಸ್ವಿ.. ನಿನ್ನ ಹೃದಯಕ್ಕಲ್ಲ… ಅಥವಾ ನನ್ನ ಹೃದಯ (Heart) ಅಷ್ಟೊಂದು ಕುರುಡಾ? ಅದಕ್ಕೆಲ್ಲ ಗೊತ್ತಾಗತ್ತೆ ಕಣೋ..! ಇದನ್ನೂ ಓದಿ: ಪ್ರೇಮ ನೌಕೆಯ ಕಿಟಕಿ ಅಂಚಲ್ಲಿ ಸಿಕ್ಕ ಕಾಡು ಮಲ್ಲಿಗೆ ಹೂ!

    ಎಷ್ಟೊಂದು ಸಲೀಸಾಗಿ ʻನನಗೆ ಮಾತ್ರ ನೀನು ಇರೋದ್‌ ಯಾಕೆ ಗೊತ್ತಾಯ್ತೋ? ನಿನಗೂ ಗೊತ್ತಾಗಬೇಕಿತ್ತು ಅಂತ ಬರೆದಿದಿಯಾ. ನೀನಾಗೇ ಮಾತಾಡಿಸ್ತೀಯ ಅಂತ ತುಂಬಾ ಕಾದೆ. ನೀನು ರಮ್ಯಾನ ಜೊತೆ ಫೇಕ್‌ ಕಾಲಲ್ಲಿ ಮಾತಾಡ್ವಾಗ, ಅವಳು ನನ್ನ ಜೊತೆ ಚಾಟ್‌ ಮಾಡ್ತಾನೇ ಇದ್ಲು..! ತೇಜಸ್ವಿ ಜೊತೆ ಕಾಲ್‌ಲ್ಲಿ ಇದಿಯಾ ಕೇಳ್ದೇ.. ಇಲ್ಲ ಅಂದ್ಲು.. ನನಗೆ ಅನುಮಾನ ಬಗೆಹರಿಯದೇ, ಅವಳಿಗೆ ಕಾಲ್‌ ಮಾಡ್ದೇ, ರಿಂಗ್‌ ಆಯ್ತು..! ಅವಾಗ್ಲೇ ಗೊತ್ತಾಯ್ತು.. ನೀನು ನೋಡಿದ್ರೆ ನನಗೆ ಕೇಳಲಿ ಅಂತ ಜೋರ್‌ ಜೋರಾಗಿ ಅವಳ ಹೇಸರು ಹೇಳಿ ಮಾತಾಡ್ತಿದ್ದೆ.. ಜೋರ್‌ ನಗು ಬಂತು ಕಣೋ…

    ಮನಸ್ಸು ಎಲ್ಲೇ ಹೋದ್ರೂ ನಿನ್ನನ್ನೇ ಹುಡುಕುತ್ತೆ… ನಿನ್ನ ಮುಖ, ಧ್ವನಿಯನ್ನೇ ಹುಡುಕತ್ತೆ… ಸಾವಿರಾರು ಜನರ ಮಧ್ಯೆ ನೀನು ಇದ್ರೂ ನನಗೆ ಗೊತ್ತಾಗತ್ತೆ ತೇಜಸ್ವಿ.. ಹಾಗಿದ್ದಾಗ ಆ ಪುಟ್ಟ ಬಸ್‌ಲ್ಲಿ ನೀನು ಬಂದು ಕೂತಿದ್ದು ಗೊತ್ತಾಗಲ್ವೇನೋ ಪಾಪಚ್ಚಿ! ನೀನೆಷ್ಟು ಮುಗ್ಧ..

    ಪತ್ರದಲ್ಲಿದ್ದ ಆಸೆಗಳಿಗೆಲ್ಲ ಸ್ವಾಗತ ಅಂತ ಹೇಳ್ಬಿಡ್ಲಾ… ನಿನ್ನ ಇನ್ನೂ ಸತಾಯಿಸ್ಲಾ ಗೊತ್ತಾಗ್ತಿಲ್ಲ. ನಿನ್ನ ಕೋಲುದ್ದದ ಕೈಗಳಲ್ಲಿ ನನ್ನ ಮನಸ್ಸನ್ನ ತಬ್ಬಬೇಕು… ಮನದಲ್ಲಿ ಜಾರಿ ಇಳಿಬಿಟ್ಟ ಜಡೆಗೆ ಮಲ್ಲಿಗೆಯನ್ನೂ ಮುಡಿಸಬೇಕು..! ʻಕಾಡುʼ ಮಲ್ಲಿಗೆ.. (Kaadu Mallige) ಸದಾ ಕಾಡಬೇಕು..! ನನ್ನ ಘಮಕ್ಕಿಂತಲೂ ನಿನ್ನ ಪ್ರೇಮದ ಘಮ ಅದರಲ್ಲಿ ಬೆರೆತಿರಬೇಕು. ನನಗೂ ಇದೇ ಆಸೆ ತೇಜಸ್ವಿ..

    ಈ ಥರ ಪ್ರೇಮ (Love), ಸಿನಿಮಾ, ಕತೆ, ಕವಿತೆ (Poems) ಕಾದಂಬರಿಗಳಲ್ಲಿ ಮಾತ್ರ ಆಗೋದು ಅಂತ ಅನ್ಸೋದು. ಅದನ್ನೆಲ್ಲ ನೀನು ಸುಳ್ಳು ಮಾಡ್ಬಿಟ್ಟೆ .. ʻಊಹಿಸಿರಲಿಲ್ಲ ನಿನ್ನ ನೋಡುವ ತನಕ, ಒಂದು ಭಾವನೆ ಇಷ್ಟು ತೀವ್ರವೆಂದುʼ ಈ ಹಾಡು ನಿನ್ನ ಸಲುವಾಗಿಯೇ ನನಗೆ ಎಷ್ಟೊಂದು ಕಾಡಿತ್ತು ಗೊತ್ತಾ? ಎಷ್ಟೊಂದು ಸುಂದರವಾದ ಭಾವನೆಗಳು… ಮದುರವಾದ ನೆನಪು.. ನೋವು, ಖುಷಿ… ಲವ್‌ ಯು ಕಣೋ!

    ತೇಜಸ್ವಿ ನಾಳೆ ನಾವು ಒಂದಾಗ್ತಿವೋ ಇಲ್ವೋ ಗೊತ್ತಿಲ್ಲ… ಆದ್ರೆ ನನ್ನ ಪ್ರೀತಿ ನಿನ್ನ ಮೇಲೆ ಸದಾ ಇರುತ್ತೆ… ನಿನಗೂ 100% ಇರುತ್ತೆ ಅಂದ್ಕೊಳ್ತೀನಿ.. ಇಷ್ಟಾದ್ರೂ ಈ ಅನುಮಾನ ಯಾಕೆ ಗೊತ್ತಾ..? ಮೊದಲನೇ ನೋಟದಲ್ಲಿ ಕಳೆದು ಹೋದಾಗ, ಪ್ರೇಮಕ್ಕೆ ಸೆರೆ ಸಿಕ್ಕಾಗ ಇಲ್ಲದ ಅದೆಷ್ಟೋ ಸರಪಳಿಗಳು ನಮ್ಮ ಸುತ್ತ ಇದಾವೆ. ಜಾತಿ.. ಧರ್ಮ.. ದುಡ್ಡು… ಕುಟುಂಬ ಇದೆಲ್ಲ ನಮ್ಮ ಪ್ರೀತಿಲಿ ನಾಳೆ ಕೋಲಾಹಲನೇ ಮಾಡ್ಬಹುದಲ್ವಾ? ನಾನಂತೂ ನಿನಗೆ ಸಿಕ್ಕೇ ಬಿಡ್ತೀನಿ ಅಂತ ಭರವಸೆ ಕೊಡಲ್ಲ… ಪ್ರೀತಿ… ಪ್ರೀತಿ ಅಷ್ಟೇ… ಅದನ್ನ ಮಾತ್ರ ಪ್ರಮಾಣಿಕವಾಗಿ ಮಾಡ್ತೀನಿ..!! ಇದನ್ನೂ ಓದಿ: ಅವಳ ಮೂಗಿನ ತುದಿ ಕೋಪ ನಂಗಿಷ್ಟ!

  • ಪ್ರೇಮ ನೌಕೆಯ ಕಿಟಕಿ ಅಂಚಲ್ಲಿ ಸಿಕ್ಕ ಕಾಡು ಮಲ್ಲಿಗೆ ಹೂ!

    ಪ್ರೇಮ ನೌಕೆಯ ಕಿಟಕಿ ಅಂಚಲ್ಲಿ ಸಿಕ್ಕ ಕಾಡು ಮಲ್ಲಿಗೆ ಹೂ!

    ಚೆನ್ನಾಗಿದಿಯಾ ಬಂಗಾರ… ನಾನಂತ್ರೂ ಸೂಪರ್‌ ಆಗಿದಿನಿ.. ಇವತ್ತು ನಮ್ಮ ಲವ್‌ (Love) ಜರ್ನಿ ಬಗ್ಗೆ ನಿನಗೆ ಗೊತ್ತಿಲ್ದೇ ಇರೋ ಒಂದು ವಿಚಾರ ಹೇಳ್ಬೇಕು ಅನ್ನಿಸ್ತು..! ಅದ್ಕೆ ಒಂದ್‌ ಲೆಟರ್‌ ಹಾಕೋಣ ಅಂತ. ನೀನು ಇದನ್ನ ಓದಿ ವಾಪಸ್‌ ಬರಿಬೇಕು ಮತ್ತೆ, ಸರಿ ವಿಷಯಕ್ಕೆ ಬರ್ತಿನಿ..

    ವಿಭಾ ಅವತ್ತು ನೆನಪಿದಿಯಾ ನಿನಗೆ? ಮಂಗಳೂರಿಂದ (Mangaluru) ನಾನು ಸಾಗರಕ್ಕೆ ಹೊರಟಿದ್ದೆ. ಅದೇ ಬಸ್‌ಲ್ಲಿ ನೀನು ಇದ್ದೆ… ನಿನ್ನ ಪಕ್ಕದಲ್ಲಿ ಸೀಟ್‌ ಖಾಲಿ ಇದ್ರೂ ನಾನು ಕೂತ್ಕೊಳ್ಳದೇ.. ನಿನ್ನನ್ನ ಮಾತಾಡಿಸದೇ ಹಿಂದಿನ ಸೀಟಲ್ಲಿ ಕೂತಿದ್ದೆ. ಆಗಲೂ ತುಂಬಾ ಪ್ರಯತ್ನಪಟ್ಟೆ ನೀನು ತಿರುಗಿ ತೇಜಸ್ವಿ ಅಂತ ನನ್ನ ಮಾತಾಡಿಸ್ತಿಯೇನೋ ಅಂತ.. ! ಇದೆಲ್ಲ ಆಗಿ ಸುಮಾರು ಐದಾರು ವರ್ಷ ಆಯ್ತು.. ಈ ವಿಷಯ ಯಾವತ್ತೂ ಚರ್ಚೆಗೆ ಬರಲೇ ಇಲ್ಲ. ಈಗ ಯಾಕೆ ಆ ಕತೆ ಬರೆದು ನಿನಗೆ ಕಳಿಸ್ತಿದಿನಿ ಅಂತಾನ.. ಮ್ಯಾಟ್ರಿದೆ.. ವಿಭಾ!

    ಇವತ್ತು ಮತ್ತೆ ಅದೇ ದಾರಿಯಲ್ಲಿ ಸಾಗರಕ್ಕೆ ಬಂದೆ. ಆದ್ರೆ ಅವತ್ತು ಇದ್ದ ಹಾಗೆ ನೀನು ಮುಂದೆ ಇರಲಿಲ್ಲ. ನಾನೇ ನಿನ್ನನ್ನ ಮುಂದೆ ಕರ್ಕೊಂಡು ಬಂದು ಕೂರಿಸಿದ್ದೆ! ಆಗೆಲ್ಲ ಆ ನೆನಪು ನನ್ನ ಸುತ್ತ ಸುಳಿದಾಡ್ತಿದ್ವು.. ಅವತ್ತು ನೀನಾಗಿನೇ ಮಾತಾಡಿಸಲಿ ಅಂತ ಜೋರಾಗಿ ಕೆಮ್ಮಿದ್ದು… ನನ್ನ ದ್ವನಿ ಕೇಳಲಿ ಅಂತ ಸುಮ್ನೆ ಮೊಬೈಲ್‌ನಲ್ಲಿ ಯಾರ ಜೊತೆನೋ ಮಾತಾಡಿದ ಹಾಗೇ ನಟಿಸಿದ್ದು..! ತುಂಬಾ ಪ್ರಯತ್ನ ಪಟ್ಟಿದ್ದೆ ನೀನು ಮಾತಾಡ್ಲಿ ಅಂತ. ನೀನು ಮಾತ್ರ ಯಾರೇನೋ ಅಂತ ಸುಮ್ನೆ ಇದ್ದೆ.. ಅದ್ರಲ್ಲಿ ಈ ಹಾಳಾದ ಮಾಸ್ಕ್‌ ಬೇರೆ ಇತ್ತಲ್ಲ ಮುಖ ಕಾಣ್ಸಿದ್ರೂ ಮಾತಾಡ್ತಿದ್ಯೋ ಏನೋ? ಗೊತ್ತಿಲ್ಲ. ಆದ್ರೆ ಮಾಸ್ಕ್‌ ಕೊರೋನಾ ಅಂತ ಹಾಕಿದ್ದಲ್ಲ… ಗಡ್ಡ, ಮೀಸೆ ತೆಗದು ಬಿಟ್ಟಿದ್ದೆ.. ನನ್ನ , ಮುಖ ನನಗೇ ನೋಡೋಕಾಗ್ತಿರಲಿಲ್ಲ ಅದ್ಕೆ ಹಾಕಿದ್ದೆ! ಅದರಲ್ಲೂ ನೀನು ರಮ್ಯಾ ಹತ್ರ ಅವನು ಗಡ್ಡ ಬಿಟ್ರೆ ಚೆನ್ನಾಗಿ ಕಾಣ್ತಾನೆ ಅಂತ ಹೇಳಿದ್ಯಂತೆ.. ಅದನ್ನ ಅವಳು ನನಗೆ ಹೇಳಿದ್ಲು! ಇದನ್ನೂ ಓದಿ: ಅವಳ ಮೂಗಿನ ತುದಿ ಕೋಪ ನಂಗಿಷ್ಟ!

    ಅವತ್ತು, ನನಗೆ ಮಾತ್ರ ನೀನು ಇರೋದು ಯಾಕ್‌ ಗೊತ್ತಾಯ್ತೋ ಏನೋ? ನಿನಗೆ ಗೊತ್ತಾಗಲಿಲ್ವಲ್ಲ ಅಂತ ಆಗ ತುಂಬಾ ಬೇಜಾರ್‌ ಆಗಿದ್ದೆ. ಆದ್ರೆ ಇವತ್ತು ನಾನು ಬರಬೇಕಾದ್ರೆ ʻನೀನು ಮತ್ತೆ ಸಿಕ್ಕಿದ್ದು ಮಾತ್ರ ನನಗೆ ತುಂಬಾ ಖುಷಿ ಆಯ್ತು!ʼ ಹಿಂದಿನ ಕಿಟಕಿ ಬದಿಯ ಆ ಸೀಟಿನಿಂದ ಆಗಾಗ ಕಾಣುವ ಆ ಬಿಳಿ ಮೋಡದ ನಿನ್ನ ಕೆನ್ನೆ.. ನಿನಗೆ ಸೋಕಿ ಬರುವ ಆ ತಂಗಾಳಿಯ ಘಮ…. ಆ ಘಾಟಿಯಲ್ಲಿದ್ದ ಕಾಡು ಮಲ್ಲಿಗೆಗೆ ಸೇರಿಕೊಳ್ಳುತ್ತಿತ್ತು..! ಅದೆಷ್ಟು ಅಮಲು ಅಂದ್ರೆ, ಇವತ್ತಿಗೂ ಆ ಘಮ ಅಲ್ಲೇ ಉಳಿದುಕೊಂಡಿದೆ. ಬಹುಶಃ ನಾನೇನಾದ್ರೂ ಮತ್ತೆ ಅದೇ ದಾರಿಯಲ್ಲಿ ಮತ್ತೊಮ್ಮೆ ಹೋದ್ರೂ, ಖಂಡಿತ ಅದೇ ಘಮ ನನ್ನ ಮೂಗಿಗೆ, ಮನಸ್ಸಿಗೆ ಬಡಿಯುತ್ತದೆ!  

    ನನಗೆ ಯಾವಾಗ್ಲೂ ಬಸ್‌ ಹತ್ತಿ ಮೂವ್‌ ಆದ್ರೆ 10 ನಿಮಿಷದಲ್ಲಿ ನಿದ್ರೆ ಬಂದು ಬಿಡ್ತಿತ್ತು. ಅವತ್ತು ಬರಲೇ ಇಲ್ಲ.. ಅದೇ ದಾಖಲೆ ನಾನು ಮೊದಲನೇ ಬಾರಿಗೆ ಬಸ್‌ ಜರ್ನಿಯಲ್ಲಿ 200 ಕಿಮೀ ಬಂದ್ರೂ ನಿದ್ರೆ ಬರದೇ ಇದ್ದಿದ್ದು. ಆ ನಿದ್ರೆ ಬರದೇ ಇರೋ ಪ್ರತಿ ಕ್ಷಣದಲ್ಲೂ ನನ್ನನ್ನ ಕಾಡಿದ್ದು ನಿನ್ನ ಬೆಳ್ಳಿ ಮೋಡದ ಮಂಜಿನ ಕೆನ್ನೆ.. ಆ ರೇಷ್ಮೆಯ ಬಳ್ಳಿಯ ಕೂದಲು.. ಆಗಾಗ ಕಾಣಿಸುತ್ತಿದ್ದ ಓರೆಗಣ್ಣಿನ ರೆಪ್ಪೆ ಬಡಿಯುವ ಆಟ! ಅದೆಲ್ಲ ಎಷ್ಟು ಚೆಂದ..! ಆ ಪ್ರಯಾಣದುದ್ದಕ್ಕೂ ಅದೆಷ್ಟೋ ಆಸೆಗಳು ಹುಟ್ಟಿ ಕನಸನ್ನ ಕೊಟ್ಟು.. ನಿದ್ರೆ ಕದ್ದಿದ್ದು..! ಇದನ್ನೂ ಓದಿ: ನೀ ʻಅಮೃತʼಧಾರೆ – ಬಾಡಿದ ಹೃದಯಕುಂಡದಲ್ಲಿ ಒಲವರಳಿಸಿದ ಮಳೆ!

    ಅದೆಂತ ಕನಸು, ಅದೆಂತ ಆಸೆ ಅಂತಿಯಾ ವಿಭಾ.. ನಿನ್ನ ಕಣ್ರೆಪ್ಪೆಗೆ ಹಾಗೇ ಕಾಡಿಗೆ ಹಚ್ಬಿಡ್ಬೇಕು..! ಕೆನ್ನೆಗೊಂದು ಗುಲಾಬಿ ಮುತ್ತು ಕೊಡ್ಬೇಕು..! ಆ ಘಾಟಿಯ ಮೋಡಗಳ ಬಳ್ಳಿಯಲ್ಲಿ ʻಕಾಡು ಮಲ್ಲಿಗೆʼ ಹೂಗಳನ್ನು ಕಟ್ಟಿ ನಿನ್ನ ಜಡೆಗೆ ಮುಡಿಸ್ಬೇಕು ಅಂತೆಲ್ಲ ಅನ್ಸೋದು..! ಒಂದು ಕ್ಷಣ ಕಣ್ಣು ಮುಚ್ಚಿದ್ರೂ ನಮ್ಮ ಮದುವೆ ದಿಬ್ಬಣವೇ ಸಾಗ್ತಿದೆ ಅನ್ಸೋದು..! ಪ್ರೀತಿ ಅಂದ್ರೆ ಎಷ್ಟೆಲ್ಲ ಆಸೆ ಅಲ್ವಾ..? ಇದೆಲ್ಲ ನಾವಿಬ್ರೂ ಅಪರಿಚಿತರಂತೆ ಕಾಲ ಕಳೆದಾಗ ಆಗಿದ್ದು..! ಈಗ ಪರಿಚಿತರು..! ಪ್ರೇಮದ ಗಂಧ ಇಬ್ಬರ ಹೃದಯದಿಂದ ಹೃದಯಕ್ಕೆ ಸಾಗುವ ಹಂತಕ್ಕೆ ಬಂದು ನಿಂತಿದೆ…! ನನಗೆ ಈಗಲೂ ಆ ಅಪರಿಚಿತ ಕಾಲದ ಪ್ರೇಮದ್ದೇ ಧ್ಯಾನ! ಹಾಗಂತ ಈಗ ಇದೆಲ್ಲ ಆಸೆ ಇಲ್ಲ ಅಂತಲ್ಲ..!!  

    ಇದೆಲ್ಲ ಬರಿ ಮಾತಲ್ಲೋ, ನಾಲ್ಕು ಸಾಲಿನ ಬರಹದಲ್ಲೋ, ಕವಿತೆಯಲ್ಲೋ ಹೇಳೋದಲ್ಲ… ಒಮ್ಮೆ ʻಕಾಡು ಮಲ್ಲಿಗೆʼಯ ದಾರಿಯಲ್ಲಿ ಜೋಡಿಯಾಗಿ ಸಾಗುವ. ಆ ದಾರಿಯಲ್ಲಿ ಹೆಜ್ಜೆಗೊಂದೊಂದು ಆಸೆ, ಕತೆ ಹೇಳಿ ನಿನ್ನನ್ನು ರಮಿಸಬೇಕು..! ಈ ʻಕಾಡುʼವ ಕನಸುಗಳ ಜೊತೆ ಪ್ರಯಾಣಕ್ಕೆ ಅಣಿಯಾಗಿ, ನಿನ್ನ ಉತ್ತರಕ್ಕೆ ಕಾಯ್ತಾ ಇರ್ತಿನಿ. ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!

  • ಮಂತ್ರ ಮಾಂಗಲ್ಯ ವಿವಾಹವಾಗಲಿದ್ದಾರೆ ಗಾಯಕಿ ಸುಹಾನಾ ಸಯ್ಯದ್

    ಮಂತ್ರ ಮಾಂಗಲ್ಯ ವಿವಾಹವಾಗಲಿದ್ದಾರೆ ಗಾಯಕಿ ಸುಹಾನಾ ಸಯ್ಯದ್

    ತ್ತೀಚೆಗಷ್ಟೇ ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ (Suhaana Syed) ತಾವು ಪ್ರೀತಿಸುತ್ತಿರುವ ಹುಡುಗನ ಪರಿಚಯ ಮಾಡಿಕೊಟ್ಟಿದ್ದರು. 16 ವರ್ಷಗಳಿಂದ ಪ್ರೀತಿಸುತ್ತಿರುವ ನಿತಿನ್ ಹೆಸರಿನ ರಂಗಭೂಮಿ ಕಲಾವಿದನ ಜೊತೆ ಸುಹಾನಾ ಮದುವೆಯಾಗುತ್ತಿದ್ದು ಮದುವೆಯಲ್ಲಿ ವಿಶ್ವಮಾನವತ್ವದ ಧೋರಣೆ ಮೆರೆಯಲು ಹೊರಟಿದ್ದಾರೆ.

    ಕುವೆಂಪು (Kuvempu) ಅವರ ಮಂತ್ರ ಮಾಂಗಲ್ಯದ (Mantra Mangalya) ಆಶಯದಂತೆ ಸುಹಾನಾ ಹಾಗೂ ನಿತಿನ್ ಸತಿಪತಿಯಾಗಲು ಹೊರಟಿದ್ದಾರೆ. ಶುಕ್ರವಾರ ಬೆಂಗಳೂರು ಹೊರವಲಯ ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್ನಲ್ಲಿ ಮಂತ್ರ ಮಾಂಗಲ್ಯ ವಿವಾಹ ಜರುಗಲಿದೆ. ವಧು ಮತ್ತು ವರನ ಕಡೆಯ ಹತ್ತಿರದ ಬಂಧುಗಳು ಹಾಗೂ ಕೆಲವೇ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ.  ಇದನ್ನೂ ಓದಿ:  ಖ್ಯಾತ ಗಾಯಕಿ ಜೊತೆ 2ನೇ ಮದ್ವೆಗೆ ಸಜ್ಜಾದ ರಘು ದೀಕ್ಷಿತ್;‌ ಅಕ್ಟೋಬರ್ ಅಂತ್ಯದಲ್ಲೇ ಮದುವೆ!

    ಹಿಜಬ್ (Hijab) ಧರಿಸಿ ಹಿಂದೂ ಭಜನೆ ಹಾಡುವ ಸುಹಾನಾಗೆ ತೀವ್ರ ವಿರೋಧ ವ್ಯಕ್ತವಾಗಿತ್ತು, ಆದರೀಗ ಎಲ್ಲಾ ಅಡೆತಡೆಗಳನ್ನ ದಾಟಿ ತಾವು ಬಹುವರ್ಷಗಳಿಂದ ಪ್ರೀತಿಸುತ್ತಿರುವ ಅಂತರ್ ಧರ್ಮದ ಹುಡುಗನ ಜೊತೆ ಮದುವೆಯಾಗಲು ಹೊರಟಿದ್ದಾರೆ. ಇದನ್ನೂ ಓದಿ:  ಬೆಂಗಳೂರಿನಲ್ಲಿ ಹಾಡಹಗಲೇ ಪ್ರಿಯಕರನಿಂದ ವಿದ್ಯಾರ್ಥಿನಿಯ ಬರ್ಬರ ಕೊಲೆ

    ಈ ಅಂತರ್‌ಧರ್ಮೀಯ ಮದುವೆ ವಿಶೇಷವಾಗಿದ್ದು ಅನೇಕ ಕಲಾವಿದರು ಗಾಯಕರು ಸಾಕ್ಷಿಯಾಗಲಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ , ಪ್ರೀತಿ ವಿಶ್ವದ ಭಾಷೆ, ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ ದೇವ ವಿರಚಿತ. ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಸುಹಾನಾ ಹಾಗೂ ನಿತಿನ್ ಮದುವೆಯಾಗುತ್ತಿದ್ದೇವೆ. ನಮ್ಮ ನಡೆ ವಿಶ್ವಮಾನವತ್ವದೆಡೆಗೆ ಎಂದು ಹೇಳಿಕೊಂಡಿದ್ದಾರೆ.

  • ಖ್ಯಾತ ಗಾಯಕಿ ಜೊತೆ ಗಾಯಕ ರಘು ದೀಕ್ಷಿತ್ ಎರಡನೇ ವಿವಾಹಕ್ಕೆ ರೆಡಿ

    ಖ್ಯಾತ ಗಾಯಕಿ ಜೊತೆ ಗಾಯಕ ರಘು ದೀಕ್ಷಿತ್ ಎರಡನೇ ವಿವಾಹಕ್ಕೆ ರೆಡಿ

    ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ (Raghu Dixit) ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ವಾರಿಜಶ್ರೀ (Varijashree Venugopal) ಎಂಬ ಗಾಯಕಿ, ಕೊಳಲು ವಾದಕಿ ಜೊತೆ ಸಂಸಾರದ ಸರಿಗಮ ಹಾಡಲು ಸಿದ್ಧರಾಗಿದ್ದಾರೆ ರಘು ದೀಕ್ಷಿತ್.

    ಇವರಿಗೆ ಇದು ಎರಡನೇ ವಿವಾಹ. ಹಿಂದೆ ಶಾಸ್ತ್ರೀಯ ನೃತ್ಯಗಾರ್ತಿ ಮಯೂರಿ ಜೊತೆ ರಘು ಧೀಕ್ಷಿತ್ ವಿವಾಹ ಮುರಿದುಬಿದ್ದಿತ್ತು. ಇದೀಗ ಗ್ರ‍್ಯಾಮಿ-ನಾಮನಿರ್ದೇಶಿತ ಖ್ಯಾತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ಹೊಸ ಬಾಳಿನ ಬಂಡಿ ಹೂಡಲು ರಘು ದೀಕ್ಷಿತ್ ಸಿದ್ಧರಾಗಿದ್ದಾರೆ.

    ರಘು ದೀಕ್ಷಿತ್ ಹಾಗೂ ವಾರಿಜಶ್ರೀ ಹಲವು ಆಲ್ಬಂಗಳಲ್ಲಿ ಜೊತೆಯಾಗಿ ಹಾಡಿದ್ದು, ಒಬ್ಬರಿಗೊಬ್ಬರು ಪರಸ್ಪರ ಪರಿಚಿತರು. ಅನೇಕ ವರ್ಷಗಳಿಂದ ಪರಸ್ಪರ ಬಲ್ಲವರಾಗಿದ್ದು, ಇದೀಗ ಜಂಟಿಯಾಗಿ ಬಾಳ್ವೆ ಮಾಡಲು ಸಿದ್ಧರಾಗಿದ್ದಾರೆ. `ಸಾಕು ಇನ್ನು ಸಾಕು’ ಆಲ್ಬಂ ಸಂಗೀತ ಸಹಯೋಗವೇ ಇವರ ಪ್ರೀತಿಗೆ ಸೇತುವೆಯಾಗಿದೆಯಂತೆ. ಇದೇ ತಿಂಗಳು ಕೊನೆಯಲ್ಲಿ ಮದುವೆ ನಿಶ್ಚಯವಾಗಿದೆ.

    ಈ ಹಿಂದೆ ಕೋವಿಡ್ ವೇಳೆ ರಘು ದೀಕ್ಷಿತ್ ಹಾಗೂ ವಾರಿಜಶ್ರೀ ಹಾಡಿದ ಹಾಡು ಜನಪ್ರಿಯವಾಗಿತ್ತು. ಇದೀಗ ರಘು ದೀಕ್ಷಿತ್ ಬಾಳಲ್ಲಿ ಮತ್ತೆ ವಸಂತವಾಗಿದೆ. ಹೊಸ ದಾಂಪತ್ಯಕ್ಕೆ ಸಿದ್ಧರಾಗಿದ್ದಾರೆ. ಶೀಘ್ರದಲ್ಲೇ ಮದುವೆ ಜರುಗಲಿದೆ.

  • ಪ್ರೀತಿಸಿ ಮಗಳು ಪರಾರಿ – ಮನನೊಂದು ಊರಿಗೆ ತಿಥಿ ಊಟ ಹಾಕಿಸಿದ ತಂದೆ

    ಪ್ರೀತಿಸಿ ಮಗಳು ಪರಾರಿ – ಮನನೊಂದು ಊರಿಗೆ ತಿಥಿ ಊಟ ಹಾಕಿಸಿದ ತಂದೆ

    – ನನ್ನ ಪಾಲಿಗೆ ಮಗಳು ಸತ್ತಳೆಂದು ತಿಥಿ ಕಾರ್ಯ ನೆರವೇರಿಸಿದ ಅಪ್ಪ

    ಚಿಕ್ಕೋಡಿ: ಮಗಳು ಪ್ರೀತಿಸಿದಾತನೊಂದಿಗೆ ಓಡಿಹೋಗಿದ್ದರಿಂದ ಮನನೊಂದ ತಂದೆ ಊರಿಗೆ ಊಟ ಹಾಕಿಸಿ, ತಿಥಿ ಕಾರ್ಯ ನೆರವೇರಿಸಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

    ನಾಗರಾಳ ಗ್ರಾಮದಲ್ಲಿ ಹೆತ್ತ ಮಗಳಿಗೆ ಶ್ರಾದ್ಧ ಮಾಡಿ, ಕರುಳಬಳ್ಳಿ ಸಂಬಂಧವನ್ನ ತಂದೆ ಕತ್ತರಿಸಿಕೊಂಡಿದ್ದಾರೆ. ಶಿವಗೌಡ ಪಾಟೀಲ್ ಎಂಬವರಿಗೆ ನಾಲ್ಕು ಹೆಣ್ಣುಮಕ್ಕಳಿದ್ದರು. ಕೊನೆಯ ಮಗಳು, ಅದೇ ಗ್ರಾಮದ ಯುವಕನನ್ನು ಪ್ರೀತಿಸಿ (Love) ಆತನೊಂದಿಗೆ ಓಡಿಹೋಗಿದ್ದಳು. ಇದನ್ನೂ ಓದಿ: ಮೈಸೂರು | ಬಾಲಕಿಯ ರೇಪ್‌ ಬಳಿಕ ಎದೆ, ಹೊಟ್ಟೆ, ಮರ್ಮಾಂಗಕ್ಕೆ 19 ಬಾರಿ ಚಾಕು ಇರಿದು ಕೊಂದಿದ್ದ ಕಾಮುಕ

    ಮೊದಲಿಗೆ ಶಿವಗೌಡ ಅವರು ಮಗಳು ಕಾಣೆಯಾಗಿದ್ದಾಳೆ ಎಂದು ರಾಯಭಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಗಳು ಓಡಿಹೋಗಿದ್ದಾಳೆ ಎಂಬ ವಿಚಾರ ತಿಳಿದ ತಂದೆ ಮನನೊಂದಿದ್ದರು.

    ಬಳಿಕ ನನ್ನ ಮಗಳು ನಮ್ಮ ಪಾಲಿಗೆ ಸತ್ತಳೆಂದು, ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಯಿಸಿ ಭೋಜನ ಹಾಕಿಸಿ, ಆಕೆಯ ತಿಥಿ ಕಾರ್ಯವನ್ನ ಮಾಡಿ ಮುಗಿಸಿದ್ದಾರೆ.

  • ಪ್ರಿಯಕರ ಸ್ನೇಹಿತೆಯೊಟ್ಟಿಗೆ ಓಯೋ ರೂಂನಲ್ಲಿ ಇದ್ದಿದ್ದನ್ನ ಕಂಡು ಮನನೊಂದು ಮಹಿಳೆ ಆತ್ಮಹತ್ಯೆ

    ಪ್ರಿಯಕರ ಸ್ನೇಹಿತೆಯೊಟ್ಟಿಗೆ ಓಯೋ ರೂಂನಲ್ಲಿ ಇದ್ದಿದ್ದನ್ನ ಕಂಡು ಮನನೊಂದು ಮಹಿಳೆ ಆತ್ಮಹತ್ಯೆ

    ಬೆಂಗಳೂರು: ಪ್ರಿಯತಮ ಬೇರೊಂದು ಮಹಿಳೆಯೊಟ್ಟಿಗೆ ಲಾಡ್ಜ್‌ನಲ್ಲಿರುವುದನ್ನು ಕಂಡು ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಯಶೋಧ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆತ್ಮಹತ್ಯೆಗೂ ಮುನ್ನ ತನ್ನ ಪ್ರಿಯತಮ ಬೇರೊಂದು ಮಹಿಳೆಯೊಂದಿಗೆ ಇದ್ದ ಓಯೋ ರೂಂ ಮೇಲೆ ದಾಳಿ ಮಾಡಿ ಗಲಾಟೆ ಮಾಡಿದ್ದಳು. ಗಲಾಟೆಗೆ ಪ್ರಿಯತಮ ವಿಶ್ವನಾಥ್ ಸರಿಯಾಗಿ ರೆಸ್ಪಾನ್ಸ್ ಮಾಡಿದಿದ್ದಾಗ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: Belagavi | ಉರುಸ್ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆ – ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ

    ಆತ್ಮಹತ್ಯೆಗೆ ಶರಣಾದ ಯಶೋಧಗೆ ಗಂಡ ಇದ್ದು ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ, ಆಕೆ ಪಕ್ಕದ ಏರಿಯಾದ ಮನೆಯಲ್ಲಿ ಆಡಿಟರ್‌ ಆಗಿದ್ದ ವಿಶ್ವನಾಥ್‌ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಕಳೆದ 9 ವರ್ಷಗಳಿಂದ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು. ಆದರೆ, ಇತ್ತೀಚೆಗೆ ಯಶೋಧ ತನ್ನ ಸ್ನೇಹಿತೆಯೊಬ್ಬರನ್ನು ಪ್ರಿಯಕರನಿಗೆ ಪರಿಚಯಿಸಿದ್ದರು. ಪ್ರಿಯಕರ ಯಶೋಧ ಸ್ನೇಹಿತೆ ಜೊತೆ ಸಲುಗೆ ಬೆಳೆಸಿ ಪ್ರೇಮದ ಬಲೆಗೆ ಬೀಳಿಸಿದ್ದಾನೆ. ಅಲ್ಲದೇ, ಆಕೆಯನ್ನು ಓಯೋ ರೂಂಗೆ ಕರೆದುಕೊಂಡು ಹೋಗಿದ್ದಾನೆ.

    ಈ ವಿಚಾರ ಯಶೋಧ ಕಿವಿಗೆ ಬಿದ್ದಿದೆ. ಪ್ರಿಯಕರ ಸ್ನೇಹಿತೆಯೊಟ್ಟಿಗೆ ಇರುವ ಲಾಡ್ಜ್‌ಗೆ ಹೋಗಿ ಗಲಾಟೆ ಮಾಡಿದ್ದಾಳೆ. ಆಗ ಪ್ರಿಯಕರ ಸರಿಯಾಗಿ ಸ್ಪಂದಿಸದೇ ಇದ್ದಾಗ, ಮನನೊಂದು ಅಲ್ಲೇ ಪಕ್ಕದ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು

  • ಪ್ರೀತಿಗೆ ಮನೆಯವರ ವಿರೋಧ – ರೈಲಿಗೆ ತಲೆಕೊಟ್ಟ ಪ್ರೇಮಿಗಳು

    ಪ್ರೀತಿಗೆ ಮನೆಯವರ ವಿರೋಧ – ರೈಲಿಗೆ ತಲೆಕೊಟ್ಟ ಪ್ರೇಮಿಗಳು

    ಕೋಲಾರ: ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರೇಮಿಗಳಿಬ್ಬರು ರೈಲಿಗೆ (Train) ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಜಿಲ್ಲೆಯ ಮಾಲೂರು ತಾಲೂಕು ಬ್ಯಾಟರಾಯನಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಶೆಟ್ಟಹಳ್ಳಿ ಗ್ರಾಮದ ಸತೀಶ್ (18) ಹಾಗೂ ಅಪ್ರಾಪ್ತೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ವಿಜಯಪುರ | ಡೋಣಿ ನದಿ ಸೇತುವೆ ಜಲಾವೃತ – ದಾಟಲು ಯತ್ನಿಸಿದ ಬೈಕ್ ಸವಾರ ನೀರುಪಾಲು

    ಇವರಿಬ್ಬರ ಪ್ರೀತಿಗೆ 2 ಮನೆಯವರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಟರಾಯನಹಳ್ಳಿ ಗ್ರಾಮದ ಬಳಿ ಬೈಕ್ ನಿಲ್ಲಿಸಿ, ಕೋಲಾರದಿಂದ ಬೆಂಗಳೂರಿಗೆ ತೆರಳುವ ರೈಲಿಗೆ ತಲೆಕೊಟ್ಟಿದ್ದಾರೆ.

    ರೈಲಿನಡಿ ಸಿಲುಕಿದ ದೇಹಗಳು ಛಿದ್ರ ಛಿದ್ರವಾಗಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನಿತಿನ್ ಶಿವಾಂಶ್ ಜೊತೆ ಪ್ರೀತಿ ಗುಟ್ಟು ರಟ್ಟು ಮಾಡಿದ ಖ್ಯಾತ ಗಾಯಕಿ ಸುಹಾನಾ ಸಯ್ಯದ್

    ನಿತಿನ್ ಶಿವಾಂಶ್ ಜೊತೆ ಪ್ರೀತಿ ಗುಟ್ಟು ರಟ್ಟು ಮಾಡಿದ ಖ್ಯಾತ ಗಾಯಕಿ ಸುಹಾನಾ ಸಯ್ಯದ್

    ರಿಗಮಪ ರಿಯಾಲಿಟಿ ಶೋ ಮೂಲಕ ಭಾರೀ ಜನಪ್ರಿಯತೆ ಗಳಿಸಿರುವ ಕನ್ನಡದ ಖ್ಯಾತ ಗಾಯಕಿ ಸುಹಾನಾ ಸಯ್ಯದ್ (Suhaana Syed) ಇದೀಗ ಪ್ರೀತಿಸುತ್ತಿರುವ ಹುಡುಗನ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ.

    ಹಿಂದೊಮ್ಮೆ ಹಿಂದೂ ದೇವರ ಭಜನೆ ಹಾಡಿದ್ದಕ್ಕೆ ವಿವಾದಕ್ಕೀಡಾಗಿದ್ದ ಗಾಯಕಿ. ಶಿವಮೊಗ್ಗದ ಸಾಗರದ ಚೆಲುವೆ, ಸಿನಿಮಾಗಳಲ್ಲೂ ಹಿನ್ನೆಲೆ ಗಾಯಕನ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ನಿರ್ಭೀತಿಯಿಂದ ತಾವು ಪ್ರೀತಿಸುತ್ತಿರುವ ಹುಡುಗನನ್ನು ಪರಿಚಯ ಮಾಡಿಸಿಕೊಟ್ಟಿದ್ದಾರೆ. ನಿತಿನ್ ಶಿವಾಂಶ್ ಜೊತೆ ಪ್ರೀತಿಯ ಗುಟ್ಟನ್ನ ರಟ್ಟು ಮಾಡಿರುವ ಸುಹಾನಾ ಸಯ್ಯದ್, ತಾವು ಈ ಪ್ರೀತಿಯಲ್ಲಿ ಎದುರಿಸಿದ ಸವಾಲಿನ ಕುರಿತು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Suhaana Syed (@suhaana_syed)

    ರಂಗಭೂಮಿ ಕಲಾವಿದ ಆಗಿರುವ ನಿತಿನ್ ಶಿವಾಂಶ್ ಸಿನಿಮಾದಲ್ಲೂ ಸಕ್ರಿಯರಾಗಿದ್ದಾರೆ. ಶಾಲಾ ದಿನಗಳಲ್ಲೇ ನಿತಿನ್ ಶಿವಾಂಶ್ ಪರಿಚಯ ಇರೋದಾಗಿ ಸುಹಾನಾ ಹೇಳಿಕೊಂಡಿದ್ದಾರೆ. 16 ವರ್ಷಗಳ ಸ್ನೇಹ ಪ್ರೀತಿಯಾಗಿ ಚಿಗುರಿದೆ. ಇದೀಗ ಪ್ರೇಮಿಗಳು ಸಮಾಜದ ಮುಂದೆ ಬಲವಾಗಿ ಎದ್ದು ನಿಂತು ತಮ್ಮ ಪ್ರೀತಿಯ ವಿಚಾರ ಘೋಷಿಸಿದ್ದಾರೆ. ಪ್ರೀತಿಯ ಗುಟ್ಟನ್ನ ನಿಮ್ಮ ಮುಂದೆ ತೆರೆದಿಡುತ್ತೇವೆ ಎಂದು ಘೋಷಿಸಿದ ಸುಹಾನಾ ಸಯ್ಯದ್ ಜೋಡಿ ಫೋಟೋ ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಗೆ ಗಾಯಕಿ ಸುಹಾನಾ ಸಯ್ಯದ್ ಪ್ರತಿಕ್ರಿಯೆ
    ಪ್ರಶ್ನೆ: ಯಾವಾಗ ಮದುವೆ?
    ಉತ್ತರ: ಮದುವೆ ದಿನಾಂಕ ಫಿಕ್ಸ್ ಆಗಿಲ್ಲ, ತಿಳಿಸುತ್ತೇವೆ.

    ಪ್ರಶ್ನೆ: ಸಮುದಾಯದ ವಿರೋಧ ಬಂದಿಲ್ಲವೇ?
    ಉತ್ತರ: ಈಗಾಗಲೇ ಸಾಕಷ್ಟು ಸವಾಲನ್ನು ಎದುರಿಸಿದ್ದೇನೆ. ವಿರೋಧ ನನಗೆ ಹೊಸದಲ್ಲ. ನಾನು ಹಿಂದೆಯೇ ಹೇಳಿದಂತೆ ನನಗೆ ಎರಡೂ ಧರ್ಮದಲ್ಲಿ ನಂಬಿಕೆ ಇದೆ. ಎರಡೂ ಧರ್ಮವನ್ನು ಪೂಜಿಸುತ್ತೇನೆ.

    ಪ್ರಶ್ನೆ: ಎರಡೂ ಕುಟುಂಬಗಳು ಪರಸ್ಪರ ಒಪ್ಪಿಗೆ ನೀಡಿತೇ?
    ಉತ್ತರ: ಅವರ ಕುಟುಂಬದಲ್ಲಿ ಒಪ್ಪಿದ್ದರು. ನಮ್ಮ ಕುಟುಂಬದಲ್ಲಿ ಒಪ್ಪಿಸುವುದು ಸ್ವಲ್ಪ ಕಷ್ಟವಾದರೂ ಕೊನೆಗೆ ಒಪ್ಪಿದ್ದಾರೆ. ವಿರೋಧಗಳು ಸಾಮಾನ್ಯ ಅಲ್ವ. ನಾನು ಇಷ್ಟಪಟ್ಟ ಹುಡುಗನ ಜೊತೆ ಜೀವನದಲ್ಲಿ ಸಂತೋಷವಾಗಿರುತ್ತೇನೆ ಎಂದು ತಿಳಿಸಿದಾಗ ಮನೆಯವರು ಒಪ್ಪಿಕೊಂಡರು.

    ಪ್ರಶ್ನೆ: ಭಜನೆ ಹಾಡಿದ್ದಕ್ಕೆ ವಿರೋಧ ಬಂದಿತ್ತು. ಅಂತರಧರ್ಮ ವಿವಾಹ ಎಂದಾಗ ನಿಮ್ಮ ಧರ್ಮ ವಿರೋಧ ಮಾಡಲ್ವ?
    ಉತ್ತರ: ನನ್ನ ಬದುಕಿನ ವಿಷಯ ಬಂದಾಗ ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಸ್ವತಂತ್ರಳು ಅಲ್ವ. ನಿಜವಾಗಿ ಹೇಳಬೇಕೆಂದರೆ ಇದುವರೆಗೂ ವಿರೋಧ ಬಂದಿಲ್ಲ.