Tag: lorry

  • ಲಾರಿ ಬಿದ್ದು ರಸ್ತೆಯಲ್ಲಿ ಚೆಲ್ಲಾಡಿದ ಟೊಮೆಟೋ- ಚೀಲಗಳಲ್ಲಿ ತುಂಬಿಕೊಂಡು ಹೋದ ಸ್ಥಳೀಯರು

    ಲಾರಿ ಬಿದ್ದು ರಸ್ತೆಯಲ್ಲಿ ಚೆಲ್ಲಾಡಿದ ಟೊಮೆಟೋ- ಚೀಲಗಳಲ್ಲಿ ತುಂಬಿಕೊಂಡು ಹೋದ ಸ್ಥಳೀಯರು

    ಮಂಡ್ಯ: ಲಾರಿ ಉರುಳಿ ಬಿದ್ದು ರಸ್ತೆಯಲ್ಲಿ ಚೆಲ್ಲಾಡಿದ್ದ ಟೊಮೆಟೋವನ್ನು ಸ್ಥಳೀಯರು ಚೀಲಗಳಲ್ಲಿ ತುಂಬಿಕೊಂಡು ಮನೆಗೆ ಸಾಗಿಸುತ್ತಿದ್ದ ದೃಶ್ಯ ಮಂಡ್ಯದಲ್ಲಿ ಕಂಡು ಬಂದಿದೆ.

    ಜಿಲ್ಲೆಯ ಕೆಆರ್ ಪೇಟೆ ಪಟ್ಟಣದ ಹೊರವಲಯದ ಚನ್ನರಾಯಪಟ್ಟಣ ರಸ್ತೆಯಲ್ಲಿ ಟೊಮೆಟೋ ಲಾರಿ ಉರುಳಿ ಬಿದ್ದಿದೆ. ಮೈಸೂರು ಮಾರುಕಟ್ಟೆಗೆ ರೈತರು ಟೊಮೆಟೋ ಸಾಗಿಸುತ್ತಿದ್ದು, ಲಾರಿ ಉರುಳಿ ಬಿದ್ದ ಪರಿಣಾಮ ಟೊಮೆಟೋ ರಸ್ತೆಯಲ್ಲಿ ಚೆಲ್ಲಾಡಿತ್ತು.

    ತಡರಾತ್ರಿ ಈ ಘಟನೆ ನಡೆದಿದ್ದು, ಲಾರಿ ಮಾಲೀಕ ಹರಸಾಹಸ ಪಟ್ಟು ಲಾರಿ ಮೇಲೆತ್ತಿಸಿ ತೆಗೆದುಕೊಂಡು ಹೋಗಿದ್ರು. ಆದ್ರೆ ಟೊಮೆಟೋ ಮಾತ್ರ ರಸ್ತೆ ಬದಿಯೇ ಚೆಲ್ಲಾಡಿತ್ತು.

    ಇದನ್ನು ತಿಳಿದ ಸ್ಥಳೀಯರು ಬ್ಯಾಗ್‍ಗಳೊಂದಿಗೆ ಸ್ಥಳಕ್ಕೆ ಬಂದು ಟೊಮೆಟೋ ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಘಟನೆಗೆ ಮೈಸೂರು, ಅರಸೀಕೆರೆ ರಸ್ತೆ ಅಲ್ಲಿಲ್ಲಿ ಗುಂಡಿ ಬಿದ್ದಿರುವುದೇ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ರು.

  • ಪಾದಯಾತ್ರೆಗೆ ಹೊರಟಿದ್ದ ಮಹಿಳಾ ಭಕ್ತಾದಿಗಳ ಮೇಲೆ ಹರಿದ ಲಾರಿ- ಇಬ್ಬರು ಸ್ಥಳದಲ್ಲೇ ಸಾವು

    ಪಾದಯಾತ್ರೆಗೆ ಹೊರಟಿದ್ದ ಮಹಿಳಾ ಭಕ್ತಾದಿಗಳ ಮೇಲೆ ಹರಿದ ಲಾರಿ- ಇಬ್ಬರು ಸ್ಥಳದಲ್ಲೇ ಸಾವು

    ಬೀದರ್: ತುಳಜಾಪುರ ಅಂಬಾಭವಾನಿ ದೇವಿ ದರ್ಶನಕ್ಕೆ ಪಾದಯಾತ್ರೆ ಹೊರಟಿದ್ದ ಇಬ್ಬರು ಮಹಿಳಾ ಭಕ್ತಾರ ಮೇಲೆ ಲಾರಿ ಹರಿದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಹೊರ ವಲಯದ ಎನ್‍ಎಚ್-9ರಲ್ಲಿ ನಡೆದಿದೆ.

    ಲಕ್ಷ್ಮೀ ವೆಂಕಟಗೌಡ (40), ಗೌರಮ್ಮ ಸಂಗಮೇಶ್ (30) ಸಾವನ್ನಪ್ಪಿದ ಮಹಿಳಾ ಭಕ್ತಾದಿಗಳು. ರಸ್ತೆ ಪಕ್ಕದಲ್ಲಿ ಹೊರಟಿದ್ದ ಭಕ್ತಾದಿಗಳ ಮೇಲೆ ಲಾರಿ ಹರಿದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಪಘಾತದ ಬಳಿಕ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಮೃತರು ತೆಲಂಗಾಣ ರಾಜ್ಯದವರು ಎಂದು ತಿಳಿದುಬಂದಿದೆ. ಈ ಸಂಬಂಧ ಹುಮ್ನಾಬಾದ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾರಿಗೆ ಡಿಕ್ಕಿ ಹೊಡೆದ ಕ್ರೂಸರ್- ಒರ್ವ ಪುರುಷ ಸೇರಿ ಐವರು ಮಹಿಳೆಯರ ಸಾವು

    ಲಾರಿಗೆ ಡಿಕ್ಕಿ ಹೊಡೆದ ಕ್ರೂಸರ್- ಒರ್ವ ಪುರುಷ ಸೇರಿ ಐವರು ಮಹಿಳೆಯರ ಸಾವು

    -ಬರ್ತ್ ಡೇ ದಿನದಂದು ಅಮ್ಮನನ್ನು ಕಳೆದುಕೊಂಡ ಕಂದಮ್ಮ

    ಹಾವೇರಿ: ಕಟ್ಟಿಗೆ ತುಂಬಿಕೊಂಡು ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಆರು ಜನರು ಸಾವನ್ನಪ್ಪಿದ್ದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದ ಬಳಿ ನಡೆದಿದೆ.

    ಮೃತರಲ್ಲಿ ಓರ್ವ ಪುರುಷ ಮತ್ತು ಐವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನ ಮಾಕನೂರು, ಕೊಡಿಹಾಳ ಹೊಸಪೇಟೆ ಮತ್ತು ಇಟಗಿ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ನಾಗರಾಜ್ (24), ಪೂರ್ಣೀಮಾ (30), ಗೌರಮ್ಮ (28), ಗಂಗಮ್ಮ (30), ಸರ್ವಮ್ಮ (35) ಮೃತಪಟ್ಟವರು ಎನ್ನಲಾಗಿದೆ. ಮಾಕನೂರು ಗ್ರಾಮದಿಂದ ಮಗನ ಬರ್ತ್ ಡೇ ಮಾಡಲು ಸಿಂಗದೂರು ಚೌಡೇಶ್ವರಿ ದೇವಿ ದರ್ಶನ ಪಡೆದುಕೊಂಡು ಮರಳಿ ಬರುವ ವೇಳೆ ಭೀಕರ ಅಪಘಾತ ಸಂಭವಿಸಿದೆ.

    ಅಪಘಾತದಲ್ಲಿ ಗಾಯಗೊಂಡ ಐವರನ್ನು ಓಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಅದೃಷ್ಟವಶಾತ್ 3 ವರ್ಷದ ಬರ್ತ್ ಡೇ ಬಾಯ್ ವಿಶ್ವನಥ್ ನಿಗೆ ಬದುಕುಳಿದಿದ್ದಾನೆ. ಸ್ಥಳಕ್ಕೆ ಹಲಗೇರಿ ಠಾಣೆ ಪಿಎಸ್‍ಐ ಶ್ರೀಶೈಲ ಚೌಗಲಾ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕ್ರೂಸರ್ ವಾಹನದಲ್ಲಿ ಸಿಲುಕಿದ್ದ ಗಾಯಾಳುಗಳನ್ನ ಕೂಡಲೇ 108 ವಾಹನದ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ರಾಣೇಬೆನ್ನೂರು ತಾಲೂಕು ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಸ್ಥಳದಲ್ಲಿ ಮೃತರ ಆಕ್ರಂದನ ಮುಗಿಲು ಮುಟ್ಟಿದೆ.

     

  • ಲಾರಿಗೆ ಹಿಂಬದಿಯಿಂದ ಮಿನಿ ಲಾರಿ ಡಿಕ್ಕಿ – ಇಬ್ಬರಿಗೆ ಗಂಭೀರ ಗಾಯ

    ಲಾರಿಗೆ ಹಿಂಬದಿಯಿಂದ ಮಿನಿ ಲಾರಿ ಡಿಕ್ಕಿ – ಇಬ್ಬರಿಗೆ ಗಂಭೀರ ಗಾಯ

    ಹುಬ್ಬಳ್ಳಿ: ವೇಗವಾಗಿ ಬಂದ್ ಮಿನಿಲಾರಿ ಇನ್ನೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಕ್ಲೀನರ್ ಮಿನಿ ಲಾರಿಯಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಘಟನೆ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ನಡೆದಿದೆ.

    ಹಾವೇರಿ ಮೂಲದ ಮಿನಿ ಲಾರಿ ಚಾಲಕ ಶಿವಕುಮಾರ ಹಾಗೂ ಕ್ಲೀನರ್ ಈರಣ್ಣ ಎಂಬವರು ಲಾರಿಯಲ್ಲಿ ಸಿಲುಕಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮಿನಿ ಲಾರಿ ವೇಗವಾಗಿ ಬಂದು ಹಿಂಬದಿಯಿಂದ ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ನಡುವೆ ಸಿಲುಕಿಕೊಂಡಿದ್ದ ಚಾಲಕ ಶಿವಕುಮಾರ್‍ರನ್ನು ಸ್ಥಳೀಯರು ಹಾಗೂ ಸಂಚಾರಿ ಪೊಲೀಸರು ಸತತ ಒಂದು ಗಂಟೆ ಕಾಲ ಶ್ರಮವಹಿಸಿ ಲಾರಿಯಿಂದ ಹೊರಗಡೆ ತೆಗೆದಿದ್ದಾರೆ. ಕೊನೆಗೆ ಕ್ರೇನ್ ಬಳಸಿ ಲಾರಿಯನ್ನು ಮೇಲಕ್ಕೆ ಎತ್ತಿ ಶಿವಕುಮಾರ್ ರನ್ನು ಹೊರಗಡೆ ತೆಗೆದು ಅವರ ಪ್ರಾಣವನ್ನು ಕಾಪಾಡಿದ್ದಾರೆ.

    ಇಬ್ಬರು ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಡನ್ ಬ್ರೇಕ್ ಹಾಕಿದ BMTC ಬಸ್, ಬಸ್ ಗೆ ಗುದ್ದಿದ ಬೊಲೆರೊ, ಬೊಲೆರೋಗೆ ಡಿಕ್ಕಿ ಹೊಡೆದ ಲಾರಿ

    ಸಡನ್ ಬ್ರೇಕ್ ಹಾಕಿದ BMTC ಬಸ್, ಬಸ್ ಗೆ ಗುದ್ದಿದ ಬೊಲೆರೊ, ಬೊಲೆರೋಗೆ ಡಿಕ್ಕಿ ಹೊಡೆದ ಲಾರಿ

    ಬೆಂಗಳೂರು: ಶನಿವಾರ ರಾತ್ರಿ ಬೆಂಗಳೂರಿನ ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಸರಣಿ ಅಪಘಾತವಾಗಿದೆ. ಬಿಎಂಟಿಸಿ ಬಸ್, ಬೊಲೆರೊ ಗೂಡ್ಸ್ ಗಾಡಿ ಮತ್ತು ಲಾರಿಯ ನಡುವೆ ಅಪಘಾತವಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

    ಬಿಎಂಟಿಸಿ ಬಸ್ ಸಡನ್ ಆಗಿ ಬ್ರೇಕ್ ಹಾಕಿದ ಕಾರಣ ಬಸ್ ಹಿಂದೆ ಬರುತ್ತಿದ್ದ ಬೊಲೆರೋ ಬಸ್ಸಿಗೆ ಡಿಕ್ಕಿ ಹೊಡೆದ್ರೇ, ಲಾರಿ ಬೊಲೆರೋಗೆ ಡಿಕ್ಕಿ ಹೊಡೆದಿದೆ. ಬೊಲೆರೋ ವಾಹನದಲ್ಲಿದ್ದ ಇಬ್ಬರಿಗೆ ಗಾಯಾಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಂತಿದ್ದ ಸರಕು ಲಾರಿಗೆ ಬಸ್ ಡಿಕ್ಕಿ: ಇಬ್ಬರ ದುರ್ಮರಣ, ಮೂವರಿಗೆ ಗಾಯ

    ನಿಂತಿದ್ದ ಸರಕು ಲಾರಿಗೆ ಬಸ್ ಡಿಕ್ಕಿ: ಇಬ್ಬರ ದುರ್ಮರಣ, ಮೂವರಿಗೆ ಗಾಯ

    ಚಿತ್ರದುರ್ಗ: ನಿಂತಿದ್ದ ಲಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ ಮೂವರು ಗಾಯಗೊಂಡ ಘಟನೆ ಹಿರಿಯೂರು ತಾಲೂಕಿನ ಐಮಂಗಲ ಬಳಿ ನಡೆದಿದೆ.

    ಸೂರತ್ ಮೂಲದ 30 ವರ್ಷದ ಅರುಣ್ ಹಾಗೂ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಣೇಕಲ್ ಗ್ರಾಮದ ನಿವಾಸಿ 30 ವರ್ಷದ ಪ್ರಶಾಂತ ಮೃತಪಟ್ಟ ದುರ್ದೈವಿಗಳು.

    ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಸಮೀಪ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆ ಬದಿ ನಿಂತಿದ್ದ ಸರಕು ಲಾರಿಗೆ ಮುಂಜಾನೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಸದ್ಯ ಮೃತರ ಶವಗಳನ್ನ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಇನ್ನು ಗಾಯಗೊಂಡ ಮೂವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೊಲೆರೋ, ಲಾರಿ ಡಿಕ್ಕಿಯಾಗಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ- 4 ಮಕ್ಕಳು ಸೇರಿ 10 ಮಂದಿ ಸಾವು

    ಬೊಲೆರೋ, ಲಾರಿ ಡಿಕ್ಕಿಯಾಗಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ- 4 ಮಕ್ಕಳು ಸೇರಿ 10 ಮಂದಿ ಸಾವು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

    ಅರಬೈಲ್ ಸಮೀಪ ಬೊಲೆರೋ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೊಲೆರೋದಲ್ಲಿದ್ದ 4 ಮಕ್ಕಳು ಸೇರಿ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೊಲೇರೋ ವಾಹನ ಯಲ್ಲಾಪುರದಿಂದ ಅಂಕೋಲ ಕಡೆಗೆ ತೆರಳುತ್ತಿತ್ತು. ಹಾಗೂ ಲಾರಿ ಅಂಕೋಲದಿಂದ ಯಲ್ಲಾಪುರಕ್ಕೆ ತೆರಳುತ್ತಿತ್ತು. ಅಪಘಾತ ಸ್ಥಳದಲ್ಲಿ ಚಿತ್ರಣ ಭಯಾನಕವಾಗಿತ್ತು.

    ಜಿಲ್ಲೆಯ ಭಟ್ಕಳ ತಾಲೂಕಿನ ಸೋಡಿಗದ್ದೆ ಕ್ರಾಸ್ ಬಳಿ ಮತ್ತೊಂದು ಅಪಘಾತ ಸಂಭವಿಸಿದೆ. ಮೀನಿನ ಲಾರಿ ಹಾಗೂ ಖಾಸಗಿ ಬಸ್ಸು ಮೊದಲು ಮುಖಾಮುಖಿ ಡಿಕ್ಕಿಯಾಗಿದ್ದು, ನಂತರ ಹಿಂದಿನಿಂದ ಬಂದ ಮತ್ತೊಂದು ಬಸ್ ಡಿಕ್ಕಿ ಹೊಡೆದು ಅಪಘಾತವಾಗಿದೆ. ಅಪಘಾತದಲ್ಲಿ ಲಾರಿ ಚಾಲಕ 25 ವರ್ಷದ ಅಬ್ದುಲ್ಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಬಸ್‍ನಲ್ಲಿದ್ದ 15 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೀನಿನ ಲಾರಿ ಗೋವಾದಿಂದ ಕೇರಳ ಕಡೆಗೆ ತೆರಳುತ್ತಿತ್ತು. ಇನ್ನೂ ಖಾಸಗಿ ಬಸ್‍ಗಳು ಮಂಗಳೂರಿನಿಂದ ಬೆಳಗಾವಿ ಕಡೆಗೆ ಹೋಗುತ್ತಿದ್ದವು ಎಂದು ತಿಳಿದುಬಂದಿದೆ. ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

  • ಲಾರಿ-ಬಸ್ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ- ಲಾರಿ ಚಾಲಕ ಸ್ಥಳದಲ್ಲೇ ಸಾವು, 15 ಜನರಿಗೆ ಗಾಯ

    ಲಾರಿ-ಬಸ್ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ- ಲಾರಿ ಚಾಲಕ ಸ್ಥಳದಲ್ಲೇ ಸಾವು, 15 ಜನರಿಗೆ ಗಾಯ

    ಕಾರವಾರ: ಮೀನಿನ ಲಾರಿ ಹಾಗೂ ಖಾಸಗಿ ಬಸ್ಸು ಮೊದಲು ಮುಖಾಮುಖಿ ಡಿಕ್ಕಿಯಾಗಿದ್ದು, ನಂತರ ಹಿಂದಿನಿಂದ ಬಂದ ಮತ್ತೊಂದು ಬಸ್ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿರೋ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸೋಡಿಗದ್ದೆ ಕ್ರಾಸ್ ಬಳಿ ನಡೆದಿದೆ.

    ಅಪಘಾತದಲ್ಲಿ ಲಾರಿ ಚಾಲಕ 25 ವರ್ಷದ ಅಬ್ದುಲ್ಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಬಸ್‍ನಲ್ಲಿದ್ದ 15 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೀನಿನ ಲಾರಿ ಗೋವಾದಿಂದ ಕೇರಳ ಕಡೆಗೆ ತೆರಳುತ್ತಿತ್ತು. ಇನ್ನೂ ಖಾಸಗಿ ಬಸ್‍ಗಳು ಮಂಗಳೂರಿನಿಂದ ಬೆಳಗಾವಿ ಕಡೆಗೆ ಹೋಗುತ್ತಿದ್ದವು ಎಂದು ತಿಳಿದುಬಂದಿದೆ. ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

  • ಆಟೋ ಮೇಲೆ ಹರಿದ ಲಾರಿ – ಮೂವರು ಸ್ಥಳದಲ್ಲೇ ಸಾವು

    ಆಟೋ ಮೇಲೆ ಹರಿದ ಲಾರಿ – ಮೂವರು ಸ್ಥಳದಲ್ಲೇ ಸಾವು

    ಚಿಕ್ಕಬಳ್ಳಾಪುರ: ದೇವರ ದರ್ಶನಕ್ಕೆ ಅಂತ ತೆರಳುತ್ತಿದ್ದವರ ಮೇಲೆ ಬೆಳ್ಳಂಬೆಳಿಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಹೊರವಲಯದ ಮಾಡಿಕೆರೆ ಕ್ರಾಸ್ ಬಳಿ ಆಟೋ ಮೇಲೆ ಲಾರಿ ಹರಿದ ಪರಿಣಾಮ ಆಟೋದಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಕುರಟಹಳ್ಳಿ ಗ್ರಾಮದ 45 ವರ್ಷದ ಮುರುಳಿ, 55 ವರ್ಷದ ಅಶ್ವತ್ಥಪ್ಪ ಹಾಗೂ ರಾಮಪುರ ಗ್ರಾಮದ 35 ವರ್ಷದ ಚಲಪತಿ ಮೃತ ದುರ್ದೈವಿಗಳು. ಆಂಧ್ರದ ಬಾಯಿಕೊಂಡ ಗಂಗಮ್ಮ ದೇವಸ್ಥಾನಕ್ಕೆ ಆಟೋ ಮೂಲಕ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

    ಆಟೋದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೋರ್ವ ವ್ಯಕ್ತಿ ಕಾಚಹಳ್ಳಿ ಗ್ರಾಮದ 50 ವರ್ಷದ ನಂಜಂಡಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಲಾರಿ ಚಾಲಕ ನಿದ್ದೆಗೆ ಜಾರಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮೊದಲು ಆಟೋ ಮೇಲೆ ಹರಿದ ಲಾರಿ ನಂತರ ರಸ್ತೆ ಬದಿಯ ಸಿಮೆಂಟ್ ತಡೆಗೋಡೆಗಳಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿ ನಿಂತಿದೆ. ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ.

    ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

     

  • ಕಟಪಾಡಿಯಲ್ಲಿ ಬೈಕ್- ಲಾರಿ ಮುಖಾಮುಖಿ ಡಿಕ್ಕಿ ಬಾಲಕಿ ಸ್ಥಳದಲ್ಲೇ ಸಾವು

    ಕಟಪಾಡಿಯಲ್ಲಿ ಬೈಕ್- ಲಾರಿ ಮುಖಾಮುಖಿ ಡಿಕ್ಕಿ ಬಾಲಕಿ ಸ್ಥಳದಲ್ಲೇ ಸಾವು

    ಉಡುಪಿ: ಕಟಪಾಡಿಯಲ್ಲಿ ನಡೆದ ಬೈಕ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಬೈಕ್‍ನ ಹಿಂಬದಿ ಕುಳಿತಿದ್ದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಉಡುಪಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ದುರ್ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ 11 ವರ್ಷದ ಸುಶ್ಮಿತಾ ಮೃತಪಟ್ಟ ಬಾಲಕಿ.

    ಕಟೀಲಿನಿಂದ ತನ್ನ ದೊಡ್ಡಪ್ಪನ ಜೊತೆ ಬೈಕಿನಲ್ಲಿ ಉಡುಪಿಗೆ ಬರುತ್ತಿದ್ದಾಗ ಮುಂಭಾಗದಲಿಂದ ಬರುತ್ತಿದ್ದ ಲಾರಿ ಡಿಕ್ಕಿಯಾಗಿದೆ. ಲಾರಿಯ ಬಂಪರ್ ಬೈಕಿಗೆ ಸಿಲುಕಿಕೊಂಡು ಬೈಕ್ ರಸ್ತೆಗೆ ಬಿದ್ದಿದೆ. ಮುಂಭಾಗದ ಲಾರಿಯ ಟಯರ್ ಬಾಲಕಿಯ ಮೇಲೆ ಹರಿದಿದೆ. ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಸುಶ್ಮಿತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

    ಸುಶ್ಮಿತಾಳ ದೊಡ್ಡಪ್ಪ ಎಡಭಾಗಕ್ಕೆ ಬಿದ್ದಿದ್ದರಿಂದ ಪಾರಾಗಿದ್ದಾರೆ. ಕಟಪಾಡಿ ಜಂಕ್ಷನ್‍ನಲ್ಲಿ ಈ ದುರ್ಘಟನೆ ನಡೆದಿದ್ದು ಹೆದ್ದಾರಿಯಲ್ಲಿ ಕಿಲೋಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.