Tag: Loudspeakers

  • ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ಶಬ್ದ ನಿಯಂತ್ರಣಕ್ಕೆ ಕ್ರಮ: ಯೋಗಿ ಆದಿತ್ಯನಾಥ್‌

    ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ಶಬ್ದ ನಿಯಂತ್ರಣಕ್ಕೆ ಕ್ರಮ: ಯೋಗಿ ಆದಿತ್ಯನಾಥ್‌

    ಲಕ್ನೋ: ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಲಾದ ಧ್ವನಿವರ್ಧಕಗಳಿಗೆ ಶಾಶ್ವತ ಶಬ್ದ ನಿಯಂತ್ರಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ತಿಳಿಸಿದ್ದಾರೆ.

    ಸರ್ಕ್ಯೂಟ್ ಹೌಸ್‌ನಲ್ಲಿ ಅಭಿವೃದ್ಧಿ ಯೋಜನೆಗಳು ಮತ್ತು ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸುತ್ತಾ, ಹೋಳಿ ಆಚರಣೆಯ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಡಿಜೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ನನಗೆ 7ರಿಂದ 8 ಭಾಷೆಗಳು ಗೊತ್ತು: ತ್ರಿಭಾಷಾ ಸೂತ್ರಕ್ಕೆ ಸುಧಾ ಮೂರ್ತಿ ಬೆಂಬಲ

    mosque-loudspeakers

    ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳಂತಹ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ದನಗಳ ಕಳ್ಳಸಾಗಣೆಯ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲು ಸಿಎಂ ಆದೇಶಿಸಿದ್ದಾರೆ. ಕಳ್ಳಸಾಗಾಣಿಕೆದಾರರು, ವಾಹನ ಮಾಲೀಕರು ಮತ್ತು ಯಾವುದೇ ಸಹಾಯಕ ಪೊಲೀಸ್ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಯಾರಾದ್ರೂ ಬಣ್ಣ ಹಚ್ಚಿದ್ರೆ ʻಹೋಳಿ ಮುಬಾರಕ್ʼ ಹೇಳಿ – ಮುಸ್ಲಿಮರಿಗೆ ಅಯೋಧ್ಯೆಯ ಮೌಲ್ವಿ ಸಲಹೆ

    ರಾಜ್ಯದಲ್ಲಿ ಜಾನುವಾರು ಕಳ್ಳಸಾಗಣೆ ಮೇಲಿನ ಸಂಪೂರ್ಣ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾವಾರು ಪರಿಶೀಲನೆಗಳನ್ನು ನಡೆಸುವಂತೆ ವಲಯದ ಎಡಿಜಿ ಪಿಯೂಷ್ ಮೊರ್ಡಿಯಾ ಅವರಿಗೆ ಸಿಎಂ ನಿರ್ದೇಶಿಸಿದ್ದಾರೆ.

    ಅಭಿವೃದ್ಧಿ ಯೋಜನೆಗಳನ್ನು ಚುರುಕುಗೊಳಿಸುವುದು, ವಿಳಂಬದ ವಿರುದ್ಧ ಎಚ್ಚರಿಕೆ ನೀಡುವುದು ಮತ್ತು ನಿರ್ಮಾಣ ಹಂತದಲ್ಲಿರುವ ಪ್ರತಿಯೊಂದು ಯೋಜನೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲು, ಸಾಪ್ತಾಹಿಕ ತಪಾಸಣೆ ನಡೆಸಲು ಮತ್ತು ಪ್ರಗತಿ ವರದಿಗಳನ್ನು ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವುದರತ್ತ ಗಮನಹರಿಸಿದ್ದಾರೆ.

  • ಧ್ವನಿವರ್ಧಕಗಳಲ್ಲಿ ಆಜಾನ್ ಕೂಗುವುದು ನಿಷೇಧಿಸಲು ಮನವಿ- ಅರ್ಜಿದಾರರಿಗೆ ಹೈಕೋರ್ಟ್ ತರಾಟೆ

    ಧ್ವನಿವರ್ಧಕಗಳಲ್ಲಿ ಆಜಾನ್ ಕೂಗುವುದು ನಿಷೇಧಿಸಲು ಮನವಿ- ಅರ್ಜಿದಾರರಿಗೆ ಹೈಕೋರ್ಟ್ ತರಾಟೆ

    ನವದೆಹಲಿ: ಮಸೀದಿಗಳಲ್ಲಿ (Mosque) ಧ್ವನಿವರ್ಧಕಗಳ (Speaker) ಮೂಲಕ ಅಜಾನ್ ಕೂಗುವುದರಿಂದ ಶಬ್ದ ಮಾಲಿನ್ಯ ಆಗುವುದಿಲ್ಲ ಎಂದು ಗುಜುರಾತ್ ಹೈಕೋರ್ಟ್ (Gujarat High Court) ಹೇಳಿದೆ. ಧ್ವನಿವರ್ಧಕಗಳ ಮೂಲಕ ಅಜಾನ್ ಕೂಗುವುದು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.

    ವೈದ್ಯ ಧರ್ಮೇಂದ್ರ ಪ್ರಜಾಪತಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ (Sunita Agarwal) ಮತ್ತು ನ್ಯಾಯಮೂರ್ತಿ ಅನಿರುದ್ಧಮಯೀ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಈ ರೀತಿಯ ಪಿಐಎಲ್ (PIL) ಸಲ್ಲಿಕೆ, ಧ್ವನಿವರ್ಧಕಗಳ ಮೂಲಕ ಕೂಗುವುದರಿಂದ ಉಂಟಾಗುವ ಶಬ್ದದ ಪ್ರಮಾಣ ಎಷ್ಟು? ಇದರಿಂದ ಶಬ್ದ ಮಾಲಿನ್ಯ ಹೇಗೆ ಸಾಧ್ಯ ಎಂದು ಪ್ರಶ್ನಿಸಿತು. ಇದನ್ನೂ ಓದಿ: 25 ದಿನಗಳಿಗೆ ಸಾಕಾಗುವಷ್ಟು ಆಹಾರ ಸುರಂಗದಲ್ಲೇ ಉಳಿದಿದೆ: ಕಾರ್ಮಿಕ ಅಖಿಲೇಶ್‌

    ನೀವು ಅಡಚಣೆ ಉಂಟುಮಾಡದ ಸಂಗೀತವನ್ನು ನುಡಿಸುತ್ತೀರಾ? ಎಂದು ಅರ್ಜಿದಾರರ ಪರ ವಕೀಲರನ್ನು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರಾದ ಡಿಜಿ ಶುಕ್ಲಾ ಸಂಗೀತವನ್ನು ಮನೆಯಲ್ಲಿ ನುಡಿಸುತ್ತಾರೆಯೇ ಹೊರತು ಮಸೀದಿಯಂತಹ ಸಾರ್ವಜನಿಕ ಸ್ಥಳದಲ್ಲಿ ಅಲ್ಲ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಇಡೀ ದೇಶ ಪ್ರಾರ್ಥಿಸುತ್ತಿದ್ರೆ ಗಾಂಧಿ ಕುಟುಂಬ ಮಾತ್ರ ಡ್ಯಾನ್ಸ್ ಮಾಡ್ತಿತ್ತು: ಅಸ್ಸಾಂ ಸಿಎಂ ಕಿಡಿ

    ನಾವು ಮನೆಗಳಲ್ಲಿ ನುಡಿಸುವ ಸಂಗೀತದ ಬಗ್ಗೆ ಮಾತನಾಡುತ್ತಿಲ್ಲ. ನೀವು ದೇವಸ್ಥಾನದಲ್ಲಿ ಭಜನೆ ಅಥವಾ ಆರತಿಗಾಗಿ ಜೋರಾಗಿ ಸಂಗೀತವನ್ನು ನುಡಿಸುತ್ತೀರಿ. ಅದು ಜನರಿಗೆ ತೊಂದರೆ ಉಂಟುಮಾಡುವುದಿಲ್ಲವೇ? ಆಜಾನ್ ಹೇಗೆ ತೊಂದರೆ ಉಂಟುಮಾಡುತ್ತದೆ? ಇದು ಇಡೀ ದಿನದಲ್ಲಿ ಹತ್ತು ನಿಮಿಷಗಳ ಕಾಲ ಕೂಗಬಹುದು. ಇದರಿಂದ ಶಬ್ದ ಮಾಲಿನ್ಯ ಹೇಗೆ ಸಾಧ್ಯ ಎಂದು ನ್ಯಾಯಾಧೀಶರು ಮರು ಪ್ರಶ್ನೆ ಹಾಕಿದರು. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆಯಾಯ್ತು.. ದೇಗುಲಕ್ಕೆ ತೆರಳಿ ದೇವರಿಗೆ ಧನ್ಯವಾದ ಹೇಳ್ತೀನಿ: ಸುರಂಗ ತಜ್ಞ ಅರ್ನಾಲ್ಡ್‌

    ಆಜಾನ್‌ನಿಂದ ಶಬ್ದದ ಡೆಸಿಬಲ್ ಎಷ್ಟು? ಹಬ್ಬಗಳಲ್ಲಿ ಬಳಸುವ ಡಿಜೆ ಶಬ್ದದ ಡೆಸಿಬಲ್ ಎಷ್ಟು ಎಂದು ಕೇಳಿದ ಸಿಜೆ ಅಗರ್ವಾಲ್ ಉತ್ತರ ನೀಡಿದ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು. ಆಜಾನ್ ನಂಬಿಕೆ. ಈ ಅಭ್ಯಾಸವು ವರ್ಷಗಳಿಂದ ಒಟ್ಟಿಗೆ ನಡೆಯುತ್ತಿದೆ. ಇಂತಹ ಅರ್ಜಿಗಳನ್ನು ನಾವು ಮಾನ್ಯ ಮಾಡುವುದಿಲ್ಲ ಎಂದು ತಿಳಿಸಿದರು. ಅದಾಗ್ಯೂ ವಾದ ಮುಂದುವರಿಸಿದ ವಕೀಲರು ಆಜಾನ್ ದೇವಾಲಯಗಳಲ್ಲಿ ಆರತಿಗಿಂತ ಭಿನ್ನವಾಗಿದೆ. ಇದು ದಿನಕ್ಕೆ ಐದು ಬಾರಿ ನಡೆಯುತ್ತದೆ ಎಂದು ವಕೀಲರು ಒತ್ತಿ ಹೇಳಿದರು. ಇದನ್ನೂ ಓದಿ: ನಾವು ಆರಾಮಾಗಿದ್ದು, ಈಗ ದೀಪಾವಳಿ ಆಚರಿಸುತ್ತೇವೆ: ಸಂತಸ ಹಂಚಿಕೊಂಡ ಕಾರ್ಮಿಕರು

    ಇದಕ್ಕೆ ಗರಂ ಆದ ಸಿಜೆ ಅಗರ್ವಾಲ್, ಹಾಗಾದರೆ ನಿಮ್ಮ ದೇವಸ್ಥಾನಗಳಲ್ಲಿ ಮುಂಜಾನೆ ಪ್ರಾರಂಭವಾಗುವ ಆ ಡೋಲು ಮತ್ತು ಸಂಗೀತದೊಂದಿಗೆ ಬೆಳಗಿನ ಆರತಿ ಇದು ಯಾರಿಗೂ ಯಾವುದೇ ಶಬ್ದ ಅಥವಾ ಗದ್ದಲವನ್ನು ಉಂಟುಮಾಡುವುದಿಲ್ಲವೇ? ಇದು ಪ್ರತಿ ನಿತ್ಯ ನಡೆಯುತ್ತದೆ. ಇದು ಶಬ್ದ ಮಾಲಿನ್ಯ ಮಾಡುವುದಿಲ್ಲ ಎಂದು ನೀವು ಹೇಳಬಹುದೇ ಎಂದು ಒತ್ತಿ ಕೇಳಿದರು. ಬಳಿಕ ಆಜಾನ್ ದಿನವಿಡೀ ಕೇವಲ 10 ನಿಮಿಷಗಳ ಕಾಲ ನಡೆಯುತ್ತದೆ ಮತ್ತು ಯಾವುದೇ ಮಾಲಿನ್ಯವನ್ನು ಉಂಟುಮಾಡುವುದಿಲ್ಲ ಎಂದು ಪೀಠವು ಪುನರುಚ್ಚರಿಸಿತು. ಇದನ್ನೂ ಓದಿ: ಧೈರ್ಯ ಮೆಚ್ಚುವಂತದ್ದು: ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಜೊತೆ ಮೋದಿ ಮಾತುಕತೆ

    ಶಬ್ದ ಮಾಲಿನ್ಯವು ಡೆಸಿಬಲ್‌ಗಳ ಪರಿಭಾಷೆಯಲ್ಲಿ ಅಳತೆಯಾಗಿದೆ. 10 ನಿಮಿಷಗಳಲ್ಲಿ ಎಷ್ಟು ಡೆಸಿಬಲ್‌ಗಳು ಏರುತ್ತದೆ ಮತ್ತು ಅದು ಎಷ್ಟು ಶಬ್ದ ಮಾಲಿನ್ಯವನ್ನು ಉಂಟುಮಾಡುತ್ತದೆ? ಆಜಾನ್ ಸಮಯದಲ್ಲಿ ಡೆಸಿಬಲ್‌ಗಳನ್ನು ಅಳೆಯುವ ಈ ವೈಜ್ಞಾನಿಕ ಅಂಶದಲ್ಲಿ ನೀವು ವಾದಿಸಿ ನಂತರ ಮಾಲಿನ್ಯ ಹೇಗಾಗುತ್ತದೆ ಎಂದು ಹೇಳಬೇಕು ಆದರೆ ನೀವು ಈ ಅಂಶದ ಬಗ್ಗೆ ವಾದ ಮಾಡುತ್ತಿಲ್ಲ ಎಂದು ಪೀಠವು ಹೇಳಿತು. ಇದನ್ನೂ ಓದಿ: ಡಿ.ಕೆ.ಶಿವಕುಮಾರ್‌ಗೆ ರಿಲೀಫ್;‌ ಮೇಲ್ಮನವಿ ಹಿಂಪಡೆದ ಮನವಿ ಪರಿಗಣಿಸಿದ ಹೈಕೋರ್ಟ್

    ಅರ್ಜಿದಾರರು ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಆಜಾನ್ (Azan) ಸಮಯದಲ್ಲಿ ಡೆಸಿಬಲ್ ಮಟ್ಟವನ್ನು ಅಳೆಯದೇ ಅಜಾನ್ ನಡೆಯುವ ಪ್ರದೇಶಗಳಲ್ಲಿ ವಿವಿಧ ಸಮುದಾಯಗಳು ಮತ್ತು ಧರ್ಮದ ಜನರು ವಾಸಿಸುತ್ತಿದ್ದಾರೆ. ಆದ್ದರಿಂದ ತೊಂದರೆಯಾಗಲಿದೆ ಮತ್ತು ಆರೋಗ್ಯದ ಅಪಾಯವನ್ನು ಉಂಟುಮಾಡುತ್ತದೆ ಎನ್ನುವ ಏಕೈಕ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಇದು ಸಂಪೂರ್ಣವಾಗಿ ತಪ್ಪು ಕಲ್ಪನೆಯ ಪಿಐಎಲ್ ಆಗಿದೆ ಎಂದು ಪೀಠ ಹೇಳಿತು.  ಇದನ್ನೂ ಓದಿ: ಮಾನವೀಯತೆ, ಟೀಮ್‌ವರ್ಕ್‌ಗೆ ಅದ್ಭುತ ಉದಾಹರಣೆ – ಕಾರ್ಯಾಚರಣೆಯಲ್ಲಿ ಭಾಗಿಯಾದವರಿಗೆ ನಮಸ್ಕರಿಸುತ್ತೇನೆ: ಮೋದಿ

  • ಆಜಾನ್ ವೇಳೆ ಧ್ವನಿವರ್ಧಕ ಬಳಕೆ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಆಜಾನ್ ವೇಳೆ ಧ್ವನಿವರ್ಧಕ ಬಳಕೆ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಬೆಂಗಳೂರು: ರಾಜ್ಯದ ಮಸೀದಿಗಳಲ್ಲಿ ಆಜಾನ್ ಕೂಗಲು ಧ್ವನಿವರ್ಧಕ ಬಳಸುವುದನ್ನು ನಿಲ್ಲಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.

    ಆಜಾನ್‌ನಲ್ಲಿ ಇತರ ಧಾರ್ಮಿಕ ಸಮುದಾಯಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಪದಗಳಿವೆ ಎಂಬ ಅರ್ಜಿದಾರರ ವಾದವನ್ನು ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠ ತಿರಸ್ಕರಿಸಿತು. ಇದನ್ನೂ ಓದಿ: ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ ಜಾರಿಯಾಗುತ್ತಾ ಮದರಸಾ ಶಿಕ್ಷಣ ಮಂಡಳಿ?

    MOSQUE

    ಭಾರತದ ಸಂವಿಧಾನದ 25 ಮತ್ತು 26ನೇ ವಿಧಿಗಳು ಭಾರತೀಯ ನಾಗರಿಕತೆಯ ವಿಶಿಷ್ಟವಾದ ಧಾರ್ಮಿಕ ಸಹಿಷ್ಣುತೆಯ ತತ್ವಗಳನ್ನು ಒಳಗೊಂಡಿವೆ ಎಂದು ಪೀಠವು ಉಲ್ಲೇಖಿಸಿದೆ.

    ಆಜಾನ್‌ನಲ್ಲಿ ಇತರ ಧಾರ್ಮಿಕ ಸಮುದಾಯಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಪದಗಳಿವೆ. ಆದ್ದರಿಂದ ಮಸೀದಿಗಳಲ್ಲಿ ಆಜಾನ್ ಕೂಗುವಾಗ ಧ್ವನಿವರ್ಧಕಗಳನ್ನು ಬಳಸದಂತೆ ನಿರ್ದೇಶನ ನೀಡಬೇಕು ಎಂದು ಆರ್.ಚಂದ್ರಶೇಖರ್ ಎಂಬವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಇದನ್ನೂ ಓದಿ: 10 ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ – ನಿಮ್ಮ ನಗರಕ್ಕೆ ಯಾರು?

    mosque-loudspeakers
    ಸಾಂದರ್ಭಿಕ ಚಿತ್ರ

    ಸಂವಿಧಾನದ 25 (1)ನೇ ವಿಧಿಯು ಯಾವುದೇ ವ್ಯಕ್ತಿ ತಮ್ಮ ಸ್ವಂತ ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸಲು, ಆಚರಣೆ ಮತ್ತು ಪ್ರಚಾರ ಮಾಡಲು ಮೂಲಭೂತ ಹಕ್ಕನ್ನು ನೀಡುತ್ತದೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಉಲ್ಲೇಖಿಸಿದೆ.

    ಮೇಲೆ ಹೇಳಿದ ಹಕ್ಕು, ಸಂಪೂರ್ಣ ಹಕ್ಕಲ್ಲ. ಆದರೆ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಮತ್ತು ಸಂವಿಧಾನದ ಇತರ ನಿಬಂಧನೆಗಳ ಆಧಾರದ ಮೇಲೆ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯವು ಹೇಳಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಸಿ.ಟಿ ರವಿ ದಂಪತಿ

    ನಿಸ್ಸಂದೇಹವಾಗಿ ಅರ್ಜಿದಾರರು ಮತ್ತು ಇತರ ನಂಬಿಕೆಗಳ ಭಕ್ತರು ತಮ್ಮ ಧರ್ಮವನ್ನು ಆಚರಿಸುವ ಹಕ್ಕನ್ನು ಹೊಂದಿದ್ದಾರೆ. ಆಜಾನ್ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸುವ ಕರೆಯಾಗಿದೆ. ರಿಟ್ ಅರ್ಜಿಯ ಪ್ಯಾರಾ 6 (ಬಿ) ನಲ್ಲಿ ಅರ್ಜಿದಾರರು ಸ್ವತಃ, ಆಜಾನ್ ಇಸ್ಲಾಂ ಧರ್ಮಕ್ಕೆ ಸೇರಿದ ವ್ಯಕ್ತಿಗಳ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ. ಆಜಾನ್‌ನಲ್ಲಿ ಇತರ ಸಮುದಾಯಗಳ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಪದಗಳಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • 68 ಸಾವಿರ ಒತ್ತುವರಿ ತೆರವು, 844 ಕೋಟಿ ಮೌಲ್ಯ ಆಸ್ತಿ ಜಪ್ತಿ, 1.2 ಲಕ್ಷ ಲೌಡ್‌ ಸ್ಪೀಕರ್‌ ತೆರವು – 100 ದಿನದ ಸಾಧನೆ ಎಂದ ಯೋಗಿ

    68 ಸಾವಿರ ಒತ್ತುವರಿ ತೆರವು, 844 ಕೋಟಿ ಮೌಲ್ಯ ಆಸ್ತಿ ಜಪ್ತಿ, 1.2 ಲಕ್ಷ ಲೌಡ್‌ ಸ್ಪೀಕರ್‌ ತೆರವು – 100 ದಿನದ ಸಾಧನೆ ಎಂದ ಯೋಗಿ

    ಲಕ್ನೋ: ಅಧಿಕಾರಕ್ಕೆ ಬಂದ 100 ದಿನದಲ್ಲಿ 68 ಸಾವಿರ ಒತ್ತುವರಿಯನ್ನು ತೆರವುಗೊಳಿಸಿ 844 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

    ಬಿಜೆಪಿ ಸರ್ಕಾರದ 100 ದಿನದ ಸಾಧನೆಯ ವಿವರವನ್ನು ಪ್ರಕಟಿಸಿದ ಅವರು, ಬಿಜೆಪಿ ಸರ್ಕಾರ ಕುಶಾಸನ(ಕೆಟ್ಟ ಆಡಳಿತ) ತೆಗೆದು ಹಾಕಿ ಸುಶಾಸನವನ್ನು(ಉತ್ತಮ ಆಡಳಿತ) ನೀಡುತ್ತಿದ್ದೇವೆ ಎಂದು ತಿಳಿಸಿದರು.

    100 ದಿನದ ಬಳಿಕ ಮುಂದೆ 6 ತಿಂಗಳು, ವರ್ಷ, 2 ವರ್ಷ, 5 ವರ್ಷದ ಟಾರ್ಗೆಟ್‌ ಸಿದ್ಧಪಡಿಸಿ ಕಾರ್ಯಯೋಜನೆ ಮಾಡುತ್ತೇವೆ. ನಮ್ಮ ಸರ್ಕಾರ ಭಾಷಣಗಳನ್ನು ನಂಬುವುದಿಲ್ಲ. ನಾವು ನೀಡಿದ ಭರವಸೆಗಳನ್ನು ಈಡೇರಿಸುವುದರಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು.  ಇದನ್ನೂ ಓದಿ: ಹಿಂದೂ ದೇವರ ಫೋಟೋವಿದ್ದ ಪೇಪರ್‌ನಲ್ಲಿ ಕೋಳಿ ಮಾಂಸ ಮಾರಾಟ – ವ್ಯಕ್ತಿ ಅರೆಸ್ಟ್

    ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತಾನಡಿದ ಅವರು, ಕ್ರಿಮಿನಲ್‌ ಮತ್ತು ಮಾಫಿಯಾ ವ್ಯಕ್ತಿಗಳು ಮಾಡಿಕೊಂಡಿದ್ದ ಒಟ್ಟು 68 ಸಾವಿರ ಅಕ್ರಮ ಒತ್ತುವರಿಯನ್ನು ತೆರವು ಮಾಡಲಾಗಿದೆ. ಮೊದಲ ಬಾರಿಗೆ 1.2 ಲಕ್ಷ ಲೌಡ್‌ ಸ್ಪೀಕರ್‌ಗಳನ್ನು ತೆರವು ಮಾಡಲಾಗಿದೆ ಅಥವಾ ಧ್ವನಿಯನ್ನು ಇಳಿಕೆ ಮಾಡಲಾಗಿದೆ ಎಂದು ವಿವರಿಸಿದರು.

    ಅಜಂಪುರ, ರಾಂಪುರ ಲೋಕಸಭಾ ಉಪಚುನಾವಣೆ ಗೆಲುವು, ವಿಧಾನ ಪರಿಷತ್‌ನಲ್ಲಿ 33 ಸ್ಥಾನಗಳ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, 36ರ ಪೈಕಿ 33 ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ಉಳಿದ ಮೂರು ಸ್ಥಾನಗಳನ್ನು ಪಕ್ಷೇತರರು ಗೆದ್ದಿದ್ದಾರೆ. ಉತ್ತರ ಪ್ರದೇಶದ ವಿಧಾನ ಪರಿಷತ್‌ ಸ್ಥಾಪನೆಯಾಗಿ 37 ವರ್ಷದ ಬಳಿಕ ಈಗ ಕಾಂಗ್ರೆಸ್‌ ಮುಕ್ತವಾಗಿದೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಧ್ವನಿವರ್ಧಕ ನಿಯಮ ಉಲ್ಲಂಘನೆಯಾದ್ರೆ ಸಮಿತಿಯಲ್ಲಿರುವವರ ವಿರುದ್ಧ ಕ್ರಮ: ಆನಂದ್ ಸಿಂಗ್

    ಧ್ವನಿವರ್ಧಕ ನಿಯಮ ಉಲ್ಲಂಘನೆಯಾದ್ರೆ ಸಮಿತಿಯಲ್ಲಿರುವವರ ವಿರುದ್ಧ ಕ್ರಮ: ಆನಂದ್ ಸಿಂಗ್

    ಬೆಂಗಳೂರು: ಎಲ್ಲ ಧಾರ್ಮಿಕ ಕೇಂದ್ರಗಳು ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಮಸೀದಿ, ದೇವಸ್ಥಾನ, ಚರ್ಚ್ ಸದಸ್ಯರ ಮೇಲೆಯೇ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

    ಧ್ವನಿವರ್ಧಕಗಳಿಗೆ ನಿಯಮ ವಿಚಾರವಾಗಿ ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಸಿಎಂ ಜೊತೆ ಸಭೆ ಆಗಿದೆ. ಧ್ವನಿವರ್ಧಕಗಳ ಬಳಕೆ ಬಗ್ಗೆ ಮೊದಲಿನಿಂದಲೂ ನಿಯಮಗಳಿವೆ. ಆದರೆ ಆ ನಿಯಮಗಳ ಪಾಲನೆ ಆಗುತ್ತಿಲ್ಲ ಎನ್ನುವ ಆರೋಪವೂ ಇದೆ. ಸುಪ್ರೀಂಕೋರ್ಟ್ ಈ ಸಂಬಂಧ ಆದೇಶಗಳನ್ನು ಮಾಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿಯಮ ಜಾರಿ ಕೆಲಸ ಆಗುತ್ತಿದೆ. ಎಲ್ಲ ಧಾರ್ಮಿಕ ಕೇಂದ್ರಗಳು ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆದು, ನಿಯಮ ಪಾಲನೆ ಮಾಡಬೇಕು. ನಿಯಮ ಪಾಲಿಸದಿದ್ದರೆ, ಸ್ಥಳೀಯರು ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಕೈಗಾರಿಕೆ ಪ್ರದೇಶಗಳಲ್ಲಿ ಹಗಲಿನಲ್ಲಿ 75 ಡೆಸಿಬಲ್, ರಾತ್ರಿ ವೇಳೆ 70 ಡೆಸಿಬಲ್ ಇರಬೇಕು. ಕಮರ್ಷಿಯಲ್ ಪ್ರದೇಶಗಳಲ್ಲಿ ಹಗಲು 65 ಡೆಸಿಬಲ್, ರಾತ್ರಿ 60 ಡೆಸಿಬಲ್ ಇರಬೇಕು. ಜನವಸತಿ ಪ್ರದೇಶಗಳಲ್ಲಿ ಹಗಲು 55 ಡೆಸಿಬಲ್, ರಾತ್ರಿ 50 ಡೆಸಿಬಲ್ ಇರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಫ್ಲೋಟಿಂಗ್ ಬ್ರಿಡ್ಜ್ ಮುರಿಯಲು ತಾಂತ್ರಿಕ ಕಾರಣ ಇರಬೇಕು: ಆನಂದ್ ಸಿಂಗ್

    loudspeakers

    ಇದೇ ವೇಳೆ ಬೆಳಗ್ಗೆ 6 ಗಂಟೆಗೂ ಮುಂಚೆಯೇ ನಮಾಜ್ ಮಾಡಲು ಆಜಾನ್ ಮೈಕ್ ಬಳಸಿರುವ ಬಗ್ಗೆ ವಿರೋಧ ವ್ಯಕ್ತವಾಗಿದ್ದು, ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಸುಪ್ರೀಂಕೋರ್ಟ್ ಆದೇಶ ಪ್ರಕಾರ ನಿಯಮ ಉಲ್ಲಂಘನೆಯಾಗಿದೆ. ಇದರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ. ಆ ಹೊತ್ತಿನಲ್ಲಿ ಧ್ವನಿ ವರ್ಧಕಗಳ ಬಳಕೆಗೆ ಅವಕಾಶ ಇಲ್ಲ ಎಂದರು. ಇದನ್ನೂ ಓದಿ: ಅಸನಿ ಚಂಡಮಾರುತದ ಎಫೆಕ್ಟ್ – ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಮಳೆ

    ದೇವಸ್ಥಾನ, ಚರ್ಚ್, ಮಸೀದಿ ಗಳ ಕಮಿಟಿ ಯಾರು ಇರುತ್ತಾರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಶಬ್ದ ಮಾಲಿನ್ಯ ಸೆಕ್ಷನ್ ಮೇಲೆ ಕೇಸ್ ದಾಖಲಿಸಲಾಗುತ್ತದೆ. ಯುಪಿ ಮಾದರಿ ಅಲ್ಲ ಇಡೀ ದೇಶಕ್ಕೆ ಇರುವ ಕಾನೂನು ಜಾರಿ ಮಾಡಲಾಗುತ್ತದೆ. ಸಿಎಂ ಯುಪಿ ಮಾದರಿ ಅಂತ ಹೇಳಿದ್ದಾರೆ. ಎಲ್ಲರಿಗೂ ಸೂಚನೆ ಕೊಟ್ಟಿದ್ದಾರೆ. ಒಂದು ವಾರ 10 ದಿನಗಳಲ್ಲಿ ಈ ವಿಚಾರವಾಗಿ ನಿಯಮ ಜಾರಿ ಮಾಡುತ್ತೇವೆ. ಗೃಹ ಇಲಾಖೆಗೆ ಈ ಬಗ್ಗೆ ಜವಾಬ್ದಾರಿ ಇದೆ. ನಾವು ಮಾಹಿತಿ ನೀಡುತ್ತೇವೆ. ಗೃಹ ಇಲಾಖೆ ಸಹಕಾರ ಕೊಡುತ್ತವೆ ಎಂದು ಸ್ಪಷ್ಟನೆ ನೀಡಿದರು.

  • ಉತ್ತರ ಪ್ರದೇಶದಲ್ಲಿ 45 ಸಾವಿರ ಲೌಡ್‌ ಸ್ಪೀಕರ್‌ ತೆರವು

    ಉತ್ತರ ಪ್ರದೇಶದಲ್ಲಿ 45 ಸಾವಿರ ಲೌಡ್‌ ಸ್ಪೀಕರ್‌ ತೆರವು

    ಲಕ್ನೋ: ಇಲ್ಲಿಯವರೆಗೆ ಧಾರ್ಮಿಕ ಸ್ಥಳಗಳಿಂದ 45,773 ಲೌಡ್‌ ಸ್ಪೀಕರ್‌ ತೆಗೆಯಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ

    ಕಾನೂನು ಸುವ್ಯವಸ್ಥೆಯ ಎಡಿಜಿಪಿ ಪ್ರಶಾಂತ್‌ ಕುಮಾರ್‌ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿ, ಇಲ್ಲಿಯವರೆಗೆ 45,773 ಲೌಡ್‌ಸ್ಪೀಕರ್‌ಗಳನ್ನು ತೆಗೆಯಲಾಗಿದೆ. 58,861 ಧ್ವನಿವರ್ಧಕಗಳ ಧ್ವನಿಯ ಮಟ್ಟವನ್ನು ಕಡಿಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಕಳೆದ ಶನಿವಾರ ಯೋಗಿ ಅದಿತ್ಯನಾಥ್‌ ಸರ್ಕಾರ ಅಕ್ರಮವಾಗಿ ಅಳವಡಿಸಿರುವ ಧ್ವನಿವರ್ಧಕವನ್ನು ತೆಗೆಯುವಂತೆ ಆದೇಶ ಪ್ರಕಟಿಸಿತ್ತು. ಇದನ್ನೂ ಓದಿ: ಮೇ 4ರವರೆಗೆ ಪೊಲೀಸ್‌, ಎಲ್ಲಆಡಳಿತ ಅಧಿಕಾರಿಗಳ ರಜೆ ರದ್ದು- ಯೋಗಿ ಆದಿತ್ಯನಾಥ್‌

    ಪೊಲೀಸರು ಧಾರ್ಮಿಕ ನಾಯಕರ ಜೊತೆ ಸಂವಹನ ನಡೆಸಿ ಅಕ್ರಮವಾಗಿ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆಗೆಯಬೇಕೆಂದು ಆದೇಶದಲ್ಲಿ ತಿಳಿಸಲಾಗಿತ್ತು.

  • ಮಸೀದಿಯಿರುವ 100 ಮೀ. ಒಳಗೆ ಹನುಮಾನ್ ಚಾಲೀಸಾ ಪಠಿಸುವಂತಿಲ್ಲ: ಮಹಾರಾಷ್ಟ್ರ ಸರ್ಕಾರ

    ಮಸೀದಿಯಿರುವ 100 ಮೀ. ಒಳಗೆ ಹನುಮಾನ್ ಚಾಲೀಸಾ ಪಠಿಸುವಂತಿಲ್ಲ: ಮಹಾರಾಷ್ಟ್ರ ಸರ್ಕಾರ

    ಮುಂಬೈ: ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು. ಇಲ್ಲದೇ ಇದ್ದರೆ ಹನುಮಾನ್ ಚಾಲೀಸಾ ಅನ್ನು ಪಠಿಸಲಾಗುತ್ತದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ನಾಯಕ ರಾಜ್‌ಠಾಕ್ರೆ ಒತ್ತಾಯಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಮೈತ್ರಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.

    ರಾಜ್ಯ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರು ಮತ್ತು ಮುಂಬೈ ಪೊಲೀಸ್ ಆಯುಕ್ತರು ಧ್ವನಿವರ್ಧಕಗಳ ಬಳಕೆಗೆ ಮಾರ್ಗಸೂಚಿ ಸಿದ್ಧಪಡಿಸಲಿದ್ದು, ಒಂದೆರಡು ದಿನಗಳಲ್ಲೇ ಹೊರಡಿಸಲಾಗುವುದು. ಅಲ್ಲದೆ ಮಸೀದಿಯ 100 ಒಳಗೆ ಹನುಮಾನ್ ಚಾಲೀಸಾ ಪಠಿಸುವಂತಿಲ್ಲ ಎಂದು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೌಡಿಗಳು ಸತ್ರೆ 25 ಲಕ್ಷ ರೂ. ಪರಿಹಾರ ಕೊಡ್ತೀರಾ, ಸಂತೋಷ್ ಪಾಟೀಲ್‍ಗೆ ಯಾಕಿಲ್ಲ: ಸಿ.ಎಂ.ಇಬ್ರಾಹಿಂ ಕಿಡಿ

    loudspeakers

    ರಾಜ್ಯದ ಪೊಲೀಸ್ ಮಹಾನಿರ್ದೇಶಕ ರಜನೀಶ್ ಸೇಠ್ ಮತ್ತು ಮುಂಬೈ ಸಿ.ಪಿ.ಸಂಜಯ್ ಪಾಂಡೆ ಅವರು, ಧ್ವನಿವರ್ಧಕಗಳ ಬಳಕೆಯ ಕುರಿತು ರಾಜ್ಯಕ್ಕೆ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಈ ಮಾರ್ಗಸೂಚಿಗಳನ್ನು ಒಂದು ಅಥವಾ ಎರಡು ದಿನಗಳಲ್ಲಿ ಹೊರಡಿಸಲಾಗುವುದು. ಎಲ್ಲರೂ ಅವುಗಳನ್ನು ಕಾರ್ಯಗತಗೊಳಿಸಬೇಕು ಎಂದು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಗೃಹ ಸಚಿವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗಲ್ಲ: ಆರ್.ಧ್ರುವನಾರಾಯಣ್ 

    hanuman statue

    ರಾಜ್ ಠಾಕ್ರೆ ಅವರು ಮೇ 3ರ ಒಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದು ಹಾಕಲು ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಆಗ್ರಹಿಸಿದ್ದರು. ಇತರ ಸಮುದಾಯಗಳ ಸದಸ್ಯರು ದೊಡ್ಡ ಧ್ವನಿಯ ಮುಸ್ಲಿಮರ ಪ್ರಾರ್ಥನೆ ಕೇಳಲು ಇಷ್ಟವಿಲ್ಲ ಎಂದು ವಾದಿಸಿ ಮೇ 3ರ ನಂತರ ಹೆಚ್ಚಿನ ಪ್ರಮಾಣದಲ್ಲಿ ಮಸೀದಿಗಳ ಹೊರಗೆ ಹನುಮಾನ್ ಚಾಲೀಸಾ ಮೊಳಗಿಸುಸುವುದಾಗಿ ಬೆದರಿಕೆ ಹಾಕಿದ್ದರು. ಇದು ಶಿವಸೇನೆಗೆ ಸವಾಲಾಗಿ ಪರಿಣಮಿಸಿ ರಾಜ್‌ಠಾಕ್ರೆ ಎಂದು ಕರೆದಿತ್ತು.

  • ಮಸೀದಿಯಿಂದ ಧ್ವನಿವರ್ಧಕ ತೆಗೆಸುವುದು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ: ಸಂಜಯ್‌ ನಿರುಪಮ್‌

    ಮಸೀದಿಯಿಂದ ಧ್ವನಿವರ್ಧಕ ತೆಗೆಸುವುದು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ: ಸಂಜಯ್‌ ನಿರುಪಮ್‌

    ಮುಂಬೈ: ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆಸಬೇಕು ಎಂದು ಒತ್ತಾಯಿಸಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನಾದ ಅಧ್ಯಕ್ಷ (ಎಂಎನ್‌ಎಸ್‌) ರಾಜ್‌ ಠಾಕ್ರೆ ವಿರುದ್ಧ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಹಾಗೂ ಕಾಂಗ್ರೆಸ್‌ನ ಸಂಜಯ್‌ ನಿರುಪಮ್‌ ಕಿಡಿಕಾರಿದ್ದಾರೆ.

    ರಾಜ್ ಠಾಕ್ರೆ ಅವರಿಗೆ ಅಷ್ಟು ಪ್ರಾಮುಖ್ಯತೆ ನೀಡಬಾರದು. ಸರಿಯಾದ ಸಮಯ ಬಂದಾಗ, ನಾನು ಖಂಡಿತವಾಗಿಯೂ ಉತ್ತರಿಸುತ್ತೇನೆ. ಪ್ರತಿ ಪ್ರಶ್ನೆಗೂ ನನ್ನ ಬಳಿ ಉತ್ತರವಿದೆ ಎಂದು ಅಜಿತ್‌ ಪವಾರ್‌ ತಿರುಗೇಟು ನೀಡಿದ್ದಾರೆ.

    ಮುಂಬೈನ ಒಂದೇ ಒಂದು ಮಸೀದಿಯಿಂದಲೂ ಧ್ವನಿವರ್ಧಕಗಳನ್ನು ತೆಗೆದುಹಾಕಿದರೆ ಅದು ನಾಚಿಕೆಗೇಡಿನ ಸಂಗತಿ ಎಂದು ರಾಜ್ಯ ಸರ್ಕಾರಕ್ಕೆ ಸಂಜಯ್‌ ನಿರೂಪಮ್‌ ಎಚ್ಚರಿಕೆ ನೀಡಿದ್ದಾರೆ.

    ಮಸೀದಿಯಿಂದ ಧ್ವನಿವರ್ಧಕಗಳನ್ನು ತೆಗೆಯದಂತೆ ನಾವು ಸರ್ಕಾರ ಮತ್ತು ಮುಂಬೈ ಪೊಲೀಸರನ್ನು ಕಟ್ಟುನಿಟ್ಟಾಗಿ ಹೇಳಿದ್ದೇವೆ. ಸರ್ಕಾರವು ಡೆಸಿಬಲ್ ನಿಯಂತ್ರಣ ಮಾರ್ಗಸೂಚಿಗಳನ್ನು ನೀಡಲು ಬಯಸಿದರೆ, ಅದನ್ನು ಮಾಡಬಹುದು. ಎಲ್ಲಾ ಮಸೀದಿಗಳಲ್ಲಿ ಇದನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ಟ್ವೀಟ್‌ ಮಾಡಿ ಸಂಜಯ್‌ ನಿರುಪಮ್‌ ತಿಳಿಸಿದ್ದಾರೆ.

    ಮುಸ್ಲಿಂ ಸಮುದಾಯದವರು ಧ್ವನಿವರ್ಧಕಗಳ ಮೂಲಕ ಮಸೀದಿಗಳಲ್ಲಿ ಆಜಾನ್ ನುಡಿಸುತ್ತಿರುವುದು ಸರಿಯಲ್ಲ. ಅವರು ಬದಲಾಗದಿದ್ದರೆ ಮಸೀದಿಗಳ ಮುಂದೆ ಅವರ ಧ್ವನಿವರ್ಧಕದ ಎರಡು ಪಟ್ಟು ಹನುಮಾನ್ ಚಾಲೀಸಾ ಹಾಕ್ತಿವಿ ಎಂದು ರಾಜ್‌ ಠಾಕ್ರೆ ಹೇಳಿಕೆ ನೀಡಿದ್ದರು.

    ಶಿವಸೇನೆ, ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಮಹಾರಾಷ್ಟ್ರ ಸರ್ಕಾರದ ಮೈತ್ರಿ ಕೂಟ)ಗಳು ರಾಜ್ ಠಾಕ್ರೆ ಅವರ ಬೇಡಿಕೆಯನ್ನು ಬಲವಾಗಿ ವಿರೋಧಿಸಿವೆ. ಇದು ಕರ್ನಾಟಕದಲ್ಲಿಯೂ ಆಜಾನ್ ಗದ್ದಲಕ್ಕೆ ಕಾರಣವಾಗಿದೆ. ಮಸೀದಿಗಳ ಹೊರಗಿನ ಧ್ವನಿವರ್ಧಕದ ಡೆಸಿಬಲ್ ಮಟ್ಟವನ್ನು ನಿಗದಿಪಡಿಸುವ ನಿಯಮಗಳನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದವು.

  • ಮಸೀದಿಗಳ ಧ್ವನಿವರ್ಧಕ ನಿಷೇಧ ಚರ್ಚೆ – 1990ರಲ್ಲೇ ಕೊಡಗು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ವಿಎಚ್‍ಪಿ ಮುಖಂಡ

    ಮಸೀದಿಗಳ ಧ್ವನಿವರ್ಧಕ ನಿಷೇಧ ಚರ್ಚೆ – 1990ರಲ್ಲೇ ಕೊಡಗು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ವಿಎಚ್‍ಪಿ ಮುಖಂಡ

    ಮಡಿಕೇರಿ: ರಾಜ್ಯದಲ್ಲಿ ಹಿಜಬ್, ಮುಸ್ಲಿಂ ವರ್ತಕರಿಗೆ ನಿರ್ಬಂಧ, ಹಲಾಲ್ ಕಟ್ – ಜಟ್ಕಾ ಕಟ್ ವಿವಾದದ ಬಳಿಕ ಇದೀಗ ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧದ ಬಗ್ಗೆ ಚರ್ಚೆಯಾಗುತ್ತಿದೆ. ಈ ನಡುವೆ ಧ್ವನಿವರ್ಧಕ ನಿಷೇಧ ಈ ಹಿಂದಿನಿಂದಲೇ ಜಾರಿಯಲ್ಲಿತ್ತು. 1990ರಲ್ಲೇ ಕೊಡಗು ಜಿಲ್ಲಾಡಳಿತಕ್ಕೆ ವಿಎಚ್‍ಪಿ ಮುಖಂಡರೊಬ್ಬರು ಮನವಿ ಸಲ್ಲಿಸಿದ್ದರು.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ವಿಎಚ್‍ಪಿ ಮುಖಂಡ ಸೋಮೇಶ್, ಈ ಹಿಂದೆ ಕೊಡಗಿನ ಪಾಲೂರು ದೇವಾಲಯದಲ್ಲಿ ನಡೆದ ಹಿಂದೂ, ಮುಸ್ಲಿಂ ಗಲಭೆಯ ಬಳಿಕ 1990ರಲ್ಲೇ ಅಂದಿನ ಜಿಲ್ಲಾಧಿಕಾರಿಗಳಿಗೆ ಮಸೀದಿಗಳಲ್ಲಿ ಇರುವ ಧ್ವನಿವರ್ಧಕ ನಿಷೇಧ ಮಾಡುವಂತೆ ಮನವಿ ಮಾಡಲಾಗಿತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?

    1964ರಲ್ಲಿಯೇ ಸರ್ವೋಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ. ಅನುಮತಿ ರಹಿತ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ ಇಷ್ಟು ವರ್ಷ ರಾಜಕೀಯ ತುಷ್ಟೀಕರಣದೊಂದಿಗೆ ಕಾನೂನು ಉಲ್ಲಂಘನೆ ಆಗುತ್ತದೆ. ಇದು ಹೊಸ ಬೆಳವಣಿಗೆ ಅಲ್ಲ. ಬಹು ವರ್ಷಗಳ ಹಿಂದೂಗಳ ಧ್ವನಿ ಆಗಿದೆ. ಪೊಲೀಸರು ಮತ್ತು ಸ್ಥಳೀಯ ಆಡಳಿತ ಒತ್ತಡದಿಂದ ದಿಟ್ಟ ಹೆಜ್ಜೆ ಇರಿಸಿಲ್ಲ. ಅದು ಮುಸ್ಲಿಂ ಸಮುದಾಯದ ಮುಖಂಡರು ಗೊತ್ತಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಎಂದು ಕೂಗುತ್ತ ಗೋರಖ್‍ನಾಥ ದೇವಾಲಯ ಪ್ರವೇಶಿಸಲು ಯತ್ನಿಸಿದ್ದ ಯುವಕ ಬಂಧನ

    ಕಾನೂನು ತನ್ನದೇ ರೀತಿಯಲ್ಲಿ ಕೆಲಸ ಮಾಡಬೇಕಿದೆ. 1964ರಲ್ಲಿಯೇ ಸರ್ವೋಚ್ಚ ನ್ಯಾಯಾಲಯ ಆದೇಶದಲ್ಲೇ ಸ್ಪಷ್ಟವಾಗಿ ಇದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೂ ಧ್ವನಿವರ್ಧಕ ಬಳಸುವಂತೆ ಇಲ್ಲ. ಧ್ವನಿವರ್ಧಕ ಬಳಕೆಯಾದರೆ ಮನೆಯಲ್ಲಿ ಇರುವ ಮಕ್ಕಳು, ವಯಸ್ಸಾದ ವೃದ್ಧರಿಗೂ ಸಮಸ್ಯೆ ಅಗುತ್ತದೆ ಎಂದು ಸಾಕಷ್ಟು ಜನರು ಹೇಳಿದ್ರು. ಇದೀಗಾ ಬಹುಶಃ ಕಾಲ ಕೂಡಿ ಬಂದಿದೆ. ಅದಷ್ಟು ಬೇಗ ಸಾರ್ವತ್ರಿಕವಾಗಿ ಸರ್ಕಾರ ದಿಟ್ಟತನದಿಂದ ಧ್ವನಿವರ್ಧಕ ನಿಷೇಧವನ್ನು ಜಾರಿಗೆ ತರಬೇಕು ಇದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸಿ: ರಾಜ್ ಠಾಕ್ರೆ

    ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸಿ: ರಾಜ್ ಠಾಕ್ರೆ

    ಮುಂಬೈ: ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆಸದಿದ್ದರೇ ಹನುಮಾನ್ ಚಾಲೀಸ್ ನುಡಿಸುತ್ತೇವೆ ಎಂದು ಮಹಾರಾಷ್ಟ್ರ ನವನಿರ್ಮಾಣಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಎಚ್ಚರಿಕೆ ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರಾರ್ಥನೆ ಮಾಡುವುದಕ್ಕೆ ವಿರೋಧಿಸುವುದಿಲ್ಲ. ನೀವು ನಿಮ್ಮ ಮನೆಯಲ್ಲಿ ಪ್ರಾರ್ಥನೆ ಮಾಡಬಹುದು. ಆದರೆ ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮಸೀದಿಯ ಧ್ವನಿವರ್ಧಕಗಳನ್ನು ತೆಗೆದುಹಾಕುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

    ಈ ಬಗ್ಗೆ ಕ್ರಮಕೈಗೊಳ್ಳದಿದ್ದರೇ, ಧ್ವನಿವರ್ಧಕಗಳನ್ನು ನಾವೇ ತೆಗೆದು ಹಾಕಿ, ಮಸೀದಿಯ ಮುಂದೆ ಹನುಮಾನ್ ಚಾಲೀಸ್‍ನ್ನು ನುಡಿಸಲು ಪ್ರಾರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಅಧಿಕಾರದಲ್ಲಿರುವವರು ಸಮಾಜದಲ್ಲಿ ಕಹಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ: ಶರದ್ ಪವಾರ್

    ಸಂಸದರಿಗೆ ಮತ್ತು ಶಾಸಕರಿಗೆ ನೀಡುತ್ತಿರುವ ಪಿಂಚಣಿಯನ್ನು ಹಿಂಪಡೆಯಲು ಸರ್ಕಾರವನ್ನು ಒತ್ತಾಯಿಸಿದರು. ಅವರಿಗೆ ಮನೆಗಳನ್ನು ನೀಡಬೇಕಾದರೆ ಅವರ ಫಾರ್ಮ್‍ಹೌಸ್ ಅನ್ನು ತೆಗೆದುಕೊಳ್ಳಬೇಕು. ಅದನ್ನು ಕೊಳೆಗೇರಿಗಳಲ್ಲಿ ವಾಸಿಸುವ ಬಡವರಿಗೆ ಕೊಡಿ ಎಂದು ಒತ್ತಾಯಿಸಿದರು.

    ಮುಂಬೈನ ಕೆಲ ಮುಸ್ಲಿಂ ಕೊಳಗೇರಿಗಳಲ್ಲಿರುವ ಮದರಸಾಗಳಲ್ಲಿ ಪಾಕಿಸ್ತಾನಿಗಳಿದ್ದಾರೆ. ಅಂತಹವರಿಗೆ ಆಧಾರ್ ಕಾರ್ಡ್ ಕೂಡ ಇಲ್ಲ. ರಾಜ್ಯದ ಕೆಲ ರಾಜಕೀಯ ನಾಯಕರು ಅವರನ್ನು ತಮ್ಮ ಮತ ಬ್ಯಾಂಕ್‍ಗಳನ್ನಾಗಿ ಮಾಡಿಕೊಂಡಿದ್ದಾರೆ. ಈ ಮದರಸಾಗಳ ಮೇಲೆ ದಾಳಿ ನಡೆಸುವಂತೆ ಅವರು ಪ್ರಧಾನಿ ಮೋದಿಗೆ ಒತ್ತಾಯಿಸಿದರು. ಇದನ್ನೂ ಓದಿ: ಜಟ್ಕಾ ಕಟ್ ಮಟನ್ ಅಂಗಡಿಗಳ ಮುಂದೆ ಕೇಸರಿ ಧ್ವಜ