Tag: lorry

  • ಬೆಂಕಿಯಲ್ಲಿ ಹೊತ್ತಿ ಉರಿದ ಲಾರಿ- 8 ಲಕ್ಷ ರೂ. ಜೋಳ ಸುಟ್ಟು ಭಸ್ಮ

    ಬೆಂಕಿಯಲ್ಲಿ ಹೊತ್ತಿ ಉರಿದ ಲಾರಿ- 8 ಲಕ್ಷ ರೂ. ಜೋಳ ಸುಟ್ಟು ಭಸ್ಮ

    ಮೈಸೂರು: ಜೋಳ ತುಂಬಿಕೊಂಡು ಸಾಗುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಲಾರಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

    ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಈ ಜೋಳ ರೈತ ಮಂಜುನಾಥ್ ಮತ್ತು ಜಗದೀಶ್ ಎಂಬವರಿಗೆ ಸೇರಿದ್ದು, ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಜೋಳ ಬೆಂಕಿಗಾಹುತಿಯಾಗಿದೆ.

    ಕವಲಂದೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಮಧ್ಯರಸ್ತೆಯಲ್ಲೇ ಕೆಟ್ಟು ನಿಲ್ತು ಓವರ್‍ಲೋಡ್ ಆದ ಲಾರಿ- ಪಲ್ಟಿಯಾಗೋ ಆತಂಕ

    ಮಧ್ಯರಸ್ತೆಯಲ್ಲೇ ಕೆಟ್ಟು ನಿಲ್ತು ಓವರ್‍ಲೋಡ್ ಆದ ಲಾರಿ- ಪಲ್ಟಿಯಾಗೋ ಆತಂಕ

    ಬಳ್ಳಾರಿ: ಜಿಲ್ಲೆಯ ಮೋತಿ ಸರ್ಕಲ್ ನಲ್ಲಿ ಭತ್ತದ ಮೂಟೆಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಮಧ್ಯರಸ್ತೆಯಲ್ಲಿ ಕೆಟ್ಟು ನಿಂತಿದೆ. ಲಾರಿ ಪಲ್ಟಿಯಾಗಿ ಬೀಳುವ ಸ್ಥಿತಿ ತಲುಪಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

    ಇಂದು ಮುಂಜಾನೆ ಜನನಿಬಿಡ ಮೋತಿ ಸರ್ಕಲ್‍ನಲ್ಲಿ ಓವರ್ ಲೋಡ್ ಆಗಿದ್ದ ಲಾರಿಯ ಆಕ್ಸಲ್ ಪ್ಲೇಟ್ ಕಟ್ ಆಗಿ ಕೆಟ್ಟು ನಿಂತಿತ್ತು. ಮೂಟೆಗಳ ಭಾರ ತಡೆಯಲಾಗದೆ ಲಾರಿ ಪಕ್ಕಕ್ಕೆ ವಾಲಿಕೊಂಡು ಬೀಳುವ ಸ್ಥಿತಿಗೆ ಬಂದಿದೆ.

    ಈ ಹಿನ್ನೆಲೆಯಲ್ಲಿ ಮೋತಿ ಸರ್ಕಲ್ ಮೂಲಕ ಸಂಚಾರ ಮಾಡುವ ವಾಹನ ಸವಾರರು ಭಯ ಪಡುವಂತಾಗಿದೆ. ಲಾರಿ ಬೀಳುವ ಸ್ಥಿತಿ ತಲುಪಿದ ಪರಿಣಾಮ ಟ್ರಾಫಿಕ್ ಪೊಲೀಸರು ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಿ ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ.

  • ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿ

    ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿ

    ಧಾರವಾಡ: ಹತ್ತಿ ಚೀಲಗಳನ್ನು ಹೊತ್ತೊಯ್ಯುತ್ತಿದ್ದ ಲಾರಿವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿರುವ ಘಟನೆ ಹುಬ್ಬಳ್ಳಿಯ ಬೆಂಗಳೂರು ಪೂನಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ನೇಕಾರ ನಗರದ ಬಳಿ ಲಾರಿ ಪಲ್ಟಿ ಆಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ. ತಮಿಳುನಾಡು ಮೂಲದ ಲಾರಿ ಇದಾಗಿದ್ದು, ಕಾರವಾರದಿಂದ ಗಬ್ಬೂರು ಮಾರ್ಗವಾಗಿ ತಮಿಳುನಾಡಿಗೆ ತೆರಳುತ್ತಿತ್ತು. ಆದರೆ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬೃಹತ್ ಲಾರಿ ಪಲ್ಟಿಯಾಗಿದೆ.

     

    ಅಪಘತದ ಬಳಿಕ ಸ್ಥಳದಲ್ಲಿಯೇ ಲಾರಿ ಬಿಟ್ಟು ಲಾರಿ ಚಾಲಕ ಹಾಗೂ ಸಹಾಯಕ ಪರಾರಿಯಾಗಿದ್ದಾರೆ. ಕಾರಣ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ದಟ್ಟನೆ ಹೆಚ್ಚಾಗಿತ್ತು. ಬಳಿಕ ಸ್ಥಳಕ್ಕೆ ದಕ್ಷಿಣ ಸಂಚಾರಿ ಪೊಲೀಸರಿಂದ ಭೇಟಿ ನೀಡಿ ಸಂಚಾರ ನಿಯಂತ್ರಣ ಸುಗಮಗೊಳಿಸಿದ್ದಾರೆ.

  • ಬೈಕ್, ಲಾರಿ ಡಿಕ್ಕಿ: ಸ್ಥಳದಲ್ಲೇ ತಂದೆ-ಮಕ್ಕಳು ಸೇರಿ ಮೂವರ ಸಾವು

    ಬೈಕ್, ಲಾರಿ ಡಿಕ್ಕಿ: ಸ್ಥಳದಲ್ಲೇ ತಂದೆ-ಮಕ್ಕಳು ಸೇರಿ ಮೂವರ ಸಾವು

    ರಾಯಚೂರು: ಸಲೂನ್ ಗೆ ತೆರಳಿದ್ದ ತಂದೆ ಹಾಗೂ ಇಬ್ಬರು ಮಕ್ಕಳು ಮರಳಿ ಬರುವಾಗ ಬೈಕಿಗೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾನ್ವಿ ತಾಲೂಕಿನ ತುಪ್ಪದೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹುಲಿಗೆಪ್ಪ(35) ಮಕ್ಕಳಾದ ನರಸಿಂಹ(10) ಹಾಗೂ ಸಿದ್ದು(8) ಸಾವನ್ನಪ್ಪಿದ್ದಾರೆ. ತುಪ್ಪದೂರು ಗ್ರಾಮದಿಂದ ನೀರಮಾನ್ವಿಗೆ ಬಂದು ಹೇರ್ ಕಟ್ಟಿಂಗ್ ಮಾಡಿಸಿಕೊಂಡು ಮರಳಿ ಗ್ರಾಮಕ್ಕೆ ಬರುವಾಗ ಬೈಕಿಗೆ ಲಾರಿ ಡಿಕ್ಕಿಹೊಡೆದಿದೆ.

    ಲಾರಿ ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕ್‍ಗೆ ಲಾರಿ ಡಿಕ್ಕಿ- ಕೆಲಸಕ್ಕೆ ಹೋಗ್ತಿದ್ದ ಸವಾರ ಸ್ಥಳದಲ್ಲೇ ಸಾವು

    ಬೈಕ್‍ಗೆ ಲಾರಿ ಡಿಕ್ಕಿ- ಕೆಲಸಕ್ಕೆ ಹೋಗ್ತಿದ್ದ ಸವಾರ ಸ್ಥಳದಲ್ಲೇ ಸಾವು

    ಬೆಂಗಳೂರು: ಬೈಕ್‍ಗೆ ಲಾರಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ನಡೆದಿದೆ.

    ಮೃತರನ್ನು ವಿನಯ್ ಕುಮಾರ್ (36) ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಹಾವೇರಿ ಜಿಲ್ಲೆಯವರು ಎಂದು ತಿಳಿದುಬಂದಿದೆ. ಅತ್ತಿಬೆಲೆಯಲ್ಲಿ ನೆಲೆಸಿದ್ದ ವಿನಯ್ ಕುಮಾರ್ ಬೈಕ್‍ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

    ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಲಾರಿ ಪಲ್ಟಿ- ರಂಜಾನ್‍ಗಾಗಿ ಕೊಂಡೊಯ್ಯುತ್ತಿದ್ದ ಕುರಿಗಳಲ್ಲಿ 40ಕ್ಕೂ ಹೆಚ್ಚು ಸಾವು, 30ರ ಸ್ಥಿತಿ ಗಂಭೀರ

    ಲಾರಿ ಪಲ್ಟಿ- ರಂಜಾನ್‍ಗಾಗಿ ಕೊಂಡೊಯ್ಯುತ್ತಿದ್ದ ಕುರಿಗಳಲ್ಲಿ 40ಕ್ಕೂ ಹೆಚ್ಚು ಸಾವು, 30ರ ಸ್ಥಿತಿ ಗಂಭೀರ

    ಬೆಳಗಾವಿ: ಇಂದು ನಾಡಿನಾದ್ಯಂತ ರಂಜಾನ್ ಹಬ್ಬದ ಸಂಭ್ರಮ. ಹೀಗಾಗಿ ಹಬ್ಬಕ್ಕಾಗಿ ಕುರಿ ಹಾಗೂ ಮೇಕೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಲಾರಿಯೊಂದು ಪಲ್ಟಿಯಾದ ಘಟನೆ ಬೆಳಗಾವಿಯ ಇಟಗಿ ಕ್ರಾಸ್ ಬಳಿ ನಡೆದಿದೆ.

    ಇಂದು ಬೆಳಗ್ಗಿನ ಜಾವ ಮಳೆ ಸುರಿಯುತ್ತಿದ್ದರಿಂದ ಚಾಲಕ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಘಟನೆಯಿಂದ 40 ಕ್ಕೂ ಹೆಚ್ಚು ಕುರಿಗಳು ಸಾವನಪ್ಪಿವೆ. 30 ಕುರಿಗಳ ಸ್ಥಿತಿ ಗಂಭೀರವಾಗಿದೆ. ಇನ್ನು ಲಾರಿ ಪಲ್ಟಿಯಾಗುತ್ತಿದ್ದಂತೆ ಕೆಲವು ಸ್ಥಳೀಯರು ಕುರಿಗಳನ್ನ ಕದ್ದೊಯ್ದಿದ್ದಾರೆ ಅನ್ನೋ ಶಂಕೆ ಕೂಡ ವ್ಯಕ್ತವಾಗಿದೆ.

    ಘಟನೆ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಧಗಧಗನೆ ಹೊತ್ತಿ ಉರಿದ ಲಾರಿ- ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರು

    ಧಗಧಗನೆ ಹೊತ್ತಿ ಉರಿದ ಲಾರಿ- ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರು

    ಕಲಬುರಗಿ: ಲಾರಿಯೊಂದು ಇದ್ದಕ್ಕಿದಂತೆ ಬೆಂಕಿಯಿಂದ ಹೊತ್ತಿ ಉರಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಮಹಗಾಂವ ಕ್ರಾಸ್ ಬಳಿ ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಲಾರಿ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಈ ಲಾರಿ ಕಲಬುರಗಿಯಿಂದ ಬಸವ ಕಲ್ಯಾಣಕ್ಕೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ.

    ಈ ಬಗ್ಗೆ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಲಾರಿ ಯಾರಿಗೆ ಸೇರಿದ್ದು ಎಂದು ತಿಳಿದುಬಂದಿಲ್ಲ.

    ಇತ್ತ ಬೆಂಗಳೂರಿನಲ್ಲಿ ದೊಮ್ಮಲೂರಿನ ಫ್ಲೈ ಓವರ್ ಬಳಿ ನಡುರಸ್ತೆಯಲ್ಲೇ ಟಾಟಾ ಏಸ್ ವಾಹನವೊಂದು ಧಗಧಗನೆ ಹೊತ್ತಿ ಉರಿದಿದೆ. ಆಕಸ್ಮಿಕವಾಗಿ ಟಾಟಾ ಏಸ್ ವಾಹನಕ್ಕೆ ಬೆಂಕಿ ಬಿದ್ದಿದೆ. ಬಳಿಕ ಕ್ಷಣ ಮಾತ್ರದಲ್ಲೇ ವಾಹನ ಸುಟ್ಟು ಭಸ್ಮವಾಗಿದೆ. ಅದೃಷ್ಟವಶತ್ ಘಟನೆಯಲ್ಲಿ ಯಾರಿಗೂ ಪ್ರಾಣಪಾಯವಾಗಿಲ್ಲ. ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    https://www.youtube.com/watch?v=xbm6qFXIo_Y

  • ಬೆಂಗ್ಳೂರಲ್ಲಿ ಭೀಕರ ಅಪಘಾತ- ತಲೆ ಮೇಲೆ ಲಾರಿ ಹರಿದು ಟೆಕ್ಕಿ ಯುವತಿ ಸ್ಥಳದಲ್ಲೇ ಸಾವು

    ಬೆಂಗ್ಳೂರಲ್ಲಿ ಭೀಕರ ಅಪಘಾತ- ತಲೆ ಮೇಲೆ ಲಾರಿ ಹರಿದು ಟೆಕ್ಕಿ ಯುವತಿ ಸ್ಥಳದಲ್ಲೇ ಸಾವು

    ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಟೆಕ್ಕಿ ಯುವತಿಯ ತಲೆ ಮೇಲೆ ಲಾರಿ ಹರಿದ ಪರಿಣಾಮ ಟೆಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ನಗರದ ಹೊಸೂರು ಮುಖ್ಯರಸ್ತೆಯ ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ವೀರಸಂದ್ರ ಸಿಗ್ನಲ್ ಬದೀ ಭೀಕರ ಅಪಘಾತ ನೆಡೆದಿದೆ. ವೈಟ್ ಫೀಲ್ಡ್ ನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 26 ವರ್ಷದ ಕಾವ್ಯಶ್ರೀ ಮೃತ ಯುವತಿ.

    ಮೂಲತಃ ಗುಜರಾತಿನ ವಡೋದರ ಮೂಲದವರಾದ ಕಾವ್ಯಶ್ರೀ ಆಕ್ಸಿಸ್ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಲಾರಿ ಡಿಕ್ಕಿ ಹೊಡೆದು ಈಕೆಯ ತಲೆಯ ಮೇಲೆ ಹರಿದಿದೆ. ಈಕೆ ಹೆಲ್ಮೆಟ್ ಧರಿಸಿದ್ದರೂ ಕೂಡ ಹೆಲ್ಮೆಟ್ ಸಮೇತ ತಲೆ ಛಿದ್ರ ಛಿದ್ರಗೊಂಡು ಯುವತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

    ಲಾರಿ ಚಾಲಕನನ್ನು ವಶಕ್ಕೆ ಪಡೆದ ಎಲೆಕ್ಟ್ರಾನಿಕ್ಸ್ ಸಿಟಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

     

  • ಬೈಕ್- ಲಾರಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

    ಬೈಕ್- ಲಾರಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

    ಕೊಪ್ಪಳ: ಬೈಕ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    25 ವರ್ಷದ ಪಂಪಾಪತಿ ಬ್ಯಾಳಿ ಮೃತ ದುರ್ದೈವಿ. ಗಂಗಾವತಿ ತಾಲೂಕಿನ ಕಾರಟಗಿ ಪಟ್ಟಣದಲ್ಲಿ ಈ ಅವಘಡ ಸಂಭವಿಸಿದೆ. ಮೃತ ವ್ಯಕ್ತಿ ಯರಡೋಣಾ ಗ್ರಾಮದವರೆಂದು ತಿಳಿದುಬಂದಿದೆ. ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

    ಸ್ಥಳಕ್ಕೆ ಕಾರಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬೀದರ್ ಲೋಕೋಪಯೋಗಿ ಇಲಾಖೆ ಮುಂದೆಯೇ ರಸ್ತೆ ಕುಸಿದು ಹಳ್ಳಕ್ಕೆ ಬಿದ್ದ ಲಾರಿ, ಕಾರು

    ಬೀದರ್ ಲೋಕೋಪಯೋಗಿ ಇಲಾಖೆ ಮುಂದೆಯೇ ರಸ್ತೆ ಕುಸಿದು ಹಳ್ಳಕ್ಕೆ ಬಿದ್ದ ಲಾರಿ, ಕಾರು

    ಬೀದರ್: ಕಳಪೆ ಕಾಮಗಾರಿಗೆ ಸಾಕ್ಷಿ ಎಂಬಂತೆ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಮುಂದೆಯೇ ರಸ್ತೆ ಕುಸಿದ ಪರಿಣಾಮ ಕಾರು ಹಾಗೂ ಲಾರಿ ಹಳ್ಳಕ್ಕೆ ಬಿದ್ದಿದೆ.

    ಕೆಲವೇ ದಿನಗಳ ಹಿಂದಷ್ಟೆ ಮಾಡಿದ್ದ ಯುಜಿಡಿ ರಸ್ತೆ ಕುಸಿದು ಕಾರು ಮತ್ತು ಲಾರಿ ಹಳ್ಳದಲ್ಲಿ ಸಿಲುಕಿಕೊಂಡಿದೆ. ವಿಪರ್ಯಾಸವೆಂದರೆ ಲೋಕೋಪಯೋಗಿ ಇಲಾಖೆಯ ಕಚೇರಿ ಮುಂದೆಯೇ ರಸ್ತೆ ಕುಸಿದು ಈ ಅವಘಡ ಸಂಭವಿಸಿದ್ದಕ್ಕೆ ಅಧಿಕಾರಿಗಳು ನಾಚಿಕೆಪಡುವಂತಾಗಿದೆ.

    ಎರಡು ವರ್ಷಗಳಿಂದ ಮಂದಗತಿಯಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿಗೆ ಯಾವಾಗ ಮುಕ್ತಿ ಸಿಗುತ್ತೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಚಿವರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ಯುಜಿಡಿ ಕಳಪೆ ಕಾಮಗಾರಿಯ ಭಯದಲ್ಲೇ ವಾಹನ ಸವಾರರು ಸಂಚಾರ ಮಾಡುತ್ತಿದ್ದಾರೆ.