Tag: Lord SriRama

  • ಸಿಎಂ ಯೋಗಿ ಆದಿತ್ಯನಾಥ್ ದೇಗುಲ ನಿರ್ಮಾಣ – ಶ್ರೀರಾಮನ ಅವತಾರದಲ್ಲಿ ಯೋಗಿ

    ಸಿಎಂ ಯೋಗಿ ಆದಿತ್ಯನಾಥ್ ದೇಗುಲ ನಿರ್ಮಾಣ – ಶ್ರೀರಾಮನ ಅವತಾರದಲ್ಲಿ ಯೋಗಿ

    ಲಕ್ನೋ: ರಾಮ ಮಂದಿರ (Rama Mandir) ನಿರ್ಮಾಣ ಹಂತದಲ್ಲಿರುವ ನಡುವೆಯೇ ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಅಯೋಧ್ಯೆಯಲ್ಲಿ (Ayodhya) ಪ್ರತ್ಯೇಕ ದೇಗುಲವನ್ನೇ ನಿರ್ಮಾಣ ಮಾಡಲಾಗಿದೆ.

    ಯೋಗಿ ಆದಿತ್ಯನಾಥ್ (Yogi Adityanath) ಅವರ ಪ್ರತಿಮೆಗೆ ವ್ಯಕ್ತಿಯೊಬ್ಬರು ಪೂಜೆ ಮಾಡುತ್ತಿರುವ ಚಿತ್ರಗಳು ಹಾಗೂ ದೇವಸ್ಥಾನದಲ್ಲಿ ನಿರ್ಮಿಸಲಾಗಿರುವ ಯೋಗಿ ಮೂರ್ತಿಯ ಚಿತ್ರಗಳು ಜಾಲತಾಣದಲ್ಲಿ (Social Media) ವೈರಲ್ ಆಗಿವೆ. ಭರತಕುಂಡ್ ಬಳಿಯ ಪುರ್ವಾ ಹಳ್ಳಿಯಲ್ಲಿರುವ ಈ ದೇವಾಲಯವು (Temple) ಯೋಗಿ ಆದಿತ್ಯನಾಥರನ್ನು ಶ್ರೀರಾಮನ (Lord SriRama) ಅವತಾರದಲ್ಲಿ ನೋಡುವಂತೆ ಮಾಡಿದೆ. ಇದನ್ನೂ ಓದಿ: ಫೋಟೋಗಾಗಿ ಬೆಂಗ್ಳೂರು ಎಫ್‍ಸಿ ನಾಯಕ ಸುನಿಲ್ ಛೆಟ್ರಿಯನ್ನು ತಳ್ಳಿದ ಬಂಗಾಳದ ಗವರ್ನರ್

    ರಾಮಮಂದಿರ ನಿರ್ಮಾಣಕ್ಕೆ ಅಂದಾಜು 1,800 ಕೋಟಿ ವೆಚ್ಚ ಆಗಿದೆ. ರಾಮ ಮಂದಿರ ನಿರ್ಮಾಣ ಕಾಮಗಾರಿ ಶೇ.40ಕ್ಕೂ ಹೆಚ್ಚು ಭಾಗ ಪೂರ್ಣಗೊಂಡಿದೆ. 2023ರ ಡಿಸೆಂಬರ್‌ನಿಂದ ಭಕ್ತರು ದೇವರಿಗೆ ಪೂಜೆ ಅರ್ಪಿಸಲು ಅವಕಾಶ ನೀಡಲು ಸಾಧ್ಯವಾಗುವ ನಿರೀಕ್ಷೆ ಇದೆ ಎಂದು ಶ್ರೀ ರಾಮಜನ್ಮಭೂಮಿ ಟ್ರಸ್ಟ್‌ನ ಅಧಿಕಾರಿಗಳು ಇತ್ತೀಚೆಗೆ ತಿಳಿಸಿದ್ದರು. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪಂಜಾಬ್ ಸಿಎಂ ತೂರಾಟ – ವಿಮಾನದಿಂದ ಕೆಳಗಿಳಿಸಿದ Lufthansa?

    ಈ ದೇವಸ್ಥಾನದಲ್ಲಿ ಪ್ರತಿದಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಎರಡು ಬಾರಿ ವಿಷೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಪ್ರಾರ್ಥನೆಯ ನಂತರ, ಭಕ್ತರಿಗೆ ಪ್ರಸಾದವನ್ನೂ ವಿತರಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್ – ಆರೋಪಿ ಬಂಧನದಿಂದ ಶಾಂತವಾದ ದೇವದುರ್ಗ

    ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್ – ಆರೋಪಿ ಬಂಧನದಿಂದ ಶಾಂತವಾದ ದೇವದುರ್ಗ

    ರಾಯಚೂರು: ಶ್ರೀ ರಾಮಚಂದ್ರನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಿನ್ನೆಲೆ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಉಂಟಾಗಿದ್ದ ಬಿಗುವಿನ ವಾತಾವರಣ ಆರೋಪಿಯ ಬಂಧನ ಹಿನ್ನೆಲೆ ಸದ್ಯ ಶಾಂತವಾಗಿದೆ.

    ಜಹೀರ್ ಎಂಬ ಯುವಕ ಶ್ರೀರಾಮನ ಬಗ್ಗೆ ಅವಹೇಳನಕಾರಿ ವಾಟ್ಸಪ್ ಸ್ಟೇಟಸ್ ಹಾಕಿದ್ದ. ಇದರಿಂದ ಆಕ್ರೋಶಗೊಂಡ ನೂರಾರು ಜನ ಹಿಂದೂ ಪರ ಸಂಘಟನೆ ಕಾರ್ಯಕರ್ತರು ರಾತ್ರೋ ರಾತ್ರಿ ದೇವದುರ್ಗ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. ಆರೋಪಿಯನ್ನ ಕೂಡಲೇ ಬಂಧಿಸುವಂತೆ ಆಗ್ರಹಿಸಿ ಹೆಚ್ಚು ಜನ ಸೇರಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

    ದೂರು ಸ್ವೀಕರಿಸಿದ ಎರಡು ಗಂಟೆಗಳ ಅವಧಿಯಲ್ಲೇ ದೇವದುರ್ಗ ಪೊಲೀಸರು ಆರೋಪಿ ಜಹೀರ್ ನನ್ನ ಬಂಧಿಸಿ, ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸಿದರು. ಆದ್ರೆ
    ಬಂಧಿಸಿರುವ ಆರೋಪಿಯನ್ನ ತೋರಿಸುವಂತೆ ಕಾರ್ಯಕರ್ತರು ಪಟ್ಟು ಹಿಡಿದು ಮಧ್ಯ ರಾತ್ರಿವರೆಗೂ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು. ಆರೋಪಿಯ ಬಂಧನದ ಫೋಟೋ ಎಲ್ಲೆಡೆ ಓಡಾಡಿದ್ದರಿಂದ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ನೆರೆದಿದ್ದವರ ಮನವೊಲಿಸಿದ್ದರಿಂದ ವಾತಾವರಣ ತಿಳಿಯಾಗಿದೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.