Tag: lorry

  • Shivamogga | ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿ – ಇಬ್ಬರು ದುರ್ಮರಣ, 13ಕ್ಕೂ ಹೆಚ್ಚು ಮಂದಿಗೆ ಗಾಯ

    Shivamogga | ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿ – ಇಬ್ಬರು ದುರ್ಮರಣ, 13ಕ್ಕೂ ಹೆಚ್ಚು ಮಂದಿಗೆ ಗಾಯ

    ಶಿವಮೊಗ್ಗ: ಕೆಟ್ಟು ನಿಂತಿದ್ದ ಲಾರಿಗೆ (Lorry) ಬಸ್ (Bus) ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶಿವಮೊಗ್ಗದ (Shivamogga) ತೀರ್ಥಹಳ್ಳಿ (Thirthahalli) ರಸ್ತೆಯಲ್ಲಿ ನಡೆದಿದೆ.

    ಶಿವಮೊಗ್ಗ ತಾಲೂಕಿನ ಗಾಜನೂರು ಅಗ್ರಹಾರದ ಬಳಿ ಇಂದು ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಸ್ ಕಂಡಕ್ಟರ್ ಅಣ್ಣಪ್ಪ (40), ಪ್ರಯಾಣಿಕರಾದ ಹರ್ಷಿತ (35) ಸಾವನ್ನಪ್ಪಿದ್ದಾರೆ. ಭೀಕರ ಅಪಘಾತದಲ್ಲಿ 13ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಉಮೇಶ್ (50), ಪ್ರಸಾದ್ (40), ವಿಷ್ಣು (21), ಮಂಜುನಾಥ್ (45), ಸುಜಾತ (40), ಆನಂದ್ ನಾಯ್ಕ್ (50), ನೀಲಾಂಬಿಕಾ (45), ಪ್ರಸಾದ್ (43), ಬಿಂದು (20), ಶಂಶಾಂಕ್ (20), ಲಕ್ಷ್ಮೀ (35), ಶ್ರೀರಾಮುಲು (42) ಹಾಗೂ ಕಾರ್ತಿಕ್ (32) ಎಂಬವರು ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಡಾ.ರಾಜ್ ಅಪಹರಣ ಪ್ರಕರಣಕ್ಕೆ 25 ವರ್ಷ – 2000 ಇಸವಿಯಲ್ಲಿ ಅಪಹರಿಸಿದ್ದ ವೀರಪ್ಪನ್

    ದುರ್ಗಾಂಬ ಬಸ್ ಮಂಗಳೂರಿನಿಂದ ಚಳ್ಳಕೆರೆಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಪ್ರಯಾಣಿಕರಿಗೆ ಟಿಕೆಟ್ ಕೊಡದೇ ಮೊಬೈಲ್‌ನಲ್ಲಿ ಹರಟೆ ಹೊಡೆಯುತ್ತಿದ್ದ ರೈಲ್ವೆ ಸಿಬ್ಬಂದಿ ಅಮಾನತು

  • ರೋಡ್ ಹಂಪ್ಸ್ ಕಾಣದೇ 2 ಲಾರಿ, ಬೊಲೆರೋ ನಡುವೆ ಭೀಕರ ಅಪಘಾತ – ಮೂವರು ಗಂಭೀರ

    ರೋಡ್ ಹಂಪ್ಸ್ ಕಾಣದೇ 2 ಲಾರಿ, ಬೊಲೆರೋ ನಡುವೆ ಭೀಕರ ಅಪಘಾತ – ಮೂವರು ಗಂಭೀರ

    ಆನೇಕಲ್: ರಸ್ತೆಯಲ್ಲಿರುವ ಹಂಪ್ಸ್ (Road Humps) ಕಾಣದೇ ಎರಡು ಲಾರಿ (Lorry) ಹಾಗೂ ಬೊಲೆರೋ (Bolero) ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯ ಬೊಮ್ಮಸಂದ್ರ (Bommasandra) ಸಮೀಪದ ಹೆನ್ನಾಗರ ಗೇಟ್ (Hennagara Gate) ಬಳಿ ನಡೆದಿದೆ.

    ಹಂಪ್ಸ್ ಕಾಣದೆ ಮುಂಬದಿ ಹೋಗುತ್ತಿದ್ದ ಲಾರಿಗೆ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಇದೇ ವೇಳೆ ಬೊಲೆರೋ ವಾಹನಕ್ಕೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದ್ದು, ಎರಡು ಲಾರಿಗಳ ಮಧ್ಯೆ ಬೊಲೆರೋ ವಾಹನ ಸಿಲುಕಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೊಲೆರೋ ವಾಹನದಲ್ಲಿದ್ದ ಮುಷ್ತಾಕ್ (37), ಸಾಧಿಕ್ (45) ಹಾಗೂ ಮುದಾಸಿರ್ (30) ಗಂಭೀರ ಗಾಯಗೊಂಡಿದ್ದಾರೆ. ಇನ್ನುಳಿದಂತೆ ಲಾರಿಯಲ್ಲಿದ್ದ ಮೂರ್ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಧರ್ಮಸ್ಥಳ ಫೈಲ್ಸ್; ಪ್ರಮುಖ ಘಟ್ಟ ತಲುಪಿದ ತನಿಖೆ – ಇಂದು ಮತ್ತಷ್ಟು ಜಾಗಗಳ ಗುರುತು

    ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ತಂಡ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಬೊಲೆರೋ ವಾಹನದಲ್ಲಿದ್ದ ಗಾಯಾಳುಗಳನ್ನ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅಕ್ರಮ ಸಂಬಂಧ; ಟಾಪ್‌-20 ನಗರಗಳ ಪಟ್ಟಿ ರಿಲೀಸ್‌; ಬೆಂಗಳೂರಿಗೆ ಎಷ್ಟನೇ ಸ್ಥಾನ? – ನಂ.1 ನಗರ ಯಾವುದು?

  • ಸಿರುಗುಪ್ಪ| ಕಾರಿಗೆ ಲಾರಿ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ

    ಸಿರುಗುಪ್ಪ| ಕಾರಿಗೆ ಲಾರಿ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ

    ಬಳ್ಳಾರಿ: ಕಾರು (Car) ಹಾಗೂ ಲಾರಿ (Lorry) ನಡುವೆ ಭೀಕರ ರಸ್ತೆ ಅಪಘಾತ (Accident) ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಸಿರುಗುಪ್ಪ (Siruguppa) ತಾಲೂಕಿನ ದೇವಿನಗರ ಗ್ರಾಮದ ಬಳಿ ನಡೆದಿದೆ.

    ಸಿಂಧನೂರಿನ ತುರ್ವಿಹಾಳ ಗ್ರಾಮದ ಶಂಕರಗೌಡ (58), ಬಸವರಾಜ್ (56) ಮೃತ ದುರ್ದೈವಿಗಳು. ಅಪಘಾತದಲ್ಲಿ ದ್ಯಾವಪ್ಪ, ಜಲಾಲಮ್ಮ ಹಾಗೂ ಶಂಭುಲಿಂಗ ಎನ್ನುವವರಿಗೆ ಗಂಭೀರ ಗಾಯಗಳಾಗಿದ್ದು, ಮೂವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – 13 ಸ್ಥಳ ಗುರುತು ಮಾಡಿದ ದೂರುದಾರ

    ಕಾರಿನಲ್ಲಿ ಐದು ಜನ ಪ್ರಯಾಣ ಮಾಡುತ್ತಿದ್ದರು. ಲಾರಿ ಕಾರಿಗೆ ವೇಗವಾಗಿ ಬಂದು ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾಗಲಕೋಟೆ | ಬೈಕ್ ತಪ್ಪಿಸಲು ಹೋಗಿ ಕಾರಿನ ಮೇಲೆ ಲಾರಿ ಪಲ್ಟಿ – ಇಬ್ಬರು ದುರ್ಮರಣ

    ಬಾಗಲಕೋಟೆ | ಬೈಕ್ ತಪ್ಪಿಸಲು ಹೋಗಿ ಕಾರಿನ ಮೇಲೆ ಲಾರಿ ಪಲ್ಟಿ – ಇಬ್ಬರು ದುರ್ಮರಣ

    ಬಾಗಲಕೋಟೆ: ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರಿನ ಮೇಲೆ ಲಾರಿ (Lorry) ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರ ಸೀಮಿಕೇರಿ (Simikeri) ಬಳಿ ನಡೆದಿದೆ.

    ಬಾಗಲಕೋಟೆ (Bagalkote) ತಾಲೂಕಿನ ಕೇಸನೂರು ಗ್ರಾಮದ ನಿವಾಸಿ ರಮೇಶ್ ಹೂಗಾರ(45) ಹಾಗೂ ಗದ್ದನಕೇರಿ ನಿವಾಸಿ ಅಕ್ಬರ್ ನಬಿಸಾಬ್ ಚೇರ್ಮನ್ (33) ಮೃತರೆಂದು ಗುರುತಿಸಲಾಗಿದೆ. ಇದನ್ನೂ ಓದಿ: ಉದಯಪುರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ – ಶಿಕ್ಷಕರಿಂದ ಕಿರುಕುಳ ಆರೋಪ

    ಎದುರಿಗೆ ಬಂದ ಬೈಕ್ ಡಿಕ್ಕಿಯಾಗುವುದನ್ನೂ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಲಾರಿ, ಕಾರಿನ ಮೇಲೆ ಪಲ್ಟಿಯಾಗಿ ಬೈಕ್‌ಗೂ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ದುರ್ಮರಣಕ್ಕಿಡಾಗಿದ್ದು, ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ. ಬೈಕ್‌ನಲ್ಲಿದ್ದ ಓರ್ವನಿಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ತೆಲಂಗಾಣ | ಡಿವೈಡರ್‌ಗೆ ಪೊಲೀಸ್ ವಾಹನ ಡಿಕ್ಕಿ – ಇಬ್ಬರು ಡಿಎಸ್ಪಿ ಸಾವು

    ಕಾರು ಮತ್ತು ಬೈಕ್ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದು, ವಿಜಯಪುರದ ಕಡೆಗೆ ಪ್ಲಾಸ್ಟಿಕ್ ಚೀಲಗಳಿರುವ ಬ್ಯಾಗ್ ಹೊತ್ತುಕೊಂಡು ಲಾರಿ ಹೊರಟಿತ್ತು. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿದ್ದು, ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಾಲಕನ ನಿಯಂತ್ರಣ ತಪ್ಪಿ ಬ್ಯಾಂಗಲ್ ಸ್ಟೋರ್, ಬೇಕರಿಗೆ ನುಗ್ಗಿದ ಲಾರಿ – ಮೂವರು ಸಾವು, ಐವರಿಗೆ ಗಾಯ

    ಚಾಲಕನ ನಿಯಂತ್ರಣ ತಪ್ಪಿ ಬ್ಯಾಂಗಲ್ ಸ್ಟೋರ್, ಬೇಕರಿಗೆ ನುಗ್ಗಿದ ಲಾರಿ – ಮೂವರು ಸಾವು, ಐವರಿಗೆ ಗಾಯ

    ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಬ್ಯಾಂಗಲ್ ಸ್ಟೋರ್ (Bangle Store) ಹಾಗೂ ಬೇಕರಿಗೆ ಲಾರಿ ನುಗ್ಗಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ತುಮಕೂರು (Tumakuru) ಜಿಲ್ಲೆ ಕೊರಟಗೆರೆ (Koratagere) ತಾಲೂಕಿನ ಕೋಳಾಲ ಸರ್ಕಲ್‌ನಲ್ಲಿ ನಡೆದಿದೆ.

    ಕಾಟೇನಹಳ್ಳಿ ಗ್ರಾಮದ ರಂಗಧಾಮಯ್ಯ (65), ಪುರದಹಳ್ಳಿ ಗ್ರಾಮದ ಭೈಲಪ್ಪ (65), ಕೋಳಾಲದ ಮಂಜುನಾಥ್ (44) ಮೃತರು. ತುಮಕೂರು ಕಡೆಯಿಂದ ಗೊಬ್ಬರ ತುಂಬಿದ ಲಾರಿ ಹಾರೋಡಿ ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಘಟನೆ ಬಳಿಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಲಾರಿ ಇನ್‌ಶೂರೆನ್ಸ್ ಹಾಗೂ ಫಿಟ್‌ನೆಸ್ ಲ್ಯಾಪ್ಸ್ ಹಿನ್ನೆಲೆ ಕೋಳಾಲ ಪೊಲೀಸರು ಲಾರಿಯನ್ನ ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಡಿಕೇರಿ | ಮಳೆ ಹಿನ್ನೆಲೆ ಭಾರೀ ವಾಹನಗಳಿಗೆ ನಿಷೇಧ – ಆದೇಶ ಉಲ್ಲಂಘಿಸಿದ 12 ಲಾರಿಗಳು ವಶಕ್ಕೆ

    ಮಡಿಕೇರಿ | ಮಳೆ ಹಿನ್ನೆಲೆ ಭಾರೀ ವಾಹನಗಳಿಗೆ ನಿಷೇಧ – ಆದೇಶ ಉಲ್ಲಂಘಿಸಿದ 12 ಲಾರಿಗಳು ವಶಕ್ಕೆ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲ (Rain) ಆರಂಭವಾಗಿದೆ. ಜಿಲ್ಲೆಯ ನಾನಾ ಭಾಗದಲ್ಲಿ ಈಗಾಗಲೇ ಸಣ್ಣಪುಟ್ಟ ಭೂಕುಸಿತಗಳು (Landslide) ಉಂಟಾಗುತ್ತಿದೆ. ಈ ಹಿನ್ನಲೆ ಜಿಲ್ಲಾಡಳಿತ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿತ್ತು. ಆದೇಶ ಉಲ್ಲಂಘಿಸಿದ 12 ಲಾರಿಗಳನ್ನು ಪೊಲೀಸರು ಹಾಗೂ ಆರ್‌ಟಿಓ (RTO) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಜಿಲ್ಲೆಯಲ್ಲಿ ಮಳೆಗಾಲ ಅರಂಭ ಅದ್ರೆ ಸಾಕು ಕೊಡಗಿನ ಬೆಟ್ಟಗುಡ್ಡದ ನಿವಾಸಿಗಳು ಅತಂಕಕ್ಕೆ ಒಳಗಾಗುತ್ತಾರೆ. ಈ ನಡುವೆ ಜಿಲ್ಲೆಯ ನಾನಾ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತಗಳು ಉಂಟಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಸ್ತೆ ಸಂಪರ್ಕಗಳಲ್ಲಿ ವ್ಯತ್ಯಯಗಳು ಉಂಟಾಗಬಾರದು ಎಂದು ಭಾರೀ ವಾಹನಗಳಿಗೆ ನಿಷೇಧ ಹೇರಲಾಗಿತ್ತು.

    ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜು.6ರಿಂದ ಆ.5ರವರೆಗೆ 18.500 ಕೆಜಿಗಿಂತ ಹೆಚ್ಚಿನ ಸಾಗಾಣಿಕೆ ವಾಹನ, ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಮಲ್ಟಿ ಆಕ್ಸಿಲ್ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.

    ಅದರೆ ಕೆಲ ಲಾರಿ ಚಾಲಕರು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ, ರಾತ್ರಿ ವೇಳೆಯಲ್ಲಿ ಮಡಿಕೇರಿಗೆ ಆಗಮಿಸುತ್ತಿದ್ದ ಲಾರಿಗಳನ್ನು ಪೊಲೀಸರು ಹಾಗೂ ಆರ್‌ಟಿಓ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ದಂಡ ವಿಧಿಸಿ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಭಾರೀ ವಾಹನಗಳಿಗೆ ನಿಷೇಧ ಹೇರಿದ್ದರು. ಚೆಕ್‌ಪೋಸ್ಟ್ ಸಿಬ್ಬಂದಿ ನಿರ್ಲಕ್ಷö್ಯದಿಂದಲೇ ವಾಹನಗಳು ಓಡಾಟ ನಡೆಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

    ಆದೇಶ ಉಲ್ಲಂಘಿಸಿ 12 ಲಾರಿಗಳು ವಿವಿಧೆಡೆಗಳಿಂದ ಮಡಿಕೇರಿ ಮೂಲಕ ಮಂಗಳೂರು ಸೇರಿದಂತೆ ಇನ್ನಿತರ ಕಡೆಗಳಿಗೆ ಸಂಚರಿಸುತ್ತಿರುವ ಕುರಿತು ಸ್ಥಳೀಯ ಚಾಲಕರಿಗೆ ಮಾಹಿತಿ ತಿಳಿದು ಬಂದಿತ್ತು. ತಕ್ಷಣ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಬಳಿ ಲಾರಿಗಳನ್ನು ತಡೆದು ಪೊಲೀಸರು ಹಾಗೂ ಆರ್‌ಟಿಓ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಉಪನಿರೀಕ್ಷಕಿ ಅನ್ನಪೂರ್ಣ, ಸಂಚಾರಿ ಠಾಣಾಧಿಕಾರಿ ಶ್ರೀಧರ್, ಆರ್‌ಟಿಓ ಅಧಿಕಾರಿ ಮೋಹನ್ ಕುಮಾರ್ ಹಾಗೂ ಪೊಲೀಸರು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ಜೂನ್‌ನಲ್ಲೇ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ರಸ್ತೆ ಹಾಳಗುತ್ತದೆ ಎಂದು ಆದೇಶ ಮಾಡಲಾಗಿತ್ತು. ಇದೇ ಮೊದಲು ಈ ರೀತಿಯಾಗಿದೆ. ಕುಶಾಲನಗರ ಮೂಲಕ ಲಾರಿ ಚಾಲಕರು ಬಂದಿದ್ದಾರೆ. ಚೆಕ್‌ಪೋಸ್ಟ್ಗಳ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಭಾರೀ ವಾಹನಗಳು ಜಿಲ್ಲೆಗೆ ಪ್ರವೇಶಿಸಿದೆ. ಈ ಬಗ್ಗೆ ಕೊಡಗು ಎಸ್ಪಿ ಅವರೊಂದಿಗೆ ಸಭೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಲಾರಿ, ಕಾರಿನ ಮಧ್ಯೆ ಭೀಕರ ಅಪಘಾತ – ಓರ್ವ ಸಾವು

    ಲಾರಿ, ಕಾರಿನ ಮಧ್ಯೆ ಭೀಕರ ಅಪಘಾತ – ಓರ್ವ ಸಾವು

    ಶಿವಮೊಗ್ಗ: ಲಾರಿ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೂದೂರು ಸಮೀಪದ ಬೇಗುವಳ್ಳಿಯಲ್ಲಿ ನಡೆದಿದೆ.

    ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಸಾಗುತ್ತಿದ್ದ ಲಾರಿ ಮಂಗಳೂರಿನಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಈ ಪೈಕಿ ಓರ್ವ ಸಾವನ್ನಪ್ಪಿದ್ದು, ಮಕ್ಕಳು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮೆಟ್ರೋ ದರ ಏರಿಕೆಯಿಂದ BMTCಗೆ ಬಂಪರ್ – ಆದಾಯ 7.25 ಕೋಟಿಗೆ ಏರಿಕೆ

    ಘಟನಾ ಸ್ಥಳಕ್ಕೆ ಮಾಳೂರು ಠಾಣೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ನಂದಿಬೆಟ್ಟದಲ್ಲಿಂದು ಸಚಿವ ಸಂಪುಟ ಸಭೆ – ಬಯಲು ಸೀಮೆ ಜಿಲ್ಲೆಗಳಿಗೆ ಸಿಗುತ್ತಾ ಭರಪೂರ ಕೊಡುಗೆ?

  • ಪ್ರಪಾತದ ಬಳಿ ಬಸ್ ಪಲ್ಟಿ – ಪ್ರಾಣಾಪಾಯದಿಂದ 25 ಪ್ರಯಾಣಿಕರು ಪಾರು

    ಪ್ರಪಾತದ ಬಳಿ ಬಸ್ ಪಲ್ಟಿ – ಪ್ರಾಣಾಪಾಯದಿಂದ 25 ಪ್ರಯಾಣಿಕರು ಪಾರು

    ಕಾರವಾರ: ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಲಾರಿಗೆ ಡಿಕ್ಕಿಯಾಗಿ ಅಪಘಾತವಾಗಿದ್ದು, ದೊಡ್ಡ ದುರ್ಘಟನೆಯಿಂದ ಪಾರಾದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಬೆಂಗಳೂರಿನಿಂದ 25 ಪ್ರಯಾಣಿಕರನ್ನು ಗೋವಾದ ಕಡೆ ಕರೆದೊಯ್ಯುತ್ತಿದ್ದ ಬಸ್ ಅರೆಬೈಲ್ ಘಟ್ಟದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಲಾರಿಗೆ ಗುದ್ದಿ ಪಲ್ಟಿಯಾಗಿದೆ. ಇದನ್ನೂ ಓದಿ: ಕೈದಿಗಳು 6 ಸಾವಿರ ಕೊಟ್ರೆ ಕೀ ಪ್ಯಾಡ್ ಫೋನ್, 15,000ಕ್ಕೆ ಆ್ಯಂಡ್ರಾಡ್ ಫೋನ್ – ಮೈಸೂರು ಕೇಂದ್ರ ಕಾರಾಗೃಹದ ಸ್ಥಿತಿ ಬಿಚ್ಚಿಟ್ಟ ಸರ್ಕಾರಿ ಸದಸ್ಯ

    ಈ ವೇಳೆ ಬಸ್ ಪ್ರಪಾತಕ್ಕೆ ಬೀಳದೆ ಅರ್ಧದಲ್ಲೇ ನಿಂತಿದ್ದು, 25 ಪ್ರಯಾಣಿಕರು ಸಣ್ಣಪುಟ್ಟ ಗಾಯದೊಂದಿದೆ ಬಚಾವ್ ಆಗಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Haveri | ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ – 6 ಮಂದಿ ದುರ್ಮರಣ

    Haveri | ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ – 6 ಮಂದಿ ದುರ್ಮರಣ

    ಹಾವೇರಿ: ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸಾವನ್ನಪ್ಪಿದ ಘಟನೆ ಹಾವೇರಿ (Haveri) ಜಿಲ್ಲೆ ಬ್ಯಾಡಗಿ (Byadagi) ತಾಲೂಕಿನ ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ಬಳಿ ನಡೆದಿದೆ.

    ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ – ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ್‌ಮೈಂಡ್ ಸಾವು

    ಘಟನೆ ಕುರಿತು ಹಾವೇರಿ ಎಸ್‌ಪಿ ಅಂಶುಕುಮಾರ್ ಪ್ರತಿಕ್ರಿಯಿಸಿದ್ದು, ಎನ್‌ಹೆಚ್ 4 ಹೆದ್ದಾರಿಯಲ್ಲಿ ಅಪಘಾತ ಆಗಿದೆ. ಲಾರಿಗೆ ಹಿಂಬದಿಯಿಂದ ಹೋಗಿ ಕಾರು ಗುದ್ದಿದೆ. ಸ್ಥಳದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮೃತದೇಹಗಳನ್ನು ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗುತ್ತದೆ. ಮೃತಪಟ್ಟ 6 ಜನ ರಾಣೆಬೆನ್ನೂರು ನಗರದ ಅಶೋಕ್ ನಗರದ ನಿವಾಸಿಗಳು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಬಿಎಂಪಿ ಕಾರ್ಮಿಕರಿಗೆ ಬಿಎಂಟಿಸಿ ಬಸ್ ಡಿಕ್ಕಿ – ಇಬ್ಬರಿಗೆ ಗಂಭೀರ ಗಾಯ

  • Tumakuru | ಚಲಿಸುತ್ತಿದ್ದ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ – ಚಾಲಕ ಪಾರು

    Tumakuru | ಚಲಿಸುತ್ತಿದ್ದ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ – ಚಾಲಕ ಪಾರು

    – ಲಾರಿ ಸಂಪೂರ್ಣ ಸುಟ್ಟು ಭಸ್ಮ

    ತುಮಕೂರು: ಚಲಿಸುತ್ತಿದ್ದ ಲಾರಿಯಲ್ಲಿ (Lorry) ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ತುಮಕೂರಿನ (Tumakuru) ಕ್ಯಾತಸಂದ್ರ (Kyathasandra) ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

    ಲಾರಿ ಡಾಬಸ್ ಪೇಟೆಯಿಂದ ವಸಂತ ನರಸಾಪುರ ಕಡೆಗೆ ತೆರಳುತ್ತಿತ್ತು. ಈ ವೇಳೆ ಲಾರಿಯ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಲಾರಿಯನ್ನು ಬಿಟ್ಟು ಚಾಲಕ ಕೆಳಗೆ ಇಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೆಂಕಿ ಕೆನ್ನಾಲಿಗೆಗೆ ಲಾರಿ ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಗೂ ಮೊದಲೇ ಉಗ್ರರ ದಾಳಿ ಬಗ್ಗೆ ಎಚ್ಚರಿಸಿದ್ದ ಗುಪ್ತಚರ ಇಲಾಖೆ

    ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಾರಿ ಖಾಲಿಯಿದ್ದ ಹಿನ್ನೆಲೆ ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಇದನ್ನೂ ಓದಿ: ಬೆಂಗಳೂರಲ್ಲಿ ಮುಂದಿನ ಒಂದು ವಾರ ಮಳೆ ಮುನ್ಸೂಚನೆ