Tag: Los Angeles

  • 2028 Olympics | 128 ವರ್ಷಗಳ ಬಳಿಕ ಕ್ರಿಕೆಟ್‌ – ಒಲಿಂಪಿಕ್ಸ್‌ನಲ್ಲಿ 6 ತಂಡಗಳ ಸ್ಪರ್ಧೆ

    2028 Olympics | 128 ವರ್ಷಗಳ ಬಳಿಕ ಕ್ರಿಕೆಟ್‌ – ಒಲಿಂಪಿಕ್ಸ್‌ನಲ್ಲಿ 6 ತಂಡಗಳ ಸ್ಪರ್ಧೆ

    ಮುಂಬೈ/ವಾಷಿಂಗ್ಟನ್‌: 128 ವರ್ಷಗಳ ಬಳಿಕ ಒಲಿಂಪಿಕ್ಸ್‌ (Olympics) ಕ್ರೀಡಾಕೂಟಕ್ಕೆ ಕ್ರಿಕೆಟ್‌ ಮರಳಿದ್ದು, 2028ರ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ತಲಾ 6 ತಂಡಗಳು ಸ್ಪರ್ಧೆ ಮಾಡಲಿವೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಖಚಿತಪಡಿಸಿದೆ. ಆದ್ರೆ ಯಾವ ತಂಡಗಳು ಎಂಬ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

    ಟಿ20 ಫಾರ್ಮ್ಯಾಟ್‌ನಲ್ಲಿ ಒಲಿಂಪಿಕ್ಸ್‌ ಕ್ರಿಕೆಟ್‌ (T20 Farmat Cricket) ಕ್ರೀಡಾಕೂಟ ನಡೆಯಲಿದ್ದು, ಒಂದು ತಂಡದಲ್ಲಿ 15 ಆಟಗಾರರನ್ನು ಒಳಗೊಂಡಿರಲಿದೆ. ಆತಿಥೇಯರಾಗಿ, USA ಪಂದ್ಯಾವಳಿಗೆ ನೇರ ಪ್ರವೇಶ ಪಡೆಯಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: IPL 2025 | ಜಿಟಿ ವಿರುದ್ಧ ಸೋಲಿನ ಬೆನ್ನಲ್ಲೇ ಸಂಜು ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ

    ಇತ್ತೀಚೆಗೆ ಸ್ಕ್ವಾಷ್, ಫ್ಲ್ಯಾಗ್ ಫುಟ್‌ಬಾಲ್, ಬೇಸ್‌ಬಾಲ್/ಸಾಫ್ಟ್‌ಬಾಲ್ ಮತ್ತು ಲ್ಯಾಕ್ರೋಸ್ ಜೊತೆಗೆ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸೇರಿಸಲಾದ 5 ಹೊಸ ಕ್ರೀಡೆಗಳಲ್ಲಿ ಕ್ರಿಕೆಟ್ ಒಂದಾಗಿದೆ. ಆದ್ರೆ ಟೆಸ್ಟ್‌, ಏಕದಿನ ಕ್ರಿಕೆಟ್‌ಗಿಂತಲೂ ಟಿ20 ಕ್ರಿಕೆಟ್‌ ವಿಭಿನ್ನವಾಗಿದೆ. ಸುಮಾರು 100 ರಾಷ್ಟ್ರಗಳು ಕ್ರಿಕೆಟ್‌ ಆಡುತ್ತವೆ. ಹೀಗಾಗಿ ಒಲಿಂಪಿಕ್ಸ್‌ ಕ್ರಿಕೆಟ್‌ (Olympics Cricket) ಟಿ20 ಮಾದರಿಯಲ್ಲಿ ನಡೆಯಲಿದೆ ಐಒಸಿ ತಿಳಿಸಿದೆ. ಆದ್ರೆ ಕ್ರಿಕೆಟ್‌ಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು ಇನ್ನಷ್ಟೇ ನಿಗದಿಯಾಗಬೇಕಿದೆ.

    2028ರ ಒಲಿಂಪಿಕ್ಸ್‌ ಕ್ರೀಡಾಕೂಟವು 351 ಪದಕ ಕ್ರೀಡೆಗಳನ್ನು ಒಳಗೊಂಡಿರಲಿದೆ. 10,500 ಅಥ್ಲಿಟ್‌ಗಳು ಪಾಲ್ಗೊಳ್ಳಲಿದ್ದಾರೆ, ಜೊತೆಗೆ 5 ಹೊಸ ಕ್ರೀಡೆಗಳಿಂದ ಹೆಚ್ಚುವರಿ 698 ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: IPL 2025 – ಜಿಯೋದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಚಿತ ಇಂಟರ್ನೆಟ್

    ಈ ಹಿಂದೆ 1990ರ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್‌ ಸೇರ್ಪಡೆಯಾಗಿತ್ತು. ಆಗ ಇಂಗ್ಲೆಂಡ್​-ಫ್ರಾನ್ಸ್​ ಪುರುಷರ ತಂಡಗಳ ನಡುವೆ ಏಕೈಕ ಪಂದ್ಯ ನಡೆದಿತ್ತು. 2022ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌ ಒಂದು ಭಾಗವಾಗಿತ್ತು. ಅಲ್ಲದೇ 2023ರಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ 9 ಮಹಿಳಾ ತಂಡಗಳು ಮತ್ತು 14 ಪುರುಷರ ತಂಡಗಳು ಕ್ರಿಕೆಟ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಟೀಂ ಇಂಡಿಯಾ ಎರಡೂ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿತ್ತು. ಇದನ್ನೂ ಓದಿ: ಐಪಿಎಲ್ 2025: ಪಂಜಾಬ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್‌ಗೆ ಪಂದ್ಯದ 25% ದಂಡ

  • ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ಕದನ – ಸಾವಿನ ಸಂಖ್ಯೆ 10ಕ್ಕೆ ಏರಿಕೆ, 1.80 ಲಕ್ಷ ಜನರ ಸ್ಥಳಾಂತರ

    ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ಕದನ – ಸಾವಿನ ಸಂಖ್ಯೆ 10ಕ್ಕೆ ಏರಿಕೆ, 1.80 ಲಕ್ಷ ಜನರ ಸ್ಥಳಾಂತರ

    – ಕಾಡ್ಗಿಚ್ಚು ಮಧ್ಯೆ ಲೂಟಿಕೋರರ ಹಾವಳಿ, 20 ಮಂದಿ ಬಂಧನ

    ವಾಷಿಂಗ್ಟನ್‌: ಅಮೆರಿಕದ 2ನೇ ಅತಿದೊಡ್ಡ ನಗರವಾದ ಲಾಸ್‌ ಏಂಜಲೀಸ್‌ನಲ್ಲಿ ಕಾಡಿಚ್ಚು (Los Angeles Wildfires) ತನ್ನ ಬೆಂಕಿ ಕೆನ್ನಾಲಿಗೆಯನ್ನು ಚಾಚುತ್ತಲೇ ಇದೆ. ಅಮೆರಿಕದ 2ನೇ ಅತಿದೊಡ್ಡ ನಗರವಾದ ಕ್ಯಾಲಿಫೋರ್ನಿಯಾ (California) ಬಹುತೇಕ ಹೊತ್ತಿ ಉರಿಯುತ್ತಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

    ಈಗಾಗಲೇ ಪೆಸಿಫಿಕ್‌ ಪಾಲಿಸೇಡ್ಸ್‌ ಪ್ರದೇಶದ ನೆರಹೊರೆಯನ್ನು ಆವರಿಸಿದ್ದು, 19,000 ಎಕರೆ ಪ್ರದೇಶ ಸುಟ್ಟು ಭಸ್ಮವಾಗಿದೆ. ಮತ್ತೊಂದೆಡೆ ಅಲ್ಟಾಡೆನಾದಲ್ಲಿ 13,000 ಎಕರೆ ಪ್ರದೇಶ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಕಿ ನಿಯಂತ್ರಿಸಲು ಅಮೆರಿಕ ಕ್ಯಾಲಿಫೋರ್ನಿಯಾದ ನ್ಯಾಷನಲ್‌ ಗಾರ್ಡ್‌ ತಂಡವನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.

    ಲಾಸ್‌ ಏಂಜಲೀಸ್‌ ನಗರಾದ್ಯಂತ ರಾಷ್ಟ್ರೀಯ ಪ್ರಶಸ್ತಿ, ಆಸ್ಕರ್‌ ಪ್ರಶಸ್ತಿ ವಿಜೇತ ಹಾಲಿವುಡ್‌ ನಟರ ಮನೆಗಳು ಸುಟ್ಟು ಕರಕಲಾಗಿವೆ. ಒಟ್ಟಾರೆ 9,000ಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದು, 1.80 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.

    ಈ ಮಧ್ಯೆ ಸಂದರ್ಭ ಬಳಸಿಕೊಂಡ ಕೆಲವರು ಲೂಟಿ ಮಾಡಲು ಪ್ರಾರಂಭಿಸಿದ್ದು, ಈ ಸಂಬಂಧ 20 ಜನರನ್ನು ಬಂಧಿಸಲಾಗಿದೆ.

  • ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು: ಅಮೆರಿಕ ಅಧ್ಯಕ್ಷ ಜೋ ಬೈಡನ್ ಪುತ್ರನ ಮನೆ ಬೆಂಕಿಗಾಹುತಿ

    ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು: ಅಮೆರಿಕ ಅಧ್ಯಕ್ಷ ಜೋ ಬೈಡನ್ ಪುತ್ರನ ಮನೆ ಬೆಂಕಿಗಾಹುತಿ

    ವಾಷಿಂಗ್ಟನ್‌: ಲಾಸ್‌ ಏಂಜಲೀಸ್‌ನಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿನಲ್ಲಿ (Los Angeles Wildfire) ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್‌ ಅವರ ಪುತ್ರ ಹಂಟರ್‌ ಬೈಡನ್‌ (Hunter Biden) ಅವರ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

    ಕ್ಯಾಲಿಫೋರ್ನಿಯಾದ (California) ಮಾಲಿಬು ನಗರದಲ್ಲಿರುವ ಹಂಟರ್‌ ಬೈಡನ್‌ ಅವರ ಮನೆ ಸುಟ್ಟು ಭಸ್ಮವಾಗಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹರಿದಾಡುತ್ತಿವೆ. 1950ರ ಸಂದರ್ಭದಲ್ಲಿ 15,800 ಡಾಲರ್‌ (13.56 ಲಕ್ಷ ರೂ.) ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶದ ಆಕರ್ಷಣೆಯಾಗಿದ್ದ ಈ ಮನೆ 3 ಬೆಡ್‌ರೂಮ್‌, ಮೂರು ಬಾತ್‌ ರೂಮ್‌, 1 ಐಷಾರಾಮಿ ಗೌರ್ಮೆಟ್ ಅಡುಗೆಮನೆಯನ್ನು ಒಳಗೊಂಡಿತ್ತು. ಪೆಸಿಫಿಕ್‌ ಸಾಗರ ವೀಕ್ಷಣೆಗೆ ವಿಶೇಷ ಬಾಲ್ಕನಿಯನ್ನೂ ಈ ಮನೆ ಒಳಗೊಂಡಿತ್ತು. ಇದೀಗ ಕಾಡ್ಗಿಚ್ಚಿನಿಂದ ಸುಟ್ಟು ಭಸ್ಮವಾಗಿದೆ. ಅದ್ರೆ ಈ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ ಎಂದು ಬೈಡನ್‌ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು – 15,000 ಎಕ್ರೆ ಪ್ರದೇಶಕ್ಕೆ ಬೆಂಕಿ, ಐವರು ಸಜೀವ ದಹನ

    1 ಲಕ್ಷ ಜನರ ಸ್ಥಳಾಂತರ:
    ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಹೊತ್ತಿಕೊಂಡಿರುವ ಭೀಕರ ಕಾಡ್ಗಿಚ್ಚು ಅಪಾರ ಹಾನಿಯುಂಟುಮಾಡಿದೆ. ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ಜ್ವಾಲೆ ನೆರೆಯ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಸುತ್ತಲಿನ ಹಾಲಿವುಡ್‌ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ರಕ್ಷಣಾ ಸಿಬ್ಬಂದಿ ಚಾಲನೆ ನೀಡಿದ್ದಾರೆ. ದುರ್ಘಟನೆಯಲ್ಲಿ ಈವರೆಗೆ ಐವರು ಸಜೀವ ದಹನವಾಗಿದ್ದಾರೆ. ಈ ನಡುವೆ 1,00,000 ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಸುಮಾರು 2,000 ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ವರದಿಗಳು ತಿಳಿಸಿವೆ.

    ಲಾಸ್ ಏಂಜಲೀಸ್‌ನಾದ್ಯಂತ ನಿಯಂತ್ರಣ ಮೀರಿದ ಕಾಡ್ಗಿಚ್ಚು ಉಲ್ಬಣಗೊಳ್ಳುತ್ತಿರುವುದರಿಂದ, ಸನ್‌ಸೆಟ್ ಫೈರ್ ಎಂದು ಕರೆಯಲ್ಪಡುವ ಹೊಸ ಜ್ವಾಲೆಯು ಹಾಲಿವುಡ್ ಹಿಲ್ಸ್‌ನಲ್ಲಿ ಕಾಣಿಸಿಕೊಂಡಿದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 112 ಕಿಲೋ ಮೀಟರ್‌ ವೇಗದಲ್ಲಿ ಬೀಸುತ್ತಿರುವ ʻಸಾಂಟಾ ಅನಾʼ ಚಂಡಮಾರುತದಿಂದ ಪರಿಸ್ಥಿತಿ ಹದಗೆಡುತ್ತಲೇ ಇದೆ. ರನ್ಯಾನ್ ಕ್ಯಾನ್ಯನ್ ಮತ್ತು ವಾಟಲ್ಸ್ ಪಾರ್ಕ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಇದನ್ನೂ ಓದಿ: ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು – 1 ಲಕ್ಷ ಜನರ ಸ್ಥಳಾಂತರ, 1,500 ಕಟ್ಟಡಗಳು ಬೆಂಕಿಗಾಹುತಿ

    ಲಾಸ್‌ ಏಂಜಲೀಸ್‌ನಲ್ಲಿ ಏನಾಗ್ತಿದೆ ? – ಪ್ರಮುಖ ಅಂಶಗಳು

    * ಹಾಲಿವುಡ್ ಬೌಲೆವಾರ್ಡ್‌ನಿಂದ 100 ಮೀಟರ್ ದೂರದಲ್ಲಿ ಕಾಡ್ಗಿಚ್ಚು ವ್ಯಾಪಿಸಿದ್ದು, ಐತಿಹಾಸಿಕ ಹಾಲಿವುಡ್‌ನ ಹೃದಯಭಾಗದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಬುಧವಾರವೇ ಆದೇಶ ನೀಡಲಾಗಿದೆ. ಜೊತೆಗೆ ಕಾಡ್ಗಿಚ್ಚು ಹಬ್ಬಿರುವ ಪ್ರದೇಶಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ.

    * ಒರೆಗಾನ್, ವಾಷಿಂಗ್ಟನ್ ಮತ್ತು ಉತಾಹ್ ಸೇರಿದಂತೆ ಹಲವು ರಾಜ್ಯಗಳಿಂದ ಸಾವಿರಾರು ಅಗ್ನಿಶಾಮಕ ದಳದ ಸಿಬ್ಬಂದಿ ಕಾಡ್ಗಿಚ್ಚು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

    * ಲಾಸ್ ಏಂಜಲೀಸ್‌ನಲ್ಲಿ ನೀರಿನ ಅಭಾವದಿಂದಾಗಿ ಅಗ್ನಿಶಾಮಕ ದಳದವರು ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆಯಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆ ಸುತ್ತಲಿನ ಈಜುಕೊಳಗಳು ಮತ್ತು ಕೊಳಗಳಿಂದ ನೀರು ಸಂಗ್ರಹಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗಿದೆ.

    * ಅಮೆರಿಕ ಅಧ್ಯಕ್ಷ ಜೋ ಬೈಡನ್‌ ವಿಪತ್ತು ಘೋಷಣೆಗೆ ಸಹಿ ಹಾಕಿದ್ದಾರೆ. ಕಾಡ್ಗಿಚ್ಚಿನಿಂದ ಆಶ್ರಯ ಕಳೆದುಕೊಂಡವರಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ತಿರುಪತಿಯಲ್ಲಿ ಕಾಲ್ತುಳಿತ ದುರಂತ – ಬೆಂಗಳೂರಿನ ಟಿಟಿಡಿ ದೇವಸ್ಥಾನದ ಭದ್ರತೆ ಪರಿಶೀಲಿಸಿದ ಪೊಲೀಸರು

  • ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು – 1 ಲಕ್ಷ ಜನರ ಸ್ಥಳಾಂತರ, 1,500 ಕಟ್ಟಡಗಳು ಬೆಂಕಿಗಾಹುತಿ

    ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು – 1 ಲಕ್ಷ ಜನರ ಸ್ಥಳಾಂತರ, 1,500 ಕಟ್ಟಡಗಳು ಬೆಂಕಿಗಾಹುತಿ

    ವಾಷಿಂಗ್ಟನ್‌: ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಹೊತ್ತಿಕೊಂಡಿರುವ ಭೀಕರ ಕಾಡ್ಗಿಚ್ಚು ಅಪಾರ ಹಾನಿಯುಂಟುಮಾಡಿದೆ. ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ಜ್ವಾಲೆ ನೆರೆಯ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಸುತ್ತಲಿನ ಹಾಲಿವುಡ್‌ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ರಕ್ಷಣಾ ಸಿಬ್ಬಂದಿ ಚಾಲನೆ ನೀಡಿದ್ದಾರೆ.

    ದುರ್ಘಟನೆಯಲ್ಲಿ ಈವರೆಗೆ ಐವರು ಸಜೀವ ದಹನವಾಗಿದ್ದಾರೆ. ಈ ನಡುವೆ 1,00,000 ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಸುಮಾರು 1,500 ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು – 15,000 ಎಕ್ರೆ ಪ್ರದೇಶಕ್ಕೆ ಬೆಂಕಿ, ಐವರು ಸಜೀವ ದಹನ

    ಲಾಸ್ ಏಂಜಲೀಸ್‌ನಾದ್ಯಂತ ನಿಯಂತ್ರಣ ಮೀರಿದ ಕಾಡ್ಗಿಚ್ಚು ಉಲ್ಬಣಗೊಳ್ಳುತ್ತಿರುವುದರಿಂದ, ಸನ್‌ಸೆಟ್ ಫೈರ್ ಎಂದು ಕರೆಯಲ್ಪಡುವ ಹೊಸ ಜ್ವಾಲೆಯು ಹಾಲಿವುಡ್ ಹಿಲ್ಸ್‌ನಲ್ಲಿ ಕಾಣಿಸಿಕೊಂಡಿದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 112 ಕಿಲೋ ಮೀಟರ್‌ ವೇಗದಲ್ಲಿ ಬೀಸುತ್ತಿರುವ ʻಸಾಂಟಾ ಅನಾʼ ಚಂಡಮಾರುತದಿಂದ ಪರಿಸ್ಥಿತಿ ಹದಗೆಡುತ್ತಲೇ ಇದೆ. ರನ್ಯಾನ್ ಕ್ಯಾನ್ಯನ್ ಮತ್ತು ವಾಟಲ್ಸ್ ಪಾರ್ಕ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಇದನ್ನೂ ಓದಿ: ಆರೋಗ್ಯಕರ ಮಗುವಿಗೆ ಜನ್ಮ ನೀಡುವ 25 ವರ್ಷದೊಳಗಿನ ಯುವತಿಯರಿಗೆ ಬಂಪರ್‌ ಬಹುಮಾನ!

    ಲಾಸ್‌ ಏಂಜಲೀಸ್‌ನಲ್ಲಿ ಏನಾಗ್ತಿದೆ ? – ಪ್ರಮುಖ ಅಂಶಗಳು

    * ಹಾಲಿವುಡ್ ಬೌಲೆವಾರ್ಡ್‌ನಿಂದ 100 ಮೀಟರ್ ದೂರದಲ್ಲಿ ಕಾಡ್ಗಿಚ್ಚು ವ್ಯಾಪಿಸಿದ್ದು, ಐತಿಹಾಸಿಕ ಹಾಲಿವುಡ್‌ನ ಹೃದಯಭಾಗದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಬುಧವಾರವೇ ಆದೇಶ ನೀಡಲಾಗಿದೆ. ಜೊತೆಗೆ ಕಾಡ್ಗಿಚ್ಚು ಹಬ್ಬಿರುವ ಪ್ರದೇಶಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ.

    * ಬೆಂಕಿ ಕೆನ್ನಾಲಿಗೆಗೆ ಈವರೆಗೆ ಸುಮಾರು 1,500 ಕಟ್ಟಡಗಳು ಸುಟ್ಟುಹೋಗಿವೆ. 1 ಲಕ್ಷ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ಆದೇಶಿಸಿದ್ದಾರೆ. ಜೊತೆಗೆ ನೈಸರ್ಗಿಕ ವಿಕೋಪವು ಪೆಸಿಫಿಕ್ ಪಾಲಿಸೇಡ್ಸ್ ಮತ್ತು ಮಾಲಿಬುವಿನಂತಹ ಐಷಾರಾಮಿ ಪ್ರದೇಶಗಳ ಮೇಲೂ ಪರಿಣಾಮ ಬೀರಿದೆ.

    * ಒರೆಗಾನ್, ವಾಷಿಂಗ್ಟನ್ ಮತ್ತು ಉತಾಹ್ ಸೇರಿದಂತೆ ಹಲವು ರಾಜ್ಯಗಳಿಂದ ಸಾವಿರಾರು ಅಗ್ನಿಶಾಮಕ ದಳದ ಸಿಬ್ಬಂದಿ ಕಾಡ್ಗಿಚ್ಚು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

    * ಲಾಸ್ ಏಂಜಲೀಸ್‌ನಲ್ಲಿ ನೀರಿನ ಅಭಾವದಿಂದಾಗಿ ಅಗ್ನಿಶಾಮಕ ದಳದವರು ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆಯಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆ ಸುತ್ತಲಿನ ಈಜುಕೊಳಗಳು ಮತ್ತು ಕೊಳಗಳಿಂದ ನೀರು ಸಂಗ್ರಹಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗಿದೆ.

    * ಅಮೆರಿಕ ಅಧ್ಯಕ್ಷ ಜೋ ಬೈಡನ್‌ ವಿಪತ್ತು ಘೋಷಣೆಗೆ ಸಹಿ ಹಾಕಿದ್ದಾರೆ. ಕಾಡ್ಗಿಚ್ಚಿನಿಂದ ಆಶ್ರಯ ಕಳೆದುಕೊಂಡವರಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

  • ಐಷಾರಾಮಿ ಮನೆಯಲ್ಲಿ ಸಮಸ್ಯೆ, ಕೋರ್ಟ್ ಮೆಟ್ಟಿಲು ಏರಿದ ಪ್ರಿಯಾಂಕಾ

    ಐಷಾರಾಮಿ ಮನೆಯಲ್ಲಿ ಸಮಸ್ಯೆ, ಕೋರ್ಟ್ ಮೆಟ್ಟಿಲು ಏರಿದ ಪ್ರಿಯಾಂಕಾ

    ಬಾಲಿವುಡ್ ಖ್ಯಾತನಟಿ ಪ್ರಿಯಾಂಕಾ ಚೋಪ್ರಾ (Priyanka) ಲಾಸ್ ಏಂಜಲೀಸ್ (Los Angeles) ನಲ್ಲಿ ದುಬಾರಿ ಮೊತ್ತದ ಬಂಗಲೆ ಖರೀದಿಸಿದ್ದರು. ಅದೊಂದು ಐಷಾರಾಮಿ ಮನೆಯಾಗಿತ್ತು. ಈ ಮನೆ ಖರೀದಿಗಾಗಿಯೇ ಅವರು ಬರೋಬ್ಬರಿ 20 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಇದೀಗ ಆ ಮನೆಯ ಮಾಲೀಕರ ವಿರುದ್ಧ ಕೋರ್ಟ್ (Court) ಮೆಟ್ಟಿಲು ಏರಿದ್ದಾರೆ ಪ್ರಿಯಾಂಕಾ ದಂಪತಿ.

    ಏಳು ಮಲಗುವ ಕೋಣೆಗಳು, ಒಂಬತ್ತು ಸ್ನಾನದ ಗೃಹಗಳು ಸೇರಿದಂತೆ ಸ್ಪಾ ಮತ್ತು ಸ್ಟೀಮ್ ಶವರ್, ಜಿಮ್ ಹಾಗೂ ವೈನ್ ಸೆಲ್ಲಾರ್, ಹೋಂ ಥಿಯೇಟರ್ ಹೀಗೆ ಎಲ್ಲ ಸೌಕರ್ಯವನ್ನು ಆ ಮನೆ ಒಳಗೊಂಡಿತ್ತು. ಮನೆ ಖರೀದಿಸಿದ ನಂತರ ಪೂಲ್ ಮತ್ತು ಸ್ಪಾಗಳಲ್ಲಿ ಸಮಸ್ಯೆ ಕಂಡು ಬಂದಿವೆಯಂತೆ. ಅಲ್ಲದೇ ಬಾರ್ಬೆಕ್ಯೂ ಜಾಗದಲ್ಲಿ ನೀರು ಸೋರಿಕೆ ಆಗಿರುವ ಕಾರಣದಿಂದಾಗಿ ಮೇ 2023ರಲ್ಲಿ ಮೊಕದ್ದಮೆಯನ್ನು ಹೂಡಿದ್ದಾರೆ.

     

    ಸದ್ಯ ಪ್ರಿಯಾಂಕಾ ಮತ್ತು ನಿಕ್ ಜೋನಾಸ್ (Nick Jonas) ದಂಪತಿ ಆ ಮನೆಯಲ್ಲಿ ವಾಸ ಮಾಡುತ್ತಿಲ್ಲ. ಆಗಲೇ ಖಾಲಿ ಮಾಡಿಕೊಂಡು ಬೇರೆ ಮನೆಯಲ್ಲಿ ವಾಸವಿದ್ದಾರೆ. ಮನೆಯಲ್ಲಿ ಹಾನಿ ಆಗಿದ್ದು ಮತ್ತು ಮಾರಾಟಗಾರರು ಅಂತಹ ಮನೆಯನ್ನು ಕೊಟ್ಟಿದ್ದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ನೀಡುವಂತೆ ಅವರು ಕೋರ್ಟಿಗೆ ಮೊರೆ ಹೋಗಿದ್ದಾರೆ.

  • ಫ್ರಿಡ್ಜ್ ನಲ್ಲಿ ಪತ್ತೆಯಾಯ್ತು ಖ್ಯಾತ ಮಾಡೆಲ್ ಮೃತದೇಹ

    ಫ್ರಿಡ್ಜ್ ನಲ್ಲಿ ಪತ್ತೆಯಾಯ್ತು ಖ್ಯಾತ ಮಾಡೆಲ್ ಮೃತದೇಹ

    ಚಿತ್ರವಿಚಿತ್ರ ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ಫ್ರಿಡ್ಜ್ ಕಂಡರೆ ಭಯವಾಗುತ್ತಿದೆ. ಪ್ರೇಮಿಯೊಬ್ಬ ಫ್ರಿಡ್ಜ್ ನಲ್ಲಿ ತನ್ನ ಪ್ರೇಯಸಿಯ ಮೃತದೇಹ ಇಟ್ಟಿದ್ದ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಇಂಥದ್ದೇ ಪ್ರಕರಣ ಲಾಸ್ ಏಂಜಲೀಸ್ ನಲ್ಲಿ ನಡೆದಿದೆ. ಚಿಕ್ಕ ಪ್ರಾಯದ ಮಾಡೆಲ್ ವೊಬ್ಬರ ಮೃತದೇಹ ಫ್ರಿಡ್ಜ್ (Fridge)ನಲ್ಲಿ ಪತ್ತೆಯಾಗಿದೆ.

    ಲಾಸ್ ಏಂಜಲೀಸ್ (Los Angeles) ನ ಹೆಸರಾಂತ ಮಾಟೆಲ್ ಮಲೀಸಾ ಮೂನಿಯಾ (Maleesa Mooney) ಮೃತದೇಹ ಫ್ರಿಡ್ಜ್ ನಲ್ಲಿ ಪತ್ತೆಯಾಗಿದೆ. ಕೈ ಕಾಲುಗಳನ್ನು ಬಿಗಿಯಾಗಿ ಕಟ್ಟಿದ ಸ್ಥಿತಿಯಲ್ಲಿ ಮಲೀಸಾ ದೇಹ ಪತ್ತೆಯಾಗಿದ್ದು, ಸಾವಿಗೆ ಕಾರಣ ಮಾತ್ರ ನಿಗೂಢವಾಗಿದೆ. ಈ ಸಮಯದಲ್ಲಿ ಮಲೀಸಾ ಎರಡು ತಿಂಗಳ ಗರ್ಭಿಣಿ ಎಂದು ಹೇಳಲಾಗುತ್ತಿದೆ.

     

    ಶವಪರೀಕ್ಷೆಯ ವರದಿ ಬಹಿರಂಗವಾಗಿದ್ದು, ಮಲೀಸಾ ದೇಹದ ಮೇಲೆ ಗಾಯದ ಗುರುತುಗಳು ಕಾಣಿಸಿವೆ. ಭೀಕರವಾಗಿಯೇ ಮಲೀಸಾ ಸಾವನ್ನಪ್ಪಿದ್ದಾರೆ. ಪೊಲೀಸರು ತನಿಖೆಯನ್ನು ಚುರುಕುಗೊಳಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಜಡ್ಜ್

    ಪತ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಜಡ್ಜ್

    ಸ್ಯಾಕ್ರಮೆಂಟೊ: ನ್ಯಾಯಾಧೀಶರೊಬ್ಬರು (Judge )ತನ್ನ ಹೆಂಡತಿಯನ್ನು ಗುಂಡು ಹಾರಿಸಿ ಕೊಂದ ಘಟನೆ ಕ್ಯಾಲಿಫೋರ್ನಿಯಾದಲ್ಲಿ (California) ನಡೆದಿದೆ. ಕೊಂದ ಬಳಿಕ ತನ್ನ ಸಹದ್ಯೋಗಿಯೊಬ್ಬರಿಗೆ `ನಾನು ನಾಳೆ ಕೋರ್ಟ್‍ಗೆ ಬರುವುದಿಲ್ಲ, ಕಸ್ಟಡಿಯಲ್ಲಿರುತ್ತೇನೆ’ ಎಂದು ಸಂದೇಶ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನ್ಯಾಯಾಧೀಶ ಜೆಫ್ರಿ ಫರ್ಗುಸನ್ (72) ಎಂಬಾತ ಪತ್ನಿಯನ್ನು ಕೊಲೆಗೈದ ಆರೋಪಿ. ಆತನ ಮನೆಯಲ್ಲಿ ಪರವಾನಿಗೆ ಹೊಂದಿದ್ದ ಸುಮಾರು 47 ಬಂದೂಕುಗಳು ಮತ್ತು 26,000 ಸಜೀವ ಮದ್ದುಗುಂಡುಗಳು ಪತ್ತೆಯಾಗಿವೆ. ಪೊಲೀಸರು ತೆರಳಿದ್ದಾಗ ಎದೆಗೆ ಗುಂಡೇಟು ಬಿದ್ದು ಆತನ ಪತ್ನಿ ಮೃತಪಟ್ಟಿದ್ದಳು. ಈ ವೇಳೆ ಆತ ವಿಪರೀತವಾಗಿ ಕುಡಿದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆ ನಂತರ ನೀರು ಬಿಸಿ ಮಾಡಿದ್ದು ಬಿಟ್ಟು ಬೇರೆ ಅಡುಗೆ ಮಾಡಿಲ್ವಂತೆ- ಕಿಯಾರಾ ಅಡ್ವಾಣಿ

    ಆ.3 ರಂದು ಫರ್ಗುಸನ್ ಮತ್ತು ಅವರ ಪತ್ನಿ ಶೆರಿಲ್ ಅನಾಹೈಮ್ ನಗರದ ರೆಸ್ಟೋರೆಂಟ್‍ನಲ್ಲಿ ಜಗಳ ಪ್ರಾರಂಭಿಸಿದ್ದರು. ಬಳಿಕ ಮನೆಗೆ ತೆರಳಿದ್ದ ಅವರು ಗುಂಡು ಹಾರಿಸಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ಕರೆ ಮಾಡಿ ತನ್ನ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಅಂತ ಹೇಳಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಲಾಸ್ ಏಂಜಲೀಸ್‍ನ (Los Angeles) ನ್ಯಾಯಾಲಯವು (Court) ವಿಚಾರಣೆ ನಡೆಸಿದ್ದು, ಆರೋಪಿ ಕೊಲೆ ಮಾಡಿರುವುದನ್ನು ನಿರಾಕರಿಸಿದ್ದಾನೆ. ಆತನ ವಕೀಲ ಇದು ಆಕಸ್ಮಿಕ ಘಟನೆ. ಉದ್ದೇಶಿತ ಕೊಲೆ ಅಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಆರೋಪಿ ಫರ್ಗುಸನ್‍ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಕುಡಿಯದಂತೆ ನ್ಯಾಯಾಲಯ ಆದೇಶಿಸಿದೆ. ಅಕ್ಟೋಬರ್ 30 ರಂದು ಮತ್ತೆ ನ್ಯಾಯಾಲಯ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಲಿವ್ ಇನ್ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯಕರನ ಅಪ್ರಾಪ್ತ ಮಗನ ಹತ್ಯೆ – ಖತರ್‌ನಾಕ್‌ ಲೇಡಿ ಅಂದರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೇಕ್‍ಆಫ್ ವೇಳೆ ವಿಮಾನದ ಟಯರ್ ಬ್ಲಾಸ್ಟ್ – ಸಿಬ್ಬಂದಿ ಸೇರಿ 11 ಜನರಿಗೆ ಗಾಯ

    ಟೇಕ್‍ಆಫ್ ವೇಳೆ ವಿಮಾನದ ಟಯರ್ ಬ್ಲಾಸ್ಟ್ – ಸಿಬ್ಬಂದಿ ಸೇರಿ 11 ಜನರಿಗೆ ಗಾಯ

    ಬೀಜಿಂಗ್: ಟೇಕ್‍ಆಫ್ ವೇಳೆ ವಿಮಾನದ ಟಯರ್ ಸಿಡಿದು ಸಿಬ್ಬಂದಿ ಸೇರಿ 11 ಜನರು ಗಾಯಗೊಂಡ ಘಟನೆ ಹಾಂಗ್‍ಕಾಂಗ್‍ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಕ್ಯಾಥೆ ಪೆಸಿಫಿಕ್‍ನ ಸಿಎಕ್ಸ್-880 ವಿಮಾನವು ಶನಿವಾರ ಮಧ್ಯರಾತ್ರಿ ಲಾಸ್ ಏಂಜಲೀಸ್‍ಗೆ ಹೊರಟಿತ್ತು. ವಿಮಾನದಲ್ಲಿ 17 ಸಿಬ್ಬಂದಿ ಹಾಗೂ 293 ಪ್ರಯಾಣಿಕರಿದ್ದರು. ಟಯರ್ ಸಿಡಿಯುತ್ತಿದ್ದಂತೆ 5 ಎಸ್ಕೇಪ್ ಸ್ಲೈಡ್‍ಗಳನ್ನು ಬಳಸಿ ಪ್ರಯಾಣಿಕರನ್ನು ಹೊರಗೆ ಕರೆತರಲಾಯಿತು. ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಲೇಡಿಸ್ ಪಿಜಿಗಳೇ ಟಾರ್ಗೆಟ್ – ಸ್ನಾನ ಮಾಡುವುದನ್ನು ಕದ್ದುಮುಚ್ಚಿ ವೀಡಿಯೋ ಮಾಡುತ್ತಿದ್ದಾಗಲೇ ಕಿರಾತಕ ಲಾಕ್

    ಗಾಯಗೊಂಡ ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಗಾಯಗೊಂಡ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಚಿಕಿತ್ಸೆ ನೀಡುವುದು ನಮ್ಮ ಜವಾಬ್ದಾರಿ ಎಂದು ಸಂಸ್ಥೆ ಹೇಳಿದೆ. ಟೈರ್ ಸಿಡಿಯಲು ಕಾರಣ ಏನೆಂದು ವಿಮಾನಯಾನ ಸಂಸ್ಥೆ ಬಹಿರಂಗಪಡಿಸಿಲ್ಲ. ಆದರೆ ಪೊಲೀಸರು ಟಯರ್ ಬಿಸಿಯಾಗಿ ಸಿಡಿದಿದೆ ಎಂದಿದ್ದಾರೆ.

    ಘಟನೆ ನಡೆದ ವಿಮಾನದಲ್ಲಿದ್ದ ಸ್ಥಳೀಯ ನಟಿ ಸೆಲೆನಾ ಲೀ ಸ್ಜೆ-ವಾ ಅವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳೆಗೆರೆ ಲಕ್ಷ್ಮಿರಂಗನಾಥಸ್ವಾಮಿ ದೇಗುಲಕ್ಕೆ ಕನ್ನ – ಬೀಗ ಮುರಿದು ದೇವರ ಆಭರಣ ಕದ್ದ ಖದೀಮರು

  • ಹೆಚ್ಚು ಯೂಟ್ಯೂಬ್ ವ್ಯೂಗಾಗಿ ವಿಮಾನ ಪತನ – ಹುಚ್ಚಾಟಗೈದವನಿಗೆ 20 ವರ್ಷ ಜೈಲು

    ಹೆಚ್ಚು ಯೂಟ್ಯೂಬ್ ವ್ಯೂಗಾಗಿ ವಿಮಾನ ಪತನ – ಹುಚ್ಚಾಟಗೈದವನಿಗೆ 20 ವರ್ಷ ಜೈಲು

    ಲಾಸ್ ಏಂಜಲೀಸ್: ಯೂಟ್ಯೂಬ್‌ನಲ್ಲಿ (You Tube) ಹೆಚ್ಚು ವ್ಯೂ ಗಳಿಸುವ ಸಲುವಾಗಿ ವಿಮಾನ ಪತನ ಮಾಡಿ ಹುಚ್ಚಾಟ ಮಾಡಿದ ಪೈಲೆಟ್ (Pilot) ಯೂಟ್ಯೂಬರ್‌ಗೆ ಫೆಡರಲ್ ಜೈಲ್ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಲೊಂಪೋಕ್‌ನ (Lompoc) ಟ್ರೆವರ್ ಡೇನಿಯಲ್ ಜಾಕೋಬ್ (29) ತಪ್ಪೊಪ್ಪಿಕೊಂಡ ಯೂಟ್ಯೂಬರ್ ಪೈಲೆಟ್. ಜಾಕೋಬ್ ಮನವಿ ಒಪ್ಪಂದದ ಪ್ರಕಾರ, ತಾನೊಬ್ಬ ಅನುಭವಿ ಪೈಲಟ್ ಮತ್ತು ಸ್ಕೈಡ್ರೈವರ್ ಆಗಿದ್ದು, ವಾಲೆಟ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಯಿಂದ ಪ್ರಾಯೋಜಕತ್ವವನ್ನು ಪಡೆದುಕೊಂಡಿದ್ದಾನೆ. ಪ್ರಾಯೋಜಕತ್ವದ ಒಪ್ಪಂದದ ಪ್ರಕಾರ ಜಾಕೋಬ್ ಪೋಸ್ಟ್ ಮಾಡುವ ಯೂಟ್ಯೂಬ್ ವಿಡಿಯೋದಲ್ಲಿ ಕಂಪನಿಯ ವಾಲೆಟ್ ಅನ್ನು ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಪೆಟ್ರೋಲ್ ಬೇಕಿಲ್ಲ – ಬಿಯರ್ ಹಾಕಿದ್ರೆ ಓಡುತ್ತೆ ಈ ಬೈಕ್!

    ನವಂಬರ್ 24, 2021ರಂದು ಜಾಕೋಬ್ (Trevor Daniel Jacob) ತನ್ನ ವಿಮಾನದಲ್ಲಿ ಲೊಂಪೋಕ್ ಸಿಟಿ ವಿಮಾನ ನಿಲ್ದಾಣದಿಂದ ಮ್ಯಾಮತ್ ಲೇಕ್ಸ್‌ಗೆ ಹೊರಟಿದ್ದ. ಈ ವೇಳೆ ತಾನು ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಹಾರಿದ್ದು, ವಿಮಾನ ಅಪಘಾತಕ್ಕೀಡಾಗಿದೆ ಎಂದು ಮನವಿ ಒಪ್ಪಂದದಲ್ಲಿ ಒಪ್ಪಿಕೊಂಡಿದ್ದಾನೆ. ವಿಮಾನ ಹಾರಾಟ ನಡೆಸುವ ಮೊದಲು ವಿಮಾನದ ವಿವಿಧ ಭಾಗಗಳಲ್ಲಿ ವಿಡಿಯೋ ಕ್ಯಾಮರಾಗಳನ್ನು ಅಳವಡಿಸಿ ಬಳಿಕ ಪ್ಯಾರಾಚೂಟ್ ಸಹಾಯದಿಂದ ಹಾರಿ ಸೆಲ್ಫಿ ಸ್ಟಿಕ್‌ನಲ್ಲಿ ಅಳವಡಿಸಲಾಗಿದ್ದ ವಿಡಿಯೋ ಕ್ಯಾಮರಾ ಮೂಲಕ ವಿಮಾನ ಅಪಘಾತಕ್ಕೀಡಾಗುವ ವಿಡಿಯೋವನ್ನು ಮಾಡಲಾಗಿದೆ. ಆತನ ಹಾರಾಟದ ವಿಡಿಯೋ ರೆಕಾರ್ಡ್‌ಗಳು ಮತ್ತು ವಿಮಾನ ಪತನದ ಡೇಟಾವನ್ನು ಪಡೆದು ತನಿಖೆ ನಡೆಸಲಾಗಿತ್ತು. ಇದನ್ನೂ ಓದಿ: 1,000 ಬಾಯ್‍ಫ್ರೆಂಡ್‍ಗಳ ಜೊತೆ ಡೇಟಿಂಗ್ – 1 ಗಂಟೆ ಡೇಟ್‍ಗೆ ಈಕೆಗೆ ಕೊಡ್ಬೇಕು 5 ಸಾವಿರ!

    ನವಂಬರ್ 26ರಂದು ಜಾಕೋಬ್ ವಿಮಾನ ಪತನದ ಬಗ್ಗೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಗೆ (NTSB) ಮಾಹಿತಿಯನ್ನು ನೀಡಿದ್ದಾನೆ. ವಿಮಾನ ಪತನದ ಬಗ್ಗೆ ಎನ್‌ಟಿಎಸ್‌ಬಿ ತನಿಖೆ ಆರಂಭಿಸಿದೆ. ಅಲ್ಲದೇ ಜಾಕೋಬ್‌ಗೆ ವಿಮಾನ ಪತನದ ಅವಶೇಷಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಹೇಳಿತ್ತು. ವಿಮಾನ ಪತನದ ವಿಡಿಯೋಗಳು ಹಾಗೂ ಅಪಘಾತದ ಸ್ಥಳವನ್ನು ತೋರಿಸಲು ಜಾಕೋಬ್ ಒಪ್ಪಿಕೊಂಡಿದ್ದ. ಇದಾದ ಮೂರು ದಿನಗಳ ನಂತರ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ವಿಮಾನ ಪತನದ ಬಗ್ಗೆ ತನ್ನದೇ ಆದ ತನಿಖೆಯನ್ನು ಪ್ರಾರಂಭಿಸಿತು. ಇದನ್ನೂ ಓದಿ: ಇಮ್ರಾನ್ ಖಾನ್‌ಗೆ ಜಾಮೀನು ಮಂಜೂರು

    ಮನವಿ ಒಪ್ಪಂದದ ಪ್ರಕಾರ, ಅವಶೇಷಗಳ ಸ್ಥಳವು ತನಗೆ ತಿಳಿದಿಲ್ಲ ಎಂದು ಜಾಕೋಬ್ ತನಿಖಾಧಿಕಾರಿಗಳಿಗೆ ಸುಳ್ಳು ಹೇಳಿದ್ದಾನೆ. ಆದರೆ ವಾಸ್ತವವಾಗಿ ಜಾಕೋಬ್ ತನ್ನ ಸ್ನೇಹಿತನೊಂದಿಗೆ ಹೆಲಿಕಾಪ್ಟರ್ ಮೂಲಕ ವಿಮಾನ ಪತನವಾದ ಸ್ಥಳಕ್ಕೆ ಹೋಗಿ ಅಲ್ಲಿದ್ದ ಅವಶೇಷಗಳನ್ನು ಟ್ರಕ್‌ನ ಟ್ರೈಲರ್‌ಗೆ ಲೋಡ್ ಮಾಡಿ ಅಲ್ಲಿಂದ ಲ್ಯಾಂಪೋಕ್ ಸಿಟಿ ವಿಮಾನನಿಲ್ದಾಣದ ಹ್ಯಾಂಗರ್‌ನಲ್ಲಿ ಇಳಿಸಿದ್ದಾನೆ. ಬಳಿಕ ಅದರ ಅವಶೇಷಗಳನ್ನು ವಿಮಾನ ನಿಲ್ದಾಣದ ಕಸದ ತೊಟ್ಟಿ ಸೇರಿದಂತೆ ಹಲವೆಡೆ ಹಾಕಿ ನಾಶಪಡಿಸಲಾಗಿದೆ. ಇದು ಫೆಡರಲ್ ಅಧಿಕಾರಿಗಳ ತನಿಖೆಯನ್ನು ಅಡ್ಡಿಪಡಿಸುವ ಸಲುವಾಗಿ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದ.ಇದನ್ನೂ ಓದಿ: ಹಾರ್ಟ್‌ ಅಟ್ಯಾಕ್ ಆಗ್ಲಿ ಅಂತ ನನಗೆ ಇಂಜೆಕ್ಷನ್ ಕೊಟ್ಟಿದ್ರು: ಇಮ್ರಾನ್ ಖಾನ್

    ಅದೇ ವರ್ಷ ಡಿಸೆಂಬರ್ 23ರಂದು ಜಾಕೋಬ್ ತನ್ನ ಯೂಟ್ಯೂಬ್‌ನಲ್ಲಿ ‘ಐ ಕ್ರ್ಯಾಶ್ಡ್ ಮೈ ಏರೋಪ್ಲೇನ್’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾನೆ. ಆ ವಿಡಿಯೋ ವಾಲೆಟ್ ಪ್ರಚಾರವನ್ನು ಒಳಗೊಂಡಿದ್ದು, ವಿಮಾನದಿಂದ ಪ್ಯಾರಾಚೂಟ್ ಮೂಲಕ ಹಾರುವುದು ಮತ್ತು ವಿಮಾನ ಪತನವಾಗುವ ದೃಶ್ಯವನ್ನು ಒಳಗೊಂಡಿದೆ. ವಿಡಿಯೋ ಮೂಲಕ ಹಣ ಮಾಡುವ ಉದ್ದೇಶದಿಂದ ಈ ರೀತಿಯಾಗಿ ಮಾಡಿರುವುದಾಗಿ ಜಾಕೋಬ್ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಪಾಕ್‌ನಲ್ಲಿ ಹಿಂಸಾಚಾರಕ್ಕೆ ಆರ್‌ಎಸ್‌ಎಸ್, ಬಿಜೆಪಿಯೇ ಹೊಣೆ – ಶೆಹಬಾಜ್ ಷರೀಫ್ ಆಪ್ತ


    ಘಟನೆಯ ಬಳಿಕ ಎಫ್‌ಎಎ ಏಪ್ರಿಲ್ 2022ರಲ್ಲಿ ಜಾಕೋಬ್‌ನ ಪೈಲೆಟ್ ಪರವಾನಗಿಯನ್ನು ರದ್ದುಗೊಳಿಸಿತ್ತು. ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಟ್ರಾನ್ಸ್ಪೋರ್ಟೇಷನ್ ಇನ್ಸ್ಪೆಕ್ಟರ್ ಜನರಲ್ ಕಚೇರಿ ಈ ಪ್ರಕರಣವನ್ನು ತನಿಖೆ ನಡೆಸಿತ್ತು. ಇದನ್ನೂ ಓದಿ: ನನ್ನ ಮಕ್ಕಳ ಮೇಲಾಣೆ – ಅತ್ಯಾಚಾರ ಆರೋಪ ಮಾಡಿದ ಮಹಿಳೆಯನ್ನು ನಾನೆಂದೂ ಭೇಟಿಯಾಗಿಲ್ಲ: ಟ್ರಂಪ್

  • ಆಸ್ಕರ್ ಪ್ರಶಸ್ತಿ ಪ್ರದಾನಕ್ಕೆ ಕ್ಷಣಗಣನೆ : ಭಾರತದ ಯಾವ ಚಿತ್ರಕ್ಕೆ ಸಿಗತ್ತೆ ಆಸ್ಕರ್?

    ಆಸ್ಕರ್ ಪ್ರಶಸ್ತಿ ಪ್ರದಾನಕ್ಕೆ ಕ್ಷಣಗಣನೆ : ಭಾರತದ ಯಾವ ಚಿತ್ರಕ್ಕೆ ಸಿಗತ್ತೆ ಆಸ್ಕರ್?

    ಪ್ರತಿಷ್ಠಿತ ಆಸ್ಕರ್ (Oscars) ಪ್ರಶಸ್ತಿ ಪ್ರದಾನ ಸಮಾರಂಭ ಕ್ಷಣಗಣನೆ ಶುರುವಾಗಿದೆ. ಅಮೆರಿಕಾದ ಕಾಲಮಾನ ಪ್ರಕಾರ ಇಂದು ರಾತ್ರಿಯಿಂದಲೇ ಕಾರ್ಯಕ್ರಮ ಶುರುವಾಗಲಿದೆ. (ಭಾರತೀಯ ಕಾಲಮಾನ ಪ್ರಕಾರ ನಾಳೆ ಬೆಳಗ್ಗೆ 6.30) ಅಮೆರಿಕಾದ ಲಾಸ್ ಏಂಜಲೀಸ್‍ ( Los Angeles)  ಡಾಲ್ಬಿ ಥಿಯೇಟರ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಗತ್ತಿನ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮವನ್ನು ನೋಡುವುದಕ್ಕಾಗಿಯೇ ಜಗತ್ತಿನ ಮೂಲೆ ಮೂಲೆಗಳಿಂದ ಸಿನಿಮಾ ಪ್ರೇಮಿಗಳು ಆಗಮಿಸುತ್ತಾರೆ.

    ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯರು ಹೆಮ್ಮೆ ಪಡುವಂತಹ ಅನೇಕ ಸಂಗತಿಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಈ ವೇದಿಕೆಯಲ್ಲಿ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ಹೆಜ್ಜೆ ಹಾಕಲಿದ್ದಾರೆ. ಈಗಾಗಲೇ ಇಬ್ಬರೂ ಕಲಾವಿದರು ಅಮೆರಿಕಾದಲ್ಲೇ ಬೀಡು ಬಿಟ್ಟಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ರಾಮ್ ಚರಣ್ (Ram Charan) ಬಂದಿದ್ದು, ಅಭಿಮಾನಿಗಳು ಮುಗಿಬಿದ್ದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ `ಕಾಂತಾರ’ ಶಿವನ ಹುಡುಗಿ

    ಅಲ್ಲದೇ, ಆರ್.ಆರ್.ಆರ್ ಸಿನಿಮಾದ ನಾಟು ನಾಟು ಗೀತೆಯೂ ಕೂಡ ಆಸ್ಕರ್ ರೇಸ್ ನಲ್ಲಿದೆ. ಹೀಗಾಗಿ ನಿರ್ದೇಶಕ ರಾಜಮೌಳಿ ಸೇರಿದಂತೆ ಚಿತ್ರತಂಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. ಭಾರತದಿಂದ ಒಂದು ಸಿನಿಮಾ ಮತ್ತು ಎರಡು ಡಾಕ್ಯುಮೆಂಟರಿಗಳು ಪ್ರಶಸ್ತಿಯ ಕಣದಲ್ಲಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

    ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ರಾಮ್ ಚರಣ್ ಅಭಿಮಾನಿಗಳ ಜೊತೆ ಬೆರೆಯುವುದಾಗಿ ಮಾತುಕೊಟ್ಟಿದ್ದರು. ಅದರಂತೆ ಅಭಿಮಾನಿಗಳ ಜೊತೆ ಒಂದಷ್ಟು ಹೊತ್ತು ಕಳೆದಿದ್ದಾರೆ. ನೆಚ್ಚಿನ ನಟನನ್ನು ಭೇಟಿ ಮಾಡಲು ಸಾವಿರಾರು ಅಭಿಮಾನಿಗಳು ನೆರೆದಿದ್ದು ವಿಶೇಷ. ಎಲ್ಲರೊಂದಿಗೂ ಖುಷಿಯಿಂದಲೇ ಫೋಟೋಗೂ ಪೋಸ್ ನೀಡಿದ್ದಾರೆ ರಾಮ್ ಚರಣ್. ಆ ಫೋಟೋಗಳು ಕೂಡ ವೈರಲ್ ಆಗಿವೆ.