Tag: lorry

  • ವಿಡಿಯೋ: ಕೆಜೆ ಜಾರ್ಜ್ ಕ್ಷೇತ್ರದಲ್ಲಿ ವಾರಗಳ ಹಿಂದಷ್ಟೆ ರಸ್ತೆ ಕಾಮಗಾರಿ- ಮಳೆಗೆ 8 ಅಡಿ ಭೂಕುಸಿತವಾಗಿ ಮಗುಚಿ ಬಿದ್ದ ಲಾರಿ!

    ವಿಡಿಯೋ: ಕೆಜೆ ಜಾರ್ಜ್ ಕ್ಷೇತ್ರದಲ್ಲಿ ವಾರಗಳ ಹಿಂದಷ್ಟೆ ರಸ್ತೆ ಕಾಮಗಾರಿ- ಮಳೆಗೆ 8 ಅಡಿ ಭೂಕುಸಿತವಾಗಿ ಮಗುಚಿ ಬಿದ್ದ ಲಾರಿ!

    -ಸರ್ವಜ್ಞನಗರಕ್ಕೆ 300 ಕೋಟಿ ರೂ. ಅನುದಾನ ಪಡೆದಿರೋ ಕೆ.ಜೆ ಜಾರ್ಜ್

    ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ಭೂ ಕುಸಿತ ಉಂಟಾಗಿ ಲಾರಿಯೊಂದು ಮಗುಚಿ ಬಿದ್ದ ಘಟನೆ ನಡೆದಿದೆ.

    ಕೆಲ ವಾರಗಳ ಹಿಂದೆಯಷ್ಟೇ ಸರ್ವಜ್ಞ ನಗರದ ಕಾಕ್ಸ್ ಟೌನ್‍ನ ಜೀವನಹಳ್ಳಿಯ ಈ ರಸ್ತೆಯಲ್ಲಿ ಕಾಮಗಾರಿ ನಡೆಸಲಾಗಿತ್ತು. ಶುಕ್ರವಾರ ರಾತ್ರಿ ನಗರದಲ್ಲಿ ಭಾರೀ ಮಳೆಯಾಗಿದ್ದು, ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ನಿನ್ನೆ ಬಿದ್ದ ಮಳೆಗೆ ಸುಮಾರು 8 ಅಡಿಯಷ್ಟು ಭೂ ಕುಸಿತ ಉಂಟಾಗಿ ಲಾರಿಯೊಂದು ಉರುಳಿ ಬಿದ್ದಿದೆ.

    ಮೂರು ವರ್ಷಗಳಿಂದ ರಾಜ್ಯ ಸರ್ಕಾರದ ಅನುದಾನ, ಕೇಂದ್ರ ಸರ್ಕಾರದ ಅನುದಾನ, ಬಿಬಿಎಂಪಿಯ ವಿಶೇಷ ಅನುದಾನಗಳು ಸೇರಿದಂತೆ ಬರೋಬ್ಬರಿ 310 ಕೋಟಿ ರೂಪಾಯಿ ಅನುದಾನವನ್ನು ಸರ್ವಜ್ಞ ನಗರಕ್ಕೆ ಪಡೆದುಕೊಂಡಿದ್ದಾರೆ ಕೆ.ಜೆ ಜಾರ್ಜ್.

    ಈ ಬಾರಿ ಬಿಬಿಎಂಪಿ ಬಜೆಟ್‍ನಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಅನುದಾನವನ್ನ ಕೆಜೆ ಜಾರ್ಜ್ ತಮ್ಮ ಕ್ಷೇತ್ರಕ್ಕೆ ಪಡೆದುಕೊಂಡಿರೋ ಮಾಹಿತಿ ಪಬ್ಲಿಕ್‍ ಟಿವಿಗೆ ಲಭ್ಯವಾಗಿದೆ. ಆದ್ರೆ ಇಷ್ಟೆಲ್ಲ ಅನುದಾನ ಪಡೆದಿರೋ ಕೆಜೆ ಜಾರ್ಜ್ ಪ್ರತಿನಿಧಿಸೋ ಸರ್ವಜ್ಞನಗರದಲ್ಲಿ ಕುಡಿಯೋ ನೀರಿನ ಸಮಸ್ಯೆ, ಕಿತ್ತು ನಿಂತಿರೋ ರಸ್ತೆಗಳು, ಅಪಘಾತಕ್ಕೆ ಅಹ್ವಾನಿಸೋ ಪಾಟ್ ಹೋಲ್ಸ್ ಗಳಿವೆ.

    https://www.youtube.com/watch?v=YuRp_bbtNNw&spfreload=10

  • ಲಾರಿ ಪಲ್ಟಿ: ರಾತ್ರಿ ಬೆಳಗಾಗೋದ್ರೊಳಗೆ ಅಕ್ಕಿ ಚೀಲ ಹೊತ್ತೊಯ್ದ ಗ್ರಾಮಸ್ಥರು!

    ಲಾರಿ ಪಲ್ಟಿ: ರಾತ್ರಿ ಬೆಳಗಾಗೋದ್ರೊಳಗೆ ಅಕ್ಕಿ ಚೀಲ ಹೊತ್ತೊಯ್ದ ಗ್ರಾಮಸ್ಥರು!

    ಬೆಳಗಾವಿ: ಅಕ್ಕಿ ಚೀಲ ಹೊತ್ತೊಯ್ಯುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗುಂಡೊಳ್ಳಿ ಬಳಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

    ಸುಮಾರು 695 ಅಕ್ಕಿ ಚೀಲಗಳನ್ನು ತುಂಬಿದ್ದ ಲಾರಿ ಸೇತುವೆ ಬಳಿಯಿರುವ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಪಲ್ಟಿಯಾಗಿದೆ. ಘಟನೆಯ ನಂತರ ಲಾರಿ ಚಾಲಕ ಪಾರಾಗಿದ್ದಾನೆ.

    ಘಟನೆ ಬಗ್ಗೆ ಮಾಹಿತಿ ತಿಳಿದು ಸುತ್ತಮುತ್ತಲನ ಗ್ರಾಮಸ್ಥರು ರಾತ್ರಿ ಬೆಳಗಾಗುವಷ್ಟರಲ್ಲಿ ಒಂದು ಅಕ್ಕಿ ಚೀಲವನ್ನೂ ಬಿಡದೆ ಹೊತ್ತೊಯ್ದಿದ್ದಾರೆ.

    ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಪಘಾತವಾಗಿ ಲಾರಿಯಲ್ಲಿ ಸಿಲುಕಿದ್ದ ಕ್ಲೀನರ್, ಚಾಲಕನನ್ನು ಹರಸಾಹಸಪಟ್ಟು ಹೊರತೆಗೆದ ಸ್ಥಳೀಯರು

    ಅಪಘಾತವಾಗಿ ಲಾರಿಯಲ್ಲಿ ಸಿಲುಕಿದ್ದ ಕ್ಲೀನರ್, ಚಾಲಕನನ್ನು ಹರಸಾಹಸಪಟ್ಟು ಹೊರತೆಗೆದ ಸ್ಥಳೀಯರು

    ಹುಬ್ಬಳ್ಳಿ: ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಇನ್ನೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲೇ ಸಿಲುಕಿಕೊಂಡ ಚಾಲಕ ಮತ್ತು ಕ್ಲೀನರನ್ನು ಸ್ಥಳಿಯರು ಹರಸಾಹಸಪಟ್ಟು ಹೊರತೆಗೆದ ಘಟನೆ ನಡೆದಿದೆ.

    ನಗರದ ಐಟಿ ಪಾರ್ಕ್ ಮುಂಭಾಗದಲ್ಲಿ ಕಬ್ಬಿಣದ ವಸ್ತುಗಳನ್ನು ಹೊತ್ತು ಹುಬ್ಬಳ್ಳಿಯಿಂದ ಧಾರವಾಡದ ಕಡೆಗೆ ಹೊರಟಿದ್ದ ಕೆಎ 35 .7756 ನಂಬರಿನ ಲಾರಿ, ಮುಂದೆ ಸಾಗುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಲಾರಿಯ ಮುಂದಿನ ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಲಾರಿ ಜಾಲಕ ರಮೇಶ್ ಮತ್ತು ಕ್ಲೀನರ್ ಇಬ್ಬರು ಲಾರಿಯಲ್ಲಿ ಸಿಲುಕಿಕೊಂಡಿದ್ದರು.

    ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದ ಲಾರಿ ಚಾಲಕ ರಮೇಶ್ ಅವರನ್ನು ಕಂಡ ಸ್ಥಳೀಯರು ಅವರ ಸಹಾಯಕ್ಕೆ ಧಾವಿಸಿದ್ದಾರೆ. ಲಾರಿಯ ಮುಂಭಾಗದವನ್ನು ಸತತ ಒಂದು ಗಂಟೆಗಳ ಕಾಲ ಒಡೆದು ತೆಗೆದು ಬಳಿಕ ಲಾರಿ ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಗಂಭೀರ ಗಾಯವಾಗಿದ್ದ ಚಾಲಕ ರಮೇಶ್ ಅವರನ್ನು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಸಂಬಂಧ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಯಚೂರಿನಲ್ಲಿ ಇಂದೇ ಮತ್ತೊಂದು ದುರಂತ: ಕ್ರೂಸರ್ ಪಲ್ಟಿಯಾಗಿ ಐವರ ದುರ್ಮರಣ

    ರಾಯಚೂರಿನಲ್ಲಿ ಇಂದೇ ಮತ್ತೊಂದು ದುರಂತ: ಕ್ರೂಸರ್ ಪಲ್ಟಿಯಾಗಿ ಐವರ ದುರ್ಮರಣ

    ರಾಯಚೂರು: ಸಿಂಧನೂರು ತಾಲೂಕಿನ ದಡೆಸುಗೂರು ಬಳಿ ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ಐದು ಜನ ಮೃತಪಟ್ಟ ಘಟನೆಯ ಬೆನ್ನಲ್ಲೇ ಇದೀಗ ಮತ್ತೊಂದು ಅಪಘಾತ ನಡೆದಿದೆ.

    ರಾಯಚೂರಿನ ದೇವದುರ್ಗ ತಾಲೂಕಿನ ಪಿಲಗುಂಡ ಬಳಿ ಕ್ರೂಸರ್ ವಾಹನ ಪಲ್ಟಿಯಾಗಿ ಐದು ಜನ ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅರಕೇರಾ ಸರ್ಕಾರಿ ಆಸ್ಪತ್ರೆ ಹಾಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಗಾಯಾಳುಗಳನ್ನ ದಾಖಲಿಸಲಾಗಿದೆ.

    ಮೃತರನ್ನು ಬಸವರಾಜ,(35) , ಪಾಂಡುರಂಗ (13), ಮುತ್ತಣ್ಣ (35) ಹಾಗೂ ಅಯ್ಯಣ್ಣ(34) ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ.

    ಇದನ್ನೂ ಓದಿ: ಲಾರಿ-ಕಾರು ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ ಐವರ ದುರ್ಮರಣ

    ಮೃತರೆಲ್ಲಾ ದೇವದುರ್ಗ ತಾಲೂಕಿನ ಅರಕೇರಾ ಹಾಗೂ ಪಿಲಗುಂಡಾ ಗ್ರಾಮದವರಾಗಿದ್ದಾರೆ. ದೇವದುರ್ಗದಿಂದ ಸಿರವಾರ ಕಡೆಗೆ ಪ್ರಯಾಣಿಕರನ್ನ ಕರೆದ್ಯೊಯ್ಯುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.

    ಘಟನೆ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಎರಡು ಅಪಘಾತಗಳಿಂದ ಒಟ್ಟು 10 ಜನ ಸಾವನ್ನಪ್ಪಿದ್ದಾರೆ.

  • ಲಾರಿ-ಕಾರು ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ ಐವರ ದುರ್ಮರಣ

    ಲಾರಿ-ಕಾರು ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ ಐವರ ದುರ್ಮರಣ

    ರಾಯಚೂರು: ಸಿಂಧನೂರು ತಾಲೂಕಿನ ದಡೆಸುಗೂರು ಬಳಿ ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ ಐದು ಜನ ಮೃತಪಟ್ಟ ಘಟನೆ ನಡೆದಿದೆ.

    ಅಪಘಾತದಲ್ಲಿ ಪತಿ ಹುಸೇನ್ ಭಾಷೆ(35), ಪತ್ನಿ ಮೌಲಾನಾ( 32), ಮಕ್ಕಳಾದ ಗುಲಾಬ್ ಶಾ(5) ಸಾಬೀರ್(14)ಮೆಹಬೂಬ್ ಪಾಷಾ(3) ಮೃತಪಟ್ಟಿದ್ದಾರೆ. ಎರಡು ವರ್ಷದ ಬಾಲಕಿ ಅಲ್ಸಿಯಾ ಬದುಕುಳಿದಿದ್ದು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಕೊಪ್ಪಳದ ಗಂಗಾವತಿಯ ಅಂಬೇಡ್ಕರ್ ನಗರದ ನಿವಾಸಿಗಳಾದ ಮೃತರು ಬಳ್ಳಾರಿಯ ಸಿರಗುಪ್ಪಕ್ಕೆ ಹೊರಟಿದ್ದರು. ಮೃತ ಮೌಲಾನಾ ತೌರುಮನೆ ಸಿರಗುಪ್ಪದಲ್ಲಿ ಕಾರ್ಯಕ್ರಮವೊಂದಕ್ಕೆ ಕುಟುಂಬ ಸಹಿತ ಹೊರಟಿದ್ದರು. ಅತೀವೇಗದಲ್ಲಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಮೂರು ಜನರನ್ನು ಬಳ್ಳಾರಿಯ ವಿಮ್ಸ್ ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದಾರೆ.

    ಘಟನೆ ಹಿನ್ನೆಲೆ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

  • ಬೀದರ್‍ನಲ್ಲಿ ಭೀಕರ ಅಪಘಾತಕ್ಕೆ ಐವರು ಬಲಿ – ಲಾರಿ ಹೊಡೆತಕ್ಕೆ ಕಾರು ಚಿಂದಿ

    ಬೀದರ್‍ನಲ್ಲಿ ಭೀಕರ ಅಪಘಾತಕ್ಕೆ ಐವರು ಬಲಿ – ಲಾರಿ ಹೊಡೆತಕ್ಕೆ ಕಾರು ಚಿಂದಿ

    ಬೀದರ್: ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮುಂಬೈ ಮೂಲದ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಿದೆ.

    ಇಲ್ಲಿನ ರಾಷ್ಟ್ರೀಯ ಹೆದ್ದಾರಿ 9 ಸಸ್ತಾಪುರು ಬಂಗ್ಲಾ ಬಳಿ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ. ಮಯೂರ ಚಾವ್ಲಾ, ಜಿನಲ್ ಚಾವ್ಲಾ, ಭಾರತಿ ಚಾವ್ಲಾ, ಖಯಾಬ್ ಚಾವ್ಲಾ ಮತ್ತು ಕಾರು ಚಾಲಕ ಸುನೀಲ್ ಮೃತ ದುರ್ದೈವಿಗಳು. ಮುಂಬೈನ ನಯಿಬ್‍ನಿಂದ ಹೈದ್ರಾಬಾದ್ ಗೆ ತರಳುತ್ತಿರುವಾಗ ಈ ದುರ್ಘಟನೆ ನಡದಿದೆ.

    8 ವರ್ಷದ ತ್ರಿಶಾ ಎಂಬ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಹೈದ್ರಾಬಾದ್‍ನ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಎಸ್.ಪಿ ಪ್ರಕಾಶ್ ನಿಕ್ಕಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾರಿ-ಬಸ್ ಮುಖಾಮುಖಿ: ಓರ್ವ ಮಹಿಳೆ ಸ್ಥಳದಲ್ಲೇ ಸಾವು

    ಲಾರಿ-ಬಸ್ ಮುಖಾಮುಖಿ: ಓರ್ವ ಮಹಿಳೆ ಸ್ಥಳದಲ್ಲೇ ಸಾವು

    ಮಡಿಕೇರಿ: ಲಾರಿ ಹಾಗು ಬಸ್ ಮುಖಾಮುಖಿಯಾದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಬಳಿ ನಡೆದಿದೆ.

    ಲಾರಿ ಮತ್ತು ಖಾಸಗಿ ಮಿನಿ ಬಸ್ ನಡುವೆ ಈ ಅಪಘಾತ ಸಂಭವಿಸಿದ್ದು, ಬಸ್‍ನಲ್ಲಿದ್ದ ಮೋಹನಾ(65) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಮೂಲತಃ ತಮಿಳುನಾಡಿನ ತಿರುಪೂರ್ ಜಿಲ್ಲೆಯವರು ಎಂದು ತಿಳಿದುಬಂದಿದೆ. ತಮಿಳುನಾಡಿನಿಂದ 15 ಜನ ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದರು ಎಂದು ಹೇಳಲಾಗಿದೆ. ಲಾರಿ ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ.

    ಘಟನೆಯಿಂದ ಬಸ್ಸಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಾಳಗಿವೆ. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದುವೆಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಗೆ ಲಾರಿ ಡಿಕ್ಕಿ- ಇಬ್ಬರ ಸಾವು, 6 ಮಂದಿಗೆ ಗಂಭೀರ ಗಾಯ

    ಮದುವೆಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಗೆ ಲಾರಿ ಡಿಕ್ಕಿ- ಇಬ್ಬರ ಸಾವು, 6 ಮಂದಿಗೆ ಗಂಭೀರ ಗಾಯ

    ಚತ್ರದುರ್ಗ: ಟೆಂಪೋಟ್ರಾವೆಲರ್‍ಗೆ ಲಾರಿ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟು ಆರು ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

    ಬೆಂಗಳೂರಿನಿಂದ ಮೊಳಕಾಲ್ಮೂರು ತಾಲೂಕಿನ ಅಶೋಕಸಿದ್ದಾಪುರ ಗ್ರಾಮಕ್ಕೆ ಮದುವೆಗೆ ತೆರಳುತಿದ್ದ ವೇಳೆ ಈ ಘಟನೆ ನಡೆದಿದೆ. ಟೆಂಪೋ ದಲ್ಲಿದ್ದ ಬೆಂಗಳೂರು ಮೂಲದ ಮಂಜುನಾಥ್(35) ಸ್ಥಳದಲ್ಲೇ ಮೃತಪಟ್ಟಿದ್ದು, ಚಳ್ಳಕೆರೆ ಆಸ್ಪತ್ರೆಯಲ್ಲಿ ರೋಜಾ(22) ಮೃತಪಟ್ಟಿದ್ದಾರೆ.  ಘಟನೆಯ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

    ಗಾಯಗೊಂಡ ಜನರನ್ನ ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ನೀವು ತುಮಕೂರು ನಗರಕ್ಕೆ ಹೋಗ್ತಾ ಇದ್ದೀರಾ? ಹಾಗಾದ್ರೆ ಈ ಸುದ್ದಿ ಓದಿ

    ನೀವು ತುಮಕೂರು ನಗರಕ್ಕೆ ಹೋಗ್ತಾ ಇದ್ದೀರಾ? ಹಾಗಾದ್ರೆ ಈ ಸುದ್ದಿ ಓದಿ

    – ತುಮಕೂರಲ್ಲಿ ಯುಜಿಡಿ ಮುಚ್ಚೋ ಸರ್ಕಸ್
    – ಪೈಪ್ ತುಂಬಿಕೊಂಡು ಬರ್ತಿದ್ದ ಲಾರಿಯೇ ಕುಸಿದು ಬಿತ್ತು
    – ರಸ್ತೆ ಗುಂಡಿಗಳಿಂದ ಮದುವೆಗಳು ಶಿಫ್ಟ್

    ತುಮಕೂರು: ನೀವು ಬೈಕ್ ಅಥವಾ ಕಾರ್‍ನಲ್ಲೇನಾದ್ರೂ ತುಮಕೂರು ಕಡೆಗೆ ಹೋಗ್ಬೇಕಂದ್ರೆ ನಿಮ್ಮ ಅದೃಷ್ಟ ಗಟ್ಟಿಯಾಗಿದೆಯಾ ಅಂತ ಚೆಕ್ ಮಾಡ್ಕೊಂಡು ಹೋಗೋದು ಒಳ್ಳೇಯದು. ಯಾಕಂದ್ರೆ ತುಮಕೂರು ನಗರದ ರಸ್ತೆಗಳು ಭದ್ರವಾಗಿಲ್ಲ. ಯಾವಾಗ ಬೇಕಾದ್ರೂ, ಯಾವ ರಸ್ತೆಗಳು ಬೇಕಿದ್ರೂ ಕುಸಿದು ಬೀಳ್ಬಹುದು. ಪ್ರಾಣ ತೆಗೆಯೋ ತುಮಕೂರು ರಸ್ತೆ ಗುಂಡಿಗಳಿಗೆ ಮದುವೆಗಳನ್ನೇ ಶಿಫ್ಟ್ ಮಾಡೋ ಖದರ್ ಕೂಡ ಇದೆ.

    ಸ್ಮಾರ್ಟ್ ಸಿಟಿ ತುಮಕೂರು ನಗರದಲ್ಲಿ ಯುಜಿಡಿ(ಅಂಡರ್‍ಗ್ರೌಂಡ್ ಡ್ರೈನೇಜ್) ಗುಂಡಿ ಮುಚ್ಚೋ ಸರ್ಕಸ್ ನಡೆಯುತ್ತಿದೆ. ಅದು ಅಂತಿಂಥಾ ಸರ್ಕಸ್ ಅಲ್ಲ. ಸಣ್ಣ ಗುಂಡಿ ಮುಚ್ಚಲು ತುಮಕೂರು ಪಾಲಿಕೆ ಅಧಿಕಾರಿಗಳು ನಡೆಸೋ ವಾರಗಟ್ಟಲೆಯ ಭರ್ಜರಿ ಸರ್ಕಸ್. ಹೌದು, ತುಮಕೂರು ನಗರದ ರಸ್ತೆ ಅಡಿಯಲ್ಲಿರುವ ಯುಜಿಡಿ ಪೈಪ್ ಲೈನ್ ಬಹಳ ಅಶಕ್ತವಾಗಿವೆ. ಇದ್ದಕ್ಕಿದ್ದಂತೆ ಬಾಯ್ತೆರೆದು ವಾಹನ ಸವಾರರನ್ನು ಬಲಿ ಪಡೆಯುತ್ತವೆ ಯುಜಿಡಿ ರಸ್ತೆ ಗುಂಡಿಗಳು.

    ತುಮಕೂರು ನಗರದ ಶಿರಾಣಿ ರಸ್ತೆಯ ಮಾಕಂ ಕಲ್ಯಾಣ ಮಂಟಪದ ಎದುರಿನಲ್ಲೇ ಯುಜಿಡಿ ಕುಸಿದು ಬಿದ್ದಿದೆ. ಇದ್ರಿಂದ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಮೂರು ಮದುವೆಗಳು ಬೇರೊಂದು ಕಲ್ಯಾಣ ಮಂಟಪಕ್ಕೆ ಶಿಫ್ಟಾಗಿವೆ. ಹೀಗಾಗಿ ವಧು, ವರ ತಂದೆ ತಾಯಿಗಳು ಕಲ್ಯಾಣ ಮಂಟಪದ ಎದುರು ಮದುವೆ ಬೇರೊಂದು ಕಡೆಗೆ ವರ್ಗಾಯಿಸಲಾಗಿದೆ ಅಂತ ಬ್ಯಾನರ್ ಬರೆದು ಹಾಕಿದ್ದಾರೆ.

    ಒಂದು ವಾರದ ಹಿಂದೆ ಯುಜಿಡಿ ಗುಂಡಿ ಕುಸಿದು ಬಿದ್ದು, ನಗರದ ಶೌಚಾಲಯದ ನೀರೆಲ್ಲಾ ಅಕ್ಕಪಕ್ಕದ ಕಲ್ಯಾಣ ಮಂಟಪ, ಅಂಗಡಿಗೆ ನುಗ್ಗಿದೆ. ಈ ಬಗ್ಗೆ ವಾರದ ಹಿಂದೆ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ಬಳಿಕ ಜನ್ರು ರೊಚ್ಚಿಗೆದ್ದಿದ್ದರಿಂದ ಅಧಿಕಾರಿಗಳು ಇಂದು ಯುಜಿಡಿ ಮುಚ್ಚಲು ಮುಂದಾಗಿದ್ರು. ಆದ್ರೆ ಇಂದು ಬೆಳಗ್ಗೆ ಪೈಪ್ ತುಂಬಿಕೊಂಡು ಬಂದ ಲಾರಿಯೊಂದು ಕೂಡ ಕುಸಿದು ಬಿತ್ತು. ಇದ್ರಿಂದ ಅಕ್ಕಪಕ್ಕದ ರಸ್ತೆಗಳಲ್ಲೆಲ್ಲಾ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಕ್ರೇನ್ ಮೂಲಕ ಲಾರಿಯನ್ನು ಎತ್ತಿ ಪೈಪ್ ಗಳನ್ನು ಪಕ್ಕಕ್ಕೆ ಜೋಡಿಸಲಾಗಿದೆ. ಪಾಲಿಕೆ ಅಧಿಕಾರಿಗಳು ವರ್ಷಕ್ಕೆ ಮೂರ್ನಾಲ್ಕು ಬಾರಿ ಇಂತಹ ಸರ್ಕಸ್ ಮಾಡಿ ಜನರಿಗೆ ಪುಕ್ಕಟ್ಟೆ ಮನೋರಂಜನೆ ನೀಡ್ತಾರೆ ಅಂತಾರೆ ಸ್ಥಳೀಯರು.

    ಪ್ರತಿ ಬಾರಿಯೂ ಕಳಪೆ ಕಾಮಗಾರಿ ಮಾಡುವುದರಿಂದ ಪದೇ ಪದೇ ಯುಜಿಡಿ ಪೈಪ್ ಗಳು ರಸ್ತೆ ನಗರದಲ್ಲಿ ಎಲ್ಲೆಂದರಲ್ಲಿ ಕುಸಿಯುತ್ತಿವೆ. ದೂರದೃಷ್ಠಿಯ ಕೊರತೆ, ಕಮಿಷನ್ ಆಸೆಗೆ ಬಲಿಯಾಗುವ ಅಧಿಕಾರಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಮುಂದಾಗುವುದಿಲ್ಲ. ಇದ್ರಿಂದ ಇಂತಹ ಅವಾಂತರಗಳು, ಅವಘಡಗಳು ತುಮಕೂರಿನಲ್ಲಿ ಸಾಮಾನ್ಯವಾಗಿವೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.

  • ಮದುವೆಗೆ ಹೊರಟವರು ಮಸಣಕ್ಕೆ – ಶಿವಮೊಗ್ಗದಲ್ಲಿ 7 ಮಂದಿ ಯುವಕರ ದುರ್ಮರಣ

    ಮದುವೆಗೆ ಹೊರಟವರು ಮಸಣಕ್ಕೆ – ಶಿವಮೊಗ್ಗದಲ್ಲಿ 7 ಮಂದಿ ಯುವಕರ ದುರ್ಮರಣ

    ಶಿವಮೊಗ್ಗ: ಭೀಕರ ಅಪಘಾತದಿಂದಾಗಿ ಗೆಳೆಯನ ಮದುವೆಗೆ ಹೊರಟ ಏಳು ಮಂದಿ ಮಸಣ ಸೇರಿದ ಘಟನೆ ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪದಲ್ಲಿ ರಾತ್ರಿ ನಡೆದಿದೆ. ಮುಂದೆ ಹೋಗುತ್ತಿದ್ದ ಟಿಂಬರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮಾಗಡಿಯ ಸಹೋದರರಾದ ಪ್ರವೀಣ ಹಾಗೂ ಮಧು, ಮಂಡ್ಯದ ಮಲ್ಲೇಶ್, ಬೆಂಗಳೂರು ಜಾಲಹಳ್ಳಿಯ ಶ್ರೀಧರ, ಸೊರಬದ ರಾಜಶೇಖರ, ಚೋರಡಿಯ ಮಂಜುನಾಥ್, ಶಿಕಾರಿಪುರದ ರಾಘವೇಂದ್ರ ಈ ಭೀಕರ ಅಪಘಾತದಲ್ಲಿ ಮೃತಪಟ್ಟವರು. ಸಾಗರದಲ್ಲಿ ನಡೆಯುತ್ತಿದ್ದ ಮದುವೆಗೆ ಈ ಎಲ್ಲಾ ಸ್ನೇಹಿತರು ಬೆಂಗಳೂರಿನಿಂದ ಗೆಳೆಯನೊಬ್ಬನ ಇನ್ನೋವಾ ಕಾರಿನಲ್ಲಿ ಹೊರಟಿದ್ದರು. ಅತೀ ವೇಗದ ಚಾಲನೆ ಈ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.

    ಮಧು ಹಾಗೂ ಶ್ರೀಧರ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಡ್ರೈವರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಪ್ರವೀಣ್ ಸಿನೆಮಾ ಕ್ಷೇತ್ರದಲ್ಲಿ ಮೇಕಪ್ ಕಲಾವಿದನಾಗಿ ಕೆಲಸ ಮಾಡುತ್ತಿದ್ದಾನೆ. ಮಂಜುನಾಥ್ ಹಾಗೂ ರಾಜೇಶ್, ಮಲ್ಲೇಶ್ ಮೂವರೂ ಬೆಂಗಳೂರಿನಲ್ಲಿ ಹೊಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

    ಹಿಂದಿನಿಂದ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಬಹುಪಾಲು ಭಾಗ ಲಾರಿಯ ಒಳಗೆ ಸಿಲುಕಿಕೊಂಡಿತ್ತು. ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನೆರವಿನಿಂದ ಕಾರನ್ನು ಹಂತಹಂತವಾಗಿ ಕತ್ತರಿಸಿ ಒಳಗಿದ್ದ ದೇಹಗಳನ್ನು ಒಂದೊಂದಾಗಿ ತೆಗೆಯಲಾಯಿತು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುತ್ತುರಾಜ್, ಡಿವೈಎಸ್ಪಿ ಚಂದ್ರಶೇಖರ ಶೆಟ್ಟಿ, ಇನ್ಸಪೆಕ್ಟರ್ ಗುರುರಾಜ್ ಇನ್ನಿತರ ಅಧಿಕಾರಿಗಳ ನೇತೃತ್ವದಲ್ಲಿ ಮುಂಜಾನೆಯವರೆಗೂ ಈ ಕಾರ್ಯಾಚರಣೆ ನಡೆಯಿತು. ಅಪಘಾತ ಪರಿಣಾಮ ಎರಡು ಕಿ.ಮೀ. ಉದ್ದ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಫೋನ್ ಲಾಕ್ ನಿಂದ ಗುರುತೂ ಲಾಕ್: ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು. ಕಾರಿನ ಮೇಲಿದ್ದ ಮೊಬೈಲ್ ನಂಬರ್ಗೆ ಕಾಲ್ ಮಾಡಿದರೆ ಅವರಿಗೆ ಯಾರ್ಯಾರು ಈ ಕಾರಿನಲ್ಲಿ ಇದ್ದಾರೆ ಎಂಬ ಮಾಹಿತಿ ಇರಲಿಲ್ಲ. ಮೃತಪಟ್ಟವರ ಜೇಬಿನಲ್ಲಿ ಇದ್ದ ಮೊಬೈಲ್ಗಳನ್ನು ಪಡೆದ ಪೊಲೀಸರು ಅವುಗಳ ಮೂಲಕ ಅವರ ಗುರುತು ಪತ್ತೆ ಹಚ್ಚಲು ಯತ್ನಿಸಿದರು. ಆದರೆ, ಎಲ್ಲಾ ಸೆಲ್ ಫೋನ್ ಗಳೂ ಲಾಕ್ ಆಗಿದ್ದವು. ಪೊಲೀಸರ ಈ ಪ್ರಯತ್ನವೂ ವಿಫಲವಾಯಿತು. ದೇಹಗಳನ್ನು ಕಾರಿನಿಂದ ಹೊರತೆಗೆದಷ್ಟೇ ಶ್ರಮವನ್ನೂ ಇವರ ಗುರುತು ಪತ್ತೆ ಹಚ್ಚಲೂ ಹಾಕುವಂತಾಯಿತು.