Tag: Lord Hanuman

  • ಹನುಮನ ಜನ್ಮಸ್ಥಳಕ್ಕಾಗಿ ನಿಲ್ಲದ ರಾಜ್ಯಗಳ ಕ್ಯಾತೆ – ಹನುಮಂತ ಹುಟ್ಟಿದ್ದು ಗೋವಾದಲ್ಲಿ ಎಂದ ಶ್ರೀನಿವಾಸ್ ಖಲಾಪ್

    ಹನುಮನ ಜನ್ಮಸ್ಥಳಕ್ಕಾಗಿ ನಿಲ್ಲದ ರಾಜ್ಯಗಳ ಕ್ಯಾತೆ – ಹನುಮಂತ ಹುಟ್ಟಿದ್ದು ಗೋವಾದಲ್ಲಿ ಎಂದ ಶ್ರೀನಿವಾಸ್ ಖಲಾಪ್

    ಕೊಪ್ಪಳ: ಹನುಮ ಜನ್ಮಸ್ಥಳದ ಬಗ್ಗೆ ತಿಂಗಳಿಗೊಂದು ರಾಜ್ಯ ಕ್ಯಾತೆ ತೆಗೆಯುತ್ತಿದೆ. ಹನುಮಂತ ಗೋವಾದಲ್ಲಿ ಜನಿಸಿದ್ದಾನೆ ಎಂದು ವಾಲ್ಮೀಕಿ ರಾಮಾಯಣದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಗೋವಾದ ಮಾಜಿ ಡಿಸಿಎಂ ರಮಾಕಾಂತ್ ಖಲಾಪ್ ಅವರ ಪುತ್ರ, ಇತಿಹಾಸ ಸಂಶೋಧಕ ಶ್ರೀನಿವಾಸ್ ಖಲಾಪ್ ಹೊಸ ವಾದ ಹುಟ್ಟು ಹಾಕಿದ್ದಾರೆ.

    ಕರ್ನಾಟಕದ ಕೊಪ್ಪಳದ ಅಂಜನಾದ್ರಿಯ ಕಿಷ್ಕಿಂಧೆ ಅಲ್ಲ, ಆಂಧ್ರ ಪ್ರದೇಶದ ತಿರುಮಲ ತಿರುಪತಿಯ ಆಕಾಶಗಂಗಾವೇ ಆಂಜನೇಯ ಹುಟ್ಟಿದ ಸ್ಥಳ ಅಂತ ಟಿಟಿಡಿ ವಾದಿಸಿತ್ತು. ವಾರದ ಹಿಂದಷ್ಟೇ ನಾಸಿಕ್‍ನಲ್ಲಿರುವ ಅಂಜನೇರಿ ಕೋಟೆಯೇ ಹನುಮ ಜನ್ಮಸ್ಥಳ ಅಂತ ಮಹಾರಾಷ್ಟ್ರದ ಸ್ವಾಮೀಜಿಗಳು ಧರ್ಮಸಂಸತ್ ನಡೆಸಿ, ಗಲಾಟೆಯಿಂದ ಅರ್ಧಕ್ಕೇ ಮೊಟುಕಾಗಿತ್ತು. ಇದನ್ನೂ ಓದಿ: ಗೋ ಶಾಲೆಯಲ್ಲಿ ಒಂದು ತಿಂಗಳ ಕಾಲ ಸೇವೆ – ಷರತ್ತು ವಿಧಿಸಿ ಆರೋಪಿಗೆ ಜಾಮೀನು

    ಇದರ ಬೆನ್ನಲ್ಲೇ ಶ್ರೀನಿವಾಸ್ ಖಲಾಪ್, ಹನುಮಂತನ ತಾಯಿ ಅಂಜನಿದೇವಿ ದ್ವೀಪವೊಂದರ ಕಡಲ ತೀರದಲ್ಲಿ ತಪಸ್ಸು ಮಾಡುತ್ತಾರೆ. ಅದಕ್ಕೆ ವರವಾಗಿ ವಾಯುದೇವ ಹನುಮನನ್ನು ಪುತ್ರನಾಗಿ ಕರುಣಿಸುತ್ತಾರೆ. ಆ ದ್ವೀಪವನ್ನು ಅಂಜನಿ ದ್ವೀಪ ಎಂದು ಕರೆಯಲಾಗಿತ್ತು. ಇದೀಗ `ಅಂಜೆದಿನ ದೀಪ’ ಎನ್ನುವ ಹೆಸರಿದೆ. ಈ ದ್ವೀಪ ಕಾರವಾರಕ್ಕೆ ಹತ್ತಿರವಿದೆಯಾದರೂ ಐತಿಹಾಸಿಕ ಹಿನ್ನೆಲೆಗಳನ್ನು ಗುರುತಿಸಿದರೆ ಇದು ಗೋವಾಕ್ಕೆ ಸೇರಿದ್ದಾಗಿದೆ ಅನ್ನೋದು ಶ್ರೀನಿವಾಸ್ ಖಲಾಪ್ ವಾದವಾಗಿದೆ. ಆದರೆ, ದೇಶದ ಹಲವು ರಾಜ್ಯಗಳಲ್ಲಿ ಹನುಮನಿಗೆ ಸಂಬಂಧಿಸಿದ ಹೆಸರುಳ್ಳ ಸ್ಥಳಗಳು, ಊರುಗಳಿವೆ. ಆದರೆ, ಹನುಮ ಹುಟ್ಟಿದ್ದು, ವಾನರ ಸಾಮ್ರಾಜ್ಯ ಇದ್ದಿದ್ದು ಕಿಷ್ಕಿಂಧೆ ರಾಜ್ಯದಲ್ಲಿ ಮಾತ್ರ ಅಂತ ರಾಜ್ಯದ ಇತಿಹಾಸಕಾರರು ಹೇಳುತ್ತಿದ್ದಾರೆ. ಇದನ್ನೂ ಓದಿ: ವಾರಣಾಸಿ ಸರಣಿ ಬಾಂಬ್ ಸ್ಫೋಟ – 16 ವರ್ಷಗಳ ನಂತರ ಆರೋಪಿಯನ್ನು ಗುರುತಿಸಿದ ಹೈಕೋರ್ಟ್

     

  • ಹನುಮಂತನನ್ನು ದಲಿತ ಎಂದ ಯೋಗಿ ಆದಿತ್ಯನಾಥ್‍ಗೆ ನೋಟಿಸ್

    ಹನುಮಂತನನ್ನು ದಲಿತ ಎಂದ ಯೋಗಿ ಆದಿತ್ಯನಾಥ್‍ಗೆ ನೋಟಿಸ್

    ಜೈಪುರ್: ಹನುಮಂತನನ್ನು ದಲಿತ ಎಂದು ಕರೆದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಾಜಸ್ಥಾನದ ಬಲಪಂಥೀಯ ಗುಂಪೊಂದು ಲೀಗಲ್ ನೋಟಿಸ್ ನೀಡಿದೆ.

    ರಾಜಸ್ಥಾನದ ಸರ್ವ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸುರೇಶ್ ಮಿಶ್ರಾ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಯೋಗಿ ಅವರ ಹೇಳಿಕೆಯಿಂದಾಗಿ ಹನುಮಂತನ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ರಾಜಕೀಯ ಲಾಭಕ್ಕಾಗಿ ದೇವರ ಹೆಸರನ್ನು ಬಳಸಿಕೊಳ್ಳುವುದು ಸರಿಯಲ್ಲ. ಹೀಗಾಗಿ ಮೂರು ದಿನಗಳ ಒಳಗಾಗಿ ಯೋಗಿ ಆದಿತ್ಯನಾಥ್ ಕ್ಷಮೆ ಕೇಳಬೇಕು ಎಂದು ನೋಟಿಸ್ ನಲ್ಲಿ ಒತ್ತಾಯಿಸಿದ್ದಾರೆ.

    ಸಿಎಂ ಆದಿತ್ಯನಾಥ್ ಹೇಳಿದ್ದೇನು?:
    ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಅಲ್ವಾರ್ ಜಿಲ್ಲೆಯ ಮಾಳಖೇಡದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದಿದ್ದರು. ಈ ವೇಳೆ ನಡೆದ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹನುಮಂತ ಒಬ್ಬ ಅರಣ್ಯ ನಿವಾಸಿ. ರಾಮನ ಆಶಯದಂತೆ ಎಲ್ಲರನ್ನು ಒಂದುಗೂಡಿಸುವುದು ಹನುಮಂತನ ನಿರ್ಧಾರವಾಗಿತ್ತು. ಹೀಗಾಗಿ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಭಾರತೀಯ ಸಮುದಾಯಗಳನ್ನು ಸಂಪರ್ಕಿಸುವ ಕೆಲಸ ಮಾಡಿದ ಒಬ್ಬ ದಲಿತ ಎಂದಿದ್ದರು.

    ಈ ಹೇಳಿಗೆ ವಿರುದ್ಧ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಕಿಡಿಕಾರಿದ್ದಾರೆ. ಬಿಜೆಪಿಯವರು ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜಾತಿಯ ಆಧಾರ ಮೇಲೆ ದೇವರನ್ನು ಪ್ರತ್ಯೇಕಿಸಿ ಪ್ರಚಾರ ಮಾಡಿದ್ದಾರೆ ಎಂದು ದೂರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv