Tag: Look

  • ‘ಗೇಮ್ ಚೇಂಜರ್’ ಫೋಟೋ ಲೀಕ್ : ರಾಮ್ ಚರಣ್ ಲುಕ್ ಗೆ ಫ್ಯಾನ್ಸ್ ಜೈ ಹೋ

    ‘ಗೇಮ್ ಚೇಂಜರ್’ ಫೋಟೋ ಲೀಕ್ : ರಾಮ್ ಚರಣ್ ಲುಕ್ ಗೆ ಫ್ಯಾನ್ಸ್ ಜೈ ಹೋ

    ಗೇಮ್ ಚೇಂಜರ್ ಸಿನಿಮಾಗೆ ಒಂದಿಲ್ಲೊಂದು ಕಂಠಕ ಎದುರಾಗುತ್ತಲೇ ಇದೆ. ಇದೀಗ ರಾಮ್ ಚರಣ್ ಶೂಟಿಂಗ್ ಸ್ಪಾಟ್ ನಲ್ಲಿದ್ದ ಫೋಟೋವೊಂದು ಲೀಕ್ ಆಗಿದ್ದು, ಅವರ ಲುಕ್ (Look) ರಿವಿಲ್ ಆಗಿದೆ. ರಾಮ್ ಚರಣ್ ಲುಕ್ ಕಂಡು ಫ್ಯಾನ್ಸ್ ಸಂಭ್ರಮಸಿದ್ದಾರೆ. ಅಭಿಮಾನಿಗಳಿಗೆ ಇಂದು ಸಂಭ್ರಮದ ಸಂಗತಿಯಾದರೆ, ಚಿತ್ರತಂಡಕ್ಕೆ ಶಾಕ್ ನೀಡಿದೆ. ಎಷ್ಟೇ ಗೌಪ್ಯತೆಯನ್ನು ಕಾಪಾಡಿದರೂ, ಲೀಕ್ ಆಗುವುದನ್ನು ತಡೆಯೋಕೆ ಆಗುತ್ತಿಲ್ಲವೆಂದು ಚಿತ್ರತಂಡ ಬೇಸರ ವ್ಯಕ್ತ ಪಡಿಸಿದೆ.

    ಖ್ಯಾತ ನಿರ್ದೇಶಕ ಶಂಕರ್ (Shankar) ಮತ್ತು ರಾಮ್ ಚರಣ್ ಕಾಂಬಿನೇಷನ್ ನ ಗೇಮ್ ಚೇಂಜರ್ ಸಿನಿಮಾದ ಕಥೆ ಲೀಕ್ ಆಗಿದೆ ಎನ್ನುವ ಮಾಹಿತಿಯೂ ಈ ಹಿಂದೆ ಹರಿದಾಡಿತ್ತು. ಪವನ್ ಕಲ್ಯಾಣ್ (Pawan Kalyan) ಬದುಕಿನ ಕುರಿತಾದ ಕಥೆಯು ಸಿನಿಮಾದಲ್ಲಿದ್ದು, ಪವನ್ ಕಲ್ಯಾಣ್ ಪಾತ್ರವನ್ನು ರಾಮ್ ಚರಣ್ (Ram Charan) ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತಂತೆ ಚಿತ್ರತಂಡ ಯಾವುದೇ ಮಾಹಿತಿ ಸಿಕ್ಕಿಲ್ಲ.

    ಈ ನಡುವೆ ಮತ್ತೊಂದು ಸುದ್ದಿ ಸಖತ್ ಚರ್ಚೆಗೆ ಗ್ರಾಸವಾಗಿದ್ದು, ‘ಗೇಮ್ ಜೇಂಜರ್’ (Game Changer) ಸಿನಿಮಾ ಎರಡು ಭಾಗಗಳಾಗಿ ತೆರೆಯ ಮೇಲೆ ಅಬ್ಬರಿಸಲಿದೆಯಂತೆ. ಸದ್ಯ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ಎಸ್. ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿತ್ತು. ಆದರೆ ಸಿನಿಮಾಗೂ ಮೈಸೂರಿಗೂ ಏನು ಲಿಂಕ್ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.

    ‘ಬಾಹುಬಲಿ 2’ ರಿಲೀಸ್ ಆದ ಬಳಿಕ ಎರಡು ಭಾಗಗಳಲ್ಲಿ ಕಥೆ ಹೇಳುವ ಟ್ರೆಂಡ್ ಜೋರಾಗಿದೆ. ಇದೀಗ ಬಹುತೇಕ ಸ್ಟಾರ್ ನಟರ ಸಿನಿಮಾಗಳು ಎರಡು ಭಾಗಗಳಾಗಿ ಬರುತ್ತಿವೆ. ಹಾಗಾಗಿ ‘ಗೇಮ್ ಚೇಂಜರ್’ ನಿರ್ಮಾಪಕ ದಿಲ್ ರಾಜು ಎರಡು ಪಾರ್ಟ್‌ಗಳಲ್ಲಿ ಸಿನಿಮಾ ತರೋದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.

  • ರಾಕಿಂಗ್ ಸ್ಟಾರ್ ಯಶ್ ಹೊಸ ಲುಕ್: ರಾಕಿಭಾಯ್ ಫ್ಯಾನ್ಸ್ ಫಿದಾ

    ರಾಕಿಂಗ್ ಸ್ಟಾರ್ ಯಶ್ ಹೊಸ ಲುಕ್: ರಾಕಿಭಾಯ್ ಫ್ಯಾನ್ಸ್ ಫಿದಾ

    ಟಾಕ್ಸಿಕ್ ಚಿತ್ರಕ್ಕೆ ತಯಾರಿ ಆಗುತ್ತಲೇ ಹಲವಾರು ಖಾಸಗಿ ಸಮಾರಂಭದಲ್ಲಿ ಭಾಗಿ ಆಗುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್. ನಿನ್ನೆಯಷ್ಟೇ ಅವರ ಸ್ನೇಹಿತರ ಮದುವೆ ಸಮಾರಂಭದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಭಾಗಿ ಆಗಿದ್ದು, ಯಶ್ ಲುಕ್ ಎಲ್ಲರ ಗಮನ ಸೆಳೆದಿದೆ. ಅವರ ಕಾಸ್ಟ್ಯೂಮ್ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋ ವೈರಲ್ ಆಗಿದೆ.

    ಟಾಕ್ಸಿಕ್ ಸಿನಿಮಾ ಅಪ್ ಡೇಟ್ ಏನು?

    ಕೆಜಿಎಫ್, ಕೆಜಿಎಫ್ 2 (KGF 2) ಸಕ್ಸಸ್ ನಂತರ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಳ್ತಿದ್ದಾರೆ. ಎಲ್ಲರೂ ಕಾತರದಿಂದ ಎದುರು ನೋಡ್ತಿರುವ ಸಿನಿಮಾ ಅಂದರೆ ಅದು ಟಾಕ್ಸಿಕ್‌ ಚಿತ್ರ. ಸದ್ಯ ಯಶ್ (Yash) ತಮ್ಮ 19ನೇ ಸಿನಿಮಾ ಟಾಕ್ಸಿಕ್ ಪ್ರಾಜೆಕ್ಟ್ ಎಲ್ಲಿಗೆ ಬಂತು? ಎಂಬುದರ ಬಗ್ಗೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದಾರೆ.

    ‘ಟಾಕ್ಸಿಕ್’ (Toxic) ಶೂಟಿಂಗ್ ಇಷ್ಟರಲ್ಲೇ ಶುರು ಆಗಲಿದೆ. ದೊಡ್ಡ ಮಟ್ಟದ ಪ್ಲಾನ್ ನಡೀತಿದೆ. ‘ಟಾಕ್ಸಿಕ್’ ಚಿತ್ರದ ಬಗ್ಗೆ ಯಾವುದೇ ಕಾಂಪ್ರಮೈಸ್ ಇಲ್ಲದೇ ಮಾಡುತ್ತಿರುವ ಸಿನಿಮಾ ಆಗಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಯಶ್ ಹೇಳಿದ್ದಾರೆ.

    ಇಂದು ಕನ್ನಡ ಸಿನಿಮಾರಂಗವನ್ನು ಪರಭಾಷಿಗರು ನೋಡುತ್ತಿರುವ ರೀತಿ ಬಗ್ಗೆ ಯಶ್ ಪ್ರತಿಕ್ರಿಯಿಸಿ, ಹೌದು ಇಂದು ಬೇರೇ ಚಿತ್ರರಂಗದವರು ನಮ್ಮನ್ನು ನೋಡುವ ರೀತಿ ಬದಲಾಗಿದೆ. ನನ್ನಿಂದ ಕನ್ನಡ ಚಿತ್ರರಂಗ ಅಲ್ಲ. ಚಿತ್ರರಂಗಕ್ಕಾಗಿ ನಾನು ಏನು ಮಾಡ್ಬೇಕು ಅಂತಾ ಸದಾ ಯೋಚನೆ ಮಾಡ್ತಿದ್ದೀನಿ. ಹೊಸ ಹೀರೋಗಳಿಗೆ ಬೆಂಬಲಿಸಿ. 4 ಜನ ಹೀರೋಗಳಿಗಷ್ಟೇ ಸಿನಿಮಾ ಮಾಡಿ ಅಂತಾ ಹೇಳೋದಲ್ಲ. ಮಾಡಿರುವ ಸಿನಿಮಾಗಳೆಲ್ಲ ಹಿಟ್ ಆಗಲ್ಲ. ಬರುತ್ತಿರುವ ಸಿನಿಮಾಗಳಿಗೆ ಸಪೋರ್ಟ್ ಮಾಡಿ ಎಂದು ಯಶ್ ಹೇಳಿದ್ದಾರೆ.

     

    ಚಾನಲ್ ಸ್ಯಾಟಲೈಟ್ ರೈಟ್ಸ್ ತಗೋಬೇಕು. ಆಗ ಸಿನಿಮಾಗಳ ಸಂಖ್ಯೆ ಜಾಸ್ತಿ ಆಗುತ್ತದೆ. ಚಿತ್ರರಂಗದವರು ನೆಗೆಟಿವ್ ಆಗಿ ಥಿಂಕ್ ಮಾಡಬೇಡಿ. ಪ್ರಶಾಂತ್ ನೀಲ್ ‘ಉಗ್ರಂ’ ಸಿನಿಮಾ ಮಾಡಿದಾಗ ಯಾರೂ ಸ್ಯಾಟಲೈಟ್ ರೈಟ್ಸ್ ತೆಗೆದುಕೊಂಡಿಲ್ಲ. ರಿಲೀಸ್ ಆದ್ಮೇಲೆ ಎಲ್ಲಾ ಆ ಚಿತ್ರದ ಮಾತನಾಡಿದ್ದರು. ಪ್ರತಿಭೆ ಇರೋರನ್ನು ಬೆಳೆಸಿ, ಹೊಸಬರ ಸಿನಿಮಾಗಳಿಗೂ ಪ್ರೋತ್ಸಾಹ ನೀಡಿ ಎಂದು ಯಶ್ ಮನವಿ ಮಾಡಿದ್ದರು.

  • Bigg Boss Kannada ಫಿನಾಲೆ: ಸುದೀಪ್ ಲುಕ್ ರಿವೀಲ್

    Bigg Boss Kannada ಫಿನಾಲೆ: ಸುದೀಪ್ ಲುಕ್ ರಿವೀಲ್

    ಬಿಗ್ ಬಾಸ್ (Bigg Boss Kannada) ಫಿನಾಲೆಗೆ (Finale) ಸುದೀಪ್ (Sudeep) ಅವರು ಹೇಗೆ ಕಾಣಲಿದ್ದಾರೆ, ಯಾವ ರೀತಿಯ ಕಾಸ್ಟ್ಯೂಮ್ ಧರಿಸಲಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಕೊನೆಗೂ ಅದು ರಿವೀಲ್ ಆಗಿದೆ. ಬಿಳಿ ಮಿಶ್ರಿತ ಕಾಸ್ಟ್ಯೂಮ್ ಅನ್ನು ಕಿಚ್ಚ ಧರಿಸಿದ್ದು, ಆ ಶರ್ಟ್ ಮೇಲೆ ಬಾದ್ ಶಹಾ ಎಂದು ಬರೆಯಲಾಗಿದೆ. ಕಿಚ್ಚ ಲುಕ್ ಕಂಡ ಅಭಿಮಾನಿಗಳು ಖಂಡಿತಾ ಖುಷಿ ಪಟ್ಟಿರುತ್ತಾರೆ.

    ಬಿಗ್ ಬಾಸ್ ಫಿನಾಲೆ ವೇದಿಕೆ ರಂಗು ರಂಗಾಗಿದೆ. ನೂರು ಚಿಲ್ರೆ ದಿನಗಳನ್ನು ಪೂರೈಸಿ ಕೊನೆಗೂ ಬಿಗ್ ಬಾಸ್ ಫಿನಾಲೆಗೆ ಬಂದು ತಲುಪಿದೆ. ಇಂದು ಸಂಜೆಯಿಂದ ಫಿನಾಲೆ ಸಂಚಿಕೆಯನ್ನು ಪ್ರಸಾರ ಮಾಡಲು ವಾಹಿನಿಯು ಸಿದ್ಧ ಮಾಡಿಕೊಂಡಿದೆ. ಸಂಜೆ 7.30ರಿಂದ ಫಿನಾಲೆ ಸಂಚಿಕೆಯನ್ನು ವೀಕ್ಷಿಸಬಹುದಾಗಿದೆ. ಫಿನಾಲೆ ಕಾರಣದಿಂದಾಗಿ ತಮ್ಮದೇ ಆದ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ ಬಿಗ್ ಬಾಸ್ ಟೀಮ್. ಈಗಾಗಲೇ ನಾಮಿನೇಟ್ ಆಗಿರುವ ಸ್ಪರ್ಧಿಗಳನ್ನು ವೇದಿಕೆಗೆ ಕರೆಯಿಸಿಕೊಂಡು ಭರ್ಜರಿ ಸ್ಟೆಪ್ ಹಾಕಿಸಿದೆ.

    ಶೂಟಿಂಗ್ ಸ್ಥಳದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ಚಿತ್ರೀಕರಣದ ಯಾವುದೇ ವಿಷಯಗಳು ಬಹಿರಂಗವಾಗ ಬಾರದು ಎನ್ನುವ ಕಾರಣಕ್ಕಾಗಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾಮಾನ್ಯ ಪ್ರೇಕ್ಷಕರಿಗೆ ಇಂದು ಪ್ರವೇಶವಿಲ್ಲ. ಅವರೇ ಆಯ್ಕೆ ಮಾಡಿರುವ ಕೆಲವೇ ಕೆಲವೇ ಪ್ರೇಕ್ಷಕರು ಇಂದು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಅದರಲ್ಲೂ ಮೊಬೈಲ್ ನಿಷೇಧ ಮಾಡಲಾಗಿದೆ.

    ಈಗಾಗಲೇ ನಾಮಿನೇಟ್ ಆಗಿರುವ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮೈಕಲ್, ತನಿಷಾ ಕುಪ್ಪಂಡ ಸೇರಿದಂತೆ ಬಹುತೇಕರು ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ನಿನ್ನೆಯಿಂದಲೇ ಚಿತ್ರೀಕರಣದ ಕೆಲಸವನ್ನೂ ಮುಗಿಸಿದ್ದಾರೆ. ಇವತ್ತು ಮತ್ತು ನಾಳೆ ಎರಡು ದಿನಗಳ ಕಾಲ ಫಿನಾಲೆ ಶೂಟಿಂಗ್ ನಡೆಯಲಿದ್ದು. ಜೊತೆಗೆ ಇವತ್ತು ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

    ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ, ಕಾರ್ತಿಕ್, ತುಕಾಲಿ ಸಂತು, ವರ್ತೂರು ಸಂತು ಹಾಗೂ ವಿನಯ್ ಸದ್ಯ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಸಂಗೀತಾ, ವಿನಯ್ ಹಾಗೂ ಡ್ರೋನ್ ಪ್ರತಾಪ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಬಿಗ್ ಬಾಸ್ ಗೆಲುವಿಗಾಗಿ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಶ್ರಮ ವಹಿಸುತ್ತಿದ್ದಾರೆ. ಅಂತಿಮವಾಗಿ ಬಿಗ್ ಬಾಸ್ ಪಟ್ಟ ಯಾರ ಪಾಲಾಗಲಿದೆ ಎನ್ನುವುದು ನಾಳೆ ಗೊತ್ತಾಗಲಿದೆ.

  • ‘ಕಾಂತಾರ 2’ ಚಿತ್ರಕ್ಕಾಗಿ ಬದಲಾಯ್ತು ರಿಷಬ್ ಶೆಟ್ಟಿ ಲುಕ್

    ‘ಕಾಂತಾರ 2’ ಚಿತ್ರಕ್ಕಾಗಿ ಬದಲಾಯ್ತು ರಿಷಬ್ ಶೆಟ್ಟಿ ಲುಕ್

    ಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty), ಮೊನ್ನೆಯಷ್ಟೇ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ‘ಇನ್ಮುಂದೆ ನನ್ನನ್ನು ಯಾವುದೇ ಕಾರ್ಯಕ್ರಮಕ್ಕೆ ಕರೆಯಬೇಡಿ. ನಾನು ಬರೋದಿಲ್ಲ. ಕಾಂತಾರ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುತ್ತೇನೆ’ ಎಂದಿದ್ದರು. ಅಲ್ಲಿಗೆ ಅತೀ ಶೀಘ್ರದಲ್ಲೇ ಸಿನಿಮಾ ಟೀಮ್ ಚಿತ್ರೀಕರಣಕ್ಕೆ ಹೊರಡಲಿದೆ ಎನ್ನುವ ಸೂಚನೆ ಸಿಕ್ಕಿತ್ತು. ಇದೀಗ ಮತ್ತೊಂದ ಮಾಹಿತಿ ಹೊರ ಬಿದ್ದಿದ್ದು, ರಿಷಬ್ ಈ ಸಿನಿಮಾಗಾಗಿ ತಮ್ಮ ಲುಕ್ ಅನ್ನೇ ಬದಲಾಯಿಸಿಕೊಂಡಿದ್ದಾರೆ.

    ದೀಪಾವಳಿ ದಿನದಂದು ಫ್ಯಾಮಿಲಿ ಜೊತೆಗಿನ ಫೋಟೋ ಹಂಚಿಕೊಂಡಿರುವ ರಿಷಬ್, ಆ ಫೋಟೋಗಳಲ್ಲಿ ಅವರು ಲುಕ್ ಬದಲಾಗಿದೆ. ಇದು ಚಿತ್ರಕ್ಕಾಗಿ ಮಾಡಿಕೊಂಡ ಸಿದ್ಧತೆ ಎಂದು ಹೇಳಲಾಗುತ್ತಿದೆ. ತಲೆಗೂದಲು ಮತ್ತು ಗಡ್ಡವನ್ನು ಅಪಾರ ಪ್ರಮಾಣದಲ್ಲಿ ರಿಷಬ್ ಬೆಳೆಸಿದ್ದಾರೆ. ಈ ಮೂಲಕ ಪಾತ್ರ ಇನ್ನೂ ಮಜವಾಗಿ ಇರಲಿದೆ ಎನ್ನುವ ಸಂದೇಶ ಸಾರಿದ್ದಾರೆ.

    ‘ಕಾಂತಾರ 2’ ಸಿನಿಮಾದ ಶೂಟಿಂಗ್ (Shooting) ಯಾವಾಗಿಂದ ಶುರುವಾಗಬಹುದು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಚಿತ್ರೀಕರಣಕ್ಕೆ ಹೋಗುವುದಾಗಿ ರಿಷಬ್ ತಿಳಿಸಿದ್ದಾರೆ. ಸ್ಕ್ರಿಪ್ಟ್ ಮತ್ತು ಪ್ರಿಪ್ರೊಡಕ್ಷನ್ ಕೆಲಸದಲ್ಲಿ ರಿಷಬ್ ಸದ್ಯ ಬ್ಯುಸಿಯಾಗಿದ್ದಾರೆ.

    ಸಿನಿಮಾ ಶೂಟಿಂಗ್ ಗಾಗಿ ಈ ಬಾರಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರಂತೆ ರಿಷಬ್. ಕಾಂತಾರ ಸಿನಿಮಾ ಕೇವಲ ಅವರ ಊರಿನಲ್ಲಿ ಮಾತ್ರ ಚಿತ್ರೀಕರಣವಾಗಿತ್ತು. ಈ ಬಾರಿ ಅವರ ಊರಿನ ಜೊತೆಗೆ ನಾನಾ ಸ್ಥಳಗಳಲ್ಲಿ ಶೂಟಿಂಗ್ ಮಾಡುವ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದಾರೆ. ಈಗಾಗಲೇ ಆ ಸ್ಥಳಗಳನ್ನು ಅವರು ನೋಡಿಕೊಂಡೂ ಬಂದಿದ್ದಾರೆ ಎನ್ನುವುದು ಸದ್ಯದ ವರ್ತಮಾನ. ಕಥೆಗೆ ತಕ್ಕಂತೆ ಬಜೆಟ್ ಖರ್ಚು ಮಾಡುವ ಕುರಿತಾಗಿಯೂ ಅವರು ಮಾತನಾಡಿದ್ದಾರೆ.

    ‘ಕಾಂತಾರ 2’ (Kantara 2) ಸಿನಿಮಾದ ಬಜೆಟ್ (Budget) ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಕಾಂತಾರ ಸಿನಿಮಾದ ಬಜೆಟ್ ಗಿಂತ ಎರಡ್ಮೂರು ಪಟ್ಟು ಹೆಚ್ಚಿನ ಬಜೆಟ್ ಬೇಡುವಂತಹ ಚಿತ್ರ ಇದಾಗಲಿದೆ ಎಂದು ಹೇಳಲಾಗಿತ್ತು. ಆದರೆ, ನಿಜವಾದ ಬಜೆಟ್ ಅನ್ನು ರಾಜ್ ಬಿ ಶೆಟ್ಟಿ  (Raj B Shetty) ಬಾಯ್ಬಿಟ್ಟಿದ್ದಾರೆ.

    ಸದ್ಯ ರಾಜ್ ಬಿ ಶೆಟ್ಟಿ ಅವರ ಟೋಬಿ ಸಿನಿಮಾ ಮಲಯಾಳಂನಲ್ಲಿ ಬಿಡುಗಡೆ ಆಗುತ್ತಿದೆ. ಹೀಗಾಗಿ ಕೇರಳದಲ್ಲಿ ಅವರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಮಾಧ್ಯಮವೊಂದರ ಜೊತೆ ಮಾತನಾಡಿರುವ ರಾಜ್ ಬಿ ಶೆಟ್ಟಿ ಕಾಂತಾರ 2 ಸಿನಿಮಾದ ಅಂದಾಜು ಬಜೆಟ್ ಅನ್ನು ಹೇಳಿಕೊಂಡಿದ್ದಾರೆ. ಇದು ನೂರು ಕೋಟಿ ಬೇಡುವಂತಹ ಚಿತ್ರ ಎಂದು ಮಾತನಾಡಿದ್ದಾರೆ.

     

    ಕಾಂತಾರ 2 ಸಿನಿಮಾ ಸ್ಕ್ರಿಪ್ಟ್  ಹಂತದಲ್ಲಿದೆ. ಇದು ನೂರಾರು ಕೋಟಿ ಬಜೆಟ್ ನಲ್ಲಿ ತಯಾರಾಗುವಂತಹ ಬಿಗ್ ಬಜೆಟ್ ಸಿನಿಮಾ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಲ್ಲಿಗೆ ಕಾಂತಾರ 2 ಸಿನಿಮಾದ ಬಜೆಟ್ ಬಹಿರಂಗವಾಗಿದೆ. ಇದರ ಜೊತೆಗೆ ಚಾರ್ಲಿ ಸಿನಿಮಾದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದು, ಚಾರ್ಲಿ 2 ಸಿನಿಮಾ ಬರುವುದಕ್ಕೆ ಸಾಧ್ಯವೆ ಇಲ್ಲ. ನಿರ್ದೇಶಕರು ಬೇರೆ ಕಥೆಯಲ್ಲಿ ಮಗ್ನರಾಗಿದ್ದಾರೆ ಎಂದಿದ್ದಾರೆ.

  • ಎಲ್ಲರನ್ನೂ ಬೆಚ್ಚಿ ಬೀಳಿಸುವ ಲುಕ್‍ನಲ್ಲಿ ಸ್ವೀಟಿ ರಾಧಿಕಾ ಎಂಟ್ರಿ

    ಎಲ್ಲರನ್ನೂ ಬೆಚ್ಚಿ ಬೀಳಿಸುವ ಲುಕ್‍ನಲ್ಲಿ ಸ್ವೀಟಿ ರಾಧಿಕಾ ಎಂಟ್ರಿ

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ವೀಟಿ ರಾಧಿಕಾ ಅವರು ಎಲ್ಲರನ್ನೂ ಬೆಚ್ಚಿ ಬೀಳಿಸುವ ಲುಕ್‍ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಹೊಸ ಸಿನಿಮಾಗಾಗಿ ರಾಧಿಕಾ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

    ರಾಧಿಕಾ ಕೆಲ ತಿಂಗಳ ಹಿಂದೆ ‘ದಮಯಂತಿ’ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಸದ್ಯ ಈ ಚಿತ್ರದ ಲುಕ್ ಈಗ ಬಿಡುಗಡೆಯಾಗಿದ್ದು, ರಾಧಿಕಾ ಹಿಂದೆಂದೂ ಕಂಡಿರದ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅಭಿಮಾನಿಗಳು ರಾಧಿಕಾ ಅವರ ಈ ಲುಕ್ ನೋಡಿ ಆಶ್ಚರ್ಯಪಡುತ್ತಿದ್ದಾರೆ.

    ದಮಯಂತಿ ಚಿತ್ರ ಮಹಿಳಾ ಪ್ರಧಾನ ಚಿತ್ರ ಎಂದು ಹೇಳಲಾಗುತ್ತಿದೆ. ತೆಲುಗುನಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ ‘ಭಾಗಮತಿ’ ಹಾಗೂ ‘ಅರುಂಧತಿ’ ಚಿತ್ರದ ರೀತಿಯಲ್ಲೇ ದಮಯಂತಿ ಚಿತ್ರ ಇರಲಿದೆ. ಸದ್ಯ ಈ ಚಿತ್ರ ಕನ್ನಡದಲ್ಲಿ ಚಿತ್ರೀಕರಣ ಆದ ನಂತರ ತೆಲುಗು ಹಾಗೂ ತಮಿಳಿನಲ್ಲೂ ಚಿತ್ರೀಕರಣ ಮಾಡುವ ಸಾಧ್ಯತೆ ಇದೆ.

    ನಾಯಕ ಹಾಗೂ ನಿರ್ಮಾಪಕರಾಗಿರುವ ನವರಸನ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ರಾಧಿಕಾ ದಮಯಂತಿ ಚಿತ್ರದ ಜೊತೆ ಅರ್ಜುನ್ ಸರ್ಜಾ ಅವರ ಜೊತೆ ‘ಕಾಂಟ್ರಾಕ್ಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಂತರ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರ ಜೊತೆ ‘ರಾಜೇಂದ್ರ ಪೊನ್ನಪ್ಪ’ ಹಾಗೂ ರಮೇಶ್ ಅರವಿಂದ್ ಜೊತೆ ‘ಭೈರಾ ದೇವಿ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಜಿಎಫ್ ಚಿತ್ರದ ಮತ್ತೋರ್ವ ನಟನ ಫಸ್ಟ್ ಲುಕ್ ರಿವೀಲ್!

    ಕೆಜಿಎಫ್ ಚಿತ್ರದ ಮತ್ತೋರ್ವ ನಟನ ಫಸ್ಟ್ ಲುಕ್ ರಿವೀಲ್!

    ಬೆಂಗಳೂರು: ಕೆಜಿಎಫ್ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಮೈಲೇಜ್ ಪಡೆದುಕೊಂಡ ಚಿತ್ರವಾಗಿದ್ದು ಇದೀಗ ಚಿತ್ರತಂಡ ಮತ್ತೊಂದು ನಟನ ಲುಕ್ ರಿವೀಲ್ ಮಾಡಿದೆ. ಈ ಮೊದಲು ಕೆಜಿಎಫ್ ಸಿನಿಮಾದ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

    ಕೆಜಿಎಫ್ ಸಿನಿಮಾ ಈಗಾಗಲೇ ದೇಶಾದ್ಯಂತ ತೆರೆ ಕಾಣಲು ಸಜ್ಜಾಗುತ್ತಿದೆ. ಹೀಗಿರುವ ಕೆಜಿಎಫ್ ಚಿತ್ರತಂಡ ಮತ್ತೊಂದು ಲುಕ್ ಅನ್ನು ರಿವೀಲ್ ಮಾಡಿದ್ದು, ಕನ್ನಡದ ಹಿರಿಯ ನಟ ಹಾಗೂ ನಿರ್ದೇಶಕರಾದ ಬಿ. ಸುರೇಶ್ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದು, ಅವರ ಲುಕ್ ಅನ್ನು ರಿವೀಲ್ ಮಾಡಿದೆ.

    ಕನ್ನಡದ ಹಿರಿಯ ನಟ ಹಾಗೂ ನಿರ್ದೇಶಕರಾದ ಬಿ ಸುರೇಶ್ ಅವರು ರಾಂಕಿಂಗ್ ಸ್ಟಾರ್ ಯಶ್ ಅವರಂತೆ ಕೂಲಿ ಕಾರ್ಮಿಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಪಾತ್ರದಲ್ಲಿ ಅವರ ಹೆಸರೇನು? ಹಾಗೂ ಅವರು ಯಾವ ಸೀನ್ ನಲ್ಲಿ ಪ್ರವೇಶಿಸುತ್ತಾರೆ ಎಂಬ ಮಾಹಿತಿಗಳನ್ನು ಚಿತ್ರತಂಡ ತಿಳಿಸಿಲ್ಲ. ಬಿ. ಸುರೇಶ್ ಅವರ ಈ ಲುಕ್ ನಲ್ಲಿ ಅವರು ಕೈಯಲ್ಲಿ ಕೊಡಲಿ ಹಿಡಿದುಕೊಂಡಿರುವ ದೃಶ್ಯ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲವನ್ನು ಮೂಡಿಸಿದೆ.

    ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಿಡುಗಡೆಯ ದಿನಾಂಕ ಒಂದು ತಿಂಗಳು ಮುಂದಕ್ಕೆ ಹೋಗಿದ್ದು, ನವೆಂಬರ್ 16 ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಡಿಸೆಂಬರ್ 21 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಪತ್ರಿಕಾಗೋಷ್ಠಿ ನಡೆಸಿದ ನಿರ್ದೇಶಕ ಪ್ರಶಾಂತ್ ನೀಲ್, ಡಿಸೆಂಬರ್ ತಿಂಗಳು ಯಶ್ ಅವರಿಗೆ ಲಕ್ಕಿ ತಿಂಗಳಾದ್ದರಿಂದ ಕೆಜಿಎಫ್ ಆ ತಿಂಗಳಿನಲ್ಲಿ ತೆರೆಕಾಣಲು ಸಿದ್ಧವಾಗಿದೆ. ಸಿನಿಮಾ ರಿಲೀಸ್ ಮುಂದೂಡಿಕೆ ಮಾತ್ರವಲ್ಲದೇ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರದ ಟ್ರೇಲರ್ ಬಿಡುಗಡೆಯ ದಿನಾಂಕವನ್ನು ನವೆಂಬರ್ ಗೆ ಮುಂದೂಡಲಾಗಿದೆ ಎಂದು ತಿಳಿಸಿದ್ದರು.

    ಈ ಚಿತ್ರವನ್ನು `ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಯಶ್ ಜೊತೆ ಶ್ರೀ ನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಐಟಂ ಹಾಡಿಗೆ ಯಶ್ ಜೊತೆ ಮಿಲ್ಕಿ ಬ್ಯೂಟಿ ಕ್ವೀನ್ ತಮನ್ನಾ ಭಾಟಿಯಾ ಅವರು ಹೆಜ್ಜೆ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv