Tag: lord Ram

  • ಬಿಜೆಪಿಯವರು ಬೀದಿ ಬೀದಿಯಲ್ಲಿ ರಾಮನನ್ನು ಆಟ ಆಡಿಸಿದ್ದಾರೆ: ಮಧು ಬಂಗಾರಪ್ಪ

    ಬಿಜೆಪಿಯವರು ಬೀದಿ ಬೀದಿಯಲ್ಲಿ ರಾಮನನ್ನು ಆಟ ಆಡಿಸಿದ್ದಾರೆ: ಮಧು ಬಂಗಾರಪ್ಪ

    ಚಿತ್ರದುರ್ಗ: ರಾಮನನ್ನು (Lord Ram) ಬೀದಿ ಬೀದಿಯಲ್ಲಿ ಬಿಜೆಪಿಯವರು (BJP) ಆಟ ಆಡಿಸಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ವ್ಯಂಗ್ಯವಾಡಿದ್ದಾರೆ.

    ಅಯೋಧ್ಯೆಯ (Ayodhya) ರಾಮಮಂದಿರ (Ram Mandir) ಉದ್ಘಾಟನೆ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಗೆ ನಿಜವಾಗಲೂ ರಾಮನ ಶಾಪ ತಟ್ಟಲಿದೆ. ರಾಮ ನಮ್ಮ ನಿಮ್ಮ ಹೃದಯದಲ್ಲಿದ್ದಾನೆ. ನಮ್ಮ ಹಣೆಬರಹದಲ್ಲಿ ಯಾವಾಗ ಬರೆದಿರುತ್ತದೆ ಆಗ ಅಯೋಧ್ಯೆಗೆ ಹೋಗಿ ರಾಮನ ದರ್ಶನ ಮಾಡುತ್ತೇವೆ. ಅಯೋಧ್ಯೆಗೆ ಹೋಗಿರದ ಬಿಜೆಪಿಯವರು ರಾಮದ್ರೋಹಿಗಳಾ? ದೇಶದ ದೊಡ್ಡ ದೊಡ್ಡ ಮನುಷ್ಯರನ್ನು ಬ್ಯಾರಿಕೇಡ್ ಬಳಿ ನಿಲ್ಲಿಸಿದ್ದಾರೆ. ಅಲ್ಲಿನ ಸ್ಥಿತಿ ನೆನೆದು ಕೈಮುಗಿದು ನಮಃ ಶಿವಾಯ ಅಂತಾ ಹೇಳಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ನನಗೆ ರಾಮನ ಬಗ್ಗೆ ಭಕ್ತಿ ಇಲ್ಲ, ಅಯೋಧ್ಯೆಗೆ ಹೋಗಲ್ಲ: ಪ್ರಿಯಾಂಕ್ ಖರ್ಗೆ

    ಇದೇ ವೇಳೆ ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ಅಡ್ಡಿ ಕುರಿತು ಮಾತನಾಡಿದ ಅವರು, ಕಿತಾಪತಿ ಮಾಡುವುದರಲ್ಲಿ ಬಿಜೆಪಿ ನಂಬರ್ ಒನ್. ಒಳ್ಳೆಯದು ನಡೆದಿದೆ ಎಂದಾಗ ಹೀಗೆ ಮಾಡುವುದು ಬಿಜೆಪಿಗೆ ಹೊಸದಲ್ಲ. ಗಾಂಧಿ ಕುಟುಂಬ ತ್ಯಾಗ, ಬಲಿದಾನ ಮಾಡಿದೆ ರಾಹುಲ್ ಗಾಂಧಿ ಯಾತ್ರೆ ಮೇಲೆ ಕಲ್ಲು ತೂರಾಟದಿಂದ ಅವರ ಕೆಟ್ಟ ಬುದ್ಧಿ ತೋರಿಸಿದ್ದಾರೆ. ಅಧಿಕಾರದಲ್ಲಿ ಇರುವಾಗ ತುಂಬಾ ಜವಾಬ್ದಾರಿ ಇರಬೇಕು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ಅಪ್ರತಿಮ ದೇಶಪ್ರೇಮಿ: ಸಿದ್ದರಾಮಯ್ಯ

    ಬಿಜೆಪಿ ಕುರಿತು ಪ್ರತಿಕ್ರಿಯಿಸಿ, ಬೇರೆ ಧರ್ಮಕ್ಕೆ ಗೌರವ ಕೊಡುವವರು ನಿಜವಾದ ಹಿಂದೂಗಳು. ಹಿಂದೂ ಎಂದು ಹೇಳಿಕೊಳ್ಳುವುದು ಬೇಡ. ಅದು ನಮ್ಮ ಬ್ಲಡ್, ನಮ್ಮ ಮಾತಲ್ಲಿದೆ. ಧರ್ಮದ ಹೆಸರಲ್ಲಿ ರಾಜಕಾರಣ ಒಳ್ಳೆಯ ಪದ್ಧತಿ ಅಲ್ಲ. ಅಂಬೇಡ್ಕರ್ ಅವರ ಸಂವಿಧಾನವೇ ನಮ್ಮ ದೇಶದ ದೇವರು. ಮನೆತನಕ್ಕೆ ಮತ್ತು ಪಕ್ಷಕ್ಕೆ ದೇವರನ್ನು ಅಡ ಇಡಬಾರದು. ನೀವು ರಾಮನ ಭಕ್ತರು ಎಂದರೆ ಬೇರೆಯವರು ವಿರೋಧವೇ? ನಾವು ಎಲ್ಲಾ ಧರ್ಮ ಮತ್ತು ಎಲ್ಲಾ ದೇವರ ಭಕ್ತರು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಕೇಳಲು ಕಷ್ಟ: ಸಿದ್ದರಾಮಯ್ಯ

    ವಿಪಕ್ಷದಲ್ಲಿದ್ದಾಗ ಏನು ಬೇಕಾದರೂ ನಾವು ಪ್ರಶ್ನೆ ಮಾಡಬಹುದು. ವಿರೋಧ ಪಕ್ಷಗಳು ಹತ್ತಿಕ್ಕುವುದನ್ನು ನಾವು ವಿರೋಧಿಸುತ್ತೇವೆ. ನಾನು ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷನಾಗಿದ್ದೆ. ಗ್ಯಾರಂಟಿ ಯೋಜನೆ ಬರುವಲ್ಲಿ ನಾನೂ ಕಾರಣೀಕರ್ತ. ಬಹುತೇಕ ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪಿದ್ದು, ಆದರಲ್ಲಿ ಬಿಜೆಪಿಗೆ ಮತ ಹಾಕಿದವರಿಗೂ ಸಹ ಗ್ಯಾರಂಟಿ ಯೋಜನೆ ತಲುಪುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಿಜವಾದ ಬ್ರಾಹ್ಮಣರು, ಸ್ವಾಮೀಜಿಗಳು ಮೋದಿಯನ್ನು ಗರ್ಭಗುಡಿಗೆ ಬಿಡಬಾರದಿತ್ತು: ವೀರಪ್ಪ ಮೊಯ್ಲಿ

  • ಗುಲಾಮಿ ಮನಸ್ಥಿತಿಯಿಂದ ಆಚೆ ಬರಲು ರಾಮನ ಪ್ರೇರಣೆ ಪಡೆಯಬೇಕು: ಮೋದಿ

    ಗುಲಾಮಿ ಮನಸ್ಥಿತಿಯಿಂದ ಆಚೆ ಬರಲು ರಾಮನ ಪ್ರೇರಣೆ ಪಡೆಯಬೇಕು: ಮೋದಿ

    ಲಕ್ನೋ: ಗುಲಾಮಿ ಮನಸ್ಥಿತಿಯಿಂದ ಆಚೆ ಬರಲು ನಾವು ಶ್ರೀರಾಮನ (Lord Ram) ಪ್ರೇರಣೆ ಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದರು.

    ದೀಪಾವಳಿ ಹಿನ್ನೆಲೆಯಲ್ಲಿ ಅಯೋಧ್ಯೆಯ (Ayodhya) ದೀಪೋತ್ಸವ (Deepotsav) ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಸ್ವಾತಂತ್ರ್ಯ ದಿನಾಚರಣೆಯಲ್ಲಿ ಐದು ಕರ್ತವ್ಯಗಳನ್ನು ಹೇಳಿದ್ದೆ. ಆ ಎಲ್ಲ ಪ್ರೇರಣೆಗಳು ಶ್ರೀರಾಮನಿಂದ ಬಂದಿದೆ. ಜನನಿ ಜನ್ಮ ಭೂಮಿ ಎಂದು ಹೇಳಿದ್ದಾರೆ. ಗುಲಾಮಿ ಮಾನಸಿಕತೆಯಿಂದ ಆಚೆ ಬರಲು ನಾವು ಶ್ರೀರಾಮನ ಪ್ರೇರಣೆ ಪಡೆಯಬೇಕು. ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನೆ ಮಾಡಲಾಗುತ್ತಿತ್ತು. ಅದರ ಪರಿಣಾಮ ಏನಾಯಿತು? ನಮ್ಮ ಸಂಸ್ಕೃತಿ ಹಿಂದೆ ಉಳಿಯಿತು ಎಂದು ಬೇಸರ ವ್ಯಕ್ತಪಡಿಸಿದರು.

    ಅಯೋಧ್ಯೆ, ಕಾಶಿ ನೋಡುವಾಗ ನೋವಾಗುತ್ತಿತ್ತು. ಕಳೆದ 8 ವರ್ಷಗಳಲ್ಲಿ ತೀರ್ಥ ಕ್ಷೇತ್ರಗಳ ಅಭಿವೃದ್ಧಿ ಮಾಡಿದೆ. ವಾರಣಾಸಿ, ಅಯೋಧ್ಯೆ, ಕೇದಾರನಾಥ, ಬದರಿನಾಥ ಸೇರಿ ಹಲವು ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಿದೆ. ಅಯೋಧ್ಯೆಯೂ ಹೊಸ ಆಯಾಮದ ಅಭಿವೃದ್ಧಿ ಹೊಂದುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭ ಮಾಡಲಾಗುತ್ತಿದೆ. ಅಯೋಧ್ಯೆ ಅಭಿವೃದ್ಧಿ ಸುತ್ತಲಿನ ಪ್ರದೇಶಗಳಿಗೆ ಆಗಲಿದೆ. ಇವುಗಳಿಂದ ಯುವಕರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ ಎಂದು ಭರವಸೆ ನೀಡಿದರು.

    ರಾಮ ಅಯೋಧ್ಯೆ ರಾಜನಾಗಿದ್ದ. ಆದರೆ ಅವರನ್ನು ಇಡೀ ದೇಶ ಪೂಜಿಸುತ್ತದೆ. ನಾವು ಅವರ ಆದರ್ಶಗಳಲ್ಲಿ ನಡೆಯಬೇಕು. ಅಯೋಧ್ಯೆ ಕರ್ತವ್ಯ ನಗರಿಯಾಗಬೇಕು. ಅಯೋಧ್ಯೆಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗಲಿದೆ. ವಿದೇಶದಿಂದ ಶ್ರೀರಾಮನ ದರ್ಶನ ಪಡೆಯಲು ಬರಲಿದ್ದಾರೆ. ದೇಶಾದ್ಯಂತ ಭಕ್ತರು ಬರಲಿದ್ದಾರೆ. ಅವರನ್ನು ಗೌರವಯುತವಾಗಿ ಕಾಣಬೇಕು. ಅಯೋಧ್ಯೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆ ಕರ್ತವ್ಯವನ್ನು ಅಯೋಧ್ಯೆ ಜನರು ನಿಷ್ಠೆಯಿಂದ ನಿಭಾಯಿಸಬೇಕು ಎಂದು ಅಯೋಧ್ಯೆಯಿಂದ ದೇಶದ ಜನರಿಗೆ ಮನವಿ ಮಾಡಿದರು.

    75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದೇವೆ. ನಾವು ಮತ್ತಷ್ಟು ಎತ್ತರಕ್ಕೆ ಹೋಗಲು ಶ್ರೀರಾಮ ಶಕ್ತಿ ನೀಡಲಿದ್ದಾರೆ. ಶ್ರೀರಾಮನ ಆಡಳಿತದಲ್ಲಿ ಸಬ್ ಕಾ ವಿಕಾಸ್ ಇತ್ತು. ಕಠಿಣ ಗುರಿಗಳನ್ನು ಮುಟ್ಟಲು ರಾಮನ ಆದರ್ಶ ಪ್ರೇರಣೆಯಾಗಲಿದೆ. ಅಯೋಧ್ಯೆಯಲ್ಲಿ ದೀಪೋತ್ಸವ ನಾವು ಸಂಕಲ್ಪ ಮಾಡಬೇಕು. ಶ್ರೀರಾಮನಿಂದ ಎಷ್ಟು ಕಲಿಯಬಹುದು, ಅದನ್ನೆಲ್ಲ ಕಲಿಯಬೇಕು. ಶ್ರೀರಾಮನನ್ನು ಮರ್ಯಾದ ಪುರುಷ ಎಂದು ಕರೆಯುತ್ತಾರೆ. ರಾಮನು ಧರ್ಮ ಮತ್ತು ಕರ್ತವ್ಯದ ಜೀವಂತ ಉದಾಹರಣೆಯಾಗಿದ್ದರು. ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಶ್ರೀರಾಮನನ್ನು ಅವಹೇಳನ ಮಾಡಿದ್ದ ಪ್ರಾಧ್ಯಾಪಕಿ ವಜಾ

    ಶ್ರೀರಾಮನನ್ನು ಅವಹೇಳನ ಮಾಡಿದ್ದ ಪ್ರಾಧ್ಯಾಪಕಿ ವಜಾ

    ಚಂಡೀಗಢ: ಶ್ರೀರಾಮನನ್ನು ಅವಹೇಳನ ಮಾಡಿದ ಆರೋಪದ ಮೇಲೆ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಸಹಾಯಕ ಪ್ರಾಧ್ಯಾಪಕಿಯನ್ನು ವಜಾಗೊಳಿಸಲಾಗಿದೆ.

    ಪಂಜಾಬ್‍ನ ಜಂದರ್‌ನಲ್ಲಿ ಈ ಘಟನೆ ನಡೆದಿದೆ. ಗುಸಾರ್ಂಗ್ ಪ್ರೀತ್ ಕೌರ್ ವಜಾಗೊಂಡ ಸಹಾಯಕ ಪ್ರಾಧ್ಯಾಪಕಿ. ಶ್ರೀರಾಮನಿಗೆ ಅವಹೇಳನ ಮಾಡುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ಆಕೆಯನ್ನು ವಜಾಗೊಳಿಸುವಂತೆ ಒತ್ತಾಯಿಸಲಾಗಿತ್ತು.

    ವೀಡಿಯೋದಲ್ಲಿ ಏನಿದೆ?: ಶ್ರೀರಾಮ ಒಳ್ಳೆಯ ವ್ಯಕ್ತಿಯಲ್ಲ. ರಾವಣ ಒಳ್ಳೆಯ ವ್ಯಕ್ತಿ. ರಾಮ ಒಬ್ಬ ಕುತಂತ್ರದ ವ್ಯಕ್ತಿ ಎಂದು ನಾನು ಕಂಡುಕೊಂಡಿದ್ದೇನೆ. ಸೀತೆಯನ್ನು ಬಲೆಗೆ ಬೀಳಿಸಲು ಎಲ್ಲಾ ಉಪಾಯ ಮಾಡಿದನು. ಅವನು ಸೀತೆಯನ್ನು ತೊಂದರೆಗೆ ಸಿಲುಕಿಸಿದನು ಮತ್ತು ರಾವಣನ ಮೇಲೆ ಎಲ್ಲಾ ದೋಷಗಳನ್ನು ಹಾಕಿದನು. ಇಡೀ ಜಗತ್ತು ರಾಮನನ್ನು ಪೂಜಿಸುತ್ತಿದೆ ಮತ್ತು ರಾವಣ ಕೆಟ್ಟ ವ್ಯಕ್ತಿ ಎಂದು ಹೇಳುತ್ತಿದೆ ಎಂದು ಹೇಳಿದ್ದಳು. ಇದನ್ನೂ ಓದಿ: ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು: ಡಾ.ಕೆ.ಸುಧಾಕರ್

    ಈ ಬಗ್ಗೆ ವಿಶ್ವವಿದ್ಯಾಲಯ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಗುರ್ಸಾಂಗ್ ಪ್ರೀತ್ ನೀಡುವ ಹೇಳಿಕೆಗಳೆಲ್ಲವೂ ವೈಯಕ್ತಿಕವಾಗಿವೆ. ಇವು ಯಾವುದು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿಲ್ಲ. ನಾವು ಯಾವಾಗಲೂ ಜಾತ್ಯಾತೀತ ವಿಶ್ವವಿದ್ಯಾನಿಲಯವಾಗಿದ್ದೇವೆ. ಎಲ್ಲಾ ಧರ್ಮಗಳು ಮತ್ತು ನಂಬಿಕೆಯ ಜನರನ್ನು ಸಮಾನವಾಗಿ ಪ್ರೀತಿ ಮತ್ತು ಗೌರವದಿಂದ ನೋಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ: ಆನಂದ್ ಸಿಂಗ್