Tag: lorry

  • ನಿಂತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ- ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು

    ನಿಂತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ- ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು

    ಬಾಗಲಕೋಟೆ: ನಿಂತ ಲಾರಿಗೆ ಹಿಂಬದಿಯಿಂದ ಮತ್ತೊಂದು ತರಕಾರಿ ಸಾಗಾಟ ಮಾಡುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಲಾರಿಯ ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಮೃತರನ್ನು ಆಂಧ್ರ ಮೂಲದವರಾದ ಕೆ ನರೇಶ್ (25) ಹಾಗೂ ರೆಡ್ಡಿ (22) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಬಾಗಲಕೋಟೆ ತಾಲೂಕಿನ ಸಂಗಮ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಡಿಕ್ಕಿ ಹೊಡೆದ ಲಾರಿ ಆಂಧ್ರ ಪರವಾನಗಿ ಹೊಂದಿರುವ ಲಾರಿಯಾಗಿದೆ. ನಿದ್ರೆಯ ಮಂಪರಿನಲ್ಲಿ ಚಾಲಕ ರಸ್ತೆಯ ಪಕ್ಕ ನಿಲ್ಲಿಸಿದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ.

    ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

     

  • KSRTC ಬಸ್, ಲಾರಿ ಡಿಕ್ಕಿ: 15ಕ್ಕೂ ಹೆಚ್ಚು ಮಂದಿಗೆ ಗಾಯ, ಮೂವರು ಗಂಭೀರ

    KSRTC ಬಸ್, ಲಾರಿ ಡಿಕ್ಕಿ: 15ಕ್ಕೂ ಹೆಚ್ಚು ಮಂದಿಗೆ ಗಾಯ, ಮೂವರು ಗಂಭೀರ

    ಚಿಕ್ಕಬಳ್ಳಾಪುರ: ಲಾರಿ ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಕಾಪುರ ಗೇಟ್ ಬಳಿ ನಡೆದಿದೆ.

    ಅಪಘಾತದಲ್ಲಿ 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಲಾರಿ ಚಾಲಕ, ಕ್ಲೀನರ್ ಹಾಗೂ ಬಸ್ ಚಾಲಕನ ಸ್ಥಿತಿ ಗಂಭೀರವಾಗಿದ್ದು ಮೂವರನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

    ಬೆಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಹಾಗೂ ಗೌರಿಬಿದನೂರು ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಲಾರಿಯ ಬ್ರೇಕ್ ಫೇಲ್ ಆಗಿದ್ದೇ ಅಪಘಾತಕ್ಕೆ ಕಾರಣ ಅಂತ ಹೇಳಲಾಗುತ್ತಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುಖಕ್ಕೆ ಟವಲ್ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ಮುಖಕ್ಕೆ ಟವಲ್ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ಕೊಪ್ಪಳ: ಗಂಗಾವತಿ ತಾಲೂಕಿನ ಕಾರಟಗಿಯಲ್ಲಿ ಮುಖಕ್ಕೆ ಟವಲ್ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ. ಯುವಕನನ್ನು 33 ವರ್ಷದ ಸಂತೋಷ ಎಂದು ಗುರುತಿಸಲಾಗಿದೆ. ಯುವಕ ಮಂಡ್ಯ ಮೂಲದ ಲಾರಿ ಚಾಲಕನಾಗಿದ್ದಾನೆ.

    ಮೃತ ಯುವಕ ಭಾನುವಾರ ಸಂಜೆ ಲಾರಿಯಲ್ಲಿ ಭತ್ತ ತುಂಬಿಕೊಂಡು ಕೊಪ್ಪಳದ ಕಡೆ ಬಂದಿದ್ದು, ಇಂದು ಬೆಳಗ್ಗಿನ ಜಾವ ಕಾರಟಗಿಯ ವಿಶೇಷ ಎಪಿಎಂಸಿ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ಸ್ಥಳಕ್ಕೆ ಕಾರಟಗಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಗ್ರಾನೈಟ್ ತುಂಬಿದ್ದ ಲಾರಿ ಪಲ್ಟಿ- ಚಾಲಕನ ದುರ್ಮರಣ

    ಗ್ರಾನೈಟ್ ತುಂಬಿದ್ದ ಲಾರಿ ಪಲ್ಟಿ- ಚಾಲಕನ ದುರ್ಮರಣ

    ದಾವಣಗೆರೆ: ಗ್ರಾನೈಟ್ ತುಂಬಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಹರಿಹರ ತಾಲೂಕಿನ ಕೋಮರನಹಳ್ಳಿ ಕಣಿವೆಯಲ್ಲಿ ನಡೆದಿದೆ.

    ಘಟನೆಯಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಕ್ಲೀನರ್ ಗೆ ಗಂಭೀರ ಗಾಯಗಳಾಗಿವೆ. ಇವರಿಬ್ಬರು ಹೊಸಪೇಟೆ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಸದ್ಯ ಕ್ಲೀನರ್ ಹರಿಹರದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗ್ರಾನೈಟ್ ತುಂಬಿಕೊಂಡು ಲಾರಿ ಹೊಸಪೇಟೆ ಕಡೆಯಿಂದ ಶಿವಮೊಗ್ಗ ಕಡೆ ತೆರಳುತ್ತಿತ್ತು, ಓವರ್ ಲೋಡ್ ಆದ ಪರಿಣಾಮ ತಿರುವು ಹಾಗೂ ಇಳಿಜಾರು ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.

    ಘಟನೆ ಸಂಬಂಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾರಿಗೆ ಬೆಂಕಿ: ಮೇವಿನ ಗಟ್ಟಿಗಳು ಬಿದ್ದಿದ್ದರಿಂದ ಕಾರು ಭಸ್ಮ

    ಲಾರಿಗೆ ಬೆಂಕಿ: ಮೇವಿನ ಗಟ್ಟಿಗಳು ಬಿದ್ದಿದ್ದರಿಂದ ಕಾರು ಭಸ್ಮ

    ಕಲಬುರಗಿ: ಮೇವು ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಲಾರಿಗೆ ಬೆಂಕಿ ತಗುಲಿದ್ದು, ಪಕ್ಕದಲ್ಲಿದ್ದ ಕಾರು ಸಹ ಸುಟ್ಟು ಭಸ್ಮವಾದ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಬಳಿ ನಡೆದಿದೆ.

    ವಿದ್ಯುತ್ ತಂತಿಯ ಸ್ಪರ್ಶದಿಂದ ಲಾರಿಯಲ್ಲಿನ ಮೇವಿಗೆ ಬೆಂಕಿ ತಗುಲಿದ್ದು, ನಂತರ ಲಾರಿ ಸ್ವಲ್ಪ ದೂರ ಸಂಚರಿಸಿದಾಗ ಅದರಲ್ಲಿನ ಮೇವಿನ ಗಟ್ಟಿಗಳು ಇಂಡಿಕಾ ಕಾರಿನ ಮೇಲೆ ಬಿದ್ದಿವೆ. ಪರಿಣಾಮ ಕಾರು ಸಹ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

    ಕಾರಿನಲ್ಲಿದವರು ಚಹಾ ಕುಡಿಯಲು ಹೋಗಿದ್ದರಿಂದ ದೊಡ್ಡ ಅವಘಡವೊಂದು ತಪ್ಪಿದೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಮ್ಮ ಭತ್ತವನ್ನು ತಾವೇ ಕದ್ದು ಸಿಕ್ಕಿ ಬಿದ್ದ ಖದೀಮರು!

    ತಮ್ಮ ಭತ್ತವನ್ನು ತಾವೇ ಕದ್ದು ಸಿಕ್ಕಿ ಬಿದ್ದ ಖದೀಮರು!

    ರಾಯಚೂರು : 228 ಚೀಲ ಭತ್ತ ಸಮೇತ ಲಾರಿಯನ್ನ ಕದ್ದಿದ್ದ ಖದೀಮರು ಕೊನೆಗೂ ಸಿಕ್ಕುಬಿದ್ದು, ಧರ್ಮದೇಟು ತಿಂದ ಘಟನೆ ರಾಯಚೂರಿನ ಆಶಿಹಾಳ ತಾಂಡದ ಬಳಿ ನಡೆದಿದೆ.

    ಭತ್ತದ ಮಾಲೀಕರಾದ ಯಲ್ಲಪ್ಪ, ವಿರೇಶ್ ಸೇರಿ ನಾಲ್ಕು ಜನ ಲಾರಿ ಕಳ್ಳರು ಸಿಕ್ಕಿಬಿದ್ದಿದ್ದಾರೆ.

    ಯಾದಗಿರಿಯ ಸುರಪುರ ತಾಲೂಕಿನ ಸಗರದಲ್ಲಿ ಲಾರಿಗೆ ಭತ್ತವನ್ನ ತುಂಬಿ ಕೊಪ್ಪಳದ ಗಂಗಾವತಿ ಕಡೆಗೆ ಕಳುಹಿಸಲಾಗಿತ್ತು. ಲಿಂಗಸುಗೂರಿನ ಮುದಗಲ್ ಪಟ್ಟಣದ ಹೊರವಲಯದ ಡಾಬಾವೊಂದರಲ್ಲಿ ಚಾಲಕ ಊಟಕ್ಕೆ ತೆರಳಿದ್ದಾಗ ಲಾರಿಯನ್ನ ಕದ್ದೊಯ್ಯಲಾಗಿತ್ತು.

    ಲಿಂಗಸುಗೂರಿನ ಆಶಿಹಾಳ ತಾಂಡ ಬಳಿ ಜಮೀನೊಂದರಲ್ಲಿ, ಕದ್ದ ಲಾರಿಯ ಭತ್ತವನ್ನ ಇನ್ನೊಂದು ಲಾರಿಗೆ ತುಂಬಿಸುತಿದ್ದಾಗ ಸಿಕ್ಕಿಬಿದ್ದ ಖದೀಮರು ತಪ್ಪೊಪ್ಪಿಕೊಂಡಿದ್ದಾರೆ. ಸ್ವತಃ ತಮ್ಮ ಭತ್ತವನ್ನ ತಾವೇ ಕದ್ದು ಲಾರಿ ಮಾಲೀಕನಿಗೆ ವಂಚನೆ ಮಾಡಲು ಮುಂದಾಗಿರುವುದು ಬೆಳಕಿಗೆ ಬಂದಿದೆ.

    ಘಟನೆ ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಟಾಟಾ ಏಸ್‍ಗೆ ಲಾರಿ ಡಿಕ್ಕಿ: ಒಂದೇ ಕುಟುಂಬದ 11 ಮಂದಿಗೆ ಗಾಯ

    ಟಾಟಾ ಏಸ್‍ಗೆ ಲಾರಿ ಡಿಕ್ಕಿ: ಒಂದೇ ಕುಟುಂಬದ 11 ಮಂದಿಗೆ ಗಾಯ

    ಬಳ್ಳಾರಿ: ಲಾರಿಯೊಂದು ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 11 ಜನರು ಗಾಯಗೊಂಡ ಘಟನೆ ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ.

    ಗಾಯಾಳುಗಳನ್ನು ಕೂಡ್ಲಿಗಿ ತಾಲೂಕಿನ ಕೈವಲ್ಲಾಪುರ ಗ್ರಾಮದ ನಿವಾಸಿಗಳಾದ ಸೀತಮ್ಮ(30), ಕೊಟ್ಲೇಶ(35), ಕಾವೇರಿ(12), ದುರ್ಗಮ್ಮ(18), ಅಜೇಯ(10), ಪವಿತ್ರ(15), ಲಕ್ಷ್ಮೀ(20), ಆನಂದ(35) ಹಾಗೂ ಪ್ರವೀಣ(7) ಎಂದು ಗುರುತಿಸಲಾಗಿದೆ.

    ಗಾಯಾಳುಗಳನ್ನು ಹೊಸಪೇಟೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಇಬ್ಬರಿಗೆ ತೀವ್ರ ಗಾಯವಾಗಿದ್ದು, ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ.

    ಟಾಟಾ ಏಸ್ ನಲ್ಲಿದ್ದವರು ಕೈವಲ್ಲಾಪುರ ಗ್ರಾಮದಿಂದ ಮುನಿರಾಬಾದ್ (ಹುಲಿಗಿ ಕ್ಷೇತ್ರ)ಗೆ ಪ್ರಯಾಣ ಬೆಳೆಸಿದ್ದು, ಮಾರ್ಗ ಮಧ್ಯದಲ್ಲಿ (ಚಿಲಕನಹಟ್ಟಿ ಗ್ರಾಮ) ಅತಿ ವೇಗದಿಂದ ಬಂದ ಲಾರಿ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡದಿದೆ. ಘಟನೆಯ ನಂತರ ಹೊಸಪೇಟೆ ಬಡಾವಣೆ ಠಾಣೆ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ನಿಂತಿದ್ದ ಲಾರಿಗೆ ಆಂಬುಲೆನ್ಸ್ ಡಿಕ್ಕಿ: ಚಾಲಕ ದುರ್ಮರಣ

    ನಿಂತಿದ್ದ ಲಾರಿಗೆ ಆಂಬುಲೆನ್ಸ್ ಡಿಕ್ಕಿ: ಚಾಲಕ ದುರ್ಮರಣ

    ಮೈಸೂರು: ನಿಂತಿದ್ದ ಲಾರಿಗೆ 108 ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಬಳಿ ನಡೆದಿದೆ.

    30 ವರ್ಷದ ಆಂಬುಲೆನ್ಸ್ ಚಾಲಕ ಲೋಕೇಶ್ ಆರಾಧ್ಯ ಮೃತ ದುರ್ದೈವಿ. ಲೋಕೇಶ್ ಆರಾಧ್ಯ ಪಿರಿಯಾಪಟ್ಟಣ ತಾಲೂಕು ಮಲಗಲಕೆರೆ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಆಂಬುಲೆನ್ಸ್ ಸಿಬ್ಬಂದಿ ಆನಂದ್ ಗೆ ಗಾಯಗಳಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆ ಸಂಬಂಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾರಿ-ಬೈಕ್ ಡಿಕ್ಕಿ: ತುಂಬು ಗರ್ಭಿಣಿಯ ಹೊಟ್ಟೆಯಿಂದ ಹೊರಬಂತು ಮಗು!

    ಲಾರಿ-ಬೈಕ್ ಡಿಕ್ಕಿ: ತುಂಬು ಗರ್ಭಿಣಿಯ ಹೊಟ್ಟೆಯಿಂದ ಹೊರಬಂತು ಮಗು!

    ಬೀದರ್: ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ತುಂಬು ಗರ್ಭಿಣಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ ಬಳಿ ನಡೆದಿದೆ.

    25 ವರ್ಷದ ಯಾಸಮೀನ್ ಮೃತಪಟ್ಟ ದುರ್ದೈವಿ ಗರ್ಭಿಣಿ. ಘಟನೆಯಿಂದ ಪತಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಯಾಸಮೀನ್ 8 ತಿಂಗಳ ಗರ್ಭಿಣಿಯಾಗಿದ್ದು, ಬೈಕ್ ಗೆ ಲಾರಿ ಡಿಕ್ಕಿಯಾದ ರಭಸಕ್ಕೆ ಆಕೆಯ ಹೊಟ್ಟೆಯಿಂದ ಮಗು ಹೊರಬಂದಿದೆ. ಅರ್ಧಗಂಟೆ ಜೀವ ಇದ್ದ ಮಗು ಬಳಿಕ ಮೃತಪಟ್ಟಿದೆ.

    ಹುಮ್ನಾಬಾದ್ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಲಾರಿಗೆ ಡಿಕ್ಕಿಯಾಗಿ ಅಪ್ಪಚ್ಚಿ ಆಯ್ತು ಕಾರು – ಒಂದೇ ಕುಟುಂಬದ ನಾಲ್ವರ ಸಾವು

    ಲಾರಿಗೆ ಡಿಕ್ಕಿಯಾಗಿ ಅಪ್ಪಚ್ಚಿ ಆಯ್ತು ಕಾರು – ಒಂದೇ ಕುಟುಂಬದ ನಾಲ್ವರ ಸಾವು

    ಚಿತ್ರದುರ್ಗ: ಸ್ವಿಫ್ಟ್ ಡಿಸೈರ್ ಕಾರು ಒಂದು ಲಾರಿಗೆ  ಡಿಕ್ಕಿ ಹೊಡೆದಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಭೀಕರ ಅಪಘಾತವೊಂದು ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ನಡೆದಿದೆ.

    ದೊಡ್ಡಪ್ಪ ದೇಸಾಯಿ(35), ಶ್ವೇತಾ ದೇಸಾಯಿ(2), ಭಾಗ್ಯಮ್ಮ(60) ಸುವರ್ಣಮ್ಮ (55) ಅಪಘಾತದಲ್ಲಿ ಮೃತ ದುರ್ದೈವಿಗಳು. ಮೃತರು ವಿಜಯಪುರ ಮೂಲದವರು ಎಂದು ಹೇಳಲಾಗಿದೆ. ಮೃತರು ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

    ಲಾರಿಗೆ ಹಿಂಬದಿಯಿಂದ ಬಂದು ಕಾರು ಡಿಕ್ಕಿಯಾಗಿದೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.