Tag: lotus

  • ಅಭಿಮನ್ಯುವಿಗೆ ಮಾಡಿದಂತೆ ಇಡೀ ಭಾರತಕ್ಕೆ ಚಕ್ರವ್ಯೂಹ ರಚಿಸಿದ್ದಾರೆ, ದೇಶವನ್ನ ಧ್ವಂಸಗೊಳಿಸುತ್ತಾರೆ – ರಾಗಾ ಆತಂಕ

    ಅಭಿಮನ್ಯುವಿಗೆ ಮಾಡಿದಂತೆ ಇಡೀ ಭಾರತಕ್ಕೆ ಚಕ್ರವ್ಯೂಹ ರಚಿಸಿದ್ದಾರೆ, ದೇಶವನ್ನ ಧ್ವಂಸಗೊಳಿಸುತ್ತಾರೆ – ರಾಗಾ ಆತಂಕ

    – ಲೋಕಸಭೆಯಲ್ಲಿ ʻಕುರುಕ್ಷೇತ್ರʼ ನೆನಪಿಸಿದ ರಾಹುಲ್‌ ಗಾಂಧಿ

    ನವದೆಹಲಿ: 21ನೇ ಶತಮಾನದಲ್ಲಿ ಹೊಸ ಚಕ್ರವ್ಯೂಹ (Chakravyuh) ರೂಪುಗೊಂಡಿದೆ. ಅದು ಕಮಲದ ರೂಪದಲ್ಲಿಯೇ ಇದೆ. ಅಂದು ಅಭಿಮನ್ಯುವಿಗೆ ಏನು ಮಾಡಲಾಗಿತ್ತೋ, ಅದು ಈಗ ಭಾರತಕ್ಕೂ ಮಾಡಲಾಗುತ್ತಿದೆ. ಇಡೀ ಭಾರತಕ್ಕೆ ಚಕ್ರವ್ಯೂಹ ರಚಿಸಿ ದೇಶವನ್ನು ಧ್ವಂಸಗೊಳಿಸಲಿದ್ದಾರೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಆತಂಕ ಹೊರಹಾಕಿದ್ದಾರೆ.

    ಲೋಕಸಭೆಯಲ್ಲಿಂದು (Lok Sabha) 2024-25ನೇ ಸಾಲಿನ ಬಜೆಟ್‌ (Union Budget 2024-25) ಮೇಲಿನ ಚರ್ಚೆ ಮೇಲೆ ರಾಹುಲ್‌ ಗಾಂಧಿ ಮಾತನಾಡಿದರು. ಭಾರತದಲ್ಲಿ ಭಯದ ವಾತಾವರಣವಿದೆ. ಆ ಭಯವು ನಮ್ಮ ದೇಶದ ಪ್ರತಿಯೊಂದು ಅಂಶವನ್ನು ವ್ಯಾಪಿಸಿದೆ. ಅಗ್ನೀವೀರರಿಗೆ ಪಿಂಚಣಿಗಾಗಿ ಒಂದು ರೂಪಾಯಿ ಬಜೆಟ್‌ನಲ್ಲಿ ಇಟ್ಟಿಲ್ಲ. ರೈತರಿಗೆ ಬೆಂಬಲ ಬೆಲೆ ಖಾತ್ರಿಪಡಿಸಿಲ್ಲ ಎಂದು ಹೇಳಿದ್ದಾರೆ.

    ಕುರುಕ್ಷೇತ್ರದಲ್ಲಿ ಅಭಿಮನ್ಯುವನ್ನು (Abhimanyu) ಆರು ಜನ ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಂದಿದ್ದರು. ನಾನು ಈ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಚಕ್ರವ್ಯೂಹಕ್ಕೆ ʻಪದ್ಮವ್ಯೂಹʼ ಎಂಬ ಹೆಸರೂ ಇದೆ. ಪದ್ಮವ್ಯೂಹ ಅಂದರೆ ಕಮಲ ರಚನೆ ಎಂಬುದು ನನಗೆ ತಿಳಿಯಿತು. ಚಕ್ರವ್ಯೂಹ ಕಮಲದ ಆಕಾರದಲ್ಲಿದೆ. ಅಂದ್ರೆ 21ನೇ ಶತಮಾನದಲ್ಲಿ, ಹೊಸ ಚಕ್ರವ್ಯೂಹ ರೂಪುಗೊಂಡಿದೆ. ಈ ಹೊಸ ಚಕ್ರವ್ಯೂಹ ಸಹ ಕಮಲದ ರೂಪದಲ್ಲಿಯೇ ಇದೆ. ಪ್ರಧಾನ ಮಂತ್ರಿ ತಮ್ಮ ಎದೆಯ ಮೇಲೆ ಅದರ ಚಿಹ್ನೆಯನ್ನು ಸಹ ಧರಿಸುತ್ತಾರೆ. ಅಭಿಮನ್ಯುವಿಗೆ ಏನು ಮಾಡಲಾಗಿತ್ತೋ, ಅದು ಈಗ ಭಾರತಕ್ಕೂ ಮಾಡಲಾಗ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಯುವಕರು, ರೈತರು, ಮಹಿಳೆಯರು, ಸಣ್ಣ ಮತ್ತು ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದೂ ಸಹ ಚಕ್ರವ್ಯೂಹ ಇದೆ, ಕೇಂದ್ರದ ಚಕ್ರವ್ಯೂದಲ್ಲಿ ಆರು ಜನರಿದ್ದಾರೆ. ಇಂದಿಗೂ ಸಹ ಈ ಆರು ಜನರು ದೇಶವನ್ನ ನಿಯಂತ್ರಣ ಮಾಡ್ತಾ ಇದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ (Gautam Adani). ಈ 6 ಜನ ಇಂದಿನ ಚಕ್ರವ್ಯೂದಲ್ಲಿರುವವರು ಎಂದು ಲೇವಡಿ ಮಾಡಿದರು.

    ಭಾರತವನ್ನು ವಶಪಡಿಸಿಕೊಂಡ ಚಕ್ರವ್ಯೂಹದ ಹಿಂದೆ 3 ಶಕ್ತಿಗಳಿವೆ. ಏಕಸ್ವಾಮ್ಯ ಬಂಡವಾಳದ ಕಲ್ಪನೆ. ಅಂದ್ರೆ ದೇಶದಲ್ಲಿರುವ ಕೇವಲ ಇಬ್ಬರಿಗೆ ಮಾತ್ರ ಸಂಪೂರ್ಣ ಭಾರತೀಯ ಸಂಪತ್ತನ್ನು ಹೊಂದಲು ಅವಕಾಶ ನೀಡಬೇಕು. ಎರಡನೇ ಶಕ್ತಿ ಈ ರಾಷ್ಟ್ರದ ಸಂಸ್ಥೆಗಳಾಗಿರುವ ಸಿಬಿಐ, ಇಡಿ ಹಾಗೂ ಐಟಿ ತನಿಖಾ ಏಜೆನ್ಸಿಗಳು ಹಾಗೂ 3ನೇ ಶಕ್ತಿಯಾದ ರಾಜಕೀಯ ಕಾರ್ಯನಿರ್ವಾಹಕ ಸಾರಾಂಶ. ಈ ಅಂಶಗಳನ್ನು ಚಕ್ರವ್ಯೂಹ ಒಳಗೊಂಡಿದೆ. ಈ ಚಕ್ರವ್ಯೂಹವು ಕೆಲವರ ಹೃದಯಭಾಗದಲ್ಲಿದೆ. ಈ ವ್ಯೂಹದ ಮೂಲಕ ದೇಶವನ್ನು ಧ್ವಂಸಗೊಳಿಸಲಿದ್ದಾರೆ ಎಂದು ಆತಂಕ ಹೊರಹಾಕಿದರು. ರಾಹುಲ್‌ ಗಾಂಧಿ ಅವರ ಭಾಷಣಕ್ಕೆ ಆಡಳಿತ ಪಕ್ಷದಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

    ಮುಂದುವರಿದು ಮಾತನಾಡಿದ ರಾಗಾ, ಈ ಬಾರಿಯ ಬಜೆಟ್ ಚಕ್ರವ್ಯೂಹದ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಿದ್ದೆ. ಈ ದೇಶದ ರೈತರಿಗೆ ಸಹಾಯ ಮಾಡುತ್ತದೆ. ಈ ದೇಶದ ಯುವಕರಿಗೆ ಸಹಾಯ ಮಾಡುತ್ತದೆ, ಈ ದೇಶದ ಕಾರ್ಮಿಕರು, ಸಣ್ಣ ಉದ್ಯಮಗಳಿಗೆ ಸಹಾಯ ಮಾಡುತ್ತದೆ ಎಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ ಚಕ್ರವ್ಯೂಹದ ಚೌಕಟ್ಟನ್ನು ಬಲಪಡಿಸುವುದು ಈ ಬಜೆಟ್‌ನ ಏಕೈಕ ಗುರಿಯಾಗಿದೆ. ಪ್ರಜಾಪ್ರಭುತ್ವದ ರಚನೆ ಮತ್ತು ಕೆಲ ರಾಜ್ಯ ಹಾಗೂ ಏಜೆನ್ಸಿಗಳನ್ನು ನಾಶಪಡಿಸುವ ರಾಜಕೀಯ ದುರುದ್ದೇಶ ಇದರಲ್ಲಿದೆ ಎಂದು ಕೆಂಡಕಾರಿದರು.

  • ಗಣರಾಜ್ಯೋತ್ಸವ ನೃತ್ಯದಲ್ಲಿ ಕಮಲದ ಹೂವನ್ನು ಎದ್ದು ಕಾಣುವಂತೆ ತೋರಿಸಿದ್ದರು – ಶಿವಲಿಂಗೇಗೌಡ

    ಗಣರಾಜ್ಯೋತ್ಸವ ನೃತ್ಯದಲ್ಲಿ ಕಮಲದ ಹೂವನ್ನು ಎದ್ದು ಕಾಣುವಂತೆ ತೋರಿಸಿದ್ದರು – ಶಿವಲಿಂಗೇಗೌಡ

    ಹಾಸನ: ರಾಷ್ಟ್ರದ ಮೂರು ಲಾಂಛನಗಳನ್ನು ಚಿಕ್ಕದಾಗಿ ತೋರಿಸಿ, ಕಮಲದ ಹೂವನ್ನು (Lotus) ಬಹಳ ದೊಡ್ಡದಾಗಿ, ಎದ್ದು ಕಾಣುವ ರೀತಿಯಲ್ಲಿ ತೋರಿಸಿದ್ದರು. ಆದ್ದರಿಂದ ಮೂರು ಚಿಹ್ನೆಗಳು ಕಡಿಮೆ ಹಾಕಿ ಕಮಲವನ್ನು ಏಕೆ ದೊಡ್ಡದಾಗಿ ಹಾಕಿದ್ದೀರಾ ಎಂದು ಶಿಕ್ಷಕಿಯನ್ನು ಪ್ರಶ್ನಿಸಿದೆ ಎಂದು ಶಾಸಕ ಶಿವಲಿಂಗೇಗೌಡ (Shivalinge Gowda ) ಅವರು ಸ್ಪಷ್ಟನೆ ನೀಡಿದ್ದಾರೆ.

    ಇತ್ತೀಚೆಗೆ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಕಮಲದ ಹೂವಿನ ಚಿತ್ರ ಹಿಡಿದು ಶಾಲಾ ಮಕ್ಕಳು ನೃತ್ಯ ಮಾಡಿದ್ದಕ್ಕೆ ಶಾಸಕ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಇದೇ ಕಾರಣಕ್ಕೆ ಮೊದಲ ಬಹುಮಾನ ಪಡೆದ ಶಾಲೆಗೆ ನಾಲ್ಕನೇ ಬಹುಮಾನ ನೀಡಿದ್ದರು ಎಂಬ ಆರೋಪ ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಅರಸೀಕೆರೆಯಲ್ಲಿ (Arsikere) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.ಇದನ್ನೂ ಓದಿ: ವಿಜಯಪುರದಲ್ಲಿ ಎರಡು ಬಾರಿ ಭೂಕಂಪನ – ಆತಂಕದಲ್ಲಿ ಜನರು

     ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಮ್ಮ ನಗರದ ಒಂದು ಶಾಲೆ ನೃತ್ಯ ಮಾಡಿದೆ. ಈ ಸಂದರ್ಭದಲ್ಲಿ  ಪ್ರಾಣಿ ಹುಲಿ, ಪಕ್ಷಿ ನವಿಲು ಹಾಗೂ ಅಶೋಕ ಸ್ತಂಭದ ಚಿತ್ರಗಳನ್ನ ನೃತ್ಯದಲ್ಲಿ ಉಪಯೊಗಿಸಿದ್ದರು. ಅದರ ಜೊತೆಯಲ್ಲಿ ಕಮಲದ ಹೂವನ್ನೂ ಪ್ರದರ್ಶಿಸಿದ್ದರು. ಈ ವೇಳೆ ರಾಷ್ಟ್ರದ ಮೂರು ಲಾಂಛನಗಳನ್ನು ಚಿಕ್ಕದಾಗಿ ತೋರಿಸಿ, ಕಮಲದ ಹೂವನ್ನು ಬಹಳ ದೊಡ್ಡದಾಗಿ, ಎದ್ದು ಕಾಣುವ ರೀತಿಯಲ್ಲಿ ಹಾಕಿದ್ದರು. ಆದ್ದರಿಂದ ಮೂರು ಚಿಹ್ನೆಗಳು ಕಡಿಮೆ ಹಾಕಿ ಕಮಲವನ್ನು ದೊಡ್ಡದಾಗಿ ಹಾಕಿದ್ದೀರಾ ಎಂದು ಶಿಕ್ಷಕಿಯನ್ನು ಪ್ರಶ್ನಿಸಿದ್ದು ನಿಜ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ರಾಜ್ಯಾದ್ಯಂತ ಹೋರಾಟದ ಕಿಚ್ಚು – ಮಂಡ್ಯದಲ್ಲಿಂದು ಹೆಚ್‌ಡಿಕೆ, ರೆಡ್ಡಿ ಪಾದಯಾತ್ರೆ

    ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ. ರಾಷ್ಟ್ರ ಪ್ರೇಮ,  ಸಂವಿಧಾನ, ರಾಷ್ಟ್ರ ಧ್ವಜ ಇವೆಲ್ಲದರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಅಂದು ಪ್ರದರ್ಶಿಸಿದ ನೃತ್ಯಗಳಿಗೆ ಬಹುಮಾನ ವಿತರಿಸುವುದರಲ್ಲಿ ನನ್ನ ಪಾತ್ರವಿಲ್ಲ. ಅದನ್ನು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನೆ ಮಾಡಬಹುದು. ನಾನು ಅಂತಹ ಕೀಳುಮಟ್ಟದ ರಾಜಕಾರಣ ಮಾಡುವವನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶಾಲಾ ಬಸ್-ಟ್ರ್ಯಾಕ್ಟರ್‌ ನಡುವೆ ಭೀಕರ ಅಪಘಾತ – ನಾಲ್ವರು ವಿದ್ಯಾರ್ಥಿಗಳ ದುರ್ಮರಣ

     ಅಂದು ಏನಾಗಿತ್ತು?
    ಜ.26 ರಂದು ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರೀಯ ಹೂವು ಕಮಲದ ಹೂವಿನ ಚಿತ್ರವನ್ನು ಹಿಡಿದು ಖಾಸಗಿ ಶಾಲೆಯಾದ ಚಂದ್ರಶೇಖರ ಭಾರತಿ ಶಾಲೆಯ ವಿದ್ಯಾರ್ಥಿಗಳು ನೃತ್ಯ ಮಾಡಿದ್ದರು. ಇದಕ್ಕೆ ಶಾಸಕ ಶಿವಲಿಂಗೇಗೌಡ ಕಮಲದ ಹೂವನ್ನು ಬಹಳ ದೊಡ್ಡ ಪ್ರಮಾಣದಲ್ಲಿ, ಎದ್ದು ಕಾಣುವ ರೀತಿಯಲ್ಲಿ ಹಾಕಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಮೊದಲ ಬಹುಮಾನ ಪಡೆದಿದ್ದ ಶಾಲೆಗೆ ನಾಲ್ಕನೇ ಬಹುಮಾನ ಸಿಗುವಂತೆ ಮಾಡಿದ್ದಾರೆ ಎಂಬ ಆರೋಪ ಸಹ ಅವರ ಮೇಲೆ ಕೇಳಿಬಂದಿತ್ತು. ಇದನ್ನೂ ಓದಿ: ಟೆಕ್ಕಿ ಯುವತಿಯನ್ನ ಗುಂಡಿಕ್ಕಿ ಹತ್ಯೆಗೈದ ಪ್ರಿಯತಮ – ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ?

  • ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಮಲ ಪ್ರದರ್ಶಿಸಿದ ಮಕ್ಕಳು – ಶಾಸಕ ಶಿವಲಿಂಗೇಗೌಡ ಗರಂ

    ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಮಲ ಪ್ರದರ್ಶಿಸಿದ ಮಕ್ಕಳು – ಶಾಸಕ ಶಿವಲಿಂಗೇಗೌಡ ಗರಂ

    – ಮಕ್ಕಳನ್ನು ಹೇಗೆ ಉದ್ಧಾರ ಮಾಡ್ತೀರಾ ಅಂತಾ ಶಿಕ್ಷಕರಿಗೆ ತರಾಟೆ

    ಹಾಸನ: ಅರಸೀಕೆರೆಯ (Arasikere) ಶಾಲೆಯೊಂದರಲ್ಲಿ (School) ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಗರಂ ಆಗಿದ್ದಾರೆ.

    ಗಣರಾಜ್ಯೋತ್ಸವ (Republic Day) ಅಂಗವಾಗಿ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭ ಶಾಲಾ ಮಕ್ಕಳು ನೃತ್ಯ ಪ್ರದರ್ಶನವೊಂದರಲ್ಲಿ ಭಾರತದ ರಾಷ್ಟ್ರೀಯ ಹೂವು ಕಮಲದ ಚಿತ್ರವನ್ನು ಪ್ರದರ್ಶಿಸಿದ್ದರು. ಇದರಿಂದ ಶಾಸಕ ಶಿವಲಿಂಗೇಗೌಡ, ತಹಸೀಲ್ದಾರ್ ಸಂತೋಷ್ ಹಾಗೂ ಸಾರ್ವಜನಿಕರು ಕೆಂಡಾಮಂಡಲವಾಗಿದ್ದು, ಶಾಲಾ ಶಿಕ್ಷಕಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ; ಮೊದಲ ಪಟ್ಟಿ ರಿಲೀಸ್

    ಶಾಲಾ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ, ಕಮಲ ಯಾವ ಪಕ್ಷದ ಚಿಹ್ನೆ? ಯಾವ ಸೀಮೆ ನಾಗರಿಕರು ನೀವು? ಮಕ್ಕಳನ್ನು ಹೇಗೆ ಉದ್ಧಾರ ಮಾಡ್ತೀರಾ ಎಂದು ಕೋಪಗೊಂಡಿದ್ದಾರೆ. ಈ ವೇಳೆ ಶಾಲಾ ಶಿಕ್ಷಕಿ, ಕಮಲ ಒಂದು ಪಕ್ಷದ ಚಿಹ್ನೆ ಹೇಗೆ ಆಗುತ್ತೆ ಸರ್? ನೀವು ಹೀಗೆ ಮಾತನಾಡಿದರೆ ಸರಿ ಹೋಗಲ್ಲ ಸರ್ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: 2024ರಲ್ಲಿ ಅಣು ಬಾಂಬ್ ಸ್ಫೋಟಗೊಳ್ಳುವ ಸಾಧ್ಯತೆ ಇದೆ: ಕೋಡಿಮಠ ಸ್ವಾಮೀಜಿ ಭವಿಷ್ಯ

    ಇದರಿಂದ ಸಿಟ್ಟುಗೊಂಡ ಶಾಸಕರು, ಏನು ಸರಿ ಹೋಗಲ್ಲ? ನಿಮಗೆ ನೋಟಿಸ್ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ತಹಸೀಲ್ದಾರ್ ಸಂತೋಷ್ ಮಧ್ಯಪ್ರವೇಶಿಸಿ ಒಂದು ಧರ್ಮ, ಒಂದು ಪಕ್ಷದ ಚಿಹ್ನೆ ಹೈಲೆಟ್ ಮಾಡಬಾರದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ ಲಕ್ಷ್ಮಿ, ನಿನ್ನೆ-ಮೊನ್ನೆ ನೃತ್ಯ ನೋಡಿದವರು ನೋಡಿದರೆ ಅದನ್ನು ಬಳಸುತ್ತಿರಲಿಲ್ಲ. ಸಭೆಯಲ್ಲಿ ಸೂಚನೆ ನೀಡಿದ್ದರೆ ಚಿಹ್ನೆ ಬಳಸುತ್ತಿರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಂಘಟನೆ ಕೆಲಸದಲ್ಲಿ ತೊಡಗಿಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡ್ತೇನೆ: ಜಗದೀಶ್ ಶೆಟ್ಟರ್

    ಇದಕ್ಕೆ ಪ್ರತ್ಯುತ್ತರ ಕೊಟ್ಟ ಶಾಸಕ ಶಿವಲಿಂಗೇಗೌಡ, ಇವರು ಎಂತದ್ದಾನ್ನಾದರೂ ತೋರಿಸಿಕೊಳ್ಳಲಿ ನನಗೇನು? ಅಲ್ಲಿ ಯಾವನೋ ಕುಳಿತಿರುತ್ತಾನೆ. ಬಿಜೆಪಿ ಚಿಹ್ನೆ ತೋರಿಸುತ್ತಿದ್ದಾರೆ ಎಂದು ಕಲ್ಲು ತೂರಿದರೆ ಮುಂದೆ ಆಗುವುದನ್ನು ನೋಡಬೇಕು. ಇದು ರಾಷ್ಟ್ರೀಯ ಹಬ್ಬ ಎಂದು ಸಿಡಿಮಿಡಿಗೊಂಡಿದ್ದಾರೆ. ಅತ್ಯುತ್ತಮ ನೃತ್ಯಕ್ಕಾಗಿ ಶಾಲಾ ಮಕ್ಕಳು ಮೊದಲ ಬಹುಮಾನ ಪಡೆದಿದ್ದರು. ಶಾಸಕರ ಆಕ್ಷೇಪದ ನಂತರ ತಾಲೂಕು ಆಡಳಿತ ನಾಲ್ಕನೇ ಬಹುಮಾನ ನೀಡಿದೆ. ಇದನ್ನೂ ಓದಿ: ಗಣೇಶ್ ಭಟ್ ಕೆತ್ತಿರೋ ವಿಗ್ರಹವನ್ನು ರಾಮದೇವರ ಬೆಟ್ಟಕ್ಕೆ ನೀಡುವಂತೆ ಇಕ್ಬಾಲ್ ಹುಸೇನ್ ಪತ್ರ

  • ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ-ಮಗ ಸಾವು

    ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ-ಮಗ ಸಾವು

    ಚಿಕ್ಕಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂವು ಕೀಳಲು ಹೋಗಿ ಕೆರೆಗೆ ಇಳಿದಿದ್ದ ತಂದೆ ಹಾಗೂ ಮಗ (Father-Son) ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಭೂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಂದೆ ಪುಟ್ಟರಾಜು (42) ಹಾಗೂ ಮಗ ಕೇಶವ (14) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ ದುರ್ದೈವಿಗಳು. ಮೃತರು ದೊಡ್ಡಬಳ್ಳಾಪುರದ ಶಾಂತಿನಗರದ ನಿವಾಸಿಗಳು. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ವ್ಯಾಪಾರಕ್ಕಾಗಿ ಬುಧವಾರ ಸಂಜೆ ಭೂಚನಹಳ್ಳಿ ಬಳಿಯ ಕೆರೆಗೆ ತಾವರೆ ಹೂ ಕೀಳಲು ಹೋಗಿದ್ದರು.

    ಕೆರೆಯ ದಡದಲ್ಲಿ ಮೊಬೈಲ್, ಚಪ್ಪಲಿ ಬಿಟ್ಟು ತಾವರೆ ಹೂ ಕೀಳಲು ತಂದೆ, ಮಗ ಮುಂದಾದಾಗ ಅವಘಡ ಸಂಭವಿಸಿದೆ. ಮತ್ತೊಬ್ಬ ತಾವರೆ ಹೂ ಮಾರಾಟಗಾರ ಕೆರೆಯ ಬಳಿ ಹೋದಾಗ ಇಬ್ಬರು ಕೆರೆಯಲ್ಲಿ ಮುಳುಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವು

    ಇದೀಗ ಅಗ್ನಿಶಾಮಕ ದಳ ಸಿಬ್ಬಂದಿ ಕೆರೆಯಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಘಟನೆ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯ ಆರೋಪ- 5 ವರ್ಷದ ಬಾಲಕಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಿ20 ಲೋಗೋದಲ್ಲಿ ಕಮಲ – ಉದ್ದೇಶಪೂರ್ವಕವಾಗಿ ಬಿಜೆಪಿ ತನ್ನ ಲೋಗೋ ತುರುಕಿದೆ ಎಂದ ಕಾಂಗ್ರೆಸ್‌

    ಜಿ20 ಲೋಗೋದಲ್ಲಿ ಕಮಲ – ಉದ್ದೇಶಪೂರ್ವಕವಾಗಿ ಬಿಜೆಪಿ ತನ್ನ ಲೋಗೋ ತುರುಕಿದೆ ಎಂದ ಕಾಂಗ್ರೆಸ್‌

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ಅನಾವರಣ ಮಾಡಿದ G20 ಶೃಂಗಸಭೆಯ ಲೋಗೋಕ್ಕೆ ಈಗ ಕಾಂಗ್ರೆಸ್‌(Congress) ಆಕ್ಷೇಪ ಎತ್ತಿದೆ.

    ಈ ಲೋಗೋದಲ್ಲಿ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಪಕ್ಷದ ಚಿನ್ಹೆಯಾದ ಕಮಲವನ್ನು(Lotus) ತುರುಕಿದೆ. ಇದು ಆಘಾತಕಾರಿ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಈ ಹಿಂದೆ ಖುದ್ದು ನೆಹರೂ ಅವರು, ಕಾಂಗ್ರೆಸ್ ಪಕ್ಷದ ಚಿನ್ಹೆ ಬಳಸುವ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಆದರೆ ಈಗ ಎಲ್ಲೆಲ್ಲಿ ಅವಕಾಶ ಸಿಗುತ್ತೋ ಅಲ್ಲೆಲ್ಲ ಬಿಜೆಪಿ ತಮ್ಮ ಪಕ್ಷದ ಪ್ರಚಾರ ಮಾಡಿಕೊಳ್ಳುತ್ತಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.

    ಇದಕ್ಕೆ ಬಿಜೆಪಿ(BJP) ರಾಜೀವ್ ಹೆಸರಿನ ಅರ್ಥ ಗೊತ್ತೆ? ಕಮಲ್‍ನಾಥ್ ಹೆಸರಿನಿಂದ ಕಮಲ ತೆಗೆಯುತ್ತೀರಾ ಎಂದು ಪ್ರಶ್ನಿಸಿ ಕಾಲೆಳೆದಿದೆ. ಕಮಲ ನಮ್ಮ ರಾಷ್ಟ್ರೀಯ ಹೂವು. ಇದು ಲಕ್ಷ್ಮಿಯ ಆಸನವೂ ಹೌದು. ನೀವು ರಾಷ್ಟ್ರೀಯ ಹೂವನ್ನು ವಿರೋಧಿಸುತ್ತೀರಾ? ರಾಷ್ಟ್ರೀಯ ಪುಷ್ಪಕ್ಕೆ ಅಪಮಾನ ಮಾಡುತ್ತೀರಾ? ಇಲ್ಲಿ ನಿಮಗೆ ಅಜೆಂಡಾ ಇದ್ದಂತಿಲ್ಲ. ಬಿಜೆಪಿಯ ಎಲ್ಲಾ ಕೆಲಸಗಳನ್ನು ಟೀಕಿಸುವುದೇ ನಿಮ್ಮ ಅಜೆಂಡಾ ಆಗಿದೆ ಎಂದು ತಿರುಗೇಟು ನೀಡಿದೆ. ಇದನ್ನೂ ಓದಿ: ನನ್ನ ತೇಜೋವಧೆ ಆಗ್ತಿದೆ – ವಿವಾದಿತ ಹೇಳಿಕೆಯನ್ನು ಹಿಂಪಡೆದ ಸತೀಶ್ ಜಾರಕಿಹೊಳಿ

    ಭಾರತವು ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿನರೇಂದ್ರ ಮೋದಿ ಅವರು ಜಿ20 ಅಧ್ಯಕ್ಷ ಗಾದಿಯ ಲೋಗೊ, ಥೀಮ್(ಘೋಷವಾಕ್ಯ) ಮತ್ತು ವೆಬ್‌ಸೈಟ್ ಅನಾವರಣಗೊಳಿಸಿದ್ದರು.

    ಭೂಮಿಯನ್ನು ಕಮಲದೊಂದಿಗೆ ಜೋಡಿಸಲಾಗಿರುವ ಲೋಗೋ ಮತ್ತು ವಸುದೈವ ಕುಟುಂಬಕಂ(ವಿಶ್ವವೇ ಕುಟುಂಬ) ಘೋಷವಾಕ್ಯ ಬಿಡುಗಡೆ ಮಾಡಿ ಅದರ ಅರ್ಥವನ್ನು ವಿವರಿಸಿದ್ದರು.

    ಮೋದಿ ಹೇಳಿದ್ದು ಏನು?
    ಜಿ20 ಲೋಗೋದಲ್ಲಿನ ಕಮಲದ ಚಿಹ್ನೆಯು ಈ ಸಮಯದಲ್ಲಿ ಭರವಸೆಯ ಪ್ರಾತಿನಿಧಿಯಾಗಿದೆ. ಎಷ್ಟೇ ಪ್ರತಿಕೂಲ ಸಂದರ್ಭಗಳಿದ್ದರೂ ಕಮಲ ಅರಳುತ್ತಲೇ ಇರುತ್ತದೆ. ಜಗತ್ತು ಆಳವಾದ ಬಿಕ್ಕಟ್ಟಿನಲ್ಲಿದ್ದರೂ, ನಾವು ಇನ್ನೂ ಪ್ರಗತಿ ಸಾಧಿಸಬಹುದು ಮತ್ತು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಬಹುದು.

    ಭಾರತೀಯ ಸಂಸ್ಕೃತಿಯಲ್ಲಿ, ಜ್ಞಾನ ಮತ್ತು ಸಮೃದ್ಧಿಯ ದೇವತೆಗಳಿಬ್ಬರೂ ಕಮಲದ ಮೇಲೆ ಕುಳಿತಿದ್ದಾರೆ. ಇದು ಇಂದು ಜಗತ್ತಿಗೆ ಅತ್ಯಂತ ಅಗತ್ಯವಾಗಿದೆ. ನಮ್ಮ ಪರಿಸ್ಥಿತಿಗಳನ್ನು ಜಯಿಸಲು ನಮಗೆ ಸಹಾಯ ಮಾಡುವ ಹಂಚಿದ ಜ್ಞಾನ. ಕೊನೆಯ ಮೈಲಿನಲ್ಲಿರುವ ಕೊನೆಯ ವ್ಯಕ್ತಿಯನ್ನು ತಲುಪುವ ಹಂಚಿಕೆಯ ಸಮೃದ್ಧಿ. ಅದಕ್ಕಾಗಿಯೇ ಜಿ20 ಲಾಂಛನದಲ್ಲಿ ಭೂಮಿಯನ್ನು ಕಮಲದ ಮೇಲೆ ಇರಿಸಲಾಗಿದೆ.

    ಲಾಂಛನದಲ್ಲಿರುವ ಕಮಲದ ಏಳು ದಳಗಳು ಮಹತ್ವಪೂರ್ಣವಾಗಿವೆ. ಆ ದಳಗಳು ಏಳು ಖಂಡಗಳನ್ನು ಪ್ರತಿನಿಧಿಸುತ್ತದೆ. ಸಂಗೀತದಲ್ಲಿ ಏಳು ಸ್ವರಗಳಿದ್ದು, ಈ ಸ್ವರಗಳು ಒಟ್ಟಿಗೆ ಸೇರಿದಾಗ, ಅವು ಪರಿಪೂರ್ಣ ಸಾಮರಸ್ಯವನ್ನು ಸೃಷ್ಟಿಸುತ್ತವೆ. ಈ ರೀತಿಯಾಗಿ ಎಲ್ಲ ದೇಶಗಳು ಸಾಮರಸ್ಯದಿಂದ ಒಂದಾಗಿ ಅಭಿವೃದ್ಧಿಯಾಗಬೇಕು.

    ಪ್ರಸ್ತುತ ಅಧ್ಯಕ್ಷ ಸ್ಥಾನ ವಹಿಸಿರುವ ಇಂಡೋನೇಷ್ಯಾದಿಂದ ಡಿಸೆಂಬರ್ 1 ರಂದು ಭಾರತ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.

    Live Tv
    [brid partner=56869869 player=32851 video=960834 autoplay=true]

  • ತಂದೆಯ ಹುಟ್ಟುಹಬ್ಬದಂದೇ ‘ಕೈ’ಗೆ ರಾಜೀನಾಮೆ – ಮೋದಿ ಸಂಪುಟದಲ್ಲಿ ಸಿಂಧಿಯಾ ಮಂತ್ರಿ?

    ತಂದೆಯ ಹುಟ್ಟುಹಬ್ಬದಂದೇ ‘ಕೈ’ಗೆ ರಾಜೀನಾಮೆ – ಮೋದಿ ಸಂಪುಟದಲ್ಲಿ ಸಿಂಧಿಯಾ ಮಂತ್ರಿ?

    – 20 ಮಂದಿ ಕೈ ಶಾಸಕರು ರಾಜೀನಾಮೆ
    – ಶಾಸಕರ ಜೊತೆ ಸಿಂಧಿಯಾ ಶೀಘ್ರವೇ ಬಿಜೆಪಿಗೆ ಸೇರ್ಪಡೆ

    ನವದೆಹಲಿ: ಮಧ್ಯಪ್ರದೇಶದಲ್ಲಿ ಕಮಲನಾಥ್ ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮೋದಿ ಸರ್ಕಾರದಲ್ಲಿ ಮಂತ್ರಿ ಆಗಲಿದ್ದಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

    ಹೌದು. ಇಂದು ಬೆಳಗ್ಗೆ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಂಧಿಯಾ ಭೇಟಿಯಾಗಿದ್ದರು. ಭೇಟಿಯಾದ ನಂತರ ಸಿಂಧಿಯಾ ಅವರು ಅಧಿಕೃತವಾಗಿ ಕಾಂಗ್ರೆಸ್ಸಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಜ್ಯೋತಿರಾಧಿತ್ಯ ಸಿಂಧಿಯಾ ರಾಜೀನಾಮೆ ನೀಡುತ್ತಿದ್ದಂತೆ ಮಧ್ಯಪ್ರದೇಶ 20 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿರುವ ಶಾಸಕರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಲಾಲ್ಜಿ ಟಂಡನ್ ಅವರಿಗೆ ರವಾನಿಸಿದ್ದಾರೆ.

    ಮೂಲಗಳ ಪ್ರಕಾರ ಸಿಂಧಿಯಾ ಹಲವು ದಿನಗಳ ಹಿಂದೆಯೇ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಬೇಕಿತ್ತು. ಆದರೆ ರಾಜೀನಾಮೆ ನೀಡಲಿರುವ ಕೈ ಶಾಸಕರ ನಿರ್ಧಾರ ಸ್ಪಷ್ಟವಾಗದ ಕಾರಣ ರಾಜೀನಾಮೆ ದಿನಾಂಕ ಮುಂದೂಡಿಕೆಯಾಗಿತ್ತು. ವಿಶೇಷ ಏನೆಂದರೆ ಇಂದು ಸಿಂಧಿಯಾ ಅವರ ತಂದೆ ಮಾಧವ್ ರಾವ್ ಸಿಂಧಿಯಾ ಅವರ ಜನ್ಮದಿನವಾಗಿದೆ. ಮಾಧವ್ ರಾವ್ ಈ ಹಿಂದೆ ರಾಜೀವ್ ಗಾಂಧಿ ಮತ್ತು ಪಿವಿ ನರಸಿಂಹ ರಾವ್ ಅವರ ಸರ್ಕಾರದಲ್ಲಿ ಕೇಂದ್ರ ಮಂತ್ರಿ ಆಗಿದ್ದರು.

    ಮೂಲಗಳ ಪ್ರಕಾರ ಸಿಂಧಿಯಾ ಅವರಿಗೆ ಮಂತ್ರಿ ಸ್ಥಾನ ನೀಡುವ ಆಫರ್ ಅನ್ನು ಬಿಜೆಪಿ ಹೈಕಮಾಂಡ್ ನೀಡಿದೆ. ರಾಜ್ಯಸಭೆಯ ಮೂಲಕ ಆಯ್ಕೆ ಮಾಡಿ ಮಂತ್ರಿ ಸ್ಥಾನ ನೀಡವುದಾಗಿ ಹೇಳಿದ್ದು, ಈ ಆಫರ್ ಅನ್ನು ಸಿಂಧಿಯಾ ಒಪ್ಪಿಕೊಂಡಿದ್ದಾರೆ.

    230 ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಇಬ್ಬರು ಶಾಸಕರ ನಿಧನದಿಂದ ಸದ್ಯ 228 ಶಾಸಕರಿದ್ದಾರೆ. ಸದ್ಯ 20 ಮಂದಿ ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಸಿಎಂ ಕಮಲನಾಥ್ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಬಹುಮತ ಸಾಬೀತು ಪಡಿಸಲು 105 ಶಾಸಕರ ಬೆಂಬಲ ಬೇಕಿದೆ. ಕಾಂಗ್ರೆಸ್ ಬಳಿ 95 ಮಂದಿ ಶಾಸಕರಿದ್ದು ಬಿಜೆಪಿ 107 ಸ್ಥಾನಗಳನ್ನು ಹೊಂದಿದೆ. ಅಲ್ಲದೇ ಕೆಲವು ಪಕ್ಷೇತರ ಶಾಸಕರ ನೆರವು ಬಿಜೆಪಿಗೆ ಸಿಗುವ ಸಾಧ್ಯತೆ ಇದೆ.

    ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

    ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿತ್ತು. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.

  • ಮಧ್ಯಪ್ರದೇಶದ ಕೈ ಶಾಸಕರ ಕಾವಲಿಗೆ ಒನ್ ಟು ಒನ್- ಒನ್ ಕನೆಕ್ಷನ್ ಆಪರೇಷನ್

    ಮಧ್ಯಪ್ರದೇಶದ ಕೈ ಶಾಸಕರ ಕಾವಲಿಗೆ ಒನ್ ಟು ಒನ್- ಒನ್ ಕನೆಕ್ಷನ್ ಆಪರೇಷನ್

    ಬೆಂಗಳೂರು: ಮಧ್ಯಪ್ರದೇಶದ ಕೈ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಎಚ್ಚರಿಕೆಯ ಅಸ್ತ್ರ ಪ್ರಯೋಗಿಸಿದೆ. ರಾಜ್ಯ ಬಿಜೆಪಿಯ ಯಾರೊಬ್ಬರನ್ನ ಗಣನೆಗೆ ತೆಗೆದುಕೊಳ್ಳದೇ ಹೈಕಮಾಂಡ್ ಪ್ಲ್ಯಾನ್ ಅನುಷ್ಠಾನಕ್ಕೆ ತರುವ ಕೆಲಸಕ್ಕೆ ರಹಸ್ಯ ಸೂತ್ರ ಹೆಣೆದಿರುವುದು ಗೊತ್ತಾಗಿದೆ. ಅದೇ ಒನ್ ಟು ಒನ್ – ಒನ್ ಕನೆಕ್ಷನ್ ಆಪರೇಷನ್ ತಂತ್ರ.

    ಅಂದಹಾಗೆ ಮಧ್ಯಪ್ರದೇಶದ ಕೈ ಶಾಸಕರು ಕರ್ನಾಟಕದಲ್ಲಿ ಸೇಫ್ ಎನ್ನುವ ವರದಿಯನ್ನು ಹೈಕಮಾಂಡ್ ತರಿಸಿಕೊಂಡಿತ್ತು. ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ಮಾತ್ರ ತಂದು ಶಾಸಕರನ್ನು ಶಿಫ್ಟ್ ಮಾಡುವ ಕೆಲಸ ಮಾಡಿತ್ತು. ಆ ಶಾಸಕರ ಕಾವಲಿಗೆ ನಾಯಕರನ್ನು ಗುಡ್ಡೆ ಹಾಕದೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರನ್ನು ಮಾತ್ರ ನೇಮಿಸಿ ಉಳಿದವರಿಗೆ ಪ್ಲ್ಯಾನ್ ಗೊತ್ತಾಗದಂತೆ ರಹಸ್ಯ ಕಾಪಾಡಿಕೊಂಡು ಬಂದಿದೆ.

    ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಅಥವಾ ಬೇರೆ ಯಾವುದೇ ನಾಯಕರಿಗಾಗಲೀ ಶಾಸಕರನ್ನ ಕಾವಲು ಕಾಯುವ ತಂತ್ರ ಗೊತ್ತಾಗದಂತೆ ರಹಸ್ಯ ಕಾಪಾಡಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ. ಪೊಲೀಸ್ ರಕ್ಷಣೆ ಕೊಡುವ ಕೆಲಸವನ್ನಷ್ಟೇ ಗೃಹ ಸಚಿವರು ಮಾಡಬೇಕು ಹೊರತು, ಶಾಸಕರ ಕಾಯುವ ತಂತ್ರದಲ್ಲಿ ಇರಬಾರದು ಎನ್ನುವುದು ಹೈಕಮಾಂಡ್ ಆದೇಶ ಎನ್ನಲಾಗಿದೆ.

    ಮಧ್ಯಪ್ರದೇಶದ ಶಾಸಕರ ಬಳಿ ಕರ್ನಾಟಕದ ಯಾವುದೇ ಬಿಜೆಪಿ ನಾಯಕರಾಗಲಿ, ಯಡಿಯೂರಪ್ಪ ಕ್ಯಾಬಿನೆಟ್ ಸಚಿವರು ಭೇಟಿ ಆಗಬಾರದು ಅಂತಾ ಹೈಕಮಾಂಡ್ ಫರ್ಮಾನು ಹೊರಡಿಸಿದೆ ಎನ್ನಲಾಗಿದೆ. ಯಡಿಯೂರಪ್ಪ ಸಂಪುಟದ ಇಬ್ಬರು ಪಕ್ಷನಿಷ್ಠ ಸಚಿವರನ್ನು ಮಧ್ಯಪ್ರದೇಶದ ಶಾಸಕರ ಕಾವಲಿಗೆ ನೇಮಿಸಿ ಎಂಬ ರಾಷ್ಟ್ರೀಯ ನಾಯಕರ ಸಲಹೆ ಕೂಡ ಬಿಜೆಪಿ ಹೈಕಮಾಂಡ್ ತಿರಸ್ಕರಿಸಿದೆ ಎನ್ನಲಾಗುತ್ತಿದೆ.

    ದೆಹಲಿಯಿಂದ ಬರುವ ಪ್ಲ್ಯಾನ್ ಅನ್ನು ಮಾತ್ರ ಅನುಷ್ಠಾನಕ್ಕೆ ತರುವ ಕೆಲಸವನ್ನ ಮಾತ್ರ ಅರವಿಂದ ಲಿಂಬಾವಳಿ ಮಾಡಬೇಕು ಎನ್ನುವ ಸಂದೇಶ ರಾಜ್ಯ ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ಆಪರೇಷನ್ ಕಮಲ ಎರಡು, ಮೂರು ಬಾರಿ ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ.

  • ಕಮಲದಲ್ಲಿ ‘ಮಲ’ವೂ ಇದೆ, ಸಂವಿಧಾನ ವಿರೋಧಿಸಿದ ಬಾಯಿಬುಡಕರು ಸಂಸದರಾಗಿದ್ದಾರೆ – ಕುಂವೀ

    ಕಮಲದಲ್ಲಿ ‘ಮಲ’ವೂ ಇದೆ, ಸಂವಿಧಾನ ವಿರೋಧಿಸಿದ ಬಾಯಿಬುಡಕರು ಸಂಸದರಾಗಿದ್ದಾರೆ – ಕುಂವೀ

    ಚಿತ್ರದುರ್ಗ: ಕಮಲದಲ್ಲಿ ‘ಮಲ’ವೂ ಇದೆ, ಕಮಲವು ಇದೆ ಎಂದು ಚಿತ್ರದುರ್ಗದಲ್ಲಿ ಸಾಹಿತಿ ಕುಂ. ವೀರಭದ್ರಪ್ಪ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ದೊಡ್ಡ ಮಟ್ಟದಲ್ಲಿ ವಿರೋಧಿಸಿದ ಬಾಯಿಬಡುಕರು ಈಗ ಸಂಸದರಾಗಿದ್ದಾರೆ. ಇದು ಪ್ರಜಾಪ್ರಭುತ್ವದ ವೇಷದಲ್ಲಿ ಸರ್ವಾಧಿಕಾರಿ ಶಕ್ತಿಗಳು ಪ್ರವೇಶ ಮಾಡುತ್ತಿದೆ. ಒಂದಾನೊಂದು ಕಾಲದಲ್ಲಿ ನನಗೆ ಕಮಲದ ಮೇಲೆ ಗೌರವ ಇತ್ತು. ಕಮಲದಲ್ಲಿ ಎರಡು ಪದ ಇದೆ. ಒಂದು ಕಮಲದಲ್ಲಿ ‘ಮಲ’ವೂ ಇದೆ, ಕಮಲವು ಇದೆ ಎಂದು ಹೇಳಿ ವ್ಯಂಗ್ಯವಾಡಿದರು.

    ಈಗ ಮಲಬದ್ಧತೆ ಆದರೆ ದೇಹದ ಆರೋಗ್ಯ ಹಾಳಾಗುತ್ತದೆ. ಹಾಗೆಯೇ ಕಮಲ ಒಂದು ದೇಶಕ್ಕೆ ಅಪಾಯವಾಗಲಿದೆ. ಅಲ್ಲದೆ ಮಲಬದ್ಧತೆಯಿಂದ ದೇಹದ ಆರೋಗ್ಯ ನಾಶವಾಗುತ್ತೋ, ದೇಹದ ಸಮತೋಲನ ಏರುಪೇರಾಗುತ್ತಾದೋ ಹಾಗೆಯೇ ಕಮಲದಿಂದ ಒಂದು ದೇಶದ ಆಡಳಿತ ವ್ಯವಸ್ಥೆ ಹಾಳಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ನಮ್ಮ ಪ್ರಾದೇಶಿಕ ಭಾಷೆಗಳು ಬಹಳ ಅಭದ್ರ ಸ್ಥಿತಿಯಲ್ಲಿ ಇದೆ. ಇಲ್ಲಿ ಕನ್ನಡ ಇದೆ, ಕರ್ನಾಟಕದಲ್ಲಿ ಅಸ್ಮಿತೆಯನ್ನು ನಾವು ಕಾಪಾಡಬೇಕು. ಆದರೆ ಈ ಪ್ರಾದೇಶಿಕ ಭಾಷೆಗಳ ಅಸ್ಮಿತೆಯನ್ನು ಧಕ್ಕೆ ತರುವಂತಹ ಒಂದು ವಾತಾವರಣವನ್ನು ಹಿಂದಿ ಭಾಷೆಯನ್ನು ಹೇರುವ ಮೂಲಕ ಕೇಂದ್ರ ಸರ್ಕಾರ ನಿರ್ಮಾಣ ಮಾಡುತ್ತಿದೆ ಎಂದು ದೂರಿದರು.

  • ಸಿದ್ದರಾಮಯ್ಯನವರ ಸಲಹೆಯನ್ನು ಸಿಎಂ ಪರಿಗಣಿಸಿದ್ದರೆ ಆಪರೇಷನ್ ಕಮಲ ನಡೆಯುತ್ತಿರಲಿಲ್ಲ!

    ಸಿದ್ದರಾಮಯ್ಯನವರ ಸಲಹೆಯನ್ನು ಸಿಎಂ ಪರಿಗಣಿಸಿದ್ದರೆ ಆಪರೇಷನ್ ಕಮಲ ನಡೆಯುತ್ತಿರಲಿಲ್ಲ!

    ಬೆಂಗಳೂರು: ಡಿಸೆಂಬರ್ ತಿಂಗಳಿನಲ್ಲಿ ಸಿಎಂ ಕುಮಾರಸ್ವಾಮಿಯವರು ಮಾಜಿ ಸಿಎಂ ಸಿದ್ದರಾಮಯ್ಯನವರ ಸಲಹೆಯನ್ನು ಪಾಲಿಸುತ್ತಿದ್ದರೆ ಶಾಸಕರ ಬಂಡಾಯ, ಆಪರೇಷನ್ ಕಮಲ ನಡೆಯುತ್ತಿರಲಿಲ್ಲ.

    ಹೌದು. ಕಳೆದ ಬೆಳಗಾವಿ ಅಧಿವೇಶನದ ಸಮಯದಲ್ಲೇ ಆಪರೇಷನ್ ಕಮಲದ ಭೀತಿ ಎದುರಾಗಿತ್ತು. ತೆರೆಮರೆಯಲ್ಲಿ ರಾಜಕೀಯ ಬೆಳವಣಿಗೆ ನಡೆಯುತ್ತಿರುವುದನ್ನು ಅರಿತ ಸಿದ್ದರಾಮಯ್ಯ ಸಿಎಂ ಎಚ್‍ಡಿಕೆಯಲ್ಲಿ, ಬಿಜೆಪಿಯವರು ಕೇಳುವ ಮುನ್ನವೇ ಒಂದು ಬಾರಿ ವಿಶ್ವಾಸ ಮತಯಾಚಿಸಿ ಬಿಡಿ. ಆಗ 6 ತಿಂಗಳು ಸರ್ಕಾರ ಸುಭದ್ರವಾಗಿರುತ್ತದೆ. ಯಾವ ಗಲಾಟೆಗಳಿಗೆ ಆಸ್ಪದ ಇರುವುದಿಲ್ಲ. ಆಪರೇಷನ್ ಕಮಲದ ಭೀತಿಯೂ ಇರುವುದಿಲ್ಲ ಎಂದು ಸಲಹೆ ನೀಡಿದ್ದರು ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಸಿದ್ದರಾಮಯ್ಯ ಅವರ ಸಲಹೆಯನ್ನು ಅಂದು ಕೇಳಿಯೂ ಕೇಳಿಸದಂತೆ ಸಿಎಂ ಕುಮಾರಸ್ವಾಮಿ ನಡೆದುಕೊಂಡಿದ್ದರು. ಈ ಸಲಹೆಯನ್ನು ಮಾನ್ಯ ಮಾಡದ ಪರಿಣಾಮವೇ ಆಪರೇಷನ್ ಕಮಲ, ಆಪರೇಷನ್ ಗುರುಗ್ರಾಮ, ಬಿಡದಿ ರೆಸಾರ್ಟ್ ಕಿತ್ತಾಟ, ಆಪರೇಷನ್ ಮೌನ ಕ್ರಾಂತಿ ಬೆಳವಣಿಗೆಗಳು ನಡೆದು ಈಗ ಆಪರೇಷನ್ ಲೋಟಸ್ ರಾಕೆಟ್ ನಡೆಯುವ ಹಂತಕ್ಕೆ ಬಂದಿದೆ.

    ಸರ್ಕಾರ ರಚಿಸುವಾಗಲೇ ಒಂದು ಬಾರಿ ವಿಶ್ವಾಸ ಮತಯಾಚನೆ ನಡೆದಿದೆ. ಮತ್ತೆ ಯಾಕೆ ಕೇಳಬೇಕು? ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ನಮ್ಮ ಸರ್ಕಾರ ಸಂಪೂರ್ಣ ಬೆಂಬ ನೀಡುತ್ತಾರೆ ಎನ್ನುವ ವಿಶ್ವಾಸದಲ್ಲಿ ಕುಮಾರಸ್ವಾಮಿ ಇದ್ದರು. ಆದರೆ ಜನವರಿಯಲ್ಲಿ ನಡೆದ ಬೆಳವಣಿಗೆಯೇ ಬೇರೆಯಾಗಿದ್ದು ಕಾಂಗ್ರೆಸ್ ಶಾಸಕರು ಬಹಿರಂಗವಾಗಿಯೇ ಬಂಡಾಯದ ಬಾವುಟ ಹಾರಿಸಿದ್ದಾರೆ.

    ಕುಮಾರಸ್ವಾಮಿ ಒಂದು ವೇಳೆ ಸಿದ್ದರಾಮಯ್ಯ ಸಲಹೆಯನ್ನು ಪರಿಗಣಿಸಿ ವಿಶ್ವಾಸ ಮತಯಾಚನೆ ಮಾಡಿದ್ದರೆ ಲೋಕಸಭಾ ಚುನಾವಣೆ ನಡೆಯುವವರೆಗೂ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ ಎನ್ನುವ ವಿಚಾರದ ಬಗ್ಗೆ ಕಾಂಗ್ರೆಸ್, ಜೆಡಿಎಸ್ ನಾಯಕರು ಈಗ ಚರ್ಚೆ ನಡೆಸುತ್ತಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv