Tag: lorry

  • ಸೊಳ್ಳೆ ಬತ್ತಿ ಹಚ್ಚಿಕೊಂಡು ಲಾರಿಯಲ್ಲಿ ಮಲಗಿದ್ದ ಚಾಲಕ ಸಜೀವ ದಹನ

    ಸೊಳ್ಳೆ ಬತ್ತಿ ಹಚ್ಚಿಕೊಂಡು ಲಾರಿಯಲ್ಲಿ ಮಲಗಿದ್ದ ಚಾಲಕ ಸಜೀವ ದಹನ

    ಬೆಂಗಳೂರು: ನಸುಕಿನ ಜಾವದಲ್ಲಿ ಕಂಟೈನರ್ ಲಾರಿಯೊಂದು ಹೊತ್ತಿ ಉರಿದ ಪರಿಣಾಮ ಚಾಲಕ ಸಜೀವ ದಹನವಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದೊಡ್ಡೇರಿ ಗ್ರಾಮದ ಬಳಿ ನಡೆದಿದೆ.

    ಘಟನೆಯಲ್ಲಿ ರಾಜಸ್ಥಾನ ಮೂಲದ ಲಾರಿ ಚಾಲಕ ಸುರೆಂದರ್ ಸಾವನ್ನಪ್ಪಿದ್ದಾರೆ. ರಾತ್ರಿ ಪಾರ್ಕಿಂಗ್ ಲಾಟ್ ನಲ್ಲಿ ಲಾರಿ ನಿಲ್ಲಿಸಿದ್ದ ಸುರೆಂದರ್, ಮಲಗುವ ಮುನ್ನ ಸೊಳ್ಳೆ ಬತ್ತಿ ಹಚ್ಚಿಕೊಂಡು ಮಲಗಿದ್ದಾರೆ. ಸೊಳ್ಳೆ ಬತ್ತಿಯ ಕಿಡಿಯಿಂದ ಲಾರಿ ಧಗಧಗನೆ ಹೊತ್ತಿ ಉರಿದಿದೆ ಎನ್ನಲಾಗಿದೆ.

    ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ- ಹೂಕೋಸು ರಸ್ತೆ ಪಾಲು

    ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ- ಹೂಕೋಸು ರಸ್ತೆ ಪಾಲು

    ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿ ಬಿದ್ದಿರುವ ಘಟನೆ ನಗರದ ಹನುಮಂತನಗರದ ಜಿಂಕೆ ಪಾರ್ಕ ಬಳಿ ನಡೆದಿದೆ.

    ಭಾನುವಾರ ರಾತ್ರಿ 12ಗಂಟೆ ಸುಮಾರಿಗೆ ಹೂಕೋಸು ತುಂಬಿದ ಲಾರಿಯೊಂದು ಹನುಮಂತನಗರದಿಂದ ಕೆಆರ್ ಮಾರ್ಕೆಟ್ ಕಡೆ ಸಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲಿ ಲಾರಿ ಪಲ್ಟಿ ಹೊಡೆದಿದೆ.

    ಲಾರಿ ಬಿದ್ದ ಪರಿಣಾಮ ಲೋಡ್ ಆಗಿದ್ದ ಹೂ ಕೋಸು ರಸ್ತೆಯಲ್ಲಿ ಬಿದ್ದಿದೆ. ಹೀಗಾಗಿ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಈ ಕುರಿತು ಬಸವನಗುಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಪಘಾತವಾಗಿ ನಿಂತಿದ್ದ ಸಾರಿಗೆ ಬಸ್‍ಗೆ ಹಿಂಬದಿಯಿಂದ ಲಾರಿ ಡಿಕ್ಕಿ- ವಾಹನಗಳ ಮಧ್ಯೆ ಸಿಲುಕಿ ಬಸ್ ಚಾಲಕ ಸಾವು

    ಅಪಘಾತವಾಗಿ ನಿಂತಿದ್ದ ಸಾರಿಗೆ ಬಸ್‍ಗೆ ಹಿಂಬದಿಯಿಂದ ಲಾರಿ ಡಿಕ್ಕಿ- ವಾಹನಗಳ ಮಧ್ಯೆ ಸಿಲುಕಿ ಬಸ್ ಚಾಲಕ ಸಾವು

    ಬೆಂಗಳೂರು: ಅಪಘಾತವಾಗಿ ನಿಂತಿದ್ದ ತಮಿಳುನಾಡು ಸಾರಿಗೆ ಬಸ್‍ಗೆ ಹಿಂಬದಿಯಿಂದ ಲಾರಿ ಬಂದು ಗುದ್ದಿದ ಪರಿಣಾಮ ತಮಿಳುನಾಡು ಸಾರಿಗೆ ಬಸ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರ ಸಮೀಪ ನಡೆದಿದೆ.

    ಮೃತ ಚಾಲಕನನ್ನು ಶಿವಕುಮಾರ್(35) ಎಂದು ಗುರುತಿಸಲಾಗಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಮುಂಜಾನೆ ತಮಿಳುನಾಡು ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಸಿನಲ್ಲಿದ್ದ ಪ್ರಯಾಣಿಕರನ್ನು ಚಾಲಕ ಬೇರೊಂದು ಬಸ್‍ಗೆ ಕಳುಹಿಸಿದ್ದಾರೆ. ನಂತರ ಚಾಲಕ ಶಿವಕುಮಾರ್ ಬಸ್ ಹಿಂಭಾಗ ಪರಿಶೀಲನೆ ನಡೆಸುತ್ತಾ ನಿಂತಿದ್ದರು.

    ಈ ಸಂದರ್ಭದಲ್ಲಿ ವೇಗವಾಗಿ ಬಂದ ಲಾರಿ ಬಸ್‍ಗೆ ಡಿಕ್ಕಿ ಹೊಡೆದಿದೆ. ಎರಡು ವಾಹನದ ಮಧ್ಯೆ ಸಿಲುಕಿದ ಶಿವಕುಮಾರ್ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಘಟನೆಯಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್‍ಗೆ ಗಂಭೀರವಾಗಿ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

    ಸ್ಥಳಕ್ಕೆ ಸೂರ್ಯಸಿಟಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಎರಡು ವಾಹನಗಳನ್ನು ಕ್ರೇನ್ ಮೂಲಕ ಬೆರ್ಪಡಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಡೀಸೆಲ್ ಟ್ಯಾಂಕರ್ ಪಲ್ಟಿ- ಬಕೆಟ್, ಡಬ್ಬಿಗಳಲ್ಲಿ ಡೀಸೆಲ್ ತುಂಬಿಕೊಂಡು ಹೋದ್ರು ಜನ

    ಡೀಸೆಲ್ ಟ್ಯಾಂಕರ್ ಪಲ್ಟಿ- ಬಕೆಟ್, ಡಬ್ಬಿಗಳಲ್ಲಿ ಡೀಸೆಲ್ ತುಂಬಿಕೊಂಡು ಹೋದ್ರು ಜನ

    ಯಾದಗಿರಿ: ಡೀಸೆಲ್ ಹೊತ್ತೊಯ್ಯುತ್ತಿದ್ದ  ಟ್ಯಾಂಕರೊಂದು ಪಲ್ಟಿಯಾದ ಘಟನೆ ಶಹಾಪೂರ ತಾಲೂಕಿನ ಹುಲಕಲ್ ಗ್ರಾಮದ ಬಳಿ ನಡೆದಿದೆ.

    ಭಾರತ್ ಪೆಟ್ರೋಲಿಯಂ ಕಂಪನಿಗೆ ಸೇರಿದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿದೆ. ಈ ಸಮಯದಲ್ಲಿ ಯಾವುದೇ ವಾಹನಗಳು ಸಂಚರಿಸಿದ ಕಾರಣ ಭಾರೀ ದುರಂತ ತಪ್ಪಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಟ್ಯಾಂಕರ್ ನಲ್ಲಿದ್ದ ಡಿಸೇಲ್ ಸೊರಿಕೆಯಾಗುತ್ತಿರುವುದನ್ನು ಕಂಡ ಗ್ರಾಮಸ್ಥರು ಡಬ್ಬಿ ಹಾಗೂ ಬಕೆಟ್ ಗಳಲ್ಲಿ ಡಿಸೇಲ್ ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.

    ಭೀಮರಾಯನ ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕಿಡಿಗೇಡಿಗಳಿಂದ ಡೀಸೆಲ್ ಟ್ಯಾಂಕರ್, ಲಾರಿಗೆ ಬೆಂಕಿ

    ಕಿಡಿಗೇಡಿಗಳಿಂದ ಡೀಸೆಲ್ ಟ್ಯಾಂಕರ್, ಲಾರಿಗೆ ಬೆಂಕಿ

    ಗದಗ: ನಗರದಲ್ಲಿ ಡಿಸೇಲ್ ಟ್ಯಾಂಕರ್, ಲಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ.

    ಗದಗ ನಗರದ ರಾಚೂಟೇಶ್ವರ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಗುರುವಾರ ತಡರಾತ್ರಿ ನಡೆದ ಕಿಡಿಗೇಡಿಗಳ ಈ ಕೃತ್ಯಕ್ಕೆ ವಾಹನಗಳು ಬೆಂಕಿಗಾಹುತಿಯಾಗಿವೆ.

    ಮನೆ ಎದರು ನಿಲ್ಲಿಸಿದ ವಾಹನಗಳ ಟಯರ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಟಯರ್ ಬ್ಲಾಸ್ಟ್ ಆಗಿದ್ದು, ಈ ಶಬ್ದ ಕೇಳಿದ ಬಳಿಕ ಕಿಡಿಗೇಡಿಗಳ ಕೃತ್ಯ ಬೆಳಕಿಗೆ ಬಂದಿದೆ.

    ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ಕೊಪ್ಪಳದ ಸಾಯಿನಾಥ್ ಎಂಬವರಿಗೆ ಸೇರಿದ ಟ್ಯಾಂಕರ್ ಹಾಗೂ ಗದಗ ನಗರದ ಮಲ್ಲೇಶ್ ಪುರದ ಎಂಬವರಿಗೆ ಸೇರಿದ ಲಾರಿ ಇದಾಗಿದೆ.

    ಗದಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.

  • ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಈರುಳ್ಳಿ ಲಾರಿ ಪಲ್ಟಿ- 7 ರೈತರಿಗೆ ಗಾಯ

    ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಈರುಳ್ಳಿ ಲಾರಿ ಪಲ್ಟಿ- 7 ರೈತರಿಗೆ ಗಾಯ

    ಹಾವೇರಿ: ಈರುಳ್ಳಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿಯಾಗಿ ಏಳು ರೈತರಿಗೆ ಸಣ್ಣಪುಟ್ಟ ಗಾಯವಾದ ಘಟನೆ ಹಾವೇರಿ ತಾಲೂಕಿನ ನೆಲೋಗಲ್ ಕ್ರಾಸ್ ಬಳಿ ತಡರಾತ್ರಿ ನಡೆದಿದೆ.

    ಗಾಯಗೊಂಡ ರೈತರನ್ನ ಶಿವಲಿಂಗಗೌಡ ಪಾಟೀಲ(45), ಶಿವಣಪ್ಪ ವಾಲ್ಮೀಕಿ(38), ಮಲ್ಲಪ್ಪ ಟಕ್ಕೇದ(49), ಶಶಿಧರ ಟಕ್ಕೇದ(36), ಶಿವನಗೌಡ ಪಾಟೀಲ(50), ಬಸನಗೌಡ ಪಾಟೀಲ(46) ಮತ್ತು ನಿಂಗಪ್ಪ ಬಳಗೋಡ(39) ಎಂದು ಗುರುತಿಸಲಾಗಿದೆ. ಗಾಯಾಳುಗಳು ಗದಗ ಜಿಲ್ಲೆ ರೋಣ ತಾಲೂಕಿನ ಸಂದಿಗವಾಡ ಗ್ರಾಮದ ರೈತರು ಎನ್ನಲಾಗಿದೆ.

    ತಮ್ಮ ಗ್ರಾಮದಿಂದ ಬೆಂಗಳೂರಿಗೆ ಈರುಳ್ಳಿ ಮಾರಾಟ ಮಾಡಲು ತೆರಳುತ್ತಿದ್ದ ವೇಳೆ ಲಾರಿ ಚಾಲಕ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಲಾರಿ ಉರುಳಿ ಬಿದ್ದಿದೆ. ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಅವಘಡದ ಬಳಿಕ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಕೂಡಲೇ ಬೇರೆ ಲಾರಿ ಮೂಲಕ ಈರುಳ್ಳಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಲಾರಿ ಏಜೆನ್ಸಿಗೆ ರೈತರು ಮನವಿ ಮಾಡಿಕೊಂಡಿದ್ದಾರೆ.

    ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಮಂಡ್ಯದಲ್ಲಿ 3 ಪ್ರತ್ಯೇಕ ಅಪಘಾತ- ಇಬ್ಬರ ದುರ್ಮರಣ

    ಮಂಡ್ಯದಲ್ಲಿ 3 ಪ್ರತ್ಯೇಕ ಅಪಘಾತ- ಇಬ್ಬರ ದುರ್ಮರಣ

    ಮಂಡ್ಯ: ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಜಿಲ್ಲೆಯ ಶ್ರೀರಂಗಪಟ್ಟಣದ ಮಯೂರ ಹೋಟೆಲ್ ಬಳಿ ಲಾರಿಯನ್ನು ರಿವರ್ಸ್ ತೆಗೆಯುವಾಗ ಹಿಂಬದಿ ನಿಂತಿದ್ದ ಅಪರಿಚಿತ ವ್ಯಕ್ತಿಗೆ ಗುದ್ದಿ ಮೃತಪಟ್ಟಿದ್ದಾರೆ. ಎರಡನೇ ಪ್ರಕರಣದಲ್ಲಿ ಬಾಬುರಾಯನಕೊಪ್ಪಲು ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ.

    ಮೂರನೇ ಪ್ರಕರಣ ಕೆಆರ್‍ಪೇಟೆ ಬಸ್ ನಿಲ್ದಾಣದ ಎದರು ನಡೆದಿದ್ದು, ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಕೀರ್ತಿಕುಮಾರ್ ಸೇರಿದಂತೆ ಇಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಎಲ್ಲ ಪ್ರಕರಣಗಳು ತಡರಾತ್ರಿ ನಡೆದಿವೆ.

    ಘಟನೆ ಸಂಬಂಧ ಶ್ರೀರಂಗಪಟ್ಟಣ ಮತ್ತು ಕೆಆರ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಪಲ್ಟಿಯಾಗಿದ್ರಿಂದ ಲಾರಿಯ ಹಿಂಬದಿ ಕಲ್ಲುಚಪ್ಪಡಿ ಮೇಲೆ ಕುಳಿತಿದ್ದ ವ್ಯಕ್ತಿ ದುರ್ಮರಣ

    ಪಲ್ಟಿಯಾಗಿದ್ರಿಂದ ಲಾರಿಯ ಹಿಂಬದಿ ಕಲ್ಲುಚಪ್ಪಡಿ ಮೇಲೆ ಕುಳಿತಿದ್ದ ವ್ಯಕ್ತಿ ದುರ್ಮರಣ

    ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಕಲ್ಲುಚಪ್ಪಡಿಗಳನ್ನ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಈ ಘಟನೆ ಚಿಕ್ಕಬಳ್ಳಾಪುರ ನಗರದ ಹೊರವಲಯದ ಮಂಚನಬಲೆ ಸೇತುವೆ ಬಳಿ ನಡೆದಿದೆ. ಕುರ್ಲಹಳ್ಳಿ ಗ್ರಾಮದ ಅನಿಲ್ ಕುಮಾರ್ (35) ಮೃತ ವ್ಯಕ್ತಿ. ಅಪಘಾತದಲ್ಲಿ ಗಾಯಗೊಂಡಿರುವ ಮತ್ತೋರ್ವ ವ್ಯಕ್ತಿಯನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿದೆ.

    ಹೆದ್ದಾರಿಯಲ್ಲಿ ಎದುರಗಡೆಯಿಂದ ಬಂದ ವಾಹನವನ್ನು ತಪ್ಪಿಸಲು ಹೋಗಿ ಬಲಗಡೆ ಹೋಗುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಪರಿಣಾಮ ಲಾರಿಯ ಹಿಂಬದಿ ಚಪ್ಪಡಿ ಕಲ್ಲುಗಳ ಮೇಲೆ ಕುಳಿತಿದ್ದ ಓರ್ವ ವ್ಯಕ್ತಿ ಮೃತಪಟ್ಟು, ಇನ್ನೊರ್ವರು ಗಾಯಗೊಂಡಿದ್ದಾರೆ.

    ಅಪಘಾತವಾದ ನಂತರ ಲಾರಿಚಾಲಕ ಹಾಗೂ ಕ್ಲೀನರ್ ಪರಾರಿಯಾಗಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಡಿವೈಎಸ್ಪಿ ಪ್ರಭುಶಂಕರ್ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟೆಂಪೋ ಟ್ರಾವೆಲರ್, ಲಾರಿ ಮಧ್ಯೆ ಭೀಕರ ಅಪಘಾತ- ಒಂದೇ ಕುಟುಂಬದ ಮೂವರ ಸಾವು

    ಟೆಂಪೋ ಟ್ರಾವೆಲರ್, ಲಾರಿ ಮಧ್ಯೆ ಭೀಕರ ಅಪಘಾತ- ಒಂದೇ ಕುಟುಂಬದ ಮೂವರ ಸಾವು

    ಮೈಸೂರು: ಟೆಂಪೋ ಟ್ರಾವೆಲರ್ ಹಾಗೂ ಲಾರಿ ಮಧ್ಯೆ ನಡೆದಿರುವ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿರುವ ಘಟನೆ ಮೈಸೂರು-ಹುಣಸೂರು ಮಾರ್ಗದ ಬಸರಿಕಟ್ಟೆ ಬಳಿ ನಡೆದಿದೆ.

    ಅಪಘಾತದಲ್ಲಿ ಸಾವನ್ನಪ್ಪಿರುವವರನ್ನು ಅಬ್ದುಲ್ ಹಮೀದ್(47), ಮಹಮದ್ ಇಕ್ಬಾಲ್(37) ಹಾಗೂ ಶೇಕ್ ಹಕೀಬ್(11) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಟೆಂಪೋ ಟ್ರಾವೆಲರ್ ನಲ್ಲಿದ್ದವರು ಮಂಗಳೂರಿನಿಂದ ಊಟಿಗೆ ಕುಟುಂಬ ಸಮೇತ ತೆರಳುತ್ತಿದ್ದರು. ಈ ವೇಳೆ ಮೈಸೂರಿನ ಬಸರಿಕಟ್ಟೆ ಬಳಿ ಟೆಂಪೋ ಟ್ರಾವೆಲರ್ ಲಾರಿಯನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

    ಘಟನಾ ಸ್ಥಳಕ್ಕೆ ಹುಣಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಆಟೋಗೆ ಹಿಂದಿನಿಂದ ಲಾರಿ ಡಿಕ್ಕಿ – ಆಟೋ ಚಾಲಕ ಸ್ಥಳದಲ್ಲೇ ಸಾವು

    ಆಟೋಗೆ ಹಿಂದಿನಿಂದ ಲಾರಿ ಡಿಕ್ಕಿ – ಆಟೋ ಚಾಲಕ ಸ್ಥಳದಲ್ಲೇ ಸಾವು

    ರಾಯಚೂರು: ಆಟೋಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆ ಸಿಂಧನೂರಿನ ಹಿರೇಹಳ್ಳದ ಬಳಿ ನಡೆದಿದೆ.

    ಲಕ್ಷ್ಮೀ ಕ್ಯಾಂಪ್ ನ 46 ವರ್ಷದ ಹಸನಸಾಬ್ ಮೃತ ಚಾಲಕ. ಪಿಡಬ್ಲ್ಯೂಡಿ ಕ್ಯಾಂಪ್ ನಿಂದ ಸಿಂಧನೂರಿಗೆ ಒಬ್ಬರೇ ಮರಳುತ್ತಿದ್ದಾಗ ಹಳ್ಳದ ಬಳಿ ಆಟೋಗೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ರಿಕ್ಷಾ ನಜ್ಜುಗುಜ್ಜಾಗಿದೆ.

    ಸದ್ಯ ಲಾರಿ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಹಿನ್ನೆಲೆ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.