Tag: loose mada

  • ಭೂಮಿ ಮೇಲೆ ಕೆಟ್ಟೋಗಿರೋ ನನ್ಮಕ್ಕಳಿಗೆ ಇನ್ನೂ ಸಾವು ಬಂದಿಲ್ಲ- ಅಪ್ಪು ನಿಧನಕ್ಕೆ ಯೋಗಿ ಕಂಬನಿ

    ಭೂಮಿ ಮೇಲೆ ಕೆಟ್ಟೋಗಿರೋ ನನ್ಮಕ್ಕಳಿಗೆ ಇನ್ನೂ ಸಾವು ಬಂದಿಲ್ಲ- ಅಪ್ಪು ನಿಧನಕ್ಕೆ ಯೋಗಿ ಕಂಬನಿ

    – ದೇವರು ಪುನೀತ್ ಅವರನ್ನ ಬೇಗ ಕರೆದುಕೊಂಡು ಬಿಟ್ಟ

    ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ದೇಶಾದ್ಯಂತ ಜನ ಕಂಬನಿ ಮಿಡಿದಿದ್ದಾರೆ. ಅಂತೆಯೇ ಪುನೀತ್ ಜೊತೆ ಒಡನಾಟ ಹೊಂದಿದ್ದ ನಟ ಲೂಸ್ ಮಾದ ಯೋಗಿ ಇಂದು ಕಂಬನಿ ಮಿಡಿಯುತ್ತಲೇ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

    PUNEET RAJKUMAR

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯೋಗಿ, ಪುನೀತ್ ರಾಜ್‍ಕುಮಾರ್ ನನಗೆ ಇನ್ನೊಬ್ಬ ಅಣ್ಣ ಇದ್ದಂತೆ ಇದ್ದರು. ಅವರ ಜೊತೆ ಸಾಕಷ್ಟು ಒಡನಾಟ ಕೂಡ ಇತ್ತು. ಅವರ ಜೊತೆ ಚಿತ್ರೀಕರಣದ ವೇಳೆ 200 ಕ್ಕೂ ಹೆಚ್ಚು ದಿನ ಕಾಲ ಕಳೆದಿದ್ದೆ ಎಂದು ಭಾವುಕರಾದರು. ಇದನ್ನೂ ಓದಿ: ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಕೊನೆಗೂ ಅವಕಾಶ

    ಮುಂದಿನ ದಿನಗಳಲ್ಲಿ ನನ್ನ ಬ್ಯಾನರ್ ನಲ್ಲೇ ಒಟ್ಟಿಗೆ ಚಿತ್ರ ಮಾಡೋಣ ಅಂತ ಹೇಳಿದ್ದರು. ಆದರೆ ವಿಧಿ ಅದನ್ನ ಕೈಗೂಡುವುದಕ್ಕೆ ಬಿಡಲಿಲ್ಲ. ಭೂಮಿ ಮೇಲೆ ಸಾಕಷ್ಟು ಕೆಟ್ಟ ನನ್ನ ಮಕ್ಕಳಿಗೆ ಇನ್ನೂ ಸಾವು ಬಂದಿಲ್ಲ. ಆದರೆ ಇಂತಹ ವ್ಯಕ್ತಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಅವರ ಕುಟುಂಬ, ಅಭಿಮಾನಿಗಳಿಗೆ ನೋವು ತಡೆದುಕೊಳ್ಳೊ ಶಕ್ತಿಯನ್ನ ದೇವರು ಕೊಡಲಿ ಎಂದು ಹೇಳಿದರು. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

    ಇದೇ ವೇಳೆ ಪುನೀತ್ ಅಭಿಮಾನಿಗಳಲ್ಲಿ ಮನವಿ ಕೂಡ ಮಾಡಿಕೊಂಡರು. ಅಭಿಮಾನಿಗಳು ದುಡುಕಿ ಕೆಟ್ಟ ನಿರ್ಧಾರಗಳನ್ನ ಕೈಗೊಳ್ಳಬೇಡಿ ಎಂದು ತಿಳಿಸಿದರು. ಇದನ್ನೂ ಓದಿ: ಪುನೀತ್ ನೆನೆದು ನಟಿ ರಾಧಿಕಾ ಕುಮಾರಸ್ವಾಮಿ ಕಣ್ಣೀರು

    ಈ ಹಿಂದೆ ನಟ ಸೃಜನ್ ಲೋಕೇಶ್ ಕೂಡ ಆಕ್ರೋಶ ಹೊರಹಾಕಿದ್ದರು. ಎಂಥೆಂತಹ ಕೆಟ್ಟ ಮನಸ್ಸಿರುವ ಕಳ್ಳರು, ಕೊಲೆಗಾರರು ಎಲ್ಲರೂ ಬದುಕಿರುತ್ತಾರೆ. ಆದರೆ ಸಾವಿರಾರು ಜನರಿಗೆ ಸಹಾಯ ಮಾಡುತ್ತಿದ್ದಂತಹ ವ್ಯಕ್ತಿ, 46 ವರ್ಷ ದಷ್ಟಪುಷ್ಟವಾಗಿದ್ದಂತಹ ಉತ್ತಮ ಲೈಫ್ ಸ್ಟೈಲ್ ಇದ್ದಂತಹ ವ್ಯಕ್ತಿ ಹೋಗುತ್ತಾರೆ ಎಂದರೆ ಇದಕ್ಕೆ ಅರ್ಥನೇ ಇಲ್ಲ. ಇದು ಆಗಬಾರದಿತ್ತು. ಇದು ಅನ್ಯಾಯ. ದೇವರು ಮಾಡಿರುವ ಅನ್ಯಾಯ ಎಂದು ಭಾವುಕರಾಗಿದ್ದರು.

  • ‘ಲಂಕೆ’ ಟ್ರೇಲರ್ ಕಂಡು ಪ್ರೇಕ್ಷಕರು ಥ್ರಿಲ್ – ಸಿನಿಮಾ ನೋಡೋದೊಂದೇ ಬಾಕಿ ಎಂದ ಯೋಗಿ ಫ್ಯಾನ್ಸ್

    ‘ಲಂಕೆ’ ಟ್ರೇಲರ್ ಕಂಡು ಪ್ರೇಕ್ಷಕರು ಥ್ರಿಲ್ – ಸಿನಿಮಾ ನೋಡೋದೊಂದೇ ಬಾಕಿ ಎಂದ ಯೋಗಿ ಫ್ಯಾನ್ಸ್

    ಲೂಸ್ ಮಾದ ಯೋಗಿ ಅಭಿನಯದ ಬಹು ನಿರೀಕ್ಷಿತ ‘ಲಂಕೆ’ ಚಿತ್ರ ಗಣೇಶ ಹಬ್ಬದಂದು ಚಿತ್ರಮಂದಿರಕ್ಕೆ ಲಗ್ಗೆ ಇಡೋದು ಕನ್ಫರ್ಮ್ ಆಗಿದೆ. ಟೀಸರ್ ಹಾಗೂ ಹಾಡುಗಳು ಈಗಾಗಲೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೀಗ ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಸಿನಿಮಾ ಮೇಲಿನ ಕುತೂಹಲ ಹಾಗೂ ನಿರೀಕ್ಷೆ ಎರಡನ್ನೂ ದುಪ್ಪಟ್ಟು ಮಾಡಿದೆ.

    ‘ಲಂಕೆ’ ಚಿತ್ರದ ಮಾಸ್ ಟ್ರೇಲರ್ ಬಿಡುಗಡೆಯಾಗಿದೆ. ಕಿಕ್ಕೇರಿಸೋ ಟ್ರೇಲರ್ ಕಂಡು ಲೂಸ್ ಮಾದ ಅಭಿಮಾನಿ ಬಳಗ ಫಿದಾ ಆಗಿದ್ದಾರೆ. ಯೋಗಿ ಸ್ಟೈಲು, ಮ್ಯಾನರಿಸಂ, ಆಕ್ಷನ್ ಸೀನ್ ನೆಕ್ಸ್ಟ್ ಲೆವೆಲ್ ನಲ್ಲಿದ್ದು, ಬಾಕ್ಸ್ ಆಫೀಸ್ ನಲ್ಲಿ ಲಂಕೆ ಕಮಾಲ್ ಮಾಡೋದು ಪಕ್ಕಾ ಎನ್ನುವ ಮಾತುಗಳು ಕೇಳಿ ಬರೋಕೆ ಶುರುವಾಗಿದೆ. ಸ್ಟಾರ್ ಕಲಾವಿದರ ದಂಡು, ಪವರ್ ಫುಲ್ ಆಕ್ಷನ್ ಸೀನ್ ಗಳ ಅಬ್ಬರ ಕಂಡು ಸಿನಿರಸಿಕರು ಬೆರಗಾಗಿದ್ದಾರೆ. ಮಾಸ್ ಸಿನಿಮಾ ಪ್ರಿಯರಿಗೆ ರಸದೌತಣ ನೀಡೋದ್ರಲ್ಲಿ ಡೌಟೇ ಇಲ್ಲ ಎನ್ನುವಂತಿದೆ ಟ್ರೇಲರ್. ಇದನ್ನೂ ಓದಿ: ಸುಂದರ್ ರಾಜ್, ಸರ್ಜಾ ಫ್ಯಾಮಿಲಿ ಸದಾ ಒಂದಾಗಿರುತ್ತದೆ: ಧ್ರುವ ಸರ್ಜಾ

    ಮಾಸ್ ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಚಿತ್ರಕ್ಕೆ ನಿರ್ದೇಶಕ ರಾಮ್ ಪ್ರಸಾದ್ ಸೂತ್ರಧಾರ. ಲಂಕೆ ಔಟ್ ಅಂಡ್ ಔಟ್ ಕಮರ್ಶಿಯಲ್ ಪ್ಯಾಕೇಜ್ ಸಿನಿಮಾ, ಹಾಗಂತ ಇಲ್ಲಿ ಬರೀ ಆಕ್ಷನ್ ಸೀನ್, ಪವರ್ ಫುಲ್ ಡೈಲಾಗ್ ಮಾತ್ರವಿರದೆ ಫ್ಯಾಮಿಲಿ ಎಲಿಮೆಂಟ್. ಲವ್, ಸೆಂಟಿಮೆಂಟ್ ಎಲ್ಲವೂ ಇದೆ. ದಿ ಗ್ರೇಟ್ ಎಂಟಟೈನರ್ಸ್ ಬ್ಯಾನರ್ ನಲ್ಲಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತೆ ಎನ್ನೋದು ಚಿತ್ರತಂಡದ ಅನಿಸಿಕೆ. ‘ಲಂಕೆ’ ಅಡ್ಡದಲ್ಲಿ ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ ನಾಯಕಿಯರಾಗಿ ಮಿಂಚಿದ್ದಾರೆ. ಇದನ್ನೂ ಓದಿ:ಸ್ವರ್ಗದ ಬಾಗಿಲನ್ನು ತೆಗೆದುಕೊಟ್ಟ ಯುವರಾಜನೇ ರಾಯನ್: ಮೇಘನಾ ರಾಜ್

    ಕಾವ್ಯಾ ಶೆಟ್ಟಿ ಇದೇ ಮೊದಲ ಬಾರಿಗೆ ನೆಗೆಟಿವ್ ರೋಲ್ ನಲ್ಲಿ ಬಣ್ಣಹಚ್ಚಿರೋದು ಚಿತ್ರದ ವಿಶೇಷ ಸಂಗತಿ. ಉಳಿದಂತೆ ಸಂಚಾರಿ ವಿಜಯ್, ಸುಚೇಂದ್ರ ಪ್ರಸಾದ್, ಶೋಬ್ ರಾಜ್, ಶರತ್ ಲೋಹಿತಾಶ್ವ, ಗಾಯಿತ್ರಿ ಜೈರಾಮ್, ಡ್ಯಾನಿ ಕುಟ್ಟಪ್ಪ ಚಿತ್ರದ ತಾರಾಂಗಣದಲ್ಲಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ನಿರ್ದೇಶನ, ರಮೇಶ್ ಬಾಬು ಛಾಯಾಗ್ರಾಹಣ ಚಿತ್ರಕ್ಕಿದೆ. ರವಿವರ್ಮ, ಪಳನಿರಾಜ್, ಅಶೋಕ್ ಚಿತ್ರಕ್ಕೆ ಒಂದಕ್ಕಿಂತ ಒಂದು ಅಧ್ಬುತ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ. ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಸೆಪ್ಟೆಂಬರ್ 10ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: ಚಿರು, ಮೇಘನಾ ಪುತ್ರ ಈಗ ‘ರಾಯನ್ ರಾಜ್ ಸರ್ಜಾ’

  • ಲೂಸ್ ಮಾದನಿಗೆ ಹುಟ್ಟುಹಬ್ಬದ ಸಂಭ್ರಮ- ಗಿಫ್ಟ್ ಆಗಿ ಲಂಕೆ ಟೀಸರ್ ರಿಲೀಸ್

    ಲೂಸ್ ಮಾದನಿಗೆ ಹುಟ್ಟುಹಬ್ಬದ ಸಂಭ್ರಮ- ಗಿಫ್ಟ್ ಆಗಿ ಲಂಕೆ ಟೀಸರ್ ರಿಲೀಸ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಲೂಸ್ ಮಾದ ಯೋಗಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರವಾಗಿದೆ.

    ಹೌದು, ಯೋಗಿ ಇಂದು 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಣನಕುಂಟೆಯ ತಮ್ಮ ನಿವಾಸದಲ್ಲಿ ಸೆಲೆಬ್ರೇಟ್ ಮಾಡಲಾಗಿದೆ. ಸಿಂಪಲ್ ಆಗಿ ಕೇಕ್ ಕಟ್ ಮಾಡಿ ಯೋಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಇತ್ತ ಚಿತ್ರತಂಡ ಲಂಕೆ ಚಿತ್ರದ ಮೋಶನ್ ಪೋಸ್ಟರ್ ಅನ್ನು ಉಡುಗೊರೆಯಾಗಿ ನೀಡಿದೆ. ಸದ್ಯ ಯೋಗಿ ನಾಯಕನಾಗಿ ನಟಿಸಿರುವ ಲಂಕೆ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಯೋಗಿ ಬರ್ತ್‍ಡೇ ಪ್ರಯುಕ್ತ ಇಂದು ಬೆಳಗ್ಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ ಲಂಕೆ ಮೋಶನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಲಂಕೆ ಚಿತ್ರದಲ್ಲಿ ನಾಯಕ ಯೋಗಿ ಜೊತೆಗೆ ಕೃಷಿ ತಾಪಂಡ, ಕಾವ್ಯ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಇತ್ತೀಚೆಗೆ ನಿಧನರಾದ ನಟ ಸಂಚಾರಿ ವಿಜಯ್ ಕೂಡ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಹೊಸ ಗೆಳೆಯನನ್ನು ಅದ್ಧೂರಿಯಾಗಿ ಮನೆಗೆ ಸ್ವಾಗತಿಸಿದ ‘ಉರಿ’ ನಟ..!

    ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸಾಹಸ ಪ್ರಧಾನ ಕಥಾಹಂದರ ಹೊಂದಿರುವ ಚಿತ್ರವು “ದಿ ಗ್ರೇಟ್ ಎಂಟರ್‍ಟೈನರ್” ಬ್ಯಾನರ್‍ನಲ್ಲಿ ಪಟೇಲ್ ಶ್ರೀನಿವಾಸ್ (ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನವಿದೆ. ಇದನ್ನೂ ಓದಿ: ಮರೆಯಲಾಗದ ಎರಡು ಸಿನಿಮಾಗಳು ಒಂದೇ ದಿನ: ಸುದೀಪ್

  • ಲೂಸ್ ಮಾದ ಮಗಳ ನಾಮಕರಣದಲ್ಲಿ ದರ್ಶನ್ ಭಾಗಿ

    ಲೂಸ್ ಮಾದ ಮಗಳ ನಾಮಕರಣದಲ್ಲಿ ದರ್ಶನ್ ಭಾಗಿ

    ಬೆಂಗಳೂರು: ನಟ ಲೂಸ್ ಮಾದ ಯೋಗಿ ಅವರು ತಮ್ಮ ಮಗಳ ನಾಮಕರಣವನ್ನು ಸರಳವಾಗಿ ಆಚರಿಸಿದ್ದಾರೆ. ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಯೋಗಿ ದಂಪತಿಗೆ ಶುಭಕೋರಿದ್ದಾರೆ.

    ಯೋಗಿ ಅವರು ತಮ್ಮ ಮಗಳಿಗೆ ‘ಶ್ರೀನಿಕಾ’ ಎಂದು ನಾಮಕರಣ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದರ್ಶನ್, ಯೋಗಿ ಹಾಗೂ ಅವರ ಪತ್ನಿ ಸಾಹಿತ್ಯಗೆ ಶುಭಾಶಯ ತಿಳಿಸಿದ್ದಾರೆ. ಸದ್ಯ ಈ ಸಮಾರಂಭಕ್ಕೆ ಯೋಗಿ ತಮ್ಮ ಕುಟುಂಬದ ಆಪ್ತರು ಹಾಗೂ ಗೆಳೆಯರಿಗೆ ಮಾತ್ರ ಆಹ್ವಾನ ನೀಡಿದ್ದರು.

    ಮೇ 5ರಂದು ಸುಮಾರು ಬೆಳಗ್ಗೆ 5 ಗಂಟೆಗೆ ಸಾಹಿತ್ಯ ಅವರು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮದರ್ ವುಡ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗು ಹುಟ್ಟಿದ ವೇಳೆ ಯೋಗೀಶ್ ಕುಟುಂಬದವರು ತಮ್ಮ ಮನೆಗೆ ಯುವರಾಣಿ ಬಂದಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸಿದ್ದರು. ಅಲ್ಲದೆ ಯೋಗಿ ತಮ್ಮ ಮುದ್ದು ಮಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಖುಷಿ ಪಟ್ಟಿದ್ದರು.

    ಯೋಗಿ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅವರನ್ನು ಕುಟುಂಬದ ಸಮ್ಮುಖದಲ್ಲಿ 2017 ನವೆಂಬರ್ 2ರಂದು ಮದುವೆಯಾಗಿದ್ದರು. ಸಾಹಿತ್ಯ ಅವರು ಐಟಿ ಉದ್ಯೋಗಿಯಾಗಿದ್ದು, ಯೋಗಿ ಅವರು ಬಾಲ್ಯದ ಗೆಳತಿಯಾಗಿದ್ದಾರೆ. ಇವರಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿರುವ ವಿಚಾರವನ್ನು ಪೋಷಕರಿಗೆ ತಿಳಿಸಿ, ಕುಟುಂಬಸ್ಥರ ಒಪ್ಪಿಗೆ ಪಡೆದುಕೊಂಡು ಎಲ್ಲರ ಸಮ್ಮುಖದಲ್ಲಿ ಮದುವೆ ಆಗಿದ್ದರು.

    ಯೋಗಿ ಅವರು ವಿಜಯ್‍ಪ್ರಸಾದ್ ನಿರ್ದೇಶನದ `ಪರಿಮಳ ಲಾಡ್ಜ್’, ದಯಾಳ್ ಪದ್ಮನಾಭನ್ ಅವರ `ಒಂಬತ್ತನೇ ದಿಕ್ಕು’ ಸೇರಿದಂತೆ `ಲಂಕೆ’, `ಕಂಸ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ತಮಿಳಿನ ಖ್ಯಾತ ನಿರ್ದೇಶಕ ಸಮುದ್ರಕಣಿ ಅವರೊಂದಿಗೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ.

  • ಅಚ್ಛೇ ದಿನ್ ಯಾರಿಗೂ ಬಂದಿಲ್ಲ- ಕೈ ಪರ ಪ್ರಚಾರಕ್ಕಿಳಿದ ಲೂಸ್ ಮಾದ ಯೋಗಿ

    ಅಚ್ಛೇ ದಿನ್ ಯಾರಿಗೂ ಬಂದಿಲ್ಲ- ಕೈ ಪರ ಪ್ರಚಾರಕ್ಕಿಳಿದ ಲೂಸ್ ಮಾದ ಯೋಗಿ

    ಬೆಂಗಳೂರು: ಲೂಸ್ ಮಾದ ಅಂತಲೇ ಖ್ಯಾತಿಗಳಿಸಿರುವ ನಟ ಯೊಗೀಶ್ ಇಂದು ಕಾಂಗ್ರೆಸ್ ಪರ ಪ್ರಚಾರಕ್ಕಿಳಿದಿದ್ದಾರೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ಪರವಾಗಿ ಪರಪ್ಪನ ಅಗ್ರಹಾರದಲ್ಲಿ ರೋಡ್ ಶೋನಲ್ಲಿ ಲೂಸ್ ಮಾದ ಭಾಗವಹಿಸಿ ಪ್ರಚಾರ ನಡೆಸಿದರು.

    ಇದೇ ವೇಳೆ ಮಾತನಾಡಿದ ಯೋಗಿ, ಜೈಲಿಗೆ ಹೋಗಿ ಬಂದವರಿಗೆ ಮತ ಹಾಕಬೇಡಿ ಎಂದು ಹೇಳುವ ಮೂಲಕ ಯಡಿಯೂರಪ್ಪ ನವರಿಗೆ ಟಾಂಗ್ ನೀಡಿದ್ದಾರೆ.

    ಬಿಜೆಪಿ ಸರ್ಕಾರದವರು ಯಾವತ್ತೂ ಅಚ್ಛೇ ದಿನ್ ಅಚ್ಛೇ ದಿನ್ ಅಂತ ಹೇಳುತ್ತಾನೇ ಇದ್ದಾರೆ. ಅಚ್ಛೇ ದಿನ್ ಯಾರಿಗೂ ಬಂದಿಲ್ಲ. ಅದು ಏನು ಅನ್ನೋದು ಅರ್ಥನೂ ಆಗಿಲ್ಲ ನಮಗೆ. ಎಲ್ಲರೂ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿ. ನಾನು ಇರೋವರೆಗೂ ಕಾಂಗ್ರೆಸ್ ಗೇ ಸಪೋರ್ಟ್ ಮಾಡೋದು. ನೀವೂ ಕೂಡ ಕಾಂಗ್ರೆಸ್ ಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಡಿಕೇರಿಯಲ್ಲಿ ಮಳೆ ಹುಡ್ಗಿಯಿಂದ ಜೆಡಿಎಸ್ ಪರ ಪ್ರಚಾರ- ಹಾಡಿ ಜನರ ಸಮಸ್ಯೆ ಆಲಿಸಿ ಗದ್ಗದಿತರಾದ ಪೂಜಾಗಾಂಧಿ

    ಬಿಜೆಪಿಯವರು ಯಾವ ಕೆಲಸನೂ ಮಾಡಿಕೊಟ್ಟಿಲ್ಲ. ನಿಮ್ಮಲ್ಲರನ್ನೂ ಮೆಚ್ಚಿಸಬೇಕು ಅಂತ ನಾನು ಇದನ್ನು ಹೇಳುತ್ತಿಲ್ಲ. ನನ್ನ ಸ್ವಂತ ಅನುಭವ ಇದು. ಹೀಗಾಗಿ ನಾನು ನೋಡಿರೋ ವಿಚಾರವನ್ನು ನಿಮಗೆ ಹೇಳಬೇಕು. ಅವರು ಯಾವ ಕೆಲಸನೂ ಮಾಡಲ್ಲ. ಜೈಲಿನಲ್ಲಿದ್ದವರನ್ನು ಇಂದು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅವರೊಬ್ಬರು ಮುಖ್ಯಮಂತ್ರಿ ಅಭ್ಯರ್ಥಿಯಂತೆ. ಕಳ್ಳರಿಗೆಲ್ಲ ನೀವು ಮತ ಹಾಕಬೇಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೊನೆಗೂ ಪ್ರಚಾರಕ್ಕಿಳಿದ ಕುರುಕ್ಷೇತ್ರದ ಅಭಿಮನ್ಯು- ತಂದೆಯ ಹಾದಿಯಲ್ಲಿಯೇ ಹೆಜ್ಜೆ ಇಡುತ್ತೇನೆ ಅಂದ್ರು ನಿಖಿಲ್

    ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿರವರ ಮನ್ ಕೀ ಬಾತ್ ಈ ಬಾರಿ ವಾಂಗಿ ಬಾತ್ ಆಗಲಿದೆ. ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಗೆ ಮತ ನೀಡುವಂತೆ ಕರೆ ನೀಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಸಿಗಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು. ರೋಡ್ ಶೋನಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಭಾಗವಹಿಸಿದ್ದರು.

  • ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಲೂಸ್ ಮಾದ ಯೋಗೀಶ್

    ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಲೂಸ್ ಮಾದ ಯೋಗೀಶ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಲೂಸ್ ಮಾದ ಖ್ಯಾತಿಯ ಯೋಗೀಶ್ ಗೃಹಸ್ಥಾಶ್ರಮಕ್ಕೆ ಸೇರಲು ಸಜ್ಜಾಗಿದ್ದಾರೆ.

    ಬಾಲ್ಯದಗೆಳತಿ, ಬಹುರಾಷ್ಟ್ರಿಯ ಕಂಪನಿಯ ಉದ್ಯೋಗಿ ಸಾಹಿತ್ಯ ಅರಸ್ ಅವರೊಂದಿಗೆ ಯೋಗೀಶ್ ಸಪ್ತಪದಿ ತುಳಿಯಲಿದ್ದಾರೆ. ಸಾಹಿತ್ಯ ಅರಸ್ ಯೋಗಿ 2 ವರ್ಷದಿಂದ ಲವ್ ಮಾಡುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಈ ಹಿಂದೆ ಹರಡಿತ್ತು.

    ಜೂನ್ 11ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಲಿದೆ. ಈ ವರ್ಷದ ನವೆಂಬರ್ 2ರಂದು ಗುರು-ಹಿರಿಯರ ಸಮ್ಮುಖದಲ್ಲಿ ಯೋಗಿ, ಸಾಹಿತ್ಯ ಮದುವೆಯಾಗಲಿದ್ದಾರೆ.