Tag: loud speaker

  • 5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ: ಮುತಾಲಿಕ್

    5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ: ಮುತಾಲಿಕ್

    ಧಾರವಾಡ: 5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ, ಒಂದೇ ಒಂದು ಡಿಜೆ ಹೊರಗೆ ಬಾರದಂತೆ ನಾನೇ ನೋಡಿಕೊಳ್ಳುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದರು.

    ಪ್ರಾರ್ಥನಾ ಮಂದಿರಗಳ ಮೇಲೆ ಹಾಕಿರುವ ಮೈಕ್ ವಿಚಾರವಾಗಿ ಧಾರವಾಡ ಎಸ್‌ಪಿ ಕಚೇರಿ ಎದುರು ಶ್ರೀರಾಮ ಸೇನೆ ಕಾರ್ಯಕರ್ತರು ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮುತಾಲಿಕ್, ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಸುಪ್ರೀಂ ಕೋರ್ಟ್ 15 ವರ್ಷದ ಹಿಂದೆಯೇ ಆದೇಶ ನೀಡಿದೆ. ಶಬ್ದ ಮಾಲಿನ್ಯ ಆಗಬಾರದು ಅಂತ ಹೇಳಿದ್ರೂ ಇಲ್ಲಿಯವರೆಗೆ ರಾಜ್ಯ ಸರ್ಕಾರ ಆದೇಶ ಜಾರಿ ಮಾಡಿಲ್ಲ ಎಂದರು.

    ಶಬ್ದದ ಪರಿಣಾಮದಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಪ್ರಾರ್ಥನಾ ಮಂದಿರಗಳು ಯಾವುದೇ ಧರ್ಮಕ್ಕೆ ಸೇರಿರಲಿ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಆದರೆ ಸರ್ಕಾರ ನಾಟಕವಾಡುತ್ತಿದೆ. ಇದಕ್ಕಾಗಿಯೇ ನಾವು ನಿರಂತರವಾಗಿ ಹೋರಾಡುತ್ತಿದ್ದೇವೆ. ಸರ್ಕಾರದ ಕಾನೂನು ಜಾರಿ ಮಾಡದಿದ್ದರೆ, ಅವರಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ ಎಂದರು. ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಮುನ್ನೆಚ್ಚರಿಕಾ ಕ್ರಮ – ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?

    ಈ ಕಾರಣಕ್ಕೆ ನಾವು ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಬೆಳಗ್ಗೆ 5 ಗಂಟೆಯಿಂದ ಮೈಕ್ ಕೂಗುತ್ತಿವೆ. ಇದು ಇನ್ನೂ ನಿಂತಿಲ್ಲ. ನಮ್ಮನ್ಯಾರೂ ಕೇಳೋದಿಲ್ಲ ಎನ್ನುವ ಮನಸ್ಥಿತಿ ದೊಡ್ಡ ಮುಳ್ಳಾಗಿ ಪರಿಣಮಿಸಲಿದೆ. ಸರ್ಕಾರಕ್ಕೆ ಇದು ಗೊತ್ತಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ನಾವು ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮನವಿ ಇಲ್ಲ, ನೇರವಾಗಿ ನುಗ್ಗುವುದೇ. ಅದು ಹೇಗೆ, ಏನು ಎನ್ನುವುದನ್ನು ಮುಂದಿನ ಹೋರಾಟದಲ್ಲಿಯೇ ನಿರ್ಧಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಪೊಲೀಸ್ ಇಲಾಖೆ ಗಣೇಶ ಮಂಡಳಿಯವರಿಗೆ ಡಿಜೆ ನಿಷೇಧಿಸಿದ್ದಾರೆ. ಅವರು ಸುಪ್ರೀಂ ಕೋರ್ಟ್ ಆದೇಶ ತೋರಿಸುತ್ತಾರೆ. ಅದೇ ಆದೇಶ ಪ್ರಾರ್ಥನಾ ಮಂದಿರಗಳ ಮೈಕ್ ಬಗ್ಗೆಯೂ ಹೇಳಿದೆಯಲ್ಲವೇ? ಹಾಗಾದರೆ ಅದನ್ನೇಕೆ ಪಾಲಿಸುತ್ತಿಲ್ಲ? ವರ್ಷಕ್ಕೆ ಒಂದೇ ಬಾರಿ ಡಿಜೆ ಹಚ್ಚಿದರೆ ಅದು ನಿಮ್ಮ ಕಣ್ಣಿಗೆ ಬೀಳುತ್ತದೆ. ಪ್ರತಿ ದಿನ 5 ಬಾರಿ ಮೈಕ್ ಹಚ್ಚೋದು ಕಾಣೋದಿಲ್ವಾ? ಎಂದು ಕಿಡಿ ಕಾರಿದರು. ಇದನ್ನೂ ಓದಿ: ಎಸಿಬಿ ರದ್ದು; ಹೈಕೋರ್ಟ್‌ ಆದೇಶ ಪಾಲಿಸ್ತೀವಿ, ಸುಪ್ರೀಂಗೆ ಹೋಗಲ್ಲ – ಸಿಎಂ

    ನೀವು ಡಿಜೆ ಸೀಜ್ ಮಾಡಿ, ನಾವು ಇದನ್ನು ಸವಾಲಾಗಿ ಸ್ವೀಕರಿಸಿದ್ದೇವೆ. 3 ವರ್ಷದಿಂದ ಕೊರೊನಾದಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ವೇಳೆಯಲ್ಲಿ ಎಲ್ಲದಕ್ಕೂ ನಿರ್ಬಂಧ ಏಕೆ? 5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ. ಒಂದು ಡಿಜೆಯೂ ಹೊರಗೆ ಬಾರದಂತೆ ನಾನೇ ನಿಲ್ಲಿಸುತ್ತೇನೆ. ಆದರೆ ವಿನಾಕಾರಣ ಗಣೇಶೋತ್ಸವಕ್ಕೆ ಕಿರಿಕಿರಿ ಮಾಡಬೇಡಿ ಎಂದು ಮನವಿ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ಗಣೇಶೋತ್ಸವಕ್ಕೆ ಡಬಲ್ ಸೌಂಡ್ ಹಚ್ಚಿ ಮೆರವಣಿಗೆ ಮಾಡಿ, ಏನ್ ಮಾಡ್ತಾರೆ ನೋಡೋಣ: ಪ್ರಮೋದ್ ಮುತಾಲಿಕ್

    ಗಣೇಶೋತ್ಸವಕ್ಕೆ ಡಬಲ್ ಸೌಂಡ್ ಹಚ್ಚಿ ಮೆರವಣಿಗೆ ಮಾಡಿ, ಏನ್ ಮಾಡ್ತಾರೆ ನೋಡೋಣ: ಪ್ರಮೋದ್ ಮುತಾಲಿಕ್

    ದಾವಣಗೆರೆ: ಡಿಜೆ ಸೌಂಡ್ ಸಿಸ್ಟಮ್‌ಗೆ ಅನುಮತಿ ಪಡೆಯಬೇಡಿ, ಡಬಲ್ ಸೌಂಡ್ ಹಚ್ಚಿ, ಏನ್ ಮಾಡ್ತಾರೆ ನೋಡೋಣ. ಸುಪ್ರೀಂ ಕೋರ್ಟ್ ಹೆಸರು ಹೇಳುತ್ತಾ ನಮ್ಮನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗಣೇಶ ಮಂಡಳಿಗಳಿಗೆ ಕರೆ ನೀಡಿದರು.

    ದಾವಣಗೆರೆಯಲ್ಲಿ ಮಾತನಾಡಿದ ಅವರು, ನಾವು ಸೌಂಡ್ ಸಿಸ್ಟಮ್‌ಗೆ ಪರ್ಮಿಷನ್ ತೆಗೆದುಕೊಳ್ಳುವುದಿಲ್ಲ. ಸರ್ಕಾರ ಮೊದಲು ಮಸೀದಿ ಮೇಲಿರುವ ಲೌಡ್ ಸ್ಪೀಕರ್ ಅನುಮತಿ ಪಡೆದಿರುವುದನ್ನು ತೋರಿಸಲಿ. ಬಳಿಕ ನಾವು ಡಿಜೆಗೆ ಅನುಮತಿಯನ್ನು ಪಡೆಯುತ್ತೇವೆ. ಮೊದಲು ಮಸೀದಿ ಮೇಲಿರುವ ಲೌಡ್ ಸ್ಪೀಕರ್‌ಗಳ ಅನುಮತಿ ಬಗ್ಗೆ ದಾಖಲೆ ನೀಡಿ. ಇಂದಿಗೂ ಲೌಡ್ ಸ್ಪೀಕರ್ ಶಬ್ದ ನಿಂತಿಲ್ಲ, ಇಂದಿಗೂ ಕಿರಿಕಿರಿ ಆಗುತ್ತಿದೆ ಎಂದು ಕಿಡಿಕಾರಿದರು.

    loud speaker

    ನಮ್ಮ ಸೌಂಡ್ ಸಿಸ್ಟಮ್ ಅನ್ನು ನಿಲ್ಲಿಸಲು ನಿಮಗೆ ಹಕ್ಕಿಲ್ಲ. ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧ ಹೇರಬೇಡಿ. ಗಲಭೆ ಆಗದಂತೆ ಮುಂಜಾಗೃತಾ ಕ್ರಮ ವಹಿಸುತ್ತೇವೆ. ಗಣೇಶನ ಕೂರಿಸಲು ಅನುಮತಿ ಪಡೆಯುವ ಪ್ರಕ್ರಿಯೆ ಸರಿ ಅಲ್ಲ. ನೀವು ಸ್ವಾತಂತ್ರ‍್ಯ ಹರಣ ಮಾಡ್ಬೇಡಿ. ನಿಮ್ಮ ಅನುಮತಿ ಪಡೆಯುವ ಅವಶ್ಯಕತೆ ನಮಗಿಲ್ಲ. ನಮಗೆ ಮುಕ್ತವಾದ ಹಕ್ಕಿದೆ. ನಿಮಗೆ ಕೇಳಿಕೊಂಡು ಗಣೇಶೋತ್ಸವ ಮಾಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಗುಡುಗಿದರು.

    ಬೆಂಗಳೂರಿನ ಈದ್ಗಾ ಮೈದಾನದ ಜಾಗ ಸರ್ಕಾರದ್ದು ಎಂದು ನಿರ್ಧರಿಸಲಾಗಿದೆ. ಜಮೀರ್ ಅಹ್ಮದ್ ಸೇರಿ ಕೆಲ ಮುಸ್ಲಿಂ ನಾಯಕರು ಇದು ನಮ್ಮದು ಎಂದು ಹೇಳುತ್ತಿದ್ದವರ ಬಾಯಿ ಬಂದ್ ಆಗಿದೆ. ಸರ್ಕಾರದಿಂದ ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವುದನ್ನು ನಾನು ಸ್ವಾಗತಿಸುತ್ತೇನೆ. ಅಲ್ಲಿ ಜಮೀರ್ ಅಹ್ಮದ್‌ಗೆ ಮಾತ್ರ ಅವಕಾಶ ಎಂದಲ್ಲ, ಅಲ್ಲಿ ಸಾರ್ವಜನಿಕರೂ ಆಗಮಿಸಬೇಕು. 75ನೇ ಸ್ವಾತಂತ್ರ‍್ಯೋತ್ಸವ ಮಾಡಬೇಕು. ಆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೂ ಅವಕಾಶ ಮಾಡಿಕೊಡಬೇಕು ಎಂದರು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಚಾಲನೆ – ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗುವಂತೆ ಕರೆ

    ಅಲ್ಲಿ ಮುಸ್ಲಿಮರ ಧಾರ್ಮಿಕ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ನಾವು ಹಿಂದೂಗಳು ಏನ್ ಪಾಪ ಮಾಡಿದ್ದೇವೆ? ನಮಗೂ ಗಣೇಶೋತ್ಸವ ಆಚರಣೆ ಮಾಡಲು ಅವಕಾಶ ನೀಡಿ. ಸರ್ಕಾರ ಪ್ರತಿನಿಧಿಗಳೇ ನಿಮ್ಮ ಗಡ್ಸ್ ತೋರ್ಸಿ. ಅಲ್ಲಿ ಕೋಮು ಗಲಭೆ ಮಾಡಿದರೆ ಗುಂಡು ಹೊಡೀರಿ. ಗಣೇಶ ಮಂಡಳಿಯವರು ಯಾವಾಗಲೂ ಗಲಾಟೆ, ಗೊಂದಲ ಮಾಡುವುದಿಲ್ಲ. ಗಣೇಶೋತ್ಸವ ಆಚರಣೆ ಮೈದಾನದಲ್ಲಿ ಮಾಡಲಾಗುವುದಿಲ್ಲ ಎಂದು ಜಮೀರ್ ಸೊಕ್ಕಿನಿಂದ ಹೇಳಿದ್ದಾರೆ. ಜಮೀರ್ ನೀನು ಮುಸ್ಲಿಂ ಮತದಿಂದ ಗೆದ್ದಿಲ್ಲ, ಎಲ್ಲರಿಂದಲೂ ಗೆದ್ದಿದ್ದೀಯ. ನೀನು ಮುಸ್ಲಿಂ ಶಾಸಕ ಅಲ್ಲಪ್ಪ, ನೀನೇ ಮುಂದೆ ನಿಂತು ಗಣೇಶೋತ್ಸವ ಮಾಡ್ಬೇಕು ಎಂದರು.

    ಪರೇಶ್ ಮೇಸ್ತಾ ಕೊಲೆ ಮಾಡಿದ ಎ1 ಆರೋಪಿ ಅಣ್ಣಿಗೇರಿಯನ್ನು ವಕ್ಫ್ ಬೋರ್ಡ್‌ನ ಉಪಾಧ್ಯಕ್ಷನಾಗಿ ಬಿಜೆಪಿ ಸರ್ಕಾರ ನೇಮಕ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಅವನೊಬ್ಬ ಕೊಲೆಗಡುಕ, ಕ್ರಿಮಿನಲ್. ಕೊಲೆಗಡುಕನನ್ನು ವಕ್ಫ್ ಬೋರ್ಡ್ ಉಪಾಧ್ಯಕ್ಷನಾಗಿ ನೇಮಕ ಮಾಡಿದ ಅಧಿಕಾರಿಗಳನ್ನು ವಜಾ ಮಾಡಿ. ವಕ್ಫ್ ಬೋರ್ಡ್ ಅಧ್ಯಕ್ಷ ಶಫೀನೇ ಕೊಲೆಗಡುಕ, ಹಿಂದೂದ್ರೋಹಿ. ಅವನೇ ಕಾಂಗ್ರೆಸ್‌ನವರನ್ನು, ಕೊಲೆಗಡುಕರನ್ನು, ಹಿಂದೂ ವಿರೋಧಿಗಳನ್ನು ವಕ್ಫ್ ಬೋರ್ಡ್‌ನಲ್ಲಿ ಸೇರಿಸುತ್ತಿದ್ದಾನೆ. ಬಿಜೆಪಿಯವರೇ ಜಾಗೃತರಾಗಿ, ಅನಾಹುತ ಆಗಬಹುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ತಿರಂಗಮಯವಾದ ಸುಪ್ರಸಿದ್ಧ ಮುಗಳಖೋಡ ಶ್ರೀಮಠ

    ಬೆಂಗಳೂರಿನ ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಜೈಲಿನಲ್ಲಿ ವೀಡಿಯೋ ಮಾಡುವ ಮೂಲಕ ಮುಸ್ಲಿಂ ಗೂಂಡಾಗಳು ಅವ್ಯವಹಾರ ಮಾಡುತ್ತಿದ್ದಾರೆ. ಇದಕ್ಕೆ ಒಂದು ವಿಶೇಷ ಸಮಿತಿ ನಿಯೋಜನೆ ಮಾಡಿ ಎಂದು ಮುತಾಲಿಕ್ ಒತ್ತಾಯಿಸಿದರು.

    Live Tv
    [brid partner=56869869 player=32851 video=960834 autoplay=true]

  • ಸುಪ್ರೀಂ ಆದೇಶ ಪಾಲಿಸದವರ ಮೇಲೆ ಗುಂಡು ಹೊಡಿತೀವಿ: ಮುತಾಲಿಕ್

    ಸುಪ್ರೀಂ ಆದೇಶ ಪಾಲಿಸದವರ ಮೇಲೆ ಗುಂಡು ಹೊಡಿತೀವಿ: ಮುತಾಲಿಕ್

    ಹುಬ್ಬಳ್ಳಿ: ಸುಪ್ರೀಂ ಆದೇಶ ಪಾಲಸಿದವರ ಮೇಲೆ ಗುಂಡು ಹೊಡಿತೀವಿ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಲೌಡ್ ಸ್ಪೀಕರ್ ವಿಚಾರವಾಗಿ ಸರ್ಕಾರ ನೀಡಿದ್ದ ಗಡುವು ಮುಗಿದಿದೆ. ಆದರೂ ಸರ್ಕಾರ ಏನು ಮಾಡುತ್ತಿದೆ? ಹಿಂದೂಗಳ ಹೆಸರಿನಲ್ಲಿ ಅಧಿಕಾರ ಹಿಡಿದ ನಿಮಗೆ ಈ ಬಗ್ಗೆ ಅರಿವು ಇಲ್ವಾ? ಲೌಡ್ ಸ್ಪೀಕರ್ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿಮಗೆ ಧಮ್ ಇಲ್ವಾ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಇದನ್ನೂ ಓದಿ: ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ನೋಡಿ ಪತ್ನಿಗೆ ‘ಚಲಿಯೇ ಹುಕುಂ’ ಎಂದ ಅಮಿತಾ ಶಾ

    ಹುಬ್ಬಳ್ಳಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ್, ಒಂದು ವರ್ಷದಿಂದ ನಾವು ಲೌಡ್ ಸ್ಪೀಕರ್ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಇದರ ಮುಂದುವರಿದ ಭಾಗವಾಗಿ ನಾವು ಭಜನೆ ಹಾಗೂ ಭಕ್ತಿಗೀತೆಗಳ ಅಭಿಯಾನಕ್ಕೂ ಚಾಲನೆ ನೀಡಿದ್ದೇವೆ. ಆದರೆ ಸರ್ಕಾರ ಕೇವಲ ಒಂದು ಪತ್ರ ಕಳುಹಿಸಿ ತಮ್ಮ ಕೆಲಸ ಮುಗಿಯಿತು ಎಂದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

    ನಮಗೆ 10 ಹಿಂದೂ ಸಂಘಟನೆಗಳ ಬೆಂಬಲವಿದೆ. ಹಿಂದೂಗಳ ಹೆಸರಿನಲ್ಲಿ ಅಧಿಕಾರ ಹಿಡಿದಿರುವ ನಿಮಗೆ ಈ ಬಗ್ಗೆ ಅರಿವು ಇಲ್ವಾ? ಇನ್ನು ನಮಗೂ ನಿಮ್ಮ ಮೇಲೆ ನಂಬಿಕೆ ಇರುವುದಿಲ್ಲ. ಈ ತಿಂಗಳ 8 ರಿಂದ ಬಿಜೆಪಿಯ ಎಲ್ಲಾ ಶಾಸಕರ ಕಚೇರಿ ಎದುರು ಧರಣಿ ನಡೆಸುತ್ತೇವೆ. ನಿಮ್ಮ ನಾಟಕವನ್ನು ಬಟಬಯಲು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

    mosque-loudspeakers

    ಸರ್ಕಾರ ನನ್ನ ಕೈಗೆ ಕೊಡಿ:
    ಲೌಡ್ ಸ್ಪೀಕರ್ ವಿಚಾರದಲ್ಲಿ ಯಾರು ಕಾನೂನು ಪಾಲನೆ ಮಾಡುತ್ತಿಲ್ಲವೋ, ಅವರಿಗೆ ಗುಂಡು ಹೊಡೆಯಬೇಕು. ನಿಮ್ಮಿಂದ ಸಾಧ್ಯವಿಲ್ಲ ಎಂದರೆ ನನಗೆ ಅಧಿಕಾರ ಕೊಡಿ, ನಾನು ಗುಂಡು ಹೊಡೆಯುತ್ತೇನೆ. ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡದವರ ಮೇಲೆ ಗುಂಡು ಹಾಕುತ್ತೇನೆ ಎಂದು ಹೇಳಿಕೆ ನೀಡಿದರು.

    ಬಿಜೆಪಿ ನಿಮ್ಮಪ್ಪನದ್ದಲ್ಲ. ನಾವು ರಕ್ತ ಸುರಿಸಿ ಬಿಜೆಪಿ ಕಟ್ಟಿರುವುದು. ರಾಜಕೀಯ ಈಗ ಮಾತನಾಡುವುದಿಲ್ಲ. ನಮ್ಮ ಶ್ರಮದಿಂದ ನೀವು ಅಧಿಕಾರ ಅನುಭವಿಸುತ್ತಿದ್ದೀರಿ ಎಂದು ಆರೋಪಿಸಿದರು. ಇದನ್ನೂ ಓದಿ: ನಾನು ಒಬ್ಬ ಸಣ್ಣ ಸೈನಿಕ: ಕಮಲ ಹಿಡಿದ ಹಾರ್ದಿಕ್ ಪಟೇಲ್

    ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ ವಿಚಾರವಾಗಿ ಮಾತನಾಡಿದ ಮುತಾಲಿಕ್, ಇಂದು ಕೂಡಾ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದು ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯ. ಇದು ಹೀಗೇ ಮುಂದುವರಿದರೆ ಇಡೀ ಸಮಾಜ ಒಟ್ಟಾಗಿ ಚಲೋ ಕಾಶ್ಮೀರ ಚಳುವಳಿ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.

  • 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌

    500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌

    ಬೆಳಗಾವಿ: ಮಸೀದಿಗಳಲ್ಲಿ ಅಜಾನ್ ಶಬ್ದದ ಕಿರಿಕಿರಿ ವಿರುದ್ಧ ಹಿಂದೂಪರ ಸಂಘಟನೆಗಳಿಂದ ಇಂದಿನಿಂದ ರಾಜ್ಯಾದ್ಯಂತ ಅಜಾನ್ ವಿರುದ್ಧ ದೇವಸ್ಥಾನಗಳಲ್ಲಿ ಸುಪ್ರಭಾತ, ಚಾಲಿಸಾ ಪಠಣ ಹಿನ್ನೆಲೆ ಬೆಳಗಾವಿಯಲ್ಲಿ 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

    ಇಂದು ಬೆಳಗ್ಗೆ 5ಕ್ಕೆ ಬೆಳಗಾವಿ ನಗರದ ಆರ್‌ಟಿಓ ವೃತ್ತದ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಹನುಮಾನ್ ದೇವರ ಮೂರ್ತಿಗೆ ಆರತಿ ಮಾಡಿ, ಹನುಮಾನ ಚಾಲೀಸಾ ಪಠಣ ಮಾಡಿ ಸ್ಪೀಕರ್ ನಲ್ಲಿ ಭಜನೆ ಹಾಡು ಹಾಕಿದರು.

    ಹೀಗೆ ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿ ಭಜನೆ, ಹನುಮಾನ್ ಚಾಲೀಸಾ, ಮಂತ್ರ ಪಠಣ ಇಂದಿನಿಂದ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಳಗಾವಿ ನಗರದ ನೂರು, ಜಿಲ್ಲೆಯ 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರಿಂದ ತೀವ್ರ ಭದ್ರತೆ ವಹಿಸಲಾಗಿದೆ. ಇದನ್ನೂ ಓದಿ: ಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ಇಂದಿನ ವಿಶೇಷ ಪೂಜೆಯ ಜೊತೆಗೆ ಮಂತ್ರಘೋಷ

    ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಸೀದಿಗಳಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲಿಯವರೆಗೆ ಪಾಲನೆ ಮಾಡೊದಿಲ್ಲವೋ ಅಲ್ಲಿಯವರೆಗೆ ನಮ್ಮ ಅಭಿಯಾನ ಮುಂದುವರಿಸುತ್ತೇವೆ ಎಂದು ಶ್ರೀರಾಮಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಹೇಳಿದರು. ಇದನ್ನೂ ಓದಿ: ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ: ಪ್ರಮೋದ್ ಮುತಾಲಿಕ್

  • ಈದ್ ಹಬ್ಬದಂದು ಆರತಿ ಮಾಡಬೇಡಿ: ರಾಜ್ ಠಾಕ್ರೆ ಮನವಿ

    ಈದ್ ಹಬ್ಬದಂದು ಆರತಿ ಮಾಡಬೇಡಿ: ರಾಜ್ ಠಾಕ್ರೆ ಮನವಿ

    ಮುಂಬೈ: ರಂಜಾನ್‌ ಈದ್ ದಿನದಂದು ಆರತಿ ಸೇರಿದಂತೆ ಹಬ್ಬದ ಆಚರಣೆಗೆ ಅಡ್ಡಿಪಡಿಸುವ ಯಾವುದನ್ನೂ ಮಾಡಬೇಡಿ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‍ ಠಾಕ್ರೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾಳೆ ಈದ್. ಈ ಬಗ್ಗೆ ಇದರ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ. ಮುಸ್ಲಿಂ ಸಮುದಾಯವು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಈ ಹಿಂದೆ ನಿರ್ಧರಿಸಿದ ಪ್ರಕಾರವಾಗಿ ಈ ಹಬ್ಬದ ದಿನ ಆರತಿ ಮಾಡಬೇಡಿ ಎಂದ ಅವರು, ಧ್ವನಿವರ್ಧಕಗಳ ಸಮಸ್ಯೆ ಧಾರ್ಮಿಕವಲ್ಲ. ಆದರೆ ಸಾಮಾಜಿಕವಾಗಿದೆ. ಮುಂದಿನ ಹಂತವನ್ನು ನಾಳೆ ತಿಳಿಸುತ್ತೇನೆ ಎಂದು ತಿಳಿಸಿದರು.

    ಈದ್ ನಂತರ ಮಹಾರಾಷ್ಟ್ರದ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದು ಹಾಕದಿದ್ದರೆ ಮುಸ್ಲಿಂ ಧಾರ್ಮಿಕ ಸ್ಥಳಗಳ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸಬೇಕಾಗಿತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಮೇ 3ರೊಳಗೆ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ, ಮಹಾರಾಷ್ಟ್ರದ ಶಕ್ತಿಯನ್ನು ತೋರಿಸುತ್ತೇವೆ: ರಾಜ್ ಠಾಕ್ರೆ

    loud speaker

    ಮೇ 3 ರಂದು ಈದ್ ಇದೆ. ಹಬ್ಬವನ್ನು ಹಾಳು ಮಾಡಲು ನಾನು ಬಯಸುವುದಿಲ್ಲ, ಆದರೆ ಮೇ 4ರ ನಂತರ ನಾವು ಕೇಳುವುದಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾವು ಡಬಲ್ ಪವರ್‍ನಿಂದ ಹನುಮಾನ್ ಚಾಲೀಸಾವನ್ನು ಪಠಿಸುತ್ತೇವೆ. ನಮ್ಮ ವಿನಂತಿಯನ್ನು ನೀವು ಅರ್ಥಮಾಡಿಕೊಳ್ಳದಿದ್ದರೆ, ನಾವು ಅದನ್ನು ನಮ್ಮ ರೀತಿಯಲ್ಲಿ ನಿಭಾಯಿಸುತ್ತೇವೆ ಎಂದಿದ್ದರು. ಇದನ್ನೂ ಓದಿ: ನನ್ನ ಬಂಧನದ ಹಿಂದೆ ಪ್ರಧಾನಿ ಕಾರ್ಯಾಲಯದ ಗೋಡ್ಸೆ ಭಕ್ತ ಕೈವಾಡವಿದೆ: ಜಿಗ್ನೇಶ್‌ ಮೇವಾನಿ

  • ಆಂಧ್ರ, ತಮಿಳುನಾಡಲ್ಲೂ ಆನ್ ಆಗಲಿದೆ ಲೌಡ್ ಸ್ಪೀಕರ್!

    ಆಂಧ್ರ, ತಮಿಳುನಾಡಲ್ಲೂ ಆನ್ ಆಗಲಿದೆ ಲೌಡ್ ಸ್ಪೀಕರ್!

    ಡಾ.ಕೆ.ರಾಜು ನಿರ್ಮಾಣದ ಲೌಡ್ ಸ್ಪೀಕರ್ ಚಿತ್ರ ಇದೇ ತಿಂಗಳ 10ನೇ ತಾರೀಕಿನಂದು ಬಿಡುಗಡೆಯಾಗಲಿದೆ. ಈ ಹಂತದಲ್ಲಿ ಚಿತ್ರತಂಡ ಮತ್ತೊಂದು ಖುಷಿಯ ವಿಚಾರವನ್ನು ಹಂಚಿಕೊಂಡಿದೆ.

    ಕರ್ನಾಟಕದಲ್ಲಿ ಹೆಚ್ಚು ಸಂಖ್ಯೆಯ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಲೌಡ್ ಸ್ಪೀಕರ್ ಹೊರರಾಜ್ಯಗಳಲ್ಲಿಯೂ ಬಿಡುಗಡೆಯಾಗಲಿದೆ. ಆಂಧ್ರ ಮತ್ತು ತಮಿಳುನಾಡುಗಳಲ್ಲಿಯೂ ಈ ಚಿತ್ರ ಬಿಡುಗಡೆಯಾಗುವುದು ಗ್ಯಾರೆಂಟಿ.

    ಇದು ಹೊಸ ಬಗೆಯ ಕಥಾ ಹಂದರ ಹೊಂದಿರುವ ಚಿತ್ರ. ಈವತ್ತಿಗೆ ಮೊಬೈಲ್ ಅಂದರೆ ಸರ್ವಂತರ್ಯಾಮಿ. ತೀರಾ ಹಳ್ಳಿಗಾಡುಗಳಲ್ಲಿಯೂ ಜನ ಮೊಬೈಲು ಬಿಟ್ಟು ಬದುಕಲಾರದಂಥಾ ವಾತಾವರಣ. ಆದರೆ, ಒಂದೇ ಒಂದು ದಿನದ ಮಟ್ಟಿಗೆ ಲೌಡ್ ಸ್ಪೀಕರ್ ಆನ್ ಮಾಡಿಕೊಂಡೇ ಮಾತಾಡುವ ಛಾಲೆಂಜನ್ನೇನಾದರೂ ಹಾಕಿದರೆ ಬಹುತೇಕರು ಎಸ್ಕೇಪಾಗುತ್ತಾರೆ. ಅದಕ್ಕೆ ಕಾರಣ ಪ್ರತೀ ಮನುಷ್ಯನೂ ಬಚ್ಚಿಟ್ಟುಕೊಂಡಿರೋ ರಹಸ್ಯಗಳು!

    ಅಂಥಾದ್ದರಲ್ಲೂ ಒಂದು ದಿನ ಪೂರ್ತಿ ಲೌಡ್ ಸ್ಪೀಕರ್ ಆನ್ ಮಾಡಿಕೊಂಡೇ ಮಾತಾಡಬೇಕಾಗಿ ಬಂದಾಗ ಅದೇನೇನು ಅವಘಡಗಳು ಸಂಭವಿಸುತ್ತವೆ ಎಂಬುದರ ಸುತ್ತ ಈ ಕಥೆ ಹೆಣೆಯಲ್ಪಟ್ಟಿದೆ. ಈ ಹಿಂದೆ ಧೈರ್ಯಂ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಡಾ.ಕೆ.ಆರ್.ರಾಜು ಅವರು ಹೊಸತನದ ಕಾರಣದಿಂದಲೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಧೈರ್ಯಂ ಚಿತ್ರದ ಮೂಲಕ ಅಜೇಯ್ ರಾವ್ ಅವರಿಗೆ ಮಾಸ್ ಲುಕ್ಕು ಕೊಟ್ಟಿದ್ದ ಶಿವತೇಜಸ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

    ಇದೀಗ ಆಂಧ್ರ ಮತ್ತು ತಮಿಳುನಾಡುಗಳಲ್ಲಿಯೂ ಬಿಡುಗಡೆಗೆ ತಯಾರಾಗಿರುವ ಈ ಚಿತ್ರ ಬೇರೆ ಬೇರೆ ಭಾಷೆಗಳಿಗೆ ರೀಮೇಕ್ ಆಗುವ ಭರವಸೆಯನ್ನೂ ಕೂಡಾ ಚಿತ್ರ ತಂಡ ಇಟ್ಟುಕೊಂಡಿದೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರೋ ಲೌಡ್ ಸ್ಪೀಕರ್ ಆನ್ ಆಗಲು ಕೆಲ ದಿನಗಳು ಮಾತ್ರ ಬಾಕಿ ಉಳಿದಿವೆ.