Tag: lottery

  • ಗೆಳೆಯ ಲಾಟರಿಯಲ್ಲಿ ಗೆದ್ದ 30 ಕೋಟಿ ರೂ. ಕದ್ದು ಲವ್ವರ್‌ ಜೊತೆ ಕೇಡಿ ಲೇಡಿ ಎಸ್ಕೇಪ್‌

    ಗೆಳೆಯ ಲಾಟರಿಯಲ್ಲಿ ಗೆದ್ದ 30 ಕೋಟಿ ರೂ. ಕದ್ದು ಲವ್ವರ್‌ ಜೊತೆ ಕೇಡಿ ಲೇಡಿ ಎಸ್ಕೇಪ್‌

    ಒಟ್ಟಾವಾ: ವ್ಯಕ್ತಿಯೊಬ್ಬ ಲಾಟರಿಯಲ್ಲಿ (Lottery) ಗೆದ್ದಿದ್ದ ಸುಮಾರು 30 ಕೋಟಿ (CA$5) ರೂ. ಹಣವನ್ನು (Money) ಆತನ ಮಾಜಿ ಗೆಳತಿಯೇ ಕದ್ದು ತನ್ನ ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ಕೆನಡಾದಲ್ಲಿ (Canada) ನಡೆದಿದೆ.

    ವಿನ್ನಿಪೆಗ್‌ನ ಲಾರೆನ್ಸ್ ಕ್ಯಾಂಪ್‌ಬೆಲ್ ಎಂಬಾತ 2024 ರಲ್ಲಿ ಲಾಟರಿ ಟಿಕೆಟ್ ಖರೀದಿಸಿ, ಹಣ ಗೆದ್ದಿದ್ದ. ಈ ವೇಳೆ ಆತನ ಬಳಿ ಸರಿಯಾದ ಗುರುತಿನ ಚೀಟಿ ಇಲ್ಲದ ಕಾರಣ ಬಹುಮಾನವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಈ ವೇಳೆ ಲಾಟರಿ ವಿಭಾಗದ ಅಧಿಕಾರಿಗಳ ಸಲಹೆಯ ಪಡೆದು, ತನ್ನ ಗೆಳತಿ ಕ್ರಿಸ್ಟಲ್ ಆನ್ ಮೆಕ್ಕೇಯ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದ.

    ಸುಮಾರು ಒಂದುವರೆ ವಷಕ್ಕೂ ಹೆಚ್ಚು ಕಾಲ ಕ್ರಿಸ್ಟಲ್, ಕ್ಯಾಂಪ್‌ಬೆಲ್‌ನ ಜೊತೆಗೆ ಲಿವಿಂಗ್‌-ಟುಗೆದರ್‌ನಲ್ಲಿದ್ದು ವಿಶ್ವಾಸಗಳಿಸಿದ್ದಳು. ಇನ್ನೂ, ಆತನ ಬ್ಯಾಂಕ್‌ ಖಾತೆ ಇಲ್ಲದ ಕಾರಣ ಆಕೆಯ ಖಾತೆಯಲ್ಲೇ ಲಾಟರಿಯ ಹಣವನ್ನು ಕ್ಯಾಂಪ್‌ಬೆಲ್‌ ಇರಿಸಿದ್ದ. ಈಗ ಈ ಹಣವನ್ನೆಲ್ಲ ತೆಗೆದುಕೊಂಡು ಕ್ರಿಸ್ಟಲ್ ತನ್ನ ಹೊಸ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.

    ಇದಕ್ಕೂ ಮುನ್ನ ಇಬ್ಬರೂ ಶಾಪರ್ಸ್ ಡ್ರಗ್ ಮಾರ್ಟ್‌ನಲ್ಲಿ ಲಾಟರಿಯ ಚೆಕ್‌ ಹಿಡಿದು ವೀಡಿಯೋ ಮಾಡಿ ಬಿಟ್ಟಿದ್ದರು. ಅಲ್ಲದೇ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಫೋಟೋ ತೆಗೆಯುವಾಗ ಕ್ರಿಸ್ಟಲ್‌ ಮುಖದಲ್ಲಿ ಲವಲವಿಕೆ ಇರಲಿಲ್ಲ ಎಂದು ಕ್ಯಾಂಪ್‌ಬೆಲ್‌ ಹೇಳಿಕೊಂಡಿದ್ದಾನೆ. ಇನ್ನೂ ಕ್ರಿಸ್ಟಲ್‌ ನಾಪತ್ತೆಯಾದ ಬಳಿಕ, ಆಕೆಯ ಹುಡುಕಾಟ ನಡೆಸಿದ್ದ ಕ್ಯಾಂಪ್‌ಬೆಲ್‌, ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಹೋಟೆಲ್‌ ಒಂದರ ಬೆಡ್‌ ಮೇಲೆ ಇರುವುದನ್ನು ಪತ್ತೆ ಮಾಡಿದ್ದ. ಈ ವಿಚಾರವನ್ನು ಆತ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

    ಕ್ರಿಸ್ಟೆಲ್‌ ಸಂಪರ್ಕಕ್ಕೆ ಯತ್ನಿಸಿದಾಗ, ಆಕೆ ಕ್ಯಾಂಪ್‌ಬೆಲ್‌ನ ಫೋನ್‌ ಕರೆ ಹಾಗೂ ಅವನ ಸಂದೇಶಗಳಿಗೆ ಉತ್ತರಿಸಿರಲಿಲ್ಲ. ಆಕೆ ಸೋಶಿಯಲ್‌ ಮಾಧ್ಯಮಗಳ ಖಾತೆಗಳಲ್ಲಿ ಅವನನ್ನು ಬ್ಲ್ಯಾಕ್‌ ಮಾಡಿದ್ದಳು ಎಂದು ಆರೋಪಿಸಲಾಗಿದೆ. ಇದೆಲ್ಲದರ ನಡುವೆ ಕ್ರಿಸ್ಟೆಲ್‌ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾಳೆ.

    ಕ್ಯಾಂಪ್‌ಬೆಲ್‌ ನೀಡಿರುವ ದೂರಿನಡಿ ದಾಖಲಾಗಿರುವ ಮೊಕದ್ದಮೆಯ ವಿಚಾರಣೆ ನಡೆಸಿರುವ ಮ್ಯಾನಿಟೋಬಾದ ಕೋರ್ಟ್ ಆಫ್ ಕಿಂಗ್ಸ್ ಬೆಂಚ್‌, ವೆಸ್ಟರ್ನ್ ಕೆನಡಾ ಲಾಟರಿ ಕಾರ್ಪೊರೇಷನ್ (WCLC) ಮತ್ತು ಮ್ಯಾನಿಟೋಬಾ ಲಿಕ್ಕರ್ ವಿರುದ್ಧ ಅಸಮಾಧಾನ ಹೊರಹಾಕಿದೆ. ಅಲ್ಲಿನ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದೇ, ಲಾಟರಿ ಹಣವನ್ನು ಬೇರೊಬ್ಬರ ಖಾತೆಗೆ ವರ್ಗಾಯಿಸಲಾಗಿದೆ. ಇದರಿಂದ ಗೆದ್ದ ವ್ಯಕ್ತಿಗೆ ಎದುರಾಗಬಹುದಾದ ಸಮಸ್ಯೆಯ ಬಗ್ಗೆ ಮನವರಿಕೆ ಮಾಡುವಲ್ಲಿ ಸಂಸ್ಥೆ ವಿಫಲವಾಗಿದೆ ಎಂದು ಹೇಳಿದೆ.

  • ಗಣೇಶೋತ್ಸವದ ಲಾಟರಿ ಖರೀದಿಗೆ ಮುಗಿಬಿದ್ದ ಜನ- ಕಿ.ಮೀ ಉದ್ದದ ಸಾಲು

    ಗಣೇಶೋತ್ಸವದ ಲಾಟರಿ ಖರೀದಿಗೆ ಮುಗಿಬಿದ್ದ ಜನ- ಕಿ.ಮೀ ಉದ್ದದ ಸಾಲು

    – ಒಂದೇ ದಿನ 1 ಲಕ್ಷ ಲಾಟರಿ ಟಿಕೆಟ್ ಸೋಲ್ಡ್ ಔಟ್

    ಕಾರವಾರ/ಪಣಜಿ: ಗೌರಿ -ಗಣೇಶ ಹಬ್ಬ (Ganesha Festival) ಇನ್ನೇನು ಬಂದೇ ಬಿಟ್ಟಿತು. ಬೀದಿ ಬೀದಿಗಳಲ್ಲಿ ವಿವಿಧ ರಂಗಿನ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಯಾಗುತ್ತದೆ. ಹಲವು ಸಂಘ-ಸಂಸ್ಥೆಗಳು ಜನರನ್ನು ಸೆಳೆಯಲು ಹಬ್ಬದ ವಿಶೇಷವಾಗಿ ಲಾಟರಿ ಸಹ ಇಟ್ಟು ಹಬ್ಬ ಮುಗಿದ ನಂತರ ಡ್ರಾ ಮಾಡಿ ಬಹುಮಾನ ಘೋಷಿಸುತ್ತದೆ.

    ಹೌದು. ಗೋವಾ ರಾಜ್ಯದ ಪಣಜಿಯ ಕೆಪೆಮ್ (Quepem))ನಲ್ಲಿ ಪ್ರತಿ ವರ್ಷ ಕೆಪೆಮ್ ಸಾರ್ವಜನಿಕ ಗಣೇಶೋತ್ಸವ ಉತ್ಸವ ಸಮಿತಿ ಗಣೇಶೋತ್ಸವ ಆಚರಿಸುತ್ತದೆ. ಈ ವೇಳೆ ಬರುವ ಭಕ್ತರಿಗೆ ಲಾಟರಿಯನ್ನು ಇಟ್ಟು ದೊಡ್ಡ ಮೊತ್ತದ ಬಹುಮಾನ ನೀಡುತ್ತದೆ. ಈ ಬಾರಿ 36 ನೇ ವಾರ್ಷಿಕ ಗಣೇಶೋತ್ಸವ ಆಚರಣೆಗೆ ಸಮಿತಿ ದೊಡ್ಡ ಮಟ್ಟದ ಲಾಟರಿ ಬಹುಮಾನವನ್ನು ಇಟ್ಟಿದೆ. 10 ಹೈ ಎಂಡ್ ಕಾರುಗಳು, 10 ಸ್ಕೂಟರ್ ಗಳು, ಜೊತೆಗೆ ಈ 20 ಬಂಪರ್ ಬಹುಮಾನ ಗೆಲ್ಲುವವರಿಗೆ 70 ಲಕ್ಷ ರೂಪಾಯಿಗೂ ಅಧಿಕ ನಗದು ಬಹುಮಾನ ಈ ಕೆಪೆಮ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಲಾಟರಿಯಲ್ಲಿ ಘೋಷಣೆ ಮಾಡಿದೆ. ಇದನ್ನೂ ಓದಿ: ಜಾತಿ ಕಟ್ಟು ಪಾಡುಗಳನ್ನ ಮೀರಲು ಮಾನವೀಯತೆ, ವಿಚಾರವಂತಿಕೆಯ ದಾರಿ – ಮರ್ಯಾದಾ ಹತ್ಯೆಗೆ ಸಿಎಂ ಆತಂಕ

    ಭಾನುವಾರ ಸಂಜೆಯಷ್ಟೇ ಲಾಟರಿ ಉದ್ಘಾಟನೆ ಮಾಡಲಾಗಿದ್ದು, ಸೋಮವಾರ ಎನ್ನುವಷ್ಟರಲ್ಲಿ ಸಾವಿರಾರು ಜನ ಮುಗಿಬಿದ್ದು ಖರೀದಿಗೆ ಮುಂದಾಗಿದ್ದಾರೆ. ಇನ್ನು ಕಾರವಾರದಿಂದ ಸಹ ಜನ ಖರೀದಿಗೆ ತೆರಳಿದ್ದು, ಖರೀದಿಸಲು ಬಂದ ಜನ ಇಡೀ ದಿನ ಕಿಲೋಮೀಟರ್ ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಖರೀದಿಸಿದ್ದು ಒಂದೇ ದಿನದಲ್ಲಿ 1 ಲಕ್ಷ ಲಾಟರಿ ಖರೀದಿಯಾಗಿದೆ. ಒಂದು ಲಾಟರಿಗೆ 300 ರೂಪಾಯಿ ದರವಿದ್ದು ಇದೀಗ ನಿಗದಿ ಲಾಟರಿ ಖರ್ಚಾಗಿದ್ದರೂ ಜನ ಟಿಕೆಟ್ ಕೊಳ್ಳಲು ಇಂದು ಸಹ ಸರತಿ ಸಾಲಿನಲ್ಲಿ ಸಮಿತಿ ಮುಂದೆ ನಿಂತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಮತ್ತು ಸಮಿತಿ ಸದಸ್ಯರು ಹರಸಾಹಸ ಪಡುವಂತಾಯಿತು. ಇನ್ನು ಒಂದು ಲಕ್ಷ ಲಾಟರಿ ಒಂದೇ ದಿನದಲ್ಲಿ ಖರ್ಚಾದ್ದರಿಂದ ಲಾಟರಿ ಮಾರಾಟವನ್ನು ನಿಲ್ಲಿಸಲಾಗಿದ್ದು, ರಾಜ್ಯ ಹೊರ ರಾಜ್ಯದಿಂದಲೂ ಆಗಿಮಿಸಿದ್ದ ಜನ ಲಾಟರಿ ಟಿಕೆಟ್ ಸಿಗದೆ ಹಿಂದಿರುಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಬುಧಾಬಿಯಲ್ಲಿ 44.75 ಕೋಟಿ ರೂ. ಲಾಟರಿ ಗೆದ್ದ ಭಾರತೀಯ ಮಹಿಳೆ!

    ಅಬುಧಾಬಿಯಲ್ಲಿ 44.75 ಕೋಟಿ ರೂ. ಲಾಟರಿ ಗೆದ್ದ ಭಾರತೀಯ ಮಹಿಳೆ!

    ಅಬುಧಾಬಿ: ಭಾರತ ಮೂಲದ ಮಹಿಳೆಯೊಬ್ಬರು ಅಬುಧಾಬಿಯಲ್ಲಿ 44.75 ಕೋಟಿ ರೂ. ಲಾಟರಿಯನ್ನು ಗೆದ್ದಿದ್ದಾರೆ.

    ವರದಿಗಳ ಪ್ರಕಾರ ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯ ವಲಸಿಗ ಮಹಿಳೆಯೊಬ್ಬರು ಬಿಗ್ ಟಿಕೆಟ್ ಲಾಟರಿ ಡ್ರಾದಲ್ಲಿ 44.75 ಕೋಟಿ ರೂ. ಗೆದ್ದಿದ್ದಾರೆ. ಈ ಮಹಿಳೆ ಕೇರಳ ಮೂಲದ ಲೀನಾ ಜಲಾಲ್. ಇವರು ಬಿಗ್ ಟಿಕೆಟ್ ಅಬುಧಾಬಿ ವೀಕ್ಲಿ ಡ್ರಾದಲ್ಲಿ 22 ಮಿಲಿಯನ್ ದಿರ್ಹಂ(44.75 ಕೋಟಿ ರೂ) ಗೆದ್ದಿದ್ದಾರೆ.

    Indian man in UAE hits jackpot, wins Dh 12 mn lottery - The Economic Times

    ಫೆಬ್ರವರಿ 3 ರಂದು ನಡೆದ ಲಕ್ಕಿ ಡ್ರಾದಲ್ಲಿ, ಜಲಾಲ್ ಅವರ ಟಿಕೆಟ್ ಸಂಖ್ಯೆ 144387 ಹೊಂದಿದ್ದು, ಈ ಸಂಖ್ಯೆಯನ್ನು ಟೆರಿಫಿಕ್ 22 ಮಿಲಿಯನ್ ಸರಣಿ 236ನಲ್ಲಿ ಆಯ್ಕೆ ಮಾಡಲಾಗಿದೆ. ವರದಿಯ ಪ್ರಕಾರ, ಜಲಾಲ್ ಅಬುಧಾಬಿಯಲ್ಲಿ ಹ್ಯೂಮನ್ ರಿಸೋರ್ಸಸ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ‘ಬ್ಲಾಕ್‍ಚೈನ್’ ಮೂಲಕ ಮದುವೆಯಾದ ಭಾರತದ ಮೊದಲ ದಂಪತಿ!

    ತಮಗೆ ಬಂದ ಅದೃಷ್ಟದ ಬಗ್ಗೆ ಮಾತನಾಡಿದ ಅವರು, ಈ ಲಕ್ಕಿ ಡ್ರಾದಲ್ಲಿ ಬಂದ ಹಣವನ್ನು 10 ಜನರಿಗಾದರೂ ಸಹಾಯ ಮಾಡುತ್ತೇನೆ. ಸಮಾಜದ ಒಳ್ಳೆಯದಕ್ಕೆ ಬಳಸುತ್ತೇನೆ ಎಂದು ತಿಳಿಸಿದ್ದಾರೆ. ಲಕ್ಕಿ ಡ್ರಾ ಮೂಲಕ ಅದೃಷ್ಟವನ್ನು ಪಡೆದ ಏಕೈಕ ಭಾರತೀಯ ಇವರೊಬ್ಬರೆ ಅಲ್ಲ. ಕೇರಳದ ಮತ್ತೊಬ್ಬ ವಲಸಿಗರಾದ ಸುರೈಫ್ ಸುರು ಅವರು ಸಹ 1 ಮಿಲಿಯನ್ ದಿರ್ಹಂ(2,03,21,929) ಗೆದ್ದಿದ್ದಾರೆ.

    ಕೇರಳದ ಮಲ್ಲಪುರಂ ಜಿಲ್ಲೆಗೆ ಸೇರಿದ ಸುರು ಅವರು ಮಾಧ್ಯಮಗಳೊಂದಿಗೆ ಮಾತನಾಡಿದು, ಬಹುಮಾನದ ಹಣವನ್ನು ಇತರ 29 ಜನರೊಂದಿಗೆ ಹಂಚಿಕೊಳ್ಳುತ್ತೇನೆ. ಲಾಟರಿಯಲ್ಲಿ ಬಂದ ಸ್ವಲ್ಪ ಹಣವನ್ನು ನನ್ನ ಸ್ನೇಹಿತರಿಗೆ ಸಹಾಯ ಮಾಡುತ್ತೇನೆ. ನನ್ನನ್ನು ಹೆತ್ತವರಿಗೆ ಸ್ವಲ್ಪ ಹಣವನ್ನು ನೀಡುತ್ತೇನೆ. ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ನನ್ನ ಹೆಂಡತಿ ಮತ್ತು ಮಗಳಿಗೆ ಹಣವನ್ನು ಉಳಿಸಲು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಏನ್ಷಿಯೆಂಟ್ ಸೀಕ್ರೆಟ್ಸ್ ಟು ರಿವರ್ಸ್ ಡಯಾಬಿಟೀಸ್’ ಕೃತಿ ಬಿಡುಗಡೆ ಮಾಡಿದ ಸಿಎಂ

  • 12 ಕೋಟಿ ರೂ. ಬಂಪರ್ ಲಾಟರಿ ಗೆದ್ದ ಪೇಂಟರ್!

    12 ಕೋಟಿ ರೂ. ಬಂಪರ್ ಲಾಟರಿ ಗೆದ್ದ ಪೇಂಟರ್!

    ತಿರುವನಂತಪುರಂ: ಕೇರಳದ ಕೊಟ್ಟಾಯಂನಲ್ಲಿ ಪೇಂಟಿಂಗ್ ಕೆಲಸಗಾರರೊಬ್ಬರು ಸರ್ಕಾರದ ಕ್ರಿಸ್‍ಮಸ್-ಹೊಸ ವರ್ಷದ ಲಾಟರಿಯ ಮೊದಲ ಬಹುಮಾನವಾದ 12 ಕೋಟಿ ರೂ. ಗೆದ್ದಿದ್ದಾರೆ.

    ಕುಡಯಂಪಾಡಿ ಮೂಲದ ಸದಾನಂದನ್ ಅಲಿಯಾಸ್ ಸದನ್ ಅವರು ಭಾನುವಾರ ಬೆಳಗ್ಗೆ ತಿರುವನಂತಪುರದಲ್ಲಿ ಲಕ್ಕಿ ಡ್ರಾಗೆ ಕೆಲವೇ ಗಂಟೆಗಳ ಮೊದಲು 218582 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಟಿಕೆಟ್ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಬಹುಮಾನ ಅನೌನ್ಸ್ ಆಗಿದ್ದು, ಸದಾನಂದನ್ ಅವರು ಕ್ರಿಸ್‍ಮಸ್ ನ್ಯೂ ಇಯರ್ ಬಂಪರ್ 12 ಕೋಟಿ ರೂ. ಲಾಟರಿ ಗೆದ್ದಿದ್ದಾರೆ. ಇದನ್ನೂ ಓದಿ: ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!

    Kerala: ₹12 crore lottery brings splash of color in painting worker's life

    ಈ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಇಂದು ಬೆಳಿಗ್ಗೆ ಮಾಂಸವನ್ನು ಖರೀದಿಸಲು ಹತ್ತಿರದ ಮಾರುಕಟ್ಟೆಗೆ ಹೋಗಿದ್ದೆ. ಆಗ ಲಾಟರಿ ಮಾರಾಟಗಾರ ಸೆಲ್ವನ್ ನಿಂದ ಈ ಟಿಕೆಟ್ ಖರೀದಿಸಿದೆ. ಆದರೆ ಈಗ ಟಿಕೆಟ್ ಗೆ ಬಹುಮಾನ ಬಂದಿರುವುದು ಖುಷಿಯಾಗುತ್ತಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

    ಲಾಟರಿಯಿಂದ ಬಂದ ಹಣವನ್ನು ತನ್ನ ಮಕ್ಕಳಾದ ಸನೀಷ್ ಮತ್ತು ಸಂಜಯ್ ಅವರಿಗಾಗಿ ಬಳಸುತ್ತೇನೆ ಎಂದು ಹೇಳಿದ್ದಾರೆ. ಸದಾನಂದನ್ ಅವರು 50 ವರ್ಷಗಳಿಂದ ಪೇಂಟಿಂಗ್ ಅನ್ನು ವೃತ್ತಿ ಜೀವನವಾಗಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಗಳಿಂದ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ ಪೋಷಕರು

  • ಕೇರಳ ಲಾಟರಿಯಿಂದ ಕೋಟಿ ಗೆದ್ದ ಮಂಡ್ಯ ಯುವಕ

    ಕೇರಳ ಲಾಟರಿಯಿಂದ ಕೋಟಿ ಗೆದ್ದ ಮಂಡ್ಯ ಯುವಕ

    ಮಂಡ್ಯ: ಅದೃಷ್ಟ ಅನ್ನೋದು ಯಾರಿಗೆ, ಯಾವಾಗ, ಯಾವ ರೀತಿ ಒಲಿದು ಬರುತ್ತದೆ ಎಂದು ಯಾರಿಗೂ ಗೋತ್ತಿಲ್ಲ. ಇದೀಗ ಅಂಥದ್ದೇ ಅದೃಷ್ಟ ಸಕ್ಕರೆ ನಾಡು ಮಂಡ್ಯದ ಯುವಕನಿಗೆ ಒಲಿಯುವ ಮೂಲಕ ಒಂದು ಕೋಟಿ ರೂಪಾಯಿ ಲಾಟರಿಯಿಂದ ಬಂದಿದೆ.

    ಕರುನಾಡಿನಲ್ಲಿ ಸದ್ಯ ಲಾಟರಿ ಬ್ಯಾನ್ ಆಗಿ ವರ್ಷಗಳೇ ಕಳೆದಿವೆ. ಇಂತಹ ಸಂದರ್ಭದಲ್ಲಿ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಬಲರಾಮ್ ಎಂಬ ಉದ್ಯಮಿಯ ಮಗ ಶೋಹಾನ್ ಲಾಟರಿಯಿಂದ ಒಂದು ಕೋಟಿ ಬಹುಮಾನ ಪಡೆದು ಎಲ್ಲರನ್ನು ನಿಬ್ಬೇರಗು ಮಾಡಿದ್ದಾನೆ. ಕಳೆದ ಭಾನುವಾರ ಸ್ನೇಹಿತನ ಮದುವೆಗೆ ಶೋಹಾನ್ ಮತ್ತು ಕುಟುಂಬದವರು ಕೇರಳದ ಪುತ್ತನ್‍ತಾಳಿಗೆ ಹೋದಾಗ ಈ ಯುವಕ ಭಾಗ್ಯಮತಿ ಲಾಟರಿ ಖರೀದಿ ಮಾಡಿದ ಲಾಟರಿಯಿಂದ ಒಂದು ಕೋಟಿಯ ಅದೃಷ್ಟ ಲಕ್ಷ್ಮಿ ಒಲಿದು ಬಂದಿದ್ದಾಳೆ.

    ಕೇರಳದಲ್ಲಿ ಭಾಗ್ಯಮತಿ ಬಂಪರ್ ಲಾಟರಿ 48 ಲಕ್ಷ ಟಿಕೆಟ್‍ಗಳು ಸೇಲ್ ಆಗಿದ್ದು, ಆ ಪೈಕಿ ಶೋಹಾನ್‍ಗೆ ಅದೃಷ್ಟ ಲಕ್ಷ್ಮಿ ಒಲಿದು ಬಂದಿದ್ದಾಳೆ. ಮದುವೆ ಕಾರಣಕ್ಕೆ ಶೋಹಾನ್ ಕುಟುಂಬ ಭಾನುವಾರ ಕೇರಳದ ಪುತ್ತನ್‍ತಾಳಿಗೆ ಹೋದ ವೇಳೆ ಅಲ್ಲಿದ್ದ ಇವರ ಸ್ನೇಹಿತ ದೇವದಾಸ್ ಎಂಬವರು ತಮ್ಮ ಲಾಟರಿ ಅಂಗಡಿಯನ್ನು ನೋಡಿ ಬನ್ನಿ ಎಂದು ಅಂಗಡಿಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ದೇವದಾಸ್ ಅವರು ಸರ್ ನಿಮಗೆ ಅದೃಷ್ಟ ಇರುವ ಹಾಗೆ ಕಾಣುತ್ತಿದೆ ಒಂದು ಟಿಕೆಟ್ ತೆಗೆದುಕೊಳ್ಳಿ ಎಂದು ಶೋಹಾನ್‍ಗೆ ಹೇಳಿದ್ದಾರೆ. ಈ ವೇಳೆ ಶೋಹಾನ್ 100 ರೂಪಾಯಿ ನೀಡಿ ಒಂದು ಭಾಗ್ಯಮತಿ ಬಂಪರ್ ಲಾಟರಿ ಟಿಕೇಟ್‍ನ್ನು ಖರೀದಿ ಮಾಡಿದ್ದಾರೆ. ಬಳಿಕ ಬಂದಿದ್ದ ಮದುವೆಗೆ ಹೋಗಿ ಸೋಮವಾರ ಮದುವೆ ಮುಗಿಸುತ್ತಾರೆ. ಸೋಮವಾರ ಸಂಜೆ ದೇವದಾಸ್ ಕರೆ ಮಾಡಿ ಸರ್ ನಮ್ಮ ಅಂಗಡಿಗೆ ಲಾಟರಿ ಬಂದಿದೆ, ನಿಮ್ಮ ಟಿಕೆಟ್ ನಂಬರ್ ನೋಡಿ ಎಂದಿದ್ದಾರೆ. ಆ ವೇಳೆ ಟಿಕೆಟ್ ನೋಡಿದಾಗ ಒಂದು ಕೋಟಿ ಬಂಪರ್ ಲಾಟರಿ ಹೊಡೆದಿರುವುದು ಖಾತ್ರಿಯಾಗಿದೆ. ಇದೀಗ ಲಾಟರಿಯಿಂದ ಒಂದು ಕೋಟಿ ಬಂದಿರುವುದು ಶೋಹಾನ್ ಮನೆಯವರಲ್ಲಿ ಸಂತಸ ಮನೆ ಮಾಡಿದೆ.

    ಮದುವೆ ಹಾಗೂ ಟೂರ್ ಪ್ಲಾನ್ ಹಾಕಿಕೊಂಡು ಕೇರಳಗೆ ಹೋಗಿದ್ದ ಕುಟುಂಬಕ್ಕೆ ಲಾಟರಿಯ ಮೂಲಕ ಒಂದು ಕೋಟಿ ಬಂದಿರುವುದು ಸಂತಸಕ್ಕೆ ಕಾರಣವಾಗಿದೆ.

  • ಮಾರಾಟವಾಗದೇ ಉಳಿದಿದ್ದ ಲಾಟರಿಗೆ ಸಿಕ್ತು 12 ಕೋಟಿ ಬಂಪರ್ ಬಹುಮಾನ

    ಮಾರಾಟವಾಗದೇ ಉಳಿದಿದ್ದ ಲಾಟರಿಗೆ ಸಿಕ್ತು 12 ಕೋಟಿ ಬಂಪರ್ ಬಹುಮಾನ

    ತಿರುವನಂತಪುರಂ: ಬಹಳ ಕಷ್ಟು ಪಟ್ಟು ಜೀವನ ನಡೆಸುತ್ತಿದ್ದ ಲಾಟರಿ ವ್ಯಾಪಾರಸ್ಥರಿಗೆ ರಾತ್ರೋ ರಾತ್ರಿ ಲಾಟರಿ ಹೊಡೆದು 12 ಕೋಟಿ ರೂಪಾಯಿಯ ಒಡೆಯರಾಗಿದ್ದಾರೆ.

     

    ಕೇರಳದ ತೆಂಕಾಶಿ ಮೂಲದವರಾದ ಶರಾಫುದ್ದೀನ್ (46) ಈ ಅದೃಷ್ಟಶಾಲಿ ವ್ಯಕ್ತಿ. ಶರಾಫುದ್ದೀನ್ ಈ ಹಿಂದೆ ವಿದೇಶದಲ್ಲಿ ಹಲವು ಕೆಲಸಗಳನ್ನು ಮಾಡಿ ಯಾವುದು ಸರಿಹೊಂದದೆ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ನಂತರ ಕೇರಳದಲ್ಲಿ ಲಾಟರಿ ಟಿಕೆಟ್ ವ್ಯಾಪಾರ ಮಾಡಲು ಪ್ರಾರಂಭಿಸಿದ್ದರು.

    ಕೇರಳ ಸರ್ಕಾರವು ಕ್ರಿಸ್‍ಮಸ್ ಹೊಸವರ್ಷದ ಪ್ರಯುಕ್ತ ಲಾಟರಿ ಟಿಕೆಟ್‍ಗಳನ್ನು ಹೊರ ತಂದಿತ್ತು. ಇದನ್ನು ತಮ್ಮ ಅಂಗಡಿಯಲ್ಲಿ ಶರಾಫುದ್ದೀನ್ ಮಾರಾಟ ಮಾಡಿದ್ದರು. ಈ ಪೈಕಿ ಕೆಲವು ಟಿಕೆಟ್‍ಗಳು ಮಾರಾಟವಾಗದೇ ಹಾಗೆ ಉಳಿದಿದ್ದವು. ಆದರೆ ಅದೃಷ್ಟ ಇವರ ಬೆನ್ನತ್ತಿದ್ದ ಪರಿಣಾಮ ಮಾರಾಟವಾಗದೇ ಉಳಿದಿದ್ದ ಒಂದು ಟಿಕೆಟ್‍ಗೆ ಮೊದಲ ಬಹುಮಾನವಾಗಿ 12 ಕೋಟಿ ರೂಪಾಯಿ ಜಾಕ್‍ಪಾಟ್ ಹೊಡೆದಿದೆ. ಈ ಮೂಲಕ ಕೋಟ್ಯಧಿಪತಿ ಆಗಿದ್ದಾರೆ.

    ಈ ಹಿಂದೆ ಲಾಟರಿ ಅಂಗಡಿಯಿಂದ ಬರುತ್ತಿದ್ದ ಆದಾಯದಿಂದ ಶರಾಫುದ್ದೀನ್ ಕುಟುಂಬ ನಡೆಸುತ್ತಿದ್ದರು. ಆ ಬಳಿಕ ಕೊರೊನಾದಿಂದಾಗಿ ಹಲವು ಕಷ್ಟ ಅನುಭವಿಸಿ ಜೀವನ ನಡೆಸಲು ಸೆಣಸಾಡುತ್ತಿದ್ದ ಈ ಜೀವಕ್ಕೆ ಇದೀಗ ಅದೃಷ್ಟ ಖುಲಾಯಿಸಿದೆ. ಈ ಹಿಂದೆಯೂ ಸಣ್ಣ ಪ್ರಮಾಣದ ಲಾಟರಿ ಬಹುಮಾನ ಪಡೆದಿದ್ದ ಶರಾಫುದ್ದೀನ್ ಇದೀಗ ಇಷ್ಟೊಂದು ದೊಡ್ಡ ಮೊತ್ತ ಸಿಕ್ಕಿರುವುದರಿಂದ ಫುಲ್ ಖುಷಿಯಾಗಿದ್ದಾರೆ.

    ಕಳೆದ ವರ್ಷ ಕೇರಳದ 24ರ ಹರೆಯದ ಅನಂತು ವಿಜಯನ್ ಅವರಿಗೆ 12 ಕೋಟಿ ಲಾಟರಿ ಒಲಿದಿತ್ತು. ವಿಜಯನ್ ಕೂಡ ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸುತ್ತಿದ್ದರು.

  • ಕೊಡಗಿನಲ್ಲಿ ಕೇರಳ ಲಾಟರಿ ಪತ್ತೆ- ಓರ್ವನ ಬಂಧನ

    ಕೊಡಗಿನಲ್ಲಿ ಕೇರಳ ಲಾಟರಿ ಪತ್ತೆ- ಓರ್ವನ ಬಂಧನ

    ಮಡಿಕೇರಿ: ಕೊಡಗಿನಲ್ಲಿ ಕೇರಳ ಲಾಟರಿ ಟಿಕೆಟ್ ಮಾರಾಟ ದಂಧೆ ನಡೆಯುತ್ತಿರುವ ಬಗ್ಗೆ ಗುಮಾನಿ ಇತ್ತಾದರೂ, ಬೆಳಕಿಗೆ ಬಂದಿರಲಿಲ್ಲ. ಆದರೆ ಇದೀಗ ಕೊಡಗಿನ ಕುಟ್ಟ ಪಟ್ಟಣದ ಅಂಗಡಿಯಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬೀಳುವ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ.

    ಕೇರಳ ಲಾಟರಿ ಟಿಕೆಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರ ಗಮನಕ್ಕೆ ಬಂದ ತಕ್ಷಣವೇ ಕುಟ್ಟ ಸರ್ಕಲ್ ಇನ್ ಸೆಕ್ಟರ್ ಎಸ್.ಪರಶಿವಮೂರ್ತಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ನಿಷೇಧವಾಗಿರುವ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಅಂಗಡಿಯ ಮಾಲೀಕ ಸುರೇಶ್‍ನನ್ನು ಬಂಧಿಸಿದ್ದಾರೆ.

    ಕೇರಳದ 60 ಲಾಟರಿ ಟಿಕೇಟ್ ಗಳು ಮತ್ತು ಮಾರಾಟ ಮಾಡಿ ಬಂದ 1,200 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೆಲವರು ಕೇರಳದಿಂದ ಟಿಕೆಟ್ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ತಮಗೆ ಬೇಕಾದವರಿಗೆ ಮಾತ್ರ ಇದನ್ನು ನೀಡುತ್ತ, ಗೋಪ್ಯವಾಗಿ ವ್ಯವಹಾರ ನಡೆಸುತ್ತಿದ್ದಾರೆ. ಕೊಡಗು ಕೇರಳದ ಗಡಿ ಭಾಗಕ್ಕೆ ಹೊಂದಿಕೊಂಡಿರುವುದರಿಂದ ಕೇರಳದ ಕೆಲಸಗಾರರು ಇಲ್ಲಿದ್ದಾರೆ. ಹೀಗಾಗಿ ಕೇರಳದ ಲಾಟರಿಗೆ ಬೇಡಿಕೆ ಇದೆ.

  • ಸಾಲ ಪಡೆಯಲು ಹೋಗುತ್ತಿದ್ದ ವ್ಯಕ್ತಿಗೆ ಒಲಿಯಿತು 12 ಕೋಟಿ ರೂ. ಬಂಪರ್ ಲಾಟರಿ

    ಸಾಲ ಪಡೆಯಲು ಹೋಗುತ್ತಿದ್ದ ವ್ಯಕ್ತಿಗೆ ಒಲಿಯಿತು 12 ಕೋಟಿ ರೂ. ಬಂಪರ್ ಲಾಟರಿ

    – ಬಡತನದಿಂದ ಬಳಲುತ್ತಿದ್ದ ಕುಟುಂಬದ ಕೈಹಿಡಿದ ಲಾಟರಿ
    – ಸಾಲ ಪಡೆಯಲು ಹೋಗುತ್ತಿದ್ದ ವ್ಯಕ್ತಿ ಆದ ಕೋಟ್ಯಧಿಪತಿ

    ತಿರುವನಂತಪುರಂ: ಹಣವಿಲ್ಲದೆ ಸಾಲ ಪಡೆಯಲು ಬ್ಯಾಂಕಿಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 12 ಕೋಟಿ ರೂ. ಲಾಟರಿ ಹೊಡೆದು ಕೋಟ್ಯಧಿಪತಿ ಆಗಿದ್ದಾರೆ.

    ಕೇರಳದ ಕುರುಚಿಯಾ ರಾಜನ್ ಅವರಿಗೆ 12 ಕೋಟಿ ರೂ. ಲಾಟರಿ ಹೊಡೆದಿದೆ. ಹಿಂದೆ ಮೂರು ಬಾರಿ ಮಾಡಿದ್ದ ಸಾಲ ಇನ್ನೂ ತೀರಿಸಿರಲಿಲ್ಲ, ಆದರೆ ಹಣ ಅವಶ್ಯಕತೆ ಇದ್ದ ಕಾರಣಕ್ಕೆ ನಾಲ್ಕನೇ ಬಾರಿಗೆ ಬ್ಯಾಂಕಿನಲ್ಲಿ ಸಾಲ ಪಡೆಯಲು ರಾಜನ್ ಹೋಗುತ್ತಿದ್ದರು. ಆದರೆ ಬ್ಯಾಂಕಿಗೆ ಹೋಗುವ ದಾರಿಯಲ್ಲೇ ರಾಜನ್ ಕೋಟ್ಯಧಿಪತಿ ಆಗಿದ್ದಾರೆ.

    ತಮ್ಮ ಮನೆಯ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿದ್ದ ಕಾರಣಕ್ಕೆ ರಾಜನ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಅಲ್ಲದೆ ತಮ್ಮ ಮಗಳ ಮದುವೆಗೂ ಕೂಡ ಸಾಲ ಮಾಡಿದ್ದರು. ಆದರೆ ನಾಲ್ಕನೇ ಬಾರಿಗೆ ಬ್ಯಾಂಕಿನಲ್ಲಿ ಸಾಲ ಪಡೆಯಲು ಹೋಗುವ ಮುನ್ನ 300 ರೂ. ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ್ದರು. ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ.

    ನಾನು ಯಾವಾಗಲೂ ಲಾಟರಿ ಖರೀದಿಸುತ್ತಿರುತ್ತೇನೆ ಎಂದು ನನ್ನ ಪತ್ನಿ ನನ್ನ ಜೊತೆ ಜಗಳವಾಡುತ್ತಿದ್ದಳು. ಅದಕ್ಕೆ ನಾನು ಲಾಟರಿ ಖರೀದಿಸಿದ್ದ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಆದರೆ ಮಂಗಳವಾರ ಬೆಳಗ್ಗೆ ಕುತೂಹಲದಿಂದ ಕಾಯುತ್ತಿದ್ದೆ. ಆಗ ನಾನು ಖರೀದಿಸಿದ ಲಾಟರಿ ಉಪಯೋಗಕ್ಕೆ ಬಂದಿದ್ದು, ಹಣವಿಲ್ಲದೆ ಸಾಲ ಪಡೆಯಲು ಹೋಗುತ್ತಿದ್ದ ನನಗೆ ಕೋಟಿಗಟ್ಟಲೆ ಹಣ ಸಿಕ್ಕಿದೆ ಎಂದರು.

    ಲಾಟರಿಯಿಂದ ಹಣ ಬಂದಿದ್ದರಿಂದ ನನಗೆ ಸಿಕ್ಕಾಪಟ್ಟೆ ಸಂತೋಷವಾಗಿದೆ ಎಂದು ರಾಜನ್ ಹೀಳಿದ್ದರು. ಈ ಬಗ್ಗೆ ಕುಟುಂಬಸ್ಥರಿಗೆ ತಿಳುತ್ತಿದ್ದಂತೆ ಖುಷಿಯಾಗಿದೆ ಎಂದು ರಾಜನ್ ಅವರ ಕುಟುಂಬವೂ ಸಂತೋಷ ವ್ಯಕ್ತಪಡಿಸಿದ್ದಾರೆ.

  • ಖಾಯಂ ಗಿರಾಕಿಗಳಿಗಷ್ಟೇ ಲಾಟರಿ ಮಾರುತ್ತಿದ್ದವ ಅರೆಸ್ಟ್

    ಖಾಯಂ ಗಿರಾಕಿಗಳಿಗಷ್ಟೇ ಲಾಟರಿ ಮಾರುತ್ತಿದ್ದವ ಅರೆಸ್ಟ್

    ಚಾಮರಾಜನಗರ: ಖಾಯಂ ಗಿರಾಕಿಗಳಿಗಷ್ಟೇ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹನೂರು ತಾಲೂಕಿನ ನಾಲಾರೋಡಿನಲ್ಲಿ ರಾಮಾಪುರ ಪೊಲೀಸರು ಬಂಧಿಸಿದ್ದಾರೆ.

    ಮಾರ್ಟಳ್ಳಿ ಗ್ರಾಮದ ಮೊದಲೈ ಮುತ್ತು ಬಂಧಿತ ಆರೋಪಿ. ಕೇರಳದ ಪಾಲಕ್ಕಾಡ್‍ನಿಂದ ಲಾಟರಿಗಳನ್ನು ತಂದು ಅಕ್ರಮವಾಗಿ ಖಾಯಂ ಗ್ರಾಹಕರಿಗಷ್ಟೇ ಮಾರಾಟ ಮಾಡುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯಿಂದ 30 ರೂ. ಮುಖಬೆಲೆಯ 2870 ಲಾಟರಿ ಟಿಕೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ 86 ಸಾವಿರ ರೂ. ಎಂದು ತಿಳಿದುಬಂದಿದೆ.

    ಕಳೆದ ತಿಂಗಳಿನಲ್ಲಿ ಮೈಸೂರಿನಿಂದ ಬಂದು ಹನೂರ ಭಾಗದಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು. ತನಿಖೆ ವೇಳೆ ಹಲವು ಮಾರಾಟಗಾರರ ಹೆಸರನ್ನು ಆತ ಹೇಳಿದ್ದನು. ಹೀಗಾಗಿ ಇನ್ನಷ್ಟು ಖದೀಮರು ಪೊಲೀಸರ ಬಲೆಗೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ರಾಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

  • ಚಾಮರಾಜನಗರದಲ್ಲಿ ಕೂಲಿ ಕಾರ್ಮಿಕರೇ ಲಾಟರಿ ದಂಧೆಕೋರರ ಟಾರ್ಗೆಟ್

    ಚಾಮರಾಜನಗರದಲ್ಲಿ ಕೂಲಿ ಕಾರ್ಮಿಕರೇ ಲಾಟರಿ ದಂಧೆಕೋರರ ಟಾರ್ಗೆಟ್

    ಚಾಮರಾಜನಗರ: ದಶಕದ ಹಿಂದೆಯೇ ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧ ಮಾಡಲಾಗಿದೆ. ಆದರೆ ರಾಜ್ಯದ ಗಡಿಯಂಚಿನಲ್ಲಿರುವ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಭಾಗದಲ್ಲಿ ಕದ್ದುಮುಚ್ಚಿ ಹೊರ ರಾಜ್ಯಗಳ ಲಾಟರಿ ದಂಧೆ ನಡೆಯುತ್ತಿದೆ. ಕೂಲಿ ಕಾರ್ಮಿಕರು, ಬಡವರೇ ದಂಧೆಕೋರರ ಟಾರ್ಗೆಟ್ ಆಗಿರುವುದು ಆಂತಕಕಾರಿ ವಿಷಯವಾಗಿದೆ.

    ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯದ ಏಕಮಾತ್ರ ಪಟ್ಟಣ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ. ಗುಂಡ್ಲುಪೇಟೆಯಿಂದ ಕೇರಳದ ಸುಲ್ತಾನ್ ಬತ್ತೇರಿ ಹಾಗೂ ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿವೆ. ಈ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ರಾಜ್ಯದಲ್ಲಿ ಲಾಟರಿ ನಿಷೇಧವಿದ್ದರೂ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಲಾಟರಿ ಚಾಲ್ತಿಯಲ್ಲಿದೆ.

    ಕೆಲವು ದಂಧೆಕೋರರು ಕೇರಳ ಮತ್ತು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿ ಇರುವ ಲಾಟರಿಗಳನ್ನು ಗುಂಡ್ಲುಪೇಟೆ ಭಾಗಕ್ಕೆ ತಂದು ಕದ್ದು ಮಾರಾಟ ಮಾಡುತ್ತಿದ್ದಾರೆ. ಜೇಬಿನಲ್ಲಿ ಲಾಟರಿಗಳನ್ನು ತಂದು ಮಾರಾಟ ಮಾಡಿ ಹೋಗುತ್ತಾರೆ. ಒಂದು ವೇಳೆ ಸಿಕ್ಕಿ ಹಾಕಿಕೊಂಡರೆ ತಮ್ಮ ರಾಜ್ಯದಲ್ಲಿ ಲಾಟರಿ ಖರೀದಿಸಿ ಜೇಬಿನಲ್ಲಿ ಇಟ್ಟುಕೊಂಡಿದ್ದೇವೆ. ಕೆಲಸದ ನಿಮಿತ್ತ ಇಲ್ಲಿಗೆ ಬಂದಿದ್ದೇವೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಪ್ರತಿಕ್ರಿಯಿಸಿ, ಗುಂಡ್ಲುಪೇಟೆ ಭಾಗದಲ್ಲಿ ಸಂಜೆ ವೇಳೆ ಹೊರ ರಾಜ್ಯದ ಲಾಟರಿಗಳನ್ನು ಕದ್ದು ಮಾರಾಟ ಮಾಡುವುದು ತಿಳಿದು ಬಂದಿದೆ. ಲಾಟರಿ ಮಾರಾಟ ಮಾಡಿ ಸಿಕ್ಕಿ ಬಿದ್ದವರ ಮೇಲೆ ಈಗಾಗಲೇ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊರ ರಾಜ್ಯದ ಲಾಟರಿ ಮಾರಾಟದ ಬಗ್ಗೆ ಹದ್ದಿನ ಕಣ್ಣಿಡಲಾಗುವುದು ಎಂದು ತಿಳಿಸಿದ್ದಾರೆ.

    ಖದೀಮರ ಬಗ್ಗೆ ಪೊಲೀಸರು ಎಷ್ಟೇ ಹದ್ದಿನ ಕಣ್ಣು ಇಟ್ಟಿದ್ದರೂ ಲಾಟರಿ ಮಾರಾಟ ದಂಧೆ ನಡೆಯುತ್ತಲೇ ಇದೆ. ಅಮಾಯಕ ಕೂಲಿ ಕಾರ್ಮಿಕರು, ಬಡವರು ಲಾಟರಿ ದಂಧೆಗೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ.