Tag: lorry

  • ಸಡನ್ ಬ್ರೇಕ್ ಹಾಕಿದ್ದರಿಂದ ಲಾರಿಗೆ ಕಾರು ಡಿಕ್ಕಿ: ಪ್ರಶ್ನಿಸಲು ಹೋದ ಕಾರು ಚಾಲಕ ಲಾರಿಯಡಿ ಸಿಲುಕಿ ಸಾವು

    ಸಡನ್ ಬ್ರೇಕ್ ಹಾಕಿದ್ದರಿಂದ ಲಾರಿಗೆ ಕಾರು ಡಿಕ್ಕಿ: ಪ್ರಶ್ನಿಸಲು ಹೋದ ಕಾರು ಚಾಲಕ ಲಾರಿಯಡಿ ಸಿಲುಕಿ ಸಾವು

    ಬೆಂಗಳೂರು: ನಗರದ ಯಶವಂತಪುರದಲ್ಲಿ ಶನಿವಾರ ರಾತ್ರೀ ಭೀಕರ ಅಪಘಾತವೊಮದು ಸಂಭವಿಸಿದ್ದು. ಘಟನೆಯಲ್ಲಿ ಉಬರ್ ಕ್ಯಾಬ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅನಿಲ್ ಕುಮಾರ್ ಮೃತ ದುರ್ದೈವಿ ಉಬರ್ ಕ್ಯಾಬ್ ಚಾಲಕ.

    ನಡೆದಿದ್ದೇನು?: ನಿನ್ನೆ ರಾತ್ರಿ ಬಿಇಎಲ್ ಫ್ಲೈ ಓವರ್ ಬಳಿ ವೇಗವಾಗಿ ಹೋಗುತ್ತಿದ್ದ ಲಾರಿ ಸಡನ್ ಆಗಿ ಬ್ರೇಕ್ ಹಾಕಿದೆ. ಪರಿಣಾಮ ಹಿಂದುಗಡೆಯಿಂದ ಬರುತ್ತಿದ್ದ ಉಬರ್ ಕ್ಯಾಬ್ ಲಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕ್ಯಾಬ್ ಚಾಲಕ ಸಿಟ್ಟಿನಿಂದ ಕೆಳಗಿಳಿದು ಲಾರಿ ಚಾಲಕನನ್ನು ಪ್ರಶ್ನೆ ಮಾಡಲು ಹೋಗಿದ್ದಾರೆ. ಆದ್ರೆ ನಿಲ್ಲದೇ ನಿಧಾನವಾಗಿ ಹೋಗುತ್ತಿದ್ದ ಲಾರಿ ಚಕ್ರಕ್ಕೆ ಸಿಲುಕಿ ಕಾರು ಚಾಲಕ ಅನಿಲ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ವಿಷಯ ತಿಳಿದ ಯಶವಂತಪುರ ಸಂಚಾರಿ ಠಾಣೆ ಪೊಲೀಸ್ರಿಗೆ ಶಾಕ್ ಆಗಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ರು ಒಂದು ಕಡೆ ತಾನೇ ಹಿಂದಿನಿಂದ ಆಕ್ಸಿಡೆಂಟ್ ಮಾಡಿದ ಕಾರು ರಸ್ತೆ ಬದಿ ನಿಂತಿದ್ರೆ, ಡ್ರೈವರ್ ಮುಂದೆಯಿದ್ದ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವುದನ್ನು ಕಂಡು ಶಾಕ್ ಆಗಿತ್ತು. ಬಳಿಕ ಅಲ್ಲಿನ ಸಿಸಿಟಿವಿ ಮತ್ತು ಬೇರೆ ಪ್ರಯಾಣಿಕರ ಬಳಿ ವಿಚಾರಣೆ ಮಾಡಿದಾಗ ಪ್ರಕರಣದ ಸತ್ಯಾಂಶ ಗೊತ್ತಾಗಿದೆ.

    ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನ್ನು ವಶಕ್ಕೆ ಪಡೆದಿದ್ದಾರೆ.

  • ಲಾರಿ-ಬೈಕ್ ನಡುವೆ ಡಿಕ್ಕಿ: ಅಪ್ಪಚ್ಚಿಯಾಯ್ತು ಬೈಕ್ ಹಿಂಬದಿ ಸವಾರನ ಅರ್ಧ ದೇಹ

    ಲಾರಿ-ಬೈಕ್ ನಡುವೆ ಡಿಕ್ಕಿ: ಅಪ್ಪಚ್ಚಿಯಾಯ್ತು ಬೈಕ್ ಹಿಂಬದಿ ಸವಾರನ ಅರ್ಧ ದೇಹ

    ಬೆಂಗಳೂರು: ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ನೆಲಮಂಗಲ ಬಳಿಯ ಸೊಂಡೆಕೊಪ್ಪ ರಸ್ತೆಯ ಸರ್ಕಲ್ ಬಳಿ ನಡೆದಿದೆ.

    35 ವರ್ಷದ ರಮೇಶ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ರಮೇಶ್ ಅವರ ಮೇಲೆ ಲಾರಿಯ ಹಿಂಬದಿಯ ಚಕ್ರದಲ್ಲಿ ಹರಿದಿದ್ದರಿಂದ ದೇಹದ ಅರ್ಧಭಾಗ ಅಪ್ಪಚ್ಚಿಯಾಗಿದೆ. ಅದೃಷ್ಟವಷಾತ ಬೈಕ್ ಸವಾರ ವಿಜಯ್‍ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಮೇಶ್ ಮತ್ತು ವಿಜಯ್‍ಕುಮಾರ್ ಗೃಹ ಪ್ರವೇಶ  ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ಸಾಗುತ್ತಿದ್ದರು.

    ರಮೇಶ್ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಟ್ಟಣದ ನಿವಾಸಿ ಎಂದು ತಿಳಿದುಬಂದಿದೆ. ರಮೇಶ್ ನಗರದಲ್ಲಿ ವಿಡಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅಪಘಾತದ ನಂತರ ಲಾರಿ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣಾ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಸ್ಥಳದ ಪರಿಶೀಲನೆ ನಡೆಸಿದ್ದಾರೆ.

     

  • ಲಾರಿ, ಫಾರ್ಚೂನರ್  ಕಾರ್ ಮುಖಾಮುಖಿ: ಮೂವರ ದುರ್ಮರಣ

    ಲಾರಿ, ಫಾರ್ಚೂನರ್ ಕಾರ್ ಮುಖಾಮುಖಿ: ಮೂವರ ದುರ್ಮರಣ

    ತುಮಕೂರು: ಲಾರಿ ಮತ್ತು ಟೊಯೋಟಾ ಫಾರ್ಚೂನರ್ ಕಾರ್ ಮುಖಾಮುಖಿ ಡಿಕ್ಕಿಯಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ನಡೆದಿದೆ.

    ಜಿಲ್ಲೆಯ ಶಿರಾ ಬಳಿಯ ಮಾಳಂಗಿಯ- ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ಮಹಮದ್ ಸಾದಿಕ್(52) ಸಿದ್ದಿಕ್ (50) ಹಾಗೂ ಜಾಫರ್ (26) ಎಂಬುವುದಾಗಿ ಗುರುತಿಸಲಾಗಿದೆ.

    ಮೃತರೆಲ್ಲರೂ ತಮಿಳುನಾಡು ಮೂಲದವರು ಎನ್ನಲಾಗಿದ್ದು, ಇವರು ಸೇಲಂ ನಿಂದ ಮುಂಬೈಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

    ಘಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳಕ್ಕೆ ಶಿರಾ ಪೊಲೀಸರು ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿ ತನಿಖೆ ನಡೆಸುತ್ತಿದ್ದಾರೆ.

  • ಮೇವಿನ ಲಾರಿಗೆ ವಿದ್ಯುತ್ ಲೈನ್ ತಗುಲಿ ಮೇವು ಸುಟ್ಟು ಭಸ್ಮ

    ಮೇವಿನ ಲಾರಿಗೆ ವಿದ್ಯುತ್ ಲೈನ್ ತಗುಲಿ ಮೇವು ಸುಟ್ಟು ಭಸ್ಮ

    ತುಮಕೂರು: ಗೋಶಾಲೆಗೆ ತೆರಳುತ್ತಿದ್ದ ಮೇವಿನ ಲಾರಿಗೆ ಬೆಂಕಿಬಿದ್ದು ಮೇವು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಹೊಸಕೆರೆಯಲ್ಲಿ ನಡೆದಿದೆ.

    ಮೇವು ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿ ಮೇವಿಗೆ ಬೆಂಕಿ ಹೊತ್ತಿಕೊಂಡಿದೆ. ಇದೇ ಸಂದರ್ಭದಲ್ಲಿ ಬಿಸಿಲಿನ ತಾಪಕ್ಕೆ ಇಡೀ ಲಾರಿಯಲ್ಲಿದ್ದ ಮೇವು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.

    ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರೈತರು ಮೇವಿಗಾಗಿ ಪರಿತಪಿಸುತ್ತಿರುವ ಸಂರ್ದಭದಲ್ಲಿ ಈ ರೀತಿಯ ಘಟನೆ ನಡೆದಿರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.

  • ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಲಾರಿ ಬೆಂಕಿಗಾಹುತಿ

    ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಲಾರಿ ಬೆಂಕಿಗಾಹುತಿ

    ಮಂಗಳೂರು: ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗೋಳಿತ್ತೊಟ್ಟುವಿನಲ್ಲಿ ನಡೆದಿದೆ.

    ಇಂದು ಮುಂಜಾನೆ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್ ತಂತಿಗಳು ಲಾರಿ ಮೇಲೆ ಬಿದ್ದಿದೆ. ತಕ್ಷಣ ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಲಾರಿ ಚಾಲಕ ಲಾರಿಯಿಂದ ಜಿಗಿದು ಪರಾರಿಯಾಗಿದ್ದಾರೆ.

    ಲಾರಿಯಿಂದ ಬೆಂಕಿ ಹರಡೋ ಸಾಧ್ಯತೆಗಳು ಇದ್ದಿದ್ದರಿಂದ ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಬಂದು ಬೆಂಕಿ ನಂದಿಸೋ ಕಾರ್ಯ ಮಾಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಧಾರವಾಡ: ರಸ್ತೆಯಲ್ಲೇ ಹೊತ್ತಿ ಉರಿದ ಲಾರಿ-ವಿಡಿಯೋ ನೋಡಿ

    ಧಾರವಾಡ: ರಸ್ತೆಯಲ್ಲೇ ಹೊತ್ತಿ ಉರಿದ ಲಾರಿ-ವಿಡಿಯೋ ನೋಡಿ

    ಧಾರವಾಡ: ಚಲಿಸುತ್ತಿದ್ದ ವೇಳೆಯಲ್ಲಿ  ಬೆಂಕಿ ಕಾಣಿಸಿಕೊಂಡು ಲಾರಿಯೊಂದು ಹೊತ್ತಿ ಉರಿದಿದೆ. ಧಾರವಾಡ ತಾಲೂಕಿನ ಮಮ್ಮಿಗಟ್ಟಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.

    ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ವಾಹನವನ್ನು ನಿಲ್ಲಿಸಿ, ಚಾಲಕ ಮತ್ತು ಕ್ಲೀನರ್ ಹಾರಿ ಬೆಂಕಿಯಿಂದ ಜೀವ ಉಳಿಸಿಕೊಂಡಿದ್ದಾರೆ. ಜಲ್ಲಿಕಲ್ಲು ಸಾಗಾಣೆ ಮಾಡುತ್ತಿದ್ದ ಲಾರಿ ಧಾರವಾಡ ನಗರದಿಂದ ಬೆಳಗಾವಿ ಹೊರಟಿತ್ತು. ಲಾರಿ ಬೆಂಗಳೂರು ಮೂಲದ್ದು ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ವೀಡಿಯೋ: ಕಾರು ಡಿಕ್ಕಿ ಹೊಡೆದು ಬೈಕ್ ಮೇಲೆ ಬಿದ್ದ ಲೈಟ್ ಕಂಬ- ಕ್ಷಣಾರ್ಧದಲ್ಲಿ ಸ್ಫೋಟಿಸಿದ ಬೈಕ್

    ಸ್ಥಳಕ್ಕೆ ಅಗ್ನಿ ಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.

    https://www.youtube.com/watch?v=zkE-Ua6TOI8

  • ಬಾಳೆಹಣ್ಣು ಸಾಗಿಸುತ್ತಿದ್ದ ಲಾರಿ ಪಲ್ಟಿ- ಚಾಲಕ ಪಾರು

    ಬಾಳೆಹಣ್ಣು ಸಾಗಿಸುತ್ತಿದ್ದ ಲಾರಿ ಪಲ್ಟಿ- ಚಾಲಕ ಪಾರು

    ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿ ಬಾಳೆಹಣ್ಣು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಇಲ್ಲಿನ ರಾಯಲ್ ವೃತ್ತದ ಬಳಿ ಈ ಘಟನೆ ನಡೆದಿದೆ. ಆಂಧ್ರಪ್ರದೇಶದ ಪುಲಿವೆಂದುಲದಿಂದ ಹೊಸಪೇಟೆ ಮೂಲಕ ಬಿಜಾಪುರ ಜಿಲ್ಲೆ ಇಂಡಿ ಕಡೆ ಹೊರಟಿದ್ದ ಲಾರಿ, ವೇಗವಾಗಿ ಬಂದು ವೃತ್ತದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ.

    ಲಾರಿಯಿಂದ ಡೀಸೆಲ್ ಸೋರಿಕೆಯಾಗುತ್ತಿದ್ದರಿಂದ ಕೆಲ ಕಾಲ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಕ್ರೇನ್ ಮೂಲಕ ಲಾರಿಯನ್ನು ಎತ್ತಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.

    ಘಟನೆ ಬಗ್ಗೆ ಬಳ್ಳಾರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಹಾವೇರಿಯ ಶಿಗ್ಗಾವಿಯಲ್ಲಿ ಭೀಕರ ಅಪಘಾತ- ಬಸ್ ಚಾಲಕ ಸಾವು, 15 ಪ್ರಯಾಣಿಕರಿಗೆ ಗಾಯ

    ಹಾವೇರಿಯ ಶಿಗ್ಗಾವಿಯಲ್ಲಿ ಭೀಕರ ಅಪಘಾತ- ಬಸ್ ಚಾಲಕ ಸಾವು, 15 ಪ್ರಯಾಣಿಕರಿಗೆ ಗಾಯ

    ಹಾವೇರಿ: ಹಿಂಬದಿಯಿಂದ ಲಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

    ಜಿಲ್ಲೆಯ ಶಿಗ್ಗಾವಿ ತಾಲೂಕಿನ ನೀರಲಗಿ ಕ್ರಾಸ್ ಬಳಿ ಇರೋ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಈ ಅಪಘಾತ ಸಂಭವಿಸಿದೆ. 45 ವರ್ಷ ವಯಸ್ಸಿನ ಲವ್ ಮೃತ ಬಸ್ ಚಾಲಕ. ಘಟನೆಯಲ್ಲಿ 15 ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಖಾಸಗಿ ಬಸ್ ಬೆಂಗಳೂರಿನಿಂದ ಗೋವಾಕ್ಕೆ ಹೊರಟ್ಟಿತ್ತು ಎಂದು ತಿಳಿದುಬಂದಿದೆ.

    ಸ್ಥಳಕ್ಕೆ ತಡಸ್ ಪೊಲೀಸ್ ಸಿಬ್ಬಂದಿ, ಪಿಎಸ್‍ಐ ಹಾಗೂ ಸಿಪಿಐ ಸಂತೋಷ ಪವಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಡಸ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆಗೆ 5 ಬೈಕ್‍ಗಳು ಜಖಂ- ಮೂವರಿಗೆ ಗಾಯ

    ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆಗೆ 5 ಬೈಕ್‍ಗಳು ಜಖಂ- ಮೂವರಿಗೆ ಗಾಯ

    – ಕೆಆರ್ ರೋಡ್‍ನಲ್ಲಿ ಲಾರಿ ಪಲ್ಟಿ

    ಬೆಂಗಳೂರು: ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಪರಿಣಾಮ ಐದು ಬೈಕ್‍ಗಳು ಜಖಂ ಆಗಿದ್ದು, ಮೂವರಿಗೆ ಗಾಯವಾಗಿರುವ ಘಟನೆ ಬೆಂಗಳೂರಿನ ಕೆಆರ್ ಮಾರ್ಕೆಟ್ ಬಳಿ ನಡೆದಿದೆ.

    ಮಾರ್ಕೆಟ್ ಬಳಿಯ ಮಿನರ್ವ ಸರ್ಕಲ್ ಬಳಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಕಾರು ಡಿಕ್ಕಿ ಹೊಡೆದು ಅವಘಡ ಸಂಭವಿಸುತ್ತಿದ್ದಂತೆಯೇ ಚಾಲಕ ಕಾರು ಸಮೇತ ಪರಾರಿಯಾಗಿದ್ದಾನೆ. ಈ ವೇಳೆ ಸ್ಥಳೀಯರು ಆತನನ್ನು ಬೆನ್ನಟ್ಟಿದ್ರೂ ಯಾವುದೇ ಪ್ರಯೋಜನವಾಗಿಲ್ಲ.

    `ಅತೀ ವೇಗದಿಂದ ಬಂದ ಕಾರು ಮಗುವಗೆ ಡಿಕ್ಕಿ ಹೊಡೆದಿದೆ. ಮಾತ್ರವ್ಲಲದೇ ಪಕ್ಕದಲ್ಲೆ ನಿಂತಿದ್ದ ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿಯೊಬ್ಬರ ಕಾಲಿಗೆ ಗಂಭೀರ ಗಾಯಗಳಾಗಿದೆ. ಇಷ್ಟು ಮಾತ್ರವಲ್ಲದೇ ಜಯನಗರದಲ್ಲೂ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲಿಯೂ ಆತನನ್ನು ಹಿಡಿದಿಲ್ಲ. ಸದ್ಯ 4ನೇ ಬ್ಲಾಕ್‍ನಲ್ಲಿ ಸಿಕ್ಕಿಬಿದ್ದಿದ್ದಾನಂತೆ ಏನಾಗತ್ತೋ ನೋಡ್ಬೇಕಷ್ಟೇ’ ಅಂತಾ ಪ್ರತ್ಯಕ್ಷದರ್ಶಿಯೊಬ್ಬರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಲಾರಿ ಪಲ್ಟಿ: ಇದೇ ವೇಳೆ ಕೆಆರ್ ರೋಡ್‍ನಲ್ಲಿ ಲಾರಿಯೊಂದು ಪಲ್ಟಿಯಾಗಿದ್ದು ಡ್ರೈವರ್ ಮತ್ತು ಕ್ಲೀನರ್‍ಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಎರಡೂ ಪ್ರಕರಣಗಳ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಆರ್ ಮಾರ್ಕೆಟ್ ಟ್ರಾಫಿಕ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ತುಮಕೂರು: ಲಾರಿ ಬೈಕ್ ನಡುವೆ ಅಪಘಾತ -ಇಬ್ಬರ ಸಾವು, ಹೊತ್ತಿ ಉರಿದ ಲಾರಿ

    ತುಮಕೂರು: ಲಾರಿ ಬೈಕ್ ನಡುವೆ ಅಪಘಾತ -ಇಬ್ಬರ ಸಾವು, ಹೊತ್ತಿ ಉರಿದ ಲಾರಿ

    ತುಮಕೂರು: ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹಿಂಡಿಸ್ಕೆರೆ ಬಳಿ ನಡೆದಿದೆ.

    ಮೃತ ಬೈಕ್ ಸವಾರರನ್ನು ಅರುಣ್ (24) ಮತ್ತು ವಿನಯ್ ಪ್ರಸಾದ್ (25) ಎಂದು ಗುರುತಿಸಲಾಗಿದೆ. ಮೃತರು ಬೆಂಗಳೂರು ಮೂಲದವರಾಗಿದ್ದಾರೆ. ಇಂದು ಬೆಳಗಿನ ಜಾವ ಈ ಘಟನೆ ನಡೆದಿದೆ. ಅಪಘಾತವಾದ ರಭಸಕ್ಕೆ ಬೈಕ್ ಲಾರಿ ಕೆಳಗೆ ನುಗ್ಗಿದೆ. ಪರಿಣಾಮ ಲಾರಿಗೆ ಬೆಂಕಿ ತಗುಲಿದ್ದು, ಲಾರಿ ಭಾಗಶಃ ಸುಟ್ಟು ಕರಕಲಾಗಿದೆ.

    ಘಟನೆ ಬಗ್ಗೆ ಕೆಬಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.