Tag: lord rama

  • ಸೀತೆಯಿಂದ ಬೇರ್ಪಟ್ಟ ನಂತರ ಶ್ರೀರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ: ತಮಿಳು ಕವಿ ವಿವಾದಾತ್ಮಕ ಹೇಳಿಕೆ

    ಸೀತೆಯಿಂದ ಬೇರ್ಪಟ್ಟ ನಂತರ ಶ್ರೀರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ: ತಮಿಳು ಕವಿ ವಿವಾದಾತ್ಮಕ ಹೇಳಿಕೆ

    ಚೆನ್ನೈ: ತಮಿಳು ಗೀತರಚನೆಕಾರ ಮತ್ತು ಕವಿ ವೈರಮುತ್ತು (Tamil Nadu poet Vairamuthu) ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಶ್ರೀರಾಮನ (Lord Rama) ಕುರಿತು ಮಾಡಿದ ಭಾಷಣವು ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಅವರ ಹೇಳಿಕೆ ಹಿಂದೂಗಳ ಭಾವನೆಗೆ ನೋವುಂಟು ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

    ರಾಮಾಯಣ ಮಹಾಕಾವ್ಯದ ತಮಿಳು ಆವೃತ್ತಿ ಬರೆದ ಮಧ್ಯಕಾಲೀನ ತಮಿಳು ಕವಿ ಕಂಬಾರ ಅವರ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ವೈರಮುತ್ತು, ಶ್ರೀರಾಮನು ತನ್ನ ಪತ್ನಿ ಸೀತಾದೇವಿಯಿಂದ ಬೇರ್ಪಟ್ಟ ನಂತರ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಯಶವಂತ್ ವರ್ಮಾ ನಗದು ವಿವಾದ; ನ್ಯಾಯಾಧೀಶರ ವಿರುದ್ಧ ವಾಗ್ದಂಡನೆ ಪ್ರಸ್ತಾವನೆಗೆ ಲೋಕಸಭೆ ಸ್ಪೀಕರ್ ತ್ರಿಸದಸ್ಯ ಸಮಿತಿ ರಚನೆ

    ಸೀತೆಯಿಂದ ಬೇರ್ಪಟ್ಟ ನಂತರ, ತಾನು ಏನು ಮಾಡುತ್ತಿದ್ದೇನೆಂದು ತಿಳಿಯದ ಮಟ್ಟಿಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಐಪಿಸಿ (ಭಾರತೀಯ ದಂಡ ಸಂಹಿತೆ) ಸೆಕ್ಷನ್ 84 ರ ಅಡಿಯಲ್ಲಿ, ಮಾನಸಿಕ ಅಸ್ವಸ್ಥತೆ ಇರುವ ವ್ಯಕ್ತಿಯು ಮಾಡಿದ ಕೃತ್ಯವು ಅಪರಾಧವಾಗುವುದಿಲ್ಲ ವೈರಮುತ್ತು ತಿಳಿಸಿದ್ದಾರೆ.

    ರಾಮನನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಲಾಗಿದೆ, ಕ್ಷಮಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಜರಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ: ತಾಂತ್ರಿಕ ದೋಷ ಶಂಕೆ – ಲ್ಯಾಂಡಿಂಗ್‌ ವೇಳೆ ಕಾರ್ಗೋ ವಿಮಾನದ ಎಂಜಿನ್‌ನಲ್ಲಿ ಬೆಂಕಿ

    ಪವಿತ್ರ ಹಿಂದೂ ದೇವತೆಗಳನ್ನು ಅಪಮಾನಿಸುವ ಕೆಲಸವನ್ನು ವೈರಮುತ್ತು ಅವರು ಮಾಡುತ್ತಿದ್ದಾರೆ. ಈಗ ರಾಮನನ್ನು ಮಾನಸಿಕವಾಗಿ ಅಸ್ಥಿರ ಎಂದು ನಾಲಿಗೆ ಹರಿಬಿಟ್ಟಿದ್ದಾರೆಂದು ಬಿಜೆಪಿ ನಾಯಕ ಸಿ.ಆರ್‌.ಕೇಶವನ್‌ ಟೀಕಾಪ್ರಹಾರ ನಡೆಸಿದ್ದಾರೆ.

  • ಮಂತ್ರಾಲಯದಲ್ಲಿ ಅದ್ಧೂರಿ ರಾಮೋತ್ಸವ – ಅಭಯರಾಮನ ಅನಾವರಣ

    ಮಂತ್ರಾಲಯದಲ್ಲಿ ಅದ್ಧೂರಿ ರಾಮೋತ್ಸವ – ಅಭಯರಾಮನ ಅನಾವರಣ

    -ಶೋಭಾಯಾತ್ರೆಯಲ್ಲಿ ಮುಸ್ಲಿಂ ಭಕ್ತರು ಭಾಗಿ

    ರಾಯಚೂರು: ಅಯೋಧ್ಯೆಯಲ್ಲಿ (Ayodhya) ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಶುಭಘಳಿಗೆ ಹಿನ್ನೆಲೆ ರಾಯರ ಸನ್ನಿಧಿ ಮಂತ್ರಾಲಯದಲ್ಲೂ (Mantralaya) ಮರ್ಯಾದಾ ಪುರುಷೋತ್ತಮನ ಭವ್ಯಮೂರ್ತಿ ಅನಾವರಣಗೊಂಡಿದೆ.

    36 ಅಡಿ ಎತ್ತರದ ಏಕಶಿಲಾ ಅಭಯರಾಮನ ಮೂರ್ತಿಯನ್ನು ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಪ್ರತಿಷ್ಠಾಪನೆ ಮಾಡಿದ್ದಾರೆ. ಶ್ರೀರಾಮನ ಮೂಲಾರ್ಚಕರಾದ ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ ಭವ್ಯ ರಾಮಮೂರ್ತಿ ಅನಾವರಣಗೊಂಡಿದೆ. ಮಂತ್ರಾಲಯದಲ್ಲಿ ರಾಯರಿಗೂ ಮೊದಲು ನಿತ್ಯ ಶ್ರೀರಾಮನಿಗೆ ಪೂಜೆ ನಡೆಯುತ್ತದೆ. ಈ ಹಿನ್ನೆಲೆ ಮಂತ್ರಾಲಯ ಮಠ ಅಭಯ ಶ್ರೀರಾಮನ ಮೂರ್ತಿ ಸ್ಥಾಪನೆಗೆ ಮುಂದಾಗಿದೆ. ಇದನ್ನೂ ಓದಿ: ಕೊನೆಗೂ ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಉದಯವಾಗಿದೆ: ನರೇಂದ್ರ ಮೋದಿ

    ದೇಶದ ಮೂಲೆ ಮೂಲೆಯಿಂದ ಬಂದ ಸಹಸ್ರಾರು ಭಕ್ತರು ಇಂದು ರಾಯರ ಮಠದಲ್ಲಿ ರಾಮನ ದರ್ಶನ ಪಡೆಯುತ್ತಿದ್ದಾರೆ. ಮಂತ್ರಾಲಯ ರಾಯರ ಮಠ ಹಾಗೂ ಅಭಯರಾಮ (Abhayarama) ಸೇವಾ ಸಮಿತಿಯಿಂದ ಏಕಶಿಲಾ ರಾಮನ ಮೂರ್ತಿ ತಲೆಎತ್ತಿದ್ದು ಮುಂದಿನ ಒಂದು ವರ್ಷದಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ. ಗ್ರೇ ಗ್ರಾನೈಟ್ ಏಕಶಿಲೆಯಲ್ಲಿ ಕೆತ್ತನೆಯಾದ 36 ಅಡಿ ಎತ್ತರದ ಅಭಯರಾಮನ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಇದನ್ನೂ ಓದಿ: ಶಿವಮೊಗ್ಗ: ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠೆ ಸಂಭ್ರಮದ ವೇಳೆ ಅಲ್ಲಾಹು ಅಕ್ಬರ್ ಎಂದು ಕೂಗಿದ ಮುಸ್ಲಿಂ ಮಹಿಳೆ

    ಅಯೋಧ್ಯ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಮಂತ್ರಾಲಯದ ರಾಜಬೀದಿಗಳಲ್ಲಿ ಶ್ರೀರಾಮನ ಶೋಭಾ ಯಾತ್ರೆ ಅದ್ದೂರಿಯಾಗಿ ನಡೆಯಿತು. ಬೃಹತ್ ಶೋಭಾ ಯಾತ್ರೆ ವೇಳೆ ಮಂತ್ರಾಲಯದ ರಾಯರ ಮಠ ಸಂಪೂರ್ಣವಾಗಿ ಕೇಸರಿ ಮಯವಾಗಿತ್ತು. ಕೇಸರಿ ಧ್ವಜಗಳನ್ನ ಹಿಡಿದು ಬೀದಿಗಳಲ್ಲಿ ರಾಯರ ಭಕ್ತರು ಹೆಜ್ಜೆಹಾಕಿದರು. ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಶೋಭಾ ಯಾತ್ರೆ ನಡೆಯಿತು. ರಾಯರ ಮಠದಲ್ಲಿ ಶೋಭಾಯಾತ್ರೆ ಚಾಲನೆ ವೇಳೆ ಮುಸ್ಲಿಂ ಭಕ್ತರು ಸಹ ಭಾಗವಹಿಸಿದ್ದಾರೆ. ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಿದರು. ಇದನ್ನೂ ಓದಿ: ಮಂದಸ್ಮಿತ, ಮುಗ್ಧಮುಖದ ಬಾಲರಾಮನ ಕಣ್ತುಂಬಿಕೊಂಡು ಪುನೀತರಾದ ರಾಮಭಕ್ತರು

  • ಟೆಂಟ್ ಹೌಸ್‌ನಲ್ಲಿದ್ದ ಗೊಂಬೆ ಎಂದಿದ್ದ ಸಚಿವ ಕೆ.ಎನ್.ರಾಜಣ್ಣ ಕುಟುಂಬದಿಂದ ರಾಮ ಜಪ

    ಟೆಂಟ್ ಹೌಸ್‌ನಲ್ಲಿದ್ದ ಗೊಂಬೆ ಎಂದಿದ್ದ ಸಚಿವ ಕೆ.ಎನ್.ರಾಜಣ್ಣ ಕುಟುಂಬದಿಂದ ರಾಮ ಜಪ

    -ಶ್ರೀರಾಮನ ಹೋಮ ಮಾಡಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಸಚಿವ

    ತುಮಕೂರು: ಭಗವಾನ್ ಶ್ರೀರಾಮನನ್ನು (Lord Ram) ಟೆಂಟ್ ಹೌಸ್‌ನಲ್ಲಿದ್ದ ಗೊಂಬೆ ಎಂದಿದ್ದ ಸಚಿವ ಕೆಎನ್ ರಾಜಣ್ಣ (KN Rajanna) ಮತ್ತು ಅವರ ಕುಟುಂಬ ಇಂದು ರಾಮಜಪದಲ್ಲಿ ತೊಡಗಿಕೊಳ್ಳುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.

    ಭಗವಾನ್ ಶ್ರೀರಾಮನನ್ನು ಅವಮಾನಿಸಿಯೂ ಸಚಿವ ರಾಜಣ್ಣ ಮತ್ತವರ ಕುಟುಂಬ ಅಪ್ಪಟ ರಾಮಭಕ್ತರೆನಿಸಿಕೊಂಡಿದ್ದಾರೆ. ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕೆಎನ್ ರಾಜಣ್ಣ ಕುಟುಂಬ ಹೋಮ-ಹವನದಲ್ಲಿ ಪಾಲ್ಗೊಂಡಿದ್ದಾರೆ. ಮಧುಗಿರಿ (Madhugiri) ತಾಲೂಕಿನ ಕಿತ್ತಾಗಳಿಯ ಶ್ರೀರಾಮ ದೇವಸ್ಥಾನದಲ್ಲಿ ಹೋಮ ಮಾಡಲಾಗಿದೆ. ನವಗ್ರಹ, ಗಣಪತಿ ಹಾಗೂ ಶ್ರೀರಾಮ ಹೋಮ ಕೈಗೊಂಡಿದ್ದು, ಕೆಎನ್ ರಾಜಣ್ಣ, ಅವರ ಪತ್ನಿ ಶಾಂತಲ ಹಾಗೂ ಕುಟುಂಬದ ಸದಸ್ಯರು ಹೋಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಈ ಭೂಮಿ ಮೇಲಿನ ಅದೃಷ್ಟಶಾಲಿ ವ್ಯಕ್ತಿ ನಾನು: ಅಯೋಧ್ಯೆಯಲ್ಲಿ ಶಿಲ್ಪಿ ಅರುಣ್‌ ಯೋಗಿರಾಜ್‌ ಮಾತು

    ಪತ್ನಿ ಶಾಂತಲಾರ ಮನೆ ದೇವರು ಶ್ರೀರಾಮ ಹಾಗಾಗಿ ಇಂದು ವಿಶೇಷ ಪೂಜೆ ಮಾಡಿದ್ದಿವಿ ಎಂದು ಕೆ ಎನ್ ರಾಜಣ್ಣ ಪಬ್ಲಿಕ್ ಟಿ.ವಿ.ಗೆ ಹೇಳಿದ್ದಾರೆ. ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದು ಕೆಲವರು ಹೇಳಬಹುದು. ಆದರೆ ನಾನು ಶ್ರೀರಾಮನಲ್ಲಿ ದೈವತ್ವವನ್ನೂ, ಪೂಜಾರ್ಹ ವ್ಯಕ್ತಿ ಎಂದು ನಂಬಿದ್ದೇನೆ. ಹಾಗಾಗಿ ಪೂಜೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಅಯೋಧ್ಯೆ ರಾಮನಿಗೆ ಮೋದಿ ಸಾಷ್ಟಾಂಗ ನಮಸ್ಕಾರ

    ನೂರಾರು ಕೋಟಿ ವೆಚ್ಚ ಮಾಡಿ ದೇವಸ್ಥಾನ ಕಟ್ಟೋ ಬದಲು ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸಬೇಕೆಂಬ ವಾದಕ್ಕೆ ಪ್ರತಿಕ್ರಿಯಿಯಿಸಿದ ಅವರು, ದೇವಸ್ಥಾನವನ್ನು ಕಟ್ಟೋದು ತಪ್ಪಲ್ಲ. ದೇವಸ್ಥಾನದ ಅವಶ್ಯಕತೆ ಇದೆ. ಅಲ್ಲದೇ ನನ್ನ ಹೇಳಿಕೆಯ ಡ್ಯಾಮೆಜ್ ಕಂಟ್ರೋಲ್ ಗೆ ಇಂದು ರಾಮನ ಪೂಜೆ ಮಾಡಿಲ್ಲ. ನಾನೂ ಅಪ್ಪಟ ರಾಮಭಕ್ತ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಮಲಲ್ಲಾ ಆಸೀನರಾದ ತಕ್ಷಣ ಎಲ್ಲಾ ಕಷ್ಟಗಳು ಕೊನೆಗೊಳ್ತವೆ: ಆಚಾರ್ಯ ಸತ್ಯೇಂದ್ರ ದಾಸ್

    ಈ ಹಿಂದೆ ಸಚಿವ ಕೆಎನ್ ರಾಜಣ್ಣ ಪ್ರಭು ಶ್ರೀರಾಮಚಂದ್ರನನ್ನು ಟೆಂಟ್ ಹೌಸ್‌ನಲ್ಲಿದ್ದ ಗೊಂಬೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದರು. ಇದೀಗ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆ ತುಮಕೂರಿನ ರಾಮ ದೇವಸ್ಥಾನದಲ್ಲಿ ಹೋಮ ಹವನದಲ್ಲಿ (Homa Havan) ಭಾಗಿಯಾಗುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಸಚಿವ ಕೆಎನ್ ರಾಜಣ್ಣ ಹೋಮಕ್ಕೆ ಹವಿಸ್ಸು ಹಾಕಿ ನಮಸ್ಕರಿದ್ದು, ಕುಟುಂಬ ಸಮೇತ ಹೋಮ ಕುಂಡಕ್ಕೆ ಹವಿಸ್ಸು ಸಲ್ಲಿಕೆ ಮಾಡಿದ್ದಾರೆ. ಬಳಿಕ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ

  • ಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಜಲಧಾರೆ ಯಾವುದು? – ಶ್ರೀರಾಮ ಲಕ್ಷ್ಮಣ ತೀರ್ಥ ಹೆಸರಿಟ್ಟಿದ್ದು ಏಕೆ ಗೊತ್ತಾ?

    ಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಜಲಧಾರೆ ಯಾವುದು? – ಶ್ರೀರಾಮ ಲಕ್ಷ್ಮಣ ತೀರ್ಥ ಹೆಸರಿಟ್ಟಿದ್ದು ಏಕೆ ಗೊತ್ತಾ?

    – ಕರ್ನಾಟಕದ ಕೊಡಗಿನಲ್ಲೂ ಇವೆ ಶ್ರೀರಾಮನ ಹೆಜ್ಜೆ ಗುರುತುಗಳು

    ಮಡಿಕೇರಿ: ಅಯೋಧ್ಯೆಯಲ್ಲಿ (Ayodhya) ಶ್ರೀರಾಮನ (Lord Rama) ಭವ್ಯ ಮಂದಿರ ಉದ್ಘಾಟನೆಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಇದೆ. ಈ ಹೊತ್ತಿನಲ್ಲಿ ದೇಶದಾದ್ಯಂತ ರಾಮನ ವಿಶೇಷತೆ ಮತ್ತು ಆತ ಬಿಟ್ಟು ಹೋದ ಹೆಜ್ಜೆಗುರುತುಗಳನ್ನು ಪರಿಚಯಿಸುವ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಕೊಡಗು (Kodagu) ಜಿಲ್ಲೆಗೂ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ ಎಂದು ತಿಳಿದುಬಂದಿದೆ.

    ವನವಾಸದ ಕಾಲದಲ್ಲಿ ಸೀತೆಯನ್ನು ಅರಸುತ್ತಾ ಕೊಡಗಿಗೆ ಲಕ್ಷ್ಮಣ ಸಹ ಶ್ರೀರಾಮನ ಜೊತೆಗೆ ಬಂದಿದ್ದ ಎಂಬ ಐತಿಹ್ಯ ಇದೆ. ಅಷ್ಟೇ ಅಲ್ಲದೇ ಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಜಲವೇ ಇವತ್ತು ಕೊಡಗಿನಿಂದ ಹರಿದು ಬಂದು ಕಾವೇರಿಯನ್ನು ಸೇರುವ ಲಕ್ಷ್ಮಣ ತೀರ್ಥ ನದಿ ಎಂದು ಜನ ನಂಬಿದ್ದಾರೆ. ಕೊಡಗಿನ ಮಟ್ಟಿಗೆ ಪ್ರಮುಖ ದೈವ ತಾಣ ಮತ್ತು ಪ್ರವಾಸಿ ತಾಣಗಳಲ್ಲೊಂದಾದ ಇರ್ಪು ಕ್ಷೇತ್ರ ರಾಮ ಭೇಟಿ ನೀಡಿದ ತಾಣವಾಗಿದೆ. ಇದನ್ನೂ ಓದಿ: ತಲೆಗೂದಲಿಗೆ ಹಗ್ಗ ಕಟ್ಟಿಕೊಂಡೇ ರಾಮರಥ ಎಳೆದ ಸ್ವಾಮೀಜಿ; ಅಯೋಧ್ಯೆ ಕಡೆಗೆ 566 ಕಿಮೀ ಯಾತ್ರೆ

    ಇಲ್ಲಿ ರಾಮ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದನಂತೆ. ಸೀತೆಯನ್ನು ಅರಸುತ್ತಾ ವಾನರಾದಿಯಾಗಿ ಹೊರಟ ರಾಮ-ಲಕ್ಷ್ಮಣರು ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ ಎದುರಾಗುತ್ತದೆ. ಎಲ್ಲರೂ ಬೆಟ್ಟಗುಡ್ಡಗಳನ್ನು ದಾಟಿ ಮುನ್ನಡೆಯುತ್ತಿದ್ದಾರೆ. ಲಕ್ಷ್ಮಣ ಮಾತ್ರ ಮುಂದಕ್ಕೆ ಹೆಜ್ಜೆಯಿರಿಸದೇ ಅಲ್ಲಿಯೇ ಕುಳಿತುಕೊಂಡನಂತೆ. ಎಂದೂ ಕೂರದ ರಾಮ ಅಂದು ಕುಳಿತ ಸ್ಥಳವನ್ನು ಇರ್ಪು ಎನ್ನಲಾಗಿದೆ. ಇದನ್ನೂ ಓದಿ: ಮಂತ್ರಾಕ್ಷತೆ ಬಳಿಕ ಮನೆ ಮನೆಗೂ ಭಗವಾಧ್ವಜ – ಬೀದರ್‌ನ ಮಹಿಳೆಯರ ಅಳಿಲು ಸೇವೆ!

    ಇದಾದ ಬಳಿಕ ತನ್ನ ವರ್ತನೆಗೆ ಬೇಸರಗೊಂಡ ಆತ, ಅಣ್ಣ ಶ್ರೀರಾಮನಿಗೆ ಬೇಸರ ಮಾಡಿಬಿಟ್ಟೆ ಎಂಬ ನೋವಿನಲ್ಲಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಆತನಿಗೆ ಸಮಾಧಾನ ಹೇಳಿದ. ನಂತರ ಸಂತಸಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ನಂದಿಸಲು ಬಾಣಬಿಟ್ಟನಂತೆ. ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು ನಂದಿಸಿತು ಎಂಬ ಪ್ರತೀತಿಯಿದೆ. ಅಂದು ಲಕ್ಷ್ಮಣ ಸೃಷ್ಟಿಸಿದ ಜಲಧಾರೆಯೇ ಇಂದಿನ ಇರ್ಪು ಜಲಧಾರೆಯಾಗಿದ್ದು, ಇದಕ್ಕೆ ರಾಮನೇ ಲಕ್ಷ್ಮಣತೀರ್ಥವೆಂದು (Lakshmana Theerta) ಹೆಸರಿಸಿದ ಎಂಬುದು ಎಲ್ಲರ ನಂಬಿಕೆಯಾಗಿದೆ. ಇದನ್ನೂ ಓದಿ: ಹಾವೇರಿಯ ಬ್ಯಾಡಗಿ ಪಟ್ಟಣದಲ್ಲಿ ನೈತಿಕ ಪೊಲೀಸ್‌ ಗಿರಿ – 7 ಮಂದಿ ಮುಸ್ಲಿಂ ಯುವಕರು ಅರೆಸ್ಟ್‌

    ಇರ್ಪುವಿನಲ್ಲಿರುವ ರಾಮೇಶ್ವರ ದೇವಾಲಯ (Rameshwara Temple) ಕೇರಳಿಗರ ವಾಸ್ತುಶಿಲ್ಪದೊಂದಿಗೆ ವೃತ್ತಾಕಾರದ ಗರ್ಭಗುಡಿಯನ್ನು ಹೊಂದಿದೆ. ಇಂದಿಗೂ ಕರ್ನಾಟಕ, ಕೇರಳದ ಜನರು ಬಂದು ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ಕೊಟ್ಟ 10ನೇ ತರಗತಿ ವಿದ್ಯಾರ್ಥಿನಿ!

  • ಬೆಳಕಿನ ಹಬ್ಬಕ್ಕಿದೆ ರಾಮಾಯಣದ ನಂಟು

    ಬೆಳಕಿನ ಹಬ್ಬಕ್ಕಿದೆ ರಾಮಾಯಣದ ನಂಟು

    ನೆ ಹಾಗೂ ಮನಸ್ಸಿನ ಅಂಧಕಾರವನ್ನು ಕಳೆಯುವ ಬೆಳಕನ್ನು ಸಂಭ್ರಮಿಸಿ ಆರಾಧಿಸುವ ಹಬ್ಬವೇ ದೀಪಾವಳಿ. ಭಾರತದಲ್ಲಿ ದೀಪಾವಳಿ (Deepavali) ಹಬ್ಬಕ್ಕೆ ವಿಶೇಷವಾದ ಸ್ಥಾನವಿದೆ. ಕಾರ್ತಿಕ ಮಾಸದ ಮೊದಲನೆಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ.

    ದೀಪಾವಳಿ ಹಬ್ಬಕ್ಕೂ ರಾಮಾಯಣಕ್ಕೂ (Ramayana) ವಿಶೇಷ ನಂಟಿದೆ. ಶ್ರೀ ರಾಮ (Lord Rama) ರಾವಣನನ್ನು ಸಂಹರಿಸಿ ಸೀತೆಯನ್ನು ಮರಳಿ ಅಯೋಧ್ಯೆಗೆ ಕರೆ ತಂದ ದಿನವೇ ದೀಪಾವಳಿ ಎಂಬ ನಂಬಿಕೆ ಇದೆ. ರಾಮ ಅಯೋಧ್ಯೆಗೆ (Ayodhya) ಆಗಮಿಸಿದ ಆ ದಿನ ಅಯೋಧ್ಯೆಯ ಜನ ಆನಂದದಿಂದ ದೀಪಗಳನ್ನು ಬೆಳಗಿಸಿ ರಾಮ ಹಾಗೂ ಸೀತೆಯನ್ನು ಸ್ವಾಗತಿಸಿದ್ದರು. ಇದೇ ಮುಂದೆ ದೀಪಾವಳಿಯಾಗಿ ಆಚರಣೆಗೆ ಬಂತು ಎನ್ನುವ ನಂಬಿಕೆ ಇದೆ. ಇದನ್ನೂ ಓದಿ: ಇಂದು ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ – ಏಕಕಾಲದಲ್ಲಿ ಬೆಳಗಲಿದೆ 24 ಲಕ್ಷ ಹಣತೆ

    ಭಾರತದ ಬೇರೆ ಬೇರೆ ಸ್ಥಳಗಳಲ್ಲಿ ದೀಪಾವಳಿಗೆ ವಿಶೇಷವಾದ ಮಹತ್ವವಿದೆ. ಅಲ್ಲದೇ ವಿಶೇಷವಾದ ಕೆಲವು ಸಂಪ್ರದಾಯಗಳು ಇರುತ್ತವೆ. ಕೆಲವರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ಹಬ್ಬವನ್ನು ಆಚರಿಸುತ್ತಾರೆ. ದೀಪಗಳು ಈ ಹಬ್ಬದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

    ಇನ್ನು ಒಡಿಶಾ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ದೀಪಾವಳಿಯ ರಾತ್ರಿಯಂದು ಮಹಾಕಾಳಿಯ ಪೂಜಿಸುವ ಪದ್ಧತಿಯಿದೆ. ಪಾರ್ವತಿ ದೇವಿಯು ಕಾಳಿ ಅವತಾರವನ್ನು ತಾಳಿ ಅಸುರರನ್ನು ಸಂಹರಿಸಿದ ದಿನವನ್ನು ದೀಪಾವಳಿ ಎಂದು ಕರೆಯುತ್ತಾರೆ ಎಂಬ ನಂಬಿಕೆ ಕೂಡ ಇದೆ.

    ಮಹಾಭಾರತಕ್ಕೂ ದೀಪಾವಳಿಯ ನಂಟಿದೆ. ನರಕಾಸುರನನ್ನು ಶ್ರೀ ಕೃಷ್ಣ ಸಂಹರಿಸಿದ ದಿನವೇ ನರಕ ಚತುರ್ದಶಿ. ಇದನ್ನೇ ದೀಪಾವಳಿ ಎಂದು ಆಚರಿಸಲಾಗುತ್ತದೆ. ದೀಪಾವಳಿ ದಿನವೇ ಪಾಂಡವರು ಅಜ್ಞಾತವಾಸದಿಂದ ಹಸ್ತಿನಾಪುರಕ್ಕೆ ಮರಳಿದ್ದರು ಎಂಬ ಮಾತಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಮುಂದಾದ ಸಚಿವರನ್ನು ಗರ್ಭಗುಡಿ ಬಾಗಿಲಲ್ಲೇ ತಡೆದ ಮಹಿಳಾ ಕಾನ್ಸ್‌ಟೇಬಲ್

  • ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಮೋದಿ ಚಾಲನೆ – ರಾಮ ಜನ್ಮಭೂಮಿಯಲ್ಲಿ ಬೆಳಗಿದವು 18 ಲಕ್ಷ ದೀಪ

    ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಮೋದಿ ಚಾಲನೆ – ರಾಮ ಜನ್ಮಭೂಮಿಯಲ್ಲಿ ಬೆಳಗಿದವು 18 ಲಕ್ಷ ದೀಪ

    ಲಕ್ನೋ: ರಾಮನೂರು ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬ ಒಂದು ದಿನ ಮುಂಚಿತವಾಗಿಯೇ ದೀಪೋತ್ಸವ (Ayodhya Deepotsav 2022) ನಡೆದಿದೆ. ದೀಪೋತ್ಸವಕ್ಕೆ ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಿದ್ದು, 18 ಲಕ್ಷ ದೀಪಗಳನ್ನು ಬೆಳಗುವ ಮೂಲಕ ದಾಖಲೆ ಸೃಷ್ಟಿಸಲಾಯಿತು.

    ಅಯೋಧ್ಯೆಯ (Ayodhya) ಸರಯೂ ತಟದಲ್ಲಿ ಅದ್ಧೂರಿ ದೀಪೋತ್ಸವಕ್ಕೆ ಮೋದಿ ಚಾಲನೆ ನೀಡಿದರು. 18 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಲಾಯಿತು. ದೀಪದ ಹೊಂಬೆಳಕಿನಲ್ಲಿ ಸರಯೂ ನದಿ ತೀರದ 40 ಘಾಟ್‌ಗಳು ಮಿಂದೆದ್ದಿದ್ದು, ಗಿನ್ನಿಸ್ ದಾಖಲೆಯನ್ನೂ ಬರೆದಿದೆ. ಪವಿತ್ರ ಸರಯೂ ನದಿಗೆ ಮಹಾ ಆರತಿ ಬೆಳಗಲಾಗಿದೆ. ಮ್ಯೂಸಿಕಲ್ ಲೇಸರ್ ಶೋ ಮೂಲಕ ರಾಮಾಯಣ ಪ್ರಸ್ತುತಿಪಡಿಸಲಾಯ್ತು. ಈ ಸಂಭ್ರಮಕ್ಕೆ ರಷ್ಯಾ, ಮಾಲ್ಡೀವ್ಸ್, ಶ್ರೀಲಂಕಾ ಪ್ರತಿನಿಧಿಗಳ ಜೊತೆ ಪ್ರಧಾನಿ ಮೋದಿ ಸಾಕ್ಷಿಯಾದರು. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಸೂಪರ್; `ಕಾಂತಾರ’ ಸಿನಿಮಾಗೆ ಇಂಡೋ-ಪಾಕ್ ಕದನ ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೆಂಡ್

    ಸಂಜೆ ಐದು ಗಂಟೆಗೆ ರಾಮಲೀಲ್ಲಾ (Ramaleela) ದರ್ಶನ ಮಾಡಿದ ಮೋದಿ, ನಂತರ ನಿರ್ಮಾಣ ಹಂತದ ರಾಮಮಂದಿರವನ್ನು ಪರಿಶೀಲಿಸಿದ್ರು. ರಾಮಕಥಾ ಉದ್ಯಾನಕ್ಕೂ ಭೇಟಿ ನೀಡಿದ್ರು. 4 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಇದೇ ವೇಳೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಇದನ್ನೂ ಓದಿ: ಗುಲಾಮಿ ಮನಸ್ಥಿತಿಯಿಂದ ಆಚೆ ಬರಲು ರಾಮನ ಪ್ರೇರಣೆ ಪಡೆಯಬೇಕು: ಮೋದಿ

    ಇದೇ ವೇಳೆ, ಕೊರಿಯಾ ದೇಶದ ಜೊತೆಗಿನ ಬಾಂಧವ್ಯದ ದ್ಯೋತಕವಾಗಿ ಪ್ರಧಾನಿ ಕೋರಿಯಾ ಪಾರ್ಕ್ (Coria Park) ಉದ್ಘಾಟಿಸಿದ್ರು. ಶತಮಾನಗಳ ಹಿಂದೆ ಅಯೋಧ್ಯೆ ಯುವರಾಣಿ, ಕೊರಿಯಾ ಯುವರಾಜನನ್ನು ವರಿಸಿದ್ದರು. ಅಂದಹಾಗೇ, ದೇಗುಲಗಳನ್ನು ಸಿಂಗರಿಸಲು 2,500 ಟನ್ ಹೂಗಳನ್ನು ಬಳಸಲಾಗಿದೆ. 22 ಸಾವಿರ ಸ್ವಯಂ ಸೇವಕರು ದಾಖಲೆಯ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು. 

    2021 ರಲ್ಲಿ ಅಯೋಧ್ಯೆ ಆಡಳಿತವು ದೀಪೋತ್ಸವದಲ್ಲಿ 9,41,551 ದೀಪ ಬೆಳಗಿಸುವ ಮೂಲಕ ವಿಶ್ವದಾಖಲೆ ಮಾಡಿತ್ತು. ಆದರೆ ಉಜ್ಜಯಿನಿ ದೇವಸ್ಥಾನದಲ್ಲಿ ಮಹಾಶಿವರಾತ್ರಿಯಂದು 11,71,078 ದೀಪಗಳನ್ನು ಬೆಳಗಿಸಿ ಈ ದಾಖಲೆ ಮುರಿಯಲಾಗಿತ್ತು. ಇದೀಗ 18 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಅಯೋಧ್ಯೆ ಮತ್ತೊಂದು ಗಿನ್ನಿಸ್ ದಾಖಲೆ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಅಯೋಧ್ಯೆಯಿಂದ ಶ್ರೀಲಂಕಾಗೆ ಶ್ರೀರಾಮ ನಡೆದದ್ದಕ್ಕಿಂತ ಹೆಚ್ಚು ರಾಹುಲ್‌ ಗಾಂಧಿ ಪಾದಯಾತ್ರೆ ಮಾಡ್ತಿದ್ದಾರೆ – ಕಾಂಗ್ರೆಸ್‌ ನಾಯಕ

    ಅಯೋಧ್ಯೆಯಿಂದ ಶ್ರೀಲಂಕಾಗೆ ಶ್ರೀರಾಮ ನಡೆದದ್ದಕ್ಕಿಂತ ಹೆಚ್ಚು ರಾಹುಲ್‌ ಗಾಂಧಿ ಪಾದಯಾತ್ರೆ ಮಾಡ್ತಿದ್ದಾರೆ – ಕಾಂಗ್ರೆಸ್‌ ನಾಯಕ

    ಮುಂಬೈ: ಶ್ರೀರಾಮ (Lord Rama) ಅಯೋಧ್ಯೆಯಿಂದ ಶ್ರೀಲಂಕಾಗೆ ನಡೆದದ್ದಕ್ಕಿಂತ ಹೆಚ್ಚು ಪಾದಯಾತ್ರೆಯನ್ನು ರಾಹುಲ್‌ ಗಾಂಧಿಯವರು (Rahul Gandhi) ಮಾಡುತ್ತಿದ್ದಾರೆ ಎಂದು ಮಹಾರಾಷ್ಟ್ರದ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ (Nana Patole) ಬಣ್ಣಿಸಿದ್ದಾರೆ.

    ಅಯೋಧ್ಯೆಯಿಂದ (Ayodhya) ಶ್ರೀಲಂಕಾದವರೆಗೆ (Sri Lanka) ಶ್ರೀರಾಮ ಕೈಗೊಂಡಿದ್ದ ಪಾದಯಾತ್ರೆಯನ್ನು ರಾಹುಲ್ ಗಾಂಧಿಯವರ ಪಾದಯಾತ್ರೆಗೆ ಹೋಲಿಸಿದ ರಾಜಸ್ಥಾನದ ಸಚಿವ ಪರ್ಸಾದಿ ಲಾಲ್ ಮೀನಾ ಅವರ ಹೇಳಿಕೆಯನ್ನು ಪಟೋಲೆ ಬೆಂಬಲಿಸಿದ್ದಾರೆ. ಅಲ್ಲದೇ ರಾಮ ಹಾಗೂ ರಾಹುಲ್‌ ಗಾಂಧಿ ಹೆಸರಿಗೆ ಮೊದಲಕ್ಷರ ʼರಾʼಯಿಂದ ಶುರುವಾಗುವುದು ಕಾಕತಾಳೀಯವೂ ಹೌದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೈತರಿಗೆ ಭರ್ಜರಿ ಗಿಫ್ಟ್ – ಗೋಧಿ ಸೇರಿ 6 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

    ರಾಹುಲ್ ಗಾಂಧಿ ಅವರ ಪಾದಯಾತ್ರೆ ಐತಿಹಾಸಿಕವಾಗಲಿದೆ. ಶ್ರೀರಾಮ ಅಯೋಧ್ಯೆಯಿಂದ ಶ್ರೀಲಂಕಾಗೆ ಕಾಲ್ನಡಿಗೆಯಲ್ಲಿ ಹೋಗಿದ್ದರು. ರಾಹುಲ್ ಗಾಂಧಿ ಅದಕ್ಕಿಂತಲೂ ಹೆಚ್ಚಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿದ್ದಾರೆ ಎಂದು ಪರ್ಸಾದಿ ಲಾಲ್‌ ಮೀನಾ ಹೇಳಿಕೆ ನೀಡಿದ್ದರು.

    ಈ ಹೇಳಿಕೆಯನ್ನು ಬೆಂಬಲಿಸಿ ಮಾತನಾಡಿರುವ ಪಟೋಲೆ, ಭಗವಾನ್ ಶ್ರೀರಾಮ ಕೂಡ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ್ದರು. ಶಂಕರಾಚಾರ್ಯರು ಕೂಡ ಅದೇ ದಾರಿಯಲ್ಲಿ ನಡೆದರು. ಹಾಗೆಯೇ ರಾಹುಲ್ ಗಾಂಧಿ ಪಾದಯಾತ್ರೆಯ ರೂಪದಲ್ಲಿ ಮಾಡುತ್ತಿದ್ದಾರೆ. ಜನರು ಅವರೊಂದಿಗೆ ಸೇರುತ್ತಿದ್ದಾರೆ. ಇದು ಭಗವಾನ್ ರಾಮನೊಂದಿಗೆ ಹೋಲಿಕೆಯಲ್ಲ. ಕಾಕತಾಳೀಯವೆಂದರೆ, ಭಗವಾನ್ ರಾಮ ಮತ್ತು ರಾಹುಲ್ ಗಾಂಧಿಯವರ ಹೆಸರುಗಳು “ರಾ”ಯಿಂದ ಪ್ರಾರಂಭವಾಗುತ್ತವೆ. ಆದರೆ ಬಿಜೆಪಿಯವರು ತಮ್ಮ ನಾಯಕರನ್ನು ದೇವರೊಂದಿಗೆ ಹೋಲಿಸಿದಂತೆ, ನಾವು ರಾಹುಲ್ ಅವರನ್ನು ರಾಮನಿಗೆ ಹೋಲಿಸುವುದಿಲ್ಲ. ದೇವರು ಎಂದರೆ ದೇವರು. ರಾಹುಲ್ ಗಾಂಧಿ ಮನುಷ್ಯ. ಅವರು ಮಾನವೀಯತೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಾರದ ಕೆಟ್ಟದಿನ ಸೋಮವಾರ – ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಅಧಿಕೃತ ಘೋಷಣೆ

    ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra) ಮಂಗಳವಾರ ಬೆಳಗ್ಗೆ ಆಂಧ್ರಪ್ರದೇಶ ಪ್ರವೇಶಿಸಿದೆ. ಯಾತ್ರೆಯನ್ನು 150 ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]