Tag: Loose Mada Yogeesh

  • ತಮಿಳಿನಲ್ಲಿ ಲೂಸ್ ಮಾದ ಯೋಗಿಗೆ ನೆಗೆಟಿವ್ ರೋಲ್

    ತಮಿಳಿನಲ್ಲಿ ಲೂಸ್ ಮಾದ ಯೋಗಿಗೆ ನೆಗೆಟಿವ್ ರೋಲ್

    ನ್ನಡದ ಪ್ರತಿಭಾವಂತ ನಟ, ಲೂಸ್ ಮಾದ (Loose Mada Yogi) ಖ್ಯಾತಿಯ ಯೋಗಿ ಇದೀಗ ತಮಿಳು (Tamil) ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ನೆಗೆಟಿವ್ ರೋಲ್ (Negative Role) ಮಾಡಲಿದ್ದಾರೆ. ಅದೊಂದು ರಗಡ್ ಪಾತ್ರವಾಗಿದ್ದು, ವಿಶೇಷವಾಗಿ ಗೆಟಪ್ ಇರಲಿದೆ ಎಂದು ಹೇಳಲಾಗುತ್ತಿದೆ.

    ಇದು ಅರುಣ್ ವಿಜಯ್ (Arun Vijay) ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾವಾಘಿದ್ದು, ಯೋಗಿ ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರೆ. ತಿರುಕುಮಾರನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಇದೇ ಮೊದಲ ಬಾರಿಗೆ ಯೋಗಿ ತಮಿಳು ಚಿತ್ರರಂಗಕ್ಕೆ ಹಾರಿದ್ದು ವಿಶೇಷ.

    ಈ ನಡುವೆ ಯೋಗಿ   ತಮ್ಮ 50ನೇ ಚಿತ್ರದ ಮೂಲಕ ಸದ್ದು ಮಾಡುತ್ತಿದ್ದಾರೆ. ‘ರೋಸಿ’ ಸಿನಿಮಾದಲ್ಲಿ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಶ್ರೀನಗರ ಕಿಟ್ಟಿ ಬೆನ್ನಲ್ಲೇ ಇದೀಗ ಒರಟ ಪ್ರಶಾಂತ್ (Orata Prashanth) ಕೂಡ ‘ರೋಸಿ’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ‘ರೋಸಿ’ (Rosy Film) ಚಿತ್ರದಲ್ಲಿ ಸಖತ್ ರಗಡ್ ಆಗಿ ಪ್ರಶಾಂತ್ ಕಾಣಿಸಿಕೊಂಡಿದ್ದಾರೆ.‌

    ಒರಟ ಪ್ರಶಾಂತ್ ಮಾಡುತ್ತಿರುವ ಪಾತ್ರದ ಹೆಸರು ಸ್ವಾಮಿ ಅಣ್ಣ ಎಂದು. ಚಿತ್ರತಂಡ ಒರಟ ಪ್ರಶಾಂತ್ ಅವರ ಪಾತ್ರವನ್ನು ಪೋಸ್ಟರ್‌ ಮೂಲಕ ಪರಿಚಯಿಸಿದ್ದಾರೆ. ಇದರಲ್ಲಿ ಖಡಕ್ & ಮಾಸ್ ಪಾತ್ರದ ಮೂಲಕ ಅವರು ಗಮನ ಸೆಳೆದಿದ್ದಾರೆ. ಈ ಸಿನಿಮಾ ಬಗ್ಗೆ ಇರುವ ನಿರೀಕ್ಷೆ ಈಗ ಹೆಚ್ಚಾಗಿದೆ. ಒರಟನ ನಯಾ ಅವತಾರ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

     

    ‘ರೋಸಿ’ ಚಿತ್ರಕ್ಕೆ ಶೂನ್ಯ ಅವರ ನಿರ್ದೇಶನ ಇದೆ. ಈ ಚಿತ್ರ ಪಕ್ಕಾ ಗ್ಯಾಂಗ್‌ಸ್ಟರ್ ಸಿನಿಮಾವಾಗಿದ್ದು, ಒರಟ ಪ್ರಶಾಂತ್ ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸ್ವಾಮಿ ಅಣ್ಣ ಎಂಬುದು ಅವರ ಪಾತ್ರದ ಹೆಸರು. ಈ ಸಿನಿಮಾದಲ್ಲಿ ಇನ್ನೂ ಎರಡು ಮುಖ್ಯ ಪಾತ್ರಗಳಿವೆ. ಸದ್ಯದಲ್ಲೇ ಮಾಹಿತಿ ರಿವೀಲ್ ಮಾಡುತ್ತೇವೆ ಎಂದಿದ್ದಾರೆ ನಿರ್ದೇಶಕ ಶೂನ್ಯ.

  • ಲೂಸ್ ಮಾದ ಯೋಗಿ 50ನೇ ಚಿತ್ರಕ್ಕೆ ಸಿಗಲಿಲ್ಲ ‘ರೋಸಿ’ ಟೈಟಲ್?

    ಲೂಸ್ ಮಾದ ಯೋಗಿ 50ನೇ ಚಿತ್ರಕ್ಕೆ ಸಿಗಲಿಲ್ಲ ‘ರೋಸಿ’ ಟೈಟಲ್?

    ದುನಿಯಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಲೂಸ್ ಮಾದ ಯೋಗಿ (Loose Mada Yogeesh) ಇದೀಗ ಐವತ್ತನೇ ಸಿನಿಮಾ ಪೂರೈಸಿದ್ದಾರೆ. ಮೊನ್ನೆಯಷ್ಟೇ ಅವರ 50ನೇ ಸಿನಿಮಾದ ಮುಹೂರ್ತ ಕೂಡ ಆಗಿದೆ. ಈ ಚಿತ್ರಕ್ಕೆ ರೋಸಿ ಎಂದು ಹೆಸರಿಡಲಾಗಿತ್ತು. ಆದರೆ, ಈ ಟೈಟಲ್ ಸಿಗುವುದು ಬಹುತೇಕ ಕಷ್ಟ ಎನ್ನಲಾಗುತ್ತಿದೆ. ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಘೋಷಣೆಯಾಗಿದ್ದು, ಅವರು ಚಿತ್ರದ ಟೈಟಲ್ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ.

    ಅರ್ಜುನ್ ಜನ್ಯ (Arjun Janya) ಚೊಚ್ಚಲ  ನಿರ್ದೇಶನದ, ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ (Rosy 45) ಶೀರ್ಷಿಕೆಯನ್ನು  ನೋಂದಾಯಿಸಲಾಗಿತ್ತು. ಈಗ ಯೋಗಿ ನಟನೆಯ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ‘ರೋಸಿ’ ಎಂದು ಶೀರ್ಷಿಕೆ ಇಡಲಾಗಿತ್ತು. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿತ್ತು. ಇದನ್ನೂ ಓದಿ: ನಟ ಚೇತನ್‌ ಭಾರತದ ವೀಸಾ ರದ್ದು

    ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿಯಲ್ಲಿ ಮೊದಲು ಶೀರ್ಷಿಕೆ ನೋಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ವಾಣಿಜ್ಯ ಮಂಡಳಿ ಹೇಳಿದೆ. ಹಾಗಾಗಿ ಸೂರಜ್ ಪ್ರೊಡಕ್ಷನ್ಸ್ ಗೆ ರೋಸಿ 45(Rosy 45) ಶೀರ್ಷಿಕೆ ಸೇರಿದೆ.

    ಇನ್ನು‌ ಮುಂದೆ ಯಾರು ಕೂಡ ‘ರೋಸಿ’ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್ ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ ಎಂದು ರೋಸಿ 45 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ.